Thursday | July 23, 2026 |

ಮುದ್ರಾ ಯೋಜನೆ ಸಾಲದ ಖಾತೆ ತೆರೆಯುವಲ್ಲಿ ಹಿಂದುಳಿದ 8 ಜಿಲ್ಲೆ; ಸಾಲ ನೀಡುವಲ್ಲಿ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ

ಬೆಂಗಳೂರು; ಮುದ್ರಾ ಸಾಲ ಸಹಿತ ವಿವಿಧ ಸ್ವಯಂ ಉದ್ಯಮ ಯೋಜನೆಗಳಡಿ ಕರ್ನಾಟಕ ರಾಜ್ಯದಲ್ಲಿ 2.08 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ಹಾಗೂ ಸಹಾಯಧನ ಗ್ಯಾರಂಟಿ ಅನುಮೋದನೆ ನೀಡಲಾಗಿದೆ. ಕಿರು ಮತ್ತು ಸಣ್ಣ  ಉದ್ಯಮಗಳಿಗೆ ನೀಡುವ ಸಾಲ ಯೋಜನೆಯಡಿ  ಸಾಲ ಖಾತೆಗಳನ್ನು ತೆರೆಯುವುದರಲ್ಲಿ  ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಗದಗ್, ಕೊಡಗು, ಉತ್ತರ ಕನ್ನಡ ಮತ್ತು ಯಾದಗಿರಿ  ಜಿಲ್ಲೆಯು ಹಿಂದುಳಿದಿದೆ.

ಅಲ್ಲದೇ  ಖಾಸಗಿ ಬ್ಯಾಂಕುಗಳು ದೊಡ್ಡ್ರ ಪ್ರಮಾಣದಲ್ಲಿ ಸಾಲ ಮಂಜೂರು ಮಾಡಿವೆ. ಮತ್ತು ಸರಕಾರದ ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳೂ ಹಿಂದುಳಿದಿವೆ. ಈಚೆಗಷ್ಟೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

ಅದೇ ರೀತಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 2023ರ ಏಪ್ರಿಲ್‌ನಿಂದ 2026ರ ಮಾರ್ಚ್‌ 31ರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 1,55,607 ಖಾತೆಗಳಿವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೇ ಉಡುಪಿ ಹಿಂದುಳಿದಿದೆ. ಈ ಜಿಲ್ಲೆಗೆ 2,125.66  ಕೋಟಿಯಷ್ಟೇ ಸಾಲ ಮಂಜೂರಾಗಿದೆ. ಈ ಪೈಕಿ 2,114.14 ಕೋಟಿ ರು ಸಾಲ ವಿತರಿಸಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗೆ ಜುಲೈ 21ರಂದು ರಾಜ್ಯ ಹಣಕಾಸು ಖಾತೆ ಸಚಿವ ಪಂಕಜ್ ಚೌಧರಿ ಅವರು ನೀಡಿರುವ  ಲಿಖಿತ ಉತ್ತರದಲ್ಲಿ ಈ ಮಾಹಿತಿಯಿದೆ.

 

 

ರಾಜ್ಯದಲ್ಲಿ ಮುದ್ರಾ ಯೋಜನೆಯಡಿ ಖಾಸಗಿ ವಲಯದ ಬ್ಯಾಂಕುಗಳು 5 ಲಕ್ಷ ಮಂದಿಗೆ 38 ಸಾವಿರ ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದ್ದರೆ. ಸಾರ್ವಜನಿಕ ರಂಗದ ಬ್ಯಾಂಕುಗಳು  33 ಸಾವಿರ ಕೋಟಿ ರೂಪಾಯಿ 15,11,751 ಖಾತೆಗಳಿಗೆ ಬಿಡುಗಡೆ ಮಾಡಿವೆ. ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ನೀಡಿದ ಉತ್ತರ ಪ್ರಕಾರ ಮುದ್ರಾ ಯೋಜನೆಯಡಿ ರಾಜ್ಯದಲ್ಲಿ 2023ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ 1,42,979.71 ಕೋಟಿ ರೂಪಾಯಿ ಸಾಲ ಮಂಜೂರಾಗಿದ್ದು, 1,42,470.51 ಕೋಟಿ ರೂಪಾಯಿ ವಿತರಿಸಲಾಗಿದೆ.

ಜಿಲ್ಲಾವಾರು ಅಂಕಿ-ಅಂಶಗಳಲ್ಲಿ ಉಡುಪಿ ಕಡೆಯ ಸ್ಥಾನದಲ್ಲಿದೆ. ಉಡುಪಿಯಲ್ಲಿ 1,32,940 ಖಾತೆಗಳನ್ನು ತೆರೆದಿದೆ. ಈ ಖಾತೆಗಳಿಗೆ 2,1215.66 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 2,114.14 ಕೋಟಿ ರು ಸಾಲ ವಿತರಣೆಯಾಗಿದೆ. ಅದೇ ರೀಗತಿ ಚಿಕ್ಕಬಳ್ಳಾಪುರದಲ್ಲಿ  ತೆರೆದಿರುವ 2,63,609 ಸಾಲದ ಖಾತೆಗಳಿಗೆ 2,329.22 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 2,328.86 ಕೋಟಿ ರು ಸಾಲ ವಿತರಣೆಯಾಗಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 2,76,330 ಸಾಲದ ಖಾತೆಗಳಿಗೆ 3,155.52 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 3,145.94 ಕೋಟಿ ರು ಸಾಲ ವಿತರಣೆಯಾಗಿದೆ.

 

ದಕ್ಷಿಣ ಕನ್ನಡದಲ್ಲಿ 2,17,430 ಸಾಲದ ಖಾತೆಗಳಿಗೆ ಮಂಜೂರಾಗಿದ್ದ  3,021.84 ಕೋಟಿ ರು ಸಾಲದ ಪೈಕಿ 2,997.78 ಕೋಟಿ ರು ಸಾಲ ವಿತರಣೆಯಾಗಿದೆ. ಗದಗ್‌ನಲ್ಲಿ 2,11,961 ಸಾಲದ ಖಾತೆಗಳಿಗೆ ಮಂಜೂರಾಗಿದ್ದ 1,807.51 ಕೋಟಿ ರು ಸಾಲದ ಪೈಕಿ 1,803.30 ಕೋಟಿ ರು ಸಾಲ ವಿತರಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2,77,360 ಸಾಲದ ಖಾತೆಗಳಿಗೆ ಮಂಜೂರಾಗಿದ್ದ 3,403.17 ಕೋಟಿ ರು ಸಾಲದ ಪೈಕಿ 3,395.13 ಕೋಟಿ ರು ಸಾಲ ಮಂಜೂರಾಗಿದೆ ಎಂದು ಕೇಂದ್ರವು ಅಂಕಿ ಅಂಶಗಳನ್ನು ಒದಗಿಸಿದೆ.

ಬೆಂಗಳೂರು ನಗರ 18,143.30 ಕೋಟಿ ರೂಪಾಯಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರ ಬೆಳಗಾವಿ (9,645.34 ಕೋಟಿ ರೂಪಾಯಿ) ಹಾಗೂ ಮೈಸೂರು (8,286.19 ಕೋಟಿ) ಜಿಲ್ಲೆಯಿದೆ. ಒಟ್ಟಾರೆ 31 ಜಿಲ್ಲೆ ಇತರೆ ಲೆಕ್ಕದಲ್ಲಿ ಒಟ್ಟಾರೆ 1,50,62,763 ಸಾಲದ ಖಾತೆಗಳಿಗೆ ಮಂಜೂರಾಗಿದ್ದ 1,42,979.71 ಕೋಟಿ ರು ಪೈಕಿ 1,42,470.51 ಕೋಟಿ ರು ಸಾಲ ವಿತರಣೆಯಾಗಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಪ್ರಸಕ್ತ ಹಣಕಾಸು ವರ್ಷ 2026 ಜೂನ್ ತನಕ ರಾಜ್ಯದಲ್ಲಿ ಖಾಸಗಿ ವಲಯದ ಬ್ಯಾಂಕುಗಳು 10 ಸಾವಿರ ಕೋಟಿ ರೂಪಾಯಿ ವಿತರಣೆ ಮಾಡಿದೆ.  ಇದೇ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಕೇವಲ 8,271 ಕೋಟಿ ವಿತರಣೆ ಮಾಡಿವೆ.  ಇವುಗಳಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಮತ್ತು ಬ್ಯಾಂಕ್ ಫ್ ಬರೋಡ (ಸಿಂಡಿಕೇಟ್ ಬ್ಯಾಂಕ್ ಇದರಲ್ಲಿ ವಿಲೀನ ಆಗಿದೆ) ರಾಜ್ಯದ ಪ್ರಮುಖ ನಾಲ್ಕು ಬ್ಯಾಂಕುಗಳ  7 ಸಾವಿರ ಕೋಟಿ ರೂಪಾಯಿ ಸಾಲ ನೀಡಿವೆ.

ಮುದ್ರಾ ಸ್ವಉದ್ಯಮ ಸಾಲ ಯೋಜನೆಯಡಿ ಶಿಶು, ಕಿಶೋರ, ತರುಣ್  ಎಂಬ ಮೂರು ವಿಧದ ಸಾಲ ಯೋಜನೆ ಇದೆ. ಮುದ್ರಾ ಯೋಜನೆಯ ಪ್ರಯೋಜನ ಪಡೆದು ಕೊಳ್ಳುವಲ್ಲಿ ದಕ್ಷಿಣ ಕನ್ನಡ, ತುಮಕೂರುಸ ಬೆಳಗಾವಿ, ಮೈಸೂರು ಜಿಲ್ಲೆಗಳು ಮಂಚೂಣಿಯಲ್ಲಿವೆ. ಮುದ್ರಾ ಸಾಲ ಪಡೆಯುವಲ್ಲಿ ಯಾದಗಿರಿ ಮತ್ತು ಚಾಮರಾಜನಗರ ಜಿಲ್ಲೆಗಳು ಕೊನೆಯ ಸಾಲಿನಲ್ಲಿವೆ.

ಸಚಿವರು ಲೋಕಸಭೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ 2023-24 ಮತ್ತು 2024-25ರಲ್ಲಿ ಕರ್ನಾಟಕದಲ್ಲಿ 4,095 ಸಾಲಗಳಿಗೆ 900.65 ಕೋಟಿ ರೂಪಾಯಿ ಮಂಜೂರಾಗಿದೆ.   2,938 ಖಾತೆಗಳಿಗೆ 591.24 ಕೋಟಿ ರೂಪಾಯಿ  ವಿತರಿಸಲಾಗಿದೆ. ಈ ಯೋಜನೆಯಲ್ಲಿ ಬೆಂಗಳೂರು ನಗರ ಜಿಲ್ಲೆ 289.86 ಕೋಟಿ ರೂಪಾಯಿಯೊಂದಿಗೆ ಅಗ್ರಸ್ಥಾನದಲ್ಲಿದೆ.

ಕಿರು ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಗ್ಯಾರಂಟಿ ಸಿಜಿಟಿಎಂಎಸ್‌ಇ (CGTMSE) ಯೋಜನೆಯಡಿ ಇದೇ ಅವಧಿಯಲ್ಲಿ 4,72,458 ಸಾಲಗಳಿಗೆ 64,142 ಕೋಟಿ ರೂಪಾಯಿ  ಮೊತ್ತದ ಕ್ರೆಡಿಟ್ ಗ್ಯಾರಂಟಿ ಅನುಮೋದಿಸಲಾಗಿದೆ. ಈ ವಿಭಾಗದಲ್ಲೂ ಬೆಂಗಳೂರು ನಗರ ಜಿಲ್ಲೆ 28,073 ಕೋಟಿ ರೂಪಾಯಿಯೊಂದಿಗೆ ಮೊದಲ ಸ್ಥಾನದಲ್ಲಿದೆ.

ಉತ್ಪಾದಕ ವಲಯದಲ್ಲಿ 707 ಖಾತೆಗಳನ್ನು ತೆರೆದಿದೆ. ಈ ಖಾತೆಗಳಿಗೆ 197.04 ಕೋಟಿ ರುಪಾಯಿ ಸಾಲ ಮಂಜೂರಾಗಿದೆ. ಈ ಪೈಕಿ 116.09 ಕೋಟಿ ರು ಸಾಲ ವಿತರಣೆಯಾಗಿದೆ. ಸೇವಾ ವಲಯದಲ್ಲಿ 1,406 ಖಾತೆಗಳಿಗೆ ಮಂಜೂರಾಗಿರುವ 292.16 ಕೋಟಿ ರು ಸಾಲದ ಪೈಕಿ 209.22 ಕೋಟಿ ರು ವಿತರಣೆಯಾಗಿದೆ. ಟ್ರೇಡಿಂಗ್‌ ವಲಯದಲ್ಲಿ ತೆರೆದಿರುವ  1,355 ಸಾಲದ ಖಾತೆಗಳಿಗೆ 291.63 ಕೋಟಿ ರು ಸಾಲ ಮಂಜೂರಾಗಿದೆ. ಈ ಪೈಕಿ 196.82 ಕೋಟಿ ರು ಸಾಲ ವಿತರಣೆಯಾಗಿದೆ.

 

ಕೃಷಿ ಮತ್ತು ಇದಕ್ಕೆ ಪೂರಕವಾದ ವಲಯಗಳಲ್ಲಿ ತೆರೆದಿರುವ  627 ಸಾಲದ ಖಾತೆಗಳಿಗೆ 119.81 ಕೋಟಿ ರು ಸಾಲ ಮಂಜೂರಾಗಿದ್ದರೇ ಈ ಪೈಕಿ 69.11 ಕೋಟಿ ರು ಸಾಲ ವಿತರಣೆಯಾಗಿದೆ.ಒಟ್ಟಾರೆ ಈ ನಾಲ್ಕು ವಲಯಗಳಿಗೆ 4,095 ಸಾಲ ಖಾತೆ ತೆರೆದು 900.65 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 591.24 ಕೋಟಿ ರು ಸಾಲ ವಿತರಣೆಯಾಗಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಇದೇ ಮುದ್ರಾ ಯೋಜನೆಯ ಪಿಎಂಎಂವೈ ಯೋಜನೆಯಲ್ಲಿ ಒಟ್ಟು 1,06,41,969 ಮಂದಿ ಮಹಿಳಾ ಉದ್ಯಮಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 16,64,125 ಪರಿಶಿಷ್ಟ ಜಾತಿ ಮತ್ತು 6,68,540 ಪರಿಶಿಷ್ಟ ಪಂಗಡ ವಿಭಾಗದಲ್ಲಿ ಸಾಲ ಖಾತೆಗಳಿವೆ. ಎಸ್‌ಯುಪಿಐ ಯೋಜನೆಯಡಿಯಲ್ಲಿ 2,732 ಮಂದಿ ಮಹಿಳಾ ಉದ್ಯಮಿಗಳು ನೋಂದಾಯಿಸಿಕೊಂಡಿದ್ದರೇ 1,050 ಮಂದಿ ಪರಿಶಿಷ್ಟ ಜಾತಿ ಮತ್ತು 313 ಮಂದಿ ಪರಿಶಿಷ್ಟ ಪಂಗಡ ಉದ್ಯಮಿಗಳಿದ್ದಾರೆ.

 

 

ಸಿಜಿಟಿಎಂಎಸ್‌ಇ (CGTMSE) ಯೋಜನೆಯಡಿ ಸಾರ್ವಜನಿಕ ರಂಗದ ಬ್ಯಾಂಕುಗಳು  ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿವೆ. ಸರಕಾರಿ ಬ್ಯಾಂಕುಗಳು 32 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲ ನೀಡಿದರೆ, ಖಾಸಗಿ ವಲಯದ ಬ್ಯಾಂಕುಗಳು 13 ಸಾವಿರ ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದ್ದಾರೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 42 ಸಾವಿರ ಮಂದಿಗೆ ಸಾಲ ಮಂಜೂರು ಮಾಡಿದ್ದು, 1,298 ಕೋಟಿ ರೂಪಾಯಿ ವಿತರಿಸಿದ್ದಾರೆ. ಸಾರ್ವಜನಿಕ ರಂಗದ ಬ್ಯಾಂಕುಗಳು   1,69,920 ಮಂದಿಗೆ ಖಾಸಗಿ ವಲಯದ ಬ್ಯಾಂಕುಗಳು 60,311 ಮಂದಿಗೆ ಹೀಗೆ ಒಟ್ಟು 4.72 ಲಕ್ಷ ಮಂದಿ ಸಿಜಿಟಿಎಂಎಸ್‌ಇ (CGTMSE) ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಸಿಜಿಟಿಎಂಎಸ್‌ಇ ಯೋಜನೆಯಡಿಯಲ್ಲಿ ಕೂಡ ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆ ಹಿಂದುಳಿದಿದೆ. ಈ ಯೋಜನೆಯಲ್ಲಿ  ಅನುಕ್ರಮವಾಗಿ 3463 ಮಂದಿ ಮತ್ತು 3607 ಮಂದಿ ಸಾಲ ಪಡೆಕೊಂಡಿದ್ದಾರೆ. ಇದೇ ಅವಧಿಯಲ್ಲಿ ಇತರ ಜಿಲ್ಲೆಗಳಲ್ಲಿ  ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಸಾಲ ಸೌಲಭ್ಯ ಪಡಕೊಂಡಿದ್ದಾರೆ. ವಿಜಾಪುರ ಜಿಲ್ಲೆಗೆ ಕೇವಲ 47 ಕೋಟಿ ಮಂಜೂರಾಗಿದ್ದು, ಅತೀ ಕಡಿಮೆಯಾಗಿದೆ.

ಸಾಮಾಜಿಕ ವರ್ಗವಾರು ಫಲಾನುಭವಿಗಳ ವಿವರಗಳ ಪ್ರಕಾರ, ಮುದ್ರಾ ಯೋಜನೆಯಡಿ 1,06,41,969 ಮಹಿಳೆಯರು, 16,64,125 ಪರಿಶಿಷ್ಟ ಜಾತಿ (SC) ಮತ್ತು 6,68,540 ಪರಿಶಿಷ್ಟ ಪಂಗಡ (ST) ಫಲಾನುಭವಿಗಳಿದ್ದಾರೆ. ಮುದ್ರಾ ಯೋಜನೆಯಡಿ ಬೆಂಗಳೂರು ನಂತರ ಬೆಂಗಳೂರು ಗ್ರಾಮಾಂತರ, ಮೈಸೂರು , ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಹೆಚ್ಚಿನ ಮೊತ್ತದ ಸಾಲ ಪಡೆದುಕೊಡಿವೆ. ಬೆಂಗಳೂರು ಕಳೆದ 5 ವರ್ಷದಲ್ಲಿ 28 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರೆ, ಮೈಸೂರು , ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ತಲಾ ಎರಡು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಸಾಲ ಪಡೆದುಕೊಂಡಿವೆ.

 

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಲ್ಲಿ 2,732 ಮಹಿಳೆಯರು, 1,050 ಎಸ್‌ಸಿ ಹಾಗೂ 313 ಎಸ್‌ಟಿ ಫಲಾನುಭವಿಗಳಿದ್ದು, ಸಿಜಿಟಿಎಂಎಸ್‌ಇ ಯೋಜನೆಯಡಿ 1,44,522 ಮಹಿಳೆಯರು, 17,505 ಎಸ್‌ಸಿ ಮತ್ತು 6,333 ಎಸ್‌ಟಿ ಫಲಾನುಭವಿಗಳಿಗೆ ನೆರವು ದೊರೆತಿದೆ. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಸಾಲ ಹಂಚಿಕೆಯಲ್ಲಿ ಸೇವಾ ವಲಯಕ್ಕೆ 292.16 ಕೋಟಿ ರೂಪಾಯಿ, ವ್ಯಾಪಾರ ವಲಯಕ್ಕೆ 291.63 ಕೋಟಿ ರೂಪಾಯಿ, ಉತ್ಪಾದನಾ ವಲಯಕ್ಕೆ 197.04 ಕೋಟಿ ರೂಪಾಯಿ ಹಾಗೂ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ 119.81 ಕೋಟಿ ರೂಪಾಯಿ ಮಂಜೂರಾಗಿದೆ.

 

 

ಸಾಲ ವಿತರಣೆಯ ಪ್ರಗತಿಯನ್ನು ಬ್ಲಾಕ್ ಮಟ್ಟದ ಬ್ಯಾಂಕರ್ಸ್ ಸಮಿತಿ (BLBC), ಜಿಲ್ಲಾ ಸಮಾಲೋಚನಾ ಸಮಿತಿ (DCC) ಹಾಗೂ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಸಭೆಗಳಲ್ಲಿ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಮುದ್ರಾ ಮತ್ತು ಸಿಜಿಟಿಎಂಎಸ್‌ಇ ಯೋಜನೆಗಳ ವಲಯವಾರು ಅಂಕಿ-ಅಂಶಗಳನ್ನು ಕೇಂದ್ರ ಮಟ್ಟದಲ್ಲಿ ಪ್ರತ್ಯೇಕವಾಗಿ ನಿರ್ವಹಿಸಲಾಗುವುದಿಲ್ಲ ಎಂದೂ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ.

Hot this week

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...
Please Scan to make Your Contribution

Topics

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

Related Articles

Popular Categories

error: Content is protected !!