Friday | October 16, 2026 |

ಒಂದೇ ತಿಂಗಳಲ್ಲಿ ಎಎಸ್‌ಪಿಪಿ ಬದಲು; ಬಿ ಎನ್ ಜಗದೀಶ್ ಬದಲಿಗೆ ಸೂರ್ಯ ಮುಕುಂದರಾಜ್ ನೇಮಕ, ಚರ್ಚೆಗೆ ಗ್ರಾಸವಾದ ಸರ್ಕಾರದ ನಡೆ

ಬೆಂಗಳೂರು; ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬಿ ಎನ್ ಜಗದೀಶ್ ಅವರನ್ನು  ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಒಂದು ತಿಂಗಳು ಕಳೆಯುವಷ್ಟರಲ್ಲೇ ಅವರನ್ನು ರಾಜ್ಯ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿದೆ.

ಜಗದೀಶ್ ಅವರಿಂದ ತೆರವಾಗಿದ್ದ  ಹೆಚ್ಚುವರಿ ರಾಜ್ಯ ಸರ್ಕಾರಿ ಹೆಚ್ಚುವರಿ ಅಭಿಯೋಜಕರ ಹುದ್ದೆಗೆ  ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯಾಧ್ಯಕ್ಷ ಮತ್ತು ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿರುವ  ಸೂರ್ಯ ಮುಕುಂದರಾಜ್ ಅವರನ್ನು  ನೇಮಕ ಮಾಡಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಘಪರಿವಾರದ ಪರವಾದ ವಕೀಲರನ್ನು ನೇಮಕ ಮಾಡಲಾಗಿತ್ತು ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.  ಮತ್ತು ಪ್ರಮುಖ ಪ್ರಕರಣಗಳಲ್ಲಿ ಸರಕಾರಿ ಅಭಿಯೋಜಕರು ಕಲಾಪಕ್ಕೆ ಗೈರು ಹಾಜರಾಗುತ್ತಿದ್ದಾರೆ. ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ದೇವದಾಸ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಕಾನೂನು ವಲಯದಲ್ಲಿಯೂ ಸಾಕಷ್ಟು ಚರ್ಚೆಗಳಾಗಿತ್ತು.

ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಒಂದು ತಿಂಗಳ ಅವಧಿಯಲ್ಲಿಯೇ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಸರ್ಕಾರಿ ಪ್ಲೀಡರ್‍‌ಗಳನ್ನೂ  ಬದಲಾಯಿಸಿದೆ.  ಸರ್ಕಾರದ ಈ ನಡೆಯು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಅಲ್ಲದೇ ಹೈಕೋರ್ಟಿನ ಪ್ಲೀಡರ್ ಸಾರಿಕಾ ಶೆಟ್ಟಿ ಎಂಬವರನ್ನೂ ಹುದ್ದೆಯಿಂದ ಕೈಬಿಟ್ಟದೆ.

ಕಾನೂನು ಇಲಾಖೆಯು 2026ರ ಜುಲೈ 17ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

 

 

ಬಿ.ಎನ್ ಜಗದೀಶ್  ಅವರು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (SIT) ಪರ ಪ್ರತಿನಿಧಿಸಿದ್ದರು.  ಅವರನ್ನು ರಾಜ್ಯ ಸರ್ಕಾರ  ಕಳೆದ ಜೂನ್ 12ರಂದು ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಕ ಮಾಡಿತ್ತು. ಇದೀಗ ಅವರಿಂದ ತೆರವಾಗಿರುವ ಹುದ್ದೆಗೆ  ಸೂರ್ಯ ಮುಕುಂದರಾಜ್ ಅವರನ್ನು  ರಾಜ್ಯ ಸರ್ಕಾರಿ ಹೆಚ್ಚುವರಿ ಅಭಿಯೋಜಕರಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

 

 

ಸರಕಾರಿ ಪ್ಲೀಡರ್ ಮತ್ತು ಅಪರ ಸರಕಾರಿ ವಕೀಲರು ಸೇರಿದಂತೆ 37 ಸರಕಾರಿ ವಕೀಲರ ನೇಮಕ ಮಾಡಿರುವ ಕಾನೂನು ಇಲಾಖೆಯು 2026ರ ಜೂನ್‌ 17ರಂದು  ಅಧಿಸೂಚನೆ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಸಾರಿಕಾ ಶೆಟ್ಟಿ ಅವರ ಹೆಸರಿತ್ತು. ಆದರೆ 2026ರ ಜುಲೈ 17ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಸಾರಿಕಾ ಶೆಟ್ಟಿ ಅವರ ಹೆಸರನ್ನು ಕೈ ಬಿಟ್ಟಿದೆ. ಈ ಸ್ಥಾನಕ್ಕೆ  ಯೋಗರಾಜ ಕೆ. ಎಂಬವರನ್ನು ನೇಮಕ ಮಾಡಲಾಗಿದೆ.

ಬಿ.ಎನ್. ಆನಂದ ಅವರನ್ನು ಸರ್ಕಾರಿ ವಕೀಲರಾಗಿ, ಅನೂಪ್ ಕುಮಾರ್ ಮತ್ತುಸೂರ್ಯ ಮುಕುಂದ್ ರಾಜ್ ಅವರನ್ನು ಹೆಚ್ಚುವರಿ ರಾಜ್ಯ ಅಭಿಯೋಜಕರಾಗಿ ಮತ್ತು ತಾವರೇಶ್ ನಾಯ್ಕ್,ಎಂ. ರಾಜಕುಮಾರ, ಮಂಜುನಾಥ ರಾಯಪ್ಪ, ಚಿದಾನಂದ ಡಿ. ಬಂಟ್ವಾಳ, ಕೇಶವಮೂರ್ಕಿ ಎಚ್.ವಿ, ಭೈರೇಗೌಡ, ಭೈರವ್ ಕುಟ್ಟಯ್ಯ, ಸಂತೋಷ್ ರಾಜ್ ದೇಶ್ ಮುಖ್ ಇವರನ್ನು ಅಪರ ಸರ್ಕಾರಿ ವಕೀಲರಾಗಿ ನೇಮಕ ಮಾಡಿರುವುದು ಗೊತ್ತಾಗಿದೆ.

 

 

ಉಚ್ಛ ನ್ಯಾಯಾಲಯ ಸರ್ಕಾರಿ ಪ್ಲೀಡರ್ ಆಗಿ ಸಪಹಾಸ್ ಗೌಡ, ಮೊಹಮ್ಮದ್ ಶಾಮೀಲ್, ಅನಿತ ಗಿರೀಶ್, ನಾಗ್ ಹರೀಶ್, ಯೋಗರಾಜ್, ಪ್ರಕಾಶ್ ಮಲ್ಲಪ್ಪ ಗಾಣಿಗೇರ್, ಮಾಳವಿಕ ಪ್ರಸಾದ್, ಪಿ.ಮಹೇಶ್ ಅವರನ್ನು ನೇಮಿಸಿದೆ.  ಉಚ್ಛ ನ್ಯಾಯಾಲಯ ಧಾರವಾಡ ಪೀಠ ಅಡ್ವೋಕೇಟ್ ಜನರಲ್ ಕಚೇರಿಯ  ಸರ್ಕಾರಿ ಪ್ಲೀಡರ್ ಆಗಿ ರತ್ನಮಾಲ ಮತ್ತು ಕಲ್ಬುರ್ಗಿ ಪೀಠದ ಸರ್ಕಾರಿ ಪ್ಲೀಡರ್ ಆಗಿ ಜಮಾದಾರ ಶಹಬುದ್ದೀನ್ ಅವರನ್ನು ನೇಮಿಸಿರುವುದು ತಿಳಿದು ಬಂದಿದೆ.

 

 

 

 

2026 ಜೂನ್‌ 17ರ ಅಧಿಸೂಚನೆಯಲ್ಲಿದ್ದ ಹೆಸರುಗಳ ಪಟ್ಟಿ

ಹರೀಶ್‌ ಕೆ ಎಸ್‌ (ಸರ್ಕಾರಿ ವಕೀಲರು), ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ಅನಿಲ್‌ ಕುಮಾರ್ ಬಿ ನಾವದಗಿ, ಪನಿನಿ ಎ ಎಚ್‌, ಸ್ಕಂದ ಆರ್ ಕೆ ರಾವ್, ಅಶ್ವಿನಿ ಪಾಟೀಲ್, ಶಾರದಾ ಹೆಚ್‌ ವಿ, ಸಂಜಯ್ ಯಾದವ್ ಬಿ, ಶಮಂತ್ ನಾಯಕ್, ಮಹೇಶ್‌ ಪಿ, ಶ್ರೀ ಶೇಶು ಅವರನ್ನು ಹೆಚ್ಚುವರಿ ಸರ್ಕಾರಿ ವಕೀಲರನ್ನಾಗಿ ನೇಮಿಸಿತ್ತು.

ಅದೇ ರೀತಿ ಬಿ ಎಸ್‌ ಸುಧೀಂದ್ರ, ಪೂಜಾ ಎಂ ಕೂರ್ಸೆ, ರಂಜಿತ್‌ ಕುಮಾರ್ ಎನ್, ದೀಪಿಕಾ ಆಳ್ವಾ, ಜಾವೇದ್‌ ಅವರನ್ನು ಸರ್ಕಾರಿ ಪ್ಲೀಡರ್‍‌ ಆಗಿ ನೇಮಿಸಿತ್ತು. ಕಲ್ಬುರ್ಗಿ ಪೀಠಕ್ಕೆ ಮಲ್ಲಿಕಾರ್ಜುನ್ ಸಿ ಬಸೀರೆಡ್ಡಿ ಅವರನ್ನು ಸರ್ಕಾರಿ ವಕೀಲರನ್ನಾಗಿ ಮತ್ತು ಸಿದ್ದಲಿಂಗ ಪಿ ಪಾಟೀಲ್ ಅವರನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರನ್ನಾಗಿ  ನೇಮಿಸಿತ್ತು.  ಮಲ್ಲಿಕಾರ್ಜುನ್ ಸಾಹುಕಾರ್, ವೀರನಗೌಡ ಎಂ ಬಿರಾದರ್, ಶಿವಕುಮಾರ್ ಆರ್‍‌ ಟೆಂಗ್ಲಿ, ವೀರನಗೌಡ ಮಾಲೀ ಪಾಟೀಲ್, ಮಾಯಾ ಟಿ ರಾಜಣ್ಣ,  ಸುನೀತಾ ವೈ ಕಟ್ಟಿಮನಿ, ನರೇಂದ್ರ ರೆಡ್ಡಿ, ಮುಕ್ಬುಲ್ ಅಹ್ಮದ್‌ ಅವರನ್ನು ಕಲ್ಬುರ್ಗಿ ಪೀಠಕ್ಕೆ ನೇಮಿಸಿತ್ತು.

ಧಾರವಾಡ ಪೀಠಕ್ಕೆ ರಾಕೇಶ್ ಬಿಲ್ಕಿ, ಅವರನ್ನು ಸರ್ಕಾರಿ ವಕೀಲರನ್ನಾಗಿ ನೇಮಿಸಿತ್ತು. ಟಿ ಹನುಮರೆಡ್ಡಿ ಅವರನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರನ್ನಾಗಿಸಿತ್ತು. ಅಶೋಕ್ ಟಿ ಕಟ್ಟಿಮನಿ ಪ್ರವೀಣ್ ಕೆ ಉಪ್ಪಾರ್, ಅಂತೋನಿ ಆರ್ ರೋಡ್ರಿಗ್ರಸ್‌, ನಂದಿನಿ ಸೋಮಾಪುರ, ಮಾಲಾ ಬಿ ಭೂತೆ, ಸಹರದ್ ವಿ ಮಗದಮ್, ಸುನೀತಾ ಸಿಕ್ವೆರಾ ಅವರನ್ನು ಧಾರವಾಡ ಪೀಠಕ್ಕೆ ಸರ್ಕಾರಿ ವಕೀಲರನ್ನಾಗಿ ನೇಮಿಸಿತ್ತು. ಗಿರಿಜಾ ಎಸ್‌ ಹಿರೇಮಠ್‌, ಕೀರ್ತಿಲತಾ ಆರ್ ಪಾಟೀಲ್, ಪ್ರವೀಣ್‌ ವೈ ದೇವರೆಡ್ಡಿ ಅವರನ್ನು ಇದೇ ಪೀಠಕ್ಕೆ ಸರ್ಕಾರಿ ಪ್ಲೀಡರ್‍‌ನ್ನಾಗಿ ನೇಮಿಸಿತ್ತು.

 

ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ಗಳ ‘ಬಿಜೆಪಿ’ ನಿಷ್ಠೆ ಬಯಲು; ಎನ್‌ ದೇವದಾಸ್‌ರಿಂದಲೇ ಸರ್ಕಾರಕ್ಕೆ ವರದಿ

ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು ಬಿಜೆಪಿ ನಿಷ್ಟೆ ಹೊಂದಿದ್ದಾರೆ ಎಂದು ದೇವದಾಸ್‌ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ದಿ ಫೈಲ್‌ ಈ ಕುರಿತು ವರದಿ ಪ್ರಕಟಿಸಿತ್ತು.

ಎಎಜಿ ದೇವದಾಸ್ ಕರ್ತವ್ಯದಿಂದ ಬಿಡುಗಡೆ; ಕಾಂಗ್ರೆಸ್ ಸರ್ಕಾರದಲ್ಲೂ ಬಿಜೆಪಿ ನಿಷ್ಠೆಯ ಎಎಜಿಗಳ ‘ಮೇಲುಗೈ’

ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ದೇವದಾಸ್‌ ಅವರನ್ನೇ ಸರ್ಕಾರವು ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.

Hot this week

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...
Please Scan to make Your Contribution

Topics

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

Related Articles

Popular Categories

error: Content is protected !!