Tuesday | March 24, 2026 |

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

Support THE-FILE

spot_img

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು ಅಪೂರ್ಣವಾಗಿವೆ. ಅನುಮೋದಿತ ಕಾಮಗಾರಿಗಳನ್ನೂ ಕೈಗೆತ್ತಿಕೊಂಡಿರಲಿಲ್ಲ. ಅಲ್ಲದೇ ಅಲ್ಲದೇ ನಿಗದಿತ ಮಿತಿಗಿಂತ ಹೆಚ್ಚಿನ ರೀತಿಯಲ್ಲಿ ಪಾವತಿ ಆಗಿರುವುದು ಮತ್ತು ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಡೆದಿರುವ  ಮೋಸದ ವಹಿವಾಟುಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ) ಪತ್ತೆ ಹಚ್ಚಿದ್ದಾರೆ.

ವಿಧಾನಮಂಡಲದ ಉಭಯ ಸದನಗಳಲ್ಲಿ  ಮಂಡನೆಯಾಗಿರುವ ಈ ವರದಿಯು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ  ನಡೆದಿರುವ ವಿವಿಧ ರೀತಿಯ ಅಕ್ರಮಗಳ ಹಲವು ಮುಖಗಳನ್ನು ತೆರೆದಿಟ್ಟಿದೆ. ಈ ವರದಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ನೀಡಿದ್ದ ಎಲ್ಲಾ ಬಗೆಯ ಸಮಜಾಯಿಷಿಗಳನ್ನು ಪರಿಶೀಲಿಸಿದ ನಂತರ ಈ ವರದಿಯನ್ನು ತಯಾರಿಸಿದೆ.

ಎಂಜಿ ನರೇಗಾಕ್ಕೆ ಸಂಬಂಧಿಸಿದಂತೆ ಈಚೆಗಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರವೇ ನಡೆದಿತ್ತು. ಈ ಬೆಳವಣಿಗೆಗಳ ನಡುವೆಯೇ ಎಂಜಿ ನರೇಗಾದಲ್ಲಿನ ಅಕ್ರಮಗಳು, ನ್ಯೂನತೆಗಳು, ಮೋಸದ ವಹಿವಾಟುಗಳಿಗೆ ಸಂಬಂಧಿಸಿದಂತೆ ಮಂಡನೆಯಾಗಿರುವ ಸಿಎಜಿ ವರದಿಯು ಮುನ್ನೆಲೆಗೆ ಬಂದಿದೆ.

 

 

ನಡೆಯದ ತಳಮಟ್ಟದ ಸಮೀಕ್ಷೆ- ಉದ್ಯೋಗ ಬೇಡಿಕೆಯಲ್ಲಿ ದೊಡ್ಡ ವ್ಯತ್ಯಾಸ

ಕಾರ್ಮಿಕ ಆಯವ್ಯದ ತಯಾರಿಕೆಯಲ್ಲಿ  ತಳಮಟ್ಟದ ವಿಧಾನವನ್ನು ಅನುಸರಿಸದ ಕಾರಣ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗದ ಬೇಡಿಕೆ ಮೌಲ್ಯಮಾಪನ ಕೊರತೆ ಕಂಡು ಬಂದಿತ್ತು. ಉದ್ಯೋಗದ ಬೇಡಿಕೆಯ ಪ್ರಮಾಣ ಪತ್ರ ಮತ್ತು ಸಮಯವನ್ನು ನಿರ್ಣಯಿಸಲು ಜಾಬ್‌ ಕಾರ್ಡ್‌ ಹೊಂದಿರುವವರ ತಳಮಟ್ಟದ ಸಮೀಕ್ಷೆಯನ್ನು ನಡೆಸಿರಲಿಲ್ಲ. ಹೀಗಾಗಿ ಇದು ವಾಸ್ತವಿಕ ಅಭಿವೃದ್ಧಿ ಯೋಜನೆಗಳ ತಯಾರಿಕೆ ಮೇಲೆ ಪರಿಣಾಮ ಬೀರಿತು. ಈ ನ್ಯೂನತೆಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ  ಕ್ರೋಢೀಕರೀಸಲ್ಪಟ್ಟ ಅನುಮೋದಿತ ಕಾರ್ಮಿಕ ಆಯವ್ಯಯದಲ್ಲಿ ಮಾನವ ದಿನಗಳಾಗಿ ದಾಖಲಾದ ಉದ್ಯೋಗದ ಬೇಡಿಕೆಯಲ್ಲಿ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಯಿತು ಎಂದು ಸಿಎಜಿಯು ವಿಶ್ಲೇಷಿಸಿದೆ.

ಅಸಮರ್ಪಕ ಪ್ರಾತಿನಿಧ್ಯ

ಅಲ್ಲದೇ ಗುತ್ತಿಗೆ ನೇಮಕಾತಿಗಾಗಿನ ರಾಜ್ಯದ  ಮೀಸಲಾತಿ ನೀತಿಯನ್ನು ಅನುಸರಿಸದೇ ಯೋಜನೆಗೆ ಗುತ್ತಿಗೆ ಸಿಬ್ಬಂದಿಯ ನೇಮಕಾತಿ ಮಾಡಲಾಗಿತ್ತು. ಕಾರ್ಯಾಚರಣೆ ಮಾರ್ಗಸೂಚಿ, 2013ರಲ್ಲಿ ಕಲ್ಪಿಸಿದಂತೆ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ವ್ಯಕ್ತಿಗಳು ಮತ್ತಿತರರಿಗೆ ಅಸಮರ್ಪಕ ಪ್ರಾತಿನಿಧ್ಯ ನೀಡಲು ಕಾರಣವಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಸ್ಪರ್ಧಾತ್ಮಕ ದರ ಪಡೆಯುವಲ್ಲಿ ವಿಫಲ

ಈ ಯೋಜನೆಯಡಿ ಹೊರಗುತ್ತಿಗೆ ಮಾನವ ಸಂಪನ್ಮೂಲ ಕೊರತೆ ಕಂಡುಬಂದಿದೆ. ಹೊಸ ಟೆಂಡರ್ ಕರೆಯದೇ ಮಾನವ ಸಂಪನ್ಮೂಲ ಸೇವೆಗಳ ಹೊರಗುತ್ತಿಗೆಯ ಒಪ್ಪಂದಗಳನ್ನು ಅನಧಿಕೃತವಾಗಿ ವಿಸ್ತರಿಸಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದಲ್ಲದೇ ಇತರೆ ಜಿಲ್ಲೆಗಳಲ್ಲಿ ಸೇವೆಗಳನ್ನು ಒದಗಿಸುವ ಮಾನವ ಸಂಪನ್ಮೂಲ ಏಜೆನ್ಸಿಗಳ ನಡುವೆ ಗುತ್ತಿಗೆಗಳನ್ನು ಮರು-ನಿಯೋಜಿಸುವಾಗ ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ಪಡೆಯಲು ವಿಫಲವಾಯಿತು ಹೀಗಾಗಿ ಇಲಾಖೆಯು ಹೆಚ್ಚುವರಿಯಾಗಿ ಸೇವಾ ಶುಲ್ಕಗಳನ್ನು ಭರಿಸಬೇಕಾಯಿತು. ಅದೇ ರೀತಿ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಲ್ಲಿಯೂ ಸಹ ಕೊರತೆ ಇದ್ದದ್ದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

ವರ್ಷದ ಕೊನೆಯಲ್ಲಿ ಹಣ ಬಿಡುಗಡೆ

2022-23 ಮತ್ತು 2023-24ರ ಅವಧಿಯಲ್ಲಿ ಯೋಜನೆಯ ವೇತನ ಘಟಕದಡಿಯಲ್ಲಿ ವೆಚ್ಚವು ಇಳಿಕೆ ಪ್ರವೃತ್ತಿಯಲ್ಲಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಸಹ ವರ್ಷದ ಕೊನೆಯಲ್ಲಿ ಹಣ ಬಿಡುಗಡೆ ಮಾಡಿತ್ತು. ಹೀಗಾಗಿ ಸಾಮಗ್ರಿ ಘಟಕದಡಿಯಲ್ಲಿ ಬಿಡುಗಡೆಯಾದ ಸಂಪೂರ್ಣ ಮೊತ್ತವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಪಾಲನ್ನು ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರವು ವಿಳಂಬ ಮಾಡಿತ್ತು. ಹೀಗಾಗಿ 36.26 ಕೋಟಿಯಷ್ಟು ದಂಡ ಬಡ್ಡಿ ಪಾವತಿಸಬೇಕಾಯಿತು ಎಂದು ವಿಶ್ಲೇಷಿಸಿದೆ.

 

 

35.10 ಕೋಟಿ ಬಾಕಿ

84.98 ಲಕ್ಷ ಸಕ್ರೀಯ ಕಾರ್ಮಿಕರಲ್ಲಿ 3.11 ಲಕ್ಷ ಕಾರ್ಮಿಕರ ಖಾತೆಗಳೊಂದಿಗೆ ಆಧಾರ್ ಮ್ಯಾಪಿಂಗ್ ರಾಜ್ಯ ಮಟ್ಟದಲ್ಲೇ ಬಾಕಿ ಉಳಿದಿತ್ತು. ಹೀಗಾಗಿ ವೇತನ ಪಟ್ಟಿಗಳನ್ನು ತಯಾರಿಸುವ ಬಗ್ಗೆ ಮತ್ತು ಸಕ್ರೀಯ ಕಾರ್ಮಿಕರಿಗೆ ಪಾವತಿಗಳ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಾಗಲಿಲ್ಲ. ಆಧಾರ್ ಆಧರಿತ ವೇತನ ಮತ್ತು ಸಾಮಗ್ರಿ ವಹಿವಾಟುಗಳಿಗೆ ಸಂಬಂಧಿಸಿದಂತೆ 35.10 ಕೋಟಿ ರು ಬಾಕಿ ಇತ್ತು.

ವಿಶೇಷ ಜಾಬ್ ಕಾರ್ಡ್‌ ನೀಡದ ಇಲಾಖೆ- ಸಿಗದ 100 ದಿನದ ಉದ್ಯೋಗ

2024ರ ಮಾರ್ಚ್‌ ಅಂತ್ಯದ ಪ್ರಕಾರ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ 34,499 ಮಂದಿ ಫಲಾನುಭವಿಗಳಿಗೆ ಜಾಬ್‌ ಕಾರ್ಡ್‌ಗಳನ್ನು ವಿತರಣೆ ಮಾಡಲು ಬಾಕಿ ಉಳಿಸಿಕೊಂಡಿತ್ತು. ಪರೀಕ್ಷಾ ತನಿಖೆ ನಡೆಸಿದ್ದ ಜಿಲ್ಲೆಗಳಲ್ಲಿ ಜಾಬ್‌ ಕಾರ್ಡ್‌ಗಳು ನಿಗದಿತ ನಮೂನೆಗೆ ಬದ್ಧವಾಗಿರಲಿಲ್ಲ. ಮತ್ತು ವಿಕಲಚೇತನರಿಗೆ ವಿಶೇಷ ಜಾಬ್‌ ಕಾರ್ಡ್‌ಗಳನ್ನು ನೀಡಿರಲಿಲ್ಲ.  ಹಾಗೆಯೇ ಎಂಜಿಎನ್‌ಆರ್‍ಇಜಿಎ ಪ್ರತಿ ಬೇಡಿಕೆಯ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ಖಚಿತಪಡಿಸಿತ್ತು.

 

 

ನೋಂದಾಯಿತ ಕುಟುಂಬಗಳಿಂದ ಉದ್ಯೋಗ ಬೇಡಿಕೆಯು ಲೆಕ್ಕ ಪರಿಶೋಧನೆ ಅವಧಿಯಲ್ಲಿ ನೀಡಲಾಗಿದ್ದ ಜಾಬ್ ಕಾರ್ಡ್‌ಗಳ ಶೇ. 48ಕ್ಕಿಂತ ಅಧಿಕವಾಗಿರಲಿಲ್ಲ. ಇದಲ್ಲದೇ ಈ ಅವಧಿಯಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿದ ಕುಟುಂಬಗಳ ಸಂಖ್ಯೆ ಕೇವಲ ಶೇ. 5ರಷ್ಟಿತ್ತು. ಬಹುಪಾಲು ಕುಟುಂಬಗಳಿಗೆ ಕೇವಲ 1ರಿಂದ 30 ದಿನಗಳ ಉದ್ಯೋಗ ಒದಗಿಸಿತ್ತು ಎಂದು ಸಿಎಜಿಯು ಬಯಲು ಮಾಡಿದೆ.

ಅಲೆಮಾರಿ, ದುರ್ಬಲ ವರ್ಗದವರನ್ನು ಹೊರಗಿಟ್ಟಿದ್ದ ಯೋಜನೆ

ಅಲೆಮಾರಿ ಬುಡಕಟ್ಟು ಜನಾಂಗದವರು, ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳು ಮುಂತಾದ ದುರ್ಬಲ ಗುಂಪುಗಳು ಬೇಡಿಕೆ ಸಲ್ಲಿಸಿದ, ಒದಗಿಸಿದ ಉದ್ಯೋಗದ ದತ್ತಾಂಶವನ್ನು ದಾಖಲಿಸಲು ಎನ್‌ಆರ್‍ಇಜಿಎ ಸಾಫ್ಟ್‌ವೇರ್‍‌ನಲ್ಲಿ ಅವಕಾಶವಿರಲಿಲ್ಲ. ವಸತಿ ಯೋಜನೆಗಳಲ್ಲಿ ನಿರ್ವಹಿಸಲಾದ ವಿಕಲಚೇತನರು ಮತ್ತು ದುರ್ಬಲ ಗುಂಪೊಉ ಫಲಾನುಭವಿಗಳ ದತ್ತಾಂಶದ ಲೆಕ್ಕ ಪರಿಶೋಧನಾ ಪರಿಶೀಲನೆಯು, ಎಂಜಿಎನ್ಆರ್‍ಇಜಿಎಸ್‌ ಅಡಿಯಲ್ಲಿ ಅಂತಹ ಫಲಾನುಭವಿಗಳನ್ನು ಗಮನಾರ್ಹವಾಗಿ ಹೊರಗಿಡಲಾಗಿತ್ತು .

ಯೋಜನಾ ಮಾರ್ಗಸೂಚಿ ಉಲ್ಲಂಘಿಸಿ ಮಾರಾಟಗಾರರ ನೇಮಕ

ಯೋಜನಾ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಮಾರಾಟಗಾರರನ್ನು ನೇಮಿಸಿಕೊಳ್ಳಲಾಗಿತ್ತು. ಈ ಯೋಜನೆಯಡಿ ಕಾರ್ಮಿಕ ಆಧರಿತ ಘಟಕಗಳಿಗೆ ಪಾವತಿಸಿದ್ದರ ಪರಿಣಾಮವಾಗಿ ಫಲಾನುಭವಿಗಳಿಗೆ ಉದ್ಯೋಗ ಅವಕಾಶಗಳನ್ನು ನಿರಾಕರಿಸಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿರುವುದು ತಿಳಿದು ಬಂದಿದೆ.

ಪರೀಕ್ಷಾ ತನಿಖೆ ನಡೆಸಿದ್ದ ಗ್ರಾಮ ಪಂಚಾಯ್ತಿಗಳಲ್ಲಿ ಬೇಡಿಕೆ ರಿಜಿಸ್ಟರ್ ನಿರ್ವಹಣೆ ಮಾಡಿರಲಿಲ್ಲ. ಕಾರ್ಮಿಕರ ಬೇಡಿಕೆಯನ್ನು ತಪ್ಪಾಗಿ ದಾಖಲಿಸಿದ ಪರಿಣಾಮ ಫಲಾನುಭವಿಗಳಿಗೆ ನೀಡಬೇಕಾದ ನಿರುದ್ಯೋಗ ಭತ್ಯೆಯನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ. 2019-20ರಿಂದ 2023-24ರ ಅವಧಿಗೆ ಪಾವತಿಸಬೇಕಾದ 1.28 ಕೋಟಿ ನಿರುದ್ಯೋಗ ಭತ್ಯೆ ಕೂಡ ಫಲಾನುಭವಿಗಳಿಗೆ ಪಾವತಿಸಲು ಬಾಕಿ ಉಳಿದಿತ್ತು.

ವರ್ಷಕ್ಕೂ ಹೆಚ್ಚು ಕಾಲ ಕಾಮಗಾರಿ ಅಪೂರ್ಣ

ಒಂದು ವ‍ರ್ಷಕ್ಕೂ ಹೆಚ್ಚು ಕಾಲ ಕಾಮಗಾರಿಗಳು ಅಪೂರ್ಣವಾಗಿದ್ದವು. ಈ ಕಾಮಗಾರಿಗಳನ್ನು ಹೊರತುಪಡಿಸಿಯೂ ಸಹ ಹೆಚ್ಚಿನ ಸಂಖ್ಯೆಯ ಅನುಮೋದಿತ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಸಮನ್ವಯ ಕೊರತೆ ಮತ್ತು ಇತರೆ ಇಲಾಖೆಗಳ ತಾಂತ್ರಿಕ, ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಒಟ್ಟುಗೂಡಿಸುವುದು ಪರಿಣಾಮಕಾರಿಯಾಗಿರಲಿಲ್ಲ.

ಮೋಸದ ವಹಿವಾಟು

ವಸತಿ ಕಾಮಗಾರಿಗಳಡಿಇಯಲ್ಲಿ ಈಗಾಗಲೇ ಪೂರ್ಣಗೊಂಡ ಮನೆಗಳಿಗೆ ಪಾವತಿ, ಅನರ್ಹ ಫಲಾನುಭವಿಗಳಿಗೆ ಪಾಔತಿ, ನಿರ್ಮಾಣವನ್ನು ಕೈಗೊಳ್ಳದೇ ಇದ್ದರೂ ಸಹ ಪಾವತಿ, ನಿಗದಿತ ಮಿತಿಗಿಂತ ಹೆಚ್ಚಿನ ಪಾವತಿಗಳು ಸೇರಿದಂತೆ ಮೋಸದ ವಹಿವಾಟಗಳನ್ನೂ ಲೆಕ್ಕ ಪರಿಶೋಧನೆಯು ಗಮನಿಸಿದೆ. ಘನತ್ಯಾಜ್ಯ ನಿರ್ವಹಣಾ ಶೆಡ್‌ಗಳು, ಚೆಕ್‌ ಡ್ಯಾಮುಗಳು ಮತ್ತು ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ಸಸಿಗಳನ್ನು ಬೆಳೆಸುವುದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳು ಮತ್ತು ಮೋಸದ ಪಾವತಿಗಳ ಪ್ರಕರಣಗಳನ್ನು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.

ಅಕ್ರಮ ವೆಚ್ಚ

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳನ್ನು ರಚಿಸಿರಲಿಲ್ಲ. ಅವಾಸ್ತವಿಕ ಅಂದಾಜುಗಳನ್ನು ತಯಾರಿಸಲಾಗಿತ್ತು. ಅಸಮರ್ಪಕ ಅನುಷ್ಠಾನವಾಗಿತ್ತು. ಮತ್ತು ಕಾಮಗಾರಿಗಳ ಮೇಲೆ ಅಕ್ರಮ ವೆಚ್ಚ ಭರಿಸಲಾಗಿತ್ತು. ಈ ಕಾಮಗಾರಿಗಳಲ್ಲಿ ಫಲಾನುಭವಿಗಳನ್ನು ಕಡ್ಡಾಯವಾಗಿ ನೇಮಿಸಿಕೊಳ್ಳದೇ ವೈಯಕ್ತಿಕ ಫಲಾನುಭವಿಗಳಿಗೆ ಪ್ರಯೋಜನವಾಗುವ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

ಯೋಜನಾ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿದಂತೆ ಅಂದಾಜುಗಳನ್ನು ಪರಿಷ್ಕರಿಸಿರಲಿಲ್ಲ. ಹೀಗಾಗಿ ಮಂಜೂರಾತಿಗಿಂತ ಹೆಚ್ಚಿನ ವೆಚ್ಚವನ್ನು  ಭರಿಸಲಾಗಿತ್ತು. ಮಂಜೂರಾದ ಅಂದಾಜಿನ ಶೇ.5ಕ್ಕಿಂತ ಕಡಿಮೆ ವೆಚ್ಚವಾಗಿದ್ದರೂ ಸಹ ಎನ್‌ಆರ್‍‌ಜಿಎ ಸಾಫ್ಟ್‌ನಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸೂಚಿಸಲಾಗಿತ್ತು. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ ವೈಯಕ್ತಿಕ ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚಗಳನ್ನು ಫಲಾನುಭವಿಗಳ ಬದಲಿಗೆ ನೇರವಾಗಿ ಮಾರಾಟಗಾರರಿಗೆ ಪಾವತಿಸಲಾಗಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

ಮಸ್ಟರ್ ರೋಲ್ ಮುದ್ರಿಸಿದ್ದೇಕೆ?

ಎನ್‌ಆರ್‍ಇಜಿ ಎ ಸಾಫ್ಟ್‌ನ್ನು ಬಳಸದೇ ಮಸ್ಟರ್ ರೋಲ್‌ಗಳನ್ನು ಮುದ್ರಿಸಿದೆ. ಮತ್ತು ಅಂತಹ ತಿದ್ದಿದ ಮಸ್ಟರ್ ರೋಲ್‌ಗಳ ಮೇಲೆ ಅನಿಯಮಿತ ಪಾವತಿಗಳಂತಹ ಅಕ್ರಮಗಳನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇಲಾಖೆ ಅಧಿಕಾರಿಗಳೊಂದಿಗೆ ಯೋಜನೆಯಡಿಯಲ್ಲಿ ರಚಿಸಿದ್ದ ಸ್ವತ್ತುಗಳ ಜಂಟಿ ಭೌತಿಕ ಪರಿಶೀಲನೆಯೂ ಅಸ್ತಿತ್ವದಲ್ಲಿರಲಿಲ್ಲ., ಅಥವಾ ಆಸ್ತಿಗಳು ನಿಷ್ಕ್ರೀಯವಾಗಿವಾಗಿರುವುದನ್ನು ಸಿಎಜಿಯು ಬಹಿರಂಗಪಡಿಸಿದೆ.

ನಡೆಯದ ನಿಗದಿತ ತಪಾಸಣೆ

2019-2024ರವರೆಗಿನ ಲೆಕ್ಕ ಪರಿಶೋಧನಾ ಅವಧಿಯಲ್ಲಿ ಈ ಯೋಜನೆಯ ಮೇಲ್ವಿಚಾರಣೆ, ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಕುಂದುಕೊರತೆ ಪರಿಹಾರದಲ್ಲಿಯೂ ನಿಗದಿತವಾಗಿ ತಪಾಸಣೆ ಕೈಗೊಂಡಿರಲಿಲ್ಲ. ರಾಜ್ಯ ಉದ್ಯೋಗ ಖಾತರಿ ಪರಿಷತ್‌ ಮೂಲಕ ಯೋಜನೆಯ ನಿಗದಿತ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆದಿರಲಿಲ್ಲ. ಈ ಪರಿಷತ್ 2019ರಿಂದ 2024ರವರೆಗೆ ಕೇವಲ ಒಮ್ಮೆ ಮಾತ್ರ ಸಭೆ ಸೇರಿತ್ತು. ಈ ಪರಿಷತ್‌ನ ನಿಗದಿತ ಉಪ ಸಮಿತಿಗಳು ನಿಷ್ಕ್ರೀಯವಾಗಿದ್ದವು. ರಾಜ್ಯ, ಜಿಲ್ಲೆ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಗೃತ ಘಟಕಗಳನ್ನು ರಚಿಸಿರಲಿಲ್ಲ. ರಾಜ್ಯ ಗುಣಮಟ್ಟ ನಿರ್ವಹಣಾ ಘಟಕ ಮತ್ತು ಜಿಲ್ಲಾ ಮಟ್ಟದ ಪರಿವೀಕ್ಷಣಾ ಘಟಕಗಳ ರಚನೆಗೆ ಸಂಬಂಧಿಸಿದಂತೆ ಯೋಜನೆಗಳ ನಿಬಂಧನೆಗಳನ್ನು ಪಾಲಿಸಿರಲಿಲ್ಲ. ಮತ್ತು ಕಾಮಗಾರಿಗಳ ಕುರಿತು ನಿಗದಿತ ತಪಾಸಣೆಯನ್ನೂ  ಕೈಗೊಂಡಿರಲಿಲ್ಲ.

 

 

ಸಾಮಾಜಿಕ ಲೆಕ್ಕ ಪರಿಶೋಧನಾ ಘಟಕವು ನಿರ್ದೇಶಕರ ನೇಮಕಾತಿಯಲ್ಲಿ ಮಾನದಂಡಗಳ ಉಲ್ಲಂಘನೆ ಆಗಿತ್ತು. ಸಿಬ್ಬಂದಿ ಕೊರತೆ, ಹಣದ ಕೊರತೆ ಮತ್ತು ಹಣದ ಬಿಡುಗಡೆಯಲ್ಲಿಯೂ ವಿಳಂಬವಾಗಿತ್ತು. ಹೀಗಾಗಿ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸುವಲ್ಲಿನ ಕೊರತೆಯು 2019-20ರಲ್ಲಿ ಶೇ.1ರಿಂದ 2023-24ರಲ್ಲಿ ಶೇ.57ಕ್ಕೆ ಏರಿಕೆಯಾಗಿತ್ತು. ಸಾಮಾಜಿಕ ಲೆಕ್ಕ ಪರಿಶೋಧನಾ ಅವಲೋಕನಗಳನ್ನು ಮತ್ತು ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿನ ದುರುಪಯೋಗ ಪ್ರಕರಣಗಳ ಅಕ್ರಮಗಳನ್ನು ಇತ್ಯರ್ಥಗೊಳಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿ ಇದ್ದವು.

ಶೇ.20ಕ್ಕಿಂತ ಕಡಿಮೆ ವಸೂಲಿ

ಅಲ್ಲದೇ ನಿಗದಿಪಡಿಸಿದಂತೆ ವರದಿ ಮಾಡುವುದು ಮತ್ತು ಪರಿಹಾರ ಹಾಗೂ ಅನುಸರಣಾ ಕಾರ್ಯವಿಧಾನಗಳು ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಗಿ ಕುಂದುಕೊರತೆ ಪರಿಹಾರ ಕಾರ್ಯವಿಧಾನವೂ ಪರಿಣಾಮಕಾರಿಯಾಗಿರಲಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಸಾರ್ವಜನಿಕ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಆದರೂ ದೂರುಗಳ ವಿಲೇವಾರಿಯು ಹೆಚ್ಚಿನ ಪ್ರಮಾಣದಲ್ಲಿ ಅಂದರೇ ಶೇ. 59ರಷ್ಟು ಬಾಕಿ ಇತ್ತು.  ಹಾಗೆಯೇ ಪರೀಕ್ಷಾ ತನಿಖೆ ನಡೆಸಿದ್ದ ಜಿಲ್ಲೆಗಳಲ್ಲಿ ಸಾರ್ವಜನಿಕ ತನಿಖಾಧಿಕಾರಿ ವಿಧಿಸಿದ್ದ ದಂಡದ ಶೇ. 20ಕ್ಕಿಂತ ಕಡಿಮೆ ಹಣವನ್ನು ವಸೂಲಿ ಮಾಡಲಾಗಿತ್ತು.

Hot this week

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

ವಿನಾಶಕಾರಿ ಭೂ ಕುಸಿತ; ಕೊಡಗು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಸಭೆಯೇ ನಡೆದಿಲ್ಲ, ಪುರಾವೆಯೂ ಇಲ್ಲ

ಬೆಂಗಳೂರು; ಕೊಡಗಿನಲ್ಲಿ 2018-19ನೇ ಸಾಲಿನಲ್ಲಿ  ಭಾರೀ ಪ್ರಮಾಣದ ವಿನಾಶಕಾರಿ ಭೂ ಕುಸಿತಗಳಾಗಿದ್ದರೂ ...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

Topics

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

ವಿನಾಶಕಾರಿ ಭೂ ಕುಸಿತ; ಕೊಡಗು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಸಭೆಯೇ ನಡೆದಿಲ್ಲ, ಪುರಾವೆಯೂ ಇಲ್ಲ

ಬೆಂಗಳೂರು; ಕೊಡಗಿನಲ್ಲಿ 2018-19ನೇ ಸಾಲಿನಲ್ಲಿ  ಭಾರೀ ಪ್ರಮಾಣದ ವಿನಾಶಕಾರಿ ಭೂ ಕುಸಿತಗಳಾಗಿದ್ದರೂ ...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

Related Articles

Popular Categories

error: Content is protected !!