Thursday | May 14, 2026 |

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ  ಪ್ರಚಾರ ಮಾಡಲು 7.20 ಕೋಟಿ ರುಪಾಯಿ ಮೊತ್ತದಲ್ಲಿ ಗುತ್ತಿಗೆ ಪಡೆದಿರುವ ದ ಪಾಲಿಸಿ ಫ್ರಂಟ್‌ ಕಂಪನಿಯ ಇಬ್ಬರು ಪಾಲುದಾರರೊಬ್ಬರು  ಈ ಗುತ್ತಿಗೆ ಪಡೆಯುವ ಮೊದಲೇ  ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡಿದ್ದರು.  ಅದಷ್ಟೇ ಅಲ್ಲ ಇದೇ ಪಾಲಿಸಿ ಫ್ರಂಟ್‌ ಕಂಪನಿ ಮೂಲಕವೇ  ಎಲ್ಲಾ ಮಾಧ್ಯಮಗಳಿಗೆ ಜಾಹೀರಾತು ಹೋಗುತ್ತಿದೆ!

ಹೀಗೆಂದು ಖುದ್ದು  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ವಿಧಾನ ಪರಿಷತ್‌ನ ಹಕ್ಕುಬಾಧ್ಯತಾ ಸಮಿತಿಯ  ಸಭೆಗೆ ಮಾಹಿತಿ ಒದಗಿಸಿದ್ದಾರೆ.

ದ ಪಾಲಿಸಿ ಫ್ರಂಟ್‌ ಕಂಪನಿಗೆ ವಾರ್ಷಿಕ 7.20 ಕೋಟಿ ರುಪಾಯಿ ಗುತ್ತಿಗೆ ನೀಡಿರುವುದರ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅಧಿವೇಶನದಲ್ಲಿಯೂ ಚರ್ಚೆಗೆ ಗ್ರಾಸವಾಗಿತ್ತು. ಇದೇ ಪ್ರಕರಣದ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಎನ್ ರವಿಕುಮಾರ್ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತಪ್ಪು ಮಾಹಿತಿ, ಉತ್ತರ ನೀಡಿದ್ದರು. ಹೀಗಾಗಿ ಈ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿ ಮೆಟ್ಟಿಲೇರಿತ್ತು.

ಕರ್ನಾಟಕ ವಿಧಾನ ಪರಿಷತ್‌ನ ಹಕ್ಕುಬಾಧ್ಯತಾ ಸಮಿತಿಯು 2026ರ ಏಪ್ರಿಲ್‌ 16ರ ಗುರುವಾರದಂದು ಶಾಸಕರ ಭವನ ಕಟ್ಟಡ-1ರ 3ನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ  ನಡೆದಿದ್ದ ಸಭೆಯಲ್ಲಿ ದ ಪಾಲಿಸಿ ಫ್ರಂಟ್‌ ಕಂಪನಿಯ ‘ಬಂಡವಾಳ’ವೂ ಸಹ ಅನಾವರಣಗೊಂಡಿದೆ.

2026ರ ಏಪ್ರಿಲ್‌ 16ರಂದು ನಡೆದಿದ್ದ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮೊದಲ ಸಭೆಗೆ ಮಂಜುನಾಥ ಭಂಡಾರಿ ಗೈರು

2026ರ ಏಪ್ರಿಲ್‌ 16ರಂದು ನಡೆದಿದ್ದ ಸಭೆಗೆ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿದ್ದ ಮಂಜುನಾಥ್ ಭಂಡಾರಿ ಅವರು ಗೈರುಹಾಜರಾಗಿದ್ದರು. ಹೀಗಾಗಿ ಮತ್ತೊಬ್ಬ ಸದಸ್ಯ ಎಸ್‌ ವ್ಹಿ ಸಂಕನೂರ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ  ಕೆ ಎಸ್‌ ನವೀನ್‌, ನಿರಾಣಿ ಹಣಮಂತ್‌ ರುದ್ರಪ್ಪ, ರಾಮೋಜಿಗೌಡ, ಭಾರತಿ ಶೆಟ್ಟಿ ಅವರು ಪಾಲಿಸಿ ಫ್ರಂಟ್‌ಗೆ 7.20 ಕೋಟಿ ರುಪಾಯಿ ಮೊತ್ತದ ಗುತ್ತಿಗೆ ನೀಡಿರುವ ಹಿಂದಿನ ಎಲ್ಲಾ ಪ್ರಕ್ರಿಯೆಗಳನ್ನೂ ಸಮಿತಿ ಸಭೆ ಮುಂದೆ ಬಹಿರಂಗಗೊಳಿಸಿದ್ದಾರೆ.

ಅಲ್ಲದೇ ಈ ಕಂಪನಿಯ ಜಿಎಸ್‌ಟಿ ನೋಂದಣಿ, ಕಂಪನಿಯ ಬಂಡವಾಳ, ಕಾರ್ಯವೈಖರಿ, 7.20 ಕೋಟಿ ರುಪಾಯಿ ಗುತ್ತಿಗೆ ಪಡೆದು ಸರ್ಕಾರದ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ವಿರುದ್ಧವಾಗಿ ಮಾಡುತ್ತಿರುವ ಪ್ರಚಾರವನ್ನೂ ತರಾಟೆಗೆ ತೆಗೆದುಕೊಂಡಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಮೋದಿ ಪಂಚ ಬೇಡಿಕೆಗಳು-ಮೋದಿಗೆ ಪ್ರಶ್ನೆಗಳು ಸರ್ಕಾರದ ಕಾರ್ಯಕ್ರಮದ ಪ್ರಚಾರವೇ?

‘ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಪಂಚ ಬೇಡಿಕೆಗಳು ಎಂಬ ಪತ್ರಿಕಾ ವರದಿ ಇದೆ. ಇದು ಸರ್ಕಾರದ ಕಾರ್ಯಕ್ರಮನಾ ಹೇಳಿ. ಮಹದಾಯಿ ಯೋಜನೆಗೆ ಅನುಮತಿಸಿದ ಹಿನ್ನೆಲೆಯೂ ಮೋದಿಯವರಿಗೆ ಪ್ರಶ್ನೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮದ ಪ್ರಚಾರಾನಾ ಹೇಳಿ,’ ಎಂದು ಸದಸ್ಯ ಕೆ ಎಸ್ ನವೀನ್ ಅವರು ಪ್ರಶ್ನಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

ದ ಪಾಲಿಸಿ ಫ್ರಂಟ್ ಕಂಪನಿಯು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ ಹೇಳಿಕೆ (statement) ನೀಡಬೇಕು ಎಂದು ಸಮಿತಿ ಅಧ್ಯಕ್ಷರು ಕೇಳಿದ್ದರು.

‘ದ ಪಾಲಿಸಿ ಫ್ರಂಟ್‌ ಕಂಪನಿಯವರ ಕೆಲಸ ಏನು? ಈ ಕಂಪನಿಯ ಕಾರ್ಯ ಚಟುವಟಿಕೆಗಳೇನು? ನೀವು ಈ ಕಂಪನಿಗೆ ಎಷ್ಟು ಹಣವನ್ನು ಕೊಡುತ್ತೀರಿ,’ ಎಂದು  ಸಮಿತಿಯ ಅಧ್ಯಕ್ಷರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ‘ ಮುಖ್ಯಮಂತ್ರಿಯವರ ಕಚೇರಿಯಿಂದ ಸರ್ಕಾರದ ಕಾರ್ಯಕ್ರಮಗಳನ್ನು ಟಿವಿ ಮುಂತಾದ ಪ್ರಸಾರ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಈ ಕಂಪನಿಗೆ ಕೊಡುತ್ತಾರೆ,’ ಎಂದು ಮಾಹಿತಿ ಒದಗಿಸಿದ್ದರು.

ಈ ಮಾಹಿತಿ ಪಡೆದ ನಂತರ ಸಮಿತಿ ಅಧ್ಯಕ್ಷರು ‘ಸರ್ಕಾರದ themes ಆ ಕಂಪನಿಯವರು ಮಾಡಲ್ ಡಿಸೈನ್ ಏನಾದರೂ ತಯಾರು ಮಾಡುತ್ತಾರೆಯೇ,’ ಎಂದು ಪ್ರಶ್ನಿಸಿದ್ದರು. ಇದಕ್ಕೆ  ಸರ್ಕಾರದ ಕಾರ್ಯಕ್ರಮಗಳನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದು. ಅದು ಟಿ ವಿ ಮಾಧ್ಯಮ ಆಗಿರಬಹುದು, ಡಿಜಿಟಲ್ ಮಾಧ್ಯಮ ಆಗಿರಬಹುದು ಅಥವಾ ಇತರ ಮಾಧ್ಯಮಗಳಾಗಿರಬಹುದು. ನಮಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ 4 ಜಿ ವಿನಾಯ್ತಿ ಇದೆ,’ ಎಂದು  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು  ಮಾಹಿತಿ ಒದಗಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಪಾಲಿಸಿ ಫ್ರಂಟ್‌ ಗೆ  ‘ಸರ್ಕಾರದಿಂದ ಎಷ್ಟು ಹಣ ಪಾವತಿಯಾಗುತ್ತದೆ,’ ಎಂದು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ್ದ  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ‘ತಿಂಗಳಿಗೆ 60 ಲಕ್ಷ ನೀಡಲಾಗುತ್ತದೆ. ದ ಪಾಲಿಸಿ ಫ್ರಂಟ್‌ ಕಂಪನಿಯ ಮೂಲಕವೇ ಎಲ್ಲಾ ಮಾಧ್ಯಮಗಳಿಗೂ ಜಾಹೀರಾತುಗಳು ಹೋಗುತ್ತದೆ,’ ಎಂದು ಉತ್ತರಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

ಸರ್ಕಾರದ ಕಾರ್ಯಕ್ರಮಗಳು ಮತ್ತು ಸಾಧನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದಲೇ 7.20 ಕೋಟಿ ರು ಗುತ್ತಿಗೆಯನ್ನು ಪಾಲಿಸಿ ಫ್ರಂಟ್‌ ಗೆ ನೀಡಿತ್ತು. ಆದರೆ ದ ಪಾಲಿಸಿ ಫ್ರಂಟ್‌ ಕಂಪನಿಯ ಮೂಲಕವೇ ಎಲ್ಲಾ ಮಾಧ್ಯಮಗಳಿಗೂ ಜಾಹೀರಾತುಗಳು ಹೋಗುತ್ತದೆ ಎಂದು  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ಸಮಿತಿ ಸಭೆಗೆ ನೀಡಿರುವ ಮಾಹಿತಿಯೂ ಸಹ ಚರ್ಚೆಗೆ ಗ್ರಾಸವಾಗಿದೆ.

ಈ ಉತ್ತರದ ಕುರಿತು ಸಮಿತಿಯ ಹಂಗಾಮಿ ಅಧ್ಯಕ್ಷರು ‘ಹಾಗಾದರೆ ನೀವು ಪತ್ರಿಕೆಯವರಿಗೆ ಹಣ ಕೊಡುವುದಿಲ್ಲವೇ,’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ‘ ಇಲ್ಲ’ ಎಂದು ಉತ್ತರಿಸಿರುವುದು ನಡವಳಿಯಿಂದ ಗೊತ್ತಾಗಿದೆ.

ಚರ್ಚೆ- ಪ್ರಶ್ನೋತ್ತರ ಸಮಗ್ರ ವಿವರ

ಕೆ ಎಸ್ ನವೀನ್;  ಇವರ ಮೂಲಕ ಹೋಗುವುದಿಲ್ಲ, ಇವರು ಯಾರಿಗೂ ಪೇಮೆಂಟ್‌ ಮಾಡುವುದಿಲ್ಲ. ಸರ್ಕಾರದ ಸೇವೆಗಳನ್ನು ಸರ್ಕಾರದ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಮಾಡುತ್ತವೆ.

ರಾಮೋಜಿ ಗೌಡ; ಇಲ್ಲಿ ಪ್ರಶ್ನೆ ಏನೆಂದರೇ ಕೇವಲ ಏಜೆನ್ಸಿಯನ್ನು ನಿರ್ವಹಣೆ ಮಾಡುವುದಕ್ಕೆ ಇಷ್ಟು ಹಣ ನೀಡಲಾಗುತ್ತದೆಯೇ ಅಥವಾ ಜಾಹೀರಾತುಗಳ ಪೇಮೆಂಟ್ಸ್‌ ನೀವು ಮಾಡುತ್ತೀರೇ?

ಕೆ ಎಸ್ ನವೀನ್; ಕೇವಲ ಏಜೆನ್ಸಿ ನಿರ್ವಹಣೆಗಾಗಿ ಮಾತ್ರ. ಅಲ್ಲಿಂದ ಮುಂದೆ ಅವರು ಒಂದು ರುಪಾಯಿ ದುಡ್ಡನನೂ ಪೇಪರ್‍‌ನವರಿಗಾಗಲೀ ಅಥವಾ ಮತ್ತೊಬ್ಬರಿಗಾಗಲೀ ಕೊಡುವುದಿಲ್ಲ.

ರಾಮೋಜಿಗೌಡ; ಈ ರೀತಿ ಕೊಡುವ 60 ಲಕ್ಷ ಹಣದಲ್ಲಿ ಅವರು ಐದಾರು ಲಕ್ಷ ರುಪಾಯಿಯನ್ನು ಅವರ ಕಚೇರಿಯ ಖರ್ಚಿಗಿಟ್ಟುಕೊಂಡು, ಉಳಿದ ಹಣವನ್ನು ಮಾಧ್ಯಮಗಳಿಗೆ ನೀಡುತ್ತಾರೆಂದು ನಾವು ತಿಳಿದು ಕೊಂಡಿದ್ದೆವು.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಹೌದು, ಖಂಡಿತ

ಕೆ ಎಸ್ ನವೀನ್; ನಾನು ಇದರ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಿದ್ದೆನು. ಆದರೆ ಇದು ಚುಕ್ಕೆ ರಹಿತ ಪ್ರಶ್ನೆಯಾಯಿತು. ದ ಪಾಲಿಸಿ ಫ್ರಂಟ್‌ ಕಂಪನಿಯವರ ಬಳಿ ಇಂತಿಂಥ ಮಾಧ್ಯಮಗಳಿಗೆ ಇಷ್ಟು ಹಣ ಕೊಟ್ಟಿದ್ದೇವೆ ಎನ್ನುವ ಮಾಹಿತಿ ಇದೆಯೇ? ಎರಡನೆಯದಾಗಿ,ಅವರು ಕೊಟ್ಟಿರುವುದು ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ, not though print media or electoronic media. It is only through social media.

ಅಧ್ಯಕ್ಷರು; ತಿಂಗಳಿಗೆ 60 ಲಕ್ಷ ಎಂದು ಹೇಳಿದಿರಿ. ಅಂದರೆ ವರ್ಷಕ್ಕೆ 7.2 ಕೋಟಿ ಆಗುತ್ತದೆ. ಕಂಪನಿಯವರಿಗೆ ಯಾವ ರೀತಿಯ ಪಬ್ಲಿಕೇಷನ್ ಮಾಡಬೇಕೆಂದು ನೀವೇನಾದರೂ specification ಕೊಡುತ್ತೀರಾ? ಉದಾಹರಣೆಗೆ ಇಷ್ಟು ದಿನ, ಇಷ್ಟು ಪತ್ರಿಕೆಗಳಲ್ಲಿ, ಇಷ್ಟು ಅಳತೆಯಲ್ಲಿ ಜಾಹೀರಾತು ಬರಬೇಕು, ಸಾಮಾಜಕ ಜಾಲತಾಣಗಳಲ್ಲಿ, ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಕಟಗೊಳ್ಳಬೇಕೆನ್ನುವ  ಷರತ್ತುಗಳನ್ನು ವಿಧಿಸಲಾಗುತ್ತದೆಯೇ ಅಥವಾ ಹಾಗೆಯೇ ಅವರಿಗೆ ಹಣ ನೀಡಲಾಗುತ್ತಿದೆಯೇ ? ಅದು ಪ್ರಕಟಗೊಂಡಿದೆಯೇ ಇಲ್ಲವೇ ಎನ್ನುವದನ್ನು ತಾವು ಪರಿಶೀಲನೆ ಮಾಡುತ್ತೀರೋ ಇಲ್ಲವೋ..?

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ತಾವು ಹೇಳಿದಂತೆ ಪ್ರತಿ ತಿಂಗಳು ಡಿಜಿಟಲ್ ಮೀಡಿಯಾ, ಪ್ರೆಸ್‌ನಲ್ಲಿ ಏನೇನು ಮಾಡಿದ್ದಾರೆ ಎಂಬ ಎಲ್ಲಾ ವರದಿಗಳನ್ನು ನಮಗೆ ಸಲ್ಲಿಸುತ್ತಾರೆ. ನಾವು K.S.M.C.A Ltd ನ service charges including GSTಯನ್ನು ಹಿಡಿದುಕೊಂಡು ಅವರಿಗೆ ಉಳಿದ ಹಣವನ್ನು ಮಾಹೆಯಾನ ಕೊಡುತ್ತೇವೆ. ನಾವು ವರ್ಕ್‌ ಆರ್ಡರ್‍‌ ಕೊಡಬೇಕಾದರೇ ಷರತ್ತುಗಳನ್ನು ವಿಧಿಸಿಯೇ ಅವರಿಗೆ ವರ್ಕ್‌ ಆರ್ಡ್‌ರ್‍‌ ಕೊಡುತ್ತೇವೆ.

ರಾಮೋಜಿಗೌಡ; ರವಿಕುಮಾರ್ ಅವರು ಏಕೆ ಈ ಪ್ರಶ್ನೆಯನ್ನು ಕೇಳಿದ್ದಾರೆಂದರೇ ಒಂದು ಟೆಂಡರ್ ನ್ನು ಕೊಡಬೇಕಾದರೆ ಇಷ್ಟು ವರ್ಷ ಅನುಭವ ಇರಬೇಕು. ತರಾತುರಿಯಲ್ಲಿ ಏಕೆ ಅವರಿಗೆ ನೀಡಿದ್ದಾರೆ ಎನ್ನುವ ಸಂಶಯ ಬಹಶಃ ಅವರಲ್ಲಿ ಮೂಡಿರಬಹುದು. ಜಿಎಸ್‌ಟಿ ನೋಂದಣಿಯಾಗುವುದಕ್ಕೂ ಮೊದಲೇ ನೀವು ಅವರಿಗೆ ಕೊಟ್ಟಿದ್ದೀರಿ ಎಂಬುದು ಅವರ ಅವಾದ. ನೀವು ಅಲ್ಲಿ ಅಡ್ರೆಸ್‌ ಚೇಂಜ್‌ ಆಯಿತು, ಅದರಿಂದ ಹಾಗಾಯಿತು ಎಂದು ಹೇಳುತ್ತೀರಿ. ದಿನಾಂಕ 21.05.2023ರಂದು ಕಂಪನಿ ಪ್ರಾರಂಭವಾಗಿದೆ. ಎರಡು ತಿಂಗಳ ನಂತರ ಜಿ.ಎಸ್‌.ಟಿ ಆಗಿದೆ. ದಿನಾಂಕ 11.09.2023ಕ್ಕೆ ಇವರಿಗೆ ಟೆಂಡರ್ ಆಗಿದೆ. ಪ್ರಾರಂಭವಾಗಿ ಸುಮಾರು 4 ತಿಂಗಳ ಅಂತರದಲ್ಲಿ ಟೆಂಡರ್ ಲಭ್ಯವಾಗಿದೆ.

ರಾಮೋಜಿಗೌಡ; ಈ ಕಂಪನಿಗೆ ಟೆಂಡರ್ ಕೊಟ್ಟಿರುವ ಉದ್ದೇಶವಿರುವ ಬಗ್ಗೆ ಸಂಶಯ ಬಂದಿದೆ. ವಿಳಾಸ ಬದಲಾವಣೆಯಾಗಿರುವುದರಿಂದ ಜಿ.ಎಸ್‌.ಟಿ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಈ ಒಂದು ಸಣ್ಣ ಕಂಪನಿಗೆ 7 ಕೋಟಿ 20 ಲಕ್ಷ ರುಪಾಯಿ ಕೊಡಬೇಕೆಂದರೇ, ಈ ಕಂಪನಿಯ ಫೈನಾನ್ಷಿಯಲ್‌ ಕ್ಯಪಾಸಿಟಿ ಏನೆಂಬುದರ ಬಗ್ಗೆ ಆಡಿಟ್‌ ಕ್ಲಿಯರೆನ್ಸ್‌ ನ್ನು ತೆಗೆದುಕೊಳ್ಳಬಹುದಾಗಿತ್ತು. ಆದರೆ ಒಂದು ವರ್ಷದ್ದು ಮಾತ್ರ ಆಡಿಟ್‌ನ್ನು ತೆಗೆದುಕೊಲ್ಳುತ್ತೀರಾ. ಅದು ಹೊಸದಾಗಿ ಪ್ರಾರಂಭವಾಗಿರುವ ಕಂಪನಿ. ಅದರ ಕ್ಯಾಪಿಟಲ್‌ ಅಮೌಂಟ್‌ ಐವತ್ತೈದು ಸಾವಿರ ಇರಬೇಕು. ಇಲಾಖೆ ವತಿಯಿಂದ ಕಂಪನಿಗೆ ಒಂದು ವರ್ಷಕ್ಕೆ ಏಳು ಕೋಟಿ ಇಪ್ಪತ್ತು ಲಕ್ಷ ರುಪಾಯಿಗಳನ್ನು ಕೊಟ್ಟಿದ್ದೀರಾ? ಈ ಕಂಪನಿಗೆ ಏತಕ್ಕೆ ತರಾತುರಿಯಲ್ಲಿ ಕೊಡಬೇಕಾಗಿತ್ತು?

ಅಧ್ಯಕ್ಷರು; ಸದಸ್ಯರು ಹೇಳುವುದೇನಂದರೇ ಜಿ.ಎಸ್‌.ಟಿ ನೋಂದಣಿಯಾಗುವ ಮುಂಚೆಯೇ ಕೊಟ್ಟಿರುವಂತಹದ್ದು. ಈ ಕಂಪನಿ ನೋಂದಣಿಯಾಗಿ ಎರಡು ತಿಂಗಳೊಳಗೇ ದೊಡ್ಡ ಮೊತ್ತ ದ ಪ್ರಾಜೆಕ್ಟ್‌ನ್ನು ಕೊಟ್ಟಿದ್ದೀರಾ. ಹಾಗಾಗಿ ಇಲ್ಲಿ ಸಂಶಯದಿಂದ ಕೂಡಿದೆ. ಈ ಟೆಂಡರ್ ಗೆ ಎಷ್ಟು ಅರ್ಜಿಗಳು ಬಂದಿವೆ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಮೂರು ಅರ್ಜಿಗಳು ಬಂದಿವೆ.

ಅಧ್ಯಕ್ಷರು; ಈ ಮೂರು ಅರ್ಜಿಗಳಲ್ಲಿ ಜೇಷ್ಠತಾ ಪಟ್ಟಿ ಇಲ್ಲದೇ ಹೋದರೂ ಕೂಡ ಕೊಟ್ಟಿದ್ದೀರಿ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಇದರಲ್ಲಿ lowest quotation ಪ್ರಕಾರ ಟೆಂಡರ್ ಕೊಟ್ಟಿರುವಂತಹದ್ದು.

ಅಧ್ಯಕ್ಷರು; ಇಲ್ಲಿ  lowest quotation ಪ್ರಶ್ನೆ ಬರುವುದಿಲ್ಲ. ಇಲ್ಲಿ quality and performance  ಬೇಕಾಗಿದೆ. ಇದು result oriented.

ರಾಮೋಜಿಗೌಡ; ಕಂಪನಿಗೆ ಟೆಂಡರ್ ಕೊಡಬೇಕೆಂದರ, ಇದರ ಮಾನದಂಡಗಳು ಏನಿರಬೇಕು?

ಅಧ್ಯಕ್ಷರು; ಟೆಂಡರ್‍‌ಗೆ ಮೂರು ಅರ್ಜಿಗಳು ಬಂದಿರುವ ಬಗ್ಗೆ ಮಾಹಿತಿಯನ್ನು ಸಮಿತಿ ಸಭೆಗೆ ಒದಗಿಸಿ. ಅವರು ಎಷ್ಟು ಮೊತ್ತ  quote  ಮಾಡಿದ್ದಾರೆ. ಅದರಲ್ಲಿ ಏನು ವ್ಯತ್ಯಾಸವಾಗಿದೆ? ಸದಸ್ಯರು ಕೇಳಿರುವ ಪ್ರಶ್ನೆಯನ್ನು ಕೇಳಿದ್ದು ಅದರ ಮೇಲೆ allegation ಮಾಡಿದ ನಂತರ ಉತ್ತರ ಕೂಡ ಕೊಟ್ಟಿದ್ದಾರೆ. ಆ ಉತ್ತರದಲ್ಲಿ ಕೂಡ ತಪ್ಪು ಮಾಹಿತಿಯಿಂದ ಕೂಡಿದೆ. ಅದು ಕೂಡ ಅವರಿಗೆ ಸಮಾಧಾನಕರವಾಗಿಲ್ಲ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ದ ಪಾಲಿಸಿ ಫ್ರಂಟ್ ಕಂಪನಿಯು ಇಬ್ಬರು partners ನ್ನು ಒಳಗೊಂಡಿದ್ದಾರೆ. ಒಬ್ಬರು Adospehere Branding Company ಯಲ್ಲಿ 2017-18ರಲ್ಲಿ ಕೆಲಸವನ್ನು ಪ್ರಾರಂಭ ಮಾಡಿದ್ದರು. ವಿರೋಧ ಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ 2018-19ರಲ್ಲಿ ಕೆಲಸವನ್ನು ಮಾಡಿದ್ದಾರೆ. 2023-24ರಲ್ಲಿ Mindsee Techonolgies Pvt Ltdಯಲ್ಲಿ ಕೆಲಸ ಮಾಡಿದ್ದಾರೆ. National Law School of India Unviersityಯಿಂದ Post Graduation ಮಾಡಿದ್ದಾರೆ. ಇವರಿಗೆ ಇಷ್ಟೆಲ್ಲಾ experience ಇವೆ. ಅವರಿಗೆ ಅನುಭವವಾಗಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಮಿತಿಗೆ ನೀಡುತ್ತೇನೆ.

ಅಧ್ಯಕ್ಷರು; ಟೆಂಡರ್‍‌ನಲ್ಲಿ ಭಾಗವಹಿಸಿರುವಂತಹರ ಅರ್ಜಿದಾರರು ಮಾಡಿರುವ quotation ಮೊತ್ತವು ಅಷ್ಟೊಂದು ವ್ಯತ್ಯಾಸವಿಲ್ಲ. ಈ ಒಂದು ಅರ್ಜಿದಾರರಿಗೆ ಟೆಂಡರ್ ಕೊಡಬೇಕೆಂಬುದರ ಬಗ್ಗೆ ಅಧಿಕಾರಿಗಳು ತೀರ್ಮಾನ ಮಾಡಿಕೊಂಡಿದ್ದಾರೆ.

ಕೆ ಎಸ್ ನವೀನ್; ಯಾವುದೇ ಒಂದು ಕಂಪನಿಗೆ ಐದು ಲಕ್ಷ ರುಪಾಯಿಗಳನ್ನು ಕೊಡುತ್ತೇನೆಂದರೇ ಮೂರು ವರ್ಷಗಳ ಆಡಿಟ್‌, ಬ್ಯಾಲೆನ್ಸ್‌ ಶೀಟ್‌ ಆಗಿದೆಯಾ ಎಂಬುದನ್ನು ನೋಡಿಕೊಂಡು ಕೊಡುತ್ತೇವೆ. ಆ ಕಂಪನಿಯ ಪಾಲುದಾರರ ವಿದ್ಯಾರ್ಹತೆಯಾಗಿರುವ ಬಗ್ಗೆ ತಾವು justification ಕೊಟ್ಟಿದ್ದೀರಾ

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಈ ಕಂಪನಿಯಲ್ಲಿ ಇಬ್ಬರು ಪಾಲುದಾರರಿದ್ಧಾರೆ. ಅವರ ಅನುಭವವನ್ನು ನೋಡಿಕೊಂಡು ಕೊಟ್ಟಿದ್ದೇವೆ.

ಕೆ ಎಸ್ ನವೀನ್; whether they given you personal guranteee? ಕಂಪನಿಯವರು ಕೊಟ್ಟಿರುವ ಒಂದೇ ಒಂದು ಜಾಹೀರಾತು ಇದೆ. Paper cutting ನ್ನು  format ಮಾಡಿ submission  ಮಾಡಿದ್ದಾರೆ. ಸರ್ಕಾರದಿಂದ ಮಾಡಿರುವ ಕಾರ್ಯಕ್ರಮಗಳಲ್ಲ. ಉದಾಹರಣೆಗೆ ಏಳನೇ ವೇತನ ಆಯೋಗದ ಜಾರಿಗೆ ಪಟ್ಟು ಎಂಬ ಬಗ್ಗೆ ಒಂದು ಪತ್ರಿಕೆಯಲ್ಲಿ ಬಂದಿರುವ ಜಾಹೀರಾತನ್ನೇ ಕಟ್‌ ಮಾಡಿ ಅದನ್ನು ಸಿ ಎಂ ಕಚೇರಿಗೆ ಕಳಿಸುತ್ತಾರೆ. ಇದರಲ್ಲಿ ಸರ್ಕಾರದ ಕಾರ್ಯಕ್ರಮದ ಜನಪ್ರಿಯತೆ ಮಾಡುವಂತಹ ಕೆಲಸ ಇದರಲ್ಲಿ ಏನಿದೆ? ಇದು ಸರ್ಕಾರಿ ದಾಖಲೆಯಾಗಿದೆ.

ಅಧ್ಯಕ್ಷರು; ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ statement ಕೊಡಿ

ಕೆ ಎಸ್ ನವೀನ್; ಇದರಲ್ಲಿ ಸರ್ಕಾರಿ ಕಾರ್ಯಕ್ರಮ ಏನಿದೆ ಹೇಳಿ? ಇದರ ಬಗ್ಗೆ  justify ಮಾಡುವುದಕ್ಕೆ ತಾವು ತಯಾರಿಲ್ಲವೆಂದರೇ ನಿಮ್ಮ ಕಾರ್ಯದರ್ಶಿಯವರನ್ನು ಕರೆಯಿರಿ. ಪತ್ರಿಕೆ ಕೊಟ್ಟಿರುವುದನ್ನು ಅವರ ಮೂಲಕ ನಾವು ಕೊಡುತ್ತೇವೆ. ಅವರಿಗೆ ಆನಂತರ ದುಡ್ಡು ಕೊಡುತ್ತೇವೆ ಎಂದು ತಾವೇ ಹೇಳಿದಿರಿ. ಪತ್ರಿಕೆಯಲ್ಲಿ ಬಂದಿರುವಂತಹದ್ದು ಇದರಲ್ಲಿ ಏನಿದೆ?

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಇದರಲ್ಲಿ Social Media, Digital Media ಎಲ್ಲವೂ ಕೂಡ ಬರುತ್ತದೆ.

ಅಧ್ಯಕ್ಷರು; Social Media ದಲ್ಲಿ ಬಂದಿರುವುದನ್ನು capture ಮಾಡುತ್ತೀರಾ ಅಥವಾ ಅದನ್ನು ಏನು ಮಾಡಬೇಕೆಂಬುದು ತಮಗೆ ಗೊತ್ತಾಗುತ್ತದೆಯಾ?

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; Pen Driveನಲ್ಲಿ ಹಾಕಿ ಕೊಡುತ್ತಾರೆ

ಕೆ ಎಸ್  ನವೀನ್; ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಪಂಚ ಬೇಡಿಕೆಗಳು ಎಂಬ ಪತ್ರಿಕಾ ವರದಿ ಇದೆ. ಇದು ಸರ್ಕಾರದ ಕಾರ್ಯಕ್ರಮನಾ ಹೇಳಿ. ಮಹದಾಯಿ ಯೋಜನೆಗೆ ಅನುಮತಿಸಿದ ಹಿನ್ನೆಲೆಯೂ ಮೋದಿಯವರಿಗೆ ಪ್ರಶ್ನೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮದ ಪ್ರಚಾರಾನಾ ಹೇಳಿ.

ಅಧ್ಯಕ್ಷರು; ದ ಪಾಲಿಸಿ ಫ್ರಂಟ್‌ ಕೇರಿ ಎಲ್ಲಿದೆ? ಅದರ ಕಚೇರಿಗೂ ಕೂಡ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದರೆ ಹೇಗೆ ಹೇಳಿ.

ಕೆ ಎಸ್ ನವೀನ್; ನಮ್ಮ ಸಮಿತಿ ವತಿಯಿಂದ ದ ಪಾಲಿಸಿ ಫ್ರಂಟ್ ಕಂಪನಿಗೆ ಭೇಟಿ ನೀಡಬೇಕು. ಈ ಕಂಪನಿ ಪ್ರಾರಂಭ ಮಾಡಿ, ಈಗಾಗಲೇ ಮೂರು ವರ್ಷ ಕಳೆದಿದೆ. ಸರ್ಕಾರ Terms of Contract ಮತ್ತು ಇವರು ಮಾಡುವಂತಹದ್ದಕ್ಕೂ ಏನಿದೆ? ವಿಶೇಷವಾಗಿ 4 ಜಿ ವಿನಾಯಿತಿ ಕೊಡುವಂತಹದ್ದರ ಬಗ್ಗೆ ಷರತ್ತುಗಳು ಏನಿರಬಹುದು ಎಂಬುದೊಂದು.

ನಿರಾಣಿ ಹಣಮಂತ್ ರುದ್ರಪ್ಪ; ದ ಪಾಲಿಸಿ ಫ್ರಂಟ್‌ ಕಂಪನಿಯು 21.05.2023ರಂದು ಪ್ರಾರಂಭಗೊಂಡಿದ್ದು, ದಿನಾಂಕ 18.072023ರಂದು ಜಿಎಸ್‌ಟಿ ನೋಂದಣಿಯಾಗಿದೆ. ದಿನಾಂಕ 21.12.2023ರಂದು ಜಿ ಎಸ್ ಟಿ ನೋಂದಣಿಯಾಗುವ ಮೊದಲೇ ಅಂದರೇ ದಿನಾಂಕ 11.09.2023ರಂದು ಸರ್ಕಾರದಿಂದ ಟೆಂಡರ್ ಪಡೆದಿರುವುದು ಅಚ್ಚರಿಯಾಗಿದೆ. Before GST Registration ಆದೇಶ ಕೊಟ್ಟಿರುವ ಬಗ್ಗೆ ಸದಸ್ಯರು ಆರೋಪ ಮಾಡಿದ್ದಾರೆ.

ಕೆ ಎಸ್  ನವೀನ್; ಸರ್ಕಾರದಿಂದ ಇವರಿಗೆ ಒಂದೇ ಬಾರಿ ಅವಾರ್ಡ್‌ ಆಗಿರುತ್ತದೆ. ಅವಾರ್ಡ್‌ ಆದ ಮೇಲೆ company existence ನಲ್ಲಿ ಇರುವುದಿಲ್ಲ. Award ಆದ ನಂತರ ಮತ್ತೆ Firm reconstitution ತರಹ ಮಾಡಿದಾಗೆ ಮಾಡಿ, ನವೆಂಬರ್‍‌ ತಿಂಗಳಲ್ಲಿ ಮತ್ತೆ ಒಂದು partnership Deed ಮಾಡಿ ಅದೇ ಹೆಸರಿನಲ್ಲಿ ಒಂದು GST  ತೆಗೆದುಕೊಂಡಿರುತ್ತಾರೆ. ಆ ವರ್ಷ work order issue ಮಾಡಿದ್ದಾರೆ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಆಗ ಜಿ ಎಸ್‌ ಟಿ ತೆಗೆದುಕೊಂಡಿಲ್ಲ. ಅದರಲ್ಲಿ ಬೇರೆ ವಿಳಾಸ ಇದೆ.

ಕೆ ಎಸ್ ನವೀನ್; ಜಿ.ಎಸ್‌.ಟಿ ಅನ್ನು ಯಾವಾಗ ತೆಗೆದುಕೊಂಡಿದ್ದಾರೆ? ಯಾವಾಗ ಪ್ರಪೋಸಲ್‌ ಕರೆದಿದ್ದೀರಾ? ಮತ್ತೆ ಮರು ಜಿಎಸ್‌ಟಿ ಆಗಿರುವುದು ಯಾವಾಗ?

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ದಿನಾಂಕ 18.07.2023ರಂದ ಜಿ.ಎಸ್‌.ಟಿ ತೆಗೆದುಕೊಂಡಿದ್ದಾರೆ. ಮತ್ತು 11.09.2023ರಂದು ಪ್ರಪೋಸಲ್‌ನ್ನು ಕರೆದಿದ್ದೇವೆ. ದಿನಾಂಕ 21.12.2023ರಂದು ಜಿ ಎಸ್‌ ಟಿ ನೋಂದಣಿಯಾಗಿದೆ.

ಕೆ ಎಸ್ ನವೀನ್; ಇದರ ಮಧ್ಯೆದಲ್ಲಿ ಈ ಕಂಪನಿ ನವೆಂಬರ್ ತಿಂಗಳಿನಲ್ಲಿ ಮರು ನೋಂದಣಿಯಾಗುತ್ತದೆ. ಆ ಕಂಪನಿಗೆ ನಿರ್ದೇಶಕರು ಕೂಡ ಆಗುತ್ತಾರೆ. ಈ ಕಚೇರಿಯ ವಿಳಾಸ ಅವರಿಗೆ ಬರುತ್ತದೆ. ಆ ಕಚೇರಿ ವಿಳಾಸಕ್ಕೆ ಮತ್ತೆ re-conveyance of G.S.T.ಹೊಸದಾಗಿ ಬರುತ್ತದೆ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ಪಾಲುದಾರ ಕಂಪನಿಗೆ ಒಂದೇ ಜಿ ಎಸ್ ಟಿ ಇರುತ್ತದೆ. ಕಂಪನಿಯ ಕಛೇರಿ ವಿಳಾಸ ಬದಲಾವಣೆಗೆ ಮನವಿ ಸಲ್ಲಿಸಿದ್ದರಿಂದ ಪರಿಷ್ಕೃತ ಜಿ.ಎಸ್‌.ಟಿ ಪ್ರಮಾಣ ಪತ್ರವನ್ನು 2023ರ ಡಿಸೆಂಬರ್‍‌ 21ರಂದು ಪಡೆಯಲಾಗಿರುತ್ತದೆ. ಜಿಎಸ್‌ ಟಿ ನಂಬರ್‍‌ ಒಂದೇ ಇರುತ್ತದೆ.

ಕೆ ಎಸ್ ನವೀನ್; ಸಮಿತಿ ವತಿಯಿಂದ ದ ಪಾಲಿಸಿ ಫ್ರಂಟ್‌ ಕಂಪನಿಗೆ ಭೇಟಿ ನೀಡೋಣ.

ಅಧ್ಯಕ್ಷರು; ಅದರ ಬಗ್ಗೆ ಕ್ಲಿಯರ್ ಇದೆ. work order ಕೊಟ್ಟಿರುವ ಬಗ್ಗೆ ಅದರಲ್ಲಿ ಏನೇನು ಮಾಡಬೇಕು ಮತ್ತು ಪೇಪರ್‍‌ನಲ್ಲಿ ಬಂದಿರುವ ಜಾಹೀರಾತು ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಬಂದಿರುವಂತಹದ್ದು ಸರ್ಕಾರದ ಯೂಸರ್ ಐಡಿ ಅಲ್ಲ.

ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು; ವರ್ಕ್ ಆರ್ಡರ್‍‌ information department ಗೆ ಬಂದಿರುತ್ತದೆ. ಅವರು ಅದನ್ನು  verify ಮಾಡಿ ಸರಿ ಇದೆ ಎಂದ ಮೇಲೆ ಪೇಮೆಂಟ್‌ ಕೊಡುತ್ತಾರೆ.

‘ಈ ಕಂಪನಿಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ಸಮಿತಿಗೆ ಒದಗಿಸಿ. ಮುಂದಿನ ಸಭೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯವರನ್ನು ಕರೆಯಿಸಿ ಆಧರೆ ಸಮಿತಿ ಸಭೆಗೆ ತಪ್ಪು ಮಾಹಿತಿ ನೀಡಬಾರದು. ಸಮಿತಿಯು ಕಂಪನಿಗೆ ಭೇಟಿ ಮಾಡುವ ದಿನಾಂಕವನ್ನು ತಿಳಿಸುತ್ತೇವೆ,’ ಎಂದು ಅಧ್ಯಕ್ಷರು ಸಭೆಗೆ  ತಿಳಿಸಿದ್ದರು ಎಂಬುದು ಸಭೆ  ನಡವಳಿಯಿಂದ ಗೊತ್ತಾಗಿದೆ.

7.20 ಕೋಟಿ ಮೊತ್ತದ ಗುತ್ತಿಗೆ; ಪಾಲಿಸಿ ಫ್ರಂಟ್‌ ಪ್ರಕರಣದಲ್ಲಿ ತಪ್ಪು ಮಾಹಿತಿ, ಹಕ್ಕುಬಾಧ್ಯತೆ ಸಮಿತಿಯನ್ನೂ ತಪ್ಪುದಾರಿಗೆ ಎಳೆಯಿತೇ ಸರ್ಕಾರ?

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಸಮಿತಿ ಸಭೆಗೆ ನೀಡಿದ್ದ ಮಾಹಿತಿ ಕುರಿತು ದಿ ಫೈಲ್‌ 2026ರ ಏಪ್ರಿಲ್‌ 17ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...
Please Scan to make Your Contribution

Topics

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ...

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!