Friday | July 24, 2026 |

ಖಾಸಗಿ ವಲಯದ ವಿದ್ಯುತ್ ಉತ್ಪಾದಕರಿಗೆ ಕಲ್ಲಿದ್ದಲು ಹಂಚಿಕೆ; 2 ವರ್ಷದಲ್ಲಿ ಅದಾನಿ ಪವರ್ ಲಿಮಿಟೆಡ್‌ಗೆ 53.16 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆ

ಬೆಂಗಳೂರು; ಭಾರತದಲ್ಲಿ ಪ್ರತಿ ಖಾಸಗಿ ವಲಯದ ವಿದ್ಯುತ್ ಉತ್ಪಾದಕರಿಗೆ 2024ರಿಂದ 2026ವರೆಗೆ 212.69 ಮಿಲಿಯನ್ ಮೆಟ್ರಿಕ್ ಟನ್‌ (ಎಂಎಂಟಿಪಿಎ) ಕಲ್ಲಿದ್ದಲು ಹಂಚಿಕೆಯಾಗಿದೆ. ಈ ಪೈಕಿ ಅದಾನಿ ಪವರ್ ಲಿಮಿಟೆಡ್‌ವೊಂದಕ್ಕೇ ಈ ಎರಡೂ ವರ್ಷದಲ್ಲಿ 53.16 ಮಿಲಿಯನ್ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿದೆ.

ಕರ್ನಾಟಕ ಸಂಸದ ಜಿ ಕುಮಾರ್ ನಾಯಕ್ ಅವರು ಲೋಕಸಭೆಯಲ್ಲಿ 2026ರ ಜುಲೈ 23ರಂದು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಕೇಂದ್ರ ವಿದ್ಯುತ್ ಇಲಾಖೆಯು ನೀಡಿರುವ ಉತ್ತರದಲ್ಲಿ ಈ ಮಾಹಿತಿಯಿದೆ.

2024 ರಲ್ಲಿ ಭಾರತ ಸರ್ಕಾರ ದೀರ್ಘಾವಧಿಯ ಕಲ್ಲಿದ್ದಲು ವಿದ್ಯುತ್ ಖರೀದಿ ಒಪ್ಪಂದಗಳನ್ನು ಪುನರಾರಂಭಿಸಿದಾಗಿನಿಂದ ಅದಾನಿ ಗ್ರೂಪ್ ಮುಂದಿನ 25 ವರ್ಷಗಳಲ್ಲಿ 13.27 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವನ್ನು ಗಳಿಸುವ ಸರ್ಕಾರಿ ಒಪ್ಪಂದಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ಕೇಂದ್ರ ಸರ್ಕಾರವೇ ಅಧಿಕೃತವಾಗಿ ನೀಡಿರುವ ಈ ಮಾಹಿತಿಯು ಮುನ್ನೆಲೆಗೆ ಬಂದಿದೆ.

ಖಾಸಗಿ ವಲಯದ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಕಲ್ಲಿದ್ದಲು ಹಂಚಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2017ರಲ್ಲಿ ಶಕ್ತಿ ನೀತಿಯನ್ನು ಜಾರಿಗೆ ತರಲಾಗಿತ್ತು. 2025ರಲ್ಲಿ ಈ ನೀತಿಯನ್ನು ಪರಿಷ್ಕೃತಗೊಳಿಸಿತ್ತು. 2024ರಿಂದ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಸಂಬಂಧಿಸಿದ ಉಷ್ಣ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಹಂಚಿಕೆಯಾಗಿರುವ ಪಟ್ಟಿಯಲ್ಲಿಯೂ ಅದಾನಿ ಪವರ್ ಲಿಮಿಟೆಡ್‌ ಮೇಲುಗೈ ಸಾಧಿಸಿರುವುದು ಕೇಂದ್ರವು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

 

2024ರಿಂದ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳಿಗೆ (PPAs) ಸಂಬಂಧಿಸಿದ ಉಷ್ಣ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಹಂಚಿಕೆಗಾಗಿ ರಾಜ್ಯ ವಿದ್ಯುತ್ ಸಂಸ್ಥೆಗಳು ಮತ್ತು ವಿದ್ಯುತ್ ಖರೀದಿ ಏಜೆನ್ಸಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಇದರಲ್ಲಿ ಜಿಂದಾಲ್ ಸಮೂಹದ ಜೆಎಸ್‌ಡಬ್ಲ್ಯೂ ಕೂಡ ಇತ್ತು. ಆದರೆ ಅದಾನಿ ಪವರ್ ಲಿಮಿಟೆಡ್‌ಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿರುವುದು ಕೇಂದ್ರವು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಕೋಲ್ ಇಂಡಿಯಾ ಲಿಮಿಟೆಡ್‌ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ 2026ರ ಮಾರ್ಚ್‌ 31ರ ಅಂತ್ಯಕ್ಕೆ ಒಟ್ಟು 617.7 ಮಿಲಿಯನ್ ಟನ್ ಪ್ರಮಾಣದಲ್ಲಿ ದೀರ್ಘಾವಧಿ ಇಂಧನ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಖಾಸಗಿ ವಲಯದ ವಿದ್ಯುತ್ ಸ್ಥಾವರಗಳಿಗೆ 174.6 ಮಿಲಿಯನ್ ಟನ್ ಹಂಚಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ವಲಯದ ವಿದ್ಯುತ್ ಸ್ಥಾವರಗಳಿಗೆ 443.1 ಮಿಲಿಯನ್ ಟನ್ ಹಂಚಿಕೆಯಾಗಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಹೀಗಾಗಿ, ಖಾಸಗಿ ವಲಯದ ವಿದ್ಯುತ್ ಸ್ಥಾವರಗಳು (IPPs) ಮತ್ತು ಕೇಂದ್ರ/ರಾಜ್ಯ ವಲಯದ ವಿದ್ಯುತ್ ಸ್ಥಾವರಗಳ ನಡುವಿನ ಅನುಪಾತ 28 : 72ರಷ್ಟಿದೆ. ವಿವಿಧ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ ಸಿಂಗರೇಣಿ ಕಂಪನಿ ಲಿಮಿಟೆಡ್‌ (ಎಸ್‌ಸಿಸಿಎಲ್)ನೊಂದಿಗೆ 83.08 ಮಿಲಿಯನ್ ಟನ್ ದೀರ್ಘಾವಧಿಯ ಇಂಧನ ಪೂರೈಕೆ ಒಪ್ಪಂದ ಹೊಂದಿದೆ. ಈ 83.08 ಮಿಲಿಯನ್ ಟನ್ ಸಂಪೂರ್ಣ ಪ್ರಮಾಣವು ಕೇಂದ್ರ ಮತ್ತು ರಾಜ್ಯ ವಲಯದ ವಿದ್ಯುತ್ ಸ್ಥಾವರಗಳಿಗೆ ಮಾತ್ರ ಹಂಚಿಕೆಯಾಗಿದೆ. ಖಾಸಗಿ ವಲಯದ ವಿದ್ಯುತ್ ಸ್ಥಾವರಗಳು (IPPs) ಕೇಂದ್ರ ಹಾಗೂ ರಾಜ್ಯ ವಲಯದ ವಿದ್ಯುತ್ ಸ್ಥಾವರಗಳು ಎಂಬ ಅನುಪಾತ 0 : 100 ರಷ್ಟಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಅದಾನಿ ಪವರ್ ಲಿಮಿಟೆಡ್‌ಗೆ ಹಂಚಿಕೆಯಾದ ಕಲ್ಲಿದ್ದಲು ಪ್ರಮಾಣ

ಮಹಾರಾಷ್ಟ್ರದ ರಾಯಪರ್‍‌ ಟಿಪಿಪಿಯಲ್ಲಿನ ಘಟಕಕ್ಕೆ 1,600 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಗೆ ಪ್ರತಿ ವರ್ಷಕ್ಕೆ 8.19 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು 2024ರಲ್ಲಿ ಹಂಚಿಕೆ ಮಾಡಿದೆ. ಮಹಾರಾಷ್ಟ್ರದ ಅದಾನಿ ಪವರ್ ಲಿಮಿಟೆಡ್‌ಗೆ 1,600 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಗೆ 8.16 19 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು 2025ರಲ್ಲಿ ಹಂಚಿಕೆ ಮಾಡಿದೆ. ಆದರೆ ಘಟಕದ ಹೆಸರು ಇನ್ನೂ ಅಂತಿಮಗೊಂಡಿಲ್ಲ ಎಂದು ಕೇಂದ್ರವು ಉತ್ತರದಲ್ಲಿ ಮಾಹಿತಿ ಒದಗಿಸಿದೆ.

 

 

ಮಧ್ಯಪ್ರದೇಶದ ನ್ಯೂಜೋನ್ ಟಿಪಿಪಿಯಲ್ಲಿ ಹಿಂದೂಸ್ಥಾನ್‌ ಥರ್ಮಲ್ ಪ್ರಾಜೆಕ್ಟ್, (800 ಮೆಗಾವ್ಯಾಟ್‌) ಟೊರೆಂಟೋ ಪವರ್‍‌ ಲಿಮಿಟೆಡ್‌ ( 1,600 ಮೆಗಾವ್ಯಾಟ್) ಅನುಪುರದಲ್ಲಿರುವ ಅದಾನಿ ಪವರ್ ಲಿಮಿಟೆಡ್‌ಗೆ (800 ಮೆಗಾವ್ಯಾಟ್‌) ಸೇರಿಸಿದ ಒಟ್ಟಾರೆ 4,1000 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಗೆ 20.16 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು 2024ರಲ್ಲಿ ಹಂಚಿಕೆ ಮಾಡಿದೆ. ಇದರಲ್ಲಿ ಅದಾನಿ ಪವರ್ ಲಿಮಿಟೆಡ್‌ವೊಂದಕ್ಕೇ 4.83 ಮಿಲಿಯನ್ ಮೆಟ್ರಿಕ್ ಟನ್‌ ಕಲ್ಲಿದ್ದಲ್ಲನ್ನು ಹಂಚಿಕೆಮಾಡಿದೆ.

ಅದೇ ರೀತಿ ಬಿಹಾರದ ಪಾಣಿಪತ್‌ನಲ್ಲಿ ಅದಾನಿ ಪವರ್‍‌ ಲಿಮಿಟೆಡ್‌ಗೆ 2,400 ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆಗೆ 10.43 ಮಿಲಿಯನ್ ಮೆಟ್ರಿಕ್ ಟನ್‌ ಕಲ್ಲಿದ್ದಲ್ಲನ್ನು 2025ರಲ್ಲಿ ಹಂಚಿಕೆ ಮಾಡಿದೆ. ಅಸ್ಸಾಂನಲ್ಲಿ ಚಾಪರ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್‌ ಯೋಜನೆ ಹೆಸರಿನಲ್ಲಿ ಅದಾನಿ ಪವರ್ ಲಿಮಿಟೆಡ್‌ಗೆ 3,200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 2025ರಲ್ಲಿ 15.83 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆಯಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಟಿಪಿಪಿ ಅದಾನಿ ಪವರ್ ಲಿಮಿಟೆಡ್‌ಗೆ 1,600 ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆಗೆ 5.72 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲ್ಲನು 2024ರಲ್ಲಿ ಹಂಚಿಕೆ ಮಾಡಿದೆ.

ಕರ್ನಾಟಕಕ್ಕೆ ಹಂಚಿಕೆಯಾಗಿದ್ದೆಷ್ಟು?

ಕರ್ನಾಟಕದಲ್ಲಿ ಒಪಿಜಿ ಪವರ್ ಜನರೇಷನ್‌ ಲಿಮಿಟೆಡ್‌ ( 150 ಮೆಗಾವ್ಯಾಟ್), ಬಾರಧಾರ ಟಿಪಿಪಿ (ಡಿಬಿ ಪವರ್) 125 ಮೆಗಾವ್ಯಾಟ್‌ , ಜಿಎಂಆರ್‍‌ ಎನರ್ಜಿ 100 ಮೆಗಾವ್ಯಾಟ್‌ ಗೆ ಸೇರಿ ಒಟ್ಟಾರೆ 2,000 ಮೆಗಾವ್ಯಾಟ್‌ಗೆ 10.26 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು 2024ರ ಜೂನ್‌ 11ರಿಂದ 26ವರೆಗೆ ಹಂಚಿಕೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿನ ಸಲಬೋನಿ ಟಿಪಿಪಿ ಜೆಎಸ್‌ಡಬ್ಲ್ಯೂ ಎನರ್ಜಿ ಲಿಮಿಟೆಡ್‌ಗೆ 1,600 ಮೆಗಾವ್ಯಾಟ್‌ಗೆ ಒಟ್ಟಾರೆ 16.08 ಮಿಲಿಯನ್ ಮೆಟ್ರಿಕ್ ಟನ್‌ ಕಲ್ಲಿದ್ದಲು ಹಂಚಿಕೆಯಾಗಿದೆ.

 

 

 

 

2024ರಿಂದ 2026ರ ಅವಧಿಯಲ್ಲಿ ಆಗಿರುವ ಪ್ರತಿ ವಿದ್ಯುತ್ ಖರೀದಿ ಒಪ್ಪಂದಗಳಿಂದ ಅದಾನಿ ಗ್ರೂಪ್‌ಗೆ ಅಂದಾಜು 13.27 ಲಕ್ಷ ಕೋಟಿ ರೂ.ಗಳ ಆದಾಯವು ಹರಿದು ಬರಲಿದೆ ಎಂದು ಹೇಳಲಾಗುತ್ತಿದೆ. ಈ ವಿದ್ಯುತ್ ಖರೀದಿ ಒಪ್ಪಂದಗಳು ದೀರ್ಘಾವಧಿಯದ್ದಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಖಾಸಗಿ ಕಂಪನಿಗಳಿಂದ ಕಲ್ಲಿದ್ದಲು ಆಧಾರಿತ ವಿದ್ಯುತ್ ಖರೀದಿಸಲು ರಾಜ್ಯವನ್ನು ನಿರ್ಬಂಧಿಸುತ್ತವೆ.
ಈ ಪೈಕಿ ಕೆಲವು ಕಲ್ಲಿದ್ದಲು ವಿದ್ಯುತ್ ಜೊತೆಗೆ ನವೀಕರಿಸಬಹುದಾದ ಶಕ್ತಿಯನ್ನು ಒದಗಿಸಲಿದೆ. ಈ ಒಪ್ಪಂದಗಳು ಒಪ್ಪಂದದ ಜೀವಿತಾವಧಿಯಲ್ಲಿ ಖಾಸಗಿ ಕಂಪನಿಗೆ, ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವನ್ನು ಖಾತರಿಪಡಿಸುತ್ತವೆ.

ಮಹಾರಾಷ್ಟ್ರ ಟೆಂಡರ್‌ಗಾಗಿ ಬಿಡ್ಡಿಂಗ್ ನಡೆಯುತ್ತಿದ್ದ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ಕಲ್ಲಿದ್ದಲು ವಿದ್ಯುತ್ ಮಾರುಕಟ್ಟೆಯನ್ನು ಮತ್ತೆ ಆರಂಭಿಸುವುದಾಗಿ ಘೋಷಿಸಿತ್ತು. ಆಗಸ್ಟ್ 2024 ರಲ್ಲಿ, ಕೇಂದ್ರ ಸರ್ಕಾರವು 2031-32 ರ ವೇಳೆಗೆ 80 GW ಅನ್ನು ಸೇರಿಸುವುದಾಗಿ ಹೇಳಿತ್ತು . 2024 ರಲ್ಲಿ ಭಾರತ ಹೊಂದಿದ್ದ ಉಷ್ಣ ವಿದ್ಯುತ್ ಸಾಮರ್ಥ್ಯಕ್ಕಿಂತ ಶೇ. 36.8 ರಷ್ಟು ಜಿಗಿತ ಕಂಡಿತ್ತು.

ಬಿಹಾರದಲ್ಲಿ ರಾಜ್ಯವು “ವರ್ಷಕ್ಕೆ 1 ರೂ.ಗೆ” ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಅದಾನಿ ಗ್ರೂಪ್‌ಗೆ 1,000 ಎಕರೆಗಳನ್ನು ಹಸ್ತಾಂತರಿಸಿದೆ. ವಿಜೇತರಿಗೆ ‘ನಾಮಮಾತ್ರ ಗುತ್ತಿಗೆ ಬಾಡಿಗೆ’ಯಲ್ಲಿ ಭೂಮಿಯನ್ನು ಒದಗಿಸಲು ಬಿಹಾರ ಸರ್ಕಾರ ಬದ್ಧವಾಗಿತ್ತು. 4,100 ಮೆಗಾವ್ಯಾಟ್ ಉಷ್ಣ ವಿದ್ಯುತ್ ಖರೀದಿಗೆ ಮಧ್ಯಪ್ರದೇಶದ ಟೆಂಡರ್ ಅನ್ನು ಪರಿಗಣಿಸಿ. ಇದನ್ನು ಬಿಜೆಪಿ ನೇತೃತ್ವದ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಜನವರಿ 2025 ರಲ್ಲಿ ನೀಡಿತ್ತು.

ಜುಲೈ 2025 ರಲ್ಲಿ ಹಿಂದೂಸ್ತಾನ್ ಥರ್ಮಲ್ ಪ್ರಾಜೆಕ್ಟ್ಸ್ ಲಿಮಿಟೆಡ್, ಟೊರೆಂಟ್ ಪವರ್ ಲಿಮಿಟೆಡ್ ಮತ್ತು ಅದಾನಿ ಪವರ್ ಕ್ರಮವಾಗಿ 800 ಮೆಗಾವ್ಯಾಟ್, 1600 ಮೆಗಾವ್ಯಾಟ್ ಮತ್ತು 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಲ್ಲಿ ಗೆಲುವು ಸಾಧಿಸಿದ್ದವು.

ಅದಾನಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ತೆತ್ತು, ಅದರ ಹೊರೆಯನ್ನು ವಿದ್ಯುತ್ ಬಳಸುವ ಭಾರತೀಯರ ತಲೆಗೆ ಹಾಕಿದ್ದಾರೆ ಎಂದು ಬ್ರಿಟಿಷ್ ದೈನಿಕ ಫೈನಾನ್ಷಿಯಲ್ ಟೈಮ್ಸ್‌ ಕೂಡ ಈ ಹಿಂದೆ ವರದಿ ಮಾಡಿತ್ತು. ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹವು 2019ರಿಂದ 2021ರ ನಡುವೆ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಶತಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂಬ ಸಂಗತಿಯನ್ನು ಬೆಳಕಿಗೆ ತಂದಿತ್ತು.

ಕಸ್ಟಮ್ಸ್ ದಾಖಲೆಗಳ ಸಮಗ್ರ ಪರಿಶೀಲನೆ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದ ಫೈನಾನ್ಷಿಯಲ್ ಟೈಮ್ಸ್‌ ಲಕ್ಷಾಂತರ ಭಾರತೀಯ ಗ್ರಾಹಕರು ವಿದ್ಯುತ್‌ಗೆ ಹೆಚ್ಚು ಪಾವತಿಸುವಂತಾಗಿರುವುದಕ್ಕೆ ಅದಾನಿ ಕಂಪನಿಯು ಕೃತಕವಾಗಿ ಇಂಧನ ವೆಚ್ಚವನ್ನು ಹೆಚ್ಚಿಸಿರುವುದೇ ಕಾರಣ ಎಂದು ಸಾಬೀತುಪಡಿಸಿತ್ತು.

2019 ಮತ್ತು 2021 ರ ನಡುವೆ 32 ತಿಂಗಳುಗಳಲ್ಲಿ ಅದಾನಿ ಕಂಪನಿಯು ಇಂಡೋನೇಷ್ಯಾದಿಂದ ಭಾರತಕ್ಕೆ 30 ಬಾರಿ ಕಲ್ಲಿದ್ದಲು ತರಿಸಿಕೊಂಡಿರುವುದು ಪತ್ತೆಯಾಗಿತ್ತು. ಪ್ರತಿ ಸಲವೂ ಆಮದು ದಾಖಲೆಗಳಲ್ಲಿನ ಬೆಲೆಗಳು ರಫ್ತು ಘೋಷಣೆಗಳಿಗಿಂತ ತುಂಬಾ ಹೆಚ್ಚಾಗಿವೆ ಮತ್ತು ಸಾಗಣೆ ಮೌಲ್ಯ 70 ಮಿಲಿಯನ್ ಡಾಲರ್ ಅನ್ನೂ ಮೀರಿ ಹೆಚ್ಚಿತ್ತು.

2024ರಲ್ಲಿ  ಅದಾನಿ ಪವರ್, ಪಶ್ಚಿಮ ಭಾರತದ ರಾಜಸ್ಥಾನದ ಕವಾಯಿಯಲ್ಲಿರುವ ತನ್ನ ಕಲ್ಲಿದ್ದಲು-ವಿದ್ಯುತ್ ಸ್ಥಾವರವನ್ನು 3200 ಮೆಗಾವ್ಯಾಟ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಲು ಅರ್ಜಿ ಸಲ್ಲಿಸಿತ್ತು. ಇದು ಭಾರತದಲ್ಲಿ ಅದಾನಿ ಕಲ್ಲಿದ್ದಲು-ವಿದ್ಯುತ್ ಸ್ಥಾವರಗಳಿಂದ 7720 ಮೆಗಾವ್ಯಾಟ್ ಕಲ್ಲಿದ್ದಲು-ವಿದ್ಯುತ್ ಸಾಮರ್ಥ್ಯದ ಪ್ರಸ್ತಾವಿತ ವಿಸ್ತರಣೆಯ ಭಾಗವಾಗಿತ್ತು. ಇದರ ಜೊತೆಗೆ, ಗ್ರೂಪ್ ಇತರ ಕಂಪನಿಗಳಿಂದ ಅಸ್ತಿತ್ವದಲ್ಲಿರುವ ಮೂರು ಕಲ್ಲಿದ್ದಲು-ವಿದ್ಯುತ್ ಸ್ಥಾವರಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿತ್ತು. 

ಅದಾನಿ ಪವರ್ ಲಿಮಿಟೆಡ್ ಕವಾಯಿ ಸ್ಥಾವರದಲ್ಲಿ  ತಲಾ 800 ಮೆಗಾವ್ಯಾಟ್‌ನ ನಾಲ್ಕು ಘಟಕಗಳನ್ನು ನಿಯೋಜಿಸುವ ಮೂಲಕ 3200 ಮೆಗಾವ್ಯಾಟ್ ಕಲ್ಲಿದ್ದಲು ವಿದ್ಯುತ್ ಸಾಮರ್ಥ್ಯವನ್ನು ಸೇರಿಸಲು ಪರಿಸರ ಅನುಮೋದನೆಗಳನ್ನು ಕೋರಿದೆ. ಸ್ಥಾವರವು ಪ್ರಸ್ತುತ 1320 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ.

Hot this week

ಮುದ್ರಾ ಯೋಜನೆ ಸಾಲದ ಖಾತೆ ತೆರೆಯುವಲ್ಲಿ ಹಿಂದುಳಿದ 8 ಜಿಲ್ಲೆ; ಸಾಲ ನೀಡುವಲ್ಲಿ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ

ಬೆಂಗಳೂರು; ಮುದ್ರಾ ಸಾಲ ಸಹಿತ ವಿವಿಧ ಸ್ವಯಂ ಉದ್ಯಮ ಯೋಜನೆಗಳಡಿ ಕರ್ನಾಟಕ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...
Please Scan to make Your Contribution

Topics

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

Related Articles

Popular Categories

error: Content is protected !!