Saturday | August 22, 2026 |

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ ಕೊರತೆ ಎದುರಿಸುತ್ತಿರುವ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಿಬ್ಬರಿಗೆ ತಲಾ 3 ಲಕ್ಷ ರು ಗಳನ್ನು ಮಾಸಿಕ ವೇತನ ನಿಗದಿಪಡಿಸಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರಿಗೆ ಪಿ ತ್ಯಾಗರಾಜ್‌ ಮತ್ತು ಆರ್ ಜಯಪ್ರಕಾಶ್‌ ಅವರನ್ನು  ಮಾಧ್ಯಮ ಕಾರ್ಯದರ್ಶಿಗಳನ್ನಾಗಿ ನೇಮಿಸಿತ್ತು. ಈ ಸಂಬಂಧ 2026ರ ಜುಲೈ 8ರಂದು ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ 2026ರ ಜುಲೈ 20ರಂದು ಹೊರಡಿಸಿದ್ದ ಸೇರ್ಪಡೆ ಆದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿತ್ತು. ಇವರಿಗೆ ಗುತ್ತಿಗೆ ಆಧಾರದ ನೇಮಕಾತಿಗೆ ಸಂಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸಿರಲಿಲ್ಲ.

ಇದೀಗ ಗುತ್ತಿಗೆ ಆಧಾರದ ನೇಮಕಾತಿಗೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ನಿಗದಿಪಡಿಸಿದೆ. ಈ ಸಂಬಂಧ 2026ರ ಆಗಸ್ಟ್‌ 4ರಂದು ಆದೇಶವನ್ನು ಹೊರಡಿಸಿದೆ.

ಈ ಆದೇಶದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಪಿ ತ್ಯಾಗರಾಜ್, ಆರ್ ಜಯಪ್ರಕಾಶ್‌ ಅವರಿಗೆ ಮಾಸಿಕ ಸಂಚಿತ ವೇತನ ರೂಪದಲ್ಲಿ 3,00,000 ಲಕ್ಷ ರುಗ.ಳನ್ನು ನಿಗದಿಪಡಿಸಿದೆ. ಇವರಿಬ್ಬರೂ ಯಾವುದೇ ಭತ್ಯೆಗಳಿಗೆ ಅರ್ಹರಾಗಿರುವುದಿಲ್ಲ ಎಂದು ಷರತ್ತು ನಿಗದಿಪಡಿಸಿದೆ.

 

 

ಅಲ್ಲದೆ ಒಪ್ಪಂದದ ಷರತ್ತು ಮತ್ತು ನಿಬಂಧನೆಗಳಲ್ಲಿ ನೀಡಿರುವ ಸೌಲಭ್ಯಗಳಿಗೆ ಹೊರತಾಗಿ ಬೇರಾವುದೇ ಸೌಲಭ್ಯಕ್ಕೆ ಅಂದರೆ ವೇತನ ಬಡ್ತಿ, ಪದನ್ನೋತಿ, ಪಿಂಚಣಿ ಇತ್ಯಾದಿ ಸೌಲಭ್ಯಗಳಿಗೆ ಇವರು ಅರ್ಹರಾಗುವುದಿಲ್ಲ. ಅವರು ಕರ್ತವ್ಯಗಳನ್ನು ಪಾಲಿಸುತ್ತಿರುವ ಅಥವಾ ನಿರ್ವಹಿಸುತ್ತಿರುವಾಗ ಅವರಿಗೆ ಲಭ್ಯವಾಗಬಹುದಾದ ಅಥವಾ ದೊರಕಬಹುದಾದ ಅಧಿಕೃತ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಳ್ಳಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಷರತ್ತು ವಿಧಿಸಿದೆ.

ಮತ್ತೊಂದು ವಿಶೇಷವೆಂದರೇ  ಮಾಧ್ಯಮ ಕಾರ್ಯದರ್ಶಿಗಳಿಗೆ ನಿಗದಿಪಡಿಸಿರುವ ವೇತನವು ಮುಖ್ಯ ಕಾರ್ಯದರ್ಶಿಗಳ ವೇತನಕ್ಕಿಂತಲೂ ಹೆಚ್ಚಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2,25,000 ರು ವೇತನವಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪಡೆಯುತ್ತಿರುವ ವೇತನಕ್ಕಿಂತಲೂ ಹೆಚ್ಚಿನ ವೇತನವನ್ನು ಮಾಧ್ಯಮ ಕಾರ್ಯದರ್ಶಿಗಳಿಗೆ ನಿಗದಿಪಡಿಸಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

 

ಈ ಮೊದಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರಕರ್ತ ರಾಘವೇಂದ್ರ ಭಟ್‌ ಅವರನ್ನೂ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಿತ್ತು. ಆದರೆ ಅವರ ನೇಮಕಾತಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕಡೇ ಗಳಿಗೆಯಲ್ಲಿ ಅವರನ್ನು ಮಾಧ್ಯಮ ಕಾರ್ಯದರ್ಶಿ ಪಟ್ಟಿಯಿಂದ ಕೈ ಬಿಟ್ಟಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ದಿನೇಶ್‌ ಅಮೀನ್‌ ಮಟ್ಟು ಎಂಬುವರು ಮಾಧ್ಯಮ ಸಲಹೆಗಾರರಾಗಿದ್ದರು. ಎರಡನೇ ಅವಧಿಗೆ ಕೆ ವಿ ಪ್ರಭಾಕರ್‍‌ ಎಂಬುವರು ಮಾಧ್ಯಮ ಸಲಹೆಗಾರರಿದ್ದರು. ಇವರಿಬ್ಬರಿಗೂ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹದೇವ ಪ್ರಕಾಶ್‌, ಸುನೀಲ್ ಮಾಧ್ಯಮ ಸಲಹೆಗಾರರಾಗಿದ್ದರು. ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋಹನ್ ಕೃಷ್ಣ ಎಂಬುವರನ್ನು ಮಾಧ್ಯಮ ಸಲಹೆಗಾರರನ್ನು ನೇಮಿಸಲಾಗಿತ್ತು. ಅವರೊಂದಿಗೆ  ಗುರುಲಿಂಗಸ್ವಾಮಿ ಹೊಳಿಮಠ್‌ ಮತ್ತು ಶಂಕರ್ ಪಾಗೋಜಿ ಎಂಬುವರು ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಮಾಧ್ಯಮ ಸಲಹೆಗಾರರಿಗೆ ಮಾತ್ರ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು.

ಮುಖ್ಯಮಂತ್ರಿಗಳಿಗೆ ನೇಮಕವಾಗುವ ಮಾಧ್ಯಮ ಸಲಹೆಗಾರರು, ಮಾಧ್ಯಮ ಸಂಯೋಜಕರು, ಮಾಧ್ಯಮ ಕಾರ್ಯದರ್ಶಿಗಳು ಖಾಸಗಿ ವ್ಯಕ್ತಿಗಳಾಗಿದ್ದಾರೆ. ಈ ಖಾಸಗಿ ವ್ಯಕ್ತಿಗಳಿಗೆ ನಿಗದಿಪಡಿಸಿರುವ ವೇತನದ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕೆ ವಿ ಪ್ರಭಾಕರ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಗಿರೀಶ್ ಕೆ ಎಂಬುವರಿಗಾಗಿ ಸಿ ವೃಂದದಲ್ಲಿದ್ದ ಈ ಹುದ್ದೆಯನ್ನು ಬಿ ಗುಂಪಿ ಗೇರಿಸಿದ್ದರು.  ಸದ್ಯ ಕೆ ಗಿರೀಶ್‌ ಎಂಬುವರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಎಲ್ ಕೆ ಅತೀಕ್‌ ಅವರ ಕಚೇರಿಯಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು, ಮಾಧ್ಯಮ ಸಂಯೋಜಕರು, ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದವರ ಪೈಕಿ ಕೆಲವರು ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ್ದರು. ವರ್ಗಾವಣೆ ಮತ್ತಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ (ಮಿನಿಟ್) ಕೂಡ ಹಾಕಿದ್ದರು. ಈ ಕುರಿತು ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಮಾಧ್ಯಮ ಸಲಹೆಗಾರರಿಂದ ಪ್ರಧಾನ ಅರ್ಚಕ ಸೇರಿ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು

………….

ಮಾಧ್ಯಮ ಸಲಹೆಗಾರ ಕಚೇರಿಗೆ ಬಿಎಂಟಿಎಫ್‌ ವರದಿ ಸಲ್ಲಿಸಬೇಕೆ?; ಚರ್ಚೆಗೆ ಗ್ರಾಸವಾದ ಪತ್ರ

…………

ಮಾಧ್ಯಮ ಸಲಹೆಗಾರರಿಂದ ಬಿಜೆಪಿ ಕಾರ್ಯಕರ್ತನ ನಾಮನಿರ್ದೇಶನಕ್ಕೆ ಮುಖ್ಯಮಂತ್ರಿಗೆ ಶಿಫಾರಸ್ಸು

 

ಮಾಧ್ಯಮ ಸಲಹೆಗಾರ ಹುದ್ದೆಗೆ ಮಹಾದೇವಪ್ರಕಾಶ್‌ ರಾಜೀನಾಮೆ; ‘ದಿ ಫೈಲ್‌’ ಈಚೆಗೆ ಮಾಡಿದ್ದ ವರದಿಗಳಿವು

 

ಮತ್ತೊಂದು ವಿಶೇಷವೆಂದರೇ ಮಾಧ್ಯಮ ಸಲಹೆಗಾರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರವು ಹೊರಡಿಸಿದ್ದ ಆದೇಶಗಳನ್ನು ಹೈಕೋರ್ಟ್‌ನಲ್ಲಿ ಸಾಮಾಜಿಕ ಹೋರಾಟಗಾರರು ಪ್ರಶ್ನಿಸಿದ್ದರು.

 

ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ನೇಮಕ; ಬಿಜೆಪಿ ಸರ್ಕಾರದ ಸಮರ್ಥನೆಯನ್ನೇ ಮುಂದಿರಿಸುವುದೇ ಕಾಂಗ್ರೆಸ್‌?

 

ಕೆ ವಿ ಪ್ರಭಾಕರ್ ಎಂಬುವರು ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಅವಧಿಯಲ್ಲಿ ವೇತನ, ಪ್ರಯಾಣ ಭತ್ಯೆ ವಿವರಗಳನ್ನು ಆರ್‍‌ಟಿಐ ಅಡಿಯಲ್ಲಿಯೂ ಒದಗಿಸಿರಲಿಲ್ಲ.

 

ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?

 

ಹಾಗೆಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಒಬ್ಬರನ್ನು ಮಾಧ್ಯಮ ಸಲಹೆಗಾರರನ್ನು ನೇಮಿಸಲಾಗಿತ್ತು.

 

ಸಿಎಂಗೆ ರಾಷ್ಟ್ರೀಯಮಟ್ಟದಲ್ಲೂ ಮಾಧ್ಯಮ ಸಲಹೆಗಾರರ ನೇಮಕ; ಹೇಮಂತ್‌ ಅತ್ರಿಗೆ ತಿಂಗಳಿಗೆ 1.50 ಲಕ್ಷ ರು ಪಾವತಿ

 

ಮತ್ತೊಂದು ವಿಶೇಷವೆಂದರೇ ಬಸವರಾಜ ಬೊಮ್ಮಾಯಿ ಅವರಿಗೆ ಮೋಹನ್ ಕೃಷ್ಣ ಎಂಬುವರು  ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ  ಅವಧಿಯಲ್ಲಿ ದೀಪಾವಳಿ ಉಡುಗೊರೆ ಹೆಸರಿನಲ್ಲಿ  ದಿನಪತ್ರಿಕೆಗಳ ಪ್ರಧಾನ ವರದಿಗಾರರಿಗೆ ಹಣವನ್ನು ನೀಡಲಾಗಿತ್ತು ಎಂಬ ಆರೋಪವು ಕೇಳಿ ಬಂದಿತ್ತು.

 

ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?

 

ಉಡುಗೊರೆ ವಿತರಣೆಗೆ ಸಿಎಂ ಮಾಧ್ಯಮ ಸಲಹೆಗಾರರ ಅಧಿಕೃತ ವಾಹನ ಬಳಕೆ; ದಾಖಲೆ ಬಹಿರಂಗ

………….

ಪತ್ರಕರ್ತರಿಗೆ ಲಂಚ; ಸಿಎಂ ಮಾಧ್ಯಮ ಸಲಹೆಗಾರರ ವಾಹನದ ಲಾಗ್‌ ಪುಸ್ತಕದಲ್ಲಿದೆ ಅ.24ರ ರಹಸ್ಯ

 

ದಿ ಫೈಲ್‌ ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್‌ ಮತ್ತು ನೈಜ ಹೋರಾಟಗಾರರ ವೇದಿಕೆಯು ಸಹ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ಸಲ್ಲಿಸಿತ್ತು.

ಪತ್ರಕರ್ತರಿಗೆ ದೀಪಾವಳಿ ಗಿಫ್ಟ್‌, ನಗದು ನೀಡಿಕೆ ಪ್ರಕರಣ; ಲೋಕಾಯುಕ್ತಕ್ಕೆ ಸಾಕ್ಷ್ಯ ಒದಗಿಸಿದ ಜೆಎಸ್‌ಪಿ

ಪತ್ರಕರ್ತರಿಗೆ ಲಂಚ; ಲೋಕಾಯುಕ್ತ ಪೊಲೀಸ್‌ ಡಿವೈಎಸ್ಪಿಗೆ ವಿಡಿಯೋ ಸಾಕ್ಷ್ಯ, ದಾಖಲೆ ಒದಗಿಸಿದ ಜೆಎಸ್‌ಪಿ

 

ಈ ಕುರಿತು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ ನ ಸಿಇಒ ಅವರು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನೂ ಸಹ ಬರೆದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅದರೆ ಈ ಸಂಬಂಧ ಯಾವುದೇ ಮಾಹಿತಿಯನ್ನೂ ಮುಖ್ಯಮಂತ್ರಿಗಳ ಸಚಿವಾಲಯವು ಒದಗಿಸಿರಲಿಲ್ಲ.

ಪತ್ರಕರ್ತರಿಗೆ ಆಮಿಷ; ಸಿಎಂಗೆ ಬರೆದ ಪತ್ರವನ್ನು ಗಡುವು ಮೀರಿದರೂ ಒದಗಿಸದೇ ಮುಚ್ಚಿಟ್ಟ ಸಚಿವಾಲಯ

 

ಪತ್ರಕರ್ತರಿಗೆ ಲಂಚ; ಸಿಎಂ ಸಚಿವಾಲಯದಲ್ಲಿಲ್ಲ ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಪತ್ರ

 

ಈ ಎಲ್ಲ ಬೆಳವಣಿಗೆಗಳ ಕುರಿತು ದಿ ಫೈಲ್‌ ದಾಖಲೆಗಳ ಸಹಿತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

Hot this week

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....
Please Scan to make Your Contribution

Topics

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

Related Articles

Popular Categories

error: Content is protected !!