Saturday | October 3, 2026 |

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ ಗೋವಿಂದರಾವ್ ಅವರು ವರದಿಯಲ್ಲಿ ಮಾಡಿದ್ದ ಶಿಫಾರಸ್ಸಿನಂತೆ  ಕೃಷಿ ಇಲಾಖೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಆಯವ್ಯಯದಲ್ಲಿ  ಅನುದಾನವನ್ನೇ ನಿಗದಿಪಡಿಸಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಆರ್ಥಿಕ ತಜ್ಞ ಪ್ರೊ ಎಂ ಗೋವಿಂದರಾವ್ ಅವರು ನೀಡಿದ್ದ ಅಂತಿಮ  ವರದಿಯನ್ನು ಒಪ್ಪಿಕೊಂಡಿರುವ ಸರ್ಕಾರವು, ವರದಿಯ ಶಿಫಾರಸ್ಸಿನಂತೆ  ಕೃಷಿ ಇಲಾಖೆಗೆ ಅನುದಾನವನ್ನೇ ನಿಗದಿಪಡಿಸದೇ ಇರುವುದು ವರದಿಯ ಶಿಫಾರಸ್ಸನ್ನು ನಿರ್ಲಕ್ಷ್ಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ವಿಶೇಷವೆಂದರೇ ಗೋವಿಂದರಾವ್ ಅವರ ಸಮಿತಿಯು ಕೃಷಿ ಇಲಾಖೆಗೆ ಹಂಚಿಕೆ ಮಾಡಲು ರೂಪಿಸಿದ್ದ ಸೂತ್ರವನ್ನು ಇತರೆ ಇಲಾಖೆಗಳು ಹಂಚಿಕೆ ಸಂದರ್ಭದಲ್ಲಿ ಪಾಲಿಸಿದೆ. ಆದರೆ ಕೃಷಿ ಇಲಾಖೆಯಲ್ಲಿಯೇ ವರದಿಯ ಶಿಫಾರಸ್ಸಿನಂತೆ ಆಯವ್ಯಯದಲ್ಲಿ ಅನುದಾನವನ್ನೇ ನಿಗದಿಪಡಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

‘ಪ್ರೊ ಎಂ ಗೋವಿಂದರಾವ್ ಅವರ ವರದಿ ಸ್ವೀಕೃತವಾಗುವ ಮೊದಲೇ ಆಯವ್ಯಯ ಸಿದ್ದಪಡಿಸುವ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿತ್ತು. ಹೀಗಾಘಿ ಪ್ರೊ ಎಂ ಗೋವಿಂದರಾವ್ ಅವರ ವರದಿಯ ಶಿಫಾರಸ್ಸಿನಂತೆ ಪೂರ್ಣ ಪ್ರಮಾಣದಲ್ಲಿ ಅನುದಾನ ನಿಗದಿಪಡಿಸಲು ಸಾಧ್ಯವಾಗಿಲ್ಲ,’ ಎಂದು ಸಭೆಯಲ್ಲಿ ಕಾರಣವನ್ನು ಮುಂದೊಡ್ಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.

ಹಿಂದುಳಿದ ತಾಲೂಕುಗಳ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 2026-27ರಿಂದ 2031-32ರವರೆಗೆ ಒಟ್ಟು 5 ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಅನುದಾನ ಹೂಡಿಕೆ ಮಾಡಲು ಗೋವಿಂದರಾವ್ ಅವರ ಸಮಿತಿಯು ಶಿಫಾರಸ್ಸು ಮಾಡಿತ್ತು. ಇದರ ಪ್ರಕಾರ ವಿವಿಧ ಇಲಾಖೆಗಳ ಮೂಲಕ 2026-27ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 4,291.49 ಕೋಟಿ ರುಗಳನ್ನು 14 ಇಲಾಖೆಗಳಿಗೆ ಹಂಚಿಕೆ ಮಾಡಲಾಗಿತ್ತು.

ಆದರೆ ಕೃಷಿ ಇಲಾಖೆಗೆ ಲೆಕ್ಕ ಶೀರ್ಷಿಕೆ 2401-00-10-0-07ರ ಅಡಿಯಲ್ಲಿ 304.00 ಕೋಟಿ ರು.ಗಳನ್ನು ನಿಗದಿಪಡಿಸಿತ್ತು. ಆದರೆ ಪ್ರೊ ಎಂ ಗೋವಿಂದರಾವ್ ಅವರ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ 2026-27ನೇ ಸಾಲಿನ ಆಯವ್ಯಯದಲ್ಲಿ ಅನುದಾನವನ್ನು ನಿಗದಿಪಡಿಸಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರೇ, 2026ರ ಜುಲೈನಲ್ಲಿ ನಡೆದಿದ್ದ ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

 

‘ಈ ವಿಷಯವನ್ನು ತಮ್ಮ ಕಾರ್ಯದರ್ಶಿಗಳ ಮೂಲಕ ಆರ್ಥಿಕ ಇಲಾಖೆ ಗಮನಕ್ಕೆ ತರಬೇಕು ಮತ್ತು ವರದಿಯ ಶಿಫಾರಸ್ಸಿನಂತೆ ಅನುದಾನವನ್ನು ಹಂಚಿಕೆ ಮಾಡಬೇಕು,’ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಕೃಷಿ ಇಲಾಖೆಗೆ ಸೂಚಿಸಿರುವುದು ತಿಳಿದು ಬಂದಿದೆ.

 

 

ಪ್ರೊ ಗೋವಿಂದರಾವ್ ವರದಿಯ ಶಿಫಾರಸ್ಸಿನಂತೆ ಕೃಷಿ ಇಲಾಖೆ ಅನುಷ್ಠಾನಗೊಳಿಸಿರುವ ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಗೆ 304 ಕೋಟಿ ರು.ಗಳನ್ನು ಅನುದಾನ ನಿಗದಿಪಡಿಸಿತ್ತು. ಈ ಅನುದಾನವನ್ನು ಶೇ. 3; 1; 1ರ ಅನುಪಾತದಂತೆ ನಿಗದಿಪಡಿಸಿತ್ತು. ಒಟ್ಟು 59 ತಾಲೂಕುಗಳ ಪೈಕಿ  ಅತ್ಯಂತ ಹಿಂದುಳಿದ ತಾಲೂಕುಗಳಿಗೆ 152 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 101 ಕೋಟಿ, ಹಿಂದುಳಿದ ತಾಲೂಕುಗಳಿಗೆ 51 ಕೋಟಿ ರು ಸೇರಿತ್ತು.  ಈ ಅನುದಾನವನ್ನು ಸಮನಾಗಿ ಹಂಚಿಕೆ ಮಾಡಿ ವೆಚ್ಚ ಮಾಡಬೇಕು ಎಂದು ಸೂಚಿಸಿತ್ತು.

ಅಲ್ಲದೇ ಕೃಷಿ ಇಲಾಖೆಯಂತೆ ಹಂಚಿಕೆಯಾಗಿರುವ ಅನುದಾನವನ್ನು 3;2;1 ಅನುಪಾತದಲ್ಲಿಯೇ ಭಾರೀ ನೀರಾವರಿ ಇಲಾಖೆಗೂ ಅನುದಾನ ಹಂಚಿಕೆ ಮಾಡಿತ್ತು.

ಕೃಷಿ ಭಾಗ್ಯ ಜಲನಿಗಮಕ್ಕೆ ಆಯವ್ಯಯದಲ್ಲಿ ಹಂಚಿಕೆಯಾಗಿರುವ 150 ಕೋಟಿ ರು ಅನುದಾನವನ್ನು ಗೋವಿಂದರಾವ್ ವರದಿಯ ಶಿಫಾರಸ್ಸಿನ ಪ್ರಕಾರ 03;02;01ರ ಅನುಪಾತದಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 75 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 50 ಕೋಟಿ, ಹಿಂದುಳಿದ ತಾಲೂಕುಗಳಿಗೆ 25 ಕೋಟಿ ರು ಹಂಚಿಕೆ ಮಾಡಿದೆ. ಇದೇ ನಿಗಮದ ಭೂ ಸ್ವಾಧೀನ ವೆಚ್ಚಗಳಿಗೆಂದು ಆಯವ್ಯಯದಲ್ಲಿ 400 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಗೋವಿಂದರಾವ್ ಸಮಿತಿಯ ಶಿಫಾರಸ್ಸಿನಂತೆ  ಈ ಮೊತ್ತದ ಪೈಕಿ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 200 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 133 ಕೋಟಿ ಮತ್ತು ಹಿಂದುಳಿದ ತಾಲೂಕುಗಳಿಗೆ 67 ಕೋಟಿ ರು ಹಂಚಿಕೆ ಮಾಡಿರುವುದು ಗೊತ್ತಾಗಿದೆ.

 

 

ಕರ್ನಾಟಕ  ನೀರಾವರಿ ನಿಗಮಕ್ಕೆ ಆಯವ್ಯಯದಲ್ಲಿ 250 ಕೋಟಿ ರು ಅನುದಾನವನ್ನು ಸಮಿತಿಯ ಶಿಫಾರಸ್ಸಿನಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 125 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 83 ಕೋಟಿ, ಹಿಂದುಳಿದ ತಾಲೂಕುಗಳಿಗೆ 42 ಕೋಟಿ ಹಂಚಿಕೆ ಮಾಡಿದೆ. ಕರ್ನಾಟಕ ನೀರಾವರಿ ನಿಗಮದ ಭೂ ಸ್ವಾಧೀನ ವೆಚ್ಚಗಳಿಗೆ ಆಯವ್ಯಯದಲ್ಲಿ ಹಂಚಿಕೆಯಾಗಿರುವ  50 ಕೋಟಿ ರು.ಗ ಪೈಕಿ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 25 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 17 ಕೋಟಿ, ಹಿಂದುಳಿದ ತಾಲೂಕುಗಳಿಗೆ 8 ಕೋಟಿ ರುನಂತೆ ಹಂಚಿಕೆ ಮಾಡಿರುವುದು ತಿಳಿದು ಬಂದಿದೆ.

ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಆಯವ್ಯಯದಲ್ಲಿ ಹಂಚಿಕೆ ಮಾಡಿರುವ 100 ಕೋಟಿ ರುಪಾಯಿಗಳನ್ನು ವರದಿಯ ಶಿಫಾರಸ್ಸಿನಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 50 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 33 ಕೋಟಿ ಮತ್ತು ಹಿಂದುಳಿದ ತಾಲೂಕುಗಳಿಗೆ 17 ಕೋಟಿ ರು ಹಂಚಿಕೆ ಮಾಡಿದೆ. ಇದೇ ನಿಗಮಕ್ಕೆ ಭೂ ಸ್ವಾಧೀನ ವೆಚ್ಚಗಳಡಿಯಲ್ಲಿ ಆಯವ್ಯಯದಲ್ಲಿ ಹಂಚಿಕೆಯಾಗಿರುವ 50 ಕೋಟಿ ರು ಪೈಕಿ 25 ಕೋಟಿ ರುಪಾಯಿಗಳನ್ನು ಅತ್ಯಂತ ಹಿಂದುಳಿದ ತಾಲೂಕುಗಳಿಗೆ ಹಂಚಿಕೆ ಮಾಡಿದೆ. ಅದೇ ರೀತಿ ಅತೀ ಹಿಂದುಳಿದ ತಾಲೂಕುಗಳಿಗೆ 17 ಕೋಟಿ, ಹಿಂದುಳಿದ ತಾಲೂಕುಗಳಿಗೆ 8 ಕೋಟಿ ರು ಹಂಚಿಕೆ ಮಾಡಿರುವುದು ಗೊತ್ತಾಗಿದೆ.

ಕಾವೇರಿ ನೀರಾವರಿ ನಿಗಮಕ್ಕೆ ಆಯವ್ಯಯದಲ್ಲಿ ಹಂಚಿಕೆಯಾಗಿರುವ 100 ಕೋಟಿ ರು ಪೈಕಿ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 50 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 33 ಕೋಟಿ, ಹಿಂದುಳಿದ ತಾಲೂಕುಗಳಿಗೆ 17 ಕೋಟಿ ರು ಹಂಚಿಕೆ ಮಾಡಿದೆ.

ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ನೀರಾವರಿ ನಿಗಮಗಳಿಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಒಟ್ಟು 1,100 ಕೋಟಿ ರು ಅನುದಾನ ಹಂಚಿಕೆ ಮಾಡಲಾಗಿದೆ. 3;2;1 ಅನುಪಾತದಲ್ಲಿ ಅತ್ಯಂತ ಹಿಂದುಳಿದ, ಅತೀ  ಹಿಂದುಳಿದ ಹಾಗೂ ಹಿಂದುಳಿದ ತಾಲೂಕುಗಳ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಬೇಕು.

ಈಗಾಗಲೇ ಆಡಳಿತಾತ್ಮಕ ಅನುಮೋದನೆ ಪಡೆದು ಪ್ರಗತಿಯಲ್ಲಿರುವ ಯೋಜನೆಗಳಿಗೆ ಆದ್ಯತೆ ನೀಡಬೇಕು. ಹಲವು ವರ್ಷಗಳಿಂದ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಮೊದಲ ಆದ್ಯತೆ ನೀಡುವುದು, ಪ್ರತಿ ಕಾಮಗಾರಿಗೆ ಸಂಬಂಧಿಸಿದ ತಾಲೂಕಿನ ಹೆಸರು, ಅಂದಾಜು ಮೊತ್ತ, ಇದುವರೆಗೆ ವೆಚ್ಚವಾಗಿರುವ ಮೊತ್ತ, ಬಾಕಿ ವೆಚ್ಚ, ಕಾಮಗಾರಿಯ ಪ್ರಗತಿ ಶೇಕಡವಾರು, ಪೂರ್ಣಗೊಳಿಸಲು ಅಗತ್ಯವಿರುವ ಉಳಿದ ಮೊತ್ತ ಹಾಗೂ ನಿರೀಕ್ಷಿತ ಪೂರ್ಣಗೊಳಿಸುವ ಅವಧಿಯ ವಿವರಗಳನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ಜಲಸಂಪನ್ಮೂಲ ಇಲಾಖೆಯ  ಸರ್ಕಾರದ ಜಂಟಿ ಕಾರ್ಯದರ್ಶಿ ಸುಜಾತ ಎಲ್ ಜಾಧವ್ ಅವರು ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯೂ ಸಹ ಕೃಷಿ ಇಲಾಖೆಯಂತೆ ಹಂಚಿಕೆಯಾಗಿರುವ ಅನುದಾನವನ್ನು ಹಂಚಿಕೆ ಮಾಡಿದೆ. ಪ್ರಗತಿಪಥ-ಹವಾಮಾನ ಆಧಾರಿತ ಗ್ರಾಮೀಣ ರಸ್ತೆ ಸಂಪರ್ಕ-ಇಎಪಿ ಗೆ ಆಯವ್ಯಯದಲ್ಲಿ 200 ಕೋಟಿ ರು  ಅನುದಾನ ಹಂಚಿಕೆಯಾಗಿತ್ತು. ಇದನ್ನು ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 100 ಕೋಟಿ ರು., ಅತೀ ಹಿಂದುಳಿದ ತಾಲೂಕುಗಳಿಗೆ 67 ಕೋಟಿ, ಹಿಂದುಳಿದ ತಾಲೂಕುಗಳಿಗೆ 33 ಕೋಟಿ ರು ಹಂಚಿಕೆ ಮಾಡಿರುವುದು ಗೊತ್ತಾಗಿದೆ.

ಅತೀ ಹಿಂದುಳಿದ 59 ತಾಲೂಕುಗಳಿಗೆ 33 ಕೋಟಿ ರುಗಳನ್ನು ಸಮಾನವಾಗಿ ಹಂಚಿಕೆ ಮಾಡಲು ಸೂಚಿಸಿದೆ. ಇದರ ಪ್ರಕಾರ ಕೈಗಾರಿಕೆ ಗಳಿಗೆ ಪ್ರೋತ್ಸಾಹಧನ ಯೋಜನೆಯಡಿಯಲ್ಲಿ ಆಯವ್ಯಯದಲ್ಲಿ  100 ಕೋಟಿ ರು ಅನುದಾನ ಹಂಚಿಕೆಯಾಗಿದೆ. ಸಮಿತಿಯ ಶಿಫಾರಸ್ಸಿನಂತೆ 2;1ರ ಅನುಪಾತದಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 67 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 33 ಕೋಟಿ ರು ಹಂಚಿಕೆ ಮಾಡಿದೆ. ಹಿಂದುಳಿದ ತಾಲೂಕುಗಳಿಗೆ ಅನುದಾನ ಹಂಚಿಕೆ ಮಾಡಲು ವರದಿಯು ಶಿಫಾರಸ್ಸು ಮಾಡಿಲ್ಲ.

ಕೈಗಾರಿಕೆ ಘಟಕಗಳಿಗೆ ಮೌಲ್ಯಾಧಾರಿತ ತೆರಿಗೆ ಪಾವತಿಗಾಗಿ ನೀಡುವ ಸಾಲ ಯೋಜನೆಯಲ್ಲಿ ಆಯವ್ಯಯದಲ್ಲಿ 200 ಕೋಟಿ ರು ಹಂಚಿಕೆ ಮಾಡಲಾಗಿದೆ. ಈ ಮೊತ್ತವನ್ನು 2;1ರ ಅನುಪಾತದಂತೆ ಅತ್ಯಂತ ಹಿಂದುಳಿದ ತಾಲೂಕುಗಳಿಗೆ 133 ಕೋಟಿ, ಅತೀ ಹಿಂದುಳಿದ ತಾಲೂಕುಗಳಿಗೆ 67 ಕೋಟಿ ರು ಹಂಚಿಕೆ ಮಾಡಿರುವುದು ತಿಳಿದು ಬಂದಿದೆ.

 

 

ವೈದ್ಯಕೀಯ ಶಿಕ್ಷಣ ಇಲಾಖೆಗೆ 75 ಕೋಟಿ ರು ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ಗೋವಿಂದರಾವ್ ವರದಿಯ ಶಿಫಾರಸ್ಸಿನಂತೆ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೂಪರ್‍‌ ಸ್ಪೆಷಾಲಿಟಿ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದೆ. ವಿಜಯನಗರ, ವಿಜಯಪುರ ಮತ್ತು ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು.

ಅದೇ ರೀತಿ ಇನ್ನೊಂದು ಲೆಕ್ಕ ಶೀರ್ಷಿಕೆಯಡಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ 250 ಕೋಟಿ ರು ಅನುದಾನ ಒದಗಿಸಿದೆ. ಈ ಅನುದಾನವನ್ನು ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಬಳಸಬೇಕು. ಮತ್ತು ಕಟ್ಟಡ ನಿರ್ಮಾಣ ಹಾಗೂ ಉಪಕರಣಗಳನ್ನು ಖರೀದಿಸಬೇಕು. ಈ ಲೆಕ್ಕ ಶೀರ್ಷಿಕೆ ಅನುದಾನವನ್ನು 60;40ರ ಅನುಪಾತದಲ್ಲಿ ಅತ್ಯಂತ ತೀವ್ರ ಕೊರತೆ ಮತ್ತು ಅತೀ ತೀವ್ರ ಕೊರತೆ ಇರುವ ತಾಲೂಕುಗಳಿಗೆ ವೆಚ್ಚ ಮಾಡಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

Hot this week

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...
Please Scan to make Your Contribution

Topics

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...

Related Articles

Popular Categories

error: Content is protected !!