Friday | May 15, 2026 |

ನ್ಯೂಸ್‌ ಫಾರ್ವರ್ಡ್‌ ಮಾಡಲು ಪಾಲಿಸಿ ಫ್ರಂಟ್‌ಗೆ 7.20 ಕೋಟಿ ಕೊಡಬೇಕೆ, ಟರ್ಮ್ ಶೀಟ್‌, ಎಂಒಯು, ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಎಲ್ಲಿ, ಸರ್ಕಾರಿ ಯೋಜನೆ ಪರ ಟ್ವೀಟ್‌ಗಳೆಲ್ಲಿ?; ಬೆವರಿಳಿಸಿದ ಹಕ್ಕು ಬಾಧ್ಯತಾ ಸಮಿತಿ ಸದಸ್ಯರು

ಬೆಂಗಳೂರು;  ದ ಪಾಲಿಸಿ ಫ್ರಂಟ್ ಗೆ ವಾರ್ಷಿಕ 7.20 ಕೋಟಿ ರು ಗುತ್ತಿಗೆ ನೀಡಿರುವ ಪ್ರಕರಣದ ಬಗ್ಗೆ  ಕೈಗಾರಿಕೆ ಮತ್ತು  ವಾಣಿಜ್ಯ ಇಲಾಖೆಯು  ತಪ್ಪು ಮಾಹಿತಿ ನೀಡಿ ಹಕ್ಕುಚ್ಯುತಿ ಎಸಗಿದೆ ಎಂಬ ಕಾರಣವನ್ನು ಮುಂದಿರಿಸಿ ಕರ್ನಾಟಕ ವಿಧಾನ ಪರಿಷತ್‌ನ  ಹಕ್ಕು ಬಾಧ್ಯತೆ ಸಮಿತಿ ಮುಂದೆ ನಡೆಯುತ್ತಿರುವ ಚರ್ಚೆಯು ಪಾಲಿಸಿ ಫ್ರಂಟ್‌ನ ಕಾರ್ಯವೈಖರಿಯನ್ನೂ ಹಲವು ಬಗೆಯಲ್ಲಿ  ಒರೆಗೆ ಹಚ್ಚಿದೆ.

ಅಲ್ಲದೇ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು  ಪ್ರಚಾರ ಮಾಡುವ ಬದಲಿಗೆ ಪಾಲಿಸಿ ಫ್ರಂಟ್‌ ನ್ನು ಮುಂದಿರಿಸಿಕೊಂಡು  ರಾಜಕೀಯ ಪಕ್ಷದ ರೀತಿ ಇತರೆ ಸರ್ಕಾರಗಳನ್ನು ಟಾರ್ಗೇಟ್‌ ಮಾಡುತ್ತಿದೆ. ಇದಕ್ಕೆ    ಸಾರ್ವಜನಿಕ ಹಣವನ್ನು  ಹೇಗೆ ಬಳಸಲಾಗುತ್ತಿದೆ ಎಂಬ ಕುರಿತು ಇಲಾಖೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕ ವಿಧಾನ ಪರಿಷತ್‌ನ ಹಕ್ಕು ಬಾಧ್ಯತೆ ಸಮಿತಿಯ ಸಭೆಯು 2026ರ ಏಪ್ರಿಲ್‌ 23ರಂದು ಶಾಸಕರ ಭವನದ ಕಟ್ಟಡ-1 ರ 3ನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ನಡೆದಿದ್ದ ಸಭೆಯಲ್ಲಿ ಪಾಲಿಸಿ ಫ್ರಂಟ್‌ ನ ಕಾರ್ಯವೈಖರಿ ಕುರಿತು ಚರ್ಚಿಸಿದೆ. ಈ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮತ್ತೊಂದು ವಿಶೇಷವೆಂದರೇ  ಈ ಪಾಲಿಸಿ ಫ್ರಂಟ್‌ ಕಂಪನಿಯೊಂದಿಗೆ ಅನುಷ್ಠಾನ ಇಲಾಖೆ ಮತ್ತು  ಏಜೆನ್ಸಿಯು ಟರ್ಮ್ ಶೀಟ್‌, ಎಂಒಯು ಮತ್ತು  ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಅಥವಾ ಒಪ್ಪಂದದ ಬಾಧ್ಯತೆ ಇರುವ ದಾಖಲೆಯನ್ನು ಸಮಿತಿಗೆ  ನೀಡಿಲ್ಲ.  ಈ ಸಂಬಂಧ ಸಮಿತಿಯ ಹಲವು ಸದಸ್ಯರು ಇಲಾಖೆಯ ಮುಖ್ಯಸ್ಥರನ್ನು ಪ್ರಶ್ನಿಸಿದರೂ ಸಹ ಸಮಂಜಸವಾದ ಉತ್ತರವನ್ನೇ ನೀಡಿಲ್ಲ. ಅಲ್ಲದೇ ಈ ವಿಷಯದ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ ಸಂದರ್ಭದಲ್ಲಿ ಇಲಾಖೆ ಮುಖ್ಯಸ್ಥರು ನುಣುಚಿಕೊಂಡಿರುವುದು ಸಹ ನಡವಳಿಯಿಂದ ತಿಳಿದು ಬಂದಿದೆ.

ಹಾಗೆಯೇ ಪಾಲಿಸಿ ಫ್ರಂಟ್‌ ಗೆ ಸಂಬಂಧಿಸಿದ  ಹಲವು ದಾಖಲೆಗಳನ್ನು ಸಮಿತಿಗೆ ನೀಡಿಲ್ಲ ಎಂದು  ಸದಸ್ಯರು ಒಕ್ಕೊರಲಿನಿಂದ ಹೇಳಿದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಸ್‌ಎಂಸಿಎನ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವೆ ಎಂದು ದಾರಿ ತಪ್ಪಿಸುತ್ತಿರುವುದು ಸಹ ನಡವಳಿಯಿಂದ ಗೊತ್ತಾಗಿದೆ.

ಸಮಿತಿಯ ಸದಸ್ಯರೊಬ್ಬರು  ‘scope of  work towards digital communication services for govt.of karnataka by ensuring an interactive government platform with foucs on improving public relation and engagement ಎಂಬ general terms ನ್ನು ಇಲಾಖೆಯವರು ಕೊಟ್ಟಿದ್ದಾರೆ. ಈ ಗುತ್ತಿಗೆಯನ್ನು ಕೊಡುವುದಕ್ಕಿಂತ ಮುಂಚೆ ನೀವು ಒಂದು term sheet ಅನ್ನು ಮಾಡಿರುತ್ತೀರಿ, ಆ term sheetಗೆ ನೀವು, ಅವರು ಸಹಿ ಮಾಡಿರುತ್ತೀರಿ, ಆ term sheet ಪ್ರಕಾರ ನಿಮ್ಮ contractual obligations ಅನ್ನು ನೀವು ಅವರಿಗೆ ಮೆನ್‌ಷನ್‌ ಮಾಡಿರುತ್ತೀರಿ. ಅದು ಸಮಿತಿಗೆ ಎಲ್ಲಿ ಕೊಟ್ಟಿದ್ದೀರಿ,’ ಎಂದು ಪ್ರಶ್ನಿಸಿರುವುದು ತಿಳಿದು ಬಂದಿದೆ.

ಇದಕ್ಕೆ ಉತ್ತರಿಸಿದ್ದ  ಕೆಎಸ್‌ಎಂಸಿಎ ವ್ಯವಸ್ಥಾಪಕ ನಿರ್ದೇಶಕರು  ‘ಕಳೆದ ಸಭೆಯಲ್ಲಿ ಕೊಟ್ಟಿದ್ದೇವೆ,’ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಈ ಉತ್ತರದಿಂದ ತೃಪ್ತರಾದ ಸದಸ್ಯರೊಬ್ಬರು  ‘ ಕೊಟ್ಟಿಲ್ಲ, ನಾವು ಅದನ್ನು ಕೇಳಿದ್ದಕ್ಕೆ ನೀವು ಮುಂದಿನ ಸಭೆಯಲ್ಲಿ ಕೊಡುತ್ತೇವೆ ಎಂದು ಹೇಳಿದ್ದೀರಿ. ನೀವು ಜನರಲ್ terms and conditions ಅನ್ನು ಕೊಟ್ಟಿದ್ದೀರಿ, ಕೆಎಸ್‌ಎಂಸಿಎ ಮೂಲಕ ನೀವೇನು ಒದಗಿಸುತ್ತೀರಿ ಅದನ್ನು ಕೊಟ್ಟಿದ್ದೀರಿ. ನೀವು ಕಳೆದ ಸಲ ಕೊಟ್ಟಿರುವ ಮಾಹಿತಿಯನ್ನು ನಾನು ತಂದಿದ್ದೇನೆ,’ ಎಂದು ದಾಖಲೆಗಳನ್ನು ತೋರಿಸುವ ಮೂಲಕ  ಇಲಾಖೆ ಮುಖ್ಯಸ್ಥರಿಗೆ ಬೆವರಿಳಿಸಿರುವುದು  ಗೊತ್ತಾಗಿದೆ.

ಅದೇ ರೀತಿ  ‘ಕಳೆದ ಸಲ ನೀವೇನು ಕೊಟ್ಟಿದ್ದೀರಿ ಎಂದರೇ ಕಂಪನಿ ಜಿಎಸ್‌ಟಿ ಫಾರಂ, ಅದೇ ಜಿಎಸ್‌ಟಿ ಫಾರಂನಲ್ಲಿ ಯಾರು ಪಾರ್ಟ್‌ನರ್‍‌ಗಳು ಇದ್ದಾರೆ ಎನ್ನುವುದಕ್ಕೆ ಸರ್ಕಾರದಿಂದ ರಿಜಿಸ್ಟರ್ ಆಗಿರುವುದಕ್ಕೆ ಡಾಕ್ಯುಮೆಂಟ್‌, ಮತ್ತೊಂದು ಲೆಟರ್ ಆಫ್‌ ಅಂಡರ್‍‌ ಟೇಕಿಂಗ್‌ ಕ್ಯಾಪಬಿಲಿಟಿಸ್ ಅಂಡ್‌ ರಿಸೋರ್ಸ್‌ಸ್ ಅನ್ನು ಕೊಟ್ಟಿದ್ದೀರಿ. ಅಂದರೇ ಆ ಕಂಪನಿ ಏನೆಲ್ಲಾ ಮಾಡಬಹುದು ಎಂಬುದನ್ನು ಅವರ ಲೆಟರ್‍‌ ಹೆಡ್‌ನಲ್ಲಿ ಕೊಟ್ಟಿರುವುದನ್ನು ಕೊಟ್ಟಿದ್ದೀರಿ. ನಿಮ್ಮ ಒಡಂಬಡಿಕೆ, ಎಂಒಯು ಗೆ ಅವರು ನೀವು ಸಹಿ ಮಾಡಿರುವಂತಹ terms of contract or conctractual obligation ಇರುವಂತಹ ದಾಖಲೆಯನ್ನು ಹಾಗೂ ಸದರಿ ಮಾಹಿತಿಯನ್ನು ಸಮಿತಿಗೆ ನೀಡಿರುವುದಿಲ್ಲ,’ ಎಂದು ತಿರುಗೇಟು ನೀಡಿರುವುದು ಗೊತ್ತಾಗಿದೆ.

ಆದರೂ  ಕೆಎಸ್‌ಎಂಸಿಎ ವ್ಯವಸ್ಥಾಪಕ ನಿರ್ದೇಶಕರು ‘ವರ್ಕ್ ಆರ್ಡರ್‍‌ ಇಶ್ಯೂ ಮಾಡಿರುವ ಕಾಪಿಯನ್ನು ಕೊಟ್ಟಿದ್ದೇನೆ.’  ಎಂದು ಮತ್ತದೇ  ಸಮಜಾಯಿಷಿ ನೀಡಿದ್ದಾರೆ. ಈ ಉತ್ತರದಿಂದ ತೃಪ್ತರಾಗದ ಸದಸ್ಯರೊಬ್ಬರು  ‘ಯಾರಿಗೆ ಕೊಟ್ಟಿದ್ದೀರಿ, ನೀವು ಕೊಟ್ಟಿರುವ ಫೈಲ್‌ ನನ್ನ ಹತ್ತಿರ ಪೂರ್ತಿ ಇದೆ,’ ಎಂದು ಮತ್ತೊಮ್ಮೆ ಕಡತದಲ್ಲಿನ ದಾಖಲೆಗಳನ್ನು ತೋರಿಸಿದರು. ಇದಕ್ಕೆ ಪುನಃ  ಕೆಎಸ್‌ಎಂಸಿಎ ವ್ಯವಸ್ಥಾಪಕ ನಿರ್ದೇಶಕರು ‘ಕಳೆದ ಸಲ ಜೆರಾಕ್ಸ್‌ ಮಾಡಿ ಕೊಟ್ಟಿದ್ದೇನೆ. ಈಗ ಮತ್ತೆ ಕೊಡುತ್ತೇನೆ,’  ಎಂದು ಹಿಂದಿನ ಹೇಳಿಕೆಯನ್ನೇ ಪುನರುಚ್ಛರಿಸಿರುವುದು ತಿಳಿದು ಬಂದಿದೆ.

ಈ ನಡುವೆ ಸಮಿತಿಯ ಅಧ್ಯಕ್ಷರು  ‘ಕಳೆದ ಸಭೆಯಲ್ಲಿ ನೀವೇನು ಒಪ್ಪಿಕೊಂಡು ಹೋಗಿದ್ದೀರಿ ಅದನ್ನು ಈ ಸಲ ಕೊಟ್ಟಿಲ್ಲ.  ನೀವು ಅವರ ಜೊತೆಯಲ್ಲಿ ಎಂಒಯು ಮಾಡಿಕೊಂಡಿರುವ ಕಾಪಿ, ನೀವು ಅವರು ಮಾಡಿಕೊಂಡಿರುವ ಅಗ್ರಿಮೆಂಟ್‌ ಕಾಪಿ ಕೊಡಿ ಎಂದು ಸದಸ್ಯರು ಕೇಳುತ್ತಿದ್ದಾರೆ, ಅದನ್ನು ಕೊಡಿ ಎಂದು ತಾಕೀತು ಮಾಡಿದ್ದರು.

ಆಗ ಚರ್ಚೆಯನ್ನು ಮತ್ತಷ್ಟು ವಿಸ್ತರಿಸಿದ ಸಮಿತಿಯ ಸದಸ್ಯರೊಬ್ಬರು  ‘ಈ ಕಂಪನಿ ಜಿಎಸ್‌ಟಿ ರಿಜಿಸ್ಟ್ರೇಷನ್‌ ಆಗಿದೆ, ಅದಕ್ಕೆ ಪೂರ್ವಭಾವಿಯಾಗಿ ಟೆಂಡರ್ ಆಗಿರುವುದು ಸಂಶಯ ಇತ್ತು. ಅದನ್ನು ಕ್ಲಾರಿಫೈ ಮಾಡಿದ್ದೀರಿ. ಮೊದಲೇ ಜಿಎಸ್‌ಟಿ ರಿಜಿಸ್ಟ್ರೇಷನ್‌ ಆಗಿತ್ತು, change of address ಮಾಡಿದರು ಎಂದು ಕ್ಲಾರಿಫೈf ಮಾಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ಮೂಲಭೂತವಾಗಿ ನಮ್ಮೆಲ್ಲರಿಗೂ ಸಂಶಯ ಬರುವುದೇನಂದರೇ ರಿಜಿಸ್ಟ್ರೇಷನ್ ಆಗಿ ಎರಡೂವರೆ ತಿಂಗಳೊಳಗಾಗಿ ಆರ್ಡರ್‍‌ ತೆಗೆದುಕೊಂಡು ಬಿಟ್ಟರು. ಅವರಿಗೆ ಅನುಭವ ಇಲ್ಲ, office existence ಇಲ್ಲ. ಪ್ರತಿ ವರ್ಷ 7 ಕೋಟಿ ರುಪಾಯಿಗಳ transaction ಅಗಬೇಕಾಗಿರುವುದನ್ನು, ಬೇರೆ ಅನುಭವ ಇರುವವರು ಇದ್ದರೂ ಸಹ ನೀವು ರಿಜಿಸ್ಟ್ರೇಷನ್‌ ಆಗಿ ಎರಡೂವರೆ ತಿಂಗಳಿನ ಕೂಸಿಗೆ ಕೊಟ್ಟೀದ್ದೀರಿ. ಅವರಿಗೆ ಅನುಭವ ಏನೂ ಇಲ್ಲ, ಸದರಿ ಕಂಪನಿಯ office existence ನಲ್ಲಿ ಇಲ್ಲ ಹಾಗೂ ಅಲ್ಲಿ ಸಿಬ್ಬಂದಿ ಇಲ್ಲ. ಅವರು ಏನೇನು ಕೆಲಸ ಮಾಡಿದ್ದಾರೆಂದು ನಾವು ಮಾಹಿತಿ ತರಿಸಿದ್ದೇವೆ,’ ಎಂದು ಮತ್ತಷ್ಟು ದಾಖಲೆಗಳನ್ನು ಸಭೆಯಲ್ಲಿಯೇ ಬಹಿರಂಗಪಡಿಸಿದರು ಎಂದು ತಿಳಿದು ಬಂದಿದೆ.

ಅಷ್ಟೆ ಅಲ್ಲ,  ‘ಪತ್ರಿಕೆಯಲ್ಲಿ ನ್ಯೂಸ್ ಕೊಡುವುದು ಅವರ ಕೆಲಸವೇ? ಮುಖ್ಯಮಂತ್ರಿಯವರು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋಗಿರುವುದು ಪತ್ರಿಕೆಯಲ್ಲಿ ಬರುತ್ತದೆ. ಅದನ್ನೇ ನ್ಯೂಸ್‌ಗೆ forward ಮಾಡುತ್ತಾರೆ. ಅದಕ್ಕೆ 7 ಕೋಟಿ ರುಪಾಯಿಗಳು ಕೊಡಬೇಕೆ? ಇವೆಲ್ಲಾ ಸಂಶಯಕ್ಕೆ ಕಾರಣವಾಗಿದೆ. ಅದನ್ನು ನಿವಾರಣೆ ಮಾಡಿ. ಕಳೆದ ಸಭೆಯಲ್ಲಿ ಅವರು ಏನೇನು ವರ್ಕ್‌ ಮಾಡಿದ್ದಾರೆ ಎಂದು ಕಡತ ತೋರಿಸಿದ್ದಾರೆ. ಆ ಕಡತವನ್ನು ನಾವೆಲ್ಲಾ ನೋಡಿದ್ದೇವೆ,’ ಎಂದು ಸದಸ್ಯರೊಬ್ಬರು ಪಾಲಿಸಿ ಫ್ರಂಟ್‌ನ ಕಾರ್ಯವೈಖರಿಯನ್ನು  ಸಭೆಯಲ್ಲಿಯೇ ಬಿಚ್ಚಿಟ್ಟರು ಎಂದು ಗೊತ್ತಾಗಿದೆ.

ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಸದಸ್ಯರು ‘ ಈ ವಿಚಾರ ಸದನದಲ್ಲಿ ಚರ್ಚೆಯಾದ ಸಂದರ್ಭದಲ್ಲಿ ಏನು ಮಾಹಿತಿ ಕೊಟ್ಟಿದ್ದಾರೆ ಅದು ಅಪೂರ್ಣವಾಗಿದೆ ಮತ್ತು ಅದು ಸತ್ಯಕ್ಕೆ ದೂರವಾಗಿದೆ ಎಂದು ಗೊತ್ತಾದಾಗ ಹಕ್ಕು ಬಾಧ್ಯತಾ ಸಮಿತಿಗೆ ಬಂದಿದೆ. ಇಲ್ಲಿಯೂ ಕೂಡ ನಮಗೆ ಸರಿಯಾದ ಮಾಹಿತಿಗಳನ್ನು  ಕೊಡುತ್ತಿಲ್ಲವೆಂದರೇ ಸದನಕ್ಕೂ ಗೌರವ ಇಲ್ಲ ಮತ್ತು ಸಮಿತಿಯಲ್ಲೂ ಗೌರವ ಇಲ್ಲ ಎಂದು ಕಾಣುತ್ತಿದೆ. ಸದನದಲ್ಲಿ ಪ್ರಸ್ತಾಪ ಮಾಡಿರುವ ವಿಚಾರವನ್ನು ಕಳೆದ ಸಭೆಯಿಂದಲೂ ಕೇಳುತ್ತಿದ್ದೇವೆ. ಈಗಲೂ ಅಪೂರ್ಣವಾದ ಮಾಹಿತಿಯನ್ನು ಕೊಡುತ್ತಿದ್ದಾರೆ. ಈ ಮಾಹಿತಿಯನ್ನು ಮುಚ್ಚಿಡುವಂತಹ ಕೆಲಸ ಏಕೆ ಮಾಡುತ್ತಿದ್ದೀರಿ,’ ಎಂದು ಪ್ರಶ್ನಿಸಿದ್ದರು.

ಅಲ್ಲದೇ  ‘ವ್ಯವಸ್ಥಾಪಕ ನಿರ್ದೇಶಕರು ಕಳೆದ ಸಲ ಮಾಹಿತಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಮತ್ತೆ ಈಗ ಮಾಹಿತಿ ಕೊಡುತ್ತೇವೆ ಎಂದು ಹೇಳುತ್ತಾರೆ. AS a Managing Director, is he not responsible for answering before the committee? ಕಳೆದ ಸಲ ಅವರೇ ಕಮಿಟ್ ಆಗಿದ್ದಾರೆ. ಕಳೆದ ಸಲ ಅವರು ಏನೇನು ಹೇಳಿದ್ದಾರೆ ಎಂಬುದು ದಾಖಲೆಯಲ್ಲಿ ಇದೆ,’ ಎಂದು ಮತ್ತೊಮ್ಮೆ ದಾಖಲೆಯನ್ನು ಹಿಡಿದು ತೋರಿಸಿದರು ತಿಳಿದು ಬಂದಿದೆ.

ಹಾಗೆಯೇ  ‘ಅವರು ಕೆಲಸ ಮಾಡಿರುವ ಕಾಪಿಯನ್ನು ನಾವು ನೋಡಿದ್ದೇವೆ. ಒಂದು ವರ್ಷಕ್ಕೆ 7 ಕೋಟಿ ರುಪಾಯಿಗಳನ್ನು ಕೊಡುತ್ತೀದ್ದೀರಿ. ನವೀನ್‌ ಅವರು ಅಗ್ರಿಮೆಂಟ್‌ ಏನೇನು ಆಗಿದೆ ಅದರ ವಿವರಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಅದರ ವಿವರವನ್ನು ಅವರು ಇನ್ನು ನಮ್ಮ ಕೈಗೆ ಕೊಟ್ಟಿಲ್ಲ. ಆಫೀಸ್‌ ಎಲ್ಲಿದೆ, ಆಫೀಸ್‌ನಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಕ್ಕೆ ಕಳೆದ ಸಭೆಯಲ್ಲಿ ಆ ಕಂಪನಿಗೆ ಭೇಟಿ ಕೊಡಬೇಕು ಎಂದು ತೀರ್ಮಾನವಾಗಿತ್ತು,’ ಎಂದು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

ಸಮಿತಿಯ ಮಹಿಳಾ ಸದಸ್ಯರೊಬ್ಬರು ‘ ನನಗೆ ಸ್ಪಷ್ಟೀಕರಣ ಕೊಡಿ. Start-Up Company ಅನ್ನು ಪ್ರಾರಂಭ ಮಾಡಬೇಕೆಂದರೇ ಆದೇಶ, ಪಾಲಿಸಿ ಏನಾದರೂ ಇದೆಯೇ? ಈ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಕಾಪಿಯನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಅದನ್ನು ಕೊಡುತ್ತಿಲ್ಲ. ರವಿಕುಮಾರ್‍‌ ಅವರು ಕಂಪನಿಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ, ಆ ಸ್ಥಳದಲ್ಲಿ ಕಂಪನಿಯೇ ಇಲ್ಲ. ಅಲ್ಲಿ ಆಫೀಸ್‌ ಇಲ್ಲ, ಕಂಪ್ಯೂಟರ್‍‌ ಇಲ್ಲ,’ ಎಂದು ಹೇಳಿದ್ದರು. ಹಾಗೆಯೇ ಇವರ ಮಾತಿಗೆ ದನಿಗೂಡಿಸಿದ್ದ ಮತ್ತೊಬ್ಬ ಸದಸ್ಯರೊಬ್ಬರು  ‘ಸದರಿ ಕಂಪನಿಯ ಸ್ಥಳದಲ್ಲಿ ಯಾವ ಕಚೇರಿಯೂ ಇಲ್ಲ ಹಾಗೂ ಅಲ್ಲಿ ಸಿಬ್ಬಂದಿಗಳೂ ಸಹ ಇಲ್ಲ,’ ಎಂದು ಹೇಳಿದ್ದರು ಎಂದು ತಿಳಿದು ಬಂದಿದೆ.

ಇನ್ನೊಬ್ಬ ಸದಸ್ಯ  ‘ನಿಮ್ಮ ಉತ್ತರದಲ್ಲಿ ಏನಿದೆ ಎಂದರೇ ದ ಪಾಲಿಸಿ ಫ್ರಂಟ್‌ ಗೆ ಗುತ್ತಿಗೆ ನೀಡಿರುವ ಕುರಿತು ಕಡತದ ಸಮಗ್ರ ದಾಖಲೆಗಳೊಂದಿಗೆ ಯಾವ ಕಾರಣಕ್ಕಾಗಿ ಸದರಿ ಕಂಪನಿಗೆ ವಾರ್ಷಿಕ 7.2 ಕೋಟಿ ರು ಗಳ ಗುತ್ತಿಗೆ ನೀಡಲಾಗುತ್ತಿದೆ ಎಂಬ ಸಮಗ್ರ ವಿವರ ನೀಡುವುದು ಎಂದು ಪ್ರಶ್ನೆ ಕೇಳಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ನಿರ್ದೇಶನದಂತೆ ಸರ್ಕಾರದ ಎಲ್ಲಾ ಸಾಧನೆ, ಯೋಜನೆಗಳ ಮಾಹಿತಿಯನ್ನು ಡಿಜಿಟಲ್ ಮಾಧ್ಯಮ ಮತ್ತು ಸಮಾಲೋಚನೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಮಾಡಲು ಸಂಸ್ಥೆಯ ನೋಂದಾಯಿತ ವ್ಯವಹಾರ ಸಹವರ್ತಿಗಳಿಂದ ಸ್ಪರ್ಧಾತ್ಮಕ ದರಗಳನ್ನು ಪಡೆದು ಕಡಿಮೆ ದರವನ್ನು ಸಲ್ಲಿಸಿರುವ ಕಂಪನಿಯಾದ ದ ಪಾಲಿಸಿ ಫ್ರಂಟ್‌ ಪ್ರಸ್ತಾವನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2023ರ ಆಗಸ್ಟ್‌ 24ರಂದು ಸಲ್ಲಿಸಲಾಗಿರುತ್ತದೆ ಎಂದು ಉತ್ತರ ಕೊಟ್ಟಿದ್ದೀರಿ,’ ದಾಖಲೆಯನ್ನು ಪ್ರದರ್ಶಿಸಿದರು.

‘There is a report regarding the activities carried out by ‘The Policy Fron’ from November 25th 2023 to December 24, 2023 which has been submitted to K.S.M.C.A. ಇದರಲ್ಲಿ ತಮ್ಮ ಗಮನಕ್ಕೆ ತರುವುದೇನಂದರೇ ಪ್ರಧಾನ ಮಂತ್ರಿ ಮೋದಿಯವರ ಮುಂದೆ ಇಟ್ಟಿರುವ ಪಂಚ ಬೇಡಿಕೆಗಳು, ಕನ್ನಡಿಗರ ಹಿತ ಕಾಯುವರೇ ಮೋದಿ ಎಂದು ಇದೆ,’ ಎಂದು ಸಿಟ್ಟಿಗೆದ್ದಿದ್ದರು ಎಂದು ತಿಳಿದು ಬಂದಿದೆ.

ಆಗ ಇಲಾಖೆಯ ಮುಖ್ಯಸ್ಥರು ‘Let us come back to our conversation. It is on the merits of the case,’ ಎಂದು ಮುಂದಿನ ವಿಷಯಗಳ ಬಗ್ಗೆ ನಡೆಯಬಹುದಾದ ಚರ್ಚೆಯನ್ನು ಅಲ್ಲಿಯೇ ಮೊಟಕುಗೊಳಿಸಲು ಯತ್ನಿಸಿರುವುದು ನಡವಳಿಯಿಂದ ಗೊತ್ತಾಗಿದೆ.

ಆಗ ಮಧ್ಯ ಪ್ರವೇಶಿಸಿದ ಸಮಿತಿಯ ಸದಸ್ಯರೊಬ್ಬರು  ‘ ಟ್ವೀಟ್‌ಗಳಲ್ಲಿ ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಟ್ವೀಟ್‌ಗಳು ಎಷ್ಟು ಇವೆ? ಸಾರ್ವಜನಿಕ ಹಣವನ್ನು ಬಳಸಿಕೊಂಡು ಕರ್ನಾಟಕ ಸರ್ಕಾರ ಮತ್ತು ಅದರ ಯೋಜನೆಗಳ ಪರವಾಗಿ ಎಷ್ಟು  ಟ್ವೀಟ್‌ಗಳನ್ನು ಮಾಡಲಾಗಿದೆ. ಸರ್ಕಾರದ ಹಣವನ್ನು ಇತರ ಸರ್ಕಾರಗಳನ್ನು ಗುರಿಯಾಗಿಸಲು ಬಳಸಲಾಗಿದೆ. ರಾಜಕೀಯ ಪಕ್ಷವು ಮಾಡಬಹುದಾದ  ಹೇಳಿಕೆಗಳನ್ನು ಟ್ವೀಟ್ ಮಾಡಲಾಗಿದೆ.  ಸರ್ಕಾರವು ಸಾರ್ವಜನಿಕ ನಿಧಿಗಳನ್ನು ಬಳಸಿ ಇಂತಹ ಟ್ವೀಟ್‌ಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಹೇಗೆ ಮಾಡಬಹುದು? ‘HDK’s false claim’, ‘BJP and JD(S) under elusion’ ಎಂಬ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಮಾನ್ಯ ಮುಖ್ಯಮಂತ್ರಿ ಅವರ ಹೇಳಿಕೆಗಳಾಗಿವೆ.  ಮತ್ತು ಇದೇ ವರದಿಯನ್ನು ಕಂಪನಿಯು ನೀಡಿದೆ. ಇದು ಏನು ತೋರಿಸುತ್ತದೆ? ಸದನಕ್ಕೆ ಹಾಗೂ ಸಮಿತಿಗೆ ಇಲಾಖೆಯು ನೀಡಿದ ಉತ್ತರಗಳು ಸಂಪೂರ್ಣವಾಗಿ ಪರಸ್ಪರ ವಿರೋಧಾಭಾಸ ಹೊಂದಿವೆ,’ ಎಂದು ಇಲಾಖೆ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವುದು ತಿಳಿದು ಬಂದಿದೆ.

 

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

 

ದ ಪಾಲಿಸಿ ಫ್ರಂಟ್‌ ಕಂಪನಿಗೆ ಸಂಬಂಧಿಸಿದಂತೆ ಹಕ್ಕು ಬಾಧ್ಯತೆ ಸಮಿತಿಯು 2026ರ  ಏಪ್ರಿಲ್‌ 16ರಂದು ನಡೆದಿದ್ದ ಸಭೆಯಲ್ಲಿನ ಚರ್ಚೆ ಕುರಿತು ದಿ ಫೈಲ್‌  2026ರ ಮೇ 14ರಂದು ವರದಿ ಪ್ರಕಟಿಸಿತ್ತು.

Hot this week

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ...

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...
Please Scan to make Your Contribution

Topics

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ...

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

Related Articles

Popular Categories

error: Content is protected !!