Thursday | June 11, 2026 |

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿನ ಹಲವು ನಿಯಮಬಾಹಿರ ಚಟುವಟಿಕೆಗಳ ಕುರಿತು ದನಿ ಎತ್ತಿದ್ದ ಪ್ರಾಜೆಕ್ಟ್  ಇಂಜಿನಿಯರ್ ಡಾ ಸೈಯದ್ ಸಮೀರ್‍‌ ಅವರ ವಿರುದ್ಧ ಅಧಿಕಾರಿಗಳ ಒಂದು ಗುಂಪು ದೂರಿನ ಸರಮಾಲೆಯನ್ನೇ ಹೆಣೆದಿತ್ತು. ಈ ದೂರುಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ ರಾಧಾಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು.

2025ರ ಜೂನ್‌ 4 ರಂದು ನಡೆದಿದ್ದ ವಿಚಾರಣೆಗೆ ಆಪಾದಿತ ಪ್ರಾಜೆಕ್ಟ್‌ ಇಂಜಿನಿಯರ್ ಡಾ ಸೈಯದ್‌ ಸಮೀರ್‍‌ ಅವರು ಪ್ರತಿಪಾದಿಸಿದ್ದ ಅಂಶಗಳು, ಮಂಡಳಿ ಅಧಿಕಾರಿಗಳ ವರ್ತನೆಯನ್ನು ಬಹಿರಂಗಪಡಿಸಿದೆ. ವಿಚಾರಣಾಧಿಕಾರಿ ಮುಂದೆ ಹಾಜರಾಗಿದ್ದ ಸೈಯದ್ ಸಮೀರ್ ಅವರು  ಲಿಖಿತ ರೂಪದಲ್ಲಿ  ವಾದಾಂಶಗಳಿಗೆ ಪೂರಕವಾಗಿ  ಮಂಡಳಿಯ ಕಾರ್ಯದರ್ಶಿ ಅಶೋಕ್ ಎಂ ರಾಯಚೂರ್ ಅವರೊಂದಿಗಿನ ಸಂಭಾಷಣೆಯ ತುಣಕುನ್ನು ಸಹ ವಿಚಾರಣೆ ವೇಳೆ ಮಂಡಿಸಿದ್ದರು.

ವಿಚಾರಣಾಧಿಕಾರಿ ಮುಂದೆ ಮಂಡಿಸಿದ್ದ ಆರೋಪಿತರಿಬ್ಬರ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳು ದಿ ಫೈಲ್ ಗೆ ಲಭ್ಯವಾಗಿವೆ.

ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯಲ್ಲಿ ಪ್ರಾಜೆಕ್ಟ್‌ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ   ಡಾ ಸೈಯದ್ ಸಮೀರ್ ಅವರ ವಿರುದ್ಧ ಅಶಿಸ್ತು, ದುರ್ನಡತೆ ಎಸಗಿದ್ದಾರೆ ಎಂದು ಮಂಡಳಿಯ ಇನ್ನಿತರೆ ಅಧಿಕಾರಿಗಳ ವರ್ಗವು ಆಪಾದಿಸಿತ್ತು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ  ಮಂಡಳಿಯ ಕಾರ್ಯದರ್ಶಿ ಪ್ರೊ ಅಶೋಕ್ ಎಂ ರಾಯಚೂರು ಮತ್ತು ಅಂದಿನ ಪ್ರಭಾರ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ ಯು ಟಿ ವಿಜಯ್ ಅವರ ಸಮ್ಮುಖದಲ್ಲಿ  ಸಮೀರ್‍‌ ಅವರನ್ನು ಅವಮಾನಿಸಲಾಗಿತ್ತು ಎಂದು ವಿಚಾರಣಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಇದಕ್ಕೆ ಪೂರಕವಾಗಿ ಸಮೀರ್‍‌ ಅವರು ವಿಚಾರಣಾಧಿಕಾರಿಗೆ ಆಡಿಯೋ ಸಂಭಾಷಣೆಯನ್ನು ಲಿಖಿತವಾಗಿ ನಮೂದಿಸಿ ನೀಡಿದ್ದರು.

ಕೊಠಡಿಯಲ್ಲಿ ನಡೆದಿದ್ದೇನು?

ಕಾರ್ಯದರ್ಶಿ; ನಾನು ಹೇಳುವವರೆಗೂ ಕೂಡಂಗಿಲ್ಲ (ಕೋಪದಿಂದ ಗದರಿಸಿ, ಅವಮಾನಿಸಿ ಹೇಳಿದರು)

ಆಪಾದಿತ ನೌಕರ ಸಮೀರ್; ಹಾ ಸರ್

ಕಾರ್ಯದರ್ಶಿ; ನಾನು ಹೇಳೋವರ್ಗೂ ಕೂರೋ ಹಾಗಿಲ್ಲ.  First manners you know that day what you have done? the way you behaved, you cannot talk like that out of turn when i am chairing the meeting, is that clear to you?

ಆಪಾದಿತ ನೌಕರ ಸಮೀರ್; ಓ ಕೆ ಸರ್

ಕಾರ್ಯದರ್ಶಿ; ಏನೋ ಒಂದು ಸರಿ ಹೇಳ್ತೀರಾ, ಎರಡು ಸರಿ ಹೇಳ್ತೀರಾ, ಹಂಗೆ ಕಂಟಿನ್ಯೂಸ್‌ ಆಗಿ your are yelling

ಆಪಾದಿತ ನೌಕರ ಸಮೀರ್; ಸರ್‍‌ ನನ್ನ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ ಸರ್ ಅದಕ್ಕೆ ನಾನು ಹೇಳಿದೆ.

 

 

ಕಾರ್ಯದರ್ಶಿ; ಪರಿಹಾರ ಸಿಗಲ್ಲ, ಈ ತರ yell ಮಾಡಿದ್ರೆ (ಕೋಪದಿಂದ ಹೇಳಿದರು)

ಆಪಾದಿತ ನೌಕರ ಸಮೀರ್; ಅಲ್ಲ ಸರ್ ನಾನು ಎರಡು ಕಂಪ್ಲೇಟ್ ಮಾಡಿದ್ದೀನಿ, ನೀವು ಪರಿಹಾರ ಕೊಟ್ಟಿಲ್ಲ ಅದಕ್ಕೆ ನಾನು ಹೇಳಿದ್ದೀನಿ ಸರ್ ಅಷ್ಟೇ.

ಕಾರ್ಯದರ್ಶಿ: ಏನು ಪರಿಹಾರ ಕೊಡಬೇಕು ನಾನು (ಕೋಪದಿಂದ ಹೇಳಿದರು)

ಆಪಾದಿತ ನೌಕರ ಸಮೀರ್; ಅಲ್ಲಾ ಸರ್ ನಾನು, ಎರಡು ಕಂಪ್ಲೇಟ್ ಮಾಡಿದ್ದೀನಲ್ಲ ಸರ್ ನಾನು, ನೀವು ಅಡ್ರೆಸ್ಸೇ ಮಾಡಿಲ್ಲ?

ಕಾರ್ಯದರ್ಶಿ; ಏನೋ ಎರಡು ಕಂಪ್ಲೇಟ್?

ಅಪಾದಿತ ನೌಕರ ಸಮೀರ್; ಅಲ್ಲ ಸರ್..

ಕಾರ್ಯದರ್ಶಿ; one you have question my authority?

 

 

ಆಪಾದಿತ ನೌಕರ ಸಮೀರ್; Authority ಅಂತ ಅಲ್ಲಾ ಸರ್, ನಾನು question ಮಾಡಿರುವುದು

ಕಾರ್ಯದರ್ಶಿ; ನಿಮಗೆ ಕೊಡಲ್ಲ. you cannot sit in the interview board

ಆಪಾದಿತ ನೌಕರ ಸಮೀರ್;  ಅಲ್ಲ ಸರ್, interview board ನಾನು ಅದು  ಹೇಳ್ತಿಲ್ಲ, ನಾನು.

ಕಾರ್ಯದರ್ಶಿ; ಮತ್ತೆ?

ಆಪಾದಿತ ನೌಕರ ಸಮೀರ್; ಅಕೌಂಟ್ಸ್‌ ಮೇಲೆ  ನಾನು ಕಂಪ್ಲೇಟ್‌ ಹೇಳಿದಾಗ ನೀವು ಅಡ್ರೆಸ್ಸೇ ಮಾಡಿಲ್ಲ ನೀವು?

ಕಾರ್ಯದರ್ಶಿ; it’s ok i was addressing in that meeting. but why do you yell at the people?

ಆಪಾದಿತ ನೌಕರ ಸಮೀರ್;  ಸರ್ ನಾನು ಹೇಳಿದಂತೆ ನನ್ನ  Quesitions ನಾನು ಕೇಳಿದ್ದೇನೆ,  ನೀವು ಅಡ್ರೆಸ್ಸೇ ಮಾಡಿಲ್ಲ, even ನನ್ನ ಸ್ಯಾಲರಿ ಸ್ಲಿಪ್ ಬಗ್ಗೆ ನೀವು ಏನು ಹೇಳಲಿಲ್ಲ?

 

 

ಕಾರ್ಯದರ್ಶಿ; ಸ್ಯಾಲರಿ ಸ್ಲಿಪ್ ನಾನು ಅಡ್ರೆಸ್ ಮಾಡಿದ್ದೀನಿ, ಹೇಳಿದ್ದೀನಲ್ಲ ನಾನು

ಆಪಾದಿತ ನೌಕರ ಸಮೀರ್’; ನಮಗೆ ಕೊಟ್ಟಿಲ್ಲ, ಮತ್ತೆ ಅವರು ಹೊಸದಾಗಿ ಇ-ಮೇಲ್ ಕಳಿಸಿದ್ದಾರೆ, ನೀವು ನೋಡಿಕೊಳ್ಳಿ, ಎಲ್ಲರಿಗೂ ಕಳಿಸಿದ್ದಾರೆ. ಬಂದು ಕಲೆಕ್ಟ್‌ ಮಾಡಿಕೊಳ್ಳಿ, ಆ-ತರ ಇ-ತರ ಅಂತ ಏನೋ ಕಳಿಸಿದ್ದಾರೆ.

ಕಾರ್ಯದರ್ಶಿ; ನನಗೆ ಗೊತ್ತಿರಲ್ಲ. unless somebody tells, i don’t know. but you don’t have authority to take like that when i am chairing the meeting..

ಆಪಾದಿತ ನೌಕರ ಸಮೀರ್; ಅಲ್ಲ ಸರ್, ನಾನು ಅಥಾರಿಟಿ ಬಗ್ಗೆ ನಾನು ಹೇಳ್ತಿಲ್ಲ

ಕಾರ್ಯದರ್ಶಿ: when i am chairing please shut up first, when i am talking you talking you don’t speak, just learn that first

 

 

ಆಪಾದಿತ ನೌಕರ; ಹೇಳಿ ಸರ್ ಹೇಳಿ

ಕಾರ್ಯದರ್ಶಿ: when i am chairing the meeting, when i am bring up the points, you can rise the object but you cannot yell at hte people like that, you cannnot call names, ಎಷ್ಟು ಸಲ ಹೇಳಿದ್ದೀರಾ? ನೀವು ಮತ್ತು ನಿಮ್ಮ colleague.

ಆಪಾದಿತ ನೌಕರ ಸಮೀರ್; ಅವರು ನಮಗೆ ಬೇರೆ ತರಹ ಮಾಡಿದ್ದಾರೆ ಸರ್, ಸರ್ ಇನ್ನೊಂದು ಹೇಳ್ತೀನಿ ಸರ್ ನೀವು ಕೇಳ್ತಾ ಇಲ್ಲ ನಮ್ಮ ವಿಚಾರನಾ, ನಾನು ಹೇಳ್ತಿರೋದು.

ಕಾರ್ಯದರ್ಶಿ; ನಾನು ಅಡ್ರೆಸ್‌ ಮಾಡ್ತೀನಿ ಅಂತ ಹೇಳ್ತಾ ಇದ್ದೀನಿ ಅಲ್ಲಾ

ಆಪಾದಿತ ನೌಕರ ಸಮೀರ್; ಅಲ್ಲ ಸರ್ , ಕಂಪ್ಲೇಟ್ ಮಾಢಿ ಅಷ್ಟು ದಿನ ಆಯ್ತು

ಕಾರ್ಯದರ್ಶಿ: ok do, whatever you want?

ಆಪಾದಿತ ನೌಕರ ಸಮೀರ್; ಅಲ್ಲ ನೀವು ಅಡ್ರೆಸ್ ಮಾಡಕ್ಕೆ ನೀವು ರೆಡಿ ಇಲ್ವಲ್ಲ ಸರ್, ನಾನು ಹೇಳ್ತಾ ಇರೋದು.

ಕಾರ್ಯದರ್ಶಿ: ನಾನು ಅಡ್ರೆಸ್ ಮಾಡ್ತೀನಿ ಅಂತ ಹೇಳ್ತೀನಿಲ್ಲ.

ಆಪಾದಿತ ನೌಕರ ಸಮೀರ್; ಅಲ್ಲ ಸರ್ i am sorry ನನ್ಗೆ, ನಮ್ ಟೆಕ್ನಿಕಲ್ ಪ್ರಾಜೆಕ್ಟ್‌ ಇಂಜಿನಿಯರ್ಸ್ ಬಗ್ಗೆ ನೀವು ಒಳ್ಳೆಯ ಅಭಿಪ್ರಾಯ ಇಟ್ಟಿಲ್ಲ. ನೀವು ಯಾರೂನು?

 

 

ಕಾರ್ಯದರ್ಶಿ; ಬೇಕಾಗಿಲ್ಲ ನನಗೆ, ನಿಮ್ಮ ಅಭಿಪ್ರಾಯ ತಗೊಂಡು ನಾನೇನು ಮಾಡಂಗಿಲ್ಲ ಅರ್ಥ ಆಯ್ತಾ? please get out, get out of this place? get out, get out.

ಆಪಾದಿತ ನೌಕರ ಸಮೀರ್; ಅಲ್ಲ ಸರ್

ಕಾರ್ಯದರ್ಶಿ: ಕರ್ಕೋಂಡ್ ಹೋಗ್ರಿ ಅವ್ರನ್ನು get out

ಆಪಾದಿತ ನೌಕರ ಸಮೀರ್; ಸರ್ ನೀವು unncecessary ಹೇಳ್ತಾ ಇದ್ದೀರಾ, ಮತ್ತೆ ನಾವು ಯಾರ ಹತ್ತಿರ ಕೇಳಬೇಕು ಸರ್?

ಕಾರ್ಯದರ್ಶಿ: you cannot talk like that, you go know, i will never talk to you, you go now.

ಆಪಾದಿತ ನೌಕರ ಸಮೀರ್; ಈ ತರಹ ಹೇಳಿದರೆ ನಾವು ಎಲ್ಲಿ ಕೇಳಬೇಕು? ನಾವು ಸೆಕ್ರೆಟರಿಗೆ ಕೇಳದೇ ಮತ್ತೆ ಯಾರನ್ನು ಕೇಳಕ್ಕೆ ಆಗುತ್ತೆ ಸರ್? ನಿಮ್ ಕೇಳಿದರೆ (ಡಾ ಯು ಟಿ ವಿಜಯ್) ಸೆಕ್ರೆಟರಿಗೆ ಕೇಳಿ ಅಂತೀರಾ, ಅವರಿಗೆ ಕೇಳಿದರೆ ಗೆಟ್‌ ಔಟ್‌, ಇಲ್ಲಿ ಕೇಳಬೇಡಿ ಅಂತ ಹೇಳ್ತಾರೆ, ಮತ್ತೆ ನಾವು ಯಾರ  ಹತ್ತಿರ ಕೇಳಕ್ಕೆ ಆಗುತ್ತೆ ಸರ್ ನಾವು? ನೀವೇ ಹೇಳಿ ಮತ್ತೆ?

ಕಾರ್ಯದರ್ಶಿ: ಸ್ವಲ್ಪ ಬಾಯಿ ಮುಚ್ಚುತ್ತೀರಾ ? can i answer question

ಆಪಾದಿತ ನೌಕರ ಸಮೀರ್; ಹಾ ಸರ್ ಹೇಳಿ ಪರವಾಗಿಲ್ಲ

ಕಾರ್ಯದರ್ಶಿ: when you raising the subject matter, you have no authority to talk out of turn, that is my problem.

ಆಪಾದಿತ ನೌಕರ: ಸರ್ ಔಟ್‌ ಆಫ್‌ ಟರ್ನ್‌ ಏನು ಮಾತಾಡಿಲ್ಲ, ನಾನು ಏನು questions ಕೇಳಬೇಕಾಗಿತ್ತು ಅದನ್ನೇ ಕೇಳಿರುವುದು

ಕಾರ್ಯದರ್ಶಿ: out of turn, you have to take permission of the chair and talk, if you cannot do that, please get out, agian you are doing same thing, plsease go

ಹೀಗೆ ಆಪಾದಿತ ನೌಕರ ಡಾ ಸೈಯದ್ ಸಮೀರ್‍‌ ಅವರು ವಿಚಾರಣಾಧಿಕಾರಿಗೆ ಒದಗಿಸಿರುವ ಸಂಭಾಷಣೆಯ ತುಣುಕುಗಳು ಮಂಡಳಿಯ ಕಾರ್ಯದರ್ಶಿಯ ನಿರಂಕುಶತೆಯನ್ನು ಪ್ರತಿಬಿಂಬಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

 

ಅಲ್ಲದೇ ವಿಶ್ವ ಪ್ರಸನ್ನ ಅವರ ವೇತನ ಬಿಡುಗಡೆಗೆ ಸಂಬಂಧಿಸಿದ ಪ್ರಕರಣದಲ್ಲಿ  ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ ಯು ಟಿ ವಿಜಯ್ ಅವರನ್ನು ವಿಚಾರಣೆ ಪ್ರಾಧಿಕಾರದ ಮುಂದೆ ವಿಚಾರಣೆಗೆ ಹಾಜರುಪಡಿಸಿರಲಿಲ್ಲ. ಈ ಅಂಶವನ್ನು ಗಣನೆಗೆ ತೆಗೆದುಕೊಂಡರೇ ಒಂದೊಮ್ಮೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲಿ ಶಿಸ್ತು ಪ್ರಾಧಿಕಾರದ ಪ್ರಕರಣಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ವಿಚಾರಣೆಗೆ ಹಾಜರುಪಡಿಸಿರುವುದಿಲ್ಲ ಎಂದು ಆಪಾದಿತ ಅಧಿಕಾರಿ ಡಾ ಸೈಯದ್‌ ಸಮೀರ್‍‌ ವಿಚಾರಣಾಧಿಕಾರಿ ಮುಂದೆ ವಾದವನ್ನು ಮುಂದೊಡ್ಡಿರುವುದು ತಿಳಿದು ಬಂದಿದೆ.

‘ಈ ಸಂಸ್ಥೆಯಲ್ಲಿ  ಕಾನೂನುಬಾಹಿರ, ನಿಯಮಬಾಹಿರ ಕ್ರಮಗಳನ್ನು  ನಡೆಸಲಾಗುತ್ತಿದೆ. ಸರ್ಕಾರದ ಹಣವನ್ನು ಮನಸೋ ಇಚ್ಛೆ ವ್ಯಯ ಮಾಡಲಾಗುತ್ತಿದೆ. ಈ ಕ್ರಮಗಳ ಬಗ್ಗೆ ದಾಖಲೆಗಳ ಪ್ರಕಾರ ಆಕ್ಷೇಪಣೆ ಎತ್ತುವ ಮೂಲಕ ವಿಷುವಲ್‌ ಬ್ಲೋವರ್‍‌ ಆಗಿರುವ ಕಾರಣ ಅವರಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮತ್ತು ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ದೃಷ್ಟಿಯಿಂದ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗಿದೆ,’ ಎಂದು ಆಪಾದಿತ ಅಧಿಕಾರಿ ಡಾ ಸೈಯದ್‌ ಸಮೀರ್‍‌ ಅವರು ವಾದ ಮಂಡಿಸಿರುವುದು ಗೊತ್ತಾಗಿದೆ.

‘ವಿಚಾರಣಾಧಿಕಾರಿ  ರಾಧಾಕೃಷ್ಣ ಹೊಳ್ಳ ಅವರ ನೇತೃತ್ವದ ಸಮಿತಿಯು ವಿಚಾರಣೆ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಈ ವಿಚಾರಣೆ ಪ್ರಾಧಿಕಾರವು ಮುಕ್ತಾಯಗೊಳಿಸಿರುವ ವರದಿಯನ್ನು ಪ್ರಶ್ನಿಸಲಾಗಿದೆ.  ಅಲ್ಲದೇ  ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಿಗೆ  ಮೇಲ್ಮನವಿ ಸಲ್ಲಿಸಲಾಗಿದೆ.  ಈ ಮೇಲ್ಮನವಿ ಆಧರಿಸಿ ವಿಚಾರಣೆಗೆ ದಿನಾಂಕ ನಿರ್ಧರಿಸಲು ಪ್ರತಿ ತಿಂಗಳೂ ಸಹ  ಇ-ಮೇಲ್ ಮೂಲಕ   ಮನವಿ ಮಾಡಲಾಗಿತ್ತು.  ಆದರೆ ಮಂಡಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ವಿಚಾರಣೆ ನಡೆಸದೇ  105 ದಿನಗಳ ನಂತರ ಮೇಲ್ಮನವಿಯನ್ನು ತಿರಸ್ಕರಿಸಿದ್ದರು. ಇದು ನೈಸರ್ಗಿಕ ನ್ಯಾಯದ ವಿರುದ್ಧವಾಗಿದೆ ಎಂದು ಪುನಃ ಇ-ಮೈಲ್‌ನಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ವಿವರಿಸಲಾಗಿದೆ,’ ಎಂದು ಸೈಯದ್ ಸಮೀರ್‍‌ ಅವರು ದಿ ಫೈಲ್‌ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

‘ಮಂಡಳಿಗೆ ನೇಮಕವಾದ ದಿನದಿಂದಲೂ ತಮಗೆ ಅನ್ಯಾಯ ಮತ್ತು ಧರ್ಮ, ಜಾತಿ ಆಧರಿತವಾಗಿ ತಾರತಮ್ಯ ಮಾಡಲಾಗುತ್ತಿದೆ. ಕಾರ್ಯ ಹಂಚಿಕೆಯಲ್ಲಿಯೂ ತಾರತಮ್ಯ  ಆಗುತ್ತಿದೆ,’ ಎಂದು ಡಾ ಸೈಯದ್‌ ಸಮೀರ್‍‌ ಅವರು 2022ರಲ್ಲೇ ಮಂಡಳಿ ಕಾರ್ಯದರ್ಶಿ ಗಮನಕ್ಕೆ ಲಿಖಿತವಾಗಿ ತಂದಿದ್ದರು.  ಡಾ ಸೈಯದ್‌ ಸಮೀರ್‍‌ ಅವರು ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದರು. ಆದರೆ ಈ ದೂರನ್ನಾಧರಿಸಿ ಮಂಡಳಿಯ ಕಾರ್ಯದರ್ಶಿಯು  ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸೈಯದ್‌ ಸಮೀರ್‍‌ ಅವರು ಮಾನಸಿಕ ಮತ್ತು ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಈ ಬಗ್ಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಅಧ್ಯಕ್ಷರಿಗೆ ಈ-ಮೈಲ್‌ ಮೂಲಕ ದೂರನ್ನು ಸಹ ಸಲ್ಲಿಸಿದ್ದರು.

ಆದರೂ ಇವರ ದೂರನ್ನು ಮಂಡಳಿಯು ಆಲಿಸದ ಕಾರಣ ಡಾ ಸೈಯದ್‌ ಸಮೀರ್‍‌ ಅವರು  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೂ ತಮಗಾಗಿರುವ ಅನ್ಯಾಯ ಮತ್ತು ನೋವನ್ನು 2025ರ ಏಪ್ರಿಲ್‌ 24ರಂದು ಲಿಖಿತವಾಗಿ  ದೂರನ್ನು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿದ್ದ ಆಯೋಗವು ಈ ಸಂಬಂಧ ಮಂಡಳಿಯ ಕಾರ್ಯದರ್ಶಿಗೆ ನೋಟೀಸ್‌ ಜಾರಿಗೊಳಿಸಿತ್ತು. ಈ ನೋಟೀಸ್‌ಗೆ ಮಂಡಳಿಯ ಕಾರ್ಯದರ್ಶಿಯು ಪ್ರತಿಕ್ರಿಯೆ ನೀಡಿದ್ದರು. ಈ ಪ್ರತಿಕ್ರಿಯೆಯನ್ನೂ  ಪರಿಶೀಲಿಸಿದ್ದ ಆಯೋಗವು ವಿಚಾರಣೆಗೆ ದಿನಾಂಕ ನಿಗದಿಪಡಿಸಿತ್ತು. ವಾದಿ ಮತ್ತು ಪ್ರತಿವಾದಿಗೆ ನೋಟೀಸ್‌ ಜಾರಿಗೊಳಿಸಿತ್ತು.

ಮೊದಲನೇ ವಿಚಾರಣೆಗೆ ಗೈರಾಗಿದ್ದ  ಮಂಡಳಿಯ ಕಾರ್ಯದರ್ಶಿಯು ಎರಡನೇ ದಿನಾಂಕವನ್ನು ನೀಡಬೇಕು ಎಂದು ಆಯೋಗವನ್ನು ಕೋರಿದ್ದರು. ಎರಡನೇ ದಿನಾಂಕ ನಿಗದಿಯಾಗಿತ್ತು. ಆದರೆ ಎರಡನೇ ವಿಚಾರಣೆ ದಿನಾಂಕಕ್ಕೂ ಮಂಡಳಿಯ ಕಾರ್ಯದರ್ಶಿಯು ಗೈರಾಗಿದ್ದರು. ಆದರೆ ಗೈರಾಗಿದ್ದಕ್ಕೆ ಕಾರಣಗಳನ್ನು ಲಿಖಿತವಾಗಿ ನೀಡಿರಲಿಲ್ಲ. ಹೀಗಾಗಿ ಆಯೋಗವು ಮಂಡಳಿಯ ಕಾರ್ಯದರ್ಶಿ ಅಶೋಕ್ ಎಂ ರಾಯಚೂರ್ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಸೂಚಿಸಿತ್ತು.

ವಿಚಾರಣೆ ದಿನಾಂಕ ನಿಗದಿ ಮತ್ತು ಸಮನ್ಸ್‌ ಜಾರಿಗೊಳಿಸುವ ಪ್ರಕ್ರಿಯೆಯು ಜಾರಿಯಲ್ಲಿದ್ದ ಅವಧಿಯಲ್ಲಿಯೇ ಮಂಡಳಿಯ ಕಾರ್ಯದರ್ಶಿಯು ಹೈಕೋರ್ಟ್‌ ಮೊರೆ ಹೋದರು. ಹೈಕೋರ್ಟ್  ಆಯೋಗದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವಿಗೆ ಆಯೋಗ ಮತ್ತು  ಡಾ ಸೈಯದ್‌ ಸಮೀರ್‍‌ ಅವರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ದಿನಾಂಕ ಇನ್ನೂ  ನಿಗದಿಯಾಗಿಲ್ಲ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಡಾ  ಸೈಯದ್ ಸಮೀರ್ ಅವರು  ದಿ ಫೈಲ್‌ ಪ್ರತಿನಿಧಿಯೊಂದಿಗೆ ದಾಖಲಾತಿಗಳ ಸಮೇತ  ಮಾಹಿತಿ ಹಂಚಿಕೊಂಡರು.  ಈ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಈ ವರದಿಯನ್ನು ಪ್ರಕಟಿಸಲಾಗಿದೆ.

 

‘ಸಾಬ್ರು ನನ್ ಮಕ್ಳು ಸರಿ ಇಲ್ಲ, ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ, ಸೆಲೆಕ್ಟ್‌ ಆಗಿರೋದು 2 ಬಿ ರಿಸರ್ವೇ‍ಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’; ಧಾರ್ಮಿಕ, ಜಾತಿ ಆಧಾರಿತ ತಾರತಮ್ಯ ಆರೋಪ

 

ಮಂಡಳಿಯ ಮತ್ತೊಬ್ಬ ಅಧಿಕಾರಿ ಡಾ ಸೈಯದ್ ಸಮೀರ್ ಅವರಿಗೆ ಧಾರ್ಮಿಕ ಹಾಗೂ ಜಾತಿ ಆಧಾರಿತವಾಗಿ ನಿಂದನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ದಿ ಫೈಲ್ 2026ರ ಮೇ 20ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; 'ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ...

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಈಗಲ್‌ಟನ್‌ ರೆಸಾರ್ಟ್‌ನಿಂದ ಸರ್ಕಾರಿ ಜಮೀನು ಒತ್ತುವರಿ; 29 ವರ್ಷಗಳಾದರೂ ಪ್ರಕರಣ ಇತ್ಯರ್ಥವಾಗಿಲ್ಲ, 982 ಕೋಟಿಯೂ ವಸೂಲಾಗಿಲ್ಲ

ಬೆಂಗಳೂರು; ರಾಮನಗರ ತಾಲೂಕು ಬಿಡದಿ ಹೋಬಳಿ ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ, ಬಾನಂದೂರು ಗ್ರಾಮದ...

Related Articles

Popular Categories

error: Content is protected !!