Saturday | May 16, 2026 |

ಪಾಲಿಸಿ ಫ್ರಂಟ್‌ಗೆ 7.20 ಕೋಟಿ ರು ಮೊತ್ತದ ಗುತ್ತಿಗೆ; ‘ಅರ್ಹತೆ ಇದೆಯೋ ಇಲ್ಲವೋ, ನಾವು ಹೇಳುವುದಕ್ಕಾಗುವುದಿಲ್ಲ’ ವೆಂದು ಇಲಾಖೆಯಿಂದ ಹಕ್ಕುಬಾಧ್ಯತೆ ಸಮಿತಿಗೆ ಹೇಳಿಕೆ

ಬೆಂಗಳೂರು; ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಯಾವುದೇ ಪೂರ್ವಾನುಭವ ಇಲ್ಲದೇ ಇರುವ ಪಾಲಿಸಿ ಫ್ರಂಟ್‌ ಕಂಪನಿಗೆ ವಾರ್ಷಿಕ 7.20 ಕೊಟಿ ರು ಗುತ್ತಿಗೆಯನ್ನು ಮಾಡಿಕೊಂಡಿರುವ ಪ್ರಕ್ರಿಯೆಗಳ ಕುರಿತು ದಾರಿ ತಪ್ಪಿಸುತ್ತಿರುವ  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯನ್ನು  ಹಕ್ಕು ಬಾಧ್ಯತೆ ಸಮಿತಿಯ ಹಲವು ಸದಸ್ಯರು ಗುತ್ತಿಗೆ ಮೂಲಕ್ಕೆ ಕೈ ಹಾಕಿರುವುದು ಇದೀಗ ಬಹಿರಂಗವಾಗಿದೆ.

ಪಾಲಿಸಿ ಫ್ರಂಟ್‌ ಕಂಪನಿಗೆ ನೀಡಿರುವ 7.20 ಕೋಟಿ ರು ಮೊತ್ತದ ಗುತ್ತಿಗೆ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಹಕ್ಕುಚ್ಯುತಿ ಎಸಗಿದೆ ಎಂಬ ಕುರಿತು ಕರ್ನಾಟಕ ವಿಧಾನ ಪರಿಷತ್‌ನ ಹಕ್ಕು ಬಾಧ್ಯತೆ ಸಮಿತಿಯ ಚರ್ಚೆ ವೇಳೆಯಲ್ಲಿ  ಕುತೂಹಲಕರ  ಸಂಗತಿಗಳು ಮುನ್ನೆಲೆಗೆ ಬಂದಿವೆ.

2026ರ ಏಪ್ರಿಲ್‌ 23ರಂದು ನಡೆದಿದ್ದ ಸಭೆಯಲ್ಲಿಯೂ ಸದಸ್ಯರು, ಪಾಲಿಸಿ ಫ್ರಂಟ್‌ ಕಂಪನಿಯ ಕಾರ್ಯವೈಖರಿ ಕುರಿತು ಪದೇ ಪದೇ ಪ್ರಶ್ನೆ ಎಸೆದಾಗಲೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಸರಿಯಾದ ಉತ್ತರ ನೀಡದೇ ಪಲಾಯನ ಮಾಡಿರುವುದು ಸಹ ಮೇಲ್ನೋಟಕ್ಕೆ ಕಂಡುಬಂದಿದೆ.

2026ರ ಏಪ್ರಿಲ್‌ 23ರಂದು ನಡೆದಿದ್ದ ಸಭೆಯ ನಡವಳಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಗುತ್ತಿಗೆ ನೀಡಿರುವ ಎಲ್ಲಾ ಪ್ರಕ್ರಿಯೆಗಳನ್ನು ಸಮಿತಿ ಸದಸ್ಯರು ಜಾಲಾಡುತ್ತಿದ್ದಂತೆ  ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ‘ನಾನು ಮತ್ತೆ ಸಬ್‌ ಮಿಟ್‌ ಮಾಡುತ್ತೇನೆ. ರವಿಕುಮಾರ್ ಅವರ ಪ್ರಶ್ನೆ ಮತ್ತು  ಅದಕ್ಕೆ ಉತ್ತರ ಅಷ್ಟಕ್ಕೇ ಸ್ಟಿಕಾನ್‌ ಆಗೋಣ. ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ ನೀಡಿರುವ ಕುರಿತು ಕಡತದ ಸಮಗ್ರ ದಾಖಲೆಗಳೊಂದಿಗೆ ಯಾವ ಕಾರಣಕ್ಕಾಗಿ ಸದರಿ ಕಂಪನಿಗೆ ವಾರ್ಷಿಕ 7.2 ಕೋಟಿ ರು ಗಳ ಗುತ್ತಿಗೆ ನೀಡಲಾಗುತ್ತಿದೆ,  ಗುತ್ತಿಗೆ ಏಕೆ ನೀಡಿದ್ದಾರೆ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ  ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ‘ ಇಷ್ಟು ಮೊತ್ತವನ್ನು ಕೊಡುವುದಕ್ಕೆ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ನಾವು ಹೇಳುವುದಕ್ಕಾಗುವುದಿಲ್ಲ. as , it is contract. ಪ್ರತಿ ತಿಂಗಳು ಪರಿಶೀಲನೆ ಮಾಡಬೇಕು,’ ಎಂದು ಹಾರಿಕೆ ಉತ್ತರ ನೀಡಿರುವುದು ಗೊತ್ತಾಗಿದೆ.

ಆಗ ಸಮಿತಿಯ ಸದಸ್ಯರೊಬ್ಬರು  ‘i  am not disputing about the money given I am only asking for what process the money has given to them,? ಎಂದು ಪ್ರಶ್ನಿಸಿದ್ದಾರೆ. ಆಗ ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಸಮಿತಿಯ ಅಧ್ಯಕ್ಷರು  ‘ಇದರ ಬಗ್ಗೆ ಚರ್ಚೆ ಮಾಡುವುದು ಬೇಡ. ಈಗ ರವಿಕುಮಾರ್ ಅವರು ಏನು ಪ್ರಶ್ನೆ ಕೇಳಿದ್ದಾರೆ ಅದರ ಬಗ್ಗೆ ಹೇಳಿ. ಇದರ ಬಗ್ಗೆ ಡಿಬೇಟ್‌ ಮಾಡುವುದಕ್ಕೆ  ಫ್ಲಾಟ್‌ಫಾರ್ಮ್ಸ್‌ ಬೇರೆ ಇದೆ. ಪ್ರಧಾನ ಕಾರ್ಯದರ್ಶಿಯವರೇ, ಸಮಿತಿ ಮುಂದೆ ಇರುವ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿ,’ ಎಂದು ತಾಕೀತು ಮಾಡಿರುವುದು ತಿಳಿದು ಬಂದಿದೆ.

ಆಗ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ ಅದರ ಕಂಟೆಂಟ್ ಬಗ್ಗೆ ಹಕ್ಕು ಬಾಧ್ಯತಾ ಸಮಿತಿಯಲ್ಲಿ ದಯವಿಟ್ಟು ಪ್ರಸ್ತಾಪ ಮಾಡಬೇಡಿ. It is a diffrent issue,‘ ಎಂದು ಸಮಿತಿಯನ್ನು ದಿಕ್ಕು ತಪ್ಪಿಸಲು ಯತ್ನಿಸಿರುವುದು ನಡವಳಿಯಿಂದ  ಕಂಡು ಬಂದಿದೆ. ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪದೇ ಪದೇ ಇದೇ ಉತ್ತರವನ್ನು ನೀಡಲು ಮುಂದಾದಾಗ ಸದಸ್ಯರೊಬ್ಬರು  ‘The question of this subject being brought to the Priviliege Committee is that the Department has misled the Hon’ble Member,’ ಎಂದು ಗರಂ ಆಗಿರುವುದು ಸಹ ಗೊತ್ತಾಗಿದೆ.

ಆಗ ಇಲಾಖೆಯ  ಪ್ರಧಾನ ಕಾರ್ಯದರ್ಶಿಯು ‘ ನಾವು ಉತ್ತರದಲ್ಲಿ  misled ಮಾಡಿಲ್ಲ,’ ಎಂದು ಸಮರ್ಥನೆಗಿಳಿದಾಗ ಪುನಃ ಸದಸ್ಯರೊಬ್ಬರು  ‘ಮಾಡಿದ್ದೀರಿ, ಮೂರನೇ ಪ್ರಶ್ನೆಗೆ ಉತ್ತರ ಕೊಟ್ಟಿರುವುದನ್ನು ತಾವು ಓದಿ,’ ಎಂದು ಹಿಂದಿನ ಉತ್ತರವನ್ನು ಅವರ ಮುಂದೆ ಇಟ್ಟಿರುವುದು ತಿಳಿದು ಬಂದಿದೆ.

ಆಗ ಇದಕ್ಕೆ ಸಮಜಾಯಿಷಿ ನೀಡಿದ  ಪ್ರಧಾನ ಕಾರ್ಯದರ್ಶಿಯು  ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ನಿರ್ದೇಶನದಂತೆ ಸರ್ಕಾರದ ಎಲ್ಲಾ ಸಾಧನೆ, ಯೋಜನೆಗಳ ಮಾಹಿತಿಯನ್ನು ಡಿಜಿಟಲ್ ಮಾಧ್ಯಮ ಮತ್ತು ಸಮಾಲೋಚನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಸಂಸ್ಥೆಯ ನೋಂದಾಯಿತ ವ್ಯವಹಾರ ಸಹವರ್ತಿಗಳಿಂದ ಸ್ಪರ್ಧಾತ್ಮಕ ದರಗಳನ್ನು ಪಡೆದು ಕಡಿಮೆ ದರವನ್ನು ಸಲ್ಲಿಸಿರುವ ಕಂಪನಿಯಾದ ದ ಪಾಲಿಸಿ ಫ್ರಂಟ್‌ ಪ್ರಸ್ತಾವನೆಯನ್ನು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಗೆ 2023ರ ಆಗಸ್ಟ್‌ 24ರಂದು ಸಲ್ಲಿಸಲಾಗಿರುತ್ತದೆ. It is factual information,’ ಎಂದು ಪುನಃ ಸಮರ್ಥನೆಗಿಳಿದಿದ್ದರು.

ಆದರೆ ಈ ಸಮರ್ಥನೆಯನ್ನು ಸಮಿತಿ ಸದಸ್ಯರು ಒಪ್ಪಿಲ್ಲ. ಬದಲಿಗೆ  ‘ಸರ್ಕಾರದ ಎಲ್ಲಾ  ‘ಸಾಧನೆ ಮತ್ತು ಯೋಜನೆಗಳ ಪ್ರಚಾರಕ್ಕೋಸ್ಕರ’ ಎಂದು ಉತ್ತರದಲ್ಲಿ ಕೊಟ್ಟಿದ್ದೀರಿ. ನೀವು ಉತ್ತರದಲ್ಲಿ ಕೊಟ್ಟಿರುವುದರಲ್ಲೇ ತಪ್ಪುಗಳಿವೆ,’ ಎಂದು ಎತ್ತಿ ತೋರಿಸಿರುವುದು ತಿಳಿದು ಬಂದಿದೆ. ಆಗ  ಪ್ರಧಾನ ಕಾರ್ಯದರ್ಶಿಯು ‘ ನಾವು ವರ್ಕ್‌ ಆರ್ಡರ್‍‌ ಕೊಟ್ಟಿರುವ ಬಗ್ಗೆ ಮಾತ್ರ ನಾನು ಹೇಳುತ್ತಿದ್ದೇನೆ. ಕೆಲಸ ಸಮಾಧಾನಕರವಾಗಿ ಮಾಡಿದ್ದಾರೆಯೋ ಇಲ್ಲವೋ ಎಂದು ಪ್ರತಿ ತಿಂಗಳು ರಿವ್ಯೂ ಮಾಡುವುದು ಬೇರೆ ವಿಷಯ.ಅದಕ್ಕೆ ಇದಕ್ಕೆ ಲಿಂಕ್ ಮಾಡಬೇಡಿ,’ ಎಂದು ಕೋರಿಕೊಂಡರು.

ಮಹಿಳಾ ಸದಸ್ಯರೊಬ್ಬರು  ‘ಜನರ ತೆರಿಗೆಯ ಹಣ ಪೋಲು ಮಾಡಿದ್ದಾರೆ ಎಂದು ರವಿಕುಮಾರ್ ಅವರು ಹೇಳಿದ್ದಾರೆ. ಈ ಕಂಪನಿ ಎಲ್ಲಿದೆ ಎಂಬುದು ಗೊತ್ತಿಲ್ಲ. ಈ ಕಂಪನಿಯ ವಿಳಾಸ ಇದ್ದರೆ ಆ ಕಂಪನಿಗೆ ನಾವು ಭೇಟಿ ಕೊಡೋಣ. ಈ ಕಂಪನಿ ಅಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡೋಣ,’ ಎಂದು ಸಮಿತಿ ಗಮನಕ್ಕೆ ತಂದಿದ್ದರು ಎಂದು ನಡವಳಿಯಿಂದ ಗೊತ್ತಾಗಿದೆ.

ಆಗ ಮತ್ತೊಬ್ಬ ಸದಸ್ಯರು ‘ ಅಧ್ಯಕ್ಷರೇ ಜಿಎಸ್‌ಟಿ ನೋಂದಣಿಯಾಗಿದೆ ಹಾಗೂ change of address ಆಗಿರುವುದರಿಂದ ಮೆನ್ಷನ್‌ ಆಗಿಲ್ಲ ಎಂದು ಹೇಳುತ್ತಿದ್ದಾರೆ. 2025ರ ಮೇ 21ರಂದು ಪ್ರಾರಂಭವಾದ ಕಂಪನಿಗೆ ಯಾವುದೇ ಅನುಭವ ಇಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಕಂಪನಿಯುವರು ನೀಡಿರುವ ಲೆಟರ್ ಆಫ್‌ ಅಂಡರ್‍‌ ಟೇಕಿಂಗ್‌ ಪತ್ರವನ್ನೇ ದಾಖಲೆ ಎಂಬುದಾಗಿ ಸಲ್ಲಿಸಿರುವುದಕ್ಕೆ ಎಂದು ಪ್ರಶ್ನೆ ಇದೆ. ಅದಕ್ಕೆ ಅವರು already registred start-up companies ಗೆ eligibility ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ,’ ಎಂದು ಚರ್ಚೆಯನ್ನು  ಮುಂದುವರೆಸಿರುವುದು ತಿಳಿದು ಬಂದಿದೆ.

ಈ ಚರ್ಚೆಯಲ್ಲಿ ಭಾಗಿಯಾಗಿದ್ದ ಮಹಿಳಾ ಸದಸ್ಯರೊಬ್ಬರು  ‘start-up companies ಗೆ eligibility ಕೊಟ್ಟಿದ್ದರೇ ಒಡಂಬಡಿಕೆಯ ಪತ್ರ ಕೊಡಬೇಕಲ್ಲವೇ? ಅವರು ನಮಗೆ ಕೊಟ್ಟಿಲ್ಲ. start-up companies ಗೆ eligibility ಕೊಡಬಹುದು ಎಂದು ಯಾವಾಗ ಆದೇಶ ಬಂದಿದೆ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ನೀಡಿದ್ದ ಉತ್ತರವನ್ನು ಪರಿಶೀಲಿಸಿದ್ದ ಸದಸ್ಯರೊಬ್ಬರು  ‘ಎಂ.ಡಿ.ಯವರು ಹೇಳಿದ್ದು, ನೀವು ಹೇಳಿದ್ದು ಎರಡು contradictory ಇದೆ. ಇಂತಹ ಸಂಸ್ಥೆಯ ಮೂಲಕ ಇದನ್ನು ಮಾಡಿ ಎಂದು ನಮಗೆ ಮೇಲುಗಡೆಯಿಂದ ಆದೇಶ ಬಂತು, ನಾವು ಆ ಪ್ರಕ್ರಿಯೆಯನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ,’ ಎಂದು ಕುಟುಕಿರುವುದು ನಡವಳಿಯಿಂದ ಕಂಡು ಬಂದಿದೆ.

ಇದನ್ನು ತಳ್ಳಿ ಹಾಕಿದ್ದ ಕೆಎಸ್ಎಂಸಿಎಲ್‌ನ  ವ್ಯವಸ್ಥಾಪಕ ನಿರ್ದೇಶಕರು ‘ ನಾನು ಆ ರೀತಿ ಹೇಳಿಲ್ಲ. ಹಿಂದಿನ ಸಮಿತಿಯಲ್ಲಿ ನಾನು ಮೂರು quotations ಗಳನ್ನು ತಂದು ಅದರ ಪೈಕಿ lowest quotation ನ ಪ್ರಕಾರ ಸದರಿ ಕಂಪನಿಗೆ ನೀಡಲಾಗಿದೆ,’ ಎಂದು ಸಮರ್ಥನೆಗಿಳಿದಿದ್ದರು. ಆಗ ಸದಸ್ಯರೊಬ್ಬರು  ‘ನೀವು ಹಿಂದಿನ ಸಮಿತಿಯ ನಡವಳಿಯನ್ನು ತೆಗೆದು ನೋಡಿ. ನಾನ್ಯಾಕೆ ನಿಮ್ಮ ಮೇಲೆ ಸುಮ್ಮನೆ ಆಪಾದನೆ ಮಾಡಲಿ,’ ಎಂದು ಹೇಳಿರುವುದು ತಿಳಿದು ಬಂದಿದೆ.

ಇಲಾಖೆಯ  ಪ್ರಧಾನ ಕಾರ್ಯದರ್ಶಿಯು ‘ಕೆಎಸ್‌ಎಂಸಿಎನ RFQ (Request for Qualification) ಡಾಕ್ಯುಮೆಂಟ್‌ನಲ್ಲಿ ಸ್ಪಷ್ಟವಾಗಿ ಇದೆ. ಕಂಪನಿಯ ಹಿಂದಿನ ಅನುಭವ ಮತ್ತು ಟರ್ನ್‌ಓವರ್‍‌ ಬಗ್ಗೆ ವಿನಾಯಿತಿ ಕೊಡುವುದಕ್ಕೆ ಯಾವ ರೀತಿ ಕೊಡಬೇಕು ಎಂದು ಇದೆ,’ ಎಂದು ಓದಿದರು. ಇಲಾಖೆಯ ಈ ಉತ್ತರದಿಂದ ಸಮಾಧಾನಗೊಳ್ಳದ ಸದಸ್ಯರೊಬ್ಬರು  ‘ನಾನು  ಕೇಳಿರುವುವುದೇನಂದರೇ ಆ ಕಂಪನಿಯೇ ಡಿಸೈಡ್‌ ಮಾಡಿದೆ. ಇದರಲ್ಲಿ ವಿನಾಯಿತಿ ಕೊಟ್ಟಿರುವುದು ಬಿಟ್ಟರೇ ಸರ್ಕಾರದ್ದೇನೂ ಪಾತ್ರ ಇಲ್ಲ. it has been completely done by K S M C A ಎಂದು ನೀವು ಹೇಳುತ್ತಿದ್ದೀರಿ. ಕಳೆದ ಸಲ ನಮ್ಮ ಪ್ರಶ್ನೆ ಇದ್ದದ್ದು ಏನಂದರೇ ನೀವು ಈ ತರಹದ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮಾನದಂಡ ಏನು ಇತ್ತು ಎಂದು ಕೇಳಿದ್ದಾಗ, ಇದು ನನಗೆ ಸರ್ಕಾರದಿಂದಲೇ ಬಂದಿರುವಂಥದ್ದು, ಸರ್ಕಾರದಿಂದ ಬಂದಿರುವುದರಲ್ಲಿ ಮೂರು ವ್ಯಕ್ತಿಗಳ ಸಂಸ್ಥೆಗಳು ಬಂದಿತ್ತು. ಅದರಲ್ಲಿ ಯಾರದ್ದು ಕಡಿಮೆ ಮೊತ್ತ ಇತ್ತು ಅವರಿಗೆ ನಾವು ಸಂಧಾನ ಮಾಡಿ ಕೊಟ್ಟಿದ್ದೇವೆ ಎಂದು ಹೇಳಿದ್ದೀರಿ,’ ಎಂದು ಹಿಂದಿನ ಸಭೆಯಲ್ಲಿ ಇಲಾಖೆಯು  ನೀಡಿದ್ದ ಉತ್ತರವನ್ನು  ಪುನರುಚ್ಛರಿಸಿರುವುದು ಗೊತ್ತಾಗಿದೆ.

ಆದರೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು  ‘ಆ ರೀತಿ ಅವರು ಹೇಳಿಲ್ಲ. ನಾನು ಪೂರ್ತಿ ನಡವಳಿಯನ್ನು ಓದಿದ್ದೇನೆ. ನಡವಳಿಯಲ್ಲಿ ಅದು ಇಲ್ಲ,’ ಎಂದು ಕೆಎಸ್‌ಎಂಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರ ಪರ ವಕಾಲತ್ತು ಹಾಕಿದ್ದರು.

ಆಗ ಸದಸ್ಯರೊಬ್ಬರು  ‘ಇದು start-up company ಗೆ ವಿನಾಯಿತಿ ಕೊಡಬೇಕು ಎಲ್ಲವೂ ಸರಿ. ಯಾವುದೇ ಅನುಭವ ಇಲ್ಲದೆಯೇ ಇದ್ದರೂ  ಸೆಕ್ಷನ್‌ 4 ಜಿ ವಿನಾಯಿತಿ ಹೇಗೆ ಕೊಡಲು ಸಾಧ್ಯ? The M D agreed on record that, the so-and-so partenr was working in the oppoisition leaders office. As, the partner was an employee in the former opposition leaders office, that was merit to consider him, and he was also National Law School Alumnus. Hence it ias been considered to give him the exemption ಎಂದು ಹಿಂದಿನ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ನಮ್ಮ ಪ್ರಶ್ನೆ ಏನಂದರೇ ಒಬ್ಬ ಪಾರ್ಟನರ್‍‌ ಮಾಜಿ ವಿರೋಧ ಪಕ್ಷದ ನಾಯಕರ ಬಳಿ ಕೆಲಸ ಮಾಡಿದ್ದಾರೆ ಎನ್ನುವ ಮಾನದಂಡದಲ್ಲಿ ಇಷ್ಟು ದೊಡ್ಡ ಗುತ್ತಿಗೆಯನ್ನು ನೀವು ಕೊಡುವುದಾದರೇ ಹೇಗೆ,’ ಎಂದು ಪ್ರಶ್ನಿಸಿರುವುದು ತಿಳಿದು ಬಂದಿದೆ.

ಇದಕ್ಕೆ ಸ್ಪಷ್ಟೀಕರಣ ನೀಡಲು ಯತ್ಬಿಸಿದ ಇಲಾಖೆಯ  ಪ್ರಧಾನ ಕಾರ್ಯದರ್ಶಿಯು ‘ ಸಮಿತಿಯು RFQ ನಲ್ಲಿ  Firmexperience and turnover ಬಗ್ಗೆ ಏನಿದೆ ಎಂದು ಕೇಳಿದ್ದೀರಿ. ಆದರೆ ಅದರಲ್ಲಿ individual experience or turnvoer ಯಾವುದು ಕೇಳಿಲ್ಲ. ಅವರು ಈಗಾಗಲೇ ಕೆಲಸ ಮಾಡಿದ್ದಾರೆ ಹಾಗೂ ಅದನ್ನು ಉಪಯೋಗಿಸಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು, this is the individual opinion of M D. As an institution the ksmca has invited applications from firms wiht three years of experience and prescribed turnove. For which there is an exemption in the RFQ OF KSMCA. The company has to make the presentation to KSMSCA AND In the event that KSMCA IS Satisfied, the company can provide the requested service ಎಂಬ Exemption ನ್ನು ಉಪಯೋಗಿಸಿಕೊಂಡಿದ್ದಾರೆ. The KSMSCA has selected the vendor but the section  4 g exemption ನ್ನು D I P R ನಿಂದ particular activity ಗೆಂದು ಕೊಡುತ್ತಾರೆ. ಸದರಿ activity  ಅನ್ನು ಬಂದಿರುವ ಬಿಡ್‌ದಾರರಲ್ಲಿ ಯಾರಿಂದ ಮಾಡಿಸಬೇಕು ಎಂದು ಕೆಎಸ್‌ಎಂಸಿಎನವರು ತೀರ್ಮಾನ ಮಾಡುತ್ತಾರೆ. ಕೆಎಸ್ಎಂಸಿಎ ಅವರು ಆಗ quatations call ಮಾಡಿರುತ್ತಾರೆ, ಬಂದಿರುವಂತಹ quatations ನಲ್ಲಿ ಕಡಿಮೆ ಮೊತ್ತ ಯಾರು ಕೊಟ್ಟಿದ್ದಾರೆಯೋ ಅವರಿಗೆ ಆರ್ಡರ್‍‌ ಕೊಟ್ಟಿದ್ದಾರೆ. ಆರ್ಥಿಕ ಇಲಾಖೆಯಿಂದ 4 ಜಿ ವಿನಾಯಿತಿ ಪಡೆದುಕೊಂಡಿದ್ದಾರೆ,’ ಎಂದು ವಿವರಿಸಿರುವುದು ಗೊತ್ತಾಗಿದೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಸದಸ್ಯರೊಬ್ಬರು  ‘ಅದನ್ನು identify ಮಾಡುವುದಕ್ಕಿಂತ ಮುಂಚೆಯೇ ಈ activity ಗೆ 4 ಜಿ exemption blanket ಕೊಟ್ಟುಬಿಟ್ಟಿದಾರೆ. ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಸಂಬಂಧಪಟ್ಟಂತೆ 99 ಲಕ್ಷ ರುಪಾಯಿಗಳವರೆಗೆ 4 ಜಿ ವಿನಾಯಿತಿ ಇದೆ ಎಂದು ಕೊಟ್ಟಿದ್ದಾರೆ. with regard to ksmca, you have already decided that there should be an exemption  under section 4 g for any participating agency that there should be an exemption under section 4 g for any participating agency up to 99..12 lakhs. ಇದರ ಮೇಲೆ ಯಾರು ಬರುತ್ತಾರೆ ಅವರಿಗೆ ಸೆಕ್ಷನ್‌ 4 ಜಿ ವಿನಾಯಿತಿ ಬಳಸಿಕೊಂಡು ಅರನನು ಆಯ್ಕೆ ಮಾಡಬಹುದೆಂದು 2023ರ ಜುಲೈ 31ರಂದೇ ಆದೇಶ ಮಾಡಿ ಕೊಟ್ಟಿದ್ದೀರಿ,’ ಎಂದು ಗಮನಸೆಳೆದಿರುವುದು ನಡವಳಿಯಿಂದ ತಿಳಿದು ಬಂದಿದೆ.

ಆಗ ಇಲಾಖೆಯ  ಪ್ರಧಾನ ಕಾರ್ಯದರ್ಶಿಯು ‘ ವಾರ್ತಾ ಇಲಾಖೆಯಿಂದ ಈ ಆಕ್ಟಿವಿಟಿ ಮಾಡುವುದಕ್ಕೆ ಕೆಎಸ್‌ಎಂಸಿಎ ಗೆ 4 ಜಿ ವಿನಾಯಿತಿ ಮಾಡಿಸಿ ಕೊಟ್ಟಿದಾರೆ. ಕೆಎಸ್‌ಎಂಸಿಎನ ಎಂಪ್ಯಾನಲ್ ಮಾಡುವ ಪ್ರೊಸೀಜರ್‍‌ ಯಾವ ರೀತಿಯಿದೆ ಎಂಬುದನ್ನು ನಾನು ಹೇಳಿದ್ದು. ಅವರು ಅದನ್ನು  ಮಾಡಿದ ಮೇಲೆ lowest bidder ಗೆ ವರ್ಕ್ ಆರ್ಡರ್ ಅನ್ನು ಕೊಡಬೇಕು. ಅದರಂತೆ ದ ಪಾಲಿಸಿ ಫ್ರಂಟ್‌ಗೆ ವರ್ಕ್ ಆರ್ಡರ್‍‌ ಕೊಟ್ಟಿದ್ದಾರೆ,’ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

ಈ ಸಮಜಾಯಿಷಿಯನ್ನೂ ಒಪ್ಪದ ಸದಸ್ಯರೊಬ್ಬರು  ‘ನಾನು ಕೇಳುತ್ತಿರುವುದೇನಂದರೇ ನಿಮ್ಮ ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ನಕಲ್ಲಿ ಸರ್ಕಾರದ ಕಾರ್ಯಕ್ರಮಗಳ ಉದ್ದೇಶದ ಜತೆ ಜತೆಗೆ ಟೀಕೆ-ಟಿಪ್ಪಣಿ ಮಾಡುವಂತಹದ್ದಕ್ಕೂ ಕೂಡ ಈ ಏಜೆನ್ಸಿಗೆ ನಮ್ಮ ವರ್ಕ್‌ ಲಿಸ್ಟ್‌ನಲ್ಲಿ ಇದೆ ಎನ್ನುವಂತಹದ್ದನ್ನು ನೀವು ಸೇರಿಸಿದ್ದೀರಾ? ನೀವು ಟೀಕೆ-ಟಿಪ್ಪಣಿ ಮಾಡುವಂತಹದ್ದನ್ನು ಟ್ವಿಟರ್‍‌, ಫೇಸ್‌ಬುಕ್‌ ಮೂಲಕ ವಾಟ್ಸಾಪ್‌ ಚಾನಲ್ ಮೂಲಕ ಅದನ್ನು ಕೂಡ ಮಾಡಬೇಕೆನ್ನುವುದು ನಿಮ್ಮ ಕಾರ್ಯಾದೇಶದಲ್ಲಿ ಇದೆಯೇ? ಅದನ್ನು ನೀವು ಈಗ ಕೊಟ್ಟರೇ ನಾನು ಅದನ್ನು ವೆರಿಫೈ ಮಾಡುತ್ತೇನೆ. ನೀವು ಏನು ಹೇಳುತ್ತೀರಿ ಎಂದರೇ this is not the subject matter of this committee and whether it comes under the purvied of this committee or do we have to do something else; that is also debatable question ಎಂದು ಹೇಳಿರುವುದು ತಿಳಿದು ಬಂದಿದೆ.

ಆಗ ಮತ್ತೊಬ್ಬ ಸದಸ್ಯರೊಬ್ಬರು  ‘ ಇಲ್ಲ, ಇದು ಮೊದಲನೆಯ ಪ್ರಶ್ನೆಯಲ್ಲಿ  ಇರುತ್ತದೆ. ಈ ಕಂಪನಿಗೆ 50 ಕೋಟಿ ಮೊತ್ತವನ್ನು ಯಾವ ಕಾರಣಕ್ಕಾಗಿ ನೀಡಲಾಗಿದೆ ಎಂದು ಕೇಳಿದ್ದಾರೆ. ಅದಕ್ಕೆ ನೀವು ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡಲಿಕ್ಕೆ ಎಂದು ಉತ್ತರ ಕೊಟ್ಟಿದ್ದೀರಿ. ಅದರ ಪ್ರಕಾರ ಈ ಕೆಲಸ ಆಗಿದೆಯೇ ಎಂದು ಕೇಳಲಿಕ್ಕೆ ಬಯಸುತ್ತೇನೆ. ಈ ವಿಚಾರ ಚರ್ಚೆ ಮಾಡಲಿಕ್ಕೆ ನಮಗೆ ಅಧಿಕಾರ ಇದೆ,’ ಎಂದು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

Hot this week

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ...

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...
Please Scan to make Your Contribution

Topics

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ...

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

Related Articles

Popular Categories

error: Content is protected !!