Saturday | May 23, 2026 |

ಸರ್ಕಾರಿ ಜಮೀನು, ಅರಣ್ಯ, ಗೋಮಾಳ, ಕೆರೆ ಒತ್ತುವರಿ; ಪ್ರಭಾವಿಗಳ ಪರ ನಿಂತ ವಿಶೇಷ ಜಿಲ್ಲಾಧಿಕಾರಿಗಳು, ಅಧಿಕಾರ ವ್ಯಾಪ್ತಿ ಮೀರಿ ಆದೇಶ, ವಿಶೇಷ ಜಿಲ್ಲಾಧಿಕಾರಿ ನೇಮಕ ಕಾನೂನುಬದ್ಧವೆಂದ ಸರ್ಕಾರ

ಬೆಂಗಳೂರು;  ಭೂ ಕಂದಾಯ ಕಾಯ್ದೆ 1964ರ ಕಲಂ 136(3) ರಡಿ ಅಧಿಕಾರ ಚಲಾಯಿಸಲು ಯಾವುದೇ ಅಧಿಕಾರವಿಲ್ಲದಿದ್ದರೂ ಸಹ  ವಿಶೇಷ ಜಿಲ್ಲಾಧಿಕಾರಿಗಳು  ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ಧಾರೆ. ಅಲ್ಲದೇ  ಸರ್ಕಾರಿ ಜಮೀನುಗಳು, ಅರಣ್ಯ ಭೂಮಿ, ಗೋಮಾಳ, ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ  ಪ್ರಭಾವಿ  ಖಾಸಗಿ ವ್ಯಕ್ತಿಗಳ ಪರವಾಗಿಯೇ  ಇದೇ ವಿಶೇಷ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

ಹಾಗೆಯೇ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿ ( 51551-52-2013 (KLR RES-PIL)ಗೆ ಸಂಬಂಧಿಸಿದಂತೆ 2014ರ ಆಗಸ್ಟ್‌ 26ರಂದು ನೀಡಿದ್ದ ತೀರ್ಪಿನ ಪ್ರಕಾರ ಭೂ ಕಂದಾಯ ಕಾಯ್ದೆ 1964ರ ಕಲಂ 136(3) ಅನ್ವಯ ಅಧಿಕಾರ ಚಾಲಯಿಸಲು ವಿಶೇಷ ಜಿಲ್ಲಾಧಿಕಾರಿಗಳಿಗೆ ಅಧಿಕಾರವೇ ಇಲ್ಲ ಎಂದು ಆದೇಶ ಹೊರಡಿಸಿತ್ತು. ಆದರೂ ತಮ್ಮ ಕಾರ್ಯ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸುತ್ತಿದ್ದಾರೆ ವಿಶೇಷ ಜಿಲ್ಲಾಧಿಕಾರಿಗಳು ಎಂಬ ಆಪಾದನೆಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಸುರೇಶ್‌ ಚಂದ್ರ ಬಾಬು ಎಂಬುವರು 2023ರಲ್ಲಿಯೇ ಈ ವಿಶೇಷ ಜಿಲ್ಲಾಧಿಕಾರಿಗಳ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ  ದೂರು ದಾಖಲಿಸಿದ್ದರು.

 

 

ಕೆಎಎಸ್‌ ಅಧಿಕಾರಿಗಳಾದ  ಎಸ್‌ ಎನ್‌ ಗಂಗಾಧರಯ್ಯ, ಸಿ ಮೊಹಮದ್ ಕಲೀಮುಲ್ಲಾ, ಜಿ ವಿ ಸೀನಪ್ಪ, ಜಿ ರಾಧಾಕೃಷ್ಣ, ಎಂ ಓಂಕಾರ್ ಮೂರ್ತಿ, ಅನಿಲ್ ಕುಮಾರ್‍‌ ಅವರು ವಿಶೇಷ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಇವರು ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.

 

 

ಈ ದೂರಿಗೆ ಸಂಬಂಧಿಸಿದಂತೆ 2023

 

 

ಮತ್ತು 2024ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು  ವರದಿ ಕೇಳಿತ್ತು.

 

 

ಈ ಮಧ್ಯೆ  ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪ ವಿಭಾಗಕ್ಕೆ ಐಎಎಸ್‌ ವೃಂದದ  ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿರುವುದು ನಿಯಮಬಾಹಿರವಾಗಿದೆ ಎಂದೂ ಸುರೇಶ್‌ ಚಂದ್ರ ಬಾಬು ಅವರು ಮತ್ತೊಂದು ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿರುವ ಸರ್ಕಾರವು ಇದೀಗ ವಿಶೇಷ ಜಿಲ್ಲಾಧಿಕಾರಿಗಳ ನೇಮಕ ಆದೇಸವು ಕಾನೂನುಬದ್ಧವಾಗಿದೆ ಎಂದು ಪ್ರತಿಪಾದಿಸಿದೆ. ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿರುವ ಬಗೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ವಿಶೇಷ ಜಿಲ್ಲಾಧಿಕಾರಿಗಳ ನೇಮಕಕ್ಕೆ ಹೊರಡಿಸಿರುವ ಆದೇಶವು ನಿಯಮಬಾಹಿರವಾಗಿದೆ ಎಂದು ಸುರೇಶ್‌ ಚಂದ್ರಬಾಬು ಎಂಬುವರು ಮನವಿ ನೀಡಿದ್ದರು. ಈ ಮನವಿ ಆಧರಿಸಿ ದಾಖಲೆಗಳನ್ನು ಪರಿಶೀಲಿಸಿರುವ ಕಂದಾಯ ಇಲಾಖೆಯು 2026ರ ಮೇ 4ರಂದು ಈ ಬಗ್ಗೆ ಮನವಿದಾರರಿಗೆ ಹಿಂಬರಹ ನೀಡಿದೆ.

ಈ ಹಿಂಬರಹದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪ ವಿಭಾಗಕ್ಕೆ 2014ರ ಅಕ್ಟೋಬರ್‍‌ 10ರಂದು ಐಎಎಸ್‌ ವೃಂದದ ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9 ರ ಅನ್ವಯ ಅಧಿಕಾರವನ್ನು ಬಳಸಿ 2 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿ ಆದೇಶಿಸಿತ್ತು. ಆದರೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ವಿವಿಧ ಕಲಂಗಳ ಅಡಿಯಲ್ಲಿ ಕಾರ್ಯ ಹಂಚಿಕೆ ಮಾಡಿದ್ದು ನಿಯಮಬಾಹಿರವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುರೇಶ್‌ ಚಂದ್ರಬಾಬು ಎಂಬುವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಈ ದೂರನ್ನು ಪರಿಶೀಲಿಸಿರುವ ಕಂದಾಯ ಇಲಾಖೆಯು ಆದೇಶವು ಕಾನೂನುಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9ನ್ನು ಪರಿಗಣಿಸಿ ಜಿಲ್ಲಾಧಿಕಾರಿಯವರು ನಿರ್ವಹಿಸುವ ಕೆಲವು ಕಾರ್ಯಗಳನ್ನು ಜಿಲ್ಲಾಮಟ್ಟ ಅಥವಾ ಜಿಲ್ಲೆಯ ಕೆಲವು ಭಾಗಕ್ಕೆ ಅನ್ವಯಿಸುವಂತೆ ಅಧಿಕಾರ ಚಲಾಯಿಸಲು ಐಎಎಸ್‌ ವೃಂದದ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಯನ್ನು ಸೃಜಿಸಲು ಅವಕಾಶವಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಜಿಲ್ಲಾಧಿಕಾರಿಗಳನ್ನು ಒಂದೇ ಜಿಲ್ಲೆಗೆ ನೇಮಿಸಲು ಅವಕಾಶವಿದ್ದಲ್ಲಿ ಆ ಬಗ್ಗೆ ಕಲಂ 8ರಲ್ಲಿ ಸ್ಪಷ್ಟಪಡಿಸಬಹುದಾಗಿತ್ತು. ಸರ್ಕಾರವು 2010ರ ಜೂನ್‌ 4ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾತ್ಕಾಲಿಕವಾಗಿ ಸೃಜಿಸಿದ್ದ 3 ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗಳ ಪೈಕಿ ಎರಡು ಹುದ್ದೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿತ್ತು.

 

 

ಉಳಿದ ಒಂದು ವಿಶೇಷ ಜಿಲ್ಲಾಧಿಕಾರಿ ಹುದ್ದೆಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9ರ ಅನ್ವಯ ಅಧಿಕಾರ ಬಳಸಿಕೊಂಡು  ಮುಂದಿನ ಆದೇಶದವರೆಗೆ ಐಎಎಸ್ ವೃಂದದ ವಿಶೇಷ ಜಿಲ್ಲಾಧಿಕಾರಿ-2 ಎಂದು ಪದನಾಮೀಕರಿಸಿ ಆದೇಶಿಸಿದೆ. ಇದು ಕಾನೂನುಬದ್ಧವಾಗಿದೆ ಎಂದು ಪ್ರತಿಪಾದಿಸಿರುವುದು ಹಿಂಬರಹದ ಪ್ರತಿಯಿಂದ ತಿಳಿದು ಬಂದಿದೆ.

ಅಲ್ಲದೇ ಸೃಜನೆಗೊಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಐಎಎಸ್‌ ಮತ್ತು ಕೆಎಎಸ್‌ ಅಧಿಕಾರಿಗಳಿಗೆ ಹಂಚಿಕೆಯಾದ ಕರ್ತವ್ಯಗಳನ್ನು ನಿರ್ವಹಿಸಿರುವುದು ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳೂ ಸಹ ಕಾನೂನುಬಾಹಿರವಾಗಿವೆ ಎಂದು ದೂರಿನಲ್ಲಿ ಆಪಾದಿಸಿತ್ತು. ಇದಕ್ಕೆ ಉತ್ತರಿಸಿರುವ ಕಂದಾಯ ಇಲಾಖೆಯು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9ರ ಅನ್ವಯ ವಿಶೇಷ ಜಿಲ್ಲಾಧಿಕಾರಿಗೆ ಜಿಲ್ಲಾಧಿಕಾರಿಯವರು ನಿರ್ವಹಿಸುವಂತಹ ಅಥವಾ ನಿರ್ವಹಿಸುವಂತಹ ಕರ್ತವ್ಯ ನಿರ್ವಹಿಸಲು ಅವಕಾಶವಿದೆ. ಕಲಂ 8ರಂತೆ ವಿಶೇಷ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂತೆ ಈ ಕಾಯ್ದೆ ಅಥವಾ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿನ ಅಡಿಯಲ್ಲಿ ಜಿಲ್ಲೆಯಲ್ಲಿ ಅಥವಾ ಜಿಲ್ಲೆಯ ಒಂದು ಭಾಗದಲ್ಲಿ ಜಿಲ್ಲಾಧಿಕಾರಿಗಳು ಚಲಾಯಿಸುವ ಅಥವಾ ನಿರ್ವಹಿಸುವ ಅಧಿಕಾರವನ್ನು ಚಲಾಯಿಸಬಹುದು. ಅಲ್ಲದೇ ಕರ್ತವ್ಯಗಳನ್ನು ನಿರ್ವಹಿಸಬಹುದು ಎಂದು ಹಿಂಬರಹದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ವಿಶೇಷ ಜಿಲ್ಲಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9(1) ರದ್ದುಗೊಳಿಸಿಲ್ಲ. ವಿಶೇಷ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಜತೆಗೆ ಪ್ರಾದೇಶಿಕ ಆಯುಕ್ತರಿಗೆ ಅಧೀನರಾಗಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಅಧಿಕಾರದ ಶ್ರೇಣಿಯನ್ನು ಸ್ಪಷ್ಟಪಡಿಸಲು ಇದನ್ನು ತಿದ್ದುಪಡಿ ಮಾಢಲಾಗಿದೆ. ವಿಶೇಷ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಅಧೀನರಾಗಿದ್ದರೂ ಅವರು ಪ್ರಾದೇಶಿಕ ಆಯುಕ್ತರಿಗೂ ಅಧೀನ ಎಂದು ತಿದ್ದಪಡಿಯಲ್ಲಿ ಸ್ಪಷ್ಟಪಡಿಸಿದೆ ಎಂದು ಹಿಂಬರಹದಲ್ಲಿ ಪ್ರತಿಪಾದಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಜಿಲ್ಲಾ ಪಂಚಾಯತ್‌ ಮತ್ತು ಜಿಲ್ಲಾಪರಿಷತ್‌ಗಳ ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆ 1993 ಮತ್ತು ಕರ್ನಾಟಕ ಜಿಲ್ಲಾ ಪರಿಷತ್‌ಗಳು, ತಾಲೂಕು ಪಂಚಾಯತ್‌ ಸಮಿತಿಗಳೂ, ಮಂಡಲ ಪಂಚಾಯತ್‌ಗಳು ನ್ಯಾಯ ಪಂಚಾಯ್ತಿಗಳ ಕಾಯ್ದೆ -1983 ಕೂಡ ಇದಕ್ಕೆ ಅನ್ವಯಿಸಲಿದೆ. ಈ ಕಾಯ್ದೆಗಳು ಕಂದಾಯ ಆಡಳಿತದೊಂದಿಗಿನ ಸಂಬಂಧವನ್ನು ಒಳಗೊಂಡಿದೆ. ಈ ಸಂಸ್ಥೆಗಳ ರಚನೆ, ಕಾರ್ಯಗಳು, ಅಧಿಕಾರಗಳನ್ನು ನಿಯಂತ್ರಿಸುತ್ತದೆ. ಆಧರೆ ಅವು ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 9(1) ರ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದು ಸಮಜಾಯಿಷಿ ನೀಡಿದೆ.

ಇನಾಂ ಅಬಾಲಿಷನ್ ಕಾಯ್ದೆ ಅಡಿಯಲ್ಲಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಹಾಗೂ ನಿರ್ಣಯಿಸಲು ಅಧಿಕಾರವಿದೆ. ಈ ಅಧಿಕಾರವನ್ನು ತಿದ್ದುಪಡಿ ಮೂಲಕ ರದ್ದು ಮಾಢಿತ್ತು. ಟ್ರಿಬ್ಯೂನಲ್‌ ಗೆ ಮೇಲ್ಮನವಿ ವಿಚಾರಗಳನ್ನು ನಿರ್ಣಯಿಸಲು ತಿದ್ದುಪಡಿ ಮಾಡಿದೆ. ಸರ್ವೋಚ್ಛ ನ್ಯಾಯಾಲಯವೂ ಸಹ (ಸಿವಿಲ್-5684-5686/1999 ಎಂ ಬಿ ರಾಮಚಂದ್ರನ್ /ಗೌರಮ್ಮ ಮತ್ತಿತರರು) ತೀರ್ಪು ನೀಡಿದೆ. ಈ ಆದೇಶದ ಅನ್ವಯ ಲ್ಯಾಂಡ್‌ ಟ್ರಿಬ್ಯೂನಲ್‌ಗೆ ಗ್ರಾಂಟ್‌ ಆಫ್‌ ಆಕ್ಯುಪೆನ್ಸಿ ರೈಟ್ಸ್‌ಗಳ ಬಗ್ಗೆ ನಿರ್ಣಯಿಸಲು ಅಧಿಕಾರವಿದೆ. 1979ರ ತಿದ್ದುಪಡಿ ಪ್ರಕಾರ ಸರ್ವೋಚ್ಛ ನ್ಯಾಯಾಲಯವೂ ಸಹ ತಿಳಿಸಿದೆ. ಈ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಆಥವಾ ವಿಶೇಷ ಜಿಲ್ಲಾಧಿಕಾರಿ 1 ಮತ್ತು 2 ಇವರಿಗೆ ಗ್ರಾಂಟ್‌ ಅಫ್‌ ಆಕ್ಯುಪೆನ್ಸಿ ರೈಟ್ಸ್‌ ಬಗ್ಗೆ ನಿರ್ಣಯ ಮಾಡಲು ಅಧಿಕಾರವಿಲ್ಲ. ಹಾಗೂ ವಿಶೇಷ ಜಿಲ್ಲಾಧಿಕಾಋಇ 1 ಮತ್ತು 2 ಯಾವುದೇ ಆದೇಶ ಮಾಡಿದ್ದಲ್ಲಿ ಅದು ಕಾನೂನಿನಲ್ಲಿ ಊರ್ಜಿತವಾಗಿರುವುದಿಲ್ಲ ಎಂದು ಹೇಳಿದೆ.

ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 19(1)ರ ಅಡಿಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಐಪಿಸಿ ಕಾಯ್ದೆ  1860ರ ವಿವಿಧ ಕಲಂಗಳ ಅಡಿಯಲ್ಲಿ  ಅಭಿಯೋಜನೆಗೊಳಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ನೀಡಬಹುದೇ  ಎಂದು ಸುರೇಶ್‌ ಚಂದ್ರಬಾಬು ಅವರು ಕೇಳಿದ್ದರು. ಅಲ್ಲದೇ   ಅರ್ಜಿದಾರರು ಯಾವುದೇ ಅಧಿಕಾರಿಯ ಹೆಸರನ್ನು ಪ್ರಸ್ತಾಪಿಸದೇ ಕೇವಲ ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪ ವಿಭಾಗಗಳಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಮತ್ತು ಕೆಎಎಸ್‌ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಅನುಮತಿ ಕೋರಿರುತ್ತಾರೆ. ಈ ರೀತಿಯ ಹೆಸರು ಪ್ರಸ್ತಾಪಿಸದೇ ಒಟ್ಟಾರೆಯಾಗಿ ಎಲ್ಲಾ ಅಧಿಕಾರಿಗಳನ್ನು ಅಭಿಯೋಜನೆಗೆ ಒಳಪಡಿಸಲು ಅನುಮತಿ ನೀಡಲು ನಿಯಮಗಳಲ್ಲಿ ಅವಕಾಶವಿದೆಯೇ ಎಂದೂ ಕೇಳಿದ್ದರು.

 

 

ಐಪಿಸಿ ಕಾಯ್ದೆ ಕಲಂ 19, 120, 320, 465, 467, 475, 405, 407, 408, 409, 148, 170, 171 ಡಿ, 205, 229, 416, 420, 463, 471, 490 ಮತ್ತು 492 ಅಡಿಯಲ್ಲಿ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದರು. ಆದರೆ ಈ ರೀತಿಯ ಅಪರಾಧಗಳನ್ನು ಎಲ್ಲಾ ಅಧಿಕಾರಿಗಳು ಮಾಡಿರುವ ಬಗ್ಗೆ ಯಾವುದೇ ಮಾಹಿತಿಯನ್ನೂ ದೂರಿನಲ್ಲಿ ಉಲ್ಲೇಖಿಸಿರಲಿಲ್ಲ. ಅಲ್ಲದೇ ಆ ಅವಧಿಯಲ್ಲಿ ಹೇಳಿರುವ ಎಲ್ಲಾ ಆಧಿಕಾರಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿರುವುದು ಸಮಂಜಸವಾಗಿರುವುದಿಲ್ಲ. ಅದನ್ನು ಹೊರತುಪಡಿಸಿ ಅನುಮತಿ ಕೋರುವಾಗ ನಿರ್ದಿಷ್ಟ ಅಧಿಕಾರಿಯು ಯಾವ ಅಪರಾಧವನ್ನು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಯಾವ ಅವಧಿಯಲ್ಲಿ ಮಾಡಿರುತ್ತಾರೆ ಎಂದು ತಿಳಿಸಿರುವುದು ಅವಶ್ಯಕವಾಗಿದೆ ಎಂದು ಕಂದಾಯ ಇಲಾಖೆಯು ಹೇಳಿದೆ.

 

 

ಒಬ್ಬ ಸರ್ಕಾರಿ ನೌಕರನು ನಿರ್ವಹಿಸಬೇಕಾದ ಕರ್ತವ್ಯವನ್ನು ನಿರ್ವಹಿಸದೇ ಇದ್ದಲ್ಲಿ ಅಥವಾ ಅಸಡ್ಡೆ ಮಾಡಿದಲ್ಲಿ ಅದು ಕರ್ತವ್ಯ ನಿರ್ಲಕ್ಷ್ಯತೆ ಆಗಿದ್ದರೇ ಆತನು ಉತ್ತರಿಸಬೇಕು ಎಂದು ತಿಳಿಸಿರುವುದು ಗೊತ್ತಾಗಿದೆ.

Hot this week

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...
Please Scan to make Your Contribution

Topics

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!