Wednesday | August 19, 2026 |

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ ಸಾಲವನ್ನು ಪಡೆದುಕೊಂಡಿದೆ. ಇದೇ ಅವಧಿಯಲ್ಲಿ ಎಸ್ಕಾಂಗಳಿಗೆ ಸರ್ಕಾರಿ ಇಲಾಖೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳಿಂದ ಒಟ್ಟಾರೆ 12,463.92 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ. ಅಲ್ಲದೇ ಎಸ್ಕಾಂಗಳೂ ಇದೇ ಅವಧಿಯಲ್ಲಿ ಒಟ್ಟಾರೆ 4,516 ಕೋಟಿ ರುಪಾಯಿನಷ್ಟು ಆದಾಯ ಕೊರತೆ ಹೊಂದಿದೆ.

ವಿಧಾನ ಮಂಡಲ ಅಧಿವೇಶನಕ್ಕೆ ಇಂಧನ ಸಚಿವ ಕೆ ಜೆ ಜಾರ್ಜ್‌ ಅವರು ಒದಗಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. ವಿದ್ಯುತ್ ಖರೀದಿ ಕುರಿತು ಈಚೆಗಷ್ಟೇ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅಗತ್ಯ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಖರೀದಿ ಮಾಡುತ್ತಿರುವುದರಿಂದಾಗಿಯೇ ವಿದ್ಯುತ್ ಸರಬರಾಜು ಕಂಪನಿಗಳು ಸಾಲದ ಕೂಪಕ್ಕೆ ಬಿದ್ದಿವೆ ಎಂದು ತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇಂಧನ ಸಚಿವ ಕೆ ಜೆ ಜಾರ್ಜ್‌ ಅವರು ರಾಜ್ಯದ ಎಸ್ಕಾಂಗಳ ಹಣಕಾಸಿನ ಸ್ಥಿತಿಗತಿಯನ್ನು ತೆರೆದಿಟ್ಟಿದ್ದಾರೆ.

ಸಚಿವ ಕೆ ಜೆ ಜಾರ್ಜ್‌ ಅವರು ನೀಡಿರುವ ಉತ್ತರದ ಪ್ರಕಾರ ವಿದ್ಯುತ್ ಸರಬರಾಜು ಕಂಪನಿಗಳ ಜನವರಿ 2026ರ ಅಂತ್ಯದವರೆಗೆ ಒಟ್ಟು ದೀರ್ಘಾವಧಿ ಸಾಲವನ್ನಾಗಿ 42,750 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ.

 

 

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಫೆಬ್ರುವರಿ 2026ರ ಅಂತ್ಯಕ್ಕೆ 17,556 ಕೋಟಿ ರು ದೀರ್ಘಾವಧಿ ಸಾಲವನ್ನು ಹೊಂದಿದೆ. 2026ರ ಮಾರ್ಚ್‌ 2 ರ ಅಂತ್ಯಕ್ಕೆ ಕೆಪಿಸಿಎಲ್‌ ಗೆ ಎಸ್ಕಾಂಗಳು (ಲೇಟ್ ಪೇಮೆಂಟ್ ಸರ್ಚಾರ್ಜ್ (ಎಲ್‌ಪಿಎಸ್) 5,277 ಕೋಟಿ ರು ಸೇರಿ 8,755 ಕೋಟಿ ರು ಪಾವತಿಸಬೇಕಿದೆ. ಎಸ್ಕಾಂಗಳಿಂದ ಪಾವತಿಸಬೇಕಾದ ನಿವ್ವಳ ಬಾಕಿ (ಎಲ್‌ಪಿಎಸ್) ಹೊರತುಪಡಿಸಿ 3,478 ಕೋಟಿ ರು ಪಾವತಿಸಬೇಕಿದೆ ಎಂಬುದು ಉತ್ತರದಿಂದ ತಿಳಿದು ಬಂದಿದೆ.

ಕರ್ನಾಟಕ ವಿದ್ಯುತ್ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಖರೀದಿ ಮೊತ್ತವನ್ನು ರಾಮರಾಜ್ ಅಂಡ್ ಕಂಪನಿಯು ಲೆಕ್ಕವನ್ನು ಸಮನ್ವಯಗೊಳಿಸಿದೆ. ಇದರ ಪ್ರಕಾರ ನಿವ್ವಳ ಬಾಕಿ 3,478 ಕೋಟಿ ರು ಪಾವತಿಸಬೇಕು. ವಿದ್ಯುತ್ ಖರೀದಿ ಮೊತ್ತವು ಅನಿಯಂತ್ರಿತ ವೆಚ್ಚವಾಗಿದೆ. ಪ್ರತಿ ವರ್ಷ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿರುವಂತೆ ವಿದ್ಯುತ್ ಖರೀದಿ ಮೊತ್ತವು ಹೆಚ್ಚಾಗುತ್ತದೆ ಎಂದು ವಿವರಿಸಿದೆ.
ಅದೇ ರೀತಿ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿನ ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಂದ ಒಟ್ಟಾರೆ 12,463.92 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ ಎಂದು ಅಂಕಿ ಅಂಶಗಳನ್ನು ಒದಗಿಸಿದೆ.

 

 

ನಗರಾಭಿವೃದ್ಧಿ ಇಲಾಖೆಯ ಕುಡಿಯುವ ನೀರು ಮತ್ತು ಬೀದಿ ಸ್ಥಾವರಗಳಿಂದ ಬೆಸ್ಕಾಂಗೆ 3,404.7 ಕೋಟಿ, ಸೆಸ್ಕ್‌ ಗೆ 64.43 ಕೋಟಿ, ಮೆಸ್ಕಾಂ ಗೆ 23.22 ಕೋಟಿ, ಹೆಸ್ಕಾಂಗೆ 194.45 ಕೋಟಿ, ಜೆಸ್ಕಾಂಗೆ 236.68 ಕೋಟಿ ಸೇರಿ ಒಟ್ಟಾರೆ 3,923.48 ಕೋಟಿ ರು ಬರಬೇಕಿದೆ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕುಡಿಯುವ ನೀರು ಮತ್ತು ಬೀದಿ ಸ್ಥಾವರಗಳಿಂದ ಬೆಸ್ಕಾಂಗೆ 2,364.43 ಕೋಟಿ, ಸೆಸ್ಕ್‌ಗೆ 563.32 ಕೋಟಿ, ಮೆಸ್ಕಾಂಗೆ 237.92 ಕೋಟಿ, ಹೆಸ್ಕಾಂಗೆ 797.22 ಕೋಟಿ, ಜೆಸ್ಕಾಂಗೆ 1,663.59 ಕೋಟಿ ಸೇರಿ ಒಟ್ಟಾರೆ 5,626.48 ಕೋಟಿ ರು ಬಾಕಿ ಬರಬೇಕಿದೆ ಎಂದು ವಿವರಿಸಿದೆ.

ಇತರೆ ಸರ್ಕಾರಿ ಇಲಾಖೆಗಳಿಂದ ಬೆಸ್ಕಾಂಗೆ 442.01 ಕೋಟಿ, ಸೆಸ್ಕ್‌ಗೆ 605.8 ಕೋಟಿ, ಮೆಸ್ಕಾಂಗೆ 506.74 ಕೋಟಿ, ಹೆಸ್ಕಾಂಗೆ 1,057.95 ಕೋಟಿ, ಜೆಸ್ಕಾಂಗೆ 301.44 ಕೋಟಿ ಸೇರಿ ಒಟ್ಟಾರೆಲ 2,913.94 ಕೋಟಿ ರುಪಾಯಿ ಬಾಕಿ ಬರಬೇಕಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಒಟ್ಟಾರೆ ಬೆಸ್ಕಾಂಗೆ 6,211.14 ಕೋಟಿ, ಸೆಸ್ಕ್ ಗೆ 1,233.55 ಕೋಟಿ, ಮೆಸ್ಕಾಂಗೆ 767.88 ಕೋಟಿ, ಹೆಸ್ಕಾಂಗೆ 2,049.62 ಕೋಟಿ, ಜೆಸ್ಕಾಂಗೆ 2,201.73 ಕೋಟಿ ಸೇರಿ ಒಟ್ಟಾರೆ 12,463.92 ಕೋಟಿ ರು ಬಾಕಿ ಬರಬೇಕಿದೆ.

ಈ ಮಧ್ಯೆ ಐದು ವಿದ್ಯುತ್ ಸರಬರಾಜು ಕಂಪನಿಗಳು ಏಪ್ರಿಲ್ 1ರಿಂದ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2025ರ ಮಾರ್ಚ್‌ 27ರಂದು ಆಥಿfಕ ವರ್ಷ, 2025-26, 2026-27 ಹಾಗೂ 2027-28ಕ್ಕೆ ಸಂಬಂಧಿಸಿದಂತೆ ಬಹು ವಾ‍ರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿದೆ.

4,516 ಕೋಟಿ ರು ಆದಾಯ ಕೊರತೆ

ಇದರ ಪ್ರಕಾರ ಎಸ್ಕಾಂಗಳಿಗೆ ಒಟ್ಟಾರೆ 4,516 ಕೋಟಿ ರು ಆದಾಯ ಕೊರತೆಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ 2,802.80 ಕೋಟಿ, ಚಾಮರಾಜನಗರ ವಿದ್ಯುತ್ ಸರಬರಾಜು ಕಂಪನಿಗೆ 528.12 ಕೋಟಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ 83.11 ಕೋಟಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 604.49 ಕೋಟಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ 490.62 ಕೋಟಿ, ಹುಕ್ಕೇರಿ ವಿದ್ಯುತ್ ಸರಬರಾಜು ಕಂಪನಿಗೆ 6.84 ಕೋಟಿ ಸೇರಿ ಒಟ್ಟಾರೆ 4,516 ಕೋಟಿ ರುಪಾಯಿನಷ್ಟು ಆದಾಯ ಕೊರತೆ ಹೊಂದಿದೆ.

 

 

ಬೆಸ್ಕಾಂಗೆ ಆದಾಯ ಕೊರತೆಗೆ ಕಾರಣಗಳೇನು?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024-25ನೇ ಸಾಲಿಗೆ ಪ್ರತಿ ಯೂನಿಟ್‌ಗೆ 9.54 ರು. ಸರಾಸರಿ ದರ ನಿಗದಿಪಡಿಸಿದೆ. ಬೆಸ್ಕಾಂ, ಗ್ರಾಹಕರಿಂದ ಸರಾಸರಿ 8.59 ರು ನಂತೆ ಜಕಾತಿ ದರವನ್ನು ಪಡೆದಿದೆ. ಇದರಿಂದಾಗಿ ಒಟ್ಟಾರೆ 1,678 ಕೋಟಿ ರು ಕಡಿಮೆ ಆದಾಯ ಸಂಗ್ರಹವಾಗಿದೆ. ಆಯೋಗವು 27,190 ಕೋಟಿ ರು ಗಳನ್ನು ವಿದ್ಯುತ್ ಖರೀದಿ ವೆಚ್ಚವನ್ನು ನಿಗದಿಪಡಿಸಿದೆ. ಬೆಸ್ಕಾಂ 27,895 ಕೋಟಿ ರು.ಗಳ ವಿದ್ಯುತ್ ಖರೀದಿ ಮಾಡಿದೆ. ಇದರಿಂದಾಗಿ 706. ಕೋಟಿಗಳಷ್ಟು ವಿದ್ಯುತ್ ಖರೀದಿ ವೆಚ್ಚವು ಆಧಿಕವಾಗಿದೆ ಎಂದು ವಿವರಿಸಿದೆ.

ಅಲ್ಲದೇ ಆಯೋಗವು 3,352 ಕೋಟಿ ರು.ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ನಿಗದಿಪಡಿಸಿದೆ. ಬೆಸ್ಕಾಂ 3,390 ಕೋಟಿ ರು. ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಮಾಡಿದೆ. ಇದರಿಂದಾಗಿ 38 ಕೋಟಿಗಳಷ್ಟು ಕಾರ್ಯಚರಣೆ ಮತ್ತು ನಿರ್ವಹಣೆ ವೆಚ್ಚವು ಅಧಿಕವಾಗಿರುವುದು ಉತ್ತರದಿಂದ ತಿಳಿದು ಬಂದಿದೆ.

ಆಯೋಗವು 1,780 ಕೋಟಿ ರು.ಗಳ ಬಡ್ಡಿ ಮತ್ತು ಹಣಕಾಸು ವೆಚ್ಚವನ್ನು ನಿಗದಿಪಡಿಸಿದೆ. ಬೆಸ್ಕಾಂ 1,837 ಕೋಟಿ ರು ಮತ್ತು ಬಡ್ಡಿ ಮತ್ತು ಹಣಕಾಸು ವೆಚ್ಚ ಮಾಡಿದೆ. ಇದರಿಂದಾಗಿ 57.48ಗಳಷ್ಟು ಬಡ್ಡಿ ಮತ್ತು ಹಣಕಾಸು ವೆಚ್ಚ ಅಧಿಕವಾಗಿದೆ. ಆಯೋಗವು 231 ಕೋಟಿ ರು ಇತರೆ ಆದಾಯ ನಿಗದಿಪಡಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು 139 ಕೋಟಿ ರು.ಗಳ ಇತರೆ ಆದಾಯವನ್ನು ವಸೂಲಿ ಮಾಡಿದೆ.

ಇದರಿಂದಾಗಿ 91.47 ಕೋಟಿ ರುಷ್ಟು ಇತರೆ ಆದಾಯ ಕಡಿಮೆಯಾಗಿದೆ. ಆಯೋಗವು ಶೇ. 9.50ರಷ್ಟು ವಿದ್ಯುತ್ ಸರಬರಾಜು ವೆಚ್ಚವನ್ನು ನಿಗದಿಪಡಿಸಿದೆ. ಆದರೆ ಬೆಸ್ಕಾಂ ಶೇ. 8.51ರಷ್ಟು ವಿದ್ಯುತ್ ಸರಬರಾಜು ವೆಚ್ಚ ಮಾಡಿದೆ. ಇದರಿಂದಾಗಿ ಬೆಸ್ಕಾಂ, ನಷ್ಟ ಕಡಿತದಿಂದ ಉಳಿತಾಯವಾಗಿರುವ 110.05 ಕೋಟಿ ರು. ಕ್ಲೈಮ್ ಮಾಡಿದೆ.

 

 

ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು 2023ರ ಆಗಸ್ಟ್‌ನಿಂದ ಜಾರಿಗೊಳಿಸಿದೆ. ಮಾರ್ಚ್‌ 2026ರವರೆಗೆ ಈ ಯೋಜನೆಗೆ 25,076 ಕೋಟಿ ರು.ಗಳನ್ನು ಭರಿಸಿದೆ. ಈ ಮೂಲಕ ಜನಸಾಮಾನ್ಯರ ಹೊರೆ ಕಡಿಮೆಯಾಗಿದೆ ಎಂದು ಸರ್ಕಾರವು ಸಮರ್ಥಿಸಿಕೊಂಡಿದೆ.

ವಿದ್ಯುತ್‌ ವಿತರಣಾ ಕಂಪನಿಗಳು ವಿದ್ಯುತ್ ಪೂರೈಕೆ ಮತ್ತು ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನಿಯಂತ್ರಕ ಚೌಕಟ್ಟಿನ ಅಂತರ್ಗತದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪರಿಣಾಮವಾಗಿ ಚಾಲ್ತಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಹಾಗೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ವೆಚ್ಚಕ್ಕಾಗಿ ಸಾಲ ಸಂಪನ್ಮೂಲಗಳ ಮೇಲೆ ಅವಲಂಬನೆ ಅನಿವಾರ್ಯವಾಗುತ್ತದೆ. ಈ ಆರ್ಥಿಕ ವ್ಯವಸ್ಥೆಯಿಂದ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಸಾಧ್ಯವಾಗಿಸುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!