Friday | October 2, 2026 |

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳ ಅರ್ಹತೆ ಪರಿಶೀಲನೆ, ಅನರ್ಹ ಕುಟುಂಬಗಳಿಗೆ ಸೌಲಭ್ಯಗಳನ್ನು ವಿಸ್ತರಿಸಿರುವ ಸಾಧ್ಯತೆಯಿರುವ ಪ್ರಕರಣಗಳನ್ನು ಗುರುತಿಸಲು ಕುಟುಂಬ ಮತ್ತು ಫ್ರೂಟ್ಸ್‌ ದತ್ತಾಂಶಗಳನ್ನು ಸರ್ಕಾರವು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಿಗೇ ದತ್ತಾಂಶಗಳನ್ನೇ ಒದಗಿಸಿಲ್ಲ.

ಅನ್ನಭಾಗ್ಯ ಯೋಜನೆ ಕುರಿತು ಸಿಎಜಿಯು ಆಹಾರ ನಾಗರಿಕ ಸರಬರಾಜು ಇಲಾಖೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಸಿಎಜಿಯು ವ್ಯಕ್ತಪಡಿಸಿರುವ ಆಕ್ಷೇಪಣೆಗಳ ಕುರಿತು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು  ಸಚಿವ ರಿಜ್ವಾನ್‌ ಅರ್ಷದ್‌ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಅಗತ್ಯವಿದ್ದ ದತ್ತಾಂಶವನ್ನು ಲೆಕ್ಕಪರಿಶೋಧನೆಗಾಗಿ ಒದಗಿಸಲಾಗಿಲ್ಲ. ಇದರಿಂದಾಗಿ ಕೈಗೊಳ್ಳಬಹುದಾಗಿದ್ದ ದತ್ತಾಂಶ ವಿಶ್ಲೇಷಣೆ ಮತ್ತು ಪರಿಶೀಲನೆಯ ವ್ಯಾಪ್ತಿಯೂ ಸಹ ಸೀಮಿತಗೊಂಡಿದೆ.

1.2 ಲಕ್ಷಕ್ಕಿಂತ ಹೆಚ್ಚಿನ ವಾ‍ರ್ಷಿಕ ಆದಾಯ ಹೊಂದಿದ್ದ 8,281 ಫಲಾನುಭವಿಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಇದಲ್ಲದೆ ದತ್ತಾಂಶದ ಪ್ರಕಾರ, ವಾರ್ಷಿಕ ಆದಾಯ ₹1.2 ಲಕ್ಷಕ್ಕಿಂತ ಹೆಚ್ಚಿರುವ 5,13,211 ಕುಟುಂಬಗಳನ್ನು ಬಿಪಿಎಲ್‌ ವರ್ಗದಲ್ಲಿ ಸೇರಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

ವಾರ್ಷಿಕ ಆದಾಯ ₹1.2 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬಗಳನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರ್ಪಡೆ ಮಾಡಿರುವುದು 8,281 ಫಲಾನುಭವಿಗಳು ₹1.2 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೂ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ. ಇದಲ್ಲದೆ, Rightful Targeting ದತ್ತಾಂಶದ ಪ್ರಕಾರ, ವಾರ್ಷಿಕ ಆದಾಯ ₹1.2 ಲಕ್ಷಕ್ಕಿಂತ ಹೆಚ್ಚಿರುವ 5,13,211 ಕುಟುಂಬಗಳನ್ನು ಬಿಪಿಎಲ್‌ ವರ್ಗದಲ್ಲಿ ಸೇರಿಸಿರುವುದನ್ನು ಸಿಎಜಿಯು ಪ್ರಾಥಮಿಕ ಪರಿಶೀಲನೆ ವೇಳೆ ಬಹಿರಂಗಗೊಳಿಸಿದೆ.

 

 

ಒಂದೇ ಆಧಾರ್ ಸಂಖ್ಯೆಯನ್ನು ಹಲವು ಸಕ್ರಿಯ ಪಡಿತರ ಚೀಟಿ ಸಂಖ್ಯೆಗಳೊಂದಿಗೆ ಜೋಡಿಸಿರುವುದು ಮತ್ತು ಒಂದಕ್ಕಿಂತ ಹೆಚ್ಚು ಸಕ್ರಿಯ ಪಡಿತರ ಚೀಟಿ ಸಂಖ್ಯೆಗಳೊಂದಿಗೆ 16,304 ಜೋಡಿಸಲಾಗಿದೆ. ಆಧಾರ್‌ನ್ನು ವೈಯಕ್ತಿಕ ಫಲಾನುಭವಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಬಳಸುವ ಉದ್ದೇಶವಿದೆ. ಅಲ್ಲದೇ ಒಂದೇ ಆಧಾರ್‌ನ್ನು ಹಲವು ಸಕ್ರಿಯ ಪಡಿತರ ಚೀಟಿಗಳಿಗೆ ಜೋಡಿಸಿರುವುದು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ದತ್ತಸಂಚಯದಲ್ಲಿ ಫಲಾನುಭವಿಗಳ ಸಂಭಾವ್ಯ ದ್ವಂದ್ವ ನೋಂದಣಿಗೆ ಕಾರಣವಾಗಿರುವುದು ಸಹ ಸಿಎಜಿ ಆಕ್ಷೇಪಣೆ ಪತ್ರದಿಂದ ತಿಳಿದು ಬಂದಿದೆ.

ಸರ್ಕಾರಿ ಮತ್ತು ಅರೆ-ಸರ್ಕಾರಿ ನೌಕರರನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರಿಸಲಾಗಿದೆ. ಅದೇ ರೀತಿ 7,557 ಸರ್ಕಾರಿ ಮತ್ತು ಅರೆ-ಸರ್ಕಾರಿ ನೌಕರರನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರಿಸಲಾಗಿದೆ. ಈ ಎಲ್ಲರೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಸಿಎಜಿಯು ತನ್ನ ಪ್ರಾಥಮಿಕ ಪರಿಶೀಲನೆ ವೇಳೆ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

ಆದ್ಯತಾ ಪಡಿತರ ಚೀಟಿ (Priority Ration Card) ವರ್ಗದಡಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳನ್ನು ಸೇರ್ಪಡೆ ಮಾಡಿರುವುದು ಆಹಾರ ದತ್ತಾಂಶವನ್ನು ವಾಹನ್‌ ( VAHAN ) ದತ್ತಾಂಶವನ್ನು 01 ಜನವರಿ 2016ರಿಂದ 31 ಮಾರ್ಚ್ 2026ರವರೆಗಿನ ವಾಹನ ನೋಂದಣಿ ಮಾಹಿತಿಯೊಂದಿಗೆ ಹೋಲಿಸಿದೆ. ಇದರ ಪ್ರಕಾರ 79,940 ಮಂದಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಆದ್ಯತಾ ಪಡಿತರ ಚೀಟಿ ವರ್ಗದಡಿ ಮುಂದುವರಿಸಲಾಗಿರುವುದು ಕಂಡುಬಂದಿದೆ. ಆರು ತಿಂಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದ ಆದ್ಯತಾ ಪಡಿತರ ಚೀಟಿಗಳನ್ನು ಮುಂದುವರಿಸಿರುವುದನ್ನು ಕಂಡು ಹಿಡಿದಿದೆ.

10,11,666 ಆದ್ಯತಾ ಪಡಿತರ ಚೀಟಿ ಹೊಂದಿರುವವರನ್ನು ಅಮಾನತುಗೊಳಿಸದೆಯೇ ಸತತ ಆರು ತಿಂಗಳವರೆಗೆ ಪಡಿತರವನ್ನು ಪಡೆಯದಿದ್ದರೂ ಆದ್ಯತಾ ಪಡಿತರ ಚೀಟಿ ವರ್ಗದಡಿ ಮುಂದುವರಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಳ ಎಲ್ಲಾ ಸದಸ್ಯರಿಗೆ ಇ-ಕೆವೈಸಿ ಬಾಕಿ ಇದೆ.

37,30,705 ಆದ್ಯತಾ ಪಡಿತರ ಚೀಟಿಗಳಲ್ಲಿ, ಕುಟುಂಬದ ಎಲ್ಲಾ ಸದಸ್ಯರಿಗೆ ಇ ಕೆವೈಸಿ ಮಾಡಲಾಗಿಲ್ಲ. ಈ ಪಟ್ಟಿಯಲ್ಲಿ ಉಲ್ಲೇಖಿಸಿರುವ ಪ್ರಾಥಮಿಕ ಕಂಡುಬಂದ ಅಂಶಗಳ ಆಧಾರದ ಮೇಲೆ ಅನರ್ಹ ಪಡಿತರ ಚೀಟಿಗಳ ಒಟ್ಟು ಸಂಖ್ಯೆ 13,40,124 ಆಗಿದೆ ಎಂದು ಸಿಎಜಿಯು ತನ್ನ ಆಕ್ಷೇಪಣೆಯಲ್ಲಿ ವಿವರಿಸಿದೆ.

ಲೆಕ್ಕಪರಿಶೋಧನೆಯ ಮಿತಿ/ನಿರ್ಬಂಧಗಳು – ಕುಟುಂಬ ಮತ್ತು ಫ್ರೂಟ್ಸ್‌ ದತ್ತಾಂಶ ಲಭ್ಯವಿಲ್ಲ. ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಎಎವೈ ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಹಾಗೂ ಅನರ್ಹ ಕುಟುಂಬಗಳಿಗೆ ಸೌಲಭ್ಯಗಳನ್ನು ವಿಸ್ತರಿಸಿರುವ ಸಾಧ್ಯತೆಯಿರುವ ಪ್ರಕರಣಗಳನ್ನು ಗುರುತಿಸಲು ಕುಟುಂಬ ಮತ್ತು ಫ್ರೂಟ್ಸ್‌ ದತ್ತಸಂಚಯಗಳಿಗೆ ಪ್ರವೇಶ ಅಗತ್ಯವಿದೆ.

 

 

ಆದರೆ, ಅಗತ್ಯವಿದ್ದ ದತ್ತಾಂಶವನ್ನು ಲೆಕ್ಕಪರಿಶೋಧನೆಗಾಗಿ ಒದಗಿಸಲಾಗಿಲ್ಲ. ಇದರಿಂದ ಕೈಗೊಳ್ಳಬಹುದಾಗಿದ್ದ ದತ್ತಾಂಶ ವಿಶ್ಲೇಷಣೆ ಮತ್ತು ಪರಿಶೀಲನೆಯ ವ್ಯಾಪ್ತಿ ಸೀಮಿತಗೊಂಡಿದೆ. ಕುಟುಂಬ ದತ್ತಾಂಶ ಪಡೆಯಲು ಸಿಎಜಿಗೆ ಯಾವುದೇ ಪ್ರವೇಶ ನೀಡಿಲ್ಲ. ಹೀಗಾಗಿ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಕಹಲವು ಅಂಶಗಳನ್ನು ಪರಿಶೀಲಿಸಲು ಸಿಎಜಿಗೆ ಸಾಧ್ಯವಾಗಿಲ್ಲ.

ಆಹಾರ ದತ್ತಾಂಶಗಳ ಪ್ರಕಾರ ಫಲಾನುಭವಿಗಳ ದಾಖಲೆಗಳನ್ನು ಕುಟುಂಬ ಮಟ್ಟದ ಸಾಮಾಜಿಕ-ಆರ್ಥಿಕ ಮಾಹಿತಿಯೊಂದಿಗೆ ಹೋಲಿಸಿದಾಗ ಮೃತಪಟ್ಟಿರುವ ಫಲಾನುಭವಿಗಳ ಹೆಸರುಗಳು ಇನ್ನೂ ಪಡಿತರ ಚೀಟಿ ದಾಖಲೆಗಳಲ್ಲಿ ಮುಂದುವರಿದಿವೆಯೇ ಮತ್ತು ಅವರು ಮೃತಪಟ್ಟ ನಂತರವೂ ಸೌಲಭ್ಯಗಳನ್ನು ಪಡೆಯುತ್ತಿರುವ ಸಾಧ್ಯತೆಯಿದೆಯೇ ಎಂಬುದನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಸಿಎಜಿಯು ವಿವರಿಸಿದೆ.

ನಗರ ಪ್ರದೇಶಗಳಲ್ಲಿ ಫಲಾನುಭವಿ ಕುಟುಂಬಗಳು 1,000 ಚದರ ಅಡಿಗಿಂತ ಹೆಚ್ಚಿನ ವಸತಿ ಆಸ್ತಿಯನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಿಎಜಿಗೆ ಸಾಧ್ಯವಾಗಲಿಲ್ಲ. ಇಂತಹ ಆಸ್ತಿ ಹೊಂದಿರುವುದು ಬಿಪಿಎಲ್‌ ಎಎವೈ ಅರ್ಹತೆಯಿಂದ ಹೊರಗಿಡುವ ಮಾನದಂಡಗಳಲ್ಲಿ ಒಂದಾಗಿದೆ. ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಗಳೊಂದಿಗೆ ಏಕೀಕರಣದ ಮೂಲಕ ಫಲಾನುಭವಿಗಳ ದಾಖಲೆಗಳನ್ನು ನವೀಕರಿಸುವ ಪ್ರಕ್ರಿಯೆಯ ಪರಿಣಾಮಕಾರಿತ್ವ ಮತ್ತು ಸಮಯೋಚಿತತೆಯನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗಲಿಲ್ಲ.

ಫ್ರೂಟ್ಸ್‌ ಅದೇ ರೀತಿ ದತ್ತಾಂಶ ದತ್ತಾಂಶವೂ ಸಿಎಜಿಗೆ ಲಭ್ಯವಾಗಿಲ್ಲ. ಹೀಗಾಗಿ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಹಲವು ಅಂಶಗಳನ್ನು ಪರಿಶೀಲಿಸುವ ಸಾಮರ್ಥ್ಯ ಸೀಮಿತಗೊಂಡಿದೆ. ಆಹಾರ ದತ್ತಸಂಚಯದಲ್ಲಿರುವ ದಾಖಲೆಗಳೊಂದಿಗೆ ಕ್ರಾಸ್‌ಮ್ಯಾಚ್ ಮಾಡುವ ಮೂಲಕ ಫಲಾನುಭವಿ ಕುಟುಂಬಗಳ ಭೂಹಿಡುವಳಿ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. 3 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಒಣಭೂಮಿಯನ್ನು ಹೊಂದಿರುವ ಕುಟುಂಬಗಳನ್ನು, ಅಥವಾ ಅದಕ್ಕೆ ಸಮಾನವಾದ ನೀರಾವರಿ ಭೂಹಿಡುವಳಿಯನ್ನು ಹೊಂದಿರುವ ಕುಟುಂಬಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇಂತಹ ಭೂಹಿಡುವಳಿ ಹೊಂದಿರುವುದು ಬಿಪಿಎಲ್‌ ಮತ್ತು ಎಎವೈ ಸೌಲಭ್ಯ ಪಡೆಯಲು ಅನರ್ಹತೆಗೆ ಕಾರಣವಾಗುತ್ತದೆ ಎಂದು ಸಿಎಜಿಯು ತನ್ನ ಪ್ರಾಥಮಿಕ ಪರಿಶೀಲನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಇದಲ್ಲದೆ ಎಚ್‌ಆರ್‍ಎಂಎಸ್‌ ದತ್ತಾಂಶವನ್ನು ಬೆಂಗಳೂರು ನಗರ ಜಿಲ್ಲೆಯ ಆಹಾರ ದತ್ತಾಂಶದೊಂದಿಗೆ (DIST_CODE = 1502) ಸಾಮಾನ್ಯ ಬ್ಯಾಂಕ್ ಖಾತೆ ಸಂಖ್ಯೆಯ ಆಧಾರದ ಮೇಲೆ ಹೋಲಿಸಿದಾಗ 97 ಸರ್ಕಾರಿ ನೌಕರರನ್ನು ಆದ್ಯತಾ ಪಡಿತರ ಚೀಟಿ ವರ್ಗದ ಅಡಿಯಲ್ಲಿ ಸೇರಿಸಿರುವುದು ಕಂಡುಬಂದಿದೆ. ವೃತ್ತಿಪರರನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರಿಸಿರುವುದು 27,370 ವೃತ್ತಿಪರರು, ಅಂದರೆ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವಕೀಲರು, ಆರ್ಕಿಟೆಕ್ಚರಲ್ ಎಂಜಿನಿಯರ್‌ಗಳು ಮುಂತಾದವರು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವುದು ಕಂಡುಬಂದಿದೆ.

ಒಂದೇ ಮೊಬೈಲ್ ಸಂಖ್ಯೆಯನ್ನು ಹಲವು ಸಕ್ರಿಯ ಪಡಿತರ ಚೀಟಿಗಳಿಗೆ ಜೋಡಿಸಲಾಗಿದೆ. ಅಮಾನ್ಯ ಮೊಬೈಲ್ ಸಂಖ್ಯೆಗಳನ್ನು ತೆಗೆದುಹಾಕಿದ ನಂತರ, 2,08,171 ಮೊಬೈಲ್ ಸಂಖ್ಯೆಗಳನ್ನು ಹಲವು ಪಡಿತರ ಚೀಟಿಗಳಿಗೆ ಜೋಡಿಸಿರುವುದು ಕಂಡುಬಂದಿದೆ. ವಿವಿಧ ಸಕ್ರಿಯ ಪಡಿತರ ಚೀಟಿಗಳಲ್ಲಿ ಒಂದೇ ಮೊಬೈಲ್ ಸಂಖ್ಯೆಯನ್ನು ಮರುಮರು ಬಳಸಿರುವುದು ಫಲಾನುಭವಿಗಳ ನೋಂದಣಿ ಸಂದರ್ಭದಲ್ಲಿ ಸಮರ್ಪಕ ಪರಿಶೀಲನಾ ನಿಯಂತ್ರಣಗಳ ಕೊರತೆಯನ್ನು ಸೂಚಿಸುತ್ತದೆ ಎಂದು ಸಿಎಜಿಯ ಪ್ರಾಥಮಿಕ ಪರಿಶೀಲನೆಯಲ್ಲಿ ವಿವರಿಸಿದೆ.
ಒಂದೇ ಬ್ಯಾಂಕ್ ಖಾತೆಯನ್ನು ಹಲವು ಸಕ್ರಿಯ ಪಡಿತರ ಚೀಟಿಗಳಿಗೆ ಜೋಡಿಸಿರುವುದು (ಬೆಂಗಳೂರು ನಗರ ಜಿಲ್ಲೆಗೆ ಮಾತ್ರ) ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಲವು ಪಡಿತರ ಚೀಟಿಗಳಿಗೆ ಜೋಡಿಸಿರುವ 101 ಪ್ರಕರಣಗಳು ಕಂಡುಬಂದಿವೆ.

 

 

ಒಂದೇ ಆದಾಯ ಪ್ರಮಾಣಪತ್ರವನ್ನು ಹಲವು ಸಕ್ರಿಯ ಪಡಿತರ ಚೀಟಿಗಳಿಗೆ ಜೋಡಿಸಲಾಗಿದೆ. 94,760 ಆದಾಯ ಪ್ರಮಾಣಪತ್ರ ಸಂಖ್ಯೆಗಳನ್ನು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಪಡೆಯಲು ಅಥವಾ ಬೆಂಬಲಿಸಲು ಬಳಸಲಾಗಿದೆ. ಒಂದೇ ಆದಾಯ ಪ್ರಮಾಣಪತ್ರವನ್ನು 2 ರಿಂದ 45 ಪಡಿತರ ಚೀಟಿಗಳವರೆಗೆ ಬಳಸಿರುವುದು ಕಂಡುಬಂದಿದೆ. ಈ ರೀತಿಯ ನಕಲು ಬಳಕೆ ವಿವಿಧ ಕುಟುಂಬಗಳು ಮತ್ತು ಫಲಾನುಭವಿಗಳಲ್ಲಿ ಕಂಡುಬಂದಿದ್ದು, ಒಂದೇ ಆದಾಯ ಪ್ರಮಾಣಪತ್ರವನ್ನು ಮರುಬಳಕೆ ಮಾಡಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳಡಿ ಸೌಲಭ್ಯ ಪಡೆಯುತ್ತಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಸಿಎಜಿಯ ಪ್ರಾಥಮಿಕ ಪರಿಶೀಲನೆ ವರದಿಯಿಂದ ತಿಳಿದು ಬಂದಿದೆ.

Hot this week

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...
Please Scan to make Your Contribution

Topics

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...

Related Articles

Popular Categories

error: Content is protected !!