Friday | July 17, 2026 |

ಕೇಂದ್ರ ಬಜೆಟ್‌ ಅಧಿವೇಶನ ಹಾಜರಾತಿ; ಬಿಜೆಪಿ, ಕಾಂಗ್ರೆಸ್‌ನ ಮಿತ್ರ ಪಕ್ಷಗಳು ಬಿಜೆಪಿ, ಕಾಂಗ್ರೆಸ್‌ಗಿಂತಲೂ ಉತ್ತಮ ಸರಾಸರಿ ದಾಖಲು, ಕಡಿಮೆ ಹಾಜರಾತಿಯಲ್ಲಿ ರಾಜ್ಯ ಸಂಸದರ ಸಂಖ್ಯೆಯೆಷ್ಟು?

ಬೆಂಗಳೂರು; ಕೇಂದ್ರ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಅವರ ಹಾಜರಾತಿಯನ್ನು “Nil” ಎಂದು ದಾಖಲಿಸಲಾಗಿದೆ. 191 ಸದಸ್ಯರನ್ನು ಹೊಂದಿರುವ ಬಿಜೆಪಿ, ಪ್ರತಿ ಸಂಸದನಿಗೆ ಸರಾಸರಿ 26.46 ಸಭೆಗಳ ಹಾಜರಾತಿ ದಾಖಲಿಸಿದೆ. ಪಕ್ಷಗಳ ಸರಾಸರಿಯಲ್ಲಿ 13ನೇ ಸ್ಥಾನದಲ್ಲಿದೆ.

ಶೇ. 50 ರಿಂದ ಶೇ 75ಕ್ಕಿಂತ ಕಡಿಮೆ ಹಾಜರಾತಿ ದಾಖಲಿಸಿದ 106 ಸಂಸದರ ಪೈಕಿ ಕರ್ನಾಟಕದ 10 ಮಂದಿ ಸಂಸದರಿದ್ದಾರೆ. ವಿಶೇಷವೆಂದರೇ ಬಜೆಟ್‌ ಅಧಿವೇಶನದಲ್ಲಿನ ಹಾಜರಾತಿಯಲ್ಲಿ ಬಿಜೆಪಿಯ ಮಿತ್ರ ಪಕ್ಷಗಳು ಬಿಜೆಪಿಗಿಂತಲೂ ಉತ್ತಮ ಸರಾಸರಿಯನ್ನು ದಾಖಲಿಸಿವೆ. ಹಾಗೆಯೇ 97 ಸದಸ್ಯರನ್ನು ಹೊಂದಿರುವ ಪ್ರತಿಪಕ್ಷ ಕಾಂಗ್ರೆಸ್‌, ಪ್ರತಿ ಸಂಸದರಿಗೆ ಸರಾಸರಿ 23.13 ಸಭೆಗಳ ಹಾಜರಾತಿ ದಾಖಲಿಸಿದೆ.

ಇದರ ಮೈತ್ರಿ ಪಕ್ಷಗಳಾದ ವೈಎಸ್ಆರ್‍‌ ಕಾಂಗ್ರೆಸ್‌, ಶಿವಸೇನೆ (ಯುಬಿಟಿ), ಎನ್‌ಸಿಪಿ ಹಾಗೂ ಆರ್‍‌ಜೆಡಿ ಕಾಂಗ್ರೆಸ್‌ಗಿಂತ ಉತ್ತಮ ಸರಾಸರಿ ಹಾಜರಾತಿ ದಾಖಲಿಸಿವೆ. ಲೋಕಸಭೆಯಲ್ಲಿ ಒಂದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಯಾವುದೇ ರಾಜ್ಯವು 2026ರ ಬಜೆಟ್ ಅಧಿವೇಶನದಲ್ಲಿ ಶೇ.100ರಷ್ಟು ಹಾಜರಾತಿ ದಾಖಲಿಸಲಿಲ್ಲ.

ಒಟ್ಟು 483 ಸಂಸದರಲ್ಲಿ ಕೇವಲ 221 ಮಂದಿ ಮಾತ್ರ ಶೇ.90ರಿಂದ 100ರಷ್ಟು ಸಭೆಗಳಿಗೆ ಹಾಜರಾಗಿದ್ದಾರೆ. ಅಥವಾ ಅಷ್ಟು ದಿನಗಳ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಇದು ಒಟ್ಟಾರೆ ಶೇ. 45.76ರಷ್ಟಿದೆ. ಅದೇ ರೀತಿ ರಾಜ್ಯಸಭೆಯಲ್ಲಿ 2026ರ ಬಜೆಟ್ ಅಧಿವೇಶನದಲ್ಲಿ ಒಟ್ಟು 271 ಸದಸ್ಯರು ಸಭೆಗಳಿಗೆ ಹಾಜರಾಗಿದ್ದರು ಎಂದು ಕಾಮನ್ ವೆಲ್ತ್‌ ಹ್ಯೂಮನ್ ರೈಟ್ಸ್‌ ಇನ್ಷಿಯೇಟೀವ್ ಸಂಸ್ಥೆಯ ವಿಶ್ಲೇಷಣೆಯು ಬಹಿರಂಗಪಡಿಸಿದೆ.

ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನದಲ್ಲಿ ಸದಸ್ಯರ ಹಾಜರಾತಿ ಕುರಿತು ಈ ಎರಡೂ ಸಚಿವಾಲಯಗಳ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿರುವ ಅಂಕಿ ಅಂಶಗಳನ್ನಾಧರಿಸಿ ಕಾಮನ್ ವೆಲ್ತ್‌ ಹ್ಯೂಮನ್ ರೈಟ್ಸ್‌ ಇನ್ಷಿಯೇಟೀವ್ ಸಂಸ್ಥೆಯ ಈಚೆಗಷ್ಟೆ ತನ್ನ ವರದಿಯನ್ನು ಬಿಡುಗಡೆ ಮಾಡಿದೆ.

ಈ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ರಾಜ್ಯಸಭೆಯ ಹಲವು ಸದಸ್ಯರು ಅನಾರೋಗ್ಯದ ಕಾರಣದಿಂದ ನಿರ್ದಿಷ್ಟ ಅವಧಿಗೆ ಗೈರಾಗಿದ್ದರು. ಇನ್ನು ಕೆಲವರು ‘ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳು (Prior Committed Engagements)’ ಅಥವಾ ‘ವೈಯಕ್ತಿಕ ಕಾರಣಗಳು’ ಎಂದು ಉಲ್ಲೇಖಿಸಿ ಕೆಲವು ಸಭೆಗಳಿಗೆ ಹಾಜರಾಗಿರಲಿಲ್ಲ ಎಂದು ವರದಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಆದರೆ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಯಾವುದೇ ಸಭೆಗೆ ಗೈರಾಗಿದ್ದ ಸದಸ್ಯರ ಬಗ್ಗೆ ಇದೇ ರೀತಿಯ ಮಾಹಿತಿಯನ್ನು ಪ್ರಕಟಿಸಿಲ್ಲ.
ಹಾಜರಾತಿ ನೋಂದಣಿ ಪುಸ್ತಕದ ಜೊತೆಗೆ, ಲಾಬಿ ಅಧಿಕಾರಿ ಸದನದಲ್ಲಿ ದಿನದ ವಿವಿಧ ಸಮಯಗಳಲ್ಲಿ ಎಷ್ಟು ಸದಸ್ಯರು ಹಾಜರಿದ್ದರು ಎಂಬುದನ್ನು ದಾಖಲಿಸುವ ಪ್ರತ್ಯೇಕ ಚಾರ್ಟ್‌ನ್ನೂ ನಿರ್ವಹಿಸಲಾಗುತ್ತಿತ್ತು. ದಿನದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಹಾಜರಾತಿ ದಾಖಲಿಸುವುದಕ್ಕಿಂತ, ಈ ವಿಧಾನವು ಸದನದಲ್ಲಿನ ನೈಜ ಹಾಜರಾತಿಯ ಬಗ್ಗೆ ಹೆಚ್ಚು ನಿಖರವಾದ ಚಿತ್ರಣವನ್ನು ನೀಡುತ್ತಿತ್ತು.

 

 

ಈ ಚಾರ್ಟ್‌ನಲ್ಲಿ ದಿನದ ಒಟ್ಟು ಹಾಜರಾತಿಯೂ ದಾಖಲಾಗುತ್ತಿತ್ತು. ಪ್ರತಿ ಅಧಿವೇಶನದ ಅಂತ್ಯದಲ್ಲಿ, ಒಂದು ದಿನದ ಗರಿಷ್ಠ ಮತ್ತು ಕನಿಷ್ಠ ಹಾಜರಾತಿ, ಗಂಟೆವಾರು ಗರಿಷ್ಠ ಮತ್ತು ಕನಿಷ್ಠ ಸದಸ್ಯರ ಸಂಖ್ಯೆ ಹಾಗೂ ಅಧಿವೇಶನದ ಅವಧಿಯ ಪ್ರತಿ ದಿನದ ಸರಾಸರಿ ಹಾಜರಾತಿಯನ್ನು ಒಳಗೊಂಡ ವಿಶ್ಲೇಷಣಾತ್ಮಕ ವರದಿಯನ್ನು ಸಿದ್ಧಪಡಿಸಲಾಗುತ್ತಿತ್ತು. ಆದರೆ, ಈ ಚಾರ್ಟ್‌ನಲ್ಲಿ ಸದಸ್ಯರ ಹೆಸರುಗಳಿರದೆ, ಕೇವಲ ಹಾಜರಿದ್ದ ಸದಸ್ಯರ ಸಂಖ್ಯೆಯನ್ನು ಮಾತ್ರ ದಾಖಲಿಸಲಾಗುತ್ತಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಸಂಸತ್ ಟಿವಿಯು ಲೋಕಸಭೆಯ ಕಲಾಪಗಳ ನೇರ ಪ್ರಸಾರವನ್ನು ಆರಂಭಿಸಿದ ನಂತರ ಮತ್ತು 14ನೇ ಲೋಕಸಭೆಯಿಂದ ಸದಸ್ಯರ ಹಾಜರಾತಿ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯತೆ ಇದೆ. ಹೀಗಾಗಿ ಈ ಚಾರ್ಟ್‌ನ ಪ್ರಸ್ತುತತೆ ಕಡಿಮೆಯಾಗಿದೆ. ಸದ್ಯ ಈ ಪದ್ಧತಿಯನ್ನು ಕೈಬಿಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಮೇಲಿನ ವಿಶ್ಲೇಷಣೆ ಮತ್ತು ಕಂಡುಬಂದ ಅಂಶಗಳು ಪ್ರತಿ ಸಭೆಯ ವೇಳೆ ಒಬ್ಬೊಬ್ಬ ಸಂಸದರು ಸದನದಲ್ಲಿ ಎಷ್ಟು ಗಂಟೆಗಳ ಕಾಲ ಉಪಸ್ಥಿತರಿದ್ದರು ಎಂಬ ಮಾಹಿತಿಯನ್ನು ನೀಡುವುದಿಲ್ಲ. ಬಹುಪಾಲು ಸಂದರ್ಭಗಳಲ್ಲಿ, ಎರಡೂ ಸದನಗಳಲ್ಲಿ ಸಾಮಾನ್ಯ ಹಾಗೂ ವಿವಾದರಹಿತ ವ್ಯವಹಾರಗಳು ನಡೆಯುವಾಗ, ನೇರ ಪ್ರಸಾರದ ವೇಳೆ ಸದನದಲ್ಲಿನ ಅನೇಕ ಆಸನಗಳು ಖಾಲಿಯಾಗಿರುವ ದೃಶ್ಯಗಳು ಕಾಣಿಸುತ್ತವೆ. ಆದರೆ, ಅಂತಹ ಸಂದರ್ಭದಲ್ಲಿ ಎಷ್ಟು ಸದಸ್ಯರು ನಿಜವಾಗಿ ಸದನದಲ್ಲಿದ್ದರು ಎಂಬುದನ್ನು ಲೆಕ್ಕಹಾಕಲು ಸುಲಭವಾದ ವ್ಯವಸ್ಥೆ ಇಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

 

‘ಆದ್ದರಿಂದ ಗಂಟೆವಾರು ಹಾಜರಾತಿ ಚಾರ್ಟ್ ಸಿದ್ಧಪಡಿಸುವ ಹಳೆಯ ಪದ್ಧತಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಪುನರುಜ್ಜೀವನಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಇಂತಹ ಮಾಹಿತಿಯ ಸಂಗ್ರಹವು ಸಾರ್ವಜನಿಕರಿಗೆ ಲಭ್ಯವಾಗುವ ಮತ್ತೊಂದು ಮಹತ್ವದ ದತ್ತಾಂಶವಾಗಿದ್ದು, ಆಯ್ಕೆಯಾದ ಜನಪ್ರತಿನಿಧಿಗಳಿಂದ ಪರಿಣಾಮಕಾರಿಯಾಗಿ ಉತ್ತರದಾಯಿತ್ವವನ್ನು ಕೇಳಲು ನೆರವಾಗುತ್ತದೆ,’ ಎಂದು ವರದಿಯು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

 

ಒಟ್ಟಾರೆ ಹಾಜರಾತಿ

483 ಸಂಸದರಲ್ಲಿ ಶೇ.  45.76 (221 ಮಂದಿ) ಮಾತ್ರ ಬಜೆಟ್ ಅಧಿವೇಶನದ ಶೇ 90-100 ಸಭೆಗಳಿಗೆ ಹಾಜರಾಗಿದ್ದಾರೆ ಅಥವಾ ಅಷ್ಟು ದಿನಗಳ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಶೇ 75ರಷ್ಟು ಹಾಜರಾತಿಯನ್ನು ಕನಿಷ್ಠ ಮಾನದಂಡ ಎಂದು ಪರಿಗಣಿಸಿದರೆ, 309 ಸಂಸದರು (63.98%) ಮಾತ್ರ ಆ ಮಟ್ಟವನ್ನು ತಲುಪಿದ್ದಾರೆ.

 

 

ಅಂದರೆ, ಎರಡು-ಮೂರಂಶಕ್ಕಿಂತ ಕಡಿಮೆ ಸಂಸದರು ಮಾತ್ರ ಶೇ 75ಕ್ಕಿಂತ ಹೆಚ್ಚು ಹಾಜರಾತಿ ದಾಖಲಿಸಿದ್ದಾರೆ. 69 ಸಂಸದರು (14.29%) ಕೇವಲ 0-15 ದಿನಗಳು, ಅಂದರೆ 50%ಕ್ಕಿಂತ ಕಡಿಮೆ ಸಭೆಗಳಿಗೆ ಮಾತ್ರ ಹಾಜರಾಗಿದ್ದಾರೆ ಅಥವಾ ಸಹಿ ಮಾಡಿದ್ದಾರೆ.

ಶೇ 100 ಹಾಜರಾತಿ

101 ಸಂಸದರು ಬಜೆಟ್ ಅಧಿವೇಶನದ ಎಲ್ಲಾ 31 ಸಭೆಗಳಿಗೂ ಹಾಜರಾತಿ ದಾಖಲಿಸಿದ್ದಾರೆ. ಇದು ಒಟ್ಟು 483 ಸಂಸದರ ಪೈಕಿ ಸುಮಾರು ಶೇ 21ರಷ್ಟಿದೆ. ಅಂದರೆ, ಸುಮಾರು ಶೇ 80 ಸಂಸದರು ಕನಿಷ್ಠ ಒಂದು ಸಭೆಯನ್ನು ತಪ್ಪಿಸಿದ್ದಾರೆ ಅಥವಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಲ್ಲ.

 

 

ಲೋಕಸಭೆಯಲ್ಲಿ ಒಟ್ಟು 543 ಸಂಸದರಿದ್ದಾರೆ. ಪಶ್ಚಿಮ ಬಂಗಾಳದ ಬಸಿರ್ಹಾಟ್ ಲೋಕಸಭಾ ಕ್ಷೇತ್ರದ ಸಂಸದರು ಸೆಪ್ಟೆಂಬರ್ 2024ರಲ್ಲಿ ನಿಧನರಾದ ಕಾರಣ ಆ ಸ್ಥಾನ ತೆರವಾಗಿತ್ತು. ಅವರ ಚುನಾವಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಚುನಾವಣಾ ಅರ್ಜಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ (ಚುನಾವಣೆ ನ್ಯಾಯಮಂಡಳಿಯಾಗಿ) ಬಾಕಿ ಇದೆ. ಹೀಗಾಗಿ 2026ರ ಬಜೆಟ್ ಅಧಿವೇಶನದ ಅವಧಿಯಲ್ಲಿಯೂ ಈ ಸ್ಥಾನ ಖಾಲಿಯೇ ಉಳಿಯಿತು. ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸುವವರೆಗೆ ಉಪಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ.

ಇದಲ್ಲದೆ, ಬಜೆಟ್ ಅಧಿವೇಶನದ ವೇಳೆ ಮೆಘಾಲಯದ ಶಿಲ್ಲಾಂಗ್ ಕ್ಷೇತ್ರದ ಸಂಸದರು ಫೆಬ್ರವರಿಯಲ್ಲಿ ನಿಧನರಾದರು ಹಾಗೂ ಅಸ್ಸಾಂನ ನಾಗಾಂವ್ ಕ್ಷೇತ್ರದ ಸಂಸದರು ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಆದ್ದರಿಂದ, ಅವರ ಹಾಜರಾತಿ ವಿವರಗಳು ಅವರು ಲೋಕಸಭೆಯ ಸದಸ್ಯರಾಗಿದ್ದ ಅವಧಿಗೆ ಮಾತ್ರ ಸೀಮಿತವಾಗಿವೆ.

ವಿರೋಧ ಪಕ್ಷದ ನಾಯಕರ ಹಾಜರಾತಿ ಎಷ್ಟಿದೆ?

ಇನ್ನೂ, ಕೌಲ್ ಮತ್ತು ಶಕ್ಧರ್ ಅವರ ಉಲ್ಲೇಖದ ಪ್ರಕಾರ, ಸಚಿವರು ನಿಯಮದಂತೆ ಹಾಜರಾತಿ ನೋಂದಣಿ ಪುಸ್ತಕದಲ್ಲಿ ಸಹಿ ಮಾಡುವುದಿಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕ (LOP) ಅವರ ಹಾಜರಾತಿಯನ್ನು “Nil” ಎಂದು ದಾಖಲಿಸಲಾಗಿದೆ. ಬಹುಶಃ ಅವರಿಗೆ ಕೇಂದ್ರ ಸಚಿವ ಸಂಪುಟದ ಸಚಿವರ ಸಮಾನ ಹುದ್ದೆ ನೀಡಿರುವುದರಿಂದ ಹೀಗೆ ಮಾಡಿರಬಹುದು. ಲೋಕಸಭೆಯ ಸ್ಪೀಕರ್ ಅವರ ಹಾಜರಾತಿಯನ್ನೂ “Nil” ಎಂದು ದಾಖಲಿಸಲಾಗಿದೆ. ಇದು ಸಂಪ್ರದಾಯವೇ ಎಂಬ ಬಗ್ಗೆ ಕೌಲ್ ಮತ್ತು ಶಕ್ಧರ್ ಅವರ ಕೃತಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಧಾನಮಂತ್ರಿ, ಬಜೆಟ್ ಅಧಿವೇಶನದ ಅವಧಿಯಲ್ಲಿ ಸಚಿವ ಸಂಪುಟದಲ್ಲಿದ್ದ ಲೋಕಸಭಾ ಸದಸ್ಯರು, ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್ ಅವರ “Nil” ಹಾಜರಾತಿಯನ್ನು ಪರಿಗಣಿಸಲಾಗಿಲ್ಲ. ಈ ಎಲ್ಲರನ್ನು ಹೊರತುಪಡಿಸಿದ ಬಳಿಕ, 483 ಸಂಸದರ ಹಾಜರಾತಿ ದಾಖಲೆಗಳನ್ನು ವಿಶ್ಲೇಷಣೆಗೆ ಪರಿಗಣಿಸಿರುವುದು ಗೊತ್ತಾಗಿದೆ.

ಈ ವಿಶ್ಲೇಷಣೆಯ ಪ್ರಮುಖ ಮಿತಿಯನ್ನೊಳಗೊಂಡಿದೆ. ಶೇ.100 ಹಾಜರಾತಿ ಇಲ್ಲದಿರುವ ಸಂಸದರು ಅಧಿವೇಶನಕ್ಕೆ ಹಾಜರಾಗಿದ್ದರೂ ಸಹ ಅವರಿಗೆ ತಿಳಿದಿರುವ ಕಾರಣಗಳಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೇ ಇರಬಹುದಾದ ಸಾಧ್ಯತೆ ಇದೆ ಎಂದು ಅಭಿಪ್ರಾಯಿಸಿದೆ.

ರಾಜಕೀಯ ಪಕ್ಷವಾರು ಪ್ರಮುಖ ಅಂಶಗಳು- ಒಟ್ಟಾರೆ ಹಾಜರಾತಿ

483 ಸಂಸದರಲ್ಲಿ ಶೇ. 45.76 (221 ಮಂದಿ) ಮಾತ್ರ ಬಜೆಟ್ ಅಧಿವೇಶನದ ಶೇ 90-100ರಷ್ಟು ಸಭೆಗಳಿಗೆ ಹಾಜರಾಗಿದ್ದಾರೆ. ಅಥವಾ ಅಷ್ಟು ದಿನಗಳ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಶೇ. 75 ಹಾಜರಾತಿಯನ್ನು ಕನಿಷ್ಠ ಮಾನದಂಡ ಎಂದು ಪರಿಗಣಿಸಿದರೆ 309 ಸಂಸದರು (63.98%) ಮಾತ್ರ ಆ ಮಟ್ಟವನ್ನು ತಲುಪಿದ್ದಾರೆ.

ಅಂದರೆ, ಎರಡು-ಮೂರಾಂಶಕ್ಕಿಂತ ಕಡಿಮೆ ಸಂಸದರು ಮಾತ್ರ 75%ಕ್ಕಿಂತ ಹೆಚ್ಚು ಹಾಜರಾತಿ ದಾಖಲಿಸಿದ್ದಾರೆ. 69 ಸಂಸದರು (14.29%) ಕೇವಲ 0-15 ದಿನಗಳು, ಅಂದರೆ 50%ಕ್ಕಿಂತ ಕಡಿಮೆ ಸಭೆಗಳಿಗೆ ಮಾತ್ರ ಹಾಜರಾಗಿದ್ದಾರೆ ಅಥವಾ ಸಹಿ ಮಾಡಿದ್ದಾರೆ.

ಶೇ 100 ಹಾಜರಾತಿ

101 ಸಂಸದರು ಬಜೆಟ್ ಅಧಿವೇಶನದ ಎಲ್ಲಾ 31 ಸಭೆಗಳಿಗೂ ಹಾಜರಾತಿ ದಾಖಲಿಸಿದ್ದಾರೆ. ಇದು ಒಟ್ಟು 483 ಸಂಸದರ ಪೈಕಿ ಸುಮಾರು ಶೇ 21 ಮಾತ್ರ. ಅಂದರೆ, ಸುಮಾರು ಶೇ. 80 ಸಂಸದರು ಕನಿಷ್ಠ ಒಂದು ಸಭೆಯನ್ನು ತಪ್ಪಿಸಿದ್ದಾರೆ ಅಥವಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಲ್ಲ.

 

 

ಶೇ. 100ರಷ್ಟು ಹಾಜರಾತಿ ಹೊಂದಿದವರಲ್ಲಿ ಬಿಜೆಪಿಯ 57 ಸಂಸದರು (56.43%) ಇದ್ದಾರೆ. ಕಾಂಗ್ರೆಸ್‌ನಲ್ಲಿ 15, ಸಮಾಜವಾದಿ ಪಕ್ಷ ದ 10 , ಜನತಾ ದಳ (ಯುನೈಟೆಡ್) 6, ತೆಲುಗು ದೇಶಂ ಪಕ್ಷದ 3, ಶಿವಸೇನೆಯ 2, ಶಿವಸೇನೆ (ಉದ್ಧವ್ ಬಾಲಾಸಾಹೇಬ್ ಠಾಕ್ರೆ) ಬಣದ 2, ರಾಷ್ಟ್ರೀಯ ಲೋಕದಳದ 2, ವೈಎಸ್‌ಆರ್‍‌ ಕಾಂಗ್ರೆಸ್‌, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ತಲಾ 1 ದಮನ್ ಮತ್ತು ದಿಯು ಕ್ಷೇತ್ರದ ಒಬ್ಬ ಪಕ್ಷೇತರ ಸಂಸದರೂ ಈ ಪಟ್ಟಿಯಲ್ಲಿದ್ದಾರೆ.

 

 

ಆದರೆ ಎಐಟಿಸಿ, ಡಿಎಂಕೆ, ಎನ್‌ಸಿಪಿ, ಎನ್‌ಸಿಪಿ (ಎಸ್‌ಪಿ) ಆಪ್‌ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಯಾವುದೇ ಸಂಸದರು ಶೇ 100ರಷ್ಟು ಹಾಜರಾತಿ ಸಾಧಿಸಿಲ್ಲ.

ಶೇ. 90 ಅಥವಾ ಅದಕ್ಕಿಂತ ಹೆಚ್ಚು ಹಾಜರಾತಿ ಪಟ್ಟಿಯ ಪ್ರಕಾರ 120 ಸಂಸದರು 28-30 ದಿನಗಳವರೆಗೆ ಹಾಜರಾತಿ ದಾಖಲಿಸಿದ್ದಾರೆ. ಇದು 483ರಲ್ಲಿ ಶೇ 24.85ರಷ್ಟಿದೆ. ಇವರಲ್ಲಿ ಬಿಜೆಪಿ, 56, ಕಾಂಗ್ರೆಸ್ – 19, ಸಮಾಜವಾದಿ ಪಕ್ಷ – 17, ಟಿಡಿಪಿ – 6, ಶಿವಸೇನೆ (UBT) – 3, ಎಐಟಿಸಿ, ಸಿಪಿಐ (ಎಂ), ಸಿಪಿಐ (ಎಂಎಲ್-ಎಲ್), ಎಲ್‌ಜೆಎಸ್‌ಪಿ (ಆರ್‍‌ವಿ), ಆರ್‍‌ ಜೆ ಡಿಯ ತಲಾ 2, ಆಪ್‌, ಎಎಸ್‌ಪಿ, ಬಿಎಪಿ ಜೆಡಿಯು ಎನ್‌ಸಿಪಿ ಎಸ್‌ ಪಿ, ಎಸ್‌ ವೈಎಸ್‌ಆರ್‍‌ ಕಾಂಗ್ರೆಸ್‌, ಝಡ್‌ ಪಿಎಂ ಹಾಗೂ ಒಬ್ಬ ಪಕ್ಷೇತರ ತಲಾ 1 ಸದಸ್ಯರು ಹಾಜರಾಗಿದ್ದಾರೆ.

 

 

ಶೇ. 75 ರಿಂದ ಶೇ. 90ಕ್ಕಿಂತ ಕಡಿಮೆ ಹಾಜರಾತಿ ಪಟ್ಟಿ ಪ್ರಕಾರ 87 ಸಂಸದರು 24-27 ದಿನಗಳವರೆಗೆ ಹಾಜರಾಗಿದ್ದಾರೆ. ಬಿಜೆಪಿ – 33 , ಕಾಂಗ್ರೆಸ್ – 18, ಎಸ್‌ಪಿ – 7, ಟಿಡಿಪಿ ಹಾಗೂ ಎನ್‌ಸಿಪಿ (ಎಸ್‌ಪಿ) ತಲಾ 4, ಎಐಟಿಸಿ 3, ಡಿಎಂಕೆ, ಜನಸೇನಾ, ಜೆಡಿಯು, ಎಸ್‌ಎಸ್‌ (ಯುಬಿಟಿ) ತಲಾ 2, ಆಪ್‌, ಎಜೆಎಸ್‌ಯು, ಸಿಪಿಐ, ಐಯುಎಂಎಲ್‌, ಜಮ್ಮು ಕಾಶ್ಮೀರ್, ಎನ್‌ಸಿ, ಜೆಡಿಎಸ್‌, ಜೆಎಂಎಂ, ಎಸ್‌ ಎಸ್‌, ಸಿಕ್ಕೀಂ ಕ್ರಾಂತಿಕಾರಿ ಮೋರ್ಚಾ ಹಾಗೂ ಒಬ್ಬ ಪಕ್ಷೇತರ – ತಲಾ 1 ಸದಸ್ಯ ಹಾಜರಾಗಿದ್ದಾರೆ.

 

 

ಶೇ. 50 ರಿಂದ ಶೇ. 75ಕ್ಕಿಂತ ಕಡಿಮೆ ಹಾಜರಾತಿ ಪಟ್ಟಿ ಪ್ರಕಾರ 108 ಸಂಸದರು 16-23 ದಿನಗಳವರೆಗೆ ಹಾಜರಾಗಿದ್ದಾರೆ. ಬಿಜೆಪಿ – 32, ಕಾಂಗ್ರೆಸ್ – 32, ಡಿಎಂಕೆ 8, ಎಐಟಿಸಿ 7, ಎನ್‌ಸಿಪಿ ಎಸ್‌ಪಿ 3, ಐಯುಎಂಎಲ್‌, ಜೆಡಿಯು, ಎಸ್‌ಪಿ, ಎಸ್‌ಎಸ್‌ (ಯುಬಿಟಿ) ವೈಎಸ್‌ಆರ್‍‌ ಕಾಂಗ್ರೆಸ್‌ ತಲಾ 2, ಆಪ್, ಎಐಎಂಐಎಂ, ಸಿಪಿಐ (ಎಂ), ಜೆಕೆ-ಎನ್‌ಸಿ, ಜೆಎಂಎಂ, ಕೆಸಿ, ಎಲ್‌ಜೆಎಸ್‌ಪಿ ಎಂಡಿಎಂಕೆ, ಆರ್‍‌ಎಸ್‌ಪಿ, ಆರ್‍‌ಜೆಡಿ, ಟಿಡಿಪಿ, ಎಸ್‌ಎಡಿ ಹಾಗೂ ಮೃತರಾದ ವಾಯ್ಸ್‌ ಆಫ್‌ ತಹೆ ಪೀಪಲ್ ಪಾರ್ಟಿಯೂ ಸೇರಿ ತಲಾ 1,ಪಕ್ಷೇತರ – 2 ಸದಸ್ಯರು ಹಾಜರಾಗಿದ್ದರು.

ಶೇ. 25 ರಿಂದ ಶೇ 50ಕ್ಕಿಂತ ಕಡಿಮೆ ಹಾಜರಾತಿ ಪಟ್ಟಿಯ ಪ್ರಕಾರ 51 ಸಂಸದರು (10.55%) 8-15 ದಿನಗಳವರೆಗೆ ಮಾತ್ರ ಹಾಜರಾಗಿದ್ದಾರೆ. ಎಐಟಿಸಿಯ 11, ಕಾಂಗ್ರೆಸ್ – 11 , ಬಿಜೆಪಿ – 9, ಡಿಎಂಕೆಯ 9, ವಿಸಿಕೆಯ 2, ಶಿವಸೇನೆ – 2, ಎಜಿಪಿ, ಸಿಪಿಐ (ಎಂ), ಜೆಎಂಎಂ, ಎನ್‌ಸಿಪಿ, ಆರ್‍‌ಜೆಡಿ, ಎಸ್‌ಪಿ ಹಾಗೂ ಯುಪಿಪಿ-ಎಲ್‌ ತಲಾ 1 ಸದಸ್ಯರು ಹಾಜರಾಗಿದ್ದರು.

ಶೇ 10 ರಿಂದ ಶೇ 25ಕ್ಕಿಂತ ಕಡಿಮೆ ಹಾಜರಾತಿ ಪಟ್ಟಿ ಪ್ರಕಾರ 9 ಸಂಸದರು 4-7 ದಿನಗಳವರೆಗೆ ಮಾತ್ರ ಹಾಜರಾಗಿದ್ದಾರೆ. ಎಐಟಿಸಿಯ 3, ಡಿಎಂಕೆಯ 2 , ಬಿಜೆಪಿ, CPI, ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರ – ತಲಾ 1 ಸದಸ್ಯರು ಹಾಜರಾಗಿದ್ದರು.  ಶೇ 10%ಕ್ಕಿಂತ ಕಡಿಮೆ ಹಾಜರಾತಿ ಪಟ್ಟಿ ಪ್ರಕಾರ 4 ಸಂಸದರು ಕೇವಲ 2-3 ದಿನಗಳು ಮಾತ್ರ ಹಾಜರಾಗಿದ್ದಾರೆ. ಎಐಟಿಸಿಯ 2, ಬಿಜೆಪಿ – 1, ಡಿಎಂಕೆ 1 ಸದಸ್ಯರು ಹಾಜರಾಗಿದ್ದರು.

ಶೂನ್ಯ ಹಾಜರಾತಿ

ಬಜೆಟ್‌ ಅಧಿವೇಶನದಲ್ಲಿ 3 ಸಂಸದರು ಬಜೆಟ್ ಅಧಿವೇಶನದ ಅವಧಿಯಲ್ಲಿ ಒಮ್ಮೆಯೂ ಹಾಜರಾತಿ ದಾಖಲಿಸಿಲ್ಲ. ಇವರಲ್ಲಿ ಒಬ್ಬ ಪಕ್ಷೇತರ ಸಂಸದರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ. ಉಳಿದವರಲ್ಲಿ ಒಬ್ಬರು ಕಾಂಗ್ರೆಸ್‌ನವರು ಹಾಗೂ ಒಬ್ಬರು ಬಿಜೆಪಿಯವರು. ಅವರು ಗೈರಾಗಲು ಅಥವಾ ಸಹಿ ಮಾಡದಿರಲು ಕಾರಣಗಳು ತಿಳಿದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಕಡಿಮೆ ಸದಸ್ಯರಿರುವ ಪಕ್ಷಗಳ ಉತ್ತಮ ಸಾಧನೆ

ಲೋಕಸಭೆಯಲ್ಲಿ ಅತಿ ಕಡಿಮೆ ಸದಸ್ಯರಿರುವ ಕೆಲವು ಪಕ್ಷಗಳು ಅತ್ಯುತ್ತಮ ಸರಾಸರಿ ಹಾಜರಾತಿ ದಾಖಲಿಸಿವೆ. ಆರ್‍‌ಎಲ್‌ಡಿಯ ಇಬ್ಬರೂ ಸಂಸದರು ಶೇ.100ರಷ್ಟು ಹಾಜರಾತಿ ಹೊಂದಿದ್ದಾರೆ. ಆರ್‍‌ಎಲ್‌ಡಿಯ ಇಬ್ಬರು ಸಂಸದರು ಮತ್ತು ಆರ್‍ಎಲ್‌ಪಿಯ ಏಕೈಕ ಸಂಸದರು ಶೇ. 100ರಷ್ಟು ಹಾಜರಾತಿ ಸಾಧಿಸಿದ್ದಾರೆ. ಸಿಪಿಐ (ಎಂಎಲ್-ಎಲ್) ಇಬ್ಬರು ಸದಸ್ಯರು 31ರಲ್ಲಿ 30 ಸಭೆಗಳಿಗೆ ಹಾಜರಾಗಿದ್ದಾರೆ. ಝಡ್‌ಪಿಎಂನ ಏಕೈಕ ಸಂಸದರು 30 ಸಭೆಗಳಿಗೆ ಹಾಜರಾಗಿದ್ದರು. ಎಸ್‌ಪಿಯ 37 ಸಂಸದರು ಸರಾಸರಿ 28-43 ಸಭೆಗಳಿಗೆ ಹಾಜರಾಗಿದ್ದರು.

ಎಲ್‌ಜೆಎಸ್‌ಪಿ (ಆರ್‍‌ವಿ) ನಾಲ್ವರು ಸಂಸದರು 28-25 ಸಭೆಗಳಿಗೆ, ಎಎಸ್‌ಪಿ (ಕೆಆರ್‍‌) ಹಾಗೂ ಬಿಎಪಿ ಪಕ್ಷಗಳ ತಲಾ ಒಬ್ಬ ಸಂಸದರು 28 ಸಭೆಗಳಿಗೆ ಹಾಜರಾಗಿದ್ದಾರೆ.

ಅತಿದೊಡ್ಡ ಪಕ್ಷ ಬಿಜೆಪಿಯ ಸಾಧನೆ ಏನು?

191 ಸದಸ್ಯರನ್ನು ಹೊಂದಿರುವ ಬಿಜೆಪಿ, ಪ್ರತಿ ಸಂಸದನಿಗೆ ಸರಾಸರಿ 26.46 ಸಭೆಗಳ ಹಾಜರಾತಿ ದಾಖಲಿಸಿದೆ. ಪಕ್ಷಗಳ ಸರಾಸರಿಯಲ್ಲಿ 13ನೇ ಸ್ಥಾನದಲ್ಲಿದೆ. ಇದರ ಮಿತ್ರ ಪಕ್ಷಗಳಾದ ಜೆಡಿ (ಯು) 27.91 ಸಭೆಗಳು, ಟಿಡಿಪಿ 27.8 ಸಭೆ, ಜನಸೇನಾ 26.5 ಸಭೆಗಳಿಗೆ ಹಾಜರಾಗಿದೆ. ಇವು ಬಿಜೆಪಿಗಿಂತಲೂ ಉತ್ತಮ ಸರಾಸರಿ ದಾಖಲಿಸಿವೆ.

 

 

ಮತ್ತೊಂದು ಅತಿದೊಡ್ಡ ಪ್ರತಿಪಕ್ಷ ಕಾಂಗ್ರೆಸ್‌ 97 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ ಪ್ರತಿ ಸಂಸದರಿ ಸರಾಸರಿ 23.13 ಸಭೆಗಳ ಹಾಜರಾತಿ ದಾಖಲಿಸಿದೆ. ಇದರ ಮೈತ್ರಿ ಪಕ್ಷಗಳಾದ ವೈಎಸ್ಆರ್‍‌ ಕಾಂಗ್ರೆಸ್‌, ಶಿವಸೇನೆ (ಯುಬಿಟಿ), ಎನ್‌ಸಿಪಿ ಹಾಗೂ ಆರ್‍‌ಜೆಡಿ ಕಾಂಗ್ರೆಸ್‌ಗಿಂತ ಉತ್ತಮ ಸರಾಸರಿ ಹಾಜರಾತಿ ದಾಖಲಿಸಿವೆ.

ಪಕ್ಷೇತರ- ಪ್ರಾದೇಶಿಕ ಪಕ್ಷಗಳ ಸಂಸದರ ಹಾಜರಾತಿ ಪ್ರಮಾಣ ಎಷ್ಟಿದೆ?

ಏಳು ಪಕ್ಷೇತರ ಸಂಸದರ ಸರಾಸರಿ ಹಾಜರಾತಿ 19.43 ಸಭೆಗಳು ಮಾತ್ರವಾಗಿದೆ. 20ಕ್ಕಿಂತ ಹೆಚ್ಚು ಸದಸ್ಯರಿರುವ ಪ್ರಾದೇಶಿಕ ಪಕ್ಷಗಳ ಪೈಕಿ ಎಐಟಿಸಿ ಸರಾಸರಿ 15, ಡಿಎಂಕೆ ಸರಾಶರಿ 14.64 ಸಭೆಗಳಿಗೆ ಹಾಜರಾಗಿವೆ. ಈ ಎರಡೂ ಪಕ್ಷಗಳು ದೊಡ್ಡ ಪ್ರಾದೇಶಿಕ ಪಕ್ಷಗಳ ಪೈಕಿ ಅತ್ಯಂತ ಕಡಿಮೆ ಸರಾಸರಿ ಹಾಜರಾತಿ ದಾಖಲಿಸಿವೆ.

ಶೇ. 50 ರಿಂದ ಶೇ 75ಕ್ಕಿಂತ ಕಡಿಮೆ ಹಾಜರಾತಿ ದಾಖಲಿಸಿದ 106 ಸಂಸದರ ಪೈಕಿ ಕರ್ನಾಟಕದ 10 ಮಂದಿ ಸಂಸದರಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ತಲಾ 13, ಪಶ್ಚಿಮ ಬಂಗಾಳ 12, ಮಹಾರಾಷ್ಟ್ರ 11, ಒಡಿಶಾ ಹಾಗೂ ತೆಲಂಗಾಣ ತಲಾ 7 ಬಿಹಾರ, ಪಂಜಾಬ್ ಹಾಗೂ ಉತ್ತರ ಪ್ರದೇಶವು ತಲಾ 6, ಆಂಧ್ರ ಪ್ರದೇಶ, ಅಸ್ಸಾಂ ಹಾಗೂ ಜಾರ್ಖಂಡ್ – ತಲಾ 3, ಮಧ್ಯಪ್ರದೇಶ 2 ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಣಿಪುರ – ತಲಾ ಒಬ್ಬರು ಸಂಸದರು ಶೇ.50ರಿಂದ 75ಕ್ಕಿಂತ ಕಡಿಮೆ ಹಾಜರಾತಿ ದಾಖಲಿಸಿದ್ದಾರೆ.

ಶೇ. 25 ರಿಂದ ಶೇ. 50ಕ್ಕಿಂತ ಕಡಿಮೆ ಹಾಜರಾತಿಯನ್ನು 52 ಸಂಸದರು ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳ 15, ತಮಿಳುನಾಡು 12, ಅಸ್ಸಾಂ 8, ಮಹಾರಾಷ್ಟ್ರ 4, ಕೇರಳ 3, ತೆಲಂಗಾಣ 2, ಬಿಹಾರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಪುದುಚೇರಿ, ತ್ರಿಪುರಾ ಹಾಗೂ ಉತ್ತರ ಪ್ರದೇಶ ತಲಾ ಒಬ್ಬರು ಸಂಸದರು ಈ ಪಟ್ಟಿಯಲ್ಲಿದ್ದಾರೆ.

ರಾಜ್ಯದ ಸಂಸದರಾದ ಬ್ರಿಜೇಶ್ ಚೌಟ ಅವರು ಶೇ. 100ರಷ್ಟು ಹಾಜರಾತಿ ದಾಖಲಿಸಿದ್ದಾರೆ. ವಿಶ್ವೇಶ್ವರ ಹೆಗಡೆ ಅವರು ಶೇ. 93.55, ಡಾ ಸಿ ಎನ್ ಮಂಜುನಾಥ್‌ ಅವರು ಶೇ.90.32, ಡಾ ಕೆ ಸುಧಾಕರ್ ಅವರು ಶೇ. 90.32,

ಪಿ ಸಿ ಮೋಹನ್ ಅವರು ಶೇ.83.87, ಮಲ್ಲೇಶ್‌ ಬಾಬು ಶೇ 83.87, ಜಗದೀಶ್ ಶೆಟ್ಟರ್ ಶೇ.80.65, ಕುಮಾರ್ ನಾಯಕ್ ಶೇ. 80.65,

ಶ್ರೇಯಸ್ ಪಟೇಲ್ ಶೇ.90.32, ತೇಜಸ್ವಿ ಸೂರ್ಯ ಶೇ. 87.10, ರಮೇಶ್‌ ಜಿಗಜಿಗಣಿಗಿ ಶೇ. 87.10, ಕೋಟಾ ಶ್ರೀನಿವಾಸ ಪೂಜಾರಿ ಶೇ.87.10ರಷ್ಟು ಹಾಜರಾತಿ ದಾಖಲಿಸಿದ್ದಾರೆ.

ಸಾಗರ್ ಖಂಡ್ರೆ ಶೆ. 74.19, ಯದುವೀರ್ ಒಡೆಯರ್ ಶೇ.74.19, ಪ್ರಭಾ ಮಲ್ಲಿಕಾರ್ಜುನ್‌ ಶೇ. 67.74,

 

ಬಸವರಾಜ ಬೊಮ್ಮಾಯಿ ಶೇ. 67.74, ಸುನೀಲ್ ಬೋಸ್‌ ಶೇ. 42.52, ಗೋವಿಂದ ಕಾರಜೋಳ ಶೇ.61.29 ಹಾಜರಾತಿ ದಾಖಲಿಸಿದ್ದಾರೆ.

Hot this week

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...
Please Scan to make Your Contribution

Topics

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

Related Articles

Popular Categories

error: Content is protected !!