Saturday | September 12, 2026 |

ಜಾರಿ ನಿರ್ದೇಶನಾಲಯ ಹೆಸರಿಸಿರುವ ಕಂಪನಿಗೆ 2,477.90 ಕೋಟಿ ರು ಮೊತ್ತದ ಕಾಮಗಾರಿ ನೀಡಿದ್ದ ಪಿಡಬ್ಲ್ಯೂಡಿ; ಮುನ್ನೆಲೆಗೆ ಬಂದ ದಿ ಫೈಲ್‌ ವರದಿಗಳು

ಬೆಂಗಳೂರು; ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರು ಹಾಗೂ ಕುಟುಂಬದ ಸದಸ್ಯರ ವಿರುದ್ಧ ಜಾರಿ ನಿರ್ದೇಶನಾಲಯ (ED) ವು ಸೆಪ್ಟೆಂಬರ್ 9 ಮತ್ತು 10, 2026 ರಂದು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಹೆಸರಿಸಿರುವ ಪಶ್ಚಿಮ ಬಂಗಾಳ ಮೂಲದ ಕಂಪನಿಯಾದ ಭಾರತ್ ವಾಣಿಜ್ಯ ಈಸ್ಟರ್ನ್‌ ಪ್ರೈವೈಟ್‌ ಲಿಮಿಟೆಡ್ ಗೆ, ಪಿಡಬ್ಲ್ಯೂಡಿ ಇಲಾಖೆಯು 2,477.90 ಕೋಟಿ ರು ಮೊತ್ತದ ಕಾಮಗಾರಿಯನ್ನು ಕಾನೂನುಬಾಹಿರವಾಗಿ ನೀಡಿತ್ತು. ಈ ಕುರಿತು ಹಲವು ದಾಖಲೆಗಳ ಸಮೇತ ದಿ ಫೈಲ್‌ ವರದಿಯನ್ನು ಪ್ರಕಟಿಸಿತ್ತು.

ಭಾರತ್ ವಾಣಿಜ್ಯ ಈಸ್ಟರ್ನ್‌ ಪ್ರೈವೈಟ್‌ ಲಿಮಿಟೆಡ್ ಗೆ ಸಂಬಂಧಿಸಿದ ಕೆಲವು ಅಕ್ರಮ ಚಟುವಟಿಕೆಗಳ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯವು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇ ಡಿ ಹೆಸರಿಸಿರುವ ಭಾರತ್ ವಾಣಿಜ್ಯ ಈಸ್ಟರ್ನ್‌ ಪ್ರೈವೈಟ್‌ ಲಿಮಿಟೆಡ್ ಗೆ  ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು  3,190 ಕೋಟಿ ರು ಯೋಜನಾ ವೆಚ್ಚದ ಪೈಕಿ  2,477.90 ಕೋಟಿ ರು ಮೊತ್ತದ  ಕಾಮಗಾರಿ ವಹಿಸಿತ್ತು. ಅಲ್ಲದೇ ಈ ಕಾಮಗಾರಿ  ಟೆಂಡರ್‍‌ ಪ್ರಕ್ರಿಯೆಯಲ್ಲಿ ಎಲ್ 1 ಬಿಡ್‌ದಾರ ಅನರ್ಹಗೊಂಡಿದ್ದರೂ ಸಹ ಮರು ಟೆಂಡರ್‍‌ ಕರೆಯದೇ ಎಲ್‌ 2 ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಕಂಪನಿಯನ್ನೇ ಲೋಕೋಪಯೋಗಿ ಇಲಾಖೆಯು ಪರಿಗಣಿಸಿರುವುದರ ಹಿಂದೆ ಅಕ್ರಮದ ವಾಸನೆ ಹರಡಿತ್ತು.

ಎಲ್‌ 1 ಬಿಡ್‌ದಾರ ಅನರ್ಹಗೊಂಡಿರುವ ಕಾರಣ ಮರು ಟೆಂಡರ್ ಆಹ್ವಾನಿಸಬೇಕು ಎಂದು ಆರ್ಥಿಕ ಇಲಾಖೆಯೂ ಸಹ ಸ್ಪಷ್ಟವಾಗಿ ತನ್ನ ಅಭಿಪ್ರಾಯದಲ್ಲಿ ದಾಖಲಿಸಿತ್ತು. ಆದರೂ ಆ ಅಭಿಪ್ರಾಯವನ್ನು ಬದಿಗೊತ್ತಿರುವ ಲೋಕೋಪಯೋಗಿ ಇಲಾಖೆಯು ಎಲ್‌ 2 ನ್ನು ಪರಿಗಣಿಸಿದೆ. ಇದು ಸರ್ಕಾರದ ಇತರೆ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲಿದೆ. ಅಲ್ಲದೇ ಇಂತಹದೊಂದು ಕೆಟ್ಟ ಪೂರ್ವ ನಿದರ್ಶನಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ನಾಂದಿ ಹಾಡಿದಂತಾಗಿತ್ತು.

ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲೇನಿದೆ?

ವಲಯ ಕಚೇರಿಯ ಜಾರಿ ನಿರ್ದೇಶನಾಲಯವು  ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತ ಸಹಚರರಿಗೆ ಸಂಬಂಧಿಸಿದ ಬೆಂಗಳೂರಿನ 4 ಸ್ಥಳಗಳು, ಬೆಳಗಾವಿ, ಗೋಕಾಕ್ ಮತ್ತು ಕೊಲ್ಲಾಪುರದಲ್ಲಿನ ತಲಾ ಒಂದು ಸ್ಥಳ ಸೇರಿದಂತೆ ಒಟ್ಟು 9 ಸ್ಥಳಗಳಲ್ಲಿ 2026ರ ಸೆ.9 ಮತ್ತು 10ರಂದು  ಶೋಧ ಕಾರ್ಯಾಚರಣೆ ನಡೆಸಿದೆ. ಈ ಶೋಧ ಕಾರ್ಯಾಚರಣೆಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999ರ ನಿಯಮಾವಳಿಗಳ ಸಂಭಾವ್ಯ ಉಲ್ಲಂಘನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಕೈಗೊಳ್ಳಲಾಗಿದ್ದು, ಜಾರಕಿಹೊಳಿ ಕುಟುಂಬದ ಸದಸ್ಯರ ಹೇಳಲಾದ ಬಹಿರಂಗಪಡಿಸದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರಗಳು ಹಾಗೂ ಶಂಕಿತ ಹಣಕಾಸು ಅಕ್ರಮಗಳನ್ನು ಪತ್ತೆಹಚ್ಚಲು ನಡೆಸಲಾಗಿದೆ ಎಂದು ವಿವರಿಸಿದೆ.

ಈ ಶೋಧ ಕಾರ್ಯಾಚರಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಅವರ ಸಹೋದರಿ-ಮಗಳಾದ (ಸಹೋದರಿಯ ಪುತ್ರಿ) ಮನಜೀತ್ ಅವರನ್ನು ಒಳಗೊಂಡ ಸ್ಥಳಗಳನ್ನು ಪರಿಶೀಲಿಸಲಾಯಿತು. ಇದರ ಜೊತೆಗೆ, ಜಾರಕಿಹೊಳಿ ಅವರ ಸಹಚರರಿಗೆ ಸೇರಿದ ಹಲವು ಆಸ್ತಿಗಳನ್ನೂ ಶೋಧಿಸಲಾಯಿತು. ಇವರಲ್ಲಿ ಒಎಸ್‌ಡಿ ಮತ್ತು ಆಪ್ತ ಸಹಾಯಕ ಮಲಗೌಡ ಪಾಟೀಲ್, ರಾಜು ದಾರಶೆಟ್ಟಿ, ಫತ್ತೇಲ್ ಪರಸನ್ನಾವರ್ ಹಾಗೂ ಡಾ. ಗಿರೀಶ್ ಸೋನವಾಕರ್ ಅವರು ಸೇರಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ, ಸತೀಶ್ ಜಾರಕಿಹೊಳಿ ಅವರು ನಿರ್ದೇಶಕರಾಗಿರುವ ಖಾಸಗಿ ಕಂಪನಿಯಾದ ಭಾರತ್‌ ಈಸ್ಟರ್ನ್ ವಾಣಿಜ್ಯ ಪ್ರೈವೈಟ್‌ ಲಿಮಿಟೆಡ್‌ಗೆ ಸಂಬಂಧಿಸಿದ ಕೆಲವು ಅಕ್ರಮ ಚಟುವಟಿಕೆಗಳ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಈ ಕಂಪನಿಯು ವಿದೇಶಿ ಕಂಪನಿಗಳಿಂದ ವಿದೇಶಿ ಕರೆನ್ಸಿಯಲ್ಲಿ ಉಪಕರಣಗಳನ್ನು ಸ್ವೀಕರಿಸಿ, ಅವುಗಳ ಇನ್ವಾಯ್ಸ್‌ಗಳನ್ನು ಹೆಚ್ಚಿಸಿ ತೋರಿಸಿರುವುದಾಗಿ ಆರೋಪಿಸಲಾಗಿದೆ. ಕಂಪನಿಯ ನಿರ್ದೇಶಕರ ಮಾಲೀಕತ್ವದಲ್ಲಿರುವ ಬಿವಿಇಪಿಎಲ್‌ ಗೆ ಸಂಬಂಧಿಸಿದ ಕಚೇರಿಗಳು ಮತ್ತು ಆಸ್ತಿಗಳಲ್ಲೂ ಶೋಧ ನಡೆಸಲಾಯಿತು. ಶೋಧ ಕಾರ್ಯಾಚರಣೆಯ ವೇಳೆ, ಜಾರಕಿಹೊಳಿ ಕುಟುಂಬದ ಸದಸ್ಯರಾದ  ಜಯಕಾಂತ್ ಹಾಗೂ ಅವರ ಕುಟುಂಬ ಸದಸ್ಯರಾದ  ಮನಜೀತ್ ಅವರು ಹಲವಾರು ವಿದೇಶಿ ಕಂಪನಿಗಳಲ್ಲಿ ಪಾಲುದಾರರಾಗಿರುವುದು ಪತ್ತೆಯಾಗಿದೆ.

ಮನಜೀತ್ ಜಾರಕಿಹೊಳಿ ಮತ್ತು ಅವರ ಸಹೋದರಿ ಮನಜೀತ್ ಅವರು M/s Vaudeli Manju ಎಂಬ ಸಂಸ್ಥೆಯ ನಿರ್ದೇಶಕರಾಗಿದ್ದು, ವಿದೇಶದಲ್ಲಿ ಅನೇಕ ಸಂಸ್ಥೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. M/s Eldorado Mining Resources, Congo ಮತ್ತು M/s Nava Aum Mining Ltd., Zambia ಸಂಸ್ಥೆಗಳಲ್ಲಿ ಅವರು ನಿರ್ದೇಶಕರಾಗಿರುವುದೂ ಪತ್ತೆಯಾಗಿದೆ. M/s Eldorado Mining Resources, Congo ಸಂಸ್ಥೆಯಲ್ಲಿ  ಸತೀಶ್ ಜಾರಕಿಹೊಳಿ ಅವರು ಶೇ.40ರಷ್ಟು ಪಾಲನ್ನು ಹೊಂದಿದ್ದಾರೆ.  ಅದು M/s Magnitude Star SARL, Congo ಸಂಸ್ಥೆಗೆ ಚಿನ್ನದ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಸ್ತಾಂತರಿಸಲ್ಪಟ್ಟಿರುವುದು ಕಂಡುಬಂದಿದೆ. ಇತರ ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳು ಮತ್ತು ಆಸ್ತಿಗಳನ್ನು ಸಹ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.

ಈ ಏಕಕಾಲಿಕ ಶೋಧ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ, ಬೆಳಗಾವಿಯ ಗೋಕುಲ್ ದಾಸ್ ಕಾಲೋನಿಯಲ್ಲಿರುವ ಸಚಿವರ ನಿವಾಸ ಹಾಗೂ ಬೆಳಗಾವಿಯ ಕಣಕಪುರ ರಸ್ತೆಯಲ್ಲಿರುವ ಕಚೇರಿಗಳಲ್ಲಿ ಶೋಧ ನಡೆಸಲಾಯಿತು. ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಫೆಮಾ ( FEMA) ಅಡಿಯಲ್ಲಿ ಇರುವ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಗಣನೀಯ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ.

ಶೋಧದ ಪರಿಣಾಮವಾಗಿ, ಸುಮಾರು ರೂ.3 ಕೋಟಿ ಮೌಲ್ಯದ ಭಾರತೀಯ ಕರೆನ್ಸಿ, ವಿದೇಶಿ ಕರೆನ್ಸಿಗಳಾದ US ಡಾಲರ್‌ಗಳು, ಯುರೋ  ಇತ್ಯಾದಿ ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ವಿದೇಶಿ ಕರೆನ್ಸಿಯ ಮೌಲ್ಯ ಸುಮಾರು ರೂ.15 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೆ, ವಿದೇಶಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ. M/s Magnitude Star SARL, Congo ಸಂಸ್ಥೆಯಲ್ಲಿ ಒಂದು ಸಂಸ್ಥೆಯ ಮೂಲಕ, ಅಧಿಕೃತ ಮಾರ್ಗದ ಹೊರತಾಗಿ, ಹಣ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

ಶೋಧ ಕಾರ್ಯಾಚರಣೆ ವೇಳೆ ಫೆಮಾ ಅಡಿಯಲ್ಲಿ  ನಿಷೇಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹೂಡಿಕೆಗಳು, ಆಸ್ತಿ ಮಾಲೀಕತ್ವ ಮತ್ತು ವಿದೇಶಿ ಹಣ ವರ್ಗಾವಣೆಗಳ ಬಗ್ಗೆ ದಾಖಲೆಗಳೂ ಪತ್ತೆಯಾಗಿವೆ. ಬಿವಿಇಪಿಎಲ್ ಮತ್ತು ಮಧ್ಯವರ್ತಿ ಸಂಸ್ಥೆಗಳ ಮೂಲಕ ವಿವಿಧ ಕಂಪನಿಗಳು ಹಾಗೂ ವ್ಯಕ್ತಿಗಳ ಖಾತೆಗಳಲ್ಲಿ ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ. ವಿಶೇಷವಾಗಿ, ತಮ್ಮ ಸಹೋದರಿ ಮತ್ತು  ಹಣದ ಹರಿವನ್ನು ನಿಯಂತ್ರಿಸುತ್ತಿದ್ದ ವೈ ಡಿ ಮಂಜುನಾಥ್‌ ಅವರಿಗೆ  ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ವಿವರಿಸಿದೆ.

ಸಿಬಿಐ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಕಂಪನಿಗೆ 10,000 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ; ಪ್ರಭಾವಿ ಸಚಿವರಿಗೆ ಹೆಲಿಕಾಪ್ಟರ್ ಉಡುಗೊರೆ?

ಬಿವಿಇಪಿಎಲ್‌ ಕಂಪನಿಗೆ ಕಾಮಗಾರಿ ನೀಡಿದ್ದರ ಬಗ್ಗೆ ದಿ ಫೈಲ್‌ 2026ರ ಏಪ್ರಿಲ್‌ 13ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಟೆಂಡರ್ ನಿಯಮಗಳ ಭಾರೀ ಉಲ್ಲಂಘನೆ, ಅಕ್ರಮ; ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಸ್ವೇಚ್ಛೆ ಅಧಿಕಾರ, ಆರ್ಥಿಕ ಇಲಾಖೆ ಆಕ್ಷೇಪ, ಮುಖ್ಯಮಂತ್ರಿಯನ್ನೂ ಕತ್ತಲಲ್ಲಿಟ್ಟರೇ?

ಇದೇ ಕಂಪನಿಗೆ ಟೆಂಡರ್ ನೀಡುವ ಸಂಬಂಧ ಆರ್ಥಿಕ ಇಲಾಖೆಯೂ ಸಹ ಭಾರೀ ಆಕ್ಷೇಪವನ್ನು ಎತ್ತಿತ್ತು. ಈ ಕುರಿತು ದಿ ಫೈಲ್‌ 2026ರ ಏಪ್ರಿಲ್‌ 16ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಎಲ್‌ 1 ತಿರಸ್ಕೃತವಾಗಿದ್ದರೂ ಸಹ ಮರು ಟೆಂಡರ್‍‌ ಕರೆಯಬೇಕಿದ್ದ ಇಲಾಖೆಯು ಎಲ್‌ 2 ಸ್ಥಾನದಲ್ಲಿದ್ದ ಬಿವಿಇಪಿಲ್ ಕಂಪನಿಯನ್ನೇ ಎಲ್‌ 1 ಬಿಡ್‌ದಾರರನ್ನಾಗಿ ಘೋಷಿಸಿತ್ತು. ಇದಕ್ಕೆ ಸಚಿವ ಸಂಪುಟವೂ ಸಹ ಅನುಮೋದಿಸಿತ್ತು. ಈ ಕುರಿತು ದಿ ಫೈಲ್‌ 2026ರ ಮೇ 11ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...
Please Scan to make Your Contribution

Topics

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...

Related Articles

Popular Categories

error: Content is protected !!