Tuesday | September 8, 2026 |

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ತ ಮಂಡಳಿ, ಜನಸೇವಾ ಟ್ರಸ್ಟ್‌ಗೆ ಸರ್ಕಾರವು ಗೋಮಾಳ ಸೇರಿದಂತೆ ಇನ್ನಿತರೆ ಸ್ವರೂಪದಲ್ಲಿರುವ ಜಮೀನುಗಳ ಪೈಕಿ ಸರ್ಕಾರವು  ಒಟ್ಟಾರೆ 121 ಎಕರೆ  ಮಂಜೂರು ಮಾಡಿದೆ.

ಇದಲ್ಲದೆ ಕಾಂಗ್ರೆಸ್‌ ಭವನ ಟ್ರಸ್ಟ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ವಿವೇಕಾನಂದ ವಿದ್ಯಾವರ್ಧಕ ಸಂಘ, ಆದಮಾರು ಮಠ ವಿದ್ಯಾ ಸಂಸ್ಥೆ, ಕೃಷ್ಣ ಸೇವಾಶ್ರಮ ಟ್ರಸ್ಟ್‌, ಆದಿಚುಂಚನಗಿರಿ, ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಸಂಘ, ಸಂಸ್ಥೆ, ಚಾರಿಟೆಬಲ್ ಟ್ರಸ್ಟ್‌, ವಿಶ್ವವಿದ್ಯಾಲಯ, ಮಾತಾ ಅಮೃತಾನಂದಮಯಿ, ಸಂಸ್ಕೃತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಸರ್ಕಾರಿ ನೌಕರರ ಸಮುದಾಯ ಭವನ, ಅಂಬೇಡ್ಕರ್ ಸೇವಾ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಬಾಪೂಜಿ ವಿದ್ಯಾಸಂಸ್ಥೆ ಸೇರಿದಂತೆ ಇನ್ನಿತರೆ ಶೈಕ್ಷಣಿಕ ಮತ್ತು ಧಾರ್ಮಿಕ ಉದ್ದೇಶದ ಸಂಘ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಿದೆ.

ಈ ಎಲ್ಲಾ ಸಂಘ ಸಂಸ್ಥೆಗಳಿಗೆ ಕಳೆದ 16 ವರ್ಷಗಳಲ್ಲಿ (2010-2026)  ಒಟ್ಟಾರೆ 1,945 ಎಕರೆ 31 ಗುಂಟೆ ವಿಸ್ತೀರ್ಣದ ಜಮೀನುಗಳನ್ನು  ಮಂಜೂರು ಮಾಡಿರುವ ಪಟ್ಟಿಯನ್ನು  ಸರ್ಕಾರವು ಸದನಕ್ಕೆ ಮಂಡಿಸಿದೆ.  ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರು ಸದನಕ್ಕೆ ನೀಡಿರುವ  ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.

ಬೆಂಗಳೂರು ಪೂರ್ವ, ಉತ್ತರ, ಯಲಹಂಕ, ದಕ್ಷಿಣ ಆನೇಕಲ್, ಹಾರೋಹಳ್ಳಿ, ಮಾಗಡಿ, ಕನಕಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ವ್ಯಾಪ್ತಿಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಿಗೆ 498 ಎಕರೆಗೂ ಮೀರಿ ಅಧಿಕ ವಿಸ್ತೀರ್ಣದ ಜಮೀನುಗಳನ್ನು ಸರ್ಕಾರವು ಮಂಜೂರು ಮಾಡಿದೆ.

 

 

ಈ ಪೈಕಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ಟ್ರಸ್ಟ್‌, ಜನಸೇವಾ ವಿಶ್ವಸ್ಥ ಮಂಡಳಿಯು ಸಿಂಹಪಾಲು ಪಡೆದಿದೆ. ಕಳೆದ 16 ವರ್ಷಗಳಲ್ಲಿ ಸಂಘಪರಿವಾರಕ್ಕೆ ಸೇರಿರುವ ಸಂಸ್ಥೆಗಳಿಗೆ ಒಟ್ಟಾರೆ 121.43 ಎಕರೆ ಜಮೀನುಗಳನ್ನು ಸರ್ಕಾರವು ಮಂಜೂರು ಮಾಡಿರುವುದು ಉತ್ತರದಿಂದ ತಿಳಿದು ಬಂದಿದೆ.

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ ಮಂಡಳಿ ಮತ್ತು ಜನಸೇವಾ ಟ್ರಸ್ಟ್‌ಗೆ ಯಲಹಂಕ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಹುರುಳಿಚಿಕ್ಕನಹಳ್ಳಿ ಸರ್ವೇ ನಂಬರ್‍‌ 69ರಲ್ಲಿ 9 ಎಕರೆ 32 ಗುಂಟೆ, ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ 6 ಎಕರೆ , ಕುರುಬರಹಳ್ಳಿಯಲ್ಲಿ 35 ಎಕರೆ 33 ಗುಂಟೆ, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೆಳಗಿನನಾಯ್ಕರಾಂಡಹಳ್ಳಿಯಲ್ಲಿ 6 ಎಕರೆ 20 ಗುಂಟೆ, 36.00 ಎಕರೆ, ಮೇಲಿನಜೋಗನಹಳ್ಳಿಯಲ್ಲಿ 7 ಎಕರೆ 20 ಗುಂಟೆ ವಿಸ್ತೀರ್ಣದ ಜಮೀನುಗಳು ಮಂಜೂರಾಗಿರುವುದು ಗೊತ್ತಾಗಿದೆ.

ಅದೇ ರೀತಿ ಮೈಸೂರಿನ ಬೆಳವಾಡಿಯಲ್ಲಿ 9 ಎಕರೆ 38 ಎಕರೆ, ಚಾಮರಾಜನಗರದ ಯಡಪುರದಲ್ಲಿ 5 ಎಕರೆ, ಕಲ್ಬುರ್ಗಿಯ ಶರಣಸಿರಸಗಿಯಲ್ಲಿ 7 ಎಕರೆ ವಿಸ್ತೀರ್ಣದ ಜಮೀನುಗಳನ್ನು ರಾಷ್ಟ್ರೋತ್ಥಾನ ಪರಿಷತ್‌ ಹೆಸರಿಗೆ ಜಮೀನು ಮಂಜೂರಾಗಿರುವುದು ತಿಳಿದು ಬಂದಿದೆ.

 

 

ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ 8.34 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಕಂಬಿಪುರದಲ್ಲಿ 35 ಎಕರೆ, ನೆಲಮಂಗಲದ ಹಂಚಿಪುರದಲ್ಲಿ 12ಎಕರೆ, ಹಾಸನದ ಚನ್ನರಾಯಪಟ್ಟಣದಲ್ಲಿ 22 ಎಕರೆ 36 ಗುಂಟೆ ಸೇರಿ ಒಟ್ಟಾರೆ 77 ಎಕರೆ ಜಮೀನನ್ನು ಸರ್ಕಾರವು ಮಂಜೂರು ಮಾಡಿದೆ.

 

 

ಆದಿಚುಂಚನಗಿರಿ ಟ್ರಸ್ಟ್‌ಗೆ ಬೆಂಗಳೂರು ನಗರೂರು ಗ್ರಾಮದಲ್ಲಿ 16 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಕಂಬೀಪುರದಲ್ಲಿ 35 ಎಕರೆ, ಭದ್ರಾವತಿಯ ಕಾರೇಹಳ್ಳಿಯಲ್ಲಿ 20 ಎಕರೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ 3 ಎಕರೆ 10 ಗುಂಟೆ ಸೇರಿ ಒಟ್ಟಾರೆ 74 ಎಕರೆ 1 ಗುಂಟೆ ವಿಸ್ತೀರ್ಣದ ಜಮೀನನ್ನು ಸರ್ಕಾರವು ಮಂಜೂರು ಮಾಡಿರುವುದು ಗೊತ್ತಾಗಿದೆ.

ಮಾತಾ ಅಮೃತಾನಂದಮಯಿ ವಿದ್ಯಾಸಂಸ್ಥೆಗೆ ಆನೇಕಲ್‌ನ ಚೂಡಸಂದ್ರ ಗ್ರಾಮದಲ್ಲಿ 5 ಎಕರೆ 18 ಗುಂಟೆ, ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ ಗ್ರಾಮದಲ್ಲಿ 25 ಎಕರೆ ಜಮೀನು ಮಂಜೂರಾಗಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಗಾಗಿ ಶಿವಮೊಗ್ಗದ ಉರಗಡೂರಿನಲ್ಲಿ 19 ಎಕರೆ, ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿಗೆ ಬೆಳ್ತಂಗಡಿಯ ಉಜಿರೆಯಲ್ಲಿ 21 ಗುಂಟೆ ಜಮೀನು ಮಂಜೂರಾಗಿದೆ.

 

 

ವಿಶೇಷವೆಂದರೇ ಮಂಡ್ಯದ ಹೆಚ್‌ ಮಲ್ಲಿಗೆರೆ, ಮಾದೇಪುರ, ಜವರನಹಳ್ಳಿ, ಚುಂಚನಹಳ್ಳಿ, ನಾಗಮಂಗಲದ ಬ್ಯಾಲದಕೆರೆಯಲ್ಲಿ ಒಟ್ಟಾರೆ 102 ಎಕರೆ 34 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶ ಮತ್ತು ಆಸ್ಪತ್ರೆ ಉದ್ದೇಶಕ್ಕೆ ಮಂಜೂರಾಗಿದೆ ಎಂದು ಉತ್ತರದಲ್ಲಿ ಮಾಹಿತಿ ಇದೆ. ಆದರೆ ಈ ಜಮೀನುಗಳನ್ನು ಯಾವ ಶೈಕ್ಷಣಿಕ ಸಂಸ್ಥೆಗಳಿಗೆ ಮಂಜೂರಾಗಿದೆ ಎಂಬ ಹೆಸರುಗಳನ್ನು ಒದಗಿಸಿಲ್ಲ.

 

 

ಮೈಸೂರಿನ ಜೆಎಸ್‌ಎಸ್‌ ವಿದ್ಯಾಪೀಠಕ್ಕೆ ವಿಜಯಪುರ ಜಿಲ್ಲೆಯ ಭೂತನಾಳ ಗ್ರಾಮದಲ್ಲಿ 21 ಎಕರೆ 8 ಗುಂಟೆ ವಿಸ್ತೀರ್ಣದ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಿತ್ತು. ಆದರೆ ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ. ಹೈಕೋರ್ಟ್‌ನಲ್ಲಿ ಈ ಕುರಿತು ರಿಟ್‌ ಅರ್ಜಿ ಸಲ್ಲಿಕೆಯಾಗಿದೆ. ಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ, ಕುಂಚಿಟಿಗ ಮಹಾಸಭಾ, ಮಹರ್ಷಿ ವಾಲ್ಮೀಕಿ ಗುರುಪೀಠ,

ನಾರಾಯಣಗುರು ಮಹಾಸಂಸ್ಥಾನ, ಮಾಚಿದೇವ ಮಹಾಸಂಸ್ಥಾನ, ಮೇದರ ಕೇತೇಶ್ವರ ಗುರುಪೀಠ, ಕುರುಬರ ಸಂಘ, ಆದಿಜಾಂಬವ ಮಹಾಸಂಸ್ಥಾನ, ಬಲಿಜ, ಕುಂಚಿಟಿಗರ ಸಂಘ, ಸಿದ್ದಗಂಗಾ ಮಠ ಟ್ರಸ್ಟ್‌, ವಾಲ್ಮೀಕಿ ನಾಯಕ ಸಭೆ, ಸಿದ್ದಗಂಗಾ ಮಠ, ಆರ್ಯ ಈಡಿಗರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ, ದೈವಜ್ಞ ಬ್ರಾಹ್ಮಣ ಸಂಘ,

 

 

ಕನಕ ಸೇವಾ ಸಂಸ್ಥೆ, ಶಾರದಾ ಪೀಠ, ಕ್ಷತ್ರಿಯ ಮರಾಠ ಯುವ ವೇದಿಕೆ, ಬೋವಿ ಸಮಾಜ, ಜಿಲ್ಲಾ ಕೊಠಾರಿ ಸಂಘ, ಕೊಠಾರಿ ಸೇವಾ ಸಂಘ, ಮಡಿವಾಳ, ದೀನಬಂಧು ಟ್ರಸ್ಟ್‌, , ಆದಮಾರು ಮಠ ವಿದ್ಯಾಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಗೂ ಸಹ ಸರ್ಕಾರಿ ಜಮೀನು ಮಂಜೂರಾಗಿರುವುದು ತಿಳಿದು ಬಂದಿದೆ.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ರಾಷ್ಟ್ರೋತ್ಥಾನ ಪರಿಷತ್‌ ಗೆ ಗೋಮಾಳ ಹಂಚಿಕೆ ಮಾಡಿರುವ ಕುರಿತು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

4 ವರ್ಷದಲ್ಲಿ 212.83 ಎಕರೆ ಗೋಮಾಳ ಹಂಚಿಕೆ; ರಾಷ್ಟ್ರೋತ್ಥಾನ, ಇಸ್ಕಾನ್‌, ಆದಿಚುಂಚನಗಿರಿ ಸಿಂಹಪಾಲು

 

ಕಳೆದ ನಾಲ್ಕು ವರ್ಷಗಳಲ್ಲಿ  ಧಾರ್ಮಿಕ ಸಂಘ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಿರುವ ಕುರಿತು ದಿ ಫೈಲ್‌ ವರದಿಗಳನ್ನು ಪ್ರಕಟಿಸಿತ್ತು.

 

ಗೋಮಾಳ ಮಂಜೂರಿಗೆ ತಡೆ; ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಸುತ್ತ ‘ದಿ ಫೈಲ್‌’ನ 11 ವರದಿಗಳು

 

ಜನಸೇವಾ ಟ್ರಸ್ಟ್‌ ಗೂ ನಿಯಮಗಳನ್ನು ಉಲ್ಲಂಘಿಸಿ ಚಿಲ್ಲರೆ ದರದಲ್ಲಿ ಜಮೀನು ಮಂಜೂರು ಮಾಡಿದ್ದನ್ನು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Hot this week

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

ಪ್ರಜಾಸೇವೆ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ 2.86 ಕೋಟಿ ವೆಚ್ಚ ; ಬರದಿಂದ ತತ್ತರಿಸಿದ್ದರೂ ದುಂದುವೆಚ್ಚಗಳಿಗೆ ಬಿದ್ದಿಲ್ಲ ಕಡಿವಾಣ

ಬೆಂಗಳೂರು;  ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...
Please Scan to make Your Contribution

Topics

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!