Monday | July 27, 2026 |

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು  ಕಾವೇರಿ ಜಲ ಹಂಚಿಕೆ ಕುರಿತ ಮಹತ್ವದ ಚರ್ಚೆ ನಡೆಸಲು ಇದೇ  ಆಗಸ್ಟ್ 3ರಂದು ದಿನಾಂಕ ನಿಗದಿಪಡಿಸಿದೆ ಎಂದು ಹೇಳಲಾಗುತ್ತಿರುವ ನಡುವೆಯೇ  ರಾಜ್ಯದಿಂದ ತಮಿಳುನಾಡಿಗೆ ಕಳೆದ ಮೇ ತಿಂಗಳಲ್ಲಿ ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಬಿಡಲಾಗಿತ್ತು  ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ತಿಳಿಸಿದೆ.

ಕಾವೇರಿ ಕೊಳ್ಳ ಪ್ರದೇಶದಿಂದ ಬಿಳಿಗುಂಡ್ಲು ಮೂಲಕ ನೀರು ಹರಿಬಿಟ್ಟಿರುವ ಕುರಿತು ತಮಿಳುನಾಡಿನ  ಪಿಎಂಕೆ ಪಕ್ಷದ ಸಂಸದ ಅನ್ಬುಮಣಿ ರಾಮದಾಸ್ ಅವರು ರಾಜ್ಯಸಭೆಗೆ 2026ರ ಜುಲೈ 27ರಂದು ಚುಕ್ಕೆ ರಹಿತ ಪ್ರಶ್ನೆ ಕೇಳಿದ್ದರು. ಇದಕ್ಕೆ ಜಲ ಶಕ್ತಿ ಸಚಿವ ರಾಜಭೂಷಣ್ ಚೌಧುರಿ ಅವರು ನೀಡಿರುವ ಉತ್ತರದಲ್ಲಿ  ತಮಿಳುನಾಡು ರಾಜ್ಯಕ್ಕೆ ಕಾವೇರಿ ಕೊಳ್ಳ ಪ್ರದೇಶದಿಂದ ಬಿಳಿಗುಂಡುಲು ಮೂಲಕ ಕಳೆದ ಮೇಲೆ ತಿಂಗಳಲ್ಲಿ, ಅಂದರೆ ಕಳೆದ ಜಲವರ್ಷದ ಕೊನೆಯ ತಿಂಗಳು, ನಿಗದಿತ 2.5 ಟಿಎಂಸಿಗೆ ಬದಲಾಗಿ 3.101 ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ಒದಗಿಸಿದ್ದಾರೆ.

ಜೂನ್‌ನಲ್ಲಿ ನಿಗದಿಪಡಿಸಿದಂತೆ  9.19 ಟಿಎಂಸಿಗೆ ಬದಲಾಗಿ ಕೇವಲ 2.195 ಟಿಎಂಸಿ ಬಿಡುಗಡೆ ಮಾಡಲಾಗಿದೆ. ಜುಲೈ 16ರವರೆಗೆ 31.24 ಟಿಎಂಸಿಗೆ ಎದುರಾಗಿ 0.459 ಟಿಎಂಸಿ ಮಾತ್ರ ಬಿಡುಗಡೆಯಾಗಿದೆ.  ಹವಾಮಾನ, ಮಳೆ, ಜಲಾಶಯಗಳ ಸ್ಥಿತಿಗತಿಯನ್ನು ಆಧರಿಸಿ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನೀರು ಬಿಡುಗಡೆ ಕುರಿತು ನಿರ್ದೇಶನ ನೀಡಲಿವೆ ಎಂದು ಜಲಶಕ್ತಿ ಸಚಿವರು ಉತ್ತರಿಸಿದ್ದಾರೆ.

ಕರ್ನಾಟಕವು ಸಾಮಾನ್ಯ ಮಳೆ ವರ್ಷದಲ್ಲಿ  ತಮಿಳುನಾಡಿಗೆ ಬಿಳಿಗುಂಡ್ಲು ಅಂತರರಾಜ್ಯ ಗಡಿಬಿಂದುವಿನಲ್ಲಿ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣ, ವಾಸ್ತವವಾಗಿ ಬಿಡುಗಡೆಗೊಂಡ ನೀರು ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ವಿವರ ನೀಡಿದೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ ತಿದ್ದುಪಡಿ ಆದೇಶದಂತೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಬೇಕಾದ ಮಾಸಿಕ ಪ್ರಮಾಣವನ್ನು ವಿವರಿಸಿದ್ದಾರೆ.

 

 

ಜೂನ್‌ನಲ್ಲಿ ಗುರಿಗಿಂತ ಬಹಳ ಕಡಿಮೆ ನೀರು

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, 2026-27ರ ಜಲವರ್ಷದಲ್ಲಿ ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಬಿಳಿಗುಂಡುಲುವಿನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿತ್ತು. ಆದರೆ, ವಾಸ್ತವವಾಗಿ ಹರಿದ ನೀರು ಕೇವಲ 2.195 ಟಿಎಂಸಿ ಮಾತ್ರವಾಗಿದೆ. ಅಂದರೆ, ನಿಗದಿತ ಪ್ರಮಾಣಕ್ಕಿಂತ ಸುಮಾರು 7 ಟಿಎಂಸಿಗೂ ಹೆಚ್ಚು ಕೊರತೆ ದಾಖಲಾಗಿರುವುದು ಉತ್ತರದಿಂದ ತಿಳಿದು ಬಂದಿದೆ.

ಜುಲೈ 16ರವರೆಗೆ 0.459 ಟಿಎಂಸಿ ಮಾತ್ರ

ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಆಗಬೇಕೆಂದು ನಿಗದಿಪಡಿಸಲಾಗಿದ್ದರೂ, 2026ರ ಜುಲೈ 16ರವರೆಗೆ ಕೇವಲ 0.459 ಟಿಎಂಸಿ ನೀರು ಮಾತ್ರ ಹರಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಅಂಕಿ-ಅಂಶಗಳು ಜುಲೈ 16ರವರೆಗೆ ಮಾತ್ರ ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.

ಮೇ ತಿಂಗಳಲ್ಲಿ ಗುರಿಗಿಂತ ಹೆಚ್ಚು ಹರಿವು

ಹಿಂದಿನ 2025-26ರ ಜಲವರ್ಷದಲ್ಲಿ ಮೇ ತಿಂಗಳಲ್ಲಿ 2.50 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿತ್ತು. ಆಗ  3.101 ಟಿಎಂಸಿ ನೀರು ವಾಸ್ತವವಾಗಿ ಹರಿದಿತ್ತು. ಅಂದರೆ ಆ ತಿಂಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಳಿಗುಂಡ್ಲು ತಲುಪಿತ್ತು.

ವಾರ್ಷಿಕ ಗುರಿ 177.25 ಟಿಎಂಸಿ

ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ, ಸಾಮಾನ್ಯ ಜಲವರ್ಷದಲ್ಲಿ ಕರ್ನಾಟಕವು ಬಿಳಿಗುಂಡುಲು ಗಡಿಬಿಂದುವಿನಲ್ಲಿ ಒಟ್ಟು 177.25 ಟಿಎಂಸಿ ನೀರಿನ ಹರಿವು ಖಚಿತಪಡಿಸಬೇಕು.ಮಾಸಿಕ ಗುರಿಗಳನ್ನು ಇರಿಸಲಾಗಿದ್ದು ಈ ಜಲ ವರ್ಷದ ಆರಂಭದ ಎರಡು ತಿಂಗಳಲ್ಲಿ ನೀರಿನ ಲಭ್ಯತೆ ಮತ್ತು ಹರಿವು ಎರಡೂ ಗಮನಾರ್ಹವಾಗಿ ಕಡಿಮೆ ಆಗಿರುವುದು ಸರಕಾರದ ಅಂಕಿ ಅಂಶದಲ್ಲಿ ವ್ಯಕ್ತವಾಗಿದೆ

ಮಾಸಿಕ ಗುರಿ

ಜೂನ್‌ನಲ್ಲಿ  9.19 ಟಿಎಂಸಿ, ಜುಲೈನಲ್ಲಿ  31.24 ಟಿಎಂಸಿ, ಆಗಸ್ಟ್ ನಲ್ಲಿ  45.95 ಟಿಎಂಸಿ, ಸೆಪ್ಟೆಂಬರ್‍‌ನಲ್ಲಿ  36.76 ಟಿಎಂಸಿ, ಅಕ್ಟೋಬರ್ ನಲ್ಲಿ  20.22 ಟಿಎಂಸಿ, ನವೆಂಬರ್ ನಲ್ಲಿ   13.78 ಟಿಎಂಸಿ,  ಡಿಸೆಂಬರ್ ನಲ್ಲಿ  7.35 ಟಿಎಂಸಿ, ಜನವರಿಯಲ್ಲಿ  2.76 ಟಿಎಂಸಿ, ಫೆಬ್ರವರಿಯಲ್ಲಿ  2.50 ಟಿಎಂಸಿ, ಮಾರ್ಚ್ ನಲ್ಲಿ  2.50 ಟಿಎಂಸಿ, ಏಪ್ರಿಲ್‌ನಲ್ಲಿ  – 2.50 ಟಿಎಂಸಿ, ಮೇನಲ್ಲಿ  2.50 ಟಿಎಂಸಿ ಗುರಿ ನಿಗದಿಪಡಿಸಿದೆ.  ಜೂನ್ ನಿಂದ ಆರಂಭವಾಗುವ ಜಲವರ್ಷದಲ್ಲಿ ಒಟ್ಟಾರೆ ವಾರ್ಷಿಕ ಗುರಿ 177.25 ಟಿಎಂಸಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 

 

ಪರಿಸ್ಥಿತಿ ಪರಿಶೀಲಿಸಿ ನಿರ್ದೇಶನ

ಕೇಂದ್ರ ಸರ್ಕಾರದ ಪ್ರಕಾರ, ಕಾವೇರಿ ಕಣಿವೆಯಲ್ಲಿನ ಮಳೆ ಪ್ರಮಾಣ, ಹವಾಮಾನ ಪರಿಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವು ಸೇರಿದಂತೆ ಹಲವು ಅಂಶಗಳನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನಿಯಮಿತ ಸಭೆಗಳಲ್ಲಿ ಪರಿಶೀಲಿಸುತ್ತವೆ. ಈ ಸಭೆಗಳಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ಕಾವೇರಿ ಕಣಿವೆಯ ರಾಜ್ಯಗಳ ಪ್ರತಿನಿಧಿಗಳೂ ಭಾಗವಹಿಸುತ್ತಾರೆ. ಪರಿಶೀಲನೆಯ ನಂತರ ಬಿಳಿಗುಂಡ್ಲು ವಿನಲ್ಲಿ ನಿಗದಿತ ಪ್ರಮಾಣದ ನೀರಿನ ಹರಿವು ಖಚಿತಪಡಿಸಲು ಕರ್ನಾಟಕಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತದೆ. ಹಿಂದಿನ ಸಭೆಗಳಲ್ಲಿ ನೀಡಿದ ನಿರ್ದೇಶನಗಳ ಅನುಷ್ಠಾನವನ್ನೂ ಮುಂದಿನ ಸಭೆಗಳಲ್ಲಿ ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜಕೀಯ ಹಾಗೂ ನೀರಾವರಿ ದೃಷ್ಟಿಯಿಂದ ಮಹತ್ವ

ಕಾವೇರಿ ನೀರಿನ ಹಂಚಿಕೆ ಪ್ರತಿವರ್ಷ ಮುಂಗಾರು ಅವಧಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಪ್ರಮುಖ ಚರ್ಚೆಯ ವಿಷಯವಾಗುತ್ತದೆ.  ಈ ಬಾರಿ ರಾಜ್ಯಸಭೆಯಲ್ಲಿ ಮಂಡಿಸಲಾದ ಅಂಕಿ-ಅಂಶಗಳು, ಜೂನ್ ಮತ್ತು ಜುಲೈ ತಿಂಗಳಲ್ಲಿ ನಿಗದಿತ ಪ್ರಮಾಣದ ನೀರಿನ ಹರಿವು ಮತ್ತು ವಾಸ್ತವ ಹರಿವಿನ ನಡುವೆ ಗಮನಾರ್ಹ ಅಂತರವಿರುವುದನ್ನು ತೋರಿಸುತ್ತವೆ. ಆದರೆ, ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಈ ವ್ಯತ್ಯಾಸದ ಕಾರಣವನ್ನು ಪ್ರತ್ಯೇಕವಾಗಿ ವಿವರಿಸದೇ, ಮಳೆ, ಜಲಾಶಯಗಳ ಸಂಗ್ರಹ ಮತ್ತು ಜಲವೈಜ್ಞಾನಿಕ ಪರಿಸ್ಥಿತಿಯನ್ನು ಆಧರಿಸಿ ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ನಿರಂತರವಾಗಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ನಿರ್ದೇಶನಗಳನ್ನು ನೀಡುತ್ತಿವೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಷಯವನ್ನು ಚರ್ಚಿಸಲು ಮೇಲ್ ಮತ್ತು ಕೆಳ ನದಿ ತೀರ್ಪಿನ ರಾಜ್ಯಗಳ ಮುಖ್ಯಮಂತ್ರಿಗಳ ಉದ್ದೇಶಿತ ಸಭೆಯನ್ನು ನಡೆಸಲು ನಿರಾಕರಿಸುವಂತೆ ತಮಿಳುಳಗ ಕಾವೇರಿ ವಿವಸಾಯಿಗಳ ಸಂಗಮ್ (TCVS) ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಒತ್ತಾಯಿಸಿದೆ. ಏಕೆಂದರೆ ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು  ಟಿಸಿವಿಎಸ್ ಪ್ರಧಾನ ಕಾರ್ಯದರ್ಶಿ ಪಿಆರ್ ಪಾಂಡಿಯನ್ ಹೇಳಿಕೆ ನೀಡಿದ್ದರು.

2012-13ರ ಕೃಷಿ ಋತುವಿನಲ್ಲಿ, ಕರ್ನಾಟಕ ಸರ್ಕಾರವು 2007 ರಲ್ಲಿ ಹೊರಡಿಸಲಾದ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದ ಪ್ರಕಾರ ನದಿಗೆ ನೀರು ಬಿಡಲು ವಿಫಲವಾಗಿತ್ತು. ಹೀಗಾಗಿ  ಕಾರಣ, ರಾಜ್ಯ (ತಮಿಳುನಾಡು), ವಿಶೇಷವಾಗಿ ಡೆಲ್ಟಾ ಪ್ರದೇಶವು ತೀವ್ರ ಬರಗಾಲಕ್ಕೆ ಒಳಗಾಗಿತ್ತು.  2012 ರಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ತಮಿಳುನಾಡು ಸರ್ಕಾರವು ಕರ್ನಾಟಕಕ್ಕೆ ನಿರ್ದೇಶನಗಳನ್ನು ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು.

ನ್ಯಾಯಾಧೀಶರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಭೇಟಿಯಾಗಿ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸೂಚಿಸಿದ್ದರು. ಸುಪ್ರೀಂಕೋರ್ಟ್‌ನ ಹಸ್ತಕ್ಷೇಪ ಪರಿಣಾಮವಾಗಿ 2012ರ ನವೆಂಬರ್‍‌ನಲ್ಲಿ ಬೆಂಗಳೂರಿನಲ್ಲಿ ಒಂದು ಸಭೆ ಆಯೋಜಿಸಿತ್ತು. ತಮಿಳುನಾಡಿನಲ್ಲಿ ಬೆಳೆಉ ನಿಂತಿದ್ದ ಸಾಂಬಾ ಬೆಳೆಯನ್ನು ಉಳಿಸಲು ತಕ್ಷಣ ನೀರು ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳುವ ತನ್ನ ನಿಲುವಿನಲ್ಲಿ ಜಯಲಲಿತಾ ಅವರು ದೃಢವಾಗಿ ನಿಂತಿದ್ದರು. ಕರ್ನಾಟಕ ಸರ್ಕಾರವು ಅವರ ಬೇಡಿಕೆಯನ್ನು ತಕ್ಷಣವೇ ಪೂರೈಸುವ ಸ್ಥಿತಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಅವರು ಬರಿಗೈಯಲ್ಲಿ  ಹಿಂತಿರುಗಿದ್ದರು.

ತರುವಾಯ ಅಂದಿನ ಎಎಐಡಿಎಂಕೆ ಸರ್ಕಾರವು ಸುಪ್ರೀಂಕೋರ್ಟ್‌ ನಿರ್ದೇಸನದ ಮೇಲ್‌ ಮತ್ತು ಕೆಳ ನದಿ ಪಾತ್ರ ರಾಜ್ಯ ಸರ್ಕಾರಗಳ ನೀರಿನ ಹಂಚಿಕೆಯ ಸಭೆಯ ಫಲಿತಾಂಶದ ಕುರಿತು ವರದಿಯನ್ನು ಮಂಡಿಸಿತ್ತು. ಸುಪ್ರೀಂ ಕೋರ್ಟ್‌, ಎರಡೂ ಸರ್ಕಾರಗಳು ಈ ವಿಷಯದ ಬಗ್ಗೆ ಸ್ವಂತವಾಗಿ ಸಂವಾದ ನಡೆಸುವುದು ಮತ್ತು ಮತ್ತು ಸಭೆ ಆಯೋಜಿಸುವುದನ್ನು ನಿರ್ಬಂಧಿಸಿತ್ತು. ಕರ್ನಾಟಕದ ಅಣೆಕಟ್ಟುಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಿತ್ತು. ಅಲ್ಲದೇ ಈ ಸಮಸ್ಯೆಯನ್ನು ಪರಿಹರಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್‌ ಅವರಿಗೆ ನಿರ್ದೇಶನ ನೀಡಿತ್ತು.

ಇತಿಹಾಸ ಹೀಗಿದ್ದರೂ ಸುಪ್ರೀಮ ಕೋರ್ಟ್‌ನ ನಿರ್ದೇಶನಗಳ ಪ್ರಕಾರ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶಕ್ಕೆ ಸಂಬಂಧಿಸಿದಂತೆ ನೀರಿನ ಹಂಚಿಕೆಯನ್ನು ಮೇಲ್ವಿಚಾರಣೆ ಮಾಡುವ ಖಚಿತಪಡಿಸಿಕೊಳ್ಳಲು ಶಾಸನಬದ್ಧ ಸಂಸ್ಥೆಯಾದ ಕಾವೇರಿ ನದಿ ನೀರು ನಿರ್ವಹಣೆಯನ್ನು ನಿರ್ಲಕ್ಷ್ಯಿಸಿ ಎರಡು ನದಿ ಪಾತ್ರಗಳ ರಾಜ್ಯಗಳ ಮುಖ್ಯಮಂತ್ರಿಗಳ ಮಟ್ಟದಲ್ಲಿ ಸಂವಾದ ನಡೆಸುವುದು, ಸಭೆಯನ್ನು ಆಯೋಜಿಸುವುದು ತಮಿಳುನಾಡಿನ ಕಡೆಯಿಂದ ಬುದ್ಧಿವಂತಿಕೆಯಾಗುವುದಿಲ್ಲ ಎಂದು ಎರಡು ದಿನದ ಹಿಂದೆಯಷ್ಟೇ ಟಿಸಿವಿಎಸ್‌ ಪ್ರಧಾನ ಕಾರ್ಯದರ್ಶಿ ಪಿ ಆರ್ ಪಾಂಡಿಯನ್ ಅವರು ಪ್ರತಿಪಾದಿಸಿದ್ದರು.

ಇದಲ್ಲದೇ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತೀವ್ರವಾಗಿ ಮುಂದುವರೆಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಲು ನಿರಾಕರಿಸಿದೆ ಎಂದು ವರದಿಗಳು ಹೊರಬಿದ್ದಿವೆ. ಹೀಗಾಗಿ ತಮಿಳುನಾಡು ಮುಖ್ಯಮಂತ್ರಿಯವರು ಪ್ರಸ್ತಾವಿತ ಸಭೆಯೊಂದಿಗೆ ಮುಂದುವರೆಯದಿರುವುದು ಸೂಕ್ತ ಎಂದು ಪಾಂಡಿಯನ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕಡೆಗಣಿಸಿ ಕರ್ನಾಟಕದಿಂದ ಇಂತಹ ಕೋರಿಕೆಗಳನ್ನು ಸ್ವೀಕರಿಸದಂತೆ ಮನವಿ ಮಾಡಬೇಕು ಎಂದು ಡೆಲ್ಟಾ ರೈತರು, ತಮಿಳುನಾಡಿನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಯೋಚಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Hot this week

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...
Please Scan to make Your Contribution

Topics

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

Related Articles

Popular Categories

error: Content is protected !!