Thursday | July 23, 2026 |

ಅಕ್ರಮ ಬಾಂಗ್ಲಾ ವಲಸಿಗರ ನಿರ್ವಹಣೆ, ಊಟೋಪಚಾರ; 1.11 ಕೋಟಿ ಅನುದಾನ ಕೋರಿದ ಪೊಲೀಸ್‌ ಇಲಾಖೆ, ಹಿಂದುಳಿದ ವರ್ಗ ಇಲಾಖೆಯತ್ತ ಕೈ ತೋರಿಸಿದ ಸಮಾಜ ಕಲ್ಯಾಣ

ಬೆಂಗಳೂರು; ಬೆಂಗಳೂರು ನಗರದಲ್ಲಿ ನೆಲೆಸಿದ್ದರು ಎನ್ನಲಾಗಿರುವ ಬಾಂಗ್ಲಾ ದೇಶದ ಒಟ್ಟು 124 ಅಕ್ರಮವಾಸಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸ್‌ ಇಲಾಖೆಯು ಇದೀಗ ಈ 124 ಅಕ್ರಮವಾಸಿಗಳ ವಸತಿ, ನಿರ್ವಹಣೆ, ಊಟೋಪಚಾರಕ್ಕೆ 1.11 ಕೋಟಿ ರು ಅನುದಾನ ಕೋರಿದೆ. ಈ ಅನುದಾನವನ್ನು ಯಾರು ಭರಿಸಬೇಕು ಎಂಬ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ.

ಅನುದಾನಕ್ಕಾಗಿ ಪೊಲೀಸ್‌ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವಕ್ಕೆ ಸಮಾಜ ಕಲ್ಯಾಣ ಇಲಾಖೆಯು ಇನ್ನೂ ಒಪ್ಪಿಲ್ಲ. ಸಮಾಜ ಕಲ್ಯಾಣ ಇಲಾಖೆಯು ಈಗಾಗಾಲೇ ವಿವಿಧ ವಸತಿ ನಿಲಯಗಳಿಗೆ ಹಣ ಹೊಂದಿಸಬೇಕಿದೆ. ಹೀಗಾಗಿ ಈ ಬಾರಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯತ್ತ ಕೈ ತೋರಿಸಿದೆ.

ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) 2026ರ ಮಾರ್ಚ್‌ 5ರಂದು ಕಾರ್ಯಾಚರಣೆ ನಡೆಸಿತ್ತಲ್ಲದೇ ಬಾಂಗ್ಲಾ ದೇಶದ ಒಟ್ಟು 124 ಅಕ್ರಮವಾಸಿಗಳನ್ನು ವಶಕ್ಕೆ ಪಡೆದಿತ್ತು. ಅಲ್ಲದೇ ಬೆಂಗಳೂರು ನಗರದ ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ವ್ಯಾಪ್ತಿಯ ವಸಂತನಗರದ ಸರ್ದಾರ್ ವಲ್ಲಭಬಾಯ್ ಪಟೇಲ್‌ ಸಭಾಂಗಣದಲ್ಲಿ ಇರಿಸಲಾಗಿದೆ. ಈ ಪ್ರಜೆಗಳಿಗೆ ಊಟೋಪಚಾರ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಆಯಕ್ತರು ಪತ್ರ ಬರೆದಿದ್ದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರು 2026ರ ಮಾರ್ಚ್ 6ರಂದು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರು.

 

 

ಈ ಪತ್ರ ಬರೆದು ಮೂರು ತಿಂಗಳಾದರೂ ಸಹ ಪೊಲೀಸ್‌ ಇಲಾಖೆಯು ಕೋರಿರುವ 1.11 ಕೋಟಿ ರು ಅನುದಾನ ಬಿಡುಗಡೆ ಕುರಿತು ಇಲಾಖೆಯಲ್ಲಿ ಅಧಿಕಾರಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೂ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ನೆಲಮಂಗಲ-ತಾವರೆಕೆರೆ ರಸ್ತೆಯ್ಲಿರುವ ಸೊಂಡೆಕೊಪ್ಪದ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ ನಡೆಯುತ್ತಿರುವ ವಿದೇಶಿಯರ ಬಂಧನ ಕೇಂದ್ರದಲ್ಲಿರುವ ವಿದೇಶಿ ನಾಗರೀಕರ ನಿರ್ವಹಣೆ, ಈ ಕೇಂದ್ರದ ಸಿಬ್ಬಂದಿ ವೇತನ ಮತ್ತು ಇತರೆ ಖರ್ಚುಗಳಿಗಾಗಿ ಈಗಾಗಲೇ 81,11,559 ರು ಪಾವತಿಸಬೇಕಾಗಿದೆ. ಹಾಗೂ ಮುಂದಿನ 6 ತಿಂಗಳಿಗೆ 30,00,000 ಸೇರಿದಂತೆ ಒಟ್ಟಾರೆ 1.11 ಕೋಟಿ ರು ಅನುದಾನ ಬಿಡುಗಡೆ ಮಾಡಬೇಕಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ಅಲ್ಲದೇ ಯಲಹಂಕ ವ್ಯಾಪ್ತಿಯ ಹೆಸರುಘಟ್ಟ ಹೋಬಳಿಯ ಮುತ್ತುಗದ ಹಳ್ಳಿಯಲ್ಲಿ 2022ರಲ್ಲೇ ವಿದೇಶಿ ನಾಗರೀಕರ ಕೇಂದ್ರ ಆರಂಭವಾಗಿತ್ತು.

 

ಈ ಕೇಂದ್ರಕ್ಕೂ ಸಹ 2022ರ ಅಕ್ಟೋಬರ್‍‌ನಿಂದ 2023ರ ಮಾರ್ಚ್‌ವರೆಗೆ 43,51,000 ರು ಮತ್ತು 2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಭರಿಸಿರುವ ಖರ್ಚನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ 2026ರ ಮಾರ್ಚ್‌ 3ರಂದು ಪತ್ರ ಬರೆದಿದ್ದರು. ಅನುದಾನ ಬಿಡುಗಡೆ ಸಂಬಂಧ ಆಯುಕ್ತರ ಮಾರ್ಗದರ್ಶನ ಕೋರಿದ್ದರು.

 

 

ಅನುದಾನ ಯಾರು ಭರಿಸಬೇಕು?- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯತ್ತ ಕೈ ತೋರಿಸಿದ್ದೆಕೆ?

ಪೊಲೀಸ್‌ ಇಲಾಖೆಯು ಸಲ್ಲಿಸಿರುವ ಈ ಪ್ರಸ್ತಾವದ ಕುರಿತು ಸಮಾಜ ಕಲ್ಯಾಣ ಇಲಾಖೆಯು ಪರಿಶೀಲಿಸಿದೆ. ಈ ಅನುದಾನವನ್ನು ಯಾರು ಭರಿಸಬೇಕು, ಸಮಾಜ ಕಲ್ಯಾಣ ಇಲಾಖೆಯೇ ಭರಿಸಬೇಕೇ ಎಂಬ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್‌ ಕುಮಾರ್, ಅನುದಾನ ಪಡೆಯಲು ಹಿಂದುಳಿದ ವರ್ಗದ ಇಲಾಖೆಯತ್ತ ಕೈ ತೋರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

‘ಸಮಾಜ ಕಲ್ಯಾಣ ಇಲಾಖೆಯು ಹಲವು ಸಂಸ್ಥೆಗಳನ್ನು ನಡೆಸಿ ನಿರ್ವಹಿಸುತ್ತಿದೆ. ಈ ಸಂಸ್ಥೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈ ಬಾಬ್ತುಗಳಿಗೆ ಅನುದಾನ ಹೊಂದಿಸುವುದು ಕಷ್ಟಕರವಾಗಲಿದೆ. ಹೀಗಾಗಿ ಈ ಬಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅನುದಾನ ಬಿಡುಗಡೆ ಮಾಡಬಹುದು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಬಹುದು,’ ಎಂದು ಇಲಾಖೆಯ ಆಯುಕ್ತ ರಾಕೇಶ್‌ ಕುಮಾರ್ ಅವರು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಪೊಲೀಸ್‌ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಮತ್ತು ಮಾರ್ಗದರ್ಶನ ಕೋರಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಪತ್ರ ಆಧರಿಸಿ ಇಲಾಖೆಯ ಆಯುಕ್ತ ರಾಕೇಶ್‌ ಕುಮಾರ್ ಅವರು 2026ರ ಮಾರ್ಚ್‌ 24ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

 

ರಾಜ್ಯದ ಗುಪ್ತಚರ ಇಲಾಖೆ ಅಥವಾ ಕೇಂದ್ರ ಸಂಸ್ಥೆಗಳ ವರದಿಗಳ ಅನ್ವಯ ರಾಜ್ಯದ ಬೆಂಗಳೂರು ಮತ್ತು ಇತರೆ ಮಹಾನಗರಗಳ್ಲಲಿ ಕಳೆದ ಎರಡು ವರ್ಷಗಳಲ್ಲಿ ಪೊಲೀಸ್‌ ಇಲಾಖೆಯು ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಒಟ್ಟು 320 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿತ್ತು. ಈ ಕುರಿತು ರಾಜಾಜಿನಗರ ಶಾಸಕ ಬಿಜೆಪಿಯ ಎಸ್‌ ಸುರೇಶ್‌ ಕುಮಾರ್‍‌ ಅವರು 2026ರ ಮಾರ್ಚ್‌ 10ರಂದು ಕೇಳಿದದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದರು.

 

 

ಈ ಮಾಹಿತಿ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 243, ಬೆಂಗಳೂರು ಜಿಲ್ಲೆಯಲ್ಲಿ 29, ಚಿತ್ರದುರ್ಗದಲ್ಲಿ 06, ಧಾರವಾಡದಲ್ಲಿ 2, ಹಾಸನದಲ್ಲಿ 4, ಕೋಲಾರದಲ್ಲಿ f12, ಮಂಗಳೂರು ನಗರದಲ್ಲಿ 2, ಶಿವಮೊಗ್ಗದಲ್ಲಿ 12, ಉಡುಪಿಯಲ್ಲಿ 10 ಮಂದಿ ಸೇರಿ ಒಟ್ಟಾರೆ 320 ಮಂದಿಯನ್ನು ಪತ್ತೆ ಹಚ್ಚಿತ್ತು.

 

 

ಪತ್ತೆ ಹಚ್ಚಲಾಗಿದ್ದ ಈ ಅಕ್ರಮ ಬಾಂಗ್ಲಾ ವಲಸಿಗರ ಪೈಕಿ ಕಳೆದ 02 ವರ್ಷಗಳಲ್ಲಿ ಒಟ್ಟು 219 ಮಂದಿಯನ್ನು ಕಾನೂನುಬದ್ಧವಾಗಿ ಗಡಿಪಾರು ಮಾಡಲಾಗಿತ್ತು. ಈ ಪಟ್ಟಿಯ ಪ್ರಕಾರ ಬೆಂಗಳೂರು ನಗರದಿಂದ 164, ಬೆಂಗಳೂರು ಜಿಲ್ಲೆಯಿಂದ 20, ಚಿತ್ರದುರ್ಗದಿಂದ 06, ಧಾರವಾಡದಿಂದ 02, ಹಾಸನದಿಂದ 03, ಕೋಲಾರದಿಂದ 12, ಶಿವಮೊಗ್ಗದಿಂದ 12 ಮಂದಿ ಸೇರಿದ್ದರು.

ಈ ಅಕ್ರಮ ವಲಸಿಗರು ನಕಲಿ ದಾಖಲೆ ಸೃಷ್ಟಿಸಿರುವ ಆರೋಪಕ್ಕೂ ಗುರಿಯಾಗಿದ್ದರು. ಈ ಪೈಕಿ ಬೆಂಗಳೂರು ನಗರದಲ್ಲಿ -1, ಬೆಂಗಳೂರು ಜಿಲ್ಲೆಯಲ್ಲಿ 01, ಉಡುಪಿಯಲ್ಲಿ 01 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಒಟ್ಟು 4 ಮಂದಿ ಭಾಗಿಯಾಗಿದ್ದರು ಎಂದು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರು ಸದನಕ್ಕೆ ಲಿಖಿತ ಮಾಹಿತಿ ನೀಡಿದ್ದರು.

 

 

ಇತ್ತೀಚಿಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದಾಳಿ ನಡೆಸಿತ್ತು. ಈ ಪೈಕಿ ಉಗ್ರ ಸಂಪರ್ಕ ಜಾಲದಲ್ಲಿ ಅಕ್ರಮ ವಲಸಿಗರು ಸೇರಿದ್ದರು ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಅವರು ಪಾತ್ರವಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸುರೇಶ್‌ ಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಡಾ ಜಿ ಪರಮೇಶ್ವರ್ ಅವರು ಉಗ್ರರ ಸಂಪರ್ಕ ಹೊಂದಿರುವ ಅಕ್ರಮ ವಲಸಿಗರು ಕಂಡು ಬಂದಿರುವುದಿಲ್ಲ ಎಂದು ಉತ್ತರಿಸಿದ್ದರು.

ಬೆಂಗಳೂರು ನಗರದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲಿಸ್‌ ಠಾಣೆ ಮಟ್ಟದಲ್ಲಿ ಗುಪ್ತಚರ ಸಿಬ್ಬಂದಿ ಹಾಗೂ ಕ್ರೈಂ ಸಿಬ್ಬಂದಿಗಳು ವಿದೇಶಿಯರ ಚಲನವಲನಗಳ ಮೇಲೆ ನಿಗಾ ವಹಿಸುತ್ತಾರೆ. ಬೆಂಗಳೂರು ನಗರದಲ್ಲಿ ಠಾಣಾ ಮಟ್ಟದಲ್ಲಿ ಚಿಂದಿ ಆಯುವ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಹಾಗೂ ಇವರುಗಳು ನೆಲೆಸಿರುವ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಬೆಂಗಳೂರು ನಗರದಲ್ಲಿ ಹೆಚ್ಚು ವಿದೇಶಿ ಪ್ರಜೆಗಳು ವಾಸಿಸುವ ಸ್ಥಳಗಳ ಬಳ ಸತತವಾಗಿ ನಿಗಾ ವಹಿಸಲಾಗುತ್ತಿದೆ. ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಲು ಸಹಕಾರ ನೀಡುವವರು ಮತ್ತು ಶೈಕ್ಷಣಿಕ ಸಂಸ್ಥೆಗಳ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರು ಉತ್ತರದಲ್ಲಿ ವಿವರಿಸಿದ್ದರು.

ಬೆಂಗಳೂರು ನಗರದಲ್ಲಿ ಅವಧಿ ಮೀರಿ ವಾಸವಾಗಿರುವ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಪತ್ತೆಯಾದಲ್ಲಿ ಅಂತಹ ಆರೋಪಿಗಳನ್ನು ಅವರ ದೇಶದ ವಿದೇಶಿ ಮಂತ್ರಾಲಯದ ಮೂಲಕ ಆಯಾ ದೇಶಗಳಿಗೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಮಾಹಿತಿ ನೀಡಲಾಗುತ್ತಿದೆ.

 

 

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಸಂಬಂಧಪಟ್ಟ ಇಲಾಖೆಯಿಂದ ನಿರ್ಗಮನ ಪರವಾನಿಗೆ ಪಡೆಯುವವರೆಗೆ ಇವರನ್ನ ಎಫ್‌ಆರ್‍‌ಸಿಯಲ್ಲಿ ಇರಿಸಲಾಗುತ್ತದೆ.

 

ನಂತರ ವಿದೇಶಿ ಪ್ರಜೆಯ ಗಡಿಪಾರು ನಿಯಮ ಪಾಲಿಸಲಾಗುತ್ತದೆ ಎಂದು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರು ವಿವರಿಸಿದ್ದರು.

Hot this week

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...
Please Scan to make Your Contribution

Topics

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

Related Articles

Popular Categories

error: Content is protected !!