Monday | September 7, 2026 |

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಕರೆದಿದ್ದ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿನ ಲೀಡ್‌ ಮೆಂಬರ್ ವಹಿವಾಟೇ ಶೂನ್ಯದಿಂದ ಕೂಡಿತ್ತು. ಆದರೂ ಅವರನ್ನು ತಾಂತ್ರಿಕವಾಗಿ ಅರ್ಹಗೊಳಿಸಿತ್ತು. ಅಲ್ಲದೇ ಅಂತಿಮವಾಗಿ ಅವರೇ ಎಲ್‌ 1 ಬಿಡ್‌ದಾರರಾಗಿ ಹೊರಹೊಮ್ಮಿದ್ದರು ಎಂದು ಆರ್ಥಿಕ ಇಲಾಖೆಯು 21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆಯ ಮತ್ತೊಂದು ಮುಖವನ್ನು ಪರಿಚಯಿಸಿದೆ.

ಇದೇ ಟೆಂಡರ್ ಪ್ರಕ್ರಿಯೆಗಳಲ್ಲಿನ ಹಲವು ಲೋಪಗಳ ಕುರಿತು ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್‌ ಅವರ ನೇತೃತ್ವದ ಸಮಿತಿಯು ಬಲವಾಗಿ ಆಕ್ಷೇಪಗಳನ್ನು ಎತ್ತಿತ್ತು. ಈ ಆಕ್ಷೇಪಗಳನ್ನು ಬಿಎಸ್‌ಡಬ್ಲ್ಯೂಎಂಎಲ್ ಒಪ್ಪಿರಲಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯೂ ಸಹ ಮತ್ತಷ್ಟು ತಕರಾರುಗಳನ್ನು ಎತ್ತಿದೆ. ಆದರೆ ಈ ತಕರಾರುಗಳನ್ನೂ ಯಥಾ ಪ್ರಕಾರ ಬಿಎಸ್‌ಡಬ್ಲ್ಯುಎಂಎಲ್ ತಳ್ಳಿ ಹಾಕಿದೆ!

ಆರ್ಥಿಕ ಇಲಾಖೆಯ ಅವಲೋಕನಗಳ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು  ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಆರ್ಥಿಕ ಇಲಾಖೆಯು ಮಾಡಿರುವ ಆವಲೋಕನಗಳ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಬಿಡ್‌ ಸಾಮರ್ಥ್ಯ ಸೂತ್ರವೇ ದೋಷಪೂರಿತ

21 ಪ್ಯಾಕೇಜ್‌ಗಳ ಟೆಂಡರ್‍‌ನಲ್ಲಿ ನಮೂದಿಸಿದ್ದ ಬಿಡ್‌ ಸಾಮರ್ಥ್ಯದ ಸೂತ್ರವೇ ದೋಷಪೂರಿತ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿದೆ. ಬಿಡ್ ಸಾಮರ್ಥ್ಯವನ್ನು ಗುತ್ತಿಗೆದಾರನ ನಿಜವಾದ ಹಿಂದಿನ ಕಾಮಗಾರಿ ನಿರ್ವಹಣಾ ಮೌಲ್ಯದ ಬದಲಿಗೆ, ಸ್ವಯಂ ವರದಿ ಮಾಡಲಾದ ವಹಿವಾಟು (Turnover) ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಇದರಿಂದ ಗುತ್ತಿಗೆದಾರನ ನೈಜ ಸಾಮರ್ಥ್ಯವು ಪ್ರತಿಬಿಂಬಿತವಾಗುವುದಿಲ್ಲ. ಇದಕ್ಕೆ ಹೆಚ್ಚುವರಿಯಾಗಿ, ಐದು ಒಕ್ಕೂಟದ ಸದಸ್ಯರಲ್ಲಿ ಕೇವಲ ಒಬ್ಬ ಸದಸ್ಯರು ಮಾತ್ರ ತಾಂತ್ರಿಕವಾಗಿ ಅರ್ಹರಾಗಿರಬೇಕು ಎಂಬ ಅವಶ್ಯಕತೆಯನ್ನು ಸೇರಿಸಿದೆ. ಇದರಿಂದ  ಕಡಿಮೆ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣಾ ಕ್ಷಮತೆ ಹೊಂದಿರುವ ಗುತ್ತಿಗೆದಾರರು ಬಿಡ್‌ಗಳನ್ನು ಗೆಲ್ಲುವ ಸಾಧ್ಯತೆ ಉಂಟಾಗಬಹುದು. ಇದರಿಂದ ಸೇವೆಗಳ ಕಳಪೆ ಕಾರ್ಯಗತಗೊಳಿಸುವಿಕೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ಎಚ್ಚರಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ಸ್ಟಾಂಡರ್ಡ್‌ ಬಿಡ್‌ ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಿರುವ ಷರತ್ತು ಮತ್ತು ಬಿಎಸ್‌ಡಬ್ಲ್ಯೂಎಂಎಲ್ ಪರಿಗಣಿಸಿರುವ ಅಂಶಗಳ ನಡುವೆಯೇ ಗಮನಾರ್ಹ ವ್ಯತ್ಯಾಸವಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿದೆ. ಅಲ್ಲದೇ ಹಣಕಾಸು ಇಲಾಖೆಯು 2005ರ ಆಗಸ್ಟ್ 6ರಂದು  ಹೊರಡಿಸಿದ್ದ ಸುತ್ತೋಲೆಯನ್ನೂ ಸಹ ಪಾಲಿಸಿಲ್ಲ. ಇದು ಬಿಎಸ್‌ಡಬ್ಲ್ಯೂಎಂಎಲ್‌ ಮಾಡಿರುವ ಲೋಪವಾಗಿದೆ ಎಂದು ಹೇಳಿದೆ.

 

 

ಆರ್ಥಿಕ ಇಲಾಖೆಯು ಮಾಡಿರುವ ಈ ಅವಲೋಕನವನ್ನೂ ಬಿಎಸ್‌ಡಬ್ಲ್ಯೂಎಂಎಲ್‌ ಒಪ್ಪಿಲ್ಲ.

ಬಿಡ್ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಅಳವಡಿಸಿಕೊಂಡಿರುವ ವಿಧಾನವು ಟೆಂಡರ್ ದಾಖಲೆಯಲ್ಲಿರುವ ನಿಬಂಧನೆಗಳಿಗೆ ಅನುಗುಣವಾಗಿದೆ. , ನಿಗದಿಪಡಿಸಲಾದ ಬಿಡ್ ಸಾಮರ್ಥ್ಯ ಸೂತ್ರವನ್ನು ಆಧರಿಸಿದೆ. ಈ ಸೂತ್ರವು ಬಿಡ್‌ದಾರನ ಹಿಂದಿನ ಕಾಮಗಾರಿ ನಿರ್ವಹಣೆಯನ್ನು ಮಾತ್ರವಲ್ಲದೆ, ಈಗಿರುವ ಬದ್ಧತೆಗಳ ಮೌಲ್ಯ ಮತ್ತು ನಿಗದಿತ ಒಪ್ಪಂದ ಅವಧಿಯನ್ನೂ ಪರಿಗಣಿಸುತ್ತದೆ  ಅದರಂತೆ, ಬಿಡ್ ಸಾಮರ್ಥ್ಯವನ್ನು ಸ್ವಯಂ-ವರದಿ ಮಾಡಲಾದ ವಹಿವಾಟಿನ (Turnover) ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗಿಲ್ಲ. ಬದಲಾಗಿ, ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ಬಿಡ್‌ದಾರನ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಮೂಲಕ ನಿರ್ಧರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಇದಲ್ಲದೆ, ಟೆಂಡರ್ ದಾಖಲೆಯು ನಿಗದಿಪಡಿಸಲಾದ ತಾಂತ್ರಿಕ ಮತ್ತು ಹಣಕಾಸು ಅರ್ಹತಾ ಮಾನದಂಡಗಳನ್ನು ಮುಖ್ಯ ಸದಸ್ಯ (Lead Member) ಅಥವಾ ಎಲ್ಲಾ ಒಕ್ಕೂಟದ (Consortium) ಸದಸ್ಯರ ಒಟ್ಟಾರೆ ಸಾಮರ್ಥ್ಯದ ಮೂಲಕ ಪೂರೈಸಲು ಸ್ಪಷ್ಟವಾಗಿ ಅವಕಾಶ ನೀಡಿದೆ.  ಆದ್ದರಿಂದ, ಯಾವುದೇ ಅಸಂಗತ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕವಲ್ಲದೆ, ಟೆಂಡರ್‌ನಲ್ಲಿರುವ ನಿಬಂಧನೆಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ ಒಕ್ಕೂಟದ ಅರ್ಹತೆಯನ್ನು ಮೌಲ್ಯಮಾಪನ ಮಾಡಲಾಗಿದೆ ಎಂದು ತಿಳಿಸಿದೆ.

ಈ ಒಕ್ಕೂಟದ ಚೌಕಟ್ಟಿನಲ್ಲಿ ಸಂಯುಕ್ತ ಮತ್ತು ಪ್ರತ್ಯೇಕ ಹೊಣೆಗಾರಿಕೆ (Joint and Several Liability), ಒಪ್ಪಂದದ ಜ್ಞಾಪನಾ ಪತ್ರ (Memorandum of Agreement), ವಿಶೇಷ ಉದ್ದೇಶದ ವಾಹನ (Special Purpose Vehicle – SPV), ಕಾರ್ಯಕ್ಷಮತಾ ಭದ್ರತೆ (Performance Security) ಹಾಗೂ ಮುಖ್ಯ ಸದಸ್ಯನ ಕನಿಷ್ಠ ಈಕ್ವಿಟಿ ಪಾಲ್ಗೊಳ್ಳುವಿಕೆ (minimum equity participation) ಸೇರಿದಂತೆ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಈ ಮೂಲಕ ತಾಂತ್ರಿಕ ಮತ್ತು ಆರ್ಥಿಕವಾಗಿ ಸಮರ್ಥವಾಗಿರುವ ಒಕ್ಕೂಟಗಳಿಗೆ ಮಾತ್ರ ಕಾಮಗಾರಿಯ ಕಾರ್ಯಗತಗೊಳಿಸುವಿಕೆಯನ್ನು ವಹಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಲಾಗಿದೆ ಎಂದು ಸಮಜಾಯಿಷಿ ನೀಡಿದೆ.

ಲೀಡ್‌ ಮೆಂಬರ್‍‌ನ ಅರ್ಹತೆಯೇ ದುರ್ಬಲವಾಗಿದೆಯೇ?

ಸಾಮಾನ್ಯವಾಗಿ, ಒಪ್ಪಂದದ ಪ್ರಾಥಮಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಮುಖ್ಯ ಸದಸ್ಯರು ಹೊಂದಿರಬೇಕು. ಯಾವುದೇ ಮುಖ್ಯ ಸದಸ್ಯರಿಗೆ ಅಥವಾ ಹಣಕಾಸು ಸಾಮರ್ಥ್ಯ ಹೊಂದಿರದ ಮುಖ್ಯ ಸದಸ್ಯರಿಗೆ ಅವಕಾಶ ನೀಡುವುದು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು ವಹಿವಾಟು (Turnover) ಸಾಮರ್ಥ್ಯವನ್ನು ಪರಿಗಣಿಸಿ ಅರ್ಹತೆ ನೀಡುವುದು, ಒಪ್ಪಂದದ ಕಾರ್ಯಕ್ಷಮತೆ ಮತ್ತು ಜಾರಿಗೊಳಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಆರ್ಥಿಕ ಇಲಾಖೆಯು ಬಯಲು ಮಾಡಿದೆ.

ನಿಗದಿಪಡಿಸಲಾದ ಮುಖ್ಯ ಸದಸ್ಯರಿಗೆ ಸ್ವತಂತ್ರ ಬಿಡ್/ವಹಿವಾಟು ಸಾಮರ್ಥ್ಯ ಇಲ್ಲದಿರುವ ಅಥವಾ ಅತಿ ಹೆಚ್ಚು ಕೊಡುಗೆ ನೀಡಿದ ಸದಸ್ಯರನ್ನು ಮುಖ್ಯ ಸದಸ್ಯರನ್ನಾಗಿ ಮಾಡದಿರುವ ಪ್ಯಾಕೇಜ್‌ಗಳಲ್ಲಿ ಇಂತಹ ವ್ಯವಸ್ಥೆ ಸ್ವೀಕಾರಾರ್ಹವಲ್ಲ.  ಮತ್ತು ಒಪ್ಪಂದವನ್ನು ಜಾರಿಗೊಳಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ಪ್ರಮಾಣಿತ ಬಿಡ್ ದಾಖಲೆಯಿಂದ ಗಮನಾರ್ಹವಾಗಿ ದಾರಿತಪ್ಪಿಸಲಾಗಿದೆ.  ಒಪ್ಪಂದದ ವಾಸ್ತವಿಕ ಕಾರ್ಯಗತಗೊಳಿಸುವಿಕೆಯ ಸಂದರ್ಭದಲ್ಲಿ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಹುದು ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ಎಚ್ಚರಿಸಿದೆ.

ಎಲ್‌ ಬಿಡ್‌ದಾರರ ವಹಿವಾಟೇ ಶೂನ್ಯ

ಎಲ್ 1 ಬಿಡ್‌ದಾರರಲ್ಲಿ ಇಬ್ಬರು ಮುಖ್ಯ ಸದಸ್ಯರೇ ಶೂನ್ಯ ವಹಿವಾಟು ಹೊಂದಿದ್ದಾರೆ. ಹೀಗಾಗಿ ಅವರನ್ನು ಮುಖ್ಯ ಬಿಡ್‌ದಾರರು ಎಂದು ಪರಿಗಣಿಸಬಾರದು ಎಂದು ಆರ್ಥಿಕ ಇಲಾಖೆಯ ಹೇಳಿದೆ.

ಟೆಂಡರ್ ಪ್ರಕ್ರಿಯೆ ಮತ್ತು ಒಪ್ಪಂದ ನಿರ್ವಹಣೆಯಲ್ಲಿ ಲೀಡ್‌ ಮೆಂಬರ್‍‌ಗೆ ಪ್ರಮುಖವಾದ ಸ್ಥಾನವಿದೆ. ಒಪ್ಪಂದ ನಿರ್ವಹಣೆಯೂ ಅವರ ಜವಾಬ್ದಾರಿಯಾಗಿದೆ. ಅಲ್ಲದೇ ವಹಿವಾಟು (ಟರ್ನ್ ಓವರ್) ಷರತ್ತಿನ ಪ್ರಕಾರ ಇದನ್ನು ಸಾಮೂಹಿಕವಾಗಿ ಪೂರೈಸಬೇಕು. ಆದರೆ ಪ್ಯಾಕೇಜ್‌ 7 ಮತ್ತು 9ರಲ್ಲಿ ಲೀಡ್‌ ಮೆಂಬರ್‍‌ನ ವಹಿವಾಟೇ ಶೂನ್ಯದಿಂದ ಕೂಡಿದೆ. ಆದರೂ ಈ ಕನ್ಸೋರ್ಟಿಯಂನ್ನೇ ತಾಂತ್ರಿಕವಾಗಿ ಅರ್ಹಗೊಳಿಸಿದೆ. ಇದೇ ಪ್ಯಾಕೇಜ್‌ 7 ಮತ್ತು 9 ರಲ್ಲಿ  ಶೂನ್ಯ ವಹಿವಾಟು ಹೊಂದಿರುವವರೇ ಎಲ್‌ 1 ಆಗಿ ಆಯ್ಕೆಯಾಗಿದ್ದಾರೆ ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಆರ್ಥಿಕ ಇಲಾಖೆಯು ಮಾಡಿರುವ ಈ ಅವಲೋಕನಕ್ಕೆ ಬಿಎಸ್‌ಡಬ್ಲ್ಯೂಎಂಎಲ್‌ ತನ್ನ ಸಮರ್ಥನೆ ಒದಗಿಸಿದೆ.

ಪರಿಷ್ಕೃತ ಸೇವಾ ವಿತರಣಾ ಮಾದರಿಯಡಿ, ಈ ಹಿಂದೆ ಇದ್ದ 243 ವಾರ್ಡ್‌ಮಟ್ಟದ ಕಾರ್ಯಾಚರಣೆಗಳನ್ನು 33 ದೊಡ್ಡ ಕಾರ್ಯಾಚರಣಾ ಪ್ಯಾಕೇಜ್‌ಗಳಾಗಿ ಏಕೀಕರಿಸಲಾಗಿದೆ. ಪ್ರತಿಯೊಂದು ಪ್ಯಾಕೇಜ್‌ಗೂ ಗಣನೀಯವಾಗಿ ಹೆಚ್ಚಿನ ವಾಹನಪಡೆ (Fleet Strength), ಮಾನವ ಸಂಪನ್ಮೂಲ, ಕಾರ್ಯಾಚರಣಾ ಮೂಲಸೌಕರ್ಯ, ತಾಂತ್ರಿಕ ಪರಿಣತಿ ಮತ್ತು ಹಣಕಾಸು ಸಂಪನ್ಮೂಲಗಳ ನಿಯೋಜನೆಯ ಅಗತ್ಯವಿದೆ ಎಂದು ಸಮರ್ಥಿಸಿಕೊಂಡಿದೆ.

‘ಆದ್ದರಿಂದ, ತಾಂತ್ರಿಕವಾಗಿ ಸಮರ್ಥ ಮತ್ತು ಆರ್ಥಿಕವಾಗಿ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ, ಬಿಡ್ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಒಕ್ಕೂಟದ ಮಾದರಿಯನ್ನು ಪರಿಚಯಿಸಲಾಗಿದೆ,’ ಎಂದು ಹೇಳಿದೆ.

ಸ್ವತಂತ್ರ ವಹಿವಾಟು ಕಡ್ಡಾಯವಲ್ಲ

ಟೆಂಡರ್‍‌ ದಾಖಲೆಯಲ್ಲಿಯೇ ಮುಖ್ಯ ಸದಸ್ಯರ ಅಂದರೇ ಲೀಡ್‌ ಮೆಂಬರ್‍‌ ನ ಸ್ವತಂತ್ರ ವಹಿವಾಟು ಕಡ್ಡಾಯಗೊಳಿಸಿಲ್ಲ . ಮತ್ತು ಮುಖ್ಯ ಸದಸ್ಯರು ಅಥವಾ ಒಕ್ಕೂಟದ ಎಲ್ಲಾ ಸದಸ್ಯರ ಒಟ್ಟು ಸಾಮರ್ಥ್ಯವು ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಹೇಳಿದೆ. ‘ಹೀಗಾಗಿ, ಮುಖ್ಯ ಸದಸ್ಯರು ಮಾತ್ರ ಸ್ವತಂತ್ರವಾಗಿ ಈ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಟೆಂಡರ್ ಷರತ್ತುಗಳು ನಿಗದಿಪಡಿಸುವುದಿಲ್ಲ,’ ಎಂದು ಬಿಎಸ್‌ಡಬ್ಲ್ಯೂಎಂಎಲ್‌, ಆರ್ಥಿಕ ಇಲಾಖೆಯ ಮುಂದೆ ಪ್ರತಿಪಾದಿಸಿರುವುದು ಗೊತ್ತಾಗಿದೆ.

ಅಲ್ಲದೇ  ‘ನಿಗದಿಪಡಿಸಲಾದ ವಹಿವಾಟು ಅಥವಾ ಹಣಕಾಸು ಸಾಮರ್ಥ್ಯವನ್ನು ಮುಖ್ಯ ಸದಸ್ಯರು ಸ್ವತಂತ್ರವಾಗಿ ಹೊಂದಿರಬೇಕು ಎಂದು ಹೇಳುವುದಿಲ್ಲ. ಬದಲಾಗಿ, ಅರ್ಹತಾ ಮಾನದಂಡಗಳು ಒಕ್ಕೂಟದ (Consortium) ಒಟ್ಟಾರೆ ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯವನ್ನು ಅರ್ಹತೆಗಾಗಿ ಉದ್ದೇಶಪೂರ್ವಕವಾಗಿ ಪರಿಗಣಿಸುತ್ತವೆ. ಅದರಂತೆ, ಒಕ್ಕೂಟದ ಒಟ್ಟು ವಹಿವಾಟು ಮತ್ತು ತಾಂತ್ರಿಕ ಸಾಮರ್ಥ್ಯದ ಆಧಾರದ ಮೇಲೆ ಒಕ್ಕೂಟಕ್ಕೆ ಅರ್ಹತೆ ನೀಡುವುದು ಟೆಂಡರ್ ಷರತ್ತುಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದ್ದು, ಅನುಮೋದಿತ ಬಿಡ್ ದಾಖಲೆಯಿಂದ ಯಾವುದೇ ವಿಚಲನವನ್ನು ಉಂಟುಮಾಡುವುದಿಲ್ಲ,’ ಎಂದು ವಿವರಿಸಿದೆ.

ವಹಿವಾಟು ನಿರ್ಧರಿಸಿಲ್ಲವೇಕೆ?

ಟೆಂಡರ್ ದಾಖಲೆಯ ಅಡಿಯಲ್ಲಿ ಮುಖ್ಯ ಸದಸ್ಯರ ಪಾತ್ರವನ್ನು ಅವರ ವೈಯಕ್ತಿಕ ವಹಿವಾಟಿನಿಂದ ನಿರ್ಧರಿಸಲಾಗುವುದಿಲ್ಲ. ಬದಲಾಗಿ, ಖರೀದಿ ಪ್ರಕ್ರಿಯೆ ಮತ್ತು ಒಪ್ಪಂದದ ಕಾರ್ಯಗತಗೊಳಿಸುವಿಕೆಯ ಸಂಪೂರ್ಣ ಅವಧಿಯಲ್ಲಿ ಒಕ್ಕೂಟವನ್ನು ಪ್ರತಿನಿಧಿಸುವ ಮತ್ತು ಸಮನ್ವಯಗೊಳಿಸುವ ಅವರ ಜವಾಬ್ದಾರಿಯಿಂದ ನಿರ್ಧರಿಸಲಾಗುತ್ತದೆ ಎಂದಿರುವ ಬಿಎಸ್‌ಡಬ್ಲ್ಯುಎಂಎಲ್, ಲೀಡ್‌ ಮೆಂಬರ್‍‌ಗೆ ನೀಡಿರುವ ನಿರ್ದಿಷ್ಟ ಅಧಿಕಾರದ ಪಟ್ಟಿಯನ್ನು ಒದಗಿಸಿದೆ.

ಬಿಎಸ್‌ಡಬ್ಲ್ಯೂಎಂಲ್ ಮುಂದೆ ಒಕ್ಕೂಟವನ್ನು ಪ್ರತಿನಿಧಿಸಲಿದೆ.  ಎಲ್ಲಾ ಒಪ್ಪಂದಾತ್ಮಕ ಸಂವಹನಗಳನ್ನು ಸಮನ್ವಯಗೊಳಿಸಿ ನಿರ್ವಹಿಸಲಿದೆ.  ಒಕ್ಕೂಟದ ಪರವಾಗಿ ಒಪ್ಪಂದವನ್ನು ಜಾರಿಗೊಳಿಸಿ ನಿರ್ವಹಿಸುವುದು ಮಾತ್ರವಲ್ಲದೇ ಬಿಎಸ್‌ಡಬ್ಲ್ಯೂಎಂಎಲ್ ಜೊತೆ  ಸಂಪರ್ಕ ಸಾಧಿಸುವ ಏಕೈಕ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿದೆ.  ಸರಿಯಾಗಿ ಕಾರ್ಯಗತಗೊಳಿಸಲಾದ ಅಧಿಕಾರ ಪತ್ರದ (Power of Attorney) ಮೂಲಕ ಎಲ್ಲಾ ಒಕ್ಕೂಟದ ಸದಸ್ಯರನ್ನು ಬದ್ಧಗೊಸಲಿದೆ ಎಂದು ವಿವರಿಸಿದೆ.

‘ಅದರಂತೆ ಮುಖ್ಯ ಸದಸ್ಯರ ನೇಮಕಾತಿಯು ಆಡಳಿತಾತ್ಮಕ ಮತ್ತು ಪ್ರತಿನಿಧಿತ್ವದ ಕಾರ್ಯವಾಗಿದೆ. ಇದು ಟೆಂಡರ್ ಅಡಿಯಲ್ಲಿ ನಿಗದಿಪಡಿಸಲಾದ ಸಂಪೂರ್ಣ ಹಣಕಾಸು ಅಥವಾ ವಹಿವಾಟು ಸಾಮರ್ಥ್ಯವನ್ನು ಮುಖ್ಯ ಸದಸ್ಯರು ಮಾತ್ರ ಸ್ವತಂತ್ರವಾಗಿ ಹೊಂದಿರಬೇಕು ಎಂಬುದನ್ನು ಸೂಚಿಸುವ ಉದ್ದೇಶವನ್ನು ಹೊಂದಿಲ್ಲ,’ ಎಂದು ಸಮಜಾಯಿಷಿ ನೀಡಿದೆ.

ಒಪ್ಪಂದ ಜಾರಿ ಸಾಮರ್ಥ್ಯ ದುರ್ಬಲಗೊಳ್ಳಲಿದೆಯೇ?

ಲೀಡ್‌ ಮೆಂಬರ್‍‌  ಕಡಿಮೆ ಅಥವಾ ಶೂನ್ಯ ವಹಿವಾಟು ಹೊಂದಿರಬಹುದಾದ ಕಾರಣದಿಂದ ಒಪ್ಪಂದವನ್ನು ಜಾರಿಗೊಳಿಸುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ ಎಂಬ ಆಕ್ಷೇಪಣೆ ಕುರಿತು ಸಮರ್ಥನೆ ನೀಡಿರುವ ಬಿಎಸ್‌ಡಬ್ಲ್ಯೂಎಂಎಲ್ ‘ ಟೆಂಡರ್ ಷರತ್ತುಗಳಲ್ಲಿ ಅಳವಡಿಸಲಾದ ಬಹುಪಾಲು ಒಪ್ಪಂದಾತ್ಮಕ ಸುರಕ್ಷತಾ ಕ್ರಮಗಳನ್ನು ಪರಿಗಣಿಸಿದಾಗ ಸಮರ್ಥನೀಯವಾಗುವುದಿಲ್ಲ,’ ಎಂದು ಹೇಳಿದೆ.

ಎಲ್ಲಾ ಒಕ್ಕೂಟದ ಸದಸ್ಯರು ಸಹಿ ಮಾಡಿರುವ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಒಪ್ಪಂದದ ಜ್ಞಾಪನಾ ಪತ್ರ (Memorandum of Agreement – MoA) ಅನ್ನು ಕಾರ್ಯಗತಗೊಳಿಸುವುದು; ಯೋಜನೆಯ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶದ ವಾಹನ (Special Purpose Vehicle – SPV) ಸ್ಥಾಪಿಸುವುದು; ನಿಗದಿಪಡಿಸಲಾದ ಲಾಕ್-ಇನ್ ಅವಧಿಯ (Lock-in Period) ಪೂರ್ಣ ಅವಧಿಯಲ್ಲಿ SPV ಯಲ್ಲಿ ಮುಖ್ಯ ಸದಸ್ಯರು ಕನಿಷ್ಠ ಶೇ.  30 ರಷ್ಟು ಈಕ್ವಿಟಿ ಪಾಲನ್ನು ಹೊಂದಿರಲಿದೆ. ಒಕ್ಕೂಟದ ಪರವಾಗಿ ಕಾರ್ಯನಿರ್ವಹಿಸಲು ಮುಖ್ಯ ಸದಸ್ಯರಿಗೆ ಅಧಿಕಾರ ನೀಡುವ ಕಾನೂನುಬದ್ಧವಾಗಿ ಬದ್ಧಗೊಳಿಸುವ ಅಧಿಕಾರ ಪತ್ರ (Power of Attorney) ಅನ್ನು ಕಾರ್ಯಗತಗೊಳಿಸಲಿದೆ ಎಂದು ವಿವರಿಸಿದೆ.

ಒಪ್ಪಂದದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಒಕ್ಕೂಟದ ಸದಸ್ಯರ ಸಂಯುಕ್ತ ಮತ್ತು ಪ್ರತ್ಯೇಕ ಹೊಣೆಗಾರಿಕೆ (Joint and Several Liability), ಒಕ್ಕೂಟದ ಸದಸ್ಯರ ನಡುವೆ ಜವಾಬ್ದಾರಿಗಳ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಹಂಚಿಕೆ; ಮತ್ತು ನಿಗದಿಪಡಿಸಲಾದ ಲಾಕ್-ಇನ್ ಅವಧಿಯನ್ನು ಪಾಲಿಸಲಿದೆ.  ಇದರಿಂದ ಒಕ್ಕೂಟದ ರಚನೆಯಲ್ಲಿ ಯಾವುದೇ ಅನಿಯಂತ್ರಿತ ಬದಲಾವಣೆಗಳನ್ನು ತಡೆಯಲಾಗುತ್ತದೆ. ಈ ನಿಬಂಧನೆಗಳು ಪ್ರತಿಯೊಬ್ಬ ಒಕ್ಕೂಟದ ಸದಸ್ಯರು ಒಪ್ಪಂದದ ಕಾರ್ಯನಿರ್ವಹಣೆಗೆ ಕಾನೂನುಬದ್ಧವಾಗಿ ಹೊಣೆಗಾರರಾಗಿರುವುದನ್ನು ಖಚಿತಪಡಿಸುತ್ತವೆ ಎಂದು ಹೇಳಿದೆ.

ಅಲ್ಲದೆ, ಒಕ್ಕೂಟದ ವಿರುದ್ಧ ಒಪ್ಪಂದಾತ್ಮಕ ಬಾಧ್ಯತೆಗಳನ್ನು ಒಟ್ಟಾರೆಯಾಗಿ ಜಾರಿಗೊಳಿಸಲು ಬಿಎಸ್‌ಡಬ್ಲ್ಯೂಎಂಎಲ್‌ ಹಕ್ಕು  ಹೊಂದಿದೆ. ಆದ್ದರಿಂದ, ಒಪ್ಪಂದವನ್ನು ಜಾರಿಗೊಳಿಸುವ ಸಾಮರ್ಥ್ಯವು ಮುಖ್ಯ ಸದಸ್ಯರ ವೈಯಕ್ತಿಕ ವಹಿವಾಟಿನ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

ಆರ್ಥಿಕ ಇಲಾಖೆಯು ಶೂನ್ಯ ವಹಿವಾಟಿನ ಕುರಿತು ವ್ಯಕ್ತಪಡಿಸಿದ್ದ ಆಕ್ಷೇಪಣೆಗೂ ಬಿಎಸ್‌ಡಬ್ಲ್ಯುಎಂಎಲ್‌ ತನ್ನ ಸಮಜಾಯಿಷಿ ನೀಡಿದೆ.  ಪ್ಯಾಕೇಜ್‌ಗಳು 7 ಮತ್ತು 9ಕ್ಕೆ ಸಂಬಂಧಿಸಿದಂತೆ, ಮುಖ್ಯ ಸದಸ್ಯರು ಯಾವುದೇ ವಹಿವಾಟು (Nil Turnover) ಹೊಂದಿರಲಿಲ್ಲ ಎಂಬ ಆಕ್ಷೇಪಣೆಯನ್ನು ಮಂಡಳಿಯು  ಪರಿಶೀಲಿಸಿದೆ.

Hot this week

ಪ್ರಜಾಸೇವೆ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ 2.86 ಕೋಟಿ ವೆಚ್ಚ ; ಬರದಿಂದ ತತ್ತರಿಸಿದ್ದರೂ ದುಂದುವೆಚ್ಚಗಳಿಗೆ ಬಿದ್ದಿಲ್ಲ ಕಡಿವಾಣ

ಬೆಂಗಳೂರು;  ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...
Please Scan to make Your Contribution

Topics

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!