ಕೃಷಿಯಿಂದ ಗಳಿಸಿದ ಹಣವನ್ನು ದೆಹಲಿಗೆ ಸಾಗಿಸಿದ್ಹೇಗೆ?: ಐ ಟಿ ಮುಂದೆ ಬಾಯಿಬಿಡದ ಡಿಕೆಶಿ

ಬೆಂಗಳೂರು; ನವ ದೆಹಲಿಯ ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ನಲ್ಲಿನ ಬಂಗಲೆಯಲ್ಲಿ ಸಿಕ್ಕಿದ್ದ ಹಣವು ಕೃಷಿ ಮೂಲಗಳಿಂದ ಗಳಿಸಿದ್ದ ಆದಾಯ ಎಂದು ಹೇಳಿಕೆ ನೀಡಿದ್ದ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಕೃಷಿ ಮೂಲಗಳಿಂದ ಗಳಿಸಿದ್ದ ಹಣವನ್ನು ದೆಹಲಿಗೆ ಹೇಗೆ ಸಾಗಿಸಿದರು ಎಂಬುದನ್ನು ಬಾಯ್ಬಿಟ್ಟಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಹೇಳಿದೆ.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ವಿಚಾರಣೆ ಸಂದರ್ಭದಲ್ಲಿ ನಂ.107, ಬಿ-2, ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ನವದೆಹಲಿ ಬಂಗಲೆ ತನಗೆ ಸೇರಿದ್ದು ಎಂದು ಆರೋಪಿ -1 ಹೇಳಿದ್ದಾರೆ. ಮತ್ತು ಈ ಬಂಗಲೆಯಲ್ಲಿ ಸಿಕ್ಕಿದ್ದ ಹಣವೂ ನನಗೆ ಸೇರಿದ್ದೆಂದು ಹೇಳಿದ್ದಾರೆ. ಇದು ನಾನು ಕೃಷಿ ಮೂಲಗಳಿಂದ ಗಳಿಸಿದ ಆದಾಯ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ತನಿಖಾ ಸಂಸ್ಥೆಗಳು ಹೇಳಿವೆ,’ ಎಂದು ವಿವರಿಸಿದೆ.

 

ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಈ ಆದಾಯದಲ್ಲಿ ಗಳಿಸಿದ್ದು ಕೃಷಿ ಮೂಲಕ ಎಂದು ಹೇಳಿದ್ದಾರೆ. ಅವರ ತಾಯಿ ಕೃಷಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಹಣವನ್ನು ದೆಹಲಿಗೆ ಹೇಗೆ ಸಾಗಿಸಿದರು ಎಂಬುದನ್ನು ಬಾಯಿ ಬಿಟ್ಟಿಲ್ಲ ಎಂದೂ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ಉಲ್ಲೇಖಿಸಿದೆ.

 

ನವ ದೆಹಲಿಯ ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ನಲ್ಲಿನ ಬಂಗಲೆಯಲ್ಲಿನ ಮನೆಗಳಲ್ಲಿ 6.67 ಕೋಟಿ ರೂ. ಲಭ್ಯವಾಗಿತ್ತು. ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಈ ಭಾರೀ ಪ್ರಮಾಣದ ಹಣ ಸಂಪಾದನೆ ಮತ್ತು ಇದರ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಇದಕ್ಕೆ ಮೂರು ಮತ್ತು ನಾಲ್ಕನೇ ಆರೋಪಿಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂಬ ಅಂಶವೂ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿದೆ.

 

‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಮೊದಲನೇ ಆರೋಪಿಯು ಬೆಂಗಳೂರು ಮತ್ತು ದೆಹಲಿಯಲ್ಲಿ ತನಗೆ ಬೇಕಾದಂತೆ ಎಲ್ಲ ವ್ಯವಹಾರಗಳನ್ನು ಮಾಡಿರುವುದು ಕಂಡುಬರಲಿದೆ. ದೆಹಲಿಯ ಬಂಗಲೆಗಳಲ್ಲಿ ವಶಕ್ಕೆ ಪಡೆದ 8.5 ಕೋಟಿ ರು.ಗಳು ಮೊದಲನೇ ಆರೋಪಿಗೆ ಸೇರಿದೆ. ಮುಂದುವರೆದಂತೆ ಮೊದಲನೇ ಆರೋಪಿಯು ನವದೆಹಲಿಯ ಸಫ್ದರ್‍‌ಜಂಗ್‌ ರಸ್ತೆಯ ಫ್ಲಾಟ್‌ ನಂ.107, ಬಿ-2ನ್ನು ಖರೀದಿಸಿದ್ದಾರೆ. ಎರಡನೇ ಆರೋಪಿ ಸಚಿನ ನಾರಾಯಣ್‌ ಮೊದಲನೇ ಆರೋಪಿಗೆ ನಿಕಟವಾಗಿದ್ದಾರೆ. ಅವರು ಸ್ವತಂತ್ರ ವಹಿವಾಟನ್ನು ಹೊಂದಿದ್ದಾರೆ,’ ಎಂದು ವಿವರಿಸಿದ್ದಾರೆ.

ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

ಎರಡನೇ ಆರೋಪಿಯು ಮೊದಲನೇ ಆರೋಪಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಮತ್ತು ಹಣವು ಮೊದಲನೇ ಆರೋಪಿಗೆ ಸೇರಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ವಿಷಯಗಳ ಕುರಿತು ಮೊದಲನೇ ಆರೋಪಿ ಸ್ಪಷ್ಟನೆ ನೀಡಲು ಎರಡು ತಿಂಗಳು ಸಮಯಾವಕಾಶ ಕೇಳಿದ್ದರು. ಸಮಯಾವಕಾಶ ಕೊಟ್ಟ ನಂತರವೂ ಸ್ಪಷ್ಟನೆ ನೀಡಲಿಲ್ಲ. ವಿಳಂಬ ತಂತ್ರಗಳನ್ನು ಅನುಸರಿಸಿದ್ದರು ಎಂಬುದು ತಿಳಿದು ಬಂದಿದೆ.

ಹಣ ವರ್ಗಾವಣೆ, ಸಾಗಣೆ; ಡಿಕೆಶಿ ಸೂಚನೆಯಂತೆಯೇ ಬೇನಾಮಿ ವ್ಯವಹಾರಗಳ ನಿರ್ವಹಣೆ

‘ಮೊದಲನೇ ಆರೋಪಿ ಬೇರೆ ಬೇರೆ ದಿನಗಳಂದು ನೀಡಿದ್ದ ಹೇಳಿಕೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಈ ವೇಳೆಯಲ್ಲಿ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಸಂಪೂರ್ಣವಾಗಿ ಹಿಂಪಡೆದಿದ್ದಾರೆ. ಮನೆ ಸಂಖ್ಯೆ ಬಿ – ಸಫ್ದರ್‍‌ ಜಂಗ್ ರಸ್ತೆಯ ನಿವಾಸದಲ್ಲಿ ವಶಕ್ಕೆ ಪಡೆದಿದ್ದ 41,03,600 ಲಕ್ಷ ರುಗಳಿಗೆ ಸಂಬಂಧಿಸಿ ಈ ಪೈಕಿ 15.00 ಲಕ್ಷ ರು.ಗಳನ್ನು ಕೃಷಿಯಿಂದ ಗಳಿಸಿದ್ದು ಎಂದು ಹೇಳಿದ್ದಾರೆ.

ಶಿಕ್ಷಣ, ಟ್ರಸ್ಟ್‌, ರಿಯಲ್‌ ಎಸ್ಟೇಟ್‌ ವಹಿವಾಟು; ಕಳಂಕಿತ ಹಣವನ್ನು ಕಳಂಕ ರಹಿತವಾಗಿಸಲು ಹೂಡಿಕೆ

ಅಲ್ಲದೇ  ಹಣ ದೊರೆತ ಬಂಗಲೆ ನನ್ನದಲ್ಲ ಎಂದೂ ಹೇಳಿದ್ದಾರೆ. ಹಾಗೆಯೇ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಲ್ಲಿರುವ ಕೈ ಬರಹವೂ ನನ್ನದಲ್ಲ ಎಂದಿದ್ದಾರೆ,’ ಎಂಬ ಅಂಶವು ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ಉಲ್ಲೇಖವಾಗಿದೆ.

the fil favicon

SUPPORT THE FILE

Latest News

Related Posts