Friday | September 4, 2026 |

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ ಪರಿಷ್ಕರಣೆಗೆ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬ ಬಗ್ಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಮಾಹಿತಿಯನ್ನೇ ಲಭ್ಯಪಡಿಸಿರಲಿಲ್ಲ ಎಂದು ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಅಭಿಪ್ರಾಯಿಸಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಆಟೋ ಟಿಪ್ಪರ್‍‌, ಕಾಂಪ್ಯಾಕ್ಟರ್‍‌ಗಳನ್ನು ಬಳಸಿ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣೀಕೆ ಮಾಡುತ್ತಿದೆ. ಈ ವಾಹನಗಳಿಗೆ ನೀಡುತ್ತಿರುವ ಬಾಡಿಗೆ ವೆಚ್ಚವನ್ನು ಪರಿಶೀಲಿಸಿರುವ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ದರ ಪರಿಷ್ಕರಣೆ ಕುರಿತು ವಿಶ್ಲೇಷಣೆ ಮಾಡಿದೆ.

21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಮತ್ತು  ಸಮಿತಿ ರಚನೆ ಮಾಡದೆಯೇ ಅನುಮೋದಿಸಿರುವ ಟೆಂಡರ್, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ ಮತ್ತು ಇದರಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ದರ ವಿಶ್ಲೇಷಣೆ, ಸೇವಾ ದರಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದೆ.

ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ನೀಡಿರುವ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ದರ ಪರಿಷ್ಕರಣೆ ಬಗ್ಗೆ  ಸಮಿತಿಯ ಅಭಿಪ್ರಾಯವೇನು?

ಪ್ರಸ್ತಾಪಿತ ಅಂದಾಜುಗಳನ್ನು 2017ನೇ ಸಾಲಿನಲ್ಲಿ ಆಯಾ ವಾರ್ಡ್‌, ಉಪ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕ್ಷೇತ್ರದ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ. ಆಯಾ ವ್ಯಾಪ್ತಿಯ ಮನೆಗಳು, ವಾಣಿಜ್ಯ ಕಟ್ಟಡಗಳು, ಜನಸಂಖ್ಯೆ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. ಇವುಗಳ ಆಧಾರದ ಮೇಲೆ ಬ್ಲಾಕ್‌ಗಳನ್ನು ನಿರ್ಧರಿಸಲಾಗುತ್ತದೆ. ಬ್ಲಾಕ್‌ ಮ್ಯಾಪಿಂಗ್‌, ಡಾಟಾ ಶೀಟ್‌ ಮತ್ತು ಮೈಕ್ರೋ ಪ್ಲಾನಿಂಗ್‌ ಸಹ ಮಾಡಲಾಗುತ್ತಿದ.ಎ ಈ ಮೂಲಕ ಅವಶ್ಯಕವಿರುವ ವಾಹನಗಳನ್ನು ಅಂದಾಜು ಮಾಡಲಾಗಿರುತ್ತದೆ ಎಂದು ವಿವರಿಸಿದೆ.

 

 

ಜನಸಂಖ್ಯೆ ಬೆಳವಣಿಗೆ ದರಗಳನ್ನು ಮತ್ತು ವಾರ್ಡ್‌ಗಳಲ್ಲಿನ ವಾಸ್ತವಿಕ ಪರಿಸ್ಥಿತಗಳನ್ನಾಧರಿಸಿ 2025ರ ಟೆಂಡರ್‍‌ ಗೆ ವಿವಿಧ ಬಗೆಯ ವಾಹನಗಳನ್ನು ಅಂದಾಜಿಸಲಾಗಿದೆ. ಈ ರೀತಿ ಅಂದಾಜಿಸಲಾದ ವಾಹನಗಳಿಗೆ ಅಗತ್ಯವಿರುವ ಬಂಡವಾಳ ವೆಚ್ಚ, ಅದಕ್ಕೆ ಪಾವತಿ ಮಾಡಬೇಕಾದ ಶೇ.10.5ರಷ್ಟು ಬಡ್ಡಿ ವೆಚ್ಚ,  ಸ್ಕ್ರಾಪ್ , ಕಚ್ಚಾ ವಸ್ತು ಮೌಲ್ಯ, ಇಂಧನ ವೆಚ್ಚ, ನಿರ್ವಹಣೆ ವೆಚ್ಚ, ಕನಿಷ್ಟ ವೇತನ ದರಗಳಂತೆ ಸಿಬ್ಬಂದಿ ವೆಚ್ಚ ಮತ್ತು ಇತರೆ ಎಲ್ಲಾ ಪ್ರಾಸಂಗಿಕ ವೆಚ್ಚಗಳನ್ನು ಪರಿಗಣಿಸಲಾಗಿದೆ. ವೈಜ್ಞಾನಿಕ ಸೂತ್ರವನ್ನು ಅಳವಡಿಸಿಕೊಂಡು ವಾಹನದ ಬಾಡಿಗೆ ವೆಚ್ಚವನ್ನು ನಿರ್ಧರಿಸಲಾಗಿದೆ.

‘ಆದರೆ ಪ್ರಸಕ್ತ ಪಾವತಿಸುತ್ತಿರುವ ದರಗಳ 2012ಕ್ಕಿಂತ ಮುಂಚೆ ನಿಗದಿಪಡಿಸಿದ ದರಗಳನ್ನು ಕಾಲಾಕಾಲಕ್ಕೆ ಪರಿಷ್ಕರಿಸಿ ಪಾವತಿ ಮಾಡಲಾಗುತ್ತಿದೆ. ಇಂತಹ ದರಗಳ ಪರಿಷ್ಕರಣೆಗೆ ಯಾವ ಮಾನದಂಡವನ್ನು ಅನುಸರಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯಪಡಿಸಿಲ್ಲ,’ ಎಂದು ಸಮಿತಿಯು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಇಂತಹ ದರಗಳನ್ನು ಪ್ರಸಕ್ತ ಟೆಂಡರ್‍‌ಗೆ ಕ್ರಮಬದ್ಧ ರೀತಿಯಲ್ಲಿ ಅಂದಾಜಿಸಿದ ದರಗಳೊಂದಿಗೆ ಹೋಲಿಕೆ ಮಾಡಿ ಶೇ.14ರಷ್ಟು ಟೆಂಡರ್ ಪ್ರೀಮಿಯಂನ್ನು ಪರಿಗಣಿಸುವುದು ಸಮಂಜಸವಿದೆಯೆ ಎಂಬುದನ್ನು ಆಡಳಿತ ಇಲಾಖೆಯು ನಿರ್ಧರಿಸಬೇಕು ಎಂದು ಸಮಿತಿಯು ಹೇಳಿದೆ.

ಸಮಿತಿಯು ಮಾಡಿರುವ ಈ ಅವಲೋಕನಕ್ಕೆ ಬಿಎಸ್‌ಡಬ್ಲ್ಯೂಎಂಲ್‌, ಹಾಲಿ ಇರುವ ಗುತ್ತಿಗೆಗಳಲ್ಲಿನ ವೆಚ್ಚಗಳು, ಹೊಸ ಟೆಂಡರ್‍‌ಗಳು ಅನುಷ್ಠಾನಗೊಂಡ ನಂತರ ತಗಲುವ ವೆಚ್ಚಗಳನ್ನು ತುಲನೆ ಮಾಡಿದೆ.

 

 

ಪ್ರಸ್ತುತ 5,200 ಆಟೋ ಟಿಪ್ಪರ್‍‌, 615 ಕಾಂಪ್ಯಾಕ್ಟರ್‍‌ಗಳನ್ನು ಬಳಸಿ ಪ್ರತಿದಿನ 5,600 ಟನ್‌ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುತ್ತಿದೆ. ಇದಕ್ಕೆ ಮಾಸಿಕ 48.41 ಕೋಟಿ ವೆಚ್ಚವಾಗುತ್ತಿದೆ. ಪ್ರಸ್ತಾಪಿತ ಟೆಂಡರ್‍‌ಗಳು ಜಾರಿಗೆ ಬಂದ ನಂತರ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ ಸುಧಾರಣೆ  ನಿರೀಕ್ಷಿಸಿದೆ. ಪ್ರತಿದಿನ 6,000 ಮೆಟ್ರಿಕ್ ಟನ್‌ ಘನತ್ಯಾಜ್ಯ ನಿರ್ವಹಣೆ ಕೈಗೊಳ್ಳಬಹುದು. ಹಾಲಿ ಇರುವ ದರಗಳಂತೆ 6,000 ಮೆಟ್ರಿಕ್‌ ಟನ್‌ ಗೆ 51.86 ಕೋಟಿ ರು ಆಗಲಿದೆ. ಆದರೆ ಪ್ರಸ್ತಾಪಿತ ಟೆಂಡರ್‍‌ಗಳು ಜಾರಿಯಾದ ನಂತರ ಟೆಂಡರಿಗಿಟ್ಟ ಮೊತ್ತಕ್ಕಿಂತ ಹೆಚ್ಚುವರಿ ಶೇ. 14 ಪ್ರೀಮಿಯಂ ಪರಿಗಣಿಸಿದ್ದಲ್ಲಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ನಿರ್ವಹಣೆ ಮಾಸಿಕವಾಗಿ 51.58 ಕೋಟಿ ವೆಚ್ಚವಾಗುತ್ತದೆ. ಇದು ಪ್ರಮಾಣವಾರು ಪ್ರಸ್ತುತ ಮಾಡುತ್ತಿರುವ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಪ್ರತಿಪಾದಿಸಿದೆ.

 

 

ಸದ್ಯದ ಟೆಂಡರ್‍‌ನಲ್ಲಿ ಹೆಚ್ಚುವರಿ ಕಾರ್ಯವ್ಯಾಪ್ತಿಯಾಗಿ ಸಣ್ಣ ಪ್ರಮಾಣದ ಕಟ್ಟಡ ಭಗ್ನಾವಶೇಷ 300 ಕೆಜಿವರೆಗೆ ಸಾಗಾಣಿಕೆಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಅಳವಡಿಸಿಕೊಂಡಿದೆ. ಇದರಿಂದ ಪ್ರತಿ ತಿಂಗಳು 3.77 ಕೋಟಿಯಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. 51.58 ಕೋಟಿ ರು.ಗಳಲ್ಲಿ ಈ ಅಂಶವನ್ನು ಪರಿಗಣಿಸದೇ ಇದ್ದಲ್ಲಿ ಒಟ್ಟು 47.81 ಕೋಟಿ ರು ವೆಚ್ಚವಾಗಲಿದೆ. ಹಾಲಿ ಕಾರ್ಯನಿರ್ವಹಣಾ ಮೊತ್ತ 48.41 ಕೋಟಗಿಂತ ಕಡಿಮೆಯಾಗಲಿದೆ. ಇದು ಶೇ. 1.2ರಷ್ಟು ಕಡಿಮೆಯಾಗಲಿದೆ. ಇದರ ಪ್ರಕಾರ ವಾರ್ಷಿಕವಾಗಿ 545.76 ಕೋಟಿ ರು ಆಗಲಿದೆ ಎಂದು ಸಮಜಾಯಿಷಿ ನೀಡಿದೆ.

ಅದೇ ರೀತಿ 33 ಪ್ಯಾಕೇಜ್‌ಗಳ ಅಂದಾಜು ಪಟ್ಟಿ ತಯಾರಿಸುವಾಘ ಆಟೋ ಟಿಪ್ಪರ್‍‌ಗಳು ಮತ್ತು ಕಾಂಪ್ಯಾಕ್ಟ್‌ಗಳೀಗೆ ಪ್ರತಿ ತಿಂಗಳ ದರಗಳನ್ನು ವಿಶ್ಲೇ‍ಷಣೆ ಮಾಡುವುದರಲ್ಲಿ ವ್ಯತ್ಯಾಸವಿದೆ ಎಂದು ಬಿಎಸ್‌ಡಬ್ಲ್ಯೂಎಂಎಲ್‌ ಹೇಳಿದೆ. ಈ 33 ಪ್ಯಾಕೇಜ್‌ಗಳಿಗೆ ಅಂದಾಜು ತಯಾರಿಸುವಾಗ ದರಗಳ ವಿಶ್ಲೇ‍ಷಣೆಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಪ್ರತಿ ವರ್ಷಕ್ಕೆ ವಾಹನದ ಮೊತ್ತದಲ್ಲಿ ಶೇ.10ರಷ್ಟನ್ನು ಪರಿಗಣಿಸಬೇಕಿದೆ.

 

 

ಆದರೆ ದರ ವಿಶ್ಲೇಷಣೆಯಲ್ಲಿ ವಾಹನದ ಗರಿಷ್ಠ ಸೇವಾವಧಿ ಏಳು ವರ್ಷಕ್ಕೆ ಶೇ.10ರಷ್ಟನ್ನು ಸೇವಾ ದರಗಳನ್ನು ಪರಿಗಣಿಸಿದಾಗ ದರಗಳಲ್ಲಿ ವ್ಯತ್ಯಾಸವು ಶೇ. 0.16ರಿಂದ ಶೇ.9.12ರವರೆಗೆ ಕಂಡು ಬರುತ್ತದೆ ಎಂದು ವಿವರಿಸಿದೆ.

ಲೋಕೋಪಯೋಗಿ ಇಲಾಖೆಯ ದರಪಟ್ಟಿ ಅನುಸಾರ ಬೆಂಗಳೂರು ವ್ಯಾಪ್ತಿಗೆ ಸಮಿತಿ ಮಾಡಿರುವ ಶಿಫಾರಸ್ಸಿನಂತೆ ಏರಿಯಾ ವೇಯ್ಟೇಜ್‌ ಶೇ.10ನ್ನು ಪರಿಗಣಿಸದೇ ಹೊರತುಪಡಿಸಿದರೂ ಸಹ ಲೋಕೋಪಯೋಗಿ ಸಂಪುಟ 1ರ ಪ್ರಕಾರ ಏಕರೂಪ ದರಪಟ್ಟಿ, ಓವರ್‍‌ಹೆಡ್‌ ಶುಲ್ಕ, ಗುತ್ತಿಗೆದಾರರ ಲಾಭಾಂಶ ಶೇ.10ರಷ್ಟನ್ನು ಪರಿಗಣಿಸಬೇಕಿದೆ. ಒಟ್ಟಾರೆಯಾಗಿ ಶೇ. 12ರಷ್ಟು ಹೆಚ್ಚುವರಿ ಪರಿಗಣಿಸಬೇಕಿದೆ. ಕಸ ಸಂಗ್ರಹಣೆ, ಕೆಲಸಗಳು ನೈರ್ಮಲ್ಯವಲ್ಲದ  ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ ಶೇ.12ರಷ್ಟನ್ನು ಹೆಚ್ಚುವರಿ ಪರಿಗಣಿಸಬೇಕಿದೆ.

 

 

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ಅಂಶಗಳನ್ನು ಸರಿಪಡಿಸಿಕೊಂಡು ಈ ಹಂತದಲ್ಲಿ ಅಂದಾಜು ಮೊತ್ತ ಪರಿಷ್ಕರಿಸಿದಲ್ಲಿ ಯೋಜನೆ ವೆಚ್ಚವು ಶೇ. 32ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದಿರುವ ಬಿಎಸ್‌ಡಬ್ಲ್ಯೂಎಂಎಲ್‌, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ, ನಗರ ಸ್ವಚ್ಚತೆ ದೃಷ್ಟಿಯಿಂದ ಈ ಹೊಸ ವ್ಯವಸ್ಥೆಯನ್ನು ತ್ವರಿತವಾಗಿ ಜಾರಿಗೆ ತರಬೇಕಿರುವುದು ಅನಿವಾರ್ಯವಾಗಿದೆ ಎಂದು ವಿವರಿಸಿದೆ.

‘ಆದ್ದರಿಂದ ಶೇ. 14ರಷ್ಟು ಟೆಂಡರ್ ಪ್ರೀಮಿಯಂನ್ನು ಹಾಲಿ ದರಗಳೊಂದಿಗೆ ಹೋಲಿಕೆ ಮಾಡಿ ಸಮರ್ಥಿಸಿಲ್ಲ. ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಅಂದಾಜು, ಮರು ಪರಿಶೀಲನೆಯಿಂದ ದೃಢಪಟ್ಟ ವೆಚ್ಚದ ವ್ಯತ್ಯಾಸಗಳು, ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯಲ್ಲಿ ಮಾರುಕಟ್ಟೆಯಿಂದ ಹೊರಹೊಮ್ಮಿದ ದರಗಳು, ದರ ಸಂಧಾನದ ಫಲಿತಾಂಶ, ಹೆಚ್ಚಿದ ಕಾರ್ಯವ್ಯಾಪ್ತಿ ಹಾಗೂ ಸಾರ್ವಜನಿಕ ಸೇವೆಯ ತುರ್ತು ಅಗತ್ಯವನ್ನು ಸಮಗ್ರವಾಗಿ ಪರಿಗಣಿಸಿಯೇ ಈ ಪ್ರೀಮಿಯಂ ಶಿಫಾರಸ್ಸು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿರುವುದು ವರದಿಯಿಂದ ಗೊತ್ತಾಗಿದೆ.

 

 

ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 147 ಬಿಡ್‌ ಗಳು ಸ್ವೀಕೃತಿಯಾಗಿವೆ. ತಾಂತ್ರಿಕ ಮೌಲ್ಯಮಾಪನ, ಮೇಲ್ಮನವಿ ಪ್ರಕ್ರಿಯೆ ಹಾಗೂ ದರ ಸಂಧಾನದ ನಂತರ ಯಶಸ್ವಿಯಾದ 21 ಪ್ಯಾಕೇಜ್‌ಗಳಲ್ಲಿ ಶೇ. 4.5ರಿಂದ ಶೇ.14ರವರೆಗೆ ಟೆಂಡರ್ ಪ್ರೀಮಿಯಂ ದರಗಳು ಲಭಿಸಿವೆ. ಹೀಗಾಗಿ ಶೇ. 14ರಷ್ಟು ಟೆಂಡರ್ ಪ್ರೀಮಿಯಂ ಯಾವುದೇ ಪೂರ್ವನಿರ್ಧರಿತ ಆಡಳಿತಾತ್ಮಕ ನಿರ್ಧಾರವಲ್ಲ, ಅದು ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯಿಂದ ಮಾರುಕಟ್ಟೆಯು ನಿರ್ಧರಿಸಿದ ದರವಾಗಿದೆ ಎಂದು ವಿವರಿಸಿದೆ.

 

 

ಬಿಎಸ್‌ಡಬ್ಲ್ಯೂಎಂಎಲ್ ಮಾಡಿರುವ ಈ ಲೆಕ್ಕಾಚಾರವನ್ನೂ ಅಂಜುಂ ಪರ್ವೆಜ್‌ ಸಮಿತಿಯು ವಿಶ್ಲೇಷಿಸಿದೆ. ಬಿಎಸ್‌ಡಬ್ಲ್ಯೂಎಂಎಲ್‌, ಹಾಲಿ ಇರುವ ಗುತ್ತಿಗೆಗಳಲ್ಲಿನ ವೆಚ್ಚಗಳು ಹಾಗೂ ಹೊಸ ಟೆಂಡರ್‍‌ಗಳು ಅನುಷ್ಠಾನಗೊಂಡ ನಂತರ ತಗಲುವ ವೆಚ್ಚಗಳನ್ನು ತುಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಅಂದಾಜುಗಳನ್ನು ತಯಾರಿಸುವಾಗ ದರಗಳ ವಿಶ್ಲೇಷಣೆಯಲ್ಲಿ ಶೇ. 10ರಷ್ಟು ಸೇವಾ ದರಗಳನ್ನು ಪರಿಗಣಿಸಿ ಪರಿಷ್ಕೃತ ದರಗಳನ್ನು ಮೂಲ ಅಂದಾಜು ದರಗಳೊಂದಿಗೆ ಹೋಲಿಕೆ ಮಾಡಿ ಟೆಂಡರ್ ಪ್ರೀಮಿಯಂ ಕುರಿತು ಸಮರ್ಥನೆ ನೀಡಿದೆ.

 

 

‘ಸಾಮಾನ್ಯವಾಗಿ ಶೇ. 10ರಷ್ಟು ಸೇವಾ ದರಗಳು ಸಾಮಾನ್ಯ ದರ ನಿಗದಿ ಪ್ರಕ್ರಿಯೆಯ ಭಾಗವಾಗುವುದಿಲ್ಲ. ಹೀಗಾಗಿ ಆಡಳಿತ ಇಲಾಖೆಯೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು,’ ಎಂದು ಸಮಿತಿಯು ಹೇಳಿದೆ.

ಸಮಿತಿಯು ಈ ಅಭಿಪ್ರಾಯಕ್ಕೂ ಬಿಎಸ್‌ಡಬ್ಲ್ಯೂಎಂಎಲ್‌ ತನ್ನ ನಿಲುವನ್ನು ತಿಳಿಸಿದೆ.

‘ಪ್ರಸ್ತುತ ಮೂಲ ಅಂದಾಜುಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಯಾವುದೇ ಸೇವಾ ದರಗಳನ್ನು ಪ್ರತ್ಯೇಕವಾಗಿ ಸೇರಿಸಿ ಅಂದಾಜುಗಳನ್ನು ರೂಪಿಸಿಲ್ಲ. ಬದಲಿಗೆ 2017ರಲ್ಲಿ ಸಂಗ್ರಹಿಸಲಾದ ಕ್ಷೇತ್ರಮಟ್ಟದ ಮಾಹಿತಿ ಆಧರಿಸಿದೆ. ವಾರ್ಡ್‌ವಾರು, ಮನೆ, ವಾಣಿಜ್ಯ ಸಂಸ್ಥೆಗಳು, ಜನಸಂಖ್ಯೆ, ಬ್ಲಾಕ್‌ ಮ್ಯಾಪಿಂಗ್ , ಮೈಕ್ರೋ ಪ್ಲಾನಿಂಗ್‌ ಕೈಗೊಂಡಿದೆ. ಈ ಮೂಲಕ ವಾಹನಗಳ ಸಂಖ್ಯೆಯನ್ನು ನಿರ್ಧರಿಸಿದೆ. ಹೀಗಾಗಿ ಟೆಂಡರ್‍‌ನ ಮೂಲ ಅಂದಾಜುಗಳು ಸಂಪೂರ್ಣವಾಗಿ ವೈಜ್ಞಾನಿಕ ದರ ವಿಶ್ಲೇಷಣೆಯ ಆಧಾರದ ಮೇಲೆ ರೂಪಿಸಲ್ಪಟ್ಟಿವೆ,’ ಎಂದು ಸಮರ್ಥಿಸಿಕೊಂಡಿದೆ.

 

 

ದರ ವಿಶ್ಲೇಷಣೆಯ ಮರು ಪರಿಶೀಲನೆ ಸಂದರ್ಭದಲ್ಲಿ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ವೆಚ್ಚಗಳ ಏರಿಳಿತವನ್ನು ವಿವರಿಸುವ ಪೂರಕ ಹಣಕಾಸು ವಿಶ್ಲೇಷಣೆಯ ಭಾಗವಾಗಿ ಮಾತ್ರ ಇದನ್ನು ಉಲ್ಲೇಖಿಸಿದೆ. ಹೀಗಾಗಿ ಶೇ. 14ರಷ್ಟು ಟೆಂಡರ್ ಪ್ರೀಮಿಯಂನ್ನು ಶೇ. 10ರಷ್ಟು ಸೇವಾ ದರಗಳನ್ನು ಆಧರಿಸಿ ನಿರ್ಧರಿಸಲಾಗಿದೆ ಎಂದು ಪರಿಗಣಿಸಬಾರದು ಎಂದು ಸಮಿತಿಗೆ ಹೇಳಿದೆ. ವಿವಿಧ ವರ್ಗಗಳ ವಾಹನಗಳಲ್ಲಿ ಸುಮಾರು ಶೇ. 6.ರಿಂದ ಶೇ.15.17ರವರೆಗೆ ವೆಚ್ಚದ ವ್ಯತ್ಯಾಸ ಕಂಡುಬಂದಿದೆ. ಇದು ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಮೂಲ ಅಂದಾಜುಗಳಿಗೆ ಹೋಲಿಸಿದರೇ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚಿನ ದರಗಳು ಲಭಿಸುವುದು ಸಹಜವಾಗಿರುವುದನ್ನು ದೃಢಪಡಿಸುತ್ತದೆ ಎಂದು ಹೇಳಿದೆ.

ಅದೇ ರೀತಿ ಸಮಿತಿಯು ಕಸ ಸಾಗಾಣಿಕೆ ಸಾಮರ್ಥ್ಯದ ಕುರಿತು ಬೆಳಕು ಚೆಲ್ಲಿದೆ.

 

 

ಪ್ರಸಕ್ತ 10,400 cum ಸಾಮರ್ಥ್ಯದ 5,200 ವಾಹನಗಳಿಂದ 5,600 ಟನ್ ಘನತ್ಯಾಜ್ಯವನ್ನು ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ. ಭಾರತ ಸರ್ಕಾರದ ಕೈಪಿಡಿ ಪ್ರಕಾರ ಘನತ್ಯಾಜ್ಯ  ಸಾಂದ್ರತೆಯನ್ನು 500 ಕೆಜಿ/m3  ರಂತೆ ಪರಿಗಣಿಸಿದಲ್ಲಿ 5,200 ಟನ್ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದು. ಪ್ರಸಕ್ತ ಬಿಎಸ್‌ಡಬ್ಲ್ಯೂಎಂಎಲ್‌ 5,600 ಟನ್ ಘನತ್ಯಾಜ್ಯ ಸಂಗ್ರಹಣೆ ಸಾಗಾಣಿಕೆ ಮಾಡುತ್ತಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯದ ಸಾಂದ್ರತೆ 550 ಕೆ ಜಿ / m3 ಆಗಿದೆ. ಮತ್ತು ಟೆಂಡರ್‍‌ನಲ್ಲಿ ಅಂದಾಜಿಸಿದಂತೆ 11736 cum  ಸಾಮರ್ಥ್ಯದ ವಾಹನಗಳಿಂದ ಗರಿಷ್ಠ 6,455 ಟನ್ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದು ಎಂದು ಸಮಿತಿಯು ಗಮನಿಸಿದೆ.

 

 

ಈ ಅಂಶಕ್ಕೂ ಬಿಎಸ್‌ಡಬ್ಲ್ಯೂಎಂಎಲ್‌ ತನ್ನ ಸಮರ್ಥನೆ ಒದಗಿಸಿದೆ.

 

 

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಬಿಎಸ್‌ಡಬ್ಲ್ಯೂಎಂಎಲ್‌ ನಿಂದ ಸುಮಾರು 10,400 ಘನ ಮೀಟರ್ ಸಾಗಾಣಿಕೆ ಸಾಮರ್ಥ್ಯ ವಾಹನಗಳ ಮೂಲಕ ಪ್ರತಿದಿನ 5,600 ಮೆಟ್ರಿಕ್ ಟನ್ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮಾಡುತ್ತಿದೆ. ಇದರಿಂದ ಬೆಂಗಳೂರು ನಗರದಲ್ಲಿಲ ಉತ್ಪಾದನೆಯಾಗುವ ಘನತ್ಯಾಜ್ಯ ವಾಸ್ತವಿಕ ಸಾಂದ್ರತೆಯು ಸುಮಾರು 550 ಕೆ ಜಿ ಘನ ಮೀಟರ್‍‌ ಇದೆ.

ಈ ವಾಸ್ತವಿಕ ಕಾರ್ಯಾಚರಣೆ ಮಾಹಿತಿ ಪರಿಗಣಿಸಿ ಹೊಸ ಟೆಂಡರ್‍‌ನಲ್ಲಿ 11,736 ಘನ ಮೀಟರ್ ಸಾಗಾಣಿಕೆ ಸಾಮರ್ಥ್ಯದ ವಾಹನಗಳನ್ನು ಅಂದಾಜಿಸಿದೆ. ಈ ಮೂಲಕ ಸುಮಾರು 6,455 ಮೆಟ್ರಿಕ್ ಟನ್ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದು ಎಂದು ಅಂದಾಜಿಸಿದೆ ಎಂದು ವಿವರಿಸಿದೆ.

ಇದಲ್ಲದೇ ಒಪ್ಪಂದದ ಷರತ್ತುಗಳ ಉಲ್ಲಂಘನೆ ಅಥವಾ ಸೇವೆಯ ಅಸಮರ್ಪಕ ನಿರ್ವಹಣೆ ಕಂಡುಬಂದಲ್ಲಿ ಟೆಂಡರ್ ದಸ್ತಾವೇಜಿನ ದಂಡದ ಸ್ವರೂಪದಲ್ಲಿರುವ ನಿಬಂಧನೆಗಳ ಅನ್ವಯ ದಂಡ ವಿಧಿಸಲಾಗುತ್ತದೆ. ಇದರ ಕಾರ್ಯನಿರ್ವಹಣೆ ಸುಧಾರಿಸಲು ನಿರ್ದೇಶನ ನೀಡುವುದು ಮತ್ತು ಅಗತ್ಯವಿದ್ದಲ್ಲಿ ಒಪ್ಪಂದವನ್ನು ರದ್ದುಗೊಳಿಸುವ ಅಧಿಕಾರವನ್ನು ಬಿಎಸ್‌ಡಬ್ಲ್ಯೂಎಂಎಲ್‌ ಕಾಯ್ದಿರಿಸಿಕೊಂಡಿದೆ ಎಂದು ವಿವರಿಸಿದೆ.

 

4,791.95 ಕೋಟಿ ಮೊತ್ತದ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ ಪ್ರಕರಣ; ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣನೆಗೆ ಅಂಜುಂ ಪರ್ವೇಜ್ ಸಮಿತಿ ಆಕ್ಷೇಪ, ವರದಿ ಬಹಿರಂಗ

 

ಶೇ.14 ರ ಟೆಂಡರ್ ಪ್ರೀಮಿಯಂಗೆ ಅಂಜುಂ ಪರ್ವೇಝ್‌ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಕನ್ಸೋರ್ಟಿಯಂ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ; ವೈಯಕ್ತಿಕ ಹೊಣೆಗಾರಿಕೆ ದುರ್ಬಲ, ಒಪ್ಪಂದ ನಿರ್ವಹಣೆ ಸಂಕೀರ್ಣ, ಲೀಡ್‌ ಮೆಂಬರ್‍‌ಗೆ ಅಗತ್ಯ ಅನುಭವವೇ ಇಲ್ಲ

 

ಕನ್ಸೋರ್ಟಿಯಂ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿರುವ ಕಾರಣ ವೈಯಕ್ತಿಕ ಹೊಣೆಗಾರಿಕೆ ದುರ್ಬಲವಾಗುತ್ತದೆ ಎಂದು ಅಂಜುಂ ಪರ್ವೇಝ್‌ ಸಮಿತಿಯು ಆತಂಕ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

ಟೆಂಡರ್‍‌ದಾರರು ನೀಡಿದ್ದ ಅಂಕಿ ಅಂಶ ಆಧರಿಸಿ ಮೌಲ್ಯಮಾಪನ; ಬಿಎಸ್‌ಡಬ್ಲ್ಯೂಎಂಎಲ್‌ನ ಮತ್ತೊಂದು ಮುಖ ಅನಾವರಣ ಮಾಡಿದ ಅಂಜುಂ ಪರ್ವೇಜ್‌ ಸಮಿತಿ

 

ಟೆಂಡರ್‍‌ದಾರರು ನೀಡಿದ್ದ ಅಂಕಿ ಅಂಶಗಳನ್ನಾಧರಿಸಿ ಬಿಎಸ್‌ಡಬ್ಲ್ಯೂಎಂಎಲ್‌ ಮೌಲ್ಯಮಾಪನ ಮಾಡಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

 

ಕನ್ಸೋರ್ಟಿಯಂ ಷರತ್ತು ಮತ್ತು ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆಯೂ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್‌ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

Hot this week

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

ಹೆಣ್ಣುಮಕ್ಕಳ ಮಾರಾಟ ಜಾಲದ ವಿರುದ್ಧ ಪ್ರಕರಣ ದಾಖಲು, ಆದರೂ ಹೆಣ್ಣು ಮಕ್ಕಳ ಮಾರಾಟ ಜಾಲವಿಲ್ಲವೆಂದ ಸಚಿವ; 3 ವರ್ಷವಾದರೂ ಪತ್ತೆಯಾಗಿಲ್ಲ 3,509 ಮಂದಿ ಮಹಿಳೆ, ಅಪ್ರಾಪ್ತರು

ಬೆಂಗಳೂರು; ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದರೂ...
Please Scan to make Your Contribution

Topics

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

Related Articles

Popular Categories

error: Content is protected !!