ಡಿಸಿಆರ್‍‌ಇ ಸೆಲ್‌ ಅಂಗಳಕ್ಕೆ ವಿಜಯೇಂದ್ರ ಬೆದರಿಕೆ ಆರೋಪದ ಚೆಂಡು; ಅಗತ್ಯ ಕ್ರಮಕ್ಕೆ ಸರ್ಕಾರ ಸೂಚನೆ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯವನ್ನು ಪ್ರತಿನಿಧಿಸಿರುವ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಬಿ ವೈ ವಿಜಯೇಂದ್ರ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿತ ಪ್ರಕರಣದ ಚೆಂಡು  ಇದೀಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಂಗಳಕ್ಕೆ ಬಂದಿದೆ.

 

ಈ ಪ್ರಕರಣದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಮಧ್ಯ ಪ್ರವೇಶ ಮಾಡಿತ್ತು. ಆಯೋಗವು ಸ್ವಯಂ ಪ್ರೇರಿತವಾಗಿ ಬರೆದಿದ್ದ  ಪತ್ರವನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು   ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ.

 

ಆಯೋಗವು ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್‌’ ಇಂದು ಬೆಳಿಗ್ಗೆಯಷ್ಟೇ ವರದಿ ಪ್ರಕಟಿಸಿತ್ತು.

 

ದಲಿತ ಶಾಸಕರಿಗೆ ವಿಜಯೇಂದ್ರ ಬೆದರಿಕೆ ಆರೋಪ; ಮಧ್ಯ ಪ್ರವೇಶಿಸಿದ ಪರಿಶಿಷ್ಟ ಜಾತಿಗಳ ಆಯೋಗ, ಸರ್ಕಾರಕ್ಕೆ ಪತ್ರ

 

ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು 2025ರ ಜನವರಿ 10ರಂದು ಪತ್ರ ಬರೆದಿದ್ದಾರೆ. ಈ ಸಂಬಂಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಈ ಪತ್ರದ  ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಆಯೋಗದ ಉಲ್ಲೇಖಿತ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ ಬಿ ವೈ ವಿಜಯೇಂದ್ರ ಅವರು  ಎಸ್‌ ಸಿ ಎಸ್‌ ಟಿ ಶಾಸಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಅವರು ಆರೋಪಿಸಿರುವ ಸಂಬಂಧ ಟೈಮ್ಸ್‌ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿ ತುಣಕನ್ನು ಲಗತ್ತಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಅಗತ್ಯ ಕ್ರಮಕ್ಕಾಗಿ ಪತ್ರವನ್ನು ಕಳಿಸಲಾಗಿದೆ,’ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯದ ಬೆಳವಣಿಗೆಗಳು ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿವೆ. ಇದರ ನಡುವೆಯೇ ಪರಿಶಿಷ್ಟ ಜಾತಿ , ಪಂಗಡದ ಬಿಜೆಪಿ ಶಾಸಕರುಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿತ ಪ್ರಕರಣದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಮಧ್ಯ ಪ್ರವೇಶ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

 

‘ತನ್ನ ಬೆನ್ನಿಗೆ ನಿಲ್ಲಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಹಿಂದುಳಿದ ಹಾಗೂ ಪರಿಶಿಷ್ಟ ನಾಯಕರಿಗೆ ಬೆದರಿಕೆ ಹಾಕಿದ್ದಾರೆ,’ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಬಹಿರಂಗವಾಗಿ ಆರೋಪಿಸಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು.

 

ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನಾಧರಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಸ್ವಯಂ ಪ್ರೇರಿತವಾಗಿ  ಪತ್ರ ಬರೆದಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಕೇಳಿತ್ತು.

 

ಆಯೋಗದ ನಿರ್ದೇಶಕ ಜಿ ಜಗನ್ನಾಥ್ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ 2024ರ ಡಿಸೆಂಬರ್‍‌ 6ರಂದೇ ಬರೆದಿದ್ದರು.

 

‘ಎಸ್‌ಸಿ, ಎಸ್‌ ಟಿ ಸಮುದಾಯದ ಶಾಸಕರಿಗೆ ವಿಜಯೇಂದ್ರ ಬೆದರಿಕೆ ಎಂದು ರಮೇಶ್‌ ಜಾರಕಿಹೊಳಿ ಅವರು ಆರೋಪಿಸಿರುವ ಕುರಿತು ಟೈಮ್ಸ್‌ ಆಫ್‌ ಇಂಡಿಯಾವು ಪ್ರಕಟಿಸಿರುವ ವರದಿಯ ತುಣಕು ಲಗತ್ತಿಸಲಾಗಿದೆ. ಈ ವಿಷಯದ ಕುರಿತು ಗಮನ ಹರಿಸಬೇಕು ಮತ್ತು ಪ್ರಕರಣದ ಕುರಿತು ವಾಸ್ತವಾಂಶಗಳ ಕುರಿತು ಆಯೋಗಕ್ಕೆ ವರದಿ ಸಲ್ಲಿಸಬೇಕು,’ ಎಂದು ಆಯೋಗದ ನಿರ್ದೇಶಕರಾದ ಜಿ ಜಗನ್ನಾಥ್‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

 

 

 

 

ವಿಜಯೇಂದ್ರ ಅವರ ವಿರುದ್ಧ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು.  ವಿಜಯೇಂದ್ರ ಅವರು ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿತ್ತು.

 

ವಿಜಯೇಂದ್ರ ಪ್ರಕರಣ; ಸಿಬಿಐ ತನಿಖೆ ಕೋರಿ ಪಿಐಎಲ್‌ ದಾಖಲಿಸಿದ ಜನಾಧಿಕಾರ ಸಂಘರ್ಷ ಪರಿಷತ್‌

 

ಹಣ ಸುಲಿಗೆ ಪ್ರಕರಣ ಸಂಬಂಧ ಆರಂಭದಿಂದಲೂ ಕಾನೂನು ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಈ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ( FR NO. 869/2021) ದಾಖಲಿಸಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ, ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತಿವಾದಿಯನ್ನಾಗಿಸಿತ್ತು.  ಹಾಗೆಯೇ ಎಫ್‌ಐಆರ್‍‌ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದ ಇನ್ಸ್‌ಪೆಕ್ಟರ್‍‌ಗೆ ನೋಟೀಸ್‌ ಕೂಡ ಜಾರಿಯಾಗಿತ್ತು.

 

ವಿಜಯೇಂದ್ರ ಮತ್ತಿತರ ವಿರುದ್ಧ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌ಗೆ ನೋಟೀಸ್‌ ಜಾರಿ

 

ಈ ಪ್ರಕರಣದಲ್ಲಿ ಎಫ್‌ಐಆರ್‍‌ ಕುರಿತು ಮಾಹಿತಿ ಒದಗಿಸಬೇಕು ಎಂದು ನ್ಯಾಯಾಲಯವೂ ಆದೇಶ ಹೊರಡಿಸಿತ್ತು.

 

ವಿಜಯೇಂದ್ರ ಪ್ರಕರಣ; ಎಫ್‌ಐಆರ್‌ ಕುರಿತು ಮಾಹಿತಿ ಒದಗಿಸಲು ಮಧ್ಯಂತರ ಆದೇಶ

ಈ  ಪ್ರಕರಣದಲ್ಲಿ ದಾಖಲಾಗಿದ್ದ ಖಾಸಗಿ ದೂರಿನ ತೀರ್ಪನ್ನು ಮ್ಯಾಜಿಸ್ಟ್ರೇಟ್‌ ಕಾಯ್ದರಿಸಿತ್ತು.

ವಿಜಯೇಂದ್ರ ಪ್ರಕರಣ; ಖಾಸಗಿ ದೂರಿನ ತೀರ್ಪು ಕಾಯ್ದಿರಿಸಿದ ಮ್ಯಾಜಿಸ್ಟ್ರೇಟ್‌

ಹಾಗೆಯೇ ವಿಜಯೇಂದ್ರ ವಿರುದ್ಧ ಎಫ್‌ಐಆರ್‍‌ ದಾಖಲಿಸಿರಲಿಲ್ಲ ಮತ್ತು ತನಿಖೆಯೂ ನಡೆದಿರಲಿಲ್ಲ. ಏಕಾಏಕೀ ದೂರು ಮುಕ್ತಾಯಗೊಂಡಿತ್ತು.

ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ಇಲ್ಲ, ತನಿಖೆಯೂ ಇಲ್ಲ; ಏಕಾಏಕೀ ದೂರೇ ಮುಕ್ತಾಯ

ವಿಜಯೇಂದ್ರ ವಿರುದ್ದ ಎಫ್‌ಐಆರ್ ದಾಖಲಿಸದ ಇನ್ಸ್‌ಪೆಕ್ಟರ್ ಮತ್ತು ಡಿಸಿಪಿ ಅನುಚೇತ್ ವಿರುದ್ಧವೂ ದೂರು ದಾಖಲಾಗಿತ್ತು.

ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌, ಡಿಸಿಪಿ ಅನುಚೇತ್‌ ವಿರುದ್ಧ ದೂರು

ವಿಜಯೇಂದ್ರ ವಿರುದ್ಧ ಸಲ್ಲಿಸಿದ್ದ ದೂರನ್ನು ಮನವಿ ರೂಪಕ್ಕೆ ಪರಿವರ್ತನೆ ಮಾಡಲಾಗಿತ್ತು.

ವಿಜಯೇಂದ್ರ ವಿರುದ್ಧದ ದೂರು, ‘ಮನವಿ’ ರೂಪಕ್ಕೆ ಪರಿವರ್ತನೆ? ಕೇಸಿನ ವಿಷಯ ತಿರುಚಲಾಗುವುದೇ ?

ವಿಜಯೇಂದ್ರ ವಿರುದ್ಧ ಎಫ್‌ಐಆರ್ ದಾಖಲು ಮಾಡದೇ ಇದ್ದಿದ್ದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ವಿಜಯೇಂದ್ರ ವಿರುದ್ಧ ದಾಖಲಾಗದ ಎಫ್‌ಐಆರ್‌; ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘನೆ?

ಅಬಕಾರಿ ಇಲಾಖೆಯ ಅಧಿಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆಯೂ ವಿಜಯೇಂದ್ರ ವಿರುದ್ಧ ಆರೋಪವು ಕೇಳಿ ಬಂದಿತ್ತು.

ವಿಜಯೇಂದ್ರ, ಸಿಎಂ ಕಾರ್ಯದರ್ಶಿ ಹೊಸೂರ್‌ ಹೆಸರು ಬಳಸಿ ಕೋಟ್ಯಂತರ ವಸೂಲಿ ಆರೋಪ

 

ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಿತ ಪ್ರಕರಣಗಳ ಕುರಿತು ಈಗಿನ ಕಾಂಗ್ರೆಸ್‌ ಸರ್ಕಾರವು ಕಠಿಣ ಕ್ರಮ ಕೈಗೊಂಡಿಲ್ಲ.

SUPPORT THE FILE

Latest News

Related Posts