ಪ.ಜಾತಿ, ಪ.ಪಂಗಡ ಉಪಯೋಜನೆ; ಆರ್ಥಿಕ ವರ್ಷ ಮುಗಿದರೂ ಇಲಾಖೆಗಳಲ್ಲಿ 9,219.36 ಕೋಟಿ ಉಳಿಕೆ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಒಟ್ಟಾರೆ 42, 792. 89  ಕೋಟಿ ರು. ಗಳ ಪೈಕಿ 2024-25ನೇ ಸಾಲಿನ ಮಾರ್ಚ್‌ 24ರ ಅಂತ್ಯಕ್ಕೆ 33,573.53  ಕೋಟಿ ರು ಖರ್ಚು ಮಾಡಿರುವ ಇಲಾಖೆಗಳು ಖರ್ಚು ಮಾಡಲು ಇನ್ನೂ 9,219.36 ಕೋಟಿ ರು ಬಾಕಿ ಇರಿಸಿಕೊಂಡಿವೆ.

 

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಪ್ರಕಾರ ಆಯಾ ವರ್ಷ ನಿಗದಿಗೊಳಿಸಿರುವ ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡಬೇಕು. ಯಾವುದೇ ಕಾರಣಕ್ಕೂ ಅನುದಾನವನ್ನು ಮುಂದಿನ ಆರ್ಥಿಕ ವರ್ಷಕ್ಕೆ ಕೊಂಡೊಯ್ಯಬಾರದು. ಆದರೆ ಈ ಉಪ ಯೋಜನೆಯಡಿ ನಿಗದಿಯಾಗುವ ಅನುದಾನವನ್ನು ಆಯಾ  ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡುತ್ತಿಲ್ಲ. ಬದಲಿಗೆ ಸಾವಿರಾರು ಕೋಟಿ ರು.ಗಳನ್ನು ಉಳಿಕೆ ಮಾಡುತ್ತಿವೆ.

 

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾಗಿರುವ ಅನುದಾನವನ್ನು ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸೂಚನೆ ನಂತರವೂ 2024-25ನೇ ಸಾಲಿನ ಮಾರ್ಚ್‌ 24ರ ಅಂತ್ಯಕ್ಕೆ 9,219.36 ಕೋಟಿ ರು ಉಳಿದಿದೆ.

 

2025ರ ಮಾರ್ಚ್‌ 28ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅನುದಾನದ ಖರ್ಚು ವೆಚ್ಚದ ಅಂಕಿ ಅಂಶಗಳನ್ನು ಇಲಾಖೆಗಳು ಸಲ್ಲಿಸಿವೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

2024-25ನೇ ಸಾಲಿಗೆ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟಾರೆ 42,792.89 ಕೋಟಿ ರು ಅನುದಾನವಿತ್ತು. ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟಾರೆ 30,908.59 ಕೋಟಿ ರು ಹಂಚಿಕೆಯಾಗಿತ್ತು. ಇದರಲ್ಲಿ 25,363.55 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ 5,545.04 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಬಿಡುಗಡೆಯಾಗಿದ್ದ 25,363.55 ಕೋಟಿ ರು ನಲ್ಲಿ 24,780.242 ಕೋಟಿ ರು ಖರ್ಚು ಮಾಡಿರುವ ಇಲಾಖೆಗಳು ವೆಚ್ಚಕ್ಕೆ ಇನ್ನೂ 583.31 ಕೋಟಿ ರು ಬಾಕಿ ಉಳಿಸಿಕೊಂಡಿದೆ.

 

ಪರಿಶಿಷ್ಟ ಪಂಗಡ ಉಪ ಯೋಜನೆಗೆ 11,884.29 ಕೋಟಿ ಅನುದಾನವಿತ್ತು. ಇದರಲ್ಲಿ 9,534.18 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 2,350.11 ಕೋಟಿ ರು ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದ   ಪೈಕಿ 8,793.29 ಕೊಟಿ ರು ಖರ್ಚಾಗಿದೆ. ವೆಚ್ಚಕ್ಕೆ 740.89 ಕೋಟಿ ರು ಬಾಕಿ ಉಳಿಸಿಕೊಂಡಿದೆ.

 

ಒಟ್ಟಾರೆ ಈ ಎರಡೂ ಉಪ ಯೋಜನೆಗಳಿಗೆ ಹಂಚಿಕೆಯಾಗಿದ್ದ 42,792.89 ಕೋಟಿ ರು ನಲ್ಲಿ 33,573.53 ಕೋಟಿ ರು ಖರ್ಚು ಮಾಡಿವೆ. ವೆಚ್ಚಕ್ಕೆ 9,219.36 ಕೋಟಿ ರು ಬಾಕಿ ಉಳಿದಿರುವುದು ಗೊತ್ತಾಗಿದೆ.

 

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 6,417.55 ಕೋಟಿ ರು ಅನುದಾನ ನಿಗದಿಯಾಗಿತ್ತು. ಇದರಲ್ಲಿ 4,094.84 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ 2,322.71 ಕೋಟಿ ರು ಬಾಕಿ ಇರಿಸಿಕೊಂಡಿತ್ತು. ಬಿಡುಗಡೆಯಾಗಿದ್ದ ಅನುದಾನದಲ್ಲಿ 4,017.33 ಕೋಟಿ ರು ಖರ್ಚು ಮಾಡಿದೆ. ವೆಚ್ಚ ಮಾಡಲು ಇನ್ನೂ 77.51 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

ಅದೇ ರೀತಿ ಇದೇ ಇಲಾಖೆಗೆ ಟಿಎಸ್‌ಪಿ ಅಡಿಯಲ್ಲಿ 2,521.08 ಕೋಟಿ ರು ಅನುದಾನದ ಪೈಕಿ 1,556.52 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ 964.56 ಕೋಟಿ ರು ಬಾಕಿ ಇತ್ತು. ಬಿಡುಗಡೆಯಾಗಿದ್ದ ಅನುದಾನದಲ್ಲಿ  1,522.92 ಕೋಟಿ ರು ಖರ್ಚು ಮಾಡಿದೆ. ವೆಚ್ಚಕ್ಕೆ 43.2 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

ಪರಿಶಿಷ್ಟ ಪಂಗಡಗಳ ಇಲಾಖೆಗೆ ಆಯವ್ಯಯದಲ್ಲಿ 1,730.86 ಕೋಟಿ ರು ನಿಗದಿಪಡಿಸಿತ್ತು. ಈ ಪೈಕಿ 1,556.52 ಕೋಟಿ ರು ಬಿಡುಗಡೆ ಮಾಡಿತ್ತು. ಇದರಲ್ಲಿ 1,119.34 ಕೋಟಿ ರು ಖರ್ಚು ಮಾಡಿದೆ. ವೆಚ್ಚಕ್ಕೆ 396.33 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಗೆ ಹಂಚಿಕೆ ಮಾಡಿದ್ದ   970.29 ಕೋಟಿ ರು ಅನುದಾನದ ಪೈಕಿ 770.97 ಕೋಟಿ ರು ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 719.14 ಕೋಟಿ ರು ಖರ್ಚು ಮಾಡಿದೆ. ವೆಚ್ಚಕ್ಕೆ 51.83 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಟಿಎಸ್‌ಪಿ ಅಡಿಯಲ್ಲಿ 355.03 ಕೋಟಿ ರು ಅನುದಾನದ ಪೈಕಿ 313.43 ಕೋಟಿ ರು ಬಿಡುಗಡೆ ಮಾಡಿದೆ. ಇದರಲ್ಲಿ 243.41 ಕೋಟಿ ರು ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ 70.02 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

ಆರೋಗ್ಯ ಇಲಾಖೆಯಲ್ಲಿ 688.61 ಕೋಟಿ ರು ನಲ್ಲಿ 604.10 ಕೋಟಿ ರು ಬಿಡುಗಡೆಯಾಗಿದೆ. 525.21 ಕೋಟಿ ರು ವೆಚ್ಚ ಮಾಡಿರುವ ಈ ಇಲಾಖೆಯು 78.89 ಕೋಟಿ ರು.ಗಳನ್ನು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಟಿಎಸ್‌ಪಿ ಅಡಿಯಲ್ಲಿ  326.3 ಕೋಟಿ ರು ಅನುದಾನದ ಪೈಕಿ 231.78 ಕೋಟಿ ರು ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 227.06 ಕೋಟಿ ರು ವೆಚ್ಚ ಮಾಡಿರುವ ಇಲಾಖೆಯು 4.72 ಕೋಟಿ ರು ಬಾಕಿ ಉಳಿಸಿಕೊಂಡಿದೆ.

 

ಗ್ರಾಮೀಣಾಭಿವೃದ್ಧಿ ಇಲಾಖೆಗೆ 2,575.41 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 2,091.99 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ 483.42 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದ ಪೈಕಿ  1,912.81 ಕೋಟಿ ರು ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ 179.18 ಕೋಟಿ ರು ಬಾಕಿ ಇರಿಸಿಕೊಂಡಿದೆ. ಟಿಎಸ್‌ಪಿ ಅಡಿಯಲ್ಲಿ 1,231.23 ಕೋಟಿ ರು ಅನುದಾನದ ಪೈಕಿ 957 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 274.23 ಕೋಟಿ ರು ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 921.00 ಕೋಟಿ ರು ಖರ್ಚು ಮಾಡಿ ವೆಚ್ಚಕ್ಕೆ 36 ಕೋಟಿ ರು ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

 

 

ವಸತಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟಾರೆ 1, 360.31 ಕೋಟಿ ರು ಪೈಕಿ ಜನವರಿ 15ರ ಅಂತ್ಯಕ್ಕೆ ಕೇವಲ 428 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಇದು ಹಂಚಿಕೆಗೆ ಒಟ್ಟಾರೆ ಶೇ.32ರಷ್ಟೇ ಪ್ರಗತಿ ಸಾಧಿಸಿತ್ತು.  ಅಲ್ಲದೇ ಕೇಂದ್ರ ಪುರಸ್ಕೃತ ಯೋಜನೆಯಾಗಿರುವ ಪಿಎಂ ಜನ್‌ಮನ್‌ ವಸತಿ ಯೋಜನೆ, ಪಿಎಂವೈ ಗ್ರಾಮೀಣ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಗಳಿಗೆ 453.81 ಕೋಟಿ ರು ಹಂಚಿಕೆಯಾಗಿದ್ದರೂ 2025ರ ಜನವರಿ 15ಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ.

 

ವಸತಿ ಇಲಾಖೆಗೆ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 2024-25ನೇ ಸಾಲಿಗೆ 830.67 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 2025ರ ಜನವರಿ 15ರ ಅಂತ್ಯಕ್ಕೆ 307.73 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಖರ್ಚು ಮಾಡಿದೆ. ಜನವರ 15ರ ಅಂತ್ಯಕ್ಕೆ    522.94 ಕೋಟಿ ರುಗಳನ್ನು  ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು.

 

 

ಪರಿಶಿಷ್ಟ ಪಂಗಡದ ಉಪ ಯೋಜನೆಗೆ ಹಂಚಿಕೆಯಾಗಿದ್ದರ 528.64 ಕೋಟಿ ರು ಪೈಕಿ 120.47 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಿತ್ತು. ಬಿಡುಗಡೆಗೆ ಇನ್ನೂ 408.17 ಕೋಟಿ ರು ಬಾಕಿ ಇತ್ತು.

 

ಒಟ್ಟಾರೆ ಈ ಎರಡೂ ಉಪ ಯೋಜನೆಗಳಿಗೆ ಹಂಚಿಕೆಯಾಗಿದ್ದ 1,360.31 ಕೋಟಿ ರು ಪೈಕಿ 2025ರ ಜನವರಿ 15ರ ಅಂತ್ಯಕ್ಕೆ 428.20 ಕೋಟಿಯಷ್ಟೇ ಬಿಡುಗಡೆಯಾಗಿತ್ತು. ಬಿಡುಗಡೆಗೆ ಇನ್ನೂ 932.11 ಕೋಟಿ ರು ಬಾಕಿ ಇತ್ತು. ಹಂಚಿಕೆ ಪ್ರಮಾಣಕ್ಕೆ ಹೋಲಿಸಿದರೆ ಬಿಡುಗಡೆ ಪ್ರಮಾಣದಲ್ಲಿ ಶೇ.32ರಷ್ಟು ಮಾತ್ರ ಪ್ರಗತಿ ಕಂಡು ಬಂದಿತ್ತು.

 

ರಾಜ್ಯ ವಲಯದ ಯೋಜನೆಗಳ ಪೈಕಿ ಒಟ್ಟಾರೆ 656.50 ಕೋಟಿ ರು ಹಂಚಿಕೆಯಾಗಿತ್ತು. 2025ರ ಜನವರಿ 15ರ ಅಂತ್ಯಕ್ಕೆ 267.38 ಕೋಟಿ ರು ಮಾತ್ರ ಬಿಡುಗಡೆಯಾಗಿತ್ತು. ಬಿಡುಗಡೆಗೆ ಇನ್ನು 389.12 ಕೋಟಿ ರು ಬಾಕಿ ಉಳಿಸಿಕೊಂಡಿತ್ತು.

 

ಡಾ ಬಿ ಆರ್ ಅಂಬೇಡ್ಕರ್‍‌ ನಿವಾಸ್‌ ಯೋಜನೆಗೆ 600 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 225.00 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ ಇನ್ನೂ 375 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಹಾಗೆಯೇ ಕೊಳಗೇರಿಗಳ ಅಭಿವೃದ್ದಿಗೆ 7.50 ಕೊಟಿ ರು ಹಂಚಿಕೆಯಾಗಿದ್ದರ ಪೈಕಿ 5.63 ಕೋಟಿ ರು. ಬಿಡುಗಡೆ ಮಾಡಿದ್ದ   ವಸತಿ ಇಲಾಖೆಯು, ಬಿಡುಗಡೆಗೆ ಇನ್ನು 1.87 ಕೋಟಿ ರು ಬಾಕಿ ಉಳಿಸಿಕೊಂಡಿತ್ತು.

 

ಹಾಗೆಯೇ ವಸತಿ ಯೋಜನೆಗಳು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು 49.00 ಕೋಟಿ ರು. ಹಂಚಿಕೆಯಾಗಿತ್ತು. ಇದರಲ್ಲಿ 36.75 ಕೋಟಿ ರು ಮಾತ್ರ ಬಿಡುಗಡೆಯಾಗಿತ್ತು. . ಬಿಡುಗಡೆಗೆ ಇನ್ನೂ 12.25 ಕೋಟಿ ರು ಬಾಕಿ ಉಳಿಸಿಕೊಂಡಿತ್ತು.

 

ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಪಿಎಂ ಜನಮನ್‌ (ವಸತಿ) ಯೋಜನೆಗೆ 33.33 ಕೋಟಿ ರು., ಕೇಂದ್ರ ಮತ್ತು ರಾಜ್ಯ ಸಹಭಾಗಿತ್ವದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ)ಕ್ಕೆ 27.32 ಕೋಟಿ ರು., ಕೇಂದ್ರ ಅನುದಾನದ ಯೋಜನೆಯಾಗಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ 200.00 ಕೋಟಿ ರು., ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ) 76.49 ಕೋಟಿ ರು., ಕೇಂದ್ರ ಮತ್ತು ರಾಜ್ಯ ಹಂಚಿಕೆಯ ಪಿಎಂ ಜನಮನ್‌ (ವಸತಿ) ಯೋಜನೆಗೆ 16.67 ಕೋಟಿ ರು., ಫಲಾನುಭವಿಗಳ ಪಾಲಿನ ನೆರವು ಯೋಜನೆಗೆ 100.00 ಕೋಟಿ ರು. ಅನುದಾನವನ್ನು ಹಂಚಿಕೆ ಮಾಡಲಾಗಿತ್ತು.

 

 

ಆದರೆ 2025ರ ಜನವರಿ 15ರ ಅಂತ್ಯಕ್ಕೆ ಈ ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿರಲಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯ ಹಂಚಿಕೆಯ ಡಾ ಬಿ ಆರ್‍‌ ಅಂಬೇಡ್ಕರ್‍‌ ವಸತಿ ಯೋಜನೆಗೆ 250.00 ಕೋಟಿ ರು. ಪೈಕಿ 160.82 ಕೋಟಿ ರು. ಮಾತ್ರ ಬಿಡುಗಡೆಯಾಗಿತ್ತು.

ಮೀಸಲಾತಿ ಕ್ಷೇತ್ರಕ್ಕಿಂತಲೂ ಸಾಮಾನ್ಯ ಕ್ಷೇತ್ರಕ್ಕೇ ಹೆಚ್ಚು ಅನುದಾನ; ಉಪಯೋಜನೆ ಮಾರ್ಗಸೂಚಿ ಉಲ್ಲಂಘನೆ

2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ವಂತಿಕೆಯಲ್ಲಿ ಕೆಲವು ಮೊತ್ತವನ್ನು ಸರ್ಕಾರದಿಂದ ಭರಿಸುವ ಬಗ್ಗೆ ಹೊಸದಾಗಿ ಲೆಕ್ಕ ಶೀರ್ಷಿಕೆ ನೀಡಲಾಗಿದೆ. ಈ ವಲಯಕ್ಕೆ 350 ಕೋಟಿ ರು ಅನುದಾನ ಒದಗಿಸಲು ಪ್ರಸ್ತಾವಿಸಿತ್ತು.

ಪರಿಶಿಷ್ಟ ಉಪ ಯೋಜನೆ; ಸಾಮಾನ್ಯರ ಕಾಲೋನಿಗಳಲ್ಲೇ ಬಹುಕೋಟಿ ವೆಚ್ಚ, ಮಾರ್ಗಸೂಚಿ ಉಲ್ಲಂಘನೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿಯೂ ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಕನಿಷ್ಟ ಪ್ರಗತಿಯಾಗಿತ್ತು.

 

ಎಸ್‌ಸಿ, ಎಸ್‌ಟಿ ಉಪಯೋಜನೆಯಲ್ಲಿ ಕನಿಷ್ಠ ಪ್ರಗತಿ; ಶಿಕ್ಷಣ ಇಲಾಖೆಯಲ್ಲಿ ಕ್ರಿಯಾ ಯೋಜನೆಯೇ ಇಲ್ಲ

 

ಉಚಿತ ಲ್ಯಾಪ್‌ ಟಾಪ್‌ ಯೋಜನೆಯೂ ನೆನೆಗುದಿಗೆ ಬಿದ್ದಿತ್ತು.

 

ಪರಿಶಿಷ್ಟ, ಗಿರಿಜನ ಉಪಯೋಜನೆಗೆ 159.56 ಕೋಟಿ ಕಡಿತ; ಉಚಿತ ಲ್ಯಾಪ್‌ಟಾಪ್‌ ಯೋಜನೆಯೂ ನೆನೆಗುದಿಗೆ

 

ಪರಿಶಿಷ್ಟರ ಅನುದಾನ ನಿಗದಿತ ಕಾಲಾವಧಿಯಲ್ಲಿ ಬಳಕೆ ಮಾಡದೇ ಇರುವ ಅಧಿಕಾರಿಗಳ ವಿರುದ್ಧವೂ ಒಂದೇ ಒಂದು ಕ್ರಮ ಜರುಗಿಸಿರಲಿಲ್ಲ.

 

ಪರಿಶಿಷ್ಟರ ಅನುದಾನ ಬಳಕೆ ಮಾಡದೇ 2013ರ ಕಾಯ್ದೆ ಉಲ್ಲಂಘನೆ; 3 ವರ್ಷದಿಂದಲೂ ಶಿಸ್ತು ಕ್ರಮವಿಲ್ಲ

 

ಅಲ್ಲದೇ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿನ ಅನುದಾನದಲ್ಲೇ ಹಿಂದಿನ ಬಿಜೆಪಿ ಸರ್ಕಾರವು ಕಡಿತಗೊಳಿಸಿತ್ತು.

 

ಪ.ಜಾತಿ, ಪ.ಪಂಗಡ ಉಪ ಯೋಜನೆ; 1,084 ಕೋಟಿ ಕಡಿತಗೊಳಿಸಿದ ಬಿಜೆಪಿ ಸರ್ಕಾರ

 

ಕೃಷಿ ಇಲಾಖೆಯಡಿಯಲ್ಲಿ ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ನೀಡಿದ್ದ ಅನುದಾನವನ್ನು ಖರ್ಚು ಮಾಡದ ಕಾರಣ 210 ಕೋಟಿ ರು.ಗಳನ್ನು ವಾಪಸ್‌ ಮಾಡಿತ್ತು.

 

ಪಿಎಂ ಕಿಸಾನ್‌; ಪ.ಜಾತಿ, ಪ.ಪಂಗಡ ಉಪ ಯೋಜನೆಯಲ್ಲಿ 210 ಕೋಟಿ ಬಳಸದೇ ವಾಪಸ್‌ ಮಾಡಿದ ಇಲಾಖೆ

 

ಪರಿಶಿಷ್ಟರ ಕಲ್ಯಾಣಕ್ಕೆ 8,086.60 ಕೋಟಿ ರು ಖರ್ಚಾಗಿದ್ದರೂ ಸಹ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲ.

 

 

ಪರಿಶಿಷ್ಟರ ಕಲ್ಯಾಣಕ್ಕೆ 8,086.60 ಕೋಟಿ ಖರ್ಚಾಗಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ

 

ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿಯಲ್ಲಿ ಬಿಡುಗಡೆಯಾಗಿರುವ ಸಾವಿರಾರು ಕೋಟಿ ರು ಮೊತ್ತವನ್ನು ಆಯಾ ವರ್ಷದಲ್ಲಿ ಖರ್ಚು ಮಾಡುತ್ತಿಲ್ಲ. ಬದಲಿಗೆ ಉಳಿಕೆ ಮಾಡಲಾಗುತ್ತಿದೆ. ಉಳಿಕೆಯಾಗುವ ಮೊತ್ತವನ್ನು ಮುಂದಿನ ವರ್ಷಕ್ಕೆ ಮುಂದುವರೆಸುತ್ತದೆ.

 

ಪರಿಶಿಷ್ಟರಿಗೆ ಸೌಕರ್ಯ; 47 ಸಾವಿರ ಕೋಟಿ ಖರ್ಚಾದರೂ ಆರೋಗ್ಯ, ನೈರ್ಮಲ್ಯಕ್ಕಿಲ್ಲ ಒತ್ತು

 

ಆದರೆ ಆ ವರ್ಷದಲ್ಲಿನ ಫಲಾನುಭವಿಗಳಿಗೆ ಈ ಅನುದಾನವು ತಲುಪುತ್ತಿಲ್ಲ.

ಪರಿಶಿಷ್ಟರಿಗಿಟ್ಟಿದ್ದ 300 ಕೋಟಿ ಅನ್ಯ ಉದ್ದೇಶಕ್ಕೆ ಖರ್ಚು; ಪೇಶ್ವೆಗೆ ಆಯೋಗದಿಂದ ನೋಟೀಸ್‌ ಜಾರಿ

ಇದು ಹಿಂದಿನ ಹಲವು ವರ್ಷಗಳಿಂದಲೂ ಮುಂದುವರೆಯುತ್ತಿದೆ.

1,118 ಕೋಟಿ ರು. ಅನುದಾನಕ್ಕೆ ಆರೋಗ್ಯ ಇಲಾಖೆ ಪ್ರಸ್ತಾವ; ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿಗೆ ಕೈ ಹಾಕಿತೇ?

…….

ಪರಿಶಿಷ್ಟರ ಹಣ ದುರ್ಬಳಕೆ; ಪ್ರಭಾಕರ್‌ ಚಿಣಿ ನಿವೃತ್ತಿ ಸೌಲಭ್ಯ ಮಂಜೂರಾತಿಗೆ ತಡೆಹಿಡಿದ ಆಯೋಗ

……….

SUPPORT THE FILE

Latest News

Related Posts