Wednesday | October 7, 2026 |

69 ಶಾಸಕರಿಗೆ 3 ವರ್ಷದಲ್ಲಿ 7.46 ಕೋಟಿ ರು ವೈದ್ಯಕೀಯ ವೆಚ್ಚ ಮರು ಪಾವತಿ; ಮೊದಲ ಮೂರು ಸ್ಥಾನದಲ್ಲಿ ಹೆಚ್‌ ಕೆ ಸುರೇಶ್‌, ಕೆ ಹರೀಶ್‌ ಗೌಡ, ಹೆಚ್‌ ಡಿ ರಂಗನಾಥ್ ಕುಟುಂಬ

ಬೆಂಗಳೂರು; ಶಾಸಕರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರ  ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ರಾಜ್ಯ ಸರಕಾರ, ಕಳೆದ ಮೂರು ವರ್ಷಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಬರೋಬ್ಬರಿ 7.46 ಕೋಟಿಯಷ್ಟು ವೈದ್ಯಕೀಯ ವೆಚ್ಚವನ್ನು ಭರಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

ಸಾಮಾಜಿಕ ಹೋರಾಟಗಾರ ಹೆಚ್‌ ಎಂ ವೆಂಕಟೇಶ್‌ ಅವರು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಗೆ ಉತ್ತರಿಸಿರುವ ಕರ್ನಾಟಕ ವಿಧಾನಸಭೆಯ ಲೆಕ್ಕ ಪತ್ರ ಶಾಖೆ (1-2) ಯು ಒಟ್ಟು  69 ಶಾಸಕರುಗಳು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ 2023-2026ನೇ ಸಾಲಿನಲ್ಲಿ  ಮರು ಪಾವತಿಸಿರುವ  ಪಾವತಿಸಿರುವ ವೈದ್ಯಕೀಯ ವೆಚ್ಚದ ವಿವರವನ್ನು ಒದಗಿಸಿದೆ.

ಕರ್ನಾಟಕದಲ್ಲಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ (Medical Reimbursement) ವಿಷಯವು ಆಗಾಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ವಿವಾದ ಹಾಗೂ ಚರ್ಚೆಗೆ ಕಾರಣವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಶಾಸಕರು ಮತ್ತು ಅವರ ಕುಟುಂಬದವರ ಚಿಕಿತ್ಸೆಗಾಗಿ ವೆಚ್ಚ ಮಾಡುತ್ತಿರುವುದು ಸಹ ಅಪಸ್ವರಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ವಿಧಾನಸಭೆಯು ನೀಡಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

ಕರ್ನಾಟಕ ವಿಧಾನಸಭೆಯ ಲೆಕ್ಕಪತ್ರ ಶಾಖೆಯು ಒದಗಿಸಿರುವ ಮಾಹಿತಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

ವಿಧಾನಸಭೆ ಸದಸ್ಯ ಹೆಚ್‌ ಕೆ ಸುರೇಶ್‌ ಮತ್ತು ಅವರ ಕುಟುಂಬದವರಿಗೆ 98,78,352 ರು ವೈದ್ಯಕೀಯ ವೆಚ್ಚವನ್ನು ಮರು ಪಾವತಿಸಿದೆ. ಈ 69 ಶಾಸಕರಗಳ ಪೈಕಿ ಹೆಚ್‌ ಕೆ ಸುರೇಶ್‌ ಮತ್ತು ಅವರ ಕುಟುಂಬದವರಿಗೆ ಮರು ಪಾವತಿಸಿರುವ ವೈದ್ಯಕೀಯ ವೆಚ್ಚವು ಮೊದಲ ಸ್ಥಾನದಲ್ಲಿರುವುದು ಗೊತ್ತಾಗಿದೆ.

ಅದೇ ರೀತಿ ಕೆ ಹರೀಶ್‌ ಗೌಡ ಮತ್ತು ಅವರ ಕುಟುಂಬದವರ ಹೆಸರಿಗೆ 85,91,139 ರು., ಡಾ ಹೆಚ್‌ ಡಿ ರಂಗನಾಥ್‌ ಮತ್ತು ಕುಟುಂಬ ಸದಸ್ಯರ ಹೆಸರಿಗೆ 85, 27, 761 ರು ಮೊತ್ತವನ್ನು ಮರು ಪಾವತಿಸಿದೆ. ಶಾಮನೂರು ಶಿವಶಂಕರಪ್ಪ (ದಿವಂಗತ) ಅವರಿಗೆ 69,78,675 ರು. ಪಾವತಿಸಿರುವುದು ತಿಳಿದು ಬಂದಿದೆ.

ವೈದ್ಯಕೀಯ ವೆಚ್ಚ ಮರು ಪಾವತಿಸಿರುವ ಪಟ್ಟಿ

ಎಂ ವೈ ಪಾಟೀಲ ಅವರಿಗೆ 11,53,250 ರು., ಬಸನಗೌಡ ತುರವಿಹಾಳ ಅವರಿಗೆ 20,245 ರು., ಪ್ರಸಾದ್‌ ಅಬ್ಬಯ್ಯ ಮತ್ತು ಕುಟುಂಬದವರಿಗೆ 35,39,271 ರು., ಅರವಿಂದ ಬೆಲ್ಲದ ಮತ್ತು ಕುಟುಂಬದವರಿಗೆ 7,70,000 ರು., ಉದಯ ಕೆ ಎಂ ಅವರಿಗೆ 70,000 ರು., ಹೆಚ್‌ ಕೆ ಸುರೇಶ್‌ ಮತ್ತು ಕುಟುಂಬದವರಿಗೆ 98,78,352 ರು., ಆರಗ ಜ್ಞಾನೇಂದ್ರ ಮತ್ತು ಕುಟುಂಬದವರಿಗೆ 10,21,631 ರು., ದಿನಕರ ಕೆ ಶೆಟ್ಟಿ ಅವರಿಗೆ 56,595 ರು., ಎಸ್‌ ಸುರೇಶ್‌ ಕುಮಾರ್ ಅವರಿಗೆ 22,26,082 ರು, ಎಸ್‌ ಆರ್‍‌ ಶ್ರೀನಿವಾಸ ( ವಾಸು) ಕುಟುಂಬದವರಿಗೆ 88,2927 ರು ವೈದ್ಯಕೀಯ ವೆಚ್ಚವನ್ನು ಮರು ಪಾವತಿಸಲಾಗಿದೆ.

ಸಿ ಸಿ ಪಾಟೀಲ ಅವರಿಗೆ 16,41,602 ರು., ಡಿ ಜಿ ಶಾಂತನಗೌಡ 54,160, ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ) 10,45,602 ರು., ಅಶೋಕ್ ಎಂ ಮನಗೂಳಿ ಮತ್ತು ಕುಟುಂಬದವರಿಗೆ 55,997 ರು., ಜಿ ಹೆಚ್‌ ಶ್ರೀನಿವಾಶ ಮತ್ತು ಕುಟುಂಬದವರಿಗೆ 13,38, 399 ರು., ಅಪ್ಪಾಜಿ ಸಿ ಎಸ್‌ ನಾಡಗೌಡ 1,70,.248 ರು., ಜಿ ಟಿ ಪಾಟೀಲ 22, 349 ರು., ವಿ ಸುನೀಲ್‌ ಕುಮಾರ್ 1,16,639 ರು., ಭೀಮನಗೌಡ (ರಾಜುಗೌಡ) ಬ. ಪಾಟೀಲ ಮತ್ತು ಕುಟುಂಬದವರು 13,54, 460 ರು., ಎಸ್‌ ಮಂಜುಳ ಅವರಿಗೆ  3,94,342 ರು ಪಾವತಿಸಲಾಗಿದೆ.

ಕೆ ಗೋಪಾಲಯ್ಯ ಮತ್ತು ಕುಟುಂಬದವರಿಗೆ 21,05,469 ರು., ಹೆಚ್‌ ಡಿ ರೇವಣ್ಣ ಮತ್ತು ಕುಟುಂಬದವರಿಗೆ 13,02,425 ರು.,

 

 

ಹಾಲಿ ಸ್ಪೀಕರ್ ಜಿ ಎಸ್‌ ಪಾಟೀಲ್‌ ಅವರಿಗೆ 87, 941  ರು., ಎಚ್‌ ವಿ ವೆಂಕಟೇಶ್‌ 3,03,454 ರು., ಕೆ ಹರೀಶ್‌ ಗೌಡ ಮತ್ತು ಕುಟುಂಬದವರಿಗೆ 85,91,139 ರು., ಉಮಾನಾಥ ಎ ಕೋಟ್ಯಾನ್‌ 9,23,367 ರು., ಪ್ರಕಾಶ ಕೆ ಕೋಳಿವಾಡ ಮತ್ತು ಕುಟುಂಬದವರಿಗೆ 17,59,818 ರು., ಡಾ ಶೈಲೇಂದ್ರ ಕೆ ಬೆಲ್ದಾಳೆ 6,50,816 ರು., ಎಂ ಆರ್‍‌ ಪಾಟೀಲ್‌ 2,22,669 ರು., ಪ್ರಭು ಬಿ ಚವ್ಹಾಣ 5,85,821 ರು., ಜಿ ಹಂಪಯ್ಯ ನಾಯಕ 14,82,074 ರು., ದುರ್ಯೋಧನ ಎಂ ಐಹೊಳೆ ಮತ್ತು ಕುಟುಂಬದವರಿಗೆ 11,93,930 ರು., ದಿ. ಶಾಮನೂರು ಶಿವಶಂಕರಪ್ಪ 69,78,675 ರು ಪಾವತಿಸಲಾಗಿದೆ.

ಮಾನಪ್ಪ ಡಿ ವಜ್ಜಲ 63,432 ರು., ಚನ್ನಾರೆಡ್ಡಿ ಪಾಟೀಲ ತುನ್ನೂರ 3,10,084 ರು., ಡಾ ಹೆಚ್‌ ಡಿ ರಂಗನಾಥ ಮತ್ತು ಕುಟುಂಬದವರಿಗೆ 85,27,761 ರು., ಕೆ ಷಡಕ್ಷರಿ 2,14,423 ರು., ರಾಜಾ ವೇಣುಗೋಪಾಲ ನಾಯಕ ಮತ್ತು ಕುಟುಂಬದವರಿಗೆ 29,15,307 ರು., ಯು ಬಿ ಬಣಕಾರ ಅವರಿಗೆ 51,576 ರು, ಎಸ್‌ ಮುನಿರಾಜು ಮತ್ತು ಕುಟುಂಬದವರಿಗೆ 1,94,639 ರು., ಅಶೋಕ್‌ ಕುಮಾರ್ ರೈ ಕೆ ಎಸ್‌ ಮತ್ತು ಕುಟುಂಬದವರಿಗೆ 22,64,078 ರು., ಲಕ್ಷ್ಮಣ ಎಸ್‌  ಸವದಿ 4,86,848 ರು., ಶರಣಗೌಡ ಕಂದಕೂರ 52,317 ರು., ಸಿದ್ದು ಕೆ ಸವದಿ 3,48,528 ರು., ವಿಠಲ ಸೋಮಣ್ಣ ಹಲಗೇಕರ್ 1,39,061 ರು., ಬಸನಗೌಡ ದದ್ದಲ ಮತ್ತು ಕುಟುಂಬದವರಿಗೆ 3,26, 486 ರು ಪಾವತಿಸಲಾಗಿದೆ.

 

 

ಜೆ ಬಿ ಜ್ಯೋತಿ ಗಣೇಶ್‌ ಮತ್ತು ಕುಟುಂಬದವರಿಗೆ 13,717 ರು., ಡಾ ಅವಿನಾಶ ಉಮೇಶ ಜಾಧವ ಮತ್ತು ಕುಟುಂಬದವರಿಗೆ 59,792 ರು., ಕೊತ್ತೂರು ಜಿ ಮಂಜುನಾಥ್ ಮತ್ತು ಕುಟುಂಬದವರಿಗೆ 4,07,567 ರು., ಹೆಚ್‌ ಡಿ ತಮ್ಮಯ್ಯ ಮತ್ತು ಕುಟುಂಬದವರಿಗೆ 24, 169 ರು., ನಿಖಿಲ್ ಉಮೇಶ್‌ ಕತ್ತಿ 2,349 ರು., ಡಾ ಎಂ ಚಂದ್ರಪ್ಪ 1,12,518 ರು., ಡಾ ಚಂದ್ರು ಕೆ ಲಮಾಣಿ 2,00,842 ರು., ಶ್ರೀನಿವಾಸ ವಿ ಮಾನೆ ಮತ್ತು ಕುಟುಂಬದವರಿಗೆ 10,94,474 ರು., ಹೆಚ್‌ ಟಿ ಮಂಜು ಮತ್ತು ಕುಟುಂಬದವರಿಗೆ 1,77, 746 ರು., ಸಿ ಪಿ ಯೋಗೇಶ್ವರ ಮತ್ತು ಕುಟುಂಬದವರಿಗೆ 1,46,192 ರು., ಜಿ ಕೆ ವೆಂಕಟಶಿವಾರೆಡ್ಡಿ ಮತ್ತು ಕುಟುಂಬದವರಿಗೆ 12,70,809 ರು ಮರು ಪಾವತಿಸಿರುವುದು ಗೊತ್ತಾಗಿದೆ.

ಸಿ ಕೆ ರಾಮಮೂರ್ತಿ 3,57,437 ರು., ಕೆ ವೈ ನಂಜೇಗೌಡ ಮತ್ತು ಕುಟುಂಬದವರಿಗೆ 7,95,319 ರು., ಎ ಆರ್‍‌ ಕೃಷ್ಣಮೂರ್ತಿ 2,20,992 ರು., ಬಿ ಪಿ ಹರೀಶ್‌ 23,391 ರು., ಎಂ ಟಿ ಕೃಷ್ಣಪ್ಪ 11,675 ರು., ಡಾ ಸಿದ್ದು ಪಾಟೀಲ ಮತ್ತು ಕುಟುಂಬದವರಿಗೆ 7,238 ರು., ಡಾ ಸಿ ಎನ್‌ ಅಶ್ವಥನಾರಾಯಣ ಮತ್ತು ಕುಟುಂಬದವರಿಗೆ 4,58,240 ರು., ಎನ್ ವೈ ಗೋಪಾಲಕೃಷ್ಣ 84,670 ರು., ಡಿ ವೇದವ್ಯಾಸ ಕಾಮತ್‌ 43,224 ರು., ಸ್ವರೂಪ್ ಪ್ರಕಾಶ್‌ 41,465 ರು., ಹೆಚ್ ಎ ಇಕ್ಬಾಲ್‌ ಹುಸೇನ್‌ 17,74,710 ರು.,ಗಳನ್ನು ಮರು ಪಾವತಿಸಿರುವುದು ತಿಳಿದು ಬಂದಿದೆ.

 

 

ಕರ್ನಾಟಕದಲ್ಲಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿಯನ್ನು (Members Medical Attendance Rules) 1956ರ ಕಾಯ್ದೆಯ ಅಡಿಯಲ್ಲಿ ರಚಿಸಲಾದ ನಿಯಮಗಳ ಪ್ರಕಾರ ನಿಯಂತ್ರಿಸಲಾಗುತ್ತದೆ. ಕರ್ನಾಟಕದಲ್ಲಿ ಶಾಸಕರು (MLAs) ಮತ್ತು ಮಾಜಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿಗೆ (Medical Reimbursement) ಯಾವುದೇ ಗರಿಷ್ಠ ಮಿತಿ (No Upper Limit) ಇರುವುದಿಲ್ಲ. ಶಾಸಕರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರು ಪಡೆಯುವ ಅಗತ್ಯ ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

2024ರ ಹೊಸ ತಿದ್ದುಪಡಿ: 2024 ರಲ್ಲಿ ವಿಶೇಷ ಮಂಡಳಿಯು “The Karnataka Legislature (Members Medical Attendance) (Amendment) Rules, 2024” ಅನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಹಾಲಿ ಶಾಸಕರು ಮತ್ತು ಅವರ ಅವಲಂಬಿತರ ವೈದ್ಯಕೀಯ ಚಿಕಿತ್ಸೆಗಳ ಮರುಪಾವತಿ ನಿಯಮಗಳನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಿದೆ. 

ವಿಧಾನಸಭಾ ಸಚಿವಾಲಯದ ನಿಯಮಗಳ ಪ್ರಕಾರ, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಲಾಗಿತ್ತು. ಅದೇ ರೀತಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಮಾತ್ರ, ಅಲ್ಲಿನ ವೈದ್ಯರ ಶಿಫಾರಸಿನ ಮೇರೆಗೆ (Referral) ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಬಿಲ್ ಮರುಪಾವತಿ ಕಷ್ಟಸಾಧ್ಯ ಎಂದು ಹೇಳಲಾಗಿತ್ತು.

ಸಾಮಾನ್ಯ ಮಿತಿಗಿಂತ ವೆಚ್ಚ ತೀರಾ ಹೆಚ್ಚಾದಾಗ, ವಿಧಾನಸಭಾ ಸ್ಪೀಕರ್ (ಸಭಾಪತಿ) ಅವರ ವಿಶೇಷ ಅನುಮೋದನೆಯೊಂದಿಗೆ ಸಂಪೂರ್ಣ ಬಿಲ್ ಅನ್ನು ಮರುಪಾವತಿ ಮಾಡಲಾಗುತ್ತದೆ. 2018ರ ಅಂತ್ಯಕ್ಕೆ 16.74 ಕೋಟಿ ರೂ.ಗಳನ್ನು ಭರಿಸಿತ್ತು.  ವಿಧಾನಸಭೆ ಸಚಿವಾಲಯದ ಅಧಿಕೃತ ಮಾಹಿತಿಯಂತೆ 2018ರ ಜೂನ್‌ 30ರವರೆಗಿನ ಹಿಂದಿನ  5 ವರ್ಷಗಳಲ್ಲಿ ಮಾಜಿ ಶಾಸಕರಿಗಾಗಿ 11,02,30,132 ರೂ. ಹಾಗೂ 14ನೇ ವಿಧಾನಸಭೆ ಸದಸ್ಯರ ವೈದ್ಯಕೀಯ ಚಿಕಿತ್ಸೆ 5,72,39,844 ರೂ. ಭರಿಸಿತ್ತು.

ಶಾಸಕರಿಗೆ ವೇತನ, ಭತ್ಯೆ ರೂಪದಲ್ಲಿ ಮಾಸಿಕ 1.40 ಲಕ್ಷ ರೂ.ನೀಡಲಾಗುತ್ತಿದೆ. ಇದಲ್ಲದೆ ಸಂದರ್ಭಕ್ಕನುಗುಣವಾಗಿ ವಿಶೇಷ ಭತ್ಯೆಗಳೂ ಸಿಗುತ್ತವೆ. ಹೀಗಿದ್ದರೂ ಹಲವು ಶಾಸಕರು ಖಾಸಗಿ ಆಸ್ಪತ್ರೆಗಳ ಬಿಲ್‌ ಸಲ್ಲಿಸಿ ಲಕ್ಷಗಟ್ಟಲೆ ಹಣವನ್ನು ಮರುಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ  ಅವರು ಮೊದಲ ಅವಧಿಯಲ್ಲಿ  ಅಂದರೇ  2013 -14ನೇ ಸಾಲಿನಿಂದ ಮತ್ತು ಜೆಡಿಎಸ್‌ ಕಾಂಗ್ರೆಸ್‌  ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ತನಕ 5 ವರ್ಷಗಳಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಗೆ 16.74 ಕೋಟಿ ರೂ.ಗಳಷ್ಟು ಬೃಹತ್‌ ಮೊತ್ತ ಭರಿಸಲಾಗಿತ್ತು.

2013 -14ರಲ್ಲಿ 37 ಶಾಸಕರುಗಳಿಗೆ   65,15,065 ರು.,  2014 -15ರಲ್ಲಿ 57 ಶಾಸಕರುಗಳಿಗೆ  1,14,19,054 ರು., 2015 -16:ರಲ್ಲಿ  61 ಶಾಸಕರುಗಳಿಗೆ 1,43,32,575 ರು, 2016 -17ರಲ್ಲಿ 49 ಶಾಸಕರುಗಳಿಗೆ  92,02,132 ರು., 2017-18ರಲ್ಲಿ 48 ಶಾಸಕರುಗಳಿಗೆ 1,23,84,339 ರು ಮರು ಪಾವತಿಸಿತ್ತು. 

‘ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದಾಗ ಎಲ್ಲಾ ವಿಧಾನಸಭಾ ಸದಸ್ಯರಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದೆ.  ಆದರೆ ಅದಕ್ಕೆ ಯಾವುದೇ ರೀತಿಯ ಸ್ಪಂದನೆ ಬರಲಿಲ್ಲ!! ಸಾರ್ವಜನಿಕರ ತೆರಿಗೆ ಹಣವು ಈ ರೀತಿಯಾಗಿ ಜನಪ್ರತಿನಿಧಿಗಳು ತಮ್ಮ ಮತ್ತು ಕುಟುಂಬದ ಆರೋಗ್ಯಕ್ಕೆ ಬಳಸುವುದು , ನ್ಯಾಯ ಸಮ್ಮತವಲ್ಲ,’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಹೆಚ್‌ ಎಂ ವೆಂಕಟೇಶ್.
‘ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಇವರು ಕೋಟ್ಯಾಂತರ ರೂಪಾಯಿಗಳ ತಮ್ಮ ಚರ ಸ್ಥಿರ ಆಸ್ತಿಗಳನ್ನು ಘೋಷಿಸುತ್ತಾರೆ. ಪ್ರತಿವರ್ಷ ಇವರ ಚರ ಸ್ಥಿರ ಆಸ್ತಿಗಳು ದ್ವಿಗುಣವಾಗುತ್ತಲೇ ಹೋಗುತ್ತದೆ.  ಆದರೆ ಇವರ ಮತ್ತು ಇವರ ಕುಟುಂಬದ ಆರೋಗ್ಯಕ್ಕೆ ಸಾರ್ವಜನಿಕರ ತೆರಿಗೆ ಹಣ ಬೇಕೆ,’ ಎಂದು ಪ್ರಶ್ನಿಸುತ್ತಾರೆ  ಸಾಮಾಜಿಕ ಹೋರಾಟಗಾರ  ಹೆಚ್ ಎಂ ವೆಂಕಟೇಶ್

Hot this week

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...
Please Scan to make Your Contribution

Topics

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

Related Articles

Popular Categories

error: Content is protected !!