Thursday | May 21, 2026 |

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ  ಕೆಸರೆ (200 TPD) ಮತ್ತು ರಾಯನಕೆರೆ (150 TPD) ಕಾಂಪೋಸ್ಟಿಂಗ್‌ ಘಟಕದಲ್ಲಿ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ಪಡೆಯದೇ   ಪ್ರತಿ ದಿನವೂ   ಭೀಕರ ವಿಷಕಾರಿ ತ್ಯಾಜ್ಯವನ್ನು  ನಿರ್ವಹಣೆ ಮಾಡಲಾಗುತ್ತಿದೆ.!

ಅಲ್ಲದೇ   2023-24 ಮತ್ತು 2024-25 ನೇ ಸಾಲಿನಲ್ಲಿ ಒಣಕಸ ಹಾಗೂ ಮರುಬಳಕೆ ವಸ್ತುಗಳ (ಪ್ಲಾಸ್ಟಿಕ್ಲೋಹ) ಮಾರಾಟದಿಂದ ಮೈಸೂರು ಮಹಾನಗರ ಪಾಲಿಕೆಗೆ ಬಿಡಿಗಾಸಿನ  ಆದಾಯ ಬಂದಿಲ್ಲ. ಅಲ್ಲದೇ ಇದೇ ಅವಧಿಯಲ್ಲಿ  ಪುನರ್ಬಳಕೆ ವಸ್ತುಗಳ ಮಾರಾಟ ಮಾಡಿಲ್ಲ ಎಂದು ಮೈಸೂರು ಮಹಾನಗರಪಾಲಿಕೆಯು ಆರ್‍‌ಟಿಐ ಅಡಿಯಲ್ಲಿನ ಕೋರಿಕೆಗೆ ಉತ್ತರ ಒದಗಿಸಿದೆ. 

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಒಣ ಕಸ ಮತ್ತು ಮರು ಬಳಕೆ ವಸ್ತುಗಳ ವಿಲೇವಾರಿ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು. ಈ ಕೋರಿಕೆಗೆ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ಜಾಣತನದಿಂದ ಉತ್ತರ ನೀಡಿರುವುದು ಮತ್ತು ಕೆಲವು ಘಟಕಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನೀಡಿರುವ ಉತ್ತರವು ಕಳವಳಕಾರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮೈಸೂರು ನಗರ ಪಾಲಿಕೆಯ ಆರೋಗ್ಯ ಶಾಖೆಯು ಈಚೆಗಷ್ಟೇ ಸ್ವಚ್ಛತೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಆದರೀಗ ಆರ್‍‌ಟಿಐ ಅಡಿಯಲ್ಲಿ ನೀಡಿರುವ ಮಾಹಿತಿಯು ಒಣ ಕಸ ಮತ್ತು ಮರುಬಳಕೆ ವಸ್ತುಗಳ ವಿಲೇವಾರಿಯನ್ನು ಒರೆಗೆ ಹಚ್ಚಿದೆ. 

ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆಯ ಮೊದಲ ವಿಭಾಗದಲ್ಲಿಪ್ರತಿ ವಾರ್ಡ್‌ನಲ್ಲಿ ಮೂಲದಲ್ಲೇ ಹಸಿ ಮತ್ತು ಒಣ ಕಸದ ವಿಂಗಡಣೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.   ಅದನ್ನು ಪಾಲಿಕೆ ವತಿಯಿಂದಲೇ ನೇರವಾಗಿ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ. ಆದರೆಸಕ್ರಿಯವಾಗಿರುವ `ಮೆಟೀರಿಯಲ್ ರಿಕವರಿ ಫೆಸಿಲಿಟಿ (MRF) ಘಟಕಗಳಿಗೆ ಸಂಬಂಧಿಸಿದಂತೆ  ಕೆಸರೆ ಪ್ರದೇಶದಲ್ಲಿ ಕೇವಲ 15 ಟಿಪಿಡಿ ಸಾಮರ್ಥ್ಯದ ಘಟಕವು ಕಾರ್ಯನಿರ್ವಹಿಸುತ್ತಿದೆ.  ರಾಯನಕೆರೆ ಮತ್ತು ವಿದ್ಯಾರಣ್ಯಂ ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ MRF ಘಟಕದ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಉತ್ತರಿಸಿದೆ.

ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಸಂಬಂಧ ಯಾವೊಂದು ಪುರಾವೆಗಳನ್ನೂ ಒದಗಿಸಿಲ್ಲ.  ಅಲ್ಲದೆ ವಿಂಗಡಣೆ ಮಾಡದವರ ವಿರುದ್ಧ ಕ್ರಮ ಕೈಗೊಂಡ ವರದಿಗಳನ್ನು (Action Taken Report) ಒದಗಿಸದೆ ಬರೀ “ದಂಡ ವಿಧಿಸಲಾಗುತ್ತಿದೆ” ಎಂದು ಒಂದೇ ಸಾಲಿನಲ್ಲಿ ಉತ್ತರಿಸಿರುತ್ತಾರೆ. ಎಲ್ಲ ವಾರ್ಡ್‌ ಗಳಲ್ಲಿ ಇದನ್ನು ಪಾಲಿಕೆ ವತಿಯಿಂದಲೇ ನೇರವಾಗಿ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದು ಗೊತ್ತಾಗಿದೆ. 

 

 

‘ಕಳೆದ 2023-24 ಮತ್ತು 2024-25 ನೇ ಸಾಲಿನಲ್ಲಿ ಒಣಕಸ ಹಾಗೂ ಮರುಬಳಕೆ ವಸ್ತುಗಳ (ಪ್ಲಾಸ್ಟಿಕ್ಲೋಹ) ಮಾರಾಟದಿಂದ ಪಾಲಿಕೆಗೆ ಯಾವುದೇ ಆದಾಯ ಬಂದಿರುವುದಿಲ್ಲ.  2023-2024 ರಿಂದ 2024-2025 ರವರೆಗೆ ಪುನರ್ಬಳಕೆ ವಸ್ತುಗಳ ಮಾರಾಟ ಮಾಡಿರುವುದಿಲ್ಲ,’ ಎಂಬ ಉತ್ತರ ನೀಡುವ ಮೂಲಕ ಜಾಣತನ ಪ್ರದರ್ಶಿಸಿರುವುದು ಆರ್‍‌ಟಿಐ ಮಾಹಿತಿಯಿಂದ ಗೊತ್ತಾಗಿದೆ.

ವಿಲೇವಾರಿ ಮತ್ತು ಡಂಪಿಂಗ್ ಯಾರ್ಡ್‌ಗಳ ಎರಡನೇ ವಿಭಾಗದಲ್ಲಿಪಾಲಿಕೆಯು ನಾಚನಹಳ್ಳಿಯ ಸರ್ವೇ ನಂ. 180, 181, 182, 183 ರ ಸೀವೇಜ್ ಫಾರ್ಮ್ ಆವರಣದಲ್ಲಿರುವ ವಿದ್ಯಾರಣ್ಯಪುರಂ (200 TPD) ಘಟಕವನಷ್ಟೇ  ಹೆಸರಿಸಿದೆ.   ಕಾಂಪೋಸ್ಟಿಂಗ್ ಘಟಕಗಳ ಸಂಬಂಧ ವಿದ್ಯಾರಣ್ಯಪುರಂ(200 TPD), ಕೆಸರೆ (200 TPD) ಮತ್ತು ರಾಯನಕೆರೆ (150 TPD) ಎಂಬ ಮೂರು ಪ್ರಮುಖ ಘಟಕಗಳನ್ನು ತಾನೇ ನಿರ್ವಹಿಸುತ್ತಿದೆ ಎಂದು ಆರ್‍‌ಟಿಐ ಮಾಹಿತಿಯಲ್ಲಿ  ಒಪ್ಪಿಕೊಂಡಿದೆ. 

 

 

ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ನೀಡಿರುವ ಬಗ್ಗೆ ದಾಖಲೆ ಮಾಹಿತಿ ಕೋರಿತ್ತಾದರೂ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (KSPCB) ವಿದ್ಯಾರಣ್ಯಪುರಂ ಘಟಕಕ್ಕೆ ನೀಡಿರುವ ಸಮ್ಮತಿ ಪತ್ರವೊಂದನ್ನು ಮಾತ್ರ ನೀಡಿದೆ. ಉಳಿದ ಕೆಸರೆ ಮತ್ತು ರಾಯನಕೆರೆ ಘಟಕಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ  ಮಂಡಳಿಯಿಂದ ಪಡೆದಿರುವ ಅನುಮತಿ ಪತ್ರವನ್ನು ಒದಗಿಸಿಲ್ಲ. ಹೀಗಾಗಿ ಈ ಎರಡೂ ಘಟಕಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿಯಿಲ್ಲದೆ  ಭೀಕರ ವಿಷಕಾರಿ ತ್ಯಾಜ್ಯ ವಿಲೇವಾರಿಯನ್ನು  ಮಾಡುತ್ತಿದೆಯೇ ಎಂಬ ಅನುಮಾನಗಳನ್ನು ಬಲಪಡಿಸಿದಂತಾಗಿದೆ. ಇದು ಆಘಾತಕಾರಿ ಎಂಬ ಮಾತುಗಳು ಕೇಳಿ ಬಂದಿವೆ.

 

 

ಏಕೆಂದರೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ನಿಯಮಾವಳಿಗಳ ಪ್ರಕಾರ CFE (Consent for Establishment) ಮತ್ತು CFO (Consent to Operate) ಕಡ್ಡಾಯವಾಗಿದೆ.  ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಂತರ ಉಸ್ತುವಾರಿ ಮತ್ತು ತಪಾಸಣೆ ಅಗತ್ಯವಿರುತ್ತದೆ. ಮತ್ತೊಂದು ಆಘಾತಕಾರಿ ವಿಷಯವೆಂದರೆ ವಿದ್ಯಾರಣ್ಯಪುರಂ ಘಟಕಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಪ್ರಸ್ತುತ ಸಂಯೋಜಿತ ಸಮ್ಮತಿ ಆದೇಶವನ್ನು (Combined Consent Order No. PCB/WMC-1/201/MSW/2024/1863) ದಿನಾಂಕ 02 ಆಗಸ್ಟ್ 2025 ರಂದು ಹೊರಡಿಸಿದೆ. ಈ ಸಮ್ಮತಿಯು 30 ಜೂನ್ 2025 ಕ್ಕೇ ಮುಕ್ತಾಯಗೊಂಡಿದೆ.  2025ರ ಜೂನ್‌ನಿಂದ 2026ರ ಮೇ ವರೆಗೆ ಸಮ್ಮತಿ ಆದೇಶ ಪಡೆದಿದೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಹೀಗಾಗಿ  ಸದ್ಯ ಈ ಘಟಕವು ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಅನುಮತಿಯನ್ನು 2020ರ ಜುಲೈ 1 ರಿಂದ 2025ರ ಜೂನ್‌ 30ರವರೆಗೆ ಮಾತ್ರ ನೀಡಿತ್ತು.   ಈ ಘಟಕದಿಂದ ದಿನಂಪ್ರತಿ ಹೊರಬರುತ್ತಿರುವ 8.0 ಕೆಎಲ್‌ಡಿ (KLD) ತನಕ ಭೀಕರ ವಿಷಕಾರಿ ಲೀಚೇಟ್‘ (Leachate) ದ್ರವವನ್ನು ನಿಯಂತ್ರಿಸಲು ಒದ್ದೆ ಬಾವಿಗಳನ್ನು ಬಲಪಡಿಸಬೇಕೆಂದು ಮತ್ತು ಹೊಸ ಪ್ರಪೋಸಲ್‌ ನೊಂದಿಗೆ ಮೂರು ತಿಂಗಳೊಳಗೆ ಸಲ್ಲಿಸಬೇಕೆಂಬ ಷರತ್ತನ್ನು ವಿಧಿಸಿ ಅನುಮತಿ ನೀಡಿತ್ತು ಆದರೆ ಈ ಸಂಬಂಧ ಈ ಎಲ್ಲಾ ಷರತ್ತುಗಳನ್ನು ಮೈಸೂರು ಮಹಾನಗರ ಪಾಲಿಕೆ ಯು ಸಂಪೂರ್ಣವಾಗಿ ಗಾಳಿಗೆ ತೂರಿದಂತಾಗಿದೆ. ಆದರೆ ಇದನ್ನು ಪಾಲಿಸಲಾಗಿದೆಯೇ ಎಂಬ ಮಾಹಿತಿಯೂ ಸಹ ಲಭ್ಯವಿಲ್ಲ.

ಒಟ್ಟಾರೆ ಇದೀಗ ಪಾಲಿಕೆಯ ಉತ್ತರದಿಂದ ಎಲ್ಲ ಮೂರು ಘಟಕಗಳೂ ಯಾವುದೇ ಅನುಮತಿಗಳಿಲ್ಲದೆ ನಡೆಯುತ್ತಿದೆ ಎಂದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

ಪಾಲಿಕೆಯ ನೀಡಿರುವ  2019 ರ ಅಧಿಕೃತ ಕೌನ್ಸಿಲ್ ನಡಾವಳಿಗಳ ಪ್ರಕಾರ ಮೈಸೂರು ನಗರದಲ್ಲಿ ಪ್ರತಿ ದಿನ ಅಂದಾಜು 402 ಟನ್ ರಷ್ಟು ಒಟ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.   ಅದರಲ್ಲಿ ಸರಿ ಸುಮಾರು 40 ರಿಂದ 50 ಟನ್ ಕೇವಲ ಪ್ಲಾಸ್ಟಿಕ್ ತ್ಯಾಜ್ಯವಿದೆ. ಅಲ್ಲದೇ “ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಮರುಬಳಕೆ ಮಾಡದೆ ವಿದ್ಯಾರಣ್ಯಪುರಂನ ಹೊಂಡ ಭರ್ತಿ ಜಾಗದಲ್ಲಿ ನೇರವಾಗಿ ವಿಲೇವಾರಿ ಮಾಡಲಾಗುತ್ತಿದೆ” ಎಂದು ಪಾಲಿಕೆಯೇ ತನ್ನ ಲಿಖಿತ ಟಿಪ್ಪಣಿಯಲ್ಲಿ ಒಪ್ಪಿಕೊಂಡಿರುವುದು ಕಳವಳವನ್ನು ಹುಟ್ಟುಹಾಕಿದೆ. 

ಪ್ರತಿನಿತ್ಯ ಹೊಂಡ ಭರ್ತಿಯಲ್ಲಿ ವಿಲೇವಾರಿ ಮಾಡುವ ಪ್ಲಾಸ್ಟಿಕ್‌ ತ್ಯಾಜ್ಯದ ಪೈಕಿ ಟನ್ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಪರಿಸರಸ್ನೇಹಿ ಇಂಟರ್ ಲಾಕ್ ಗಳನ್ನು‘ ತಯಾರಿಸಲು ಮೆ|| ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸಲ್ಲಿಸಿದ್ದ ವರ್ಷಗಳ ಅವಧಿಗೆ 100/100  ಜಾಗ ಕೇಳಿ ಪ್ರಸ್ತಾವನೆಗೆ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯು 17-12-2018 ರಂದು ಒಪ್ಪಿಗೆಯನ್ನೂ ನೀಡಿತ್ತು.

ಆದರೆಇದೇ ಸ್ಥಾಯಿ ಸಮಿತಿಯು 2019ರ ಫೆ.5ರಂದು ( ನಡಾವಳಿ ಸಂಖ್ಯೆ 1/26 ರಲ್ಲಿ)  ಯಾವುದೇ ಗಂಭೀರ ಕಾರಣವಿಲ್ಲದೆ ಈ ಜೈವಿಕ ಯೋಜನೆಯನ್ನು ಹಠಾತ್ತನೆ ಕೈಬಿಟ್ಟಿತು.  ಮತ್ತು ಆ ನಂತರ ಮೆ|| ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ಮರುಪರಿಶೀಲಿಸಲು ಮಹಾಪೌರರಿಗೆ ಮನವಿ ಸಲ್ಲಿಸಿತ್ತು. 2019ರ ಅಕ್ಟೋಬರ್‍‌ 15ರಂದು  ಕೌನ್ಸಿಲ್‌ ಸಮಿತಿ ಶಿಫಾರಸ್ಸನ್ನು ಒಪ್ಪಿದೆ.

ಇದೇ ಶಿಫಾರಸ್ಸಿನ ಅಧಿಕೃತ ಕೌನ್ಸಿಲ್ ನಡಾವಳಿಗಳ ಪ್ರಕಾರ ಮೈಸೂರು ನಗರದಲ್ಲಿ ಪ್ರತಿ ದಿನ ಅಂದಾಜು 402 ಟನ್ ರಷ್ಟು ಒಟ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.   ಅದರಲ್ಲಿ ಸರಿ ಸುಮಾರು 40 ರಿಂದ 50 ಟನ್ ಕೇವಲ ಪ್ಲಾಸ್ಟಿಕ್ ತ್ಯಾಜ್ಯವಿದೆ. ಅಲ್ಲದೇ “ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಮರುಬಳಕೆ ಮಾಡದೆ ವಿದ್ಯಾರಣ್ಯಪುರಂನ ಹೊಂಡ ಭರ್ತಿ ಜಾಗದಲ್ಲಿ ನೇರವಾಗಿ ವಿಲೇವಾರಿ ಮಾಡಲಾಗುತ್ತಿದೆ” ಎಂದು ಪಾಲಿಕೆಯೇ ತನ್ನ ಲಿಖಿತ ಟಿಪ್ಪಣಿಯಲ್ಲಿ ಒಪ್ಪಿಕೊಂಡಿರುವುದು ಕಳವಳವನ್ನು ಹುಟ್ಟುಹಾಕಿದೆ. 

 

 

ಖಾಸಗಿ ಮರುಬಳಕೆದಾರರಲ್ಲಿನ ಒಪ್ಪಂದದ ಸಂಬಂಧ ಕೇವಲ ಮೆ|| ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಮಾತ್ರವೇ ಇಸವಿ 2019 ರಂದು ಎಂಒಯು ಸಹಿಮಾಡಿದೆ.

 

ಇಡೀ  ಬೃಹತ್ ಮೈಸೂರಿನ ತ್ಯಾಜ್ಯ ವಿಲೇವಾರಿಗೆ ಒಬ್ಬರು ಮಾತ್ರವೇ ಖಾಸಗಿ ಗುತ್ತಿಗೆದಾರರಿರುವುದು ಪಾಲಿಕೆಯ ಸ್ಪರ್ಧಾತ್ಮಕ ಮತ್ತು ಗಣನೀಯ ಪ್ರಮಾಣದ ವಿಲೇವಾರಿಗೆ ಆಸಕ್ತಿ ಇಲ್ಲದಿರುವುದನ್ನು ಎತ್ತಿ ತೋರಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!