ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ಇಲ್ಲ, ತನಿಖೆಯೂ ಇಲ್ಲ; ಏಕಾಏಕೀ ದೂರೇ ಮುಕ್ತಾಯ

ಬೆಂಗಳೂರು; ಸುಲಿಗೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದಾಖಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದೇ, ತನಿಖೆಯನ್ನೂ ನಡೆಸದ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಎಂ ಎಲ್‌ ಕೃಷ್ಣಮೂರ್ತಿ ಅವರೀಗ ದೂರರ್ಜಿಯ ವಿಚಾರಣೆಯನ್ನೇ ಮುಕ್ತಾಯಗೊಳಿಸಿದ್ದಾರೆ. ವಿಜಯೇಂದ್ರ ಮತ್ತಿತರರ ವಿರುದ್ಧ ದಾಖಲಾತಿಗಳ ಸಮೇತ ದೂರು ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ಗೆ 2020ರ ಅಕ್ಟೋಬರ್‌ 5ರಂದು ಹಿಂಬರಹ ನೀಡಿರುವ ಶೇಷಾದ್ರಿಪುಂರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರು ಪ್ರಭಾವಿಗಳ … Continue reading ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ಇಲ್ಲ, ತನಿಖೆಯೂ ಇಲ್ಲ; ಏಕಾಏಕೀ ದೂರೇ ಮುಕ್ತಾಯ