Wednesday | September 16, 2026 |

ಭೂಸುಧಾರಣೆ ಕಾಯ್ದೆಯ ಮಾರಕ ತಿದ್ದುಪಡಿ ಹಿಂಪಡೆಯುವ ಪ್ರಸ್ತಾಪವಿಲ್ಲ; 79, ಎ, ಬಿ, ಸಿ ನಿರ್ಬಂಧ ತೆರವಿನ ನಂತರ 24 ಲಕ್ಷ ಎಕರೆ ಕೃಷಿ ಜಮೀನು ಮಾರಾಟ, ನುಡಿದಂತೆ ನಡೆಯುತ್ತಿಲ್ಲವೇಕೆ?

ಬೆಂಗಳೂರು; ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ , 79 ಬಿ ಮತ್ತು 79 ಸಿ ತೆರವುಗೊಳಿಸಿದ ನಂತರ ರಾಜ್ಯದಲ್ಲಿ 2026ರ ಸೆಪ್ಟಂಬರ್‍‌ 24ರ ಅಂತ್ಯಕ್ಕೆ ಒಟ್ಟಾರೆ 24.00 ಲಕ್ಷ ಎಕರೆಗೂ ಅಧಿಕ  ವಿಸ್ತೀರ್ಣದ ಕೃಷಿ ಜಮೀನು ಮಾರಾಟವಾಗಿದೆ. ಆದರೂ ಸಹ ಈ ತಿದ್ದುಪಡಿಗಳನ್ನು ಹಿಂಪಡೆಯುವ ಪ್ರಸ್ತಾವವು ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಸದನಕ್ಕೆ ನೀಡಿರುವ ಉತ್ತರವು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ, 79 ಬಿ ಮತ್ತು 79 ಸಿ ಕಲಂನ ನಿರ್ಬಂಧವನ್ನು  ಹಿಂದಿನ ಬಿಜೆಪಿ ಸರ್ಕಾರವು ತೆಗೆದಿತ್ತು. 2023ರ ವಿಧಾನಸಭೆ  ಚುನಾವಣೆ ಸಂದರ್ಭದಲ್ಲಿ ಈ ಕಾಯ್ದೆಗೆ ತಂದಿರುವ ಮಾರಕ ತಿದ್ದುಪಡಿಗಳನ್ನು ಹಿಂಪಡೆದಯು ರೈತರ ಹಿತ ಕಾಯಲಾಗುವುದು ಎಂದು ಕಾಂಗ್ರೆಸ್‌ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರು ನೀಡಿರುವ ಈ ಉತ್ತರವು, ತಮ್ಮದೇ ಕಾಂಗ್ರೆಸ್‌ ಪಕ್ಷದ  ಚುನಾವಣೆ ಪ್ರಣಾಳಿಕೆಯನ್ನು ಅಣಕಿಸುತ್ತಿದೆ.

ಈ ಕುರಿತು ಅಳಂದ ವಿಧಾನಸಭೆ ಕ್ಷೇತ್ರದ ಸದಸ್ಯ ಬಿ ಆರ್ ಪಾಟೀಲ್‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕಂದಾಯ ಸಚಿವರಿಗೆ 2026ರ ಆಗಸ್ಟ್‌ 24ರಂದು ಕೇಳಿದ್ದರು. ಇದಕ್ಕೆ  ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರು ‘ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ, 79 ಬಿ ಮತ್ತು 79 ಸಿ ಗಳನ್ನು ಮರು ಸೇರ್ಪಡೆ ಮಾಡುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ,’ ಎಂದು ತಡವಾಗಿ ಉತ್ತರ ನೀಡಿದ್ದಾರೆ.

ಅಲ್ಲದೇ ಈ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರ ಅಂದರೇ 2021ರಿಂದ 2026ರ ಆಗಸ್ಟ್‌ 24ರವರೆಗೆ ರಾಜ್ಯಾದಾದ್ಯಂತ ಮಾರಾಟವಾಗಿರುವ ಕೃಷಿ ಜಮೀನಿನ ವಿವರವನ್ನು ತಾಲೂಕುವಾರು ಪಟ್ಟಿಯನ್ನು ಒದಗಿಸಿದ್ದಾರೆ.

ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

79 ಎ, 79 ಬಿ ಮತ್ತು 79 ಸಿ ನಿರ್ಬಂಧಗಳನ್ನು ರದ್ದುಪಡಿಸಿದ ನಂತರ ರಾಜ್ಯದ ಸಣ್ಣ ಹಾಗೂ ಅಹಿಂದ ವರ್ಗದ ಎಷ್ಟು ರೈತರಿಂದ ಎಷ್ಟು ಎಕರೆ ಕೃಷಿ ಭೂಮಿ ಇತರರಿಗೆ ಮಾರಾಟವಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಅಲ್ಲದೇ ಈ ಭೂಮಿ ಖರೀದಿದಾರರಲ್ಲಿ ರೈತರು, ಇತರರು ಹಾಗೂ ಹೊರ ರಾಜ್ಯದವರ ಸಂಖ್ಯೆ, ಖರೀದಿಸಿದ ಭೂಮಿಯ ವಿಸ್ತೀರ್ಣ ಎಷ್ಟಿದೆ , ವರ್ಗವಾರು ವಿವರವನ್ನು ಕೋರಿದ್ದರು.

ಕಂದಾಯ ಇಲಾಖೆಯು ಒಟ್ಟು 22 ಪುಟಗಳಲ್ಲಿ ಉತ್ತರ ಒದಗಿಸಿದೆ. ಆದರೆ ಈ ಉತ್ತರದಲ್ಲಿ ಸಣ್ಣ, ಅತೀ ಸಣ್ಣ, ಅಹಿಂದ ವರ್ಗದ ರೈತರ ಸಂಖ್ಯೆಯನ್ನು ವರ್ಗವಾರು ಒದಗಿಸಿಲ್ಲ. ಬದಲಿಗೆ ತಾಲೂಕುವಾರು ಕೃಷಿ ಜಮೀನು ಮಾರಾಟವಾಗಿರುವ ಅಂಕಿ ಸಂಖ್ಯೆಗಳನ್ನಷ್ಟೇ ಒದಗಿಸಿರುವುದು ಉತ್ತರದಿಂದ ಕಂಡು ಬಂದಿದೆ.

 

 

ಈ ಉತ್ತರದ ಪ್ರಕಾರ 2021ರಿಂದ 2026ರವರೆಗೆ ಒಟ್ಟಾರೆ 15,31,497 ಮಾರಾಟ ವಹಿವಾಟುಗಳಾಗಿವೆ. 24,11,864 ಮಂದಿ 24.00 ಲಕ್ಷ  ಎಕರೆ ವಿಸ್ತೀರ್ಣದ  ಕೃಷಿ ಜಮೀನನ್ನು ಮಾರಾಟ ಮಾಡಿದ್ದಾರೆ.  ಮತ್ತು ಈ ಜಮೀನುಗಳನ್ನು ಇಷ್ಟೇ ಸಂಖ್ಯೆಯ ಮಂದಿ ಜಮೀನನ್ನು ಖರೀದಿಸಿರುವುದು ಗೊತ್ತಾಗಿದೆ.

ಜಿಲ್ಲಾವಾರು ಮಾರಾಟ ವಿವರದ ಪಟ್ಟಿ

ಬೆಳಗಾವಿ ಜಿಲ್ಲೆಯಲ್ಲಿ 1,34,071 ಎಕರೆ, ಬಾಗಲಕೋಟೆ ಜಿಲ್ಲೆಯಲ್ಲಿ  69,189 ಎಕರೆ, ವಿಜಯಪುರ ಜಿಲ್ಲೆಯಲ್ಲಿ 2,04,724 ಎಕರೆ, ಕಲ್ಬುರ್ಗಿ ಜಿಲ್ಲೆಯಲ್ಲಿ 1,80,874 ಎಕರೆ  ಜಮೀನು ಮಾರಾಟವಾಗಿದೆ. ಈ ಪ್ರಶ್ನೆ ಕೇಳಿದ್ದ ಶಾಸಕ ಬಿ ಆರ್ ಪಾಟೀಲ್‌ ಅವರು ಪ್ರತಿನಿಧಿಸಿರುವ ಅಳಂದ ಕ್ಷೇತ್ರವೊಂದರಲ್ಲೇ 19,540 ಎಕರೆ ಕೃಷಿ ಜಮೀನು ಮಾರಾಟವಾಗಿರುವುದು ತಿಳಿದು ಬಂದಿದೆ.

 

 

ಬೀದರ್ ಜಿಲ್ಲೆಯಲ್ಲಿ 68,829 ಎಕರೆ, ರಾಯಚೂರು ಜಿಲ್ಲೆಯಲ್ಲಿ 1,19,854 ಎಕರೆ, ಕೊಪ್ಪಳದಲ್ಲಿ 72,820 ಎಕರೆ, ಗದಗ್‌ ನಲ್ಲಿ 55,390 ಎಕರೆ, ಧಾರವಾಡದಲ್ಲಿ 57,466 ಎಕರೆ, ಉತ್ತರ ಕನ್ನಡದಲ್ಲಿ 5,53,154 ಎಕರೆ, ಹಾವೇರಿಯಲ್ಲಿ 56,127 ಎಕರೆ, ಬಳ್ಳಾರಿಯಲ್ಲಿ 82,956, ಚಿತ್ರದುರ್ಗದಲ್ಲಿ 21,316 ಎಕರೆ, ದಾವಣಗೆರೆ ಜಿಲ್ಲೆಯಲ್ಲಿ 48,11 ಎಕರೆ, ಶಿವಮೊಗ್ಗ ಜಿಲ್ಲೆಯಲ್ಲಿ 28,277 ಎಕರೆ ಕೃಷಿ ಜಮೀನು ಮಾರಾಟವಾಗಿದೆ.

ಉಡುಪಿಯಲ್ಲಿ 23,521 ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 49,608 ಎಕರೆ, ತುಮಕೂರು ಜಿಲ್ಲೆಯಲ್ಲಿ 1,43,229 ಎಕರೆ, ಕೋಲಾರದಲ್ಲಿ 32,117 ಎಕರೆ , ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತ ಆನೇಕಲ್‌ ತಾಲೂಕಿನಲ್ಲಿ ಒಟ್ಟಾರೆ 15, 130 ಎಕರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲ 38,798 ಎಕರೆ ವಿಸ್ತೀರ್ಣದ ಕೃಷಿ ಜಮೀನು ಮಾರಾಟವಾಗಿರುವುದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯಲ್ಲಿ 44,930 ಎಕರೆ, ಹಾಸನದಲ್ಲಿ 57,949 ಎಕರೆ, ದಕ್ಷಿಣ ಕನ್ನಡದಲ್ಲಿ 24,298 ಎಕರೆ, ಕೊಡಗಿನಲ್ಲಿ 20.484, ಮೈಸೂರು ಜಿಲ್ಲೆಯಲ್ಲಿ 51,167 ಎಕರೆ, ಚಾಮರಾಜನಗರದಲ್ಲಿ 18,462 ಎಕರೆ, ಚಿಕ್ಕಬಳ್ಳಾಪುರದಲ್ಲಿ 9,319 ಎಕರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 31,988 ಎಕರೆ, ಯಾದಗಿರಿ ಜಿಲ್ಲೆಯಲ್ಲಿ 12,931 ಎಕರೆ, ವಿಜಯನಗರ ಜಿಲ್ಲೆಯಲ್ಲಿ 67,193 ಎಕರೆ ವಿಸ್ತೀರ್ಣದ ಕೃಷಿ ಜಮೀನು ಮಾರಾಟವಾಗಿದೆ.

 

 

 

 

19614 ಕಲಂ 79 ಎ ಮತ್ತು 79 ಬಿ ಜಾರಿಯಲ್ಲಿದ್ದ ಸಂದರ್ಭದಲ್ಲೇ ಅಂದರೇ 1974ರಿಂದ 2019ರ ಜೂನ್‌ 30ರ ಅಂತ್ಯಕ್ಕೆ ಬೆಂಗಳೂರು ನಗರ ಜಿಲ್ಲೆಯಲ್ಲಿ 21,043 ಎಕರೆ 8 ಎಕರೆ ವಿಸ್ತೀರ್ಣದ ಜಮೀನುಗಳಿಗೆ ಸಂಬಂಧಿಸಿದಂತೆ  13,591 ಪ್ರಕರಣಗಳು ದಾಖಲಾಗಿದ್ದವು. ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಪ್ರಕರಣಗಳ ವಿರುದ್ಧ ಸಕ್ಷಮ ಪ್ರಾಧಿಕಾರದಲ್ಲಿ ಮೇಲ್ಮನವಿ ದಖಲಾಗಿದ್ದವು. ಹೀಗಾಗಿ ಭೌತಿಕವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿರಲಿಲ್ಲ ಎಂಬುದು ಗೊತ್ತಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 20,320 ಎಕರೆ ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ 15,040 ಪ್ರಕರಣಗಳಿದ್ದವು. ರಾಮನಗರ ಜಿಲ್ಲೆಯಲ್ಲಿ 4,405 ಎಕರೆ ಗೆ ಸಂಬಂಧಿಸಿದಂತೆ 3,883 ಪ್ರಕರಣಗಳು, ಕೋಲಾರ ಜಿಲ್ಲೆಯಲ್ಲಿ 4,671 ಎಕರೆಗೆ ಸಂಬಂಧಿಸಿದಂತೆ 3,071 ಪ್ರಕರಣಗಳಿದ್ದವು. ಚಿಕ್ಕಬಳ್ಳಾಪುರದಲ್ಲಿ 6,438 ಎಕರೆಗೆ ಸಂಬಂಧಿಸಿದಂತೆ 2,307 ಪ್ರಕರಣಗಳು, ತುಮಕೂರು ಜಿಲ್ಲೆಯಲ್ಲಿ 6,009 ಎಕರೆ ಗೆ ಸಂಬಂಧಿಸಿದಂತೆ 3,124, ಚಿತ್ರದುರ್ಗದಲ್ಲಿ 16,599 ಎಕರೆಗೆ ಸಂಬಂಧಿಸಿದಂತೆ 3,493, ದಾವಣಗೆರೆ ಜಿಲ್ಲೆಯಲ್ಲಿ 4,894 ಎಕರೆಗೆ ಸಂಬಂಧಿಸಿದಂತೆ 2,967, ಶಿವಮೊಗ್ಗ ಜಿಲ್ಲೆಯಲ್ಲಿ 4,196 ಎಕರೆಗೆ ಸಂಬಂಧಿಸಿದಂತೆ 1,627 ಪ್ರಕರಣಗಳಿದ್ದವು.

ಅದೇ ರೀತಿ ಕಲ್ಬುರ್ಗಿಯಲ್ಲಿ  5,602 ಎಕರೆಗೆ ಸಂಬಂಧಿಸಿದಂತೆ 973, ಬೀದರ್‍‌ ಜಿಲ್ಲೆಯಲ್ಲಿ 1,832 ಎಕರೆಗೆ ಸಂಬಂಧಿಸಿದಂತೆ 376, ಯಾದಗಿರಿ ಜಿಲ್ಲೆಯಲ್ಲಿ 1,113 ಎಕರೆಗೆ ಸಂಬಂಧಿಸಿದಂತೆ 241, ರಾಯಚೂರು ಜಿಲ್ಲೆಯಲ್ಲಿ 2,578 ಎಕರೆಗೆ ಸಂಬಂಧಿಸಿದಂತೆ 416, ಕೊಪ್ಪಳದಲ್ಲಿ 1,558 ಎಕರೆಗೆ ಸಂಬಂಧಿಸಿದಂತೆ 289, ಬಳ್ಳಾರಿ ಜಿಲ್ಲೆಯಲ್ಲಿ 4,023 ಎಕರೆಗೆ ಸಂಬಂಧಿಸಿದಂತೆ 1,627 ಪ್ರಕರಣಗಳು ಸೇರಿ ಒಟ್ಟಾರೆ 16,709 ಎಕರೆ ಜಮೀನಿಗೆ ಸಂಬಂಧಿಸಿದಂತೆ 3,922 ಪ್ರಕರಣಗಳು ದಾಖಲಾಗಿದ್ದವು.

ಮೈಸೂರು, ನಂಜನಗೂಡು, ಟಿ ನರಸೀಪುರ, ಹುಣಸುರು, ಕೆ ಅರ್ ನಗರ, ಪಿರಿಯಾಪಟ್ಟಣ, ಹೆಚ್‌ ಡಿ ಕೋಟೆಯಲ್ಲಿ ಒಟ್ಟಾರೆ 15,161 ಎಕರೆಗೆ ಸಂಬಂಧಿಸಿದಂತೆ ಒಟ್ಟಾರೆ 6,891 ಪ್ರಕರಣಗಳಿದ್ದವು. ಈ ಪೈಕಿ 2019ರ ಅಂತ್ಯಕ್ಕೆ  474 ಪ್ರಕರಣಗಳಲ್ಲಿ 716 ಎಕರೆಯನ್ನು ಸರ್ಕಾರದ ವಶಕ್ಕೆ ಪಡೆದಿತ್ತು. 5,721 ಪ್ರಕರಣಗಳಲ್ಲಿ 13,365 ಎಕರೆ ವಿಸ್ತೀರ್ಣ ಜಮೀನಿಗೆ ಸಂಬಂಧಿಸಿದಂತೆ ಖರೀದಿದಾರರ ಪರ ಆದೇಶವಾಗಿತ್ತು.

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ 3,828 ಎಕರೆಗೆ ಸಂಬಂಧಿಸಿದಂತೆ 1,162 ಪ್ರಕರಣಗಳಿದ್ದವು. ಈ ಪೈಕಿ 190 ಪ್ರಕರಣಗಳಲ್ಲಿ 560 ಎಕರೆ ವಿಸ್ತೀರ್ಣದ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿತ್ತು. ಕುಂದಾಪುರ, ಉಡುಪಿ/ಕಾಪು, ಕಾರ್ಕಳ/ಹೆಬ್ರಿ, ಬ್ರಹ್ಮಾವರ, ಬೈಂದೂರಿನಲ್ಲಿ 2,177 ಎಕರೆಗೆ ಸಂಬಂಧಿಸಿದಂತೆ 996 ಪ್ರಕರಣಗಳಿದ್ದವು. ಈ ಪೈಕಿ 5 ಪ್ರಕರಣಗಳಲ್ಲಿ ಮಾತ್ರ 12 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿತ್ತು. ಚಾಮರಾಜನಗರದ ಹನೂರು, ಕೊಳ್ಳೇಗಾಲ, ಯಳಂದೂರು, ಚಾಮರಾಜಗರನ, ಗುಂಡ್ಲುಪೇಟೆಲ್ಲಿ 1,380 ಎಕರೆಗೆ ಸಂಬಂಧಿಸಿದಂತೆ 3,141 ಪ್ರಕರಣಗಳಿದ್ದವು. ಈ ಪೈಕಿ 531 ಪ್ರಕರಣಗಳಲ್ಲಿ 1,767 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆದಿತ್ತು.

ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಒಟ್ಟಾರೆ 4,178 ಎಕರೆಗೆ ಸಂಬಂಧಿಸಿದಂತೆ 1,809 ಪ್ರಕರಣಗಳಿದ್ದವು. ಈ ಪೈಕಿ 73 ಪ್ರಕರಣಗಳಲ್ಲಿ 327 ಎಕರೆ ಜಮೀನನ್ನು ಸರ್ಕಾರವು ವಶಪಡಿಸಿಕೊಂಡಿತ್ತು. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ತರೀಕೆರೆ, ಅಜ್ಜಂಪುರ, ಕಡೂರು, ನ.ರಾ.ಪುರದಲ್ಲಿ 1,562 ಎಕರೆಗೆ ಸಂಬಂಧಿಸಿದಂತೆ 710 ಪ್ರಕರಣಗಳಿದ್ದವು. ಈ ಪೈಕಿ 15 ಪ್ರಕರಣಗಳಲ್ಲಿ 8.04 ಎಕರೆ ವಿಸ್ತೀರ್ಣದ ಜಮೀನನ್ನು ಸರ್ಕಾರವು ವಶಕ್ಕೆ ಪಡೆದಿತ್ತು.

ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಕೆ ಆರ್ ಪೇಟೆಯಲ್ಲಿ 6,485 ಎಕರೆಗೆ ಸಂಬಂಧಿಸಿದಂತೆ 5,551 ಪ್ರಕರಣಗಳಿದ್ದವು. ಈ ಪೈಕಿ 525 ಪ್ರಕರಣಗಳಲ್ಲಿ ಮಾತ್ರ 833 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸರ್ಕಾರವು ವಶಕ್ಕೆ ಪಡೆದಿತ್ತು. ಹಾಸನ ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಅರಕಲಗೂಡು, ಆಲೂರು, ಬೇಲೂರು, ಸಕಲೇಶಪುರದಲ್ಲಿ ಒಟ್ಟಾರೆ 5,277 ಎಕರೆ ವಿಸ್ತೀರ್ಣದ ಜಮೀನುಗಳಲ್ಲಿ ಉಲ್ಲಂಘನೆ ಆಗಿದ್ದವು. ಈ ಪೈಕಿ 720 ಎಕರೆ ವಿಸ್ತೀರ್ಣದ ಜಮೀನನ್ನು ಸರ್ಕಾರವ ವಶಕ್ಕೆ ಪಡೆದಿತ್ತು.

 

79 ಎ, ಬಿ ಉಲ್ಲಂಘನೆ; 5,000 ಎಕರೆ ಕೃಷಿ ಜಮೀನು ಗೃಹ ನಿರ್ಮಾಣ ಸಹಕಾರ ಸಂಘಗಳ ಪಾಲು?

 

79 ಎ ಮತ್ತು ಬಿ ಕಲಂಗಳು ಜಾರಿಯಲ್ಲಿದ್ದರೂ ಇವುಗಳನ್ನು ಉಲ್ಲಂಘಿಸಿ ಸಹಕಾರ ಸಂಘಗಳು 5,000 ಎಕರೆ ವಿಸ್ತೀರ್ಣದಷ್ಟು ಕೃಷಿ ಜಮೀನನ್ನು ಖರೀದಿಸಿದ್ದವು.

 

ಸಂಪುಟ ರಹಸ್ಯ; 79 ಎ, ಬಿ ತಿದ್ದುಪಡಿಗೆ ಕೆಟ್ಟ ಆರ್ಥಿಕ ಪರಿಸ್ಥಿತಿಯೇ ರಕ್ಷಾಕವಚ

 

ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡಿದ್ದ  ಹಿಂದಿನ ಬಿಜೆಪಿ ಸರ್ಕಾರವು 79 ಎ ಮತ್ತು ಬಿ ನಿರ್ಬಂಧವನ್ನು ತೆರವುಗೊಳಿಸಿತ್ತು.

 

ಭೂಸುಧಾರಣೆ ಕಾಯ್ದೆ ಜಾರಿಯಲ್ಲಿದ್ದಾಗಲೇ 6,028 ಎಕರೆ ಖರೀದಿ; ಭೂ ಕುಬೇರರ ಪಟ್ಟಿ ಬಹಿರಂಗ

 

ಅಲ್ಲದೇ 79 ಎ ಮತ್ತು ಬಿ ಉಲ್ಲಂಘಿಸಿ ನಟ ಉಪೇಂದ್ರ ಸೇರಿದಂತೆ ಹಲವು ಶಿಕ್ಷಣೋದ್ಯಮಿಗಳು, ರಾಜಕಾರಣಿಗಳು ಕೃಷಿ ಜಮೀನನ್ನು ಖರೀದಿಸಿದ್ದರು. ಈ ಕುರಿತು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Hot this week

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

ಅದಾನಿ ಎಸಿಸಿ ಸಮೂಹಕ್ಕೆ ವಿಧಿಸಿದ್ದ 482.69 ಕೋಟಿ ರು ದಂಡದ ಬೇಡಿಕೆ ರದ್ದು; ರಾಜ್ಯದ ಅರ್ಜಿಯೂ ವಜಾ, ಪರಿಣಾಮಕಾರಿಯಾಗಿ ವಾದ ಮಂಡಿಸುವಲ್ಲಿ ವಿಫಲವಾಯಿತೇ ರಾಜ್ಯ?

ಬೆಂಗಳೂರು; ಕಲಬುರಗಿ ಜಿಲ್ಲೆಯ ಇಂಗಳಗಿ ಮತ್ತು ರಾವೂರ್ ಗ್ರಾಮಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದ...

ಪೆರಿಫೆರಲ್ ರಿಂಗ್‌ ರೋಡ್‌- 2; 4,500 ಕೋಟಿ ಭೂ ಪರಿಹಾರ, 15,450 ಕೋಟಿ ಅಂದಾಜು ವೆಚ್ಚ, ಸರ್ಕಾರಕ್ಕೆ ಪರಿಷ್ಕೃತ ಯೋಜನೆ ಸಲ್ಲಿಕೆ

ಬೆಂಗಳೂರು; ರೈತರು ಮತ್ತು  ಸ್ಥಳೀಯರ ವಿರೋಧದ ನಡುವೆಯೂ ಫೆರಿಫೆರಲ್ ರಿಂಗ್‌ ರಸ್ತೆ (ಭಾಗ...
Please Scan to make Your Contribution

Topics

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

ಪೆರಿಫೆರಲ್ ರಿಂಗ್‌ ರೋಡ್‌- 2; 4,500 ಕೋಟಿ ಭೂ ಪರಿಹಾರ, 15,450 ಕೋಟಿ ಅಂದಾಜು ವೆಚ್ಚ, ಸರ್ಕಾರಕ್ಕೆ ಪರಿಷ್ಕೃತ ಯೋಜನೆ ಸಲ್ಲಿಕೆ

ಬೆಂಗಳೂರು; ರೈತರು ಮತ್ತು  ಸ್ಥಳೀಯರ ವಿರೋಧದ ನಡುವೆಯೂ ಫೆರಿಫೆರಲ್ ರಿಂಗ್‌ ರಸ್ತೆ (ಭಾಗ...

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

Related Articles

Popular Categories

error: Content is protected !!