ಬೆಂಗಳೂರು; ಪಾಲಿಸಿ ಫ್ರಂಟ್ ಗೆ 7.20 ಕೋಟಿ ಮೊತ್ತದ ಗುತ್ತಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಟರ್ಮ್ಸ್ ಆಫ್ ಕಾಂಟ್ರಾಕ್ಟ್ ಮಾಡಿಕೊಂಡಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧೀನದಲ್ಲಿರುವ ಕೆಎಸ್‌ಎಂಸಿಯು ಹೇಳಿಕೆ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ವಿಧಾನಪರಿಷತ್ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ಹಕ್ಕುಚ್ಯುತಿ ಎಸಗಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಈ ಸಂಬಂಧ ಹಕ್ಕುಬಾಧ್ಯತೆ ಸಮಿತಿಯ ಮುಂದೆ ಕೆಎಸ್‌ಎಂಸಿಯು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
ಯಾವುದೇ ಟರ್ಮ್ಸ್ ಆಫ್ ಕಾಂಟ್ರಾಕ್ಟ್ ಮಾಡಿಕೊಳ್ಳದೆಯೇ ಪಾಲಿಸಿ ಫ್ರಂಟ್‌ಗೆ ವಾರ್ಷಿಕ 7.20 ಕೋಟಿ ರು ಮೊತ್ತದಲ್ಲಿ ಗುತ್ತಿಗೆ ನೀಡಿ ಕಾರ್ಯಾದೇಶ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಅಲ್ಲದೇ ಇದೇ ವಿಚಾರದಲ್ಲಿ ಸಾರ್ವಜನಿಕರ ತೆರಿಗೆ ಹಣವು ಪೋಲಾಗುತ್ತಿದೆ ಮತ್ತು ಪರೋಕ್ಷವಾಗಿ ಇದು ಲಂಚದ ರೂಪದಲ್ಲಿದೆ ಎಂದು ಹಕ್ಕು ಬಾಧ್ಯತೆ ಸಮಿತಿ ಸದಸ್ಯರೊಬ್ಬರು ಸಭೆಯಲ್ಲಿಯೇ ಅಭಿಪ್ರಾಯಿಸಿರುವುದು ಸಹ ಅನುಮಾನಗಳನ್ನು ಬಲಪಡಿಸಿದಂತಾಗಿದೆ.
ಈ ಪ್ರಕರಣದ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಅಧ್ಯಕ್ಷತೆಯ ಹಕ್ಕು ಬಾಧ್ಯತೆ ಸಮಿತಿಯು 2026ರ ಏಪ್ರಿಲ್ 23ರಂದು ಶಾಸಕರ ಭವನದಲ್ಲಿ ಸಭೆ ನಡೆಸಿತ್ತು. ಪಾಲಿಸಿ ಫ್ರಂಟ್ ಗೆ 7.20 ಕೋಟಿ ರು ಮೊತ್ತದ ಗುತ್ತಿಗೆ ನೀಡಿರುವ ಹಿಂದಿನ ಎಲ್ಲಾ ಪ್ರಕ್ರಿಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿದೆ. ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಸಭೆಯಲ್ಲಿ ಸದಸ್ಯರೊಬ್ಬರು ‘ಅಧ್ಯಕ್ಷರೇ ಯಾವ ಕಾರಣಕ್ಕಾಗಿ ಯಾವ ಉದ್ದೇಶಕ್ಕಾಗಿ ಈ ಹಣವನ್ನು ನೀಡಲಾಗಿದೆ ಎಂದು ನಾವು ಪ್ರಶ್ನೆಯನ್ನು ಕೇಳಿದ್ದೇವೆ. ಅದಕ್ಕೆ ಉತ್ತರವಾಗಿ ಸರ್ಕಾರದ ಸಾಧನೆ, ಯೋಜನೆಗಳ ಉದ್ದೇಶಕ್ಕಾಗಿ ನೀಡಲಾಗಿದ ಎಂದು ಅವರು ಹೇಳಿದ್ದಾರೆ. ಈ ಯೋಜನೆಗಳ ಮಾಹಿತಿಯನ್ನು ಡಿಜಿಟಲ್ ಮಾಧ್ಯಮ ಮತ್ತು ಸಮಾಲೊಚನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಕೊಟ್ಟಿದ್ದಾರೆ. ಅವರು ಏನು ಕೆಲಸ ಮಾಡಿದ್ದಾರೆಂದು ನೀವು ನೋಡಬೇಕಲ್ಲವೇ,’ ಎಂದು ಕೇಳಿರುವುದು ನಡವಳಿಯಿಂದ ಗೊತ್ತಾಗಿದೆ.
ಇದಕ್ಕೆ ಉತ್ತರಿಸಿದ್ದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ‘ನಾನು ಹೇಳಿಕೆಯ ಬಗ್ಗೆ ಹೇಳುತ್ತಿಲ್ಲ. We have not Committed any breach of privilege. ನಾನು ಅಷ್ಟು ಮಾತ್ರ ಹೇಳುತ್ತಿದ್ದೇನೆ. ಸದಸ್ಯರು ಏನು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಸರ್ಕಾರದ ವತಿಯಿಂದ ಉತ್ತರವನ್ನು ಕೊಟ್ಟಿದ್ದೇವೆ. ಅದರಲ್ಲಿ ಸದಸ್ಯರ ಯಾವುದೇ ಹಕ್ಕುಗಳನ್ನು ಉಲ್ಲಂಘಿಸಿರುವುದಿಲ್ಲ ಎಂದು ನಾನು ಹೇಳಲಿಕ್ಕೆ ಬಯಸುತ್ತೇನೆ. ಆದರೆ ತಾವು ಹೇಳುತ್ತಿರುವುದು ಏನಿದೆ that is different issue,’ ಎಂದು ಸಭೆಯ ಗಮನವನ್ನು ಬೇರೆಡೆಗೆ ಸೆಳೆದಿರುವುದು ನಡವಳಿಯಿಂದ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಇದಕ್ಕೆ ತಕರಾರು ಎತ್ತಿದ ಸದಸ್ಯರೊಬ್ಬರು ‘ನೀವು ಎರಡು ಸಂಶಯಗಳಿಗೆ ಸಂಬಂಧಪಟ್ಟಂತೆ ಉತ್ತರವನ್ನು ಕೊಟ್ಟಿದ್ದೀರಿ. ನಮ್ಮ ಮುಂದಿನ ಪ್ರಶ್ನೆ ಏನೆಂದರೇ ಈ ಯೋಜನೆಯ ಸಂಬಂಧ ನೀವುಗಳು ಹಣವನ್ನು ಕೊಡುತ್ತಿದ್ದೀರಿ. ಅದು ಸರಿಯಾಗಿ ಉಪಯೋಗವಾಗುತ್ತಿದೆಯೇ ಎನ್ನುವುದರ ಕುರಿತು ನಾವು ದಾಖಲಾತಿಗಳನ್ನು ನೋಡಿದಾಗ ಅದು ಸರಿಯಾಗಿ ಉಪಯೋಗವಾಗಿಲ್ಲ ಎನ್ನುವುದು ತಿಳಿದು ಬರುತ್ತದೆ. ಈ ರೀತಿಯಾದಾಗ ಹಕ್ಕುಚ್ಯುತಿ ಆಗಿರುವುದಿಲ್ಲವೇ? ನೀವು ನಮ್ಮ ಪ್ರಶ್ನೆಗೆ ಉತ್ತರವನ್ನು ಕೊಟ್ಟು ಸುಮ್ಮನಾಗಿದ್ದೀರಿ. ಆದರೆ ಪ್ರಶ್ನೆಯನ್ನು ಕೇಳಿ ನಾವು ಸುಮ್ಮನೆ ಕುಳಿತುಕೊಳ್ಳಲಿಕ್ಕೆ ಆಗುವುದಿಲ್ಲ. ಸರ್ಕಾರದ ಹಣ ಪೋಲಾಗುತ್ತಿದೆ ಎಂದು ನಾವು ಹೇಳಬೇಕಲ್ಲವೇ.’? ಎಂದು ಮರು ಪ್ರಶ್ನಿಸಿರುವುದು ಗೊತ್ತಾಗಿದೆ.
ಆದರೂ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ಈ ಬಗ್ಗೆ ಪ್ರಶ್ನೆ ಏನಿತ್ತು, ಅದಕ್ಕೆ ಸಂಬಂಧವಾಗಿ ಪತ್ರದಲ್ಲಿ ಉತ್ತರ ಕೊಡಲಾಗಿದೆ,’ ಎಂದು ತಮ್ಮ ಉತ್ತರವನ್ನೇ ಮತ್ತೊಮ್ಮೆ ಪುನರುಚ್ಛರಿಸಿದರು.
ಆಗ ಮತ್ತೊಬ್ಬ ಸದಸ್ಯ ‘ಸದಸ್ಯರು ಎರಡು ಪ್ರಶ್ನೆಗಳನ್ನು ರೈಸ್ ಮಾಡಿದ್ದಾರೆ. ಮೊದಲನೆ ಪ್ರಶ್ನೆ ಏನಂದರೇ ಜಿಎಸ್‌ಟಿ ಇಲ್ಲದೇ ನೀವು ಹೇಗೆ ಕೊಟ್ಟಿದ್ದೀರಿ ಎಂದು ಕೇಳಿದ್ದಾರೆ. ಅದಕ್ಕೆ ಅವರು ಏನು ಹೇಳಿದ್ದಾರೆಂದರೇ ಆಗ ನಾವು ಜಿಎಸ್‌ಟಿ ಮಾಡಿಸದ್ದೇವೆ. ಆ ಸಂಬಂಧ 2ನೇ ಉಪ ಪ್ರಶ್ನೆ ಏನಿದೆ ಎಂದರೇ ಇದನ್ನು 2023ರ ಮೇ 21ರಂದು ಯಾವುದೇ ಅನುಭವ ಇಲ್ಲವೆಂಬುದಕ್ಕೆ ಸಂಬಂಧಪಟ್ಟಂತೆ ಏನು ವಿಚಾರ ಇದೆ ಅದು ಕ್ಲಿಯರ್ ಆಯಿತು. ಇನ್ನು 3ನೇ ವಿಷಯದ ಪ್ರಶ್ನೆ ಏನಿದೆ ಎಂದರೇ ಇದು ಎಲ್ಲೋ ಒಂದು ಕಡೆ smell ಬರುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ನಾವು ಮಾತನಾಡಬಹುದೇ ಎನ್ನುವುದರ ಬಗ್ಗೆ ಕೇಳಬೇಕು,’ ಎಂದು ಸಭೆಯಲ್ಲಿ ಕೇಳಿರುವುದು ತಿಳಿದು ಬಂದಿದೆ.
ಸಮಿತಿಯ ಮತ್ತೊಬ್ಬ ಸದಸ್ಯರೊಬ್ಬರು ‘ ಹಕ್ಕುಚ್ಯುತಿ ಬಗ್ಗೆ ಎನ್ ರವಿಕುಮಾರ್ ಅವರು ಹೇಳಬೇಕು. ಇದನ್ನು ಇ-ಟೆಂಡರ್ ನೀಡುವ ಮೂಲಕ ಜನರ ತೆರಿಗೆ ಹಣವನ್ನು ಪೋಲು ಮಾಡಿರುವುದಲ್ಲದೇ ತೆರಿಗೆ ಹಣವನ್ನು ಪರೋಕ್ಷವಾಗಿ ಲಂಚದ ರೂಪದಲ್ಲಿ ಸಂಗ್ರಹಿಸುತ್ತಿರುವುದು ಸ್ಪಷ್ಟವಾಗಿರುತ್ತದೆ. ಇದರಿಂದ ರಾಜ್ಯದ ಜನರಿಗೆ ಮತ್ತು ಸದನಕ್ಕೆ ಮಾಡಿರುವಂತಹ ವಂಚನೆಯಾಗಿರುತ್ತದೆ. ಈ ರೀತಿಯಲ್ಲಿ ಸಭಾಪತಿಯವರಿಗೆ ಕೊಟ್ಟಿರುವ ಪತ್ರದಲ್ಲಿ ಹೇಳಿದ್ದಾರೆ,’ ಎಂದು ಸಭೆ ಗಮನ ಸೆಳೆದರು.
ಇದಕ್ಕೂ ಸರಿಯಾದ ಉತ್ತರ ನೀಡದ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಆ ವಿಷಯಕ್ಕೆ ಸಂಬಂಧಿಸಿದಂತೆ ನಾವು factual information ಕೊಟ್ಟಿದ್ದೇವೆ. ಇದು ಮುಂದುವರೆದ ಕೆಲಸವಾಗಿದೆ. ಈ ತಿಂಗಳಿನಲ್ಲಿ ಆಗಿರಬಹುದು. ಮುಂದಿನ ತಿಂಗಳಲ್ಲಿ ಆಗದೇ ಇರಬಹುದು. That is an ongoing debate,’ ಎಂದಿರುವುದು ನಡವಳಿಯಿಂದ ತಿಳಿದು ಬಂದಿದೆ. ಆಗ ಸದಸ್ಯರು ‘ಕೆಲವು ಕಡೆ ತಪ್ಪಾಗಿದೆ ಎಂದು ನಾವು ಹೇಳುತ್ತಿರುವುದಾಗಿದೆ,’ ಎಂದು ತಮ್ಮ ಅಭಿಪ್ರಾಯ ದಾಖಲಿಸಿರುವುದು ಗೊತ್ತಾಗಿದೆ.
ಇದಕ್ಕೆ ಉತ್ತರ ನೀಡಲು ಮುಂದಾದ ಪ್ರಧಾನ ಕಾರ್ಯದರ್ಶಿಯು ‘ಗೊತ್ತಿದ್ದು ತಪ್ಪಾಗಿದೆ ಎಂದು ನಾವು ವಾದ ಮಾಡುತ್ತಿದ್ದೇವೆ. ಅವರು ಏನು ಕೆಲಸ ಮಾಡಬೇಕಾಗಿತ್ತು, ಅದನ್ನು ಮಾಡಿಲ್ಲವೆಂದರೇ ಇದು ತಪ್ಪಾಗಿದೆ ಎಂದು ಹೇಳಬಹುದು. ಏನು ವರ್ಕ್ ಆರ್ಡರ್ ಕೊಟ್ಟಿದ್ದೇವೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಸರ್ಕಾರದ ಎಲ್ಲಾ ಸಾಧನೆ, ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿಲ್ಲ. ಹೀಗಾಗಿ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ತಾವುಗಳು ಹೇಳುತ್ತಿದ್ದೀರಿ. ಅದರ ಕೆಲಸ ಬಗ್ಗೆ performance ಬಗ್ಗೆ ಹೇಳುತ್ತಿದ್ದೀರಿ,’ ಎಂದು ಚರ್ಚೆಯನ್ನು ವಿಸ್ತರಿಸಿದರು.
ಆಗ ಸದಸ್ಯರೊಬ್ಬರು ‘ಈಗ ಅವರು ಏನು ಹೇಳಿದರು. that’s exactly the crux of why this subject has come to Privileges committee. ಅವರು ಏನು ಪ್ರಶ್ನೆ ಕೇಳಿದ್ದಾರೆ ಅದಕ್ಕೆ ನಾವು ಉತ್ತರವನ್ನು ಕೊಟ್ಟಿದ್ದೇವೆ ಎಂದು ಹೇಳಿದರು. ಆ ಉತ್ತರದ ಮೇಲೆ ನಮಗೆ ಸರ್ಕಾರದ ಕಡೆಯಿಂದ ಸಮಗ್ರವಾದ ಮಾಹಿತಿ ಬಂದಿರುವುದಿಲ್ಲ. ಅವರು ಸ್ಪೆಸಿಫಿಕ್ ಆಗಿ ಈ ಪ್ರಕರಣವನ್ನು ಉಲ್ಲೇಖ ಮಾಡಿ ಹಣ ಇದರಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ಹೇಳಿ ಪ್ರಶ್ನೆಯಲ್ಲಿ ಕೇಳಿರುವುದಿಲ್ಲ. ಆದರೆ ಕೊಟ್ಟಂತಹ ಉತ್ತರದಲ್ಲಿ ಏನಿದೆ ಎಂದರೇ ಆ ಉತ್ತರ ಸೂಕ್ತವಾಗಿಲ್ಲ ಮತ್ತು ಇದು ನನಗೆ ಗೊತ್ತಿದ್ದು ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ…,’ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ ಇದು ಸೂಕ್ತವಾಗಿಲ್ಲವೆಂದು ಹೇಳಿ. ಈಗ ತಾವು ತೀರ್ಮಾನ ಮಾಡಿ. ಇದರಲ್ಲಿ ಪ್ರಶ್ನೆ ಮತ್ತು ಉತ್ತರವನ್ನು ಹೋಲಿಕೆ ಮಾಡಿ. ಆಗ ಯಾವುದರಲ್ಲಿ ತಪ್ಪು ಮಾಡಿದ್ದೇವೆಂದು ಗೊತ್ತಾಗುತ್ತದೆ. ಈ ಬಗ್ಗೆ ಇಲ್ಲಿ ಎಲ್ಲಿಯೂ ಹೇಳಲಿಲ್ಲ,’ ಎಂದು ಸಮರ್ಥನೆ ನೀಡಿದರು.
ಆದರೆ ಈ ಸಮರ್ಥನೆಯನ್ನು ಒಪ್ಪದ ಸದಸ್ಯರೊಬ್ಬರು ‘ ನಾನು ಅದೇ ವಿಷಯವನ್ನು ಹೇಳುತ್ತಿದ್ದೇನೆ. ಈಗ ಅವರು ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಹಕ್ಕುಚ್ಯುತಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯ ಏತಕ್ಕೆ ಹಕ್ಕುಚ್ಯುತಿ ವಿಷಯಕ್ಕೆ ಬಂತು ಎನ್ನುವ ವಿಚಾರ ಮಾಡೋಣ,’ ಎಂದು ಚರ್ಚೆ ಮುಂದುವರೆಸಿರುವುದು ಗೊತ್ತಾಗಿದೆ. ಆಗ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ಇದು ನಂತರದ ವಿಷಯ. ಪ್ರಶ್ನೆ ಇಲ್ಲದೇ ಇದ್ದರೂ ಸಹ ಈ ಬಗ್ಗೆ ಯಾವಾಗ ಬೇಕಾದರೂ ಆರೋಪ ಮಾಡಬಹುದು. ನಾವು ಹಕ್ಕುಚ್ಯುತಿ ಆಗಿಲ್ಲವೆಂದು ಹೇಳಲಿಕ್ಕೆ ಪ್ರಶ್ನೆ ಏನಿದೆ, ಅದಕ್ಕೆ ನಾವು ಸರಿಯಾದ ಉತ್ತರ ಕೊಟ್ಟಿಲ್ಲವೆಂದರೇ ಆಗ ಮಾತ್ರ ಹಕ್ಕುಚ್ಯುತಿಯಾಗುತ್ತದೆ. So on merit there may be any reasons to question,’ ಎಂದು ಸಮಜಾಯಿಷಿ ನೀಡಲು ಮುಂದಾದರು.
ಈ ಸಮಜಾಯಿಷಿಯನ್ನು ಒಪ್ಪದ ಸದಸ್ಯರೊಬ್ಬರು ‘ We are not talking on the merit at all. We are talking about the quesition only,’ ಪ್ರಶ್ನೆ ಇಲ್ಲದೇ ಇರುವ ವಿಚಾರವಾಗಿಯೇ ಮಾತನಾಡುತ್ತಿರುವುದಾಗಿದೆ. ಈ ವಿಷಯದ ಬೇರೆ ಪ್ರಕ್ರಿಯೆ ಬಗ್ಗೆ ನಾವು ಏನು ಮಾತನಾಡುತ್ತಿಲ್ಲ. ಆ ಪ್ರಶ್ನೆಯಿಲ್ಲ ಎನ್ನುವುದರ ಬಗ್ಗೆಯೇ ಮಾತನಾಡುತ್ತಿರುವುದಾಗಿದೆ. That is the question he has asked as to why you have given the wrong information. ಈಗ ನೀವು ಕೊಡುವಂತಹ ಉತ್ತರಕ್ಕೂ ನಾನು ಸಾರ್ವಜನಿಕವಾಗಿ ಸಿಗುವಂತಹ ದಾಖಲೆಗಳನ್ನು ನಾವು ತೆಗೆದುಕೊಂಡಾಗ ಸಿಕ್ಕಿರುವ ದಾಖಲೆಗಳಿಗೂ ಮತ್ತು ನೀವು ಕೊಟ್ಟಿರುವ ದಾಖಲೆಗಳಿಗೂ ತಾಳೆಯಾಗುತ್ತಿಲ್ಲವೆಂದಾಗ automatically, it amount to that you have given wrong information,’ ಎಂದು ಖಡಕ್ಕಾಗಿ ಹೇಳಿರುವುದು ಗೊತ್ತಾಗಿದೆ.
ಇದಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘Further, there may be ten questions,’ ಎಂದು ಹೇಳಿದರು. ಆಗ ಸದಸ್ಯರೊಬ್ಬರು ‘ಇದು ಸಹ ಅದಕ್ಕೆ ರಿಲೇಟೇಡ್ ಪ್ರಶ್ನೆಯಾಗಿರುತ್ತದೆ,’ ಎಂದು ಹೇಳಿರುವುದು ತಿಳಿದು ಬಂದಿದೆ.
ಈ ಮಧ್ಯೆ ಮತ್ತೊಬ್ಬ ಸದಸ್ಯರೊಬ್ಬರು ‘ಎನ್ ರವಿಕುಮಾರ್ ಅವರು ಪಾಯಿಂಟ್ ಟು ಪಾಯಿಂಟ್ ಪ್ರಶ್ನೆಯನ್ನು ಕೇಳಿದ್ದಾರೆ. ಯಾವ ಉದ್ದೇಶಕ್ಕಾಗಿ ಹಣವನ್ನು ಕೊಡಲಾಗಿದೆ ಎಂದು ಪ್ರಶ್ನೆಯನ್ನು ಕೇಳಿದಾಗ ನೀವು ಅದಕ್ಕೆ ಉತ್ತರವನ್ನು ಕೊಟ್ಟಿದ್ದೀರಿ. ಅದು ಏನೆಂದರೇ ಯೋಜನೆ, ಸಾಧನೆಗಳನ್ನು ಪ್ರಚಾರ ಮಾಡಲಿಕ್ಕೆ ಎಂದು ಉತ್ತರವನ್ನು ಕೊಟ್ಟಿದ್ದೀರಿ. ಆ ಪ್ರಕಾರ ಕೆಲಸವಾಗಿಲ್ಲ. ನೀವು ಕೊಟ್ಟಿರುವ ಉತ್ತರ ಸರಿ ಇದೆ, ನಾನು ಇಲ್ಲವೆಂದು ಹೇಳುತ್ತಿಲ್ಲ. ನೀವು ಯಾವ ಒಂದು ಉದ್ದೇಶಕ್ಕಾಗಿ ಪ್ರತಿ ವರ್ಷ 7 ಕೋಟಿ ರುಪಾಯಿಗಳನ್ನು ಕೊಟ್ಟಿದ್ದೀರಿ, ಆ ಉದ್ದೇಶಕ್ಕಾಗಿ ಹಣ ಖರ್ಚಾಗಿಲ್ಲವೆಂದು ಹೇಳಲಿಕ್ಕೆ ಬಯಸುತ್ತೇವೆ. ಇದರ ಬಗ್ಗೆ ಅಧ್ಯಕ್ಷರು ತೀರ್ಮಾನ ಕೊಡಬೇಕು,’ ಎಂದು ಅಧ್ಯಕ್ಷರ ವಿವೇಚನೆಗೆ ಬಿಟ್ಟರು.
ಮಹಿಳಾ ಸದಸ್ಯರೊಬ್ಬರು ‘ಅನುಭವ ಇಲ್ಲದವರಿಗೆ ಈ ಕೆಲಸವನ್ನು ಕೊಟ್ಟರೆ ಹೀಗೆಯೇ ಆಗುತ್ತದೆ. ಅವರಿಗೆ ಇದ್ದಂತಹ ಅನುಭವವನ್ನು ಅವರು ಇಲ್ಲಿ ಇನ್‌ಸ್ಟಾಲ್ ಮಾಡಿದ್ದಾರೆ. ವಿರೋಧಿ ಮಾಡಿ ಮಾಡಿ ಕೊನೆಗೆ ದೇಶದ ಪ್ರಧಾನಿಯನ್ನು ಸಹ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಎನ್ ರವಿಕುಮಾರ್ ಅವರನ್ನ ಈ ಸಭೆಗೆ ಕರೆಸಿ ಕೇಳಬೇಕು,’ ಎಂದು ಸಲಹೆ ನೀಡಿದರು. ಆಗ ಇಲಾಖೆಯ ಪ್ರಧಾನ ಕಾರ್ಯದರ್ಶಿಯು But the question here is only restricted to whether we have committed a breach of privilege or not ಎಂದರು.
ಈ ಮಧ್ಯೆ ಸದಸ್ಯರೊಬ್ಬರು ‘ತಾಂತ್ರಿಕವಾಗಿ ಪ್ರಧಾನ ಕಾರ್ಯದರ್ಶಿಗಳು ಅವರ ಪಾತ್ರ ಏನಿತ್ತು ಅದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ನಾವು ಎತ್ತಿರುವಂತಹ ಪ್ರಶ್ನೆಗೆ further process of enquiry ಇರಬಹುದು, ಮತ್ತೊಂದು ಇರಬಹುದು. ಅದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಾನು ಇಲ್ಲಿ ಕೇಳುವುದೇನಂದರೇ ಸದಸ್ಯರ ಪ್ರಶ್ನೆ ಇದೇ ರೀತಿಯಲ್ಲಿ ಆಗಿದೆ ಎನ್ನುವಂತಹ ಸಂಶಯಾತ್ಮಕ ಪ್ರಶ್ನೆಯನ್ನು ಅವರು ಎತ್ತಿದಾಗ ನೀವು ಅದನ್ನು ಕೇವಲ ಟೆಕ್ನಿಕಲ್ ಆಗಿ ನಿಮಗೆ ಏನು ಬೇಕೋ ಆ ರೀತಿಯಲ್ಲಿ ಮಾಡಿದ್ದೀರಿ,’ ಎಂದು ಪ್ರತ್ಯುತ್ತರ ನೀಡಿರುವುದು ಗೊತ್ತಾಗಿದೆ.
ಇದರಿಂದ ಸ್ವಲ್ಪ ವಿಚಲಿತರಾದ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ತಮ್ಮ ಮನಸ್ಸಿನೊಳಗೆ ಏನಿದೆ ಎಂದು ನಮಗೆ ಗೊತ್ತಾಗುವುದಿಲ್ಲವಲ್ಲ ಸರ್,’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸದಸ್ಯರೊಬ್ಬರು ‘ಇದು ನನ್ನ ಮನಸ್ಸಿನಲ್ಲಿರುವುದಲ್ಲ. ಈ ರೀತಿಯಲ್ಲಿ ಪ್ರಶ್ನೆ ಇರುವುದಾಗಿದೆ. It is not assumptive. He is not assuming and making a claim. When the question itself is raising so many doubts about this contract, the responsibility lies on the department to completly make sure that clarity is given in the reply. Now the clarity is only that this company was eligible because you told that you have given a provision for taking up the startup company. ಎಂದು ತಾವು ಹೇಳುತ್ತಿದ್ದೀರಿ. ಆದರೆ ಕಾರ್ಯಾದೇಶದಲ್ಲಿ ಏನಿತ್ತು, ಅದನ್ನು ಏನು ಮಾಡಬೇಕಾಗಿತ್ತು, ಅದೆಲ್ಲವೂ ನಮ್ಮ ಮುಂದೆ ಇದೆ,’ ಎಂದು ವಿವರಿಸಿದರು.
ಆಗ ಪ್ರಧಾನ ಕಾರ್ಯದರ್ಶಿಯು ‘ There may implying questions,’ ಎಂದರೇ ಸದಸ್ಯರೊಬ್ಬರು ‘Your provide us a copy of the Terms of Contract,’ ಎಂದು ಕೇಳಿದರು. ಆಗ ಕೆಎಸ್‌ಎಂಸಿಎನ ಪ್ರಧಾನ ವ್ಯವಸ್ಥಾಪಕರು ‘ It is only work order. there is no Terms Of Contract,’ ಎಂದು ಉತ್ತರಿಸಿದರು. ಈ ಉತ್ತರಕ್ಕೆ ಪ್ರತಿಯಾಗಿ ಸದಸ್ಯರೊಬ್ಬರು What is the difference between the Work Order and the Terms of Contract? ಪ್ರಶ್ನಿಸಿದರು.
ಈ ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಸಮಿತಿಯ ಅಧ್ಯಕ್ಷರು ‘Whether you have entered into MoU Or Not? ಎಂದು ಪ್ರಶ್ನಿಸಿದರು. ಇದಕ್ಕೆ ಕೆಎಸ್‌ಎಂಸಿಎ ಪ್ರಧಾನ ವ್ಯವಸ್ಥಾಪಕರು, ನಮಗೆ requisition ಬಂದಾಗ quotation ಕರೆದ ಮೇಲೆ work order issue ಮಾಡುತ್ತೇವೆ. That is the final ಎಂದು ಉತ್ತರಿಸಿರುವುದು ನಡವಳಿಯಿಂದ ಗೊತ್ತಾಗಿದೆ. ಇದಕ್ಕೆ ಮತ್ತೊಬ್ಬ ಸದಸ್ಯರೊಬ್ಬರು ‘Without terms and conditions, how will you issue the Work Order,’ ಎಂದು ಕೇಳಿದರು. ಆಗ ಪ್ರಧಾನ ವ್ಯವಸ್ಥಾಪಕರು ‘ಅದರಲ್ಲಿ conditions ಇದೆ,’ ಎಂದು ಮತ್ತದೇ ಹಳೇ ಉತ್ತರವನ್ನು ಪುನರುಚ್ಚರಿಸಿರುವುದು ತಿಳಿದು ಬಂದಿದೆ.
ಈ ಉತ್ತರದಿಂದ ಅಸಮಾಧಾನಗೊಂಡ ಸಮಿತಿ ಅಧ್ಯಕ್ಷರು ‘just for my knowledge, generally speaking, I want to know whether you are entering into any Mous for this type of work,’ ಎಂದು ಕೇಳಿದರು. ಆಗ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ‘ನಮ್ಮ ಇಲಾಖೆಯಲ್ಲಿ This is our work, we have to excute it,‘ ಎಂದಷ್ಟೇ ಹೇಳಿದರು. ಆಗ ಮಹಿಳಾ ಸದಸ್ಯರೊಬ್ಬರು ‘ ನೀವು ಆ department ಗೆ handover ಮಾಡುತ್ತೀರಿ. ಅವರು ಕೊಡುವುದಿಲ್ಲ,’ ಎಂದರು. ಇದಕ್ಕೆ ಉತ್ತರಿಸಿದ ಆಯುಕ್ತ ನಿಂಬಾಳ್ಕರ್ ಅವರು ‘He has to give further work order for that work,’ ಎಂದು ಹೇಳಿದರು.
ಆಗ ಸದಸ್ಯರೊಬ್ಬರು ‘ ತಾವು ಈ ಬಗ್ಗೆ ಆದೇಶವನ್ನು ಕೊಟ್ಟಿದ್ದೀರಿ. ತಮ್ಮ ಹೆಸರಿನಲ್ಲಿಯೇ ಆದೇಶ ಬಂದಿದೆ. ತಮ್ಮ specific condition ಏನಿದೆ ಅಂದರೇ ತಾವು ಅದರಲ್ಲಿ ಏನು ಹೇಳುತ್ತೀರಿ ಎಂದರೇ ಡಿಜಿಟಲ್ ಮಾಧ್ಯಮದಲ್ಲಿ ಸರ್ಕಾರದ ಎಲ್ಲಾ ಸಾಧನೆ ಮತ್ತು ಯೋಜನೆಗಳ ಸೇವೆಗಳ ಮಾಹಿತಿಯನ್ನು ಶೇರ್ ಮಾಡುವ ಮೊದಲು ಇಲಾಖೆ ಮುಖ್ಯಸ್ಥರ ಅನುಮೋದನೆಯನ್ನು ಪಡೆಯುವುದು, So, in this context ಇಲಾಖಾ ಮುಖ್ಯಸ್ಥರು ಅದರಲ್ಲಿ tweet ಮಾಡುತ್ರಿದ್ದಾರೆ, ಫೇಸ್‌ಬುಕ್ ಪೋಸ್ಟ್ ಮಾಡುತ್ತಿದ್ದಾರೆ, ಹೀಗಾಗಿ ಇಲಾಖೆ ಮುಖ್ಯಸ್ಥರ ಕಡೆಯಿಂದ ಅನುಮೋದನೆಯನ್ನು ಪಡೆಯುವುದು ಎಂದು ಹೇಳಿ ಒಂದು ಷರತ್ತು ಹಾಕಿದ್ದೀರಿ. ಹಾಗೆಯೇ ಈ ಷರತ್ತನ್ನು ನಿಮ್ಮ ಇಲಾಖೆಯಲ್ಲಿ ಯಾರು MCN Monitor ಮಾಡುತ್ತಾರೆ, ಯಾರು ಇದನ್ನು ಮಾನಿಟರ್ ಮಾಡುತ್ತಾರೆ. ಯಾರು ಇದನ್ನು ಮಾನಿಟರ್ ಮಾಡಿ ಇದಕ್ಕೆ ಅಪ್ರೂವಲ್ ಕೊಡುತ್ತಿದ್ದಾರೆ? Because that is one the conditions…. ಎಂದು ಹೇಳಿದರು.
ಆಗ ಸದಸ್ಯರೊಬ್ಬರು ‘ನಮ್ಮ ಪ್ರಶ್ನೆ ಏನು ಇತ್ತು ಎನ್ನುವುದು ನಿಮಗೆ ಗೊತ್ತಾ? ಈ ಪೇಮೆಂಟ್ ಏತಕ್ಕಾಗಿ ಇತ್ತು ಎನ್ನುವುದಷ್ಟೇ. ಈ 7 ಕೋಟಿ 20 ಲಕ್ಷಗಳನ್ನು ಏನು ಕೊಡುತ್ತೀದ್ದೀರಿ ಎನ್ನುವ ವಿಚಾರ ಇದಾಗಿದೆ,’ ಎಂದರು. ಕಡೆಯಲ್ಲಿ ಅಧ್ಯಕ್ಷರು ‘ಇದರ ಬಗ್ಗೆ ಮುಂದೆ ಚರ್ಚೆ ಮಾಡೋಣ ಎಂದು ತಿಳಿಸುತ್ತಾ ಈ ವಿಚಾರವನ್ನು ಪೆಂಡಿಂಗ್ ಇಡುತ್ತಿದ್ದೇವೆ,’ ಎಂದು ಘೋಷಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.




