Tuesday | July 28, 2026 |

ಪ್ರವಾಸೋದ್ಯಮ ಆದಾಯ; ಲಕ್ಷಾಂತರ ರುಪಾಯಿ ಜಿಎಸ್‌ಟಿ ಕಟಾಯಿಸದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಸಾರ್ವಜನಿಕವಾಗಿ ನಿಧಿ ಬಹಿರಂಗವಾಗಿಲ್ಲವೇಕೆ?

ಬೆಂಗಳೂರು; ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ ಲಭ್ಯವಾಗಿದ್ದ ಆದಾಯದಲ್ಲಿ ಜಿಎಸ್‌ಟಿಯನ್ನೇ ಕಟಾಯಿಸಿರಲಿಲ್ಲ. ಅಲ್ಲದೇ ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆಯು ಹೊರಡಿಸಿದ್ದ ಆದೇಶವನ್ನು ನಿಗದಿತ ಅವಧಿಯೊಳಗೂ ಮೇಲ್ಮನವಿ ಸಲ್ಲಿಸಿರಲಿಲ್ಲ  ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಅಲ್ಲದೇ ಈ ಸಂಬಂಧ ವಾಣಿಜ್ಯ ತೆರಿಗೆ (ಮೇಲ್ಮನವಿ ಪ್ರಾಧಿಕಾರ) ಮಲೆನಾಡು ವಿಭಾಗವು ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಮೇಲ್ಮನವಿಯನ್ನೂ ವಜಾಗೊಳಿಸಿತ್ತು. ವಿಶೇಷವೆಂದರೇ ಈ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ ಪ್ರವಾಸೋದ್ಯಮದಿಂದ ಬಂದ ಆದಾಯವು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ. ಈ ಬೆಳವಣಿಗೆ ನಡುವೆಯೇ ಈ ಪ್ರತಿಷ್ಠಾನವು ಜಿಎಸ್‌ಟಿಯನ್ನೇ ಕಟಾಯಿಸಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2026ರ ಜುಲೈ 6ರಂದು ಸಭೆ ನಡೆಸಿದೆ. ಈ ಸಭೆ ಕುರಿತು ಅಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೂ ಚರ್ಚಿಸಿದ್ದರು ಎಂದು ಗೊತ್ತಾಗಿದೆ.

 

 

 

ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ತೆರಿಗೆ,  ದಂಡದ ಭಾಗವಾಗಿ  47,73,486 ರು ಮೊತ್ತವು ತಕರಾರಿನಿಂದ ಕೂಡಿತ್ತು. ಈ ಮೊತ್ತಕ್ಕೆ ಬಡ್ಡಿ ಮೊತ್ತವೂ ಸೇರಿತ್ತು.

 

 

ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಮೇಲ್ಮನವಿ ವಜಾಗೊಂಡಿದ್ದೇಕೆ?

ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ ಲಭ್ಯವಾಗಿದ್ದ ಆದಾಯದಲ್ಲಿ ಜಿಎಸ್‌ಟಿ ಕಟಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017ರ ಕಲಂ 107(1) ಹಾಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017ರೊಂದಿಗೆ ಓದಿ, ಐಜಿಎಸ್‌ಟಿ ಕಾಯ್ದೆ, 2017ರ ಕಲಂ 20ರ ಅಡಿಯಲ್ಲಿ 2026ರ ಮಾರ್ಚ್‌ 26ರಂದು ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿದ್ದ ಭದ್ರಾ ಟೈಗರ್ ಕನ್ಸರ್ವೇಶನ್ ಫೌಂಡೇಶನ್‌ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (SGST Act, 2017) ರ ಕಲಂ 107(1) ಹಾಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (CGST Act, 2017) ಜೊತೆಗೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (IGST Act, 2017) ರ ಕಲಂ 20ರ ಅನ್ವಯ ಮೇಲ್ಮನವಿಯನ್ನು ಸಲ್ಲಿಸಿತ್ತು.

 

 

2024ರ ಏಪ್ರಿಲ್‌ 2ರಂದು ( CGST Act, 2017 ಹಾಗೂ SGST Act, 2017ರ ಕಲಂ 73(9) ಅಡಿಯಲ್ಲಿ) ನೀಡಿದ್ದ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಪ್ರತಿಷ್ಠಾನವು ಈ ಮೇಲ್ಮನವಿ ಸಲ್ಲಿಸಿತ್ತು.

ಆದೇಶದಲ್ಲೇನಿತ್ತು?

ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (SGST Act, 2017) ಹಾಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 (CGST Act, 2017) ಎರಡೂ ಬಹುತೇಕ ಒಂದೇ ಸ್ವರೂಪದ (pari materia) ಕಾನೂನುಗಳಾಗಿವೆ. ಬಹುತೇಕ ಎಲ್ಲಾ ವಿಷಯಗಳಲ್ಲಿ ಒಂದೇ ರೀತಿಯ ನಿಯಮಗಳನ್ನು ಹೊಂದಿವೆ. ಕೆಲವು ನಿರ್ದಿಷ್ಟ ವಿಧಿಗಳಲ್ಲಷ್ಟೇ ವ್ಯತ್ಯಾಸವಿದೆ. ಆದ್ದರಿಂದ, ಯಾವುದೇ ಭಿನ್ನ ವಿಧಿಯನ್ನು ವಿಶೇಷವಾಗಿ ಉಲ್ಲೇಖಿಸದಿದ್ದರೆ ಸಿಜಿಎಸ್ಸ್ಟಿ ಕಾಯ್ದೆ , 2017ಕ್ಕೆ ನೀಡಿರುವ ಉಲ್ಲೇಖವು ಎಸ್‌ಜಿಎಸ್‌ಟಿ 2017ನಲ್ಲಿರುವ ಅನುಗುಣ ವಿಧಿಗಳಿಗೂ ಅನ್ವಯಿಸುತ್ತದೆ ಎಂದು ಪರಿಗಣಿಸಬೇಕು ಎಂದು ಆದೇಶದಲ್ಲಿ ವಿವರಿಸಿತ್ತು.

ಹಾಗೆಯೇ ಐಜಿಎಸ್‌ಟಿ ಕಾಯ್ದೆ 2017ರ ಕಲಂ 20ರ ಪ್ರಕಾರ ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳಿಗೆ ಒಳಪಟ್ಟಿದೆ. ಇದರ ಪ್ರಕಾರ ಸಿಜಿಎಸ್‌ಟಿ ಕಾಯ್ದೆ 2017ರ ವಿಧಿಗಳು ಅಗತ್ಯ ಬದಲಾವಣೆಗಳೊಂದಿಗೆ ಏಕೀಕೃತ ತೆರಿಗೆಗೆ ಸಂಬಂಧಿಸಿದ ವಿಷಯಗಳಿಗೂ ಅನ್ವಯಿಸುತ್ತವೆ. ಅಂದರೆ, ಅವು ಕೇಂದ್ರ ತೆರಿಗೆಗೆ ಹೇಗೆ ಅನ್ವಯಿಸುತ್ತವೆಯೋ, ಅದೇ ರೀತಿಯಲ್ಲಿ ಐಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ಜಾರಿಗೊಂಡಂತೆಯೇ ಏಕೀಕೃತ ತೆರಿಗೆಗೂ ಅನ್ವಯಿಸುತ್ತವೆ.

ಈ ಪ್ರಕರಣದಲ್ಲಿ ಪ್ರಶ್ನಿತ ಆದೇಶವನ್ನು 2024ರ ಏಪ್ರಿಲ್‌ 25ರಂದೇ ಜಿಎಸ್‌ಟಿ ಪೋರ್ಟಲ್‌ ಮೂಲಕ ಮೇಲ್ಮನವಿದಾರರಿಗೆ ತಿಳಿಸಿತ್ತು. ಎಸ್‌ಜಿಎಸ್‌ಟಿ ಕಾಯ್ದೆ 2017 ಹಾಗೂ ಸಿಜಿಎಸ್‌ಟಿ ಕಾಯ್ದೆ 2017ರ ಕಲಂ 107(1)ರ ಪ್ರಕಾರ, ಮೇಲ್ಮನವಿಯನ್ನು 2024ರ ಜುಲೈ 24ರೊಳಗೇ ಸಲ್ಲಿಸಬೇಕಿತ್ತು. ಆದರೆ ಪ್ರತಿಷ್ಠಾನವು ಪ್ರಸ್ತುತ ಮೇಲ್ಮನವಿಯನ್ನು 2024ರ ಸೆ.30ರಂದು ಆನ್‌ಲೈನ್ ಮೂಲಕ ಸಲ್ಲಿಸಿತ್ತು.

 

 

ಸಿಜಿಎಸ್‌ಟಿ ಕಾಯ್ದೆ 2017ರ ಕಲಂ 107(4)ರ ಪ್ರಕಾರ ಮನ್ನಿಸಬಹುದಾದ ಹೆಚ್ಚುವರಿ ಒಂದು ತಿಂಗಳ ಅವಧಿಯನ್ನು ಪರಿಗಣಿಸಿದರೂ ಸಹ ಮೇಲ್ಮನವಿಯನ್ನು ಸಲ್ಲಿಸಲು 38 ದಿನಗಳ ವಿಳಂಬವಾಗಿತ್ತು. ಹೀಗಾಗಿ ಎಸ್‌ಜಿಎಸ್‌ಟಿ ಕಾಯ್ದೆ, ಸಿಜಿಎಸ್‌ಟಿ ಕಾಯ್ದೆ 2017ರ ಕಲಂ 107(4)ರ ಅಡಿಯಲ್ಲಿ ನಿಗದಿಪಡಿಸಿರುವ ಮನ್ನಿಸಬಹುದಾದ ಅವಧಿಯನ್ನು ಮೀರಿರುವುದರಿಂದ ಈ ಮೇಲ್ಮನವಿಯು ಕಾಲಮಿತಿಯಿಂದ ನಿರ್ಬಂಧಿತವಾಗಿದೆ. (barred by limitation). ಆದ್ದರಿಂದ, ಪ್ರಕರಣದ ಮೂಲ ವಿಷಯಗಳನ್ನು (merits) ಪರಿಶೀಲಿಸುವ ಅಥವಾ ತೀರ್ಮಾನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆದೇಶದಲ್ಲಿ ವಿವರಿಸಿತ್ತು.

ಮೇಲ್ಮನವಿದಾರಾದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನವು ಪ್ರಶ್ನಿತ ಆದೇಶವನ್ನು ಅವರಿಗೆ ಸರಿಯಾಗಿ ತಲುಪಿಸಲಾಗಿಲ್ಲ ಎಂದು ವಾದಿಸಿತ್ತು. ಅಲ್ಲದೆ, ತಮ್ಮ ಅಧಿಕೃತ ಪ್ರತಿನಿಧಿಯು 2024ರ ಸೆ.1ರಂದು ಇಲಾಖೆಗೆ ಭೇಟಿ ನೀಡಿದಾಗ ಮಾತ್ರ ಆ ಆದೇಶದ ಬಗ್ಗೆ ತಿಳಿದುಬಂದಿತು ಎಂದು ತಿಳಿಸಿತ್ತು. ಈ ವಾದದ ಕುರಿತು ಅವರಿಗೆ ವಿಚಾರಣೆಯ ಅವಕಾಶ ನೀಡುವ ಉದ್ದೇಶದಿಂದ 2026ರ ಫೆ.7ರಂದು ವಿಚಾರಣಾ ನೋಟಿಸ್ ನೀಡಿತ್ತು. ಅಲ್ಲದೇ 2026ರ ಫೆ.13ರಂದು ಶಿವಮೊಗ್ಗದಲ್ಲಿರುವ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಮೇಲ್ಮನವಿ) ಅವರ ಕಚೇರಿಯಲ್ಲಿ ವೈಯಕ್ತಿಕ ವಿಚಾರಣೆಗೆ ಹಾಜರಾಗಬೇಕು ಎಂದು ನಿಗದಿಪಡಿಸಿತ್ತು.

ಆದರೂ ಸಹ ಮೇಲ್ಮನವಿದಾರರಾದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನವು ವೈಯಕ್ತಿಕ ವಿಚಾರಣೆಗೆ ಹಾಜರಾಗಲಿಲ್ಲ. ಮತ್ತು ವಿಚಾರಣೆ ದಿನಾಂಕವನ್ನು ಮುಂದೂಡಿಕೆಯನ್ನು ಸಹ ಕೋರಲಿಲ್ಲ. ಆದ್ದರಿಂದ, ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಈ ಪ್ರಕರಣದ ಕುರಿತು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು ನಿರ್ಧರಿಸಿದ್ದರು.

‘ಈ ಹಂತದಲ್ಲಿ, ಮೇಲ್ಕಂಡ ಕಾಯ್ದೆಗಳ ಕಲಂ 169ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಶಾಸನಾತ್ಮಕ ವ್ಯವಸ್ಥೆಯನ್ನು ಪರಿಶೀಲಿಸುವುದು ಸೂಕ್ತವಾಗಿದೆ. ಈ ಕಲಂ, ನೋಟಿಸ್, ಆದೇಶ ಅಥವಾ ಇತರೆ ದಾಖಲೆಗಳನ್ನು ಹೇಗೆ ಮತ್ತು ಯಾವ ವಿಧಾನದಲ್ಲಿ ಜಾರಿಗೊಳಿಸಬೇಕು ಅಥವಾ ಸೇವೆ ಮಾಡಬೇಕು ಎಂಬುದನ್ನು ನಿಯಂತ್ರಿಸುತ್ತದೆ,’ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಯಾವುದೇ ತೀರ್ಮಾನ, ಆದೇಶ, ಸಮನ್ಸ್, ನೋಟಿಸ್ ಅಥವಾ ಇತರೆ ಅಧಿಕೃತ ಸಂವಹನವನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಕಲಂ 169 ನಿರ್ಧರಿಸುತ್ತದೆ. ಕಲಂ 169(1) ಪ್ರಕಾರ, ನೇರವಾಗಿ ಹಸ್ತಾಂತರಿಸುವ ಮೂಲಕ, ನೋಂದಾಯಿತ ಅಂಚೆ, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಸ್ವೀಕೃತಿ ದೃಢೀಕರಣದೊಂದಿಗೆ ಕಳುಹಿಸುವ ಮೂಲಕ,ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಕಳುಹಿಸುವ ಮೂಲಕ, ಸಾಮಾನ್ಯ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಅಪ್‌ಲೋಡ್ ಮಾಡುವ ಮೂಲಕ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಅಥವಾ ಈ ವಿಧಾನಗಳು ಸಾಧ್ಯವಾಗದಿದ್ದಲ್ಲಿ ನಿಗದಿತ ಸ್ಥಳದಲ್ಲಿ ಅಂಟಿಸುವ (Affixture) ಮೂಲಕ ನಿರ್ಧರಿಸುತ್ತದೆ.

ಕಲಂ 169(1)ರ ಸರಳ ಓದಿನಿಂದಲೇ, ಮೇಲಿನ ಯಾವುದೇ ಒಂದು ವಿಧಾನದಲ್ಲಿ ಸೇವೆ ನೀಡಿದರೆ ಅದು ಕಾನೂನಾತ್ಮಕವಾಗಿದೆ ಎಂದು ಸ್ಪಷ್ಟವಾಗುತ್ತದೆ. ಒಂದೇ ವೇಳೆ ಹಲವು ವಿಧಾನಗಳಲ್ಲಿ ಸೇವೆ ಮಾಡಲೇಬೇಕು ಎಂಬ ಕಡ್ಡಾಯವನ್ನು ಈ ಕಾಯ್ದೆ ವಿಧಿಸುವುದಿಲ್ಲ. ಇನ್ನೂ, ಕಲಂ 169(2)ರ ಪ್ರಕಾರ, ಸಂವಹನವನ್ನು ಹಸ್ತಾಂತರಿಸಿದ ದಿನಾಂಕದಿಂದ, ಅಥವಾ ನೋಂದಾಯಿತ ಅಂಚೆ/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ ದಿನಾಂಕದಿಂದ, ನೋಂದಾಯಿತ ಇ-ಮೇಲ್‌ಗೆ ರವಾನಿಸಿದ ದಿನಾಂಕದಿಂದ, ಕಾಮನ್ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಿದ ದಿನಾಂಕದಿಂದ, ಪ್ರಕಟಿಸಿದ ಅಥವಾ ನಿಗದಿತ ರೀತಿಯಲ್ಲಿ ಅಂಟಿಸಿದ ದಿನಾಂಕದಿಂದ ಸೇವೆ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

‘ಆದ್ದರಿಂದ, ಪ್ರಶ್ನಿತ ಆದೇಶವನ್ನು ಕಲಂ 169(1)(d)ರ ಪ್ರಕಾರ ಕಾಮನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ ಕ್ಷಣದಿಂದಲೇ ಕಾನೂನಿನ ದೃಷ್ಟಿಯಲ್ಲಿ ಅದು ಮಾನ್ಯ ಸೇವೆ (Valid Service) ಆಗುತ್ತದೆ. ಹೀಗಾಗಿ, ಆದೇಶವನ್ನು ತಮ್ಮಗೆ ಜಾರಿಗೊಳಿಸಲಾಗಿಲ್ಲ ಹಾಗೂ 01-09-2024ರಂದು ಮಾತ್ರ ಅದರ ಬಗ್ಗೆ ತಿಳಿದುಬಂದಿತು ಎಂಬ ಮೇಲ್ಮನವಿದಾರರ ವಾದವು ಯಾವುದೇ ಕಾನೂನುಬದ್ಧ ಆಧಾರವಿಲ್ಲದ ಕಾರಣ ತಿರಸ್ಕರಿಸಲಾಗುತ್ತದೆ,’ ಎಂದು ಆದೇಶದಲ್ಲಿ ವಿವರಿಸಿದೆ.

ಸಿಜಿಎಸ್‌ಟಿ ಕಾಯ್ದೆ 2017ರ ಕಲಂ 107(4)ರ ಪ್ರಕಾರ, ಮೇಲ್ಮನವಿ ಪ್ರಾಧಿಕಾರವು ಸಮರ್ಪಕ ಕಾರಣವಿದೆ ಎಂದು ತೃಪ್ತಿಪಟ್ಟಲ್ಲಿ, ಮೂಲ ಮೂರು ತಿಂಗಳ ಅವಧಿಯೊಳಗೆ ಸಲ್ಲಿಸಲಾಗದ ಮೇಲ್ಮನವಿಯನ್ನು ಹೆಚ್ಚುವರಿ ಒಂದು ತಿಂಗಳ ಅವಧಿಯೊಳಗೆ ಮಾತ್ರ ಸಲ್ಲಿಸಲು ಅನುಮತಿಸಬಹುದು. ಆದ್ದರಿಂದ, ನಿಗದಿತ ಒಂದು ತಿಂಗಳ ಮಿತಿಯನ್ನು ಮೀರಿದ ವಿಳಂಬವನ್ನು ಮನ್ನಿಸುವ ಅಧಿಕಾರ ಈ ಕಾಯ್ದೆಯಡಿ ಸಹಿ ಮಾಡಿದ ಅಧಿಕಾರಿಗೆ (Appellate Authority) ಇಲ್ಲ ಎಂದು ಪ್ರತಿಪಾದಿಸಿದೆ.

ಅಲ್ಲದೇ ಈ ಸಂಬಂಧ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದೆ. ಆ ತೀರ್ಪುಗಳಲ್ಲಿ ಮೇಲ್ಮನವಿ ಪ್ರಾಧಿಕಾರವು ಸಂಬಂಧಿತ ಕಾಯ್ದೆಯಲ್ಲಿ ನಿಗದಿಪಡಿಸಿರುವ ಮಿತಿಯೊಳಗಿನ ವಿಳಂಬವನ್ನು ಮಾತ್ರ ಮನ್ನಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಿಂಗ್‌ ಎಂಟರ್ ಪ್ರೈಸೆಸ್‌ / ಸಿಸಿಇ (2008) ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ಕೇಂದ್ರ ಅಬಕಾರಿ ಕಾಯ್ದೆ, 1944ರ ಕಲಂ 35ನ್ನು ವ್ಯಾಖ್ಯಾನಿಸಿದೆ. ಈ ವಿಧಿಯು ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಕಲಂ 107 (4) ಕ್ಕೆ ಸಮಾನವಾಗಿದೆ. ಈ ತೀರ್ಪಿನಲ್ಲಿ, ನಿಗದಿತ ಅವಧಿಯನ್ನು ಮೀರಿದ ವಿಳಂಬವನ್ನು ಮನ್ನಿಸುವ ಅಧಿಕಾರ ಆಯುಕ್ತರಿಗೆ (Commissioner) ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ಪ್ರಕರಣದಲ್ಲಿ, ಕಾಯ್ದೆಯಡಿ ನಿಗದಿಪಡಿಸಿರುವ ಅವಧಿ ಮೀರಿದ ನಂತರ ಸಲ್ಲಿಸಲಾದ ಮೇಲ್ಮನವಿಯ ವಿಳಂಬವನ್ನು ಮೇಲ್ಮನವಿ ಪ್ರಾಧಿಕಾರ (Appeals) ಮನ್ನಿಸಬಹುದೇ ಹಾಗೂ ಭಾರತದ ಸಂವಿಧಾನದ ಅನುಚ್ಛೇದ 226ರ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು ಅಂತಹ ವಿಳಂಬವನ್ನು ಮನ್ನಿಸಬಹುದೇ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತ್ತು.

ತೀರ್ಪಿನ ಕಂಡಿಕೆ 8ರಲ್ಲಿ, ಕೇಂದ್ರ ಅಬಕಾರಿ ಕಾಯ್ದೆ, 1944ರ **ಕಲಂ 35(1)**ರ ಉಪಬಂಧ (Proviso) ಅತ್ಯಂತ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅದರ ಪ್ರಕಾರ, ಮೇಲ್ಮನವಿ ಪ್ರಾಧಿಕಾರಕ್ಕೆ 30 ದಿನಗಳ ಮನ್ನಿಸಬಹುದಾದ ಅವಧಿಯನ್ನು ಮೀರಿದ ನಂತರ ಸಲ್ಲಿಸಲಾದ ಮೇಲ್ಮನವಿಯನ್ನು ಸ್ವೀಕರಿಸುವ ಅಧಿಕಾರವಿಲ್ಲ ಎಂದು ಉಲ್ಲೇಖಿಸಿದೆ.

ಕಿರೋಣ ಎಂಟರ್‍‌ ಪ್ರೈಸೆಸ್‌ Vs ತ್ರಿಪುರಾ ರಾಜ್ಯ (2021) 52 GSTL 29 ಪ್ರಕರಣದಲ್ಲಿ, ಟಿಎಸ್‌ಜಿಎಸ್‌ಟಿ ಕಾಯ್ದೆ ಕಲಂ 161ರ ಅಡಿಯಲ್ಲಿ ಆರು ತಿಂಗಳ ಮಿತಿಯನ್ನು ಮೀರಿದ ನಂತರ ದೋಷಗಳನ್ನು ಅಥವಾ ತಪ್ಪುಗಳನ್ನು ಸರಿಪಡಿಸುವ ಸಂಬಂಧ ವಿಳಂಬವನ್ನು ಮನ್ನಿಸುವ ಅಧಿಕಾರ ರಾಜ್ಯ ತೆರಿಗೆ ಅಧೀಕ್ಷಕರಿಗೆ (Superintendent of State Tax) ಇದೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತ್ತು.

ನ್ಯಾಯಾಲಯವು ಟಿಎಸ್‌ಜಿಎಸ್‌ಟಿ ಕಲಂ 161 ಸ್ವತಂತ್ರ ಹಾಗೂ ಸಂಪೂರ್ಣ ಕಾನೂನು ವ್ಯವಸ್ಥೆಯಾಗಿದ್ದು, ಅದರಲ್ಲಿ **Limitation Act (ಕಾಲಮಿತಿ ಕಾಯ್ದೆ)ಯನ್ನು ಪರೋಕ್ಷವಾಗಿ ಹೊರಗಿಟ್ಟಿದೆ ಎಂದು ತೀರ್ಮಾನಿಸಿತ್ತು. ಅಲ್ಲದೆ, ವಿಶೇಷ ಕಾಯ್ದೆ (Special Statute)ಯಾದ ಟಿಎಸ್‌ಜಿಎಸ್‌ಟಿ ಕಾಯ್ದೆಗೆ ಕಾಲಮಿತಿ ಕಾಯ್ದೆಯನ್ನು ಸ್ಪಷ್ಟವಾಗಿ ಅನ್ವಯಿಸುವಂತೆ ಮಾಡದ ಹೊರತು ಲಿಮಿಟೇಷನ್‌ ಕಾಯ್ದೆ ಸ್ವಯಂಚಾಲಿತವಾಗಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಅದೇ ರೀತಿ ಸುಂಕ ಮತ್ತು ಕೇಂದ್ರ ಸುಂಕದ ಆಯುಕ್ತರು Vs ಹೊಂಗೋ ಇಂಡಿಯಾ ಪ್ರೈ ಲಿಮಿಟೆಡ್‌ (2009) 5 SCC 791 ಪ್ರಕರಣದಲ್ಲಿ, ಕೇಂದ್ರ ಅಬಕಾರಿ ಕಾಯ್ದೆ ಅಡಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸುವ ಮೇಲ್ಮನವಿ ಅಥವಾ ಉಲ್ಲೇಖದಲ್ಲಿ ವಿಳಂಬವನ್ನು ಮನ್ನಿಸಲು Limitation Actರ ಕಲಂ 5ನ್ನು ಬಳಸಬಹುದೇ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತ್ತು. ನ್ಯಾಯಾಲಯವು ಕೇಂದ್ರ ಅಬಕಾರಿ ಕಾಯ್ದೆ, 1944ರ ಯೋಜನೆಯ ಪ್ರಕಾರ, ಕಲಂ 35H(1) ಅಡಿಯಲ್ಲಿ ನಿಗದಿಪಡಿಸಿರುವ ಕಾಲಮಿತಿಯು ಅಂತಿಮ (Absolute) ಹಾಗೂ ವಿಸ್ತರಿಸಲಾಗದ (Unextendable) ಮಿತಿಯಾಗಿದೆ ಎಂದು ಹೇಳಿತ್ತು.

ಆದ್ದರಿಂದ, Limitation Actರ ಕಲಂ 5ನ್ನು ಆಧರಿಸಿ ಕಾಲಮಿತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ನ್ಯಾಯಾಲಯವು ಶಾಸಕರ ಉದ್ದೇಶವನ್ನು ಗೌರವಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಉದಾರ ವ್ಯಾಖ್ಯಾನ (Liberal Interpretation) ನೀಡುವ ನೆಪದಲ್ಲಿ ಕಾಲಮಿತಿಯನ್ನು ವಿಸ್ತರಿಸಲು ಅವಕಾಶವಿಲ್ಲ ಎಂದು ಸಹ ಸ್ಪಷ್ಟಪಡಿಸಿತ್ತು.

ಫಸ್ಟ್‌ ರಿಯಾಲ್ಟಿ Vs ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರು (STA No. 32/2009 – HC(KDB)) ಪ್ರಕರಣದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು, ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅವಧಿಯನ್ನು ಮೀರಿದ ವಿಳಂಬವನ್ನು ಮನ್ನಿಸುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ, ನಿಗದಿತ ಅವಧಿಯನ್ನು ಮೀರಿದ ವಿಳಂಬವನ್ನು ಮನ್ನಿಸಿ ಪ್ರಥಮ ಮೇಲ್ಮನವಿ ಪ್ರಾಧಿಕಾರ ನೀಡಿದ್ದ ಆದೇಶವು ಕಾನೂನುಬಾಹಿರ (Illegal) ಎಂದು ಘೋಷಿಸಿತ್ತು.

 

 

ವಾಸವಿ ಇಂಡಸ್ಟ್ರೀಸ್‌ ಹಿರಿಯೂರು Vs ರಾಜ್ಯ ಸರ್ಕಾರ ಮತ್ತು ಇತರರು (WA No. 1974/2010 (TCIPB)) ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು, ತನ್ನ ಹಿಂದಿನ ತೀರ್ಪುಗಳನ್ನು ಪರಿಗಣಿಸಿತ್ತು. ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿಯನ್ನು ಮೀರಿದ ಮೇಲ್ಮನವಿಗಳನ್ನು ಸ್ವೀಕರಿಸುವ ಅಥವಾ ವಿಳಂಬವನ್ನು ಮನ್ನಿಸುವ ಅಧಿಕಾರ ಮೇಲ್ಮನವಿ ಪ್ರಾಧಿಕಾರಕ್ಕೆ ಇಲ್ಲ ಎಂಬ ಕಾನೂನು ತತ್ವವನ್ನು ಪುನರುಚ್ಚರಿಸಿತ್ತು. ಪೋಷಾಕ್‌ ಟೆಕ್ಸ್‌ಟೈಲ್ಸ್‌ Vs. ಉಪ ವಿಭಾಗಾಧಿಕಾರಿ ಪ್ರಕರಣದಲ್ಲಿ, ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅವಧಿಯನ್ನು ಮೀರಿದ ವಿಳಂಬವನ್ನು ಮನ್ನಿಸುವ ಅಧಿಕಾರವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ, ಮೇಲ್ಮನವಿ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು ಮೀರಿದ ಅವಧಿಯ ನಂತರ ಸಲ್ಲಿಸಲಾದ ಮೇಲ್ಮನವಿಯನ್ನು ತಿರಸ್ಕರಿಸಿರುವುದು ಸರಿಯಾಗಿದೆ ಎಂದು ಹೇಳಿದೆ.

ನಾಗ್‌ಸನ್ ಅಂಡ್ ಕಂಪನಿ Vs. ಕೇಂದ್ರ ತೆರಿಗೆ ಜಂಟಿ ಆಯುಕ್ತರು ಬೆಂಗಳೂರು ( W.P. No. 21341/2022 (T-RES), ದಿನಾಂಕ: 10-11-2022 ) ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು, CGST Actನ ಕಲಂ 107ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೇಲ್ಮನವಿ ಪ್ರಾಧಿಕಾರಕ್ಕೆ, ನಿಗದಿತ ಅವಧಿಯನ್ನು ಮೀರಿದ ನಂತರ ಸಲ್ಲಿಸಲಾದ ಮೇಲ್ಮನವಿಯ ವಿಳಂಬವನ್ನು ಮನ್ನಿಸುವ ಅಧಿಕಾರ (Jurisdiction) ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಭಾರತದ ಸಂವಿಧಾನದ ಅನುಚ್ಛೇದ 226ರ ಅಡಿಯಲ್ಲಿ ಹೈಕೋರ್ಟ್ ತನ್ನ ರಿಟ್ ಅಧಿಕಾರವನ್ನು ಬಳಸಿಕೊಂಡು, ಸಮರ್ಪಕ ಕಾರಣ ತೋರಿಸಲಾದರೆ ಅಂತಹ ವಿಳಂಬವನ್ನು ಮನ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

‘CGST ಹಾಗೂ SGST ಕಾಯ್ದೆಗಳ ವಿಧಿಗಳು ಮತ್ತು ಮೇಲ್ಕಂಡ ನ್ಯಾಯಾಂಗ ತೀರ್ಪುಗಳನ್ನು ಪರಿಗಣಿಸಿದಾಗ, SGST ಮತ್ತು CGST ಕಾಯ್ದೆಗಳ ಅಡಿಯಲ್ಲಿ ರಚಿಸಲಾದ ಪ್ರಥಮ ಮೇಲ್ಮನವಿ ಪ್ರಾಧಿಕಾರವು, ಕಾಯ್ದೆಯಲ್ಲಿ ನಿಗದಿಪಡಿಸಿರುವ ಮೂರು ತಿಂಗಳ ಮೂಲ ಅವಧಿ ಮುಗಿದ ನಂತರ ಹೆಚ್ಚುವರಿ ಒಂದು ತಿಂಗಳೊಳಗಿನ ವಿಳಂಬವನ್ನು ಮಾತ್ರ ಮನ್ನಿಸುವ ಅಧಿಕಾರವನ್ನು ಹೊಂದಿದೆ ಎಂದು ತೀರ್ಮಾನಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.

ಆದರೆ ಆ ಒಂದು ತಿಂಗಳ ಮಿತಿಯನ್ನು ಮೀರಿದ ವಿಳಂಬವನ್ನು ಮನ್ನಿಸುವ ಅಧಿಕಾರ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಇಲ್ಲ. ಈ ಮೇಲ್ಮನವಿಯನ್ನು ಕಾಲಮಿತಿಯ ಕಾರಣದಿಂದ ಸ್ವೀಕರಿಸಲು ಸಾಧ್ಯವಿಲ್ಲದಿರುವುದರಿಂದ, ಮೇಲ್ಮನವಿಯಲ್ಲಿರುವ ವಿಷಯದ ಮೂಲ ಅರ್ಹತೆ (Merits) ಕುರಿತು ಚರ್ಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ ಜಿಎಸ್‌ಟಿ ಕಾಯ್ದೆ ಕಲಂ 107(1)**ರ ಅಡಿಯಲ್ಲಿ ಮೇಲ್ಮನವಿದಾರರು ಸಲ್ಲಿಸಿರುವ ಈ ಮೇಲ್ಮನವಿಯನ್ನು ಕಾಲಮಿತಿ (Time Limitation) ಆಧಾರದ ಮೇಲೆ ತಿರಸ್ಕರಿಸಲಾಗುತ್ತದೆ ಎಂದು ಪ್ರತಿಪಾದಿಸಿದೆ.

 

 

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಜೈವಿಕ ವೈವಿಧ್ಯತೆ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಸ್ಥಾಪಿಸಲಾದ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಟ್ರಸ್ಟ್ ಆಗಿದೆ. ಹುಲಿ ಯೋಜನೆ ಮತ್ತು ಇತರ ಪರಿಸರ ಸಂಶೋಧನೆಗಳಿಗೆ ಸ್ಥಳೀಯವಾಗಿ ಆರ್ಥಿಕ ನೆರವು ಒದಗಿಸುವುದು ಇದರ ಮುಖ್ಯ ಉದ್ದೇಶ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ದೇಶದ ಹುಲಿ ಸಂರಕ್ಷಿತ ಪ್ರದೇಶಗಳ ಮೇಲ್ವಿಚಾರಣೆಯ ರಾಷ್ಟ್ರೀಯ ಸಂಸ್ಥೆಯಾಗಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮದಿಂದ ಉಂಟಾಗುವ ಆದಾಯವನ್ನು ಸಂರಕ್ಷಿತ ಪ್ರದೇಶಗಳ ಪ್ರಮುಖ ಅಗತ್ಯಗಳಿಗೆ ಮರುಹೂಡಿಕೆ ಮಾಡುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಟೈಗರ್ ಫೌಂಡೇಶನ್ ಸ್ಥಾಪಿಸಲು ಕಾನೂನುಬದ್ಧ ಅವಕಾಶ ಕಲ್ಪಿಸಿದೆ.

ಇದರ ಜೊತೆಗೆ, ಕಾರ್ಪೊರೇಟ್ ವಲಯವು ಹೆಚ್ಚು ಸಕ್ರಿಯವಾಗಿದ್ದು, ಕಾನೂನಿನ ಪ್ರಕಾರ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (Corporate Social Responsibility – CSR) ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಣೆ ಕೂಡ CSR ಚಟುವಟಿಕೆಗಳ ಪ್ರಮುಖ ಕ್ಷೇತ್ರವಾಗಿ ಬೆಳೆಯುತ್ತಿದೆ. ಪರಿಣಾಮವಾಗಿ, ಹುಲಿ ಸಂರಕ್ಷಣೆಗೆ ನೇರ ಆರ್ಥಿಕ ನೆರವು ದೊರೆಯುವ ಅವಕಾಶಗಳು ಹೆಚ್ಚಾಗಿವೆ.

ಈ ಹಿನ್ನೆಲೆಯಲ್ಲಿ, ಹುಲಿ ಸಂರಕ್ಷಿತ ಪ್ರದೇಶಗಳು ಈಗ ಟೈಗರ್ ಫೌಂಡೇಶನ್ಗಳನ್ನು ರಚಿಸಿಕೊಂಡಿದ್ದು, ಅವು ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ಮಾತ್ರವಲ್ಲದೆ, ಆಸಕ್ತ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ದೊರೆಯುವ ದೇಣಿಗೆ ಮತ್ತು ಅನುದಾನಗಳನ್ನೂ ನಿರ್ವಹಿಸುತ್ತಿವೆ.

ಅದೇ ರೀತಿಯಲ್ಲಿ, ಭದ್ರ ಹುಲಿ ಸಂರಕ್ಷಿತ ಪ್ರದೇಶ (Bhadra Tiger Reserve) ಕೂಡ ಭದ್ರ ಟೈಗರ್ ರಿಸರ್ವ್ ಫೌಂಡೇಶನ್ ಅನ್ನು ಸ್ಥಾಪಿಸಿದೆ. ಈ ಫೌಂಡೇಶನ್‌ಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನಗದು ಹಾಗೂ ವಸ್ತು ರೂಪದಲ್ಲಿ ದೇಣಿಗೆಗಳನ್ನು ಸ್ವೀಕರಿಸುವ ಅಧಿಕಾರವಿದ್ದು, ಆ ದೇಣಿಗೆಗಳನ್ನು ಹುಲಿ ಸಂರಕ್ಷಿತ ಪ್ರದೇಶದ ಸಂರಕ್ಷಣೆ ಮತ್ತು ನಿರ್ವಹಣೆಗೆ ಬಳಸಲಾಗುತ್ತದೆ. ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನದ (Bhadra Tiger Conservation Foundation) ನಿಧಿಗೆ ಪ್ರವಾಸೋದ್ಯಮದಿಂದ ಬರುವ ಆದಾಯದ ನಿಖರವಾದ ಮೊತ್ತವನ್ನು ಸರ್ಕಾರವು ಸಾರ್ವಜನಿಕವಾಗಿ ಪ್ರಕಟಿಸಿಲ್ಲ.  ಪ್ರವಾಸೋದ್ಯಮದ ಆದಾಯವು ಹಲವು ಅಂಶಗಳನ್ನು ಅವಲಂಬಿಸಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯದ ಮುತ್ತೋಡಿ ಮತ್ತು ಲಕ್ಕವಳ್ಳಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯು ನಡೆಸುವ ಜೀಪ್ ಸಫಾರಿಗಳು ಮತ್ತು ದೋಣಿ ವಿಹಾರಗಳಿಂದ ಸಂಗ್ರಹವಾಗುವ ಪ್ರವೇಶ ಶುಲ್ಕ, ಕರ್ನಾಟಕ ಸರ್ಕಾರದ ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ (JLR) ನಿರ್ವಹಿಸುವ ‘ರಿವರ್ ಟರ್ನ್ ಲಾಡ್ಜ್’ (River Tern Lodge) ನಂತಹ ತಾಣಗಳಲ್ಲಿನ ಪ್ರವಾಸಿಗರ ವಾಸ್ತವ್ಯದಿಂದ ಬರುವ ವಸತಿ ಆದಾಯದ ಒಂದು ಭಾಗವು ಪ್ರತಿಷ್ಠಾನಕ್ಕೆ ಹರಿದುಬರುತ್ತದೆ

ಪರಿಸರ ಪ್ರವಾಸೋದ್ಯಮದಿಂದ ಸಿಗುವ ಲಾಭವನ್ನು ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಮತ್ತು ಅರಣ್ಯ ಸಂರಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ನಿಧಿಯನ್ನು ವನ್ಯಜೀವಿಗಳ ಸಂರಕ್ಷಣೆ, ಸ್ಥಳೀಯರ ಪುನರ್ವಸತಿ, ಮತ್ತು ಪರಿಸರ ಪ್ರವಾಸೋದ್ಯಮ ಮೂಲಸೌಕರ್ಯಗಳ ನಿರ್ವಹಣೆಗಾಗಿ ಬಳಸಲಾಗುತ್ತದೆ

Hot this week

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...
Please Scan to make Your Contribution

Topics

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

Related Articles

Popular Categories

error: Content is protected !!