Friday | June 19, 2026 |

ಕೃಷಿ, ಕೈಗಾರಿಕೆ ವಲಯದ ಪಾಲು ಇಳಿಕೆ; ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆ

ಬೆಂಗಳೂರು;  ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ 2024-25ರಲ್ಲಿ ಕೃಷಿ ವಲಯದ ಪಾಲು ಶೇ.11.02ಷ್ಟಿದ್ದರೇ 2025-26ನೇ ಸಾಲಿನಲ್ಲಿ ಶೇ. 10.77ಕ್ಕೆ ಇಳಿದಿದೆ. ಅದೇ ರೀತಿ ಕೈಗಾರಿಕೆ ವಲಯದ ಪಾಲು ಸಹ 2024-25ರಲ್ಲಿ ಶೇ. 19.82ರಷ್ಟಿದ್ದರೇ 2025-26ರಲ್ಲಿ ಅದು ಶೇ. 19.36ಕ್ಕೆ ಇಳಿಕೆಯಾಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ (2025-26) ವರದಿ ಮಾಡಿದೆ.

2026ರ ಮಾರ್ಚ್‌ 6ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಕುರಿತು ವಿಶ್ಲೇಷಣೆ ನಡೆಸಿದೆ.

ಜಿಲ್ಲಾ ಒಟ್ಟು ಆಂತರಿಕ ಉತ್ಪನದಲ್ಲಿಯೂ ಕೃಷಿ ವಲಯವು ಉತ್ತಮ ಸ್ಥಾನದಲ್ಲಿದೆ. ಸೇವಾ ಮತ್ತು ಕೈಗಾರಿಕೆ ವಲಯಗಳ ಪಾಲು ಕಡಿಮೆಯಿದೆ. ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆಯಲ್ಲಿರುವುದು ಗಮನಾರ್ಹವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ವಿಶ್ಲೇಷಿಸಿದೆ.

ಸೇವಾ ಮತ್ತು ಕೈಗಾರಿಕೆ ವಲಯಗಳಲ್ಲಿ ಉತ್ತಮ ಬೆಳವಣಿಗೆ ಹೊಂದಿರುವ ಜಿಲ್ಲೆಗಳು ಜಿಲ್ಲಾ ಒಟ್ಟು ಆಂತರಿಕ ಉತ್ಪನ್ನದಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿವೆ. ಇದಕ್ಕೆ ವಿರುದ್ಧವಾಗಿ ಜಿಲ್ಲಾ ಒಟ್ಟು ಆಂತರಿಕ ಉತ್ಪನ್ನದಲ್ಲಿ ಕಡಿಮೆ ಸ್ಥಾನದಲ್ಲಿರುವ ಕೆಲವು ಜಿಲ್ಲೆಗಳು ಕೃಷಿ ವಲಯದಲ್ಲಿ ಉತ್ತಮ ಸ್ಥಾನದಲ್ಲಿವೆ. ಆದರೂ ಸೇವಾ ಮತ್ತು ಕೈಗಾರಿಕೆ ವಲಯಗಳ ಪಾಲು ಕಡಿಮೆ ಇರುವ ಕಾರಣ, ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆಯಲ್ಲಿರುವುದು ಗಮನಾರ್ಹವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳಿದೆ.

 

ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಖಾಸಗಿ ಕಾರ್ಪೋರೇಟ್ ವಲಯದ ಹೆಚ್ಚುವರಿ ಪಾಲು ಮತ್ತು ಲೆಕ್ಕಾಚಾರದಲ್ಲಿ ಹೊಸ ದತ್ತಾಂಶಗಳ ಲಭ್ಯತೆಯಿಂದ ಜಿಲ್ಲೆಗಳಿಗೆ ಹಂಚಿಕೆ ಮಾಡಬೇಕಾದ ಪ್ರತಿಯೊಂದು ವಲಯಕ್ಕೂ ಸಂಬಂಧಿಸಿದ ಸೂಕ್ತ ಭೌತಿಕ ಸೂಚಕಗಳನ್ನು ಗುರುತಿಸುವ ಪ್ರಕ್ರಿಯೆಯು ಮುಂದುವರೆದಿದೆ. ಈ ಕಾರಣದಿಂದ ಎಡು ಅವಧಿಗಳ ನಡುವಿನ ವಲಯವಾರು ಜಿಲ್ಲಾ ಅಂದಾಜುಗಳ ನೇರ ಹೋಲಿಕೆ ಹೆಚ್ಚು  ಪ್ರಯೋಜನಕಾರಿ ಆಗುವುದಿಲ್ಲ ಎಂದು ಸಮೀಕ್ಷೆಯು ವಿಶ್ಲೇಷಿಸಿದೆ.

ವಿಶೇಷವೆಂದರೇ 2025ರ ಮಳೆಗಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಮಳೆ ಪಡೆದಿತ್ತು. 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರಿನ ದ್ವಿತೀಯ ಮುಂಗಡ ಅಂದಾಜಿನ ಪ್ರಕಾರ ಒಟ್ಟು 107.1 ಲಕ್ಷ ಹೆಕ್ಟೇರ್‍‌ನಲ್ಲಿ ಬೆಳೆಯಿತ್ತು. ಕೃಷಿ ಯಾಂತ್ರಿಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಭಾಗ್ಯ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳಿಗೆ 568.78 ಕೋಟಿಗೂ ಅಧಿಕ ಮೊತ್ತ ವೆಚ್ಚವಾಗಿದೆ.

ಅಲ್ಲದೇ ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ಸಂಸ್ಕರಣೆ ಮತ್ತು ಕೊಯ್ಲು ನಂತರದ ಚಟುವಟಿಕೆಗಳ ಮೂಲಕ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕವಾಗಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಿ ಮುಂಚೂಣಿಯಲ್ಲಿದೆ. ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಘಟಕಗಳನ್ನು ಸ್ಥಾಪಿಸಲು ಎಲ್ಲಾ ವರ್ಗದ ರೈತರಿಗೆ ಶೇ.50ರಷ್ಟು ಸಹಾಯಧನ ನೀಡಲಾಗಿದೆ.  ಆದರೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ 2025-25ಕ್ಕಿಂತಲೂ 2025-26ರಲ್ಲಿ ಕೊಡುಗೆ ಪಾಲು ಇಳಿಕೆಯಾಗಿದೆ.

ಕೃಷಿ ವಲಯಕ್ಕೆ ಜಿಲ್ಲಾವಾರು ಕೊಡುಗೆ

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಬಾಗಲಕೋಟೆ ಜಿಲ್ಲೆಯು ಕೃಷಿ ವಲಯಕ್ಕೆ 3.3ರಷ್ಟು ಕೊಡುಗೆ ನೀಡಿದೆ. ಬೆಂಗಳೂರು ನಗರವು 5.5, ಬೆಂಗಳೂರು ನಗರವು 2.1, ಬೆಳಗಾವಿಯು 6.8, ಬಳ್ಳಾರಿಯು 2.2,

 

ಬೀದರ್‍‌ 2.1, ವಿಜಯಪುರವು 4.9, ಚಾಮರಾಜನಗರವು 3.2, ಚಿಕ್ಕಬಳ್ಳಾಪುರವು 2.6, ಚಿಕ್ಕಮಗಳೂರು 2.8, ಚಿತ್ರದುರ್ಗವು 4.0, ದಕ್ಷಿಣ ಕನ್ನಡವು 3.3, ದಾವಣಗೆರೆ 3.9, ಧಾರವಾಡವು 1.7, ಗದಗ್ 1.2, ಕಲ್ಬುರ್ಗಿಯು 2.0,

ಹಾಸನ 4.1, ಹಾವೇರಿ 2.2, ಕೊಡಗು 2.8, ಕೋಲಾರ 3.0, ಕೊಪ್ಪಳವು 2.9, ಮಂಡ್ಯವು 5.0, ಮೈಸೂರು 5.0, ರಾಯಚೂರು 2.9, ಬೆಂಗಳೂರು ದಕ್ಷಿಣವು 2.9, ಶಿವಮೊಗ್ಗವು 4.9,

 

ತುಮಕೂರು 5.2, ಉಡುಪಿಯು 3.2, ಉತ್ತರ ಕನ್ನಡವು 2.5, ವಿಜಯನಗರವು 2.1, ಯಾದಗಿರಿ ಜಿಲ್ಲೆಯು 2.0ನಷ್ಟು  ಕೃಷಿ ವಲಯದಲ್ಲಿ ಕೊಡುಗೆ ನೀಡಿದೆ.

ಸೇವಾ ವಲಯವು ಒಟ್ಟು ಆಂತರಿಕ ಉತ್ಪನ್ನದಲ್ಲಿ ಅತೀ ಹೆಚ್ಚಿನ ಪಾಲು ಹೊಂದಿದೆ. 2024-25ರಲ್ಲಿ ಶೇ. 69.16ರಷ್ಟಿತ್ತು. 2025-26ರಲ್ಲಿ ಶೇ. 69.87ಕ್ಕೆ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಸ್ಥಿರಾಸ್ತಿ, ವೃತ್ತಿಪರ ಸೇವೆಗಳು ಮತ್ತು ವಾಸಗೃಹಗಳ ಒಡೆತನ ವಲಯವು ಸೇ. 41.28ರೊಂದಿಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಗದಲ್ಲಿ ಅತೀ ಹೆಚ್ಚಿನ ಕೊಡುಗೆ ನೀಡಿದೆ.

2025-26ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಬೇಸಿಗೆ 2025ರ (ಡಿಸೆಂಬರ್‍‌ 31ರ ಅಂತ್ಯಕ್ಕೆ ) 6.49 ಲಕ್ಷ ಕ್ವಿಂಟಾಲ್ ಗುಣಮಟ್ಟದ ಬೀಜಗಳನ್ನು 12.62 ಲಕ್ಷ ರೈತರಿಗೆ ವಿತರಿಸಿತ್ತು. ಇದಕ್ಕಾಗಿ 171.74 ಕೋಟಿ ವೆಚ್ಚವಾಗಿದೆ. ಈ ಅವಧಿಯಲ್ಲಿ ರಸಗೊಬ್ಬರ ಲಭ್ಯತೆಯೂ ಸ್ಥಿರವಾಗಿದೆ ಎಂದು ಹೇಳಿರುವ ಆರ್ಥಿಕ ಸಮೀಕ್ಷೆಯು ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ್ದ 44.98 ಲಕ್ಷ ಟನ್ ಹಂಚಿಕೆಯಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 38.73 ಲಕ್ಷ ಟನ್ ವಿವಿಧ ದರ್ಜೆಯ ರಸಗೊಬ್ಬರಗಳನ್ನು ರಾಜ್ಯವು ಸ್ವೀಕರಿಸಿತ್ತು ಎಂದು ವಿವರಿಸಿದೆ.

ಕೃಷಿ ಇಲಾಖೆಯು ವಿವಿಧ ಕೃಷಿ ಯಾಂತ್ರೀಕರಣ ಯೋಜನೆಗಳಡಿಯಲ್ಲಿ ರೈತರಿಗೆ ಸಹಾಯ ಧನ ನೀಡಿದೆ. ಕೃಷಿ ಯಾಂತ್ರೀಕರಣಕ್ಕಾಗಿ 388.18 ಕೋಟಿ ರು ಹಂಚಿಕೆ ಮಾಡಲಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 333.53 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 298.19 ಕೋಟಿ ರು ವೆಚ್ಚವಾಗಿದೆ. ಈ ಯೋಜನೆಯಡಿ ರಾಜ್ಯಾದಾದ್ಯಂತ 1,30,454 ರೈತರು ಇದರ ಸೌಲಭ್ಯ ಪಡೆದಿದ್ದಾರೆ ಎಂದು ಮಾಹಿತಿ ಒದಗಿಸಿದೆ.

ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ 2025-26ರಲ್ಲಿ 440 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 383.04 ಕೋಟಿ ರು ಬಿಡುಗಡೆಯಾಗಿತ್ತು. ಡಿಸೆಂಬರ್‍‌ ಅಂತ್ಯಕ್ಕೆ 270.59 ಕೋಟಿರು ವೆಚ್ಚ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 5,063 ಪ್ಯಾಕೇಜ್‌ಗಳನ್ನು ಕಾರ್ಯಗತಗೊಳಿಸಲು 100 ಕೋಟಿ ರು ಮತ್ತು ಕೃಷಿ ಭಾಗ್ಯ ಅಡಿಯಲ್ಲಿ 223 ತಾಲೂಕುಗಳಲ್ಲಿ ಅನುಷ್ಠಾನ ಮಾಡಲು 5,482 ಪ್ಯಾಕೇಜ್‌ಗಳಿಗೆ 100 ಕೋಟಿ ಹಂಚಿಕೆ ಮಾಡಲಾಗಿತ್ತು. 2025-26ರಲ್ಲಿ 175 ಕೋಟಿ ರು ಬಿಡುಗಡೆಯಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 58.07 ಕೋಟಿ ಮಾತ್ರ ವೆಚ್ಚವಾಗಿದೆ. ಈ ಅವಧಿಯಲ್ಲಿ 4,529 ಕೃಷಿ ಹೊಂಡಗಳು ನಿರ್ಮಾಣವಾಗಿದೆ ಎಂದು ವಿವರಿಸಿದೆ.

ಹಾಗೆಯೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಡಿಸೆಂಬರ್ ರ ಅಂತ್ಯಕ್ಕೆ 25,76,338 ರೈತರು ದಾಖಲಾಗಿದ್ದರು. ಇವರಿಗೆ 223.24 ಕೋಟಿಯಷ್ಟು ಪ್ರೀಮಿಯಂ ಹಣ ಪಾವತಿಸಿದೆ. 22.64 ಲಕ್ಷ ಹೆಕ್ಟೇರ್ ವಿಸ್ತೀರ್ಣವು ಬೆಳೆ ವಿಮಾ ವ್ಯಾಪ್ತಿಗೆ ತಂದಿದೆ. 5,78,985 ರೈತರು ಇದರ ಫಲಾನುಭವಿಗಳಾಗಿದ್ದಾರೆ.

ವಿವಿಧ ಜಲಾನಯನ ಅಭಿವೃದ್ಧಿ ಯೋಜನೆಗಳಡಿಯಲ್ಲಿ 2025 ಮಾರ್ಚ್‌ ಅಂತ್ಯಕ್ಕೆ 74.94 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಗೊಳಿಸಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಜಲಾನಯನ ಅಭಿವೃದ್ಧಿ ಘಟಕ 2.0 ಅಡಿಯಲ್ಲಿ 34,855 ಹೆಕ್ಟೇರ್ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಿದೆ. 2,964 ಹೆಕ್ಟೇರ್ ಅರಣ್ಯ ಮತ್ತು 2,411 ಹೆಕ್ಟೇರ್ ಒಣಭೂಮಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಸಮೀಕ್ಷೆಯು ವಿವರಿಸಿದೆ.

2025ರ ಡಿಸೆಂಬರ್ ಅಂತ್ಯಕ್ಕೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ 4,39, 852.54 ಕೋಟಿ ರು ಮೌಲ್ಯದ 12.67 ಕೋಟಿ ಮೆಟ್ರಿಕ್ ಟನ್ ವಹಿವಾಟು ಆಗಿದೆ. 2025-26ನೇ ಸಾಲಿನಲ್ಲಿ ಬೆಂಬಲ ಯೋಜನೆಯಡಿ 88,252 ಲಕ್ಷ ಕ್ವಿಂಟಾಲ್ ಪ್ರಮಾಣದ ಹೆಸರುಕಾಳು, ಉದ್ದಿನಕಾಳು, ಸೂರ್ಯಕಾಂತಿ, ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಮತ್ತು ಹತ್ತಿ ಉತ್ಪನ್ನಗಳನ್ನು ಸುಮಾರು 1,55,793 ನೋಂದಾಯಿತ ರೈತರಿಮದ ಅಂದಾಜು 1,239 ಕೋಟಿ ಮೌಲ್ಯದಲ್ಲಿ ಖರೀದಿಸಿದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2025-26ನೇ ಸಾಲಿನ (ಡಿಸೆಂಬರ್ ವರೆಗೆ) 545.66 ಕೋಟಿ ಹಂಚಿಕೆ ಮಾಡಲಾಗಿತ್ತು. 30,653.66 ಹೆಕ್ಟೇರ್ ವಿಸ್ತೀರ್ಣದಲ್ಲಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಲು 246.66 ಕೋಟಿ ಸಹಾಯಧನವನ್ನು 35,021 ರೈತರಿಗೆ ಒದಗಿಸಿದೆ.

ಹೀಗೆ ಕೃಷಿ ವಲಯಕ್ಕೆ ಸಾವಿರಾರು ಕೋಟಿ ರುಪಾಯಿ ಅನುದಾನವನ್ನು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಸಹ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವಲಯದಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿಸುವುದರ ಬದಲಿಗೆ ಇಳಿಕೆ ಮಾಡಿಕೊಂಡಿದೆ.

 

Hot this week

ಡಿಸಿಎಂ ಕಚೇರಿಯಲ್ಲಿಯೇ ಧೂಳಿಡಿದಿದ್ದ ಕಡತಗಳು; ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ 80 ಕಡತಗಳು ಇಲಾಖೆಗೆ ವಾಪಸ್‌

ಬೆಂಗಳೂರು; ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದ ಮಾಹಿತಿಯ ಕಡತ,...

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...
Please Scan to make Your Contribution

Topics

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊಸ ಹಾಸ್ಟೆಲ್‌ಗಳ ಮಂಜೂರಾತಿಗೆ ನಕಾರ; ವಿದ್ಯಾರ್ಥಿ ನಿಲಯಗಳ ವಿಲೀನಕ್ಕೆ ಮುಂದಾಯಿತೇ ಸರ್ಕಾರ?

ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಹೊಸದಾಗಿ ಮೆಟ್ರಿಕ್‌ ಪೂರ್ವ...

ಮುಖ್ಯಮಂತ್ರಿ ಮೂಲಸೌಕರ್ಯ ಯೋಜನೆ ಉದ್ದೇಶಕ್ಕೆ ಧಕ್ಕೆ ; ನ್ಯಾಯಾಂಗ ಬಡಾವಣೆ ಪ್ರತಿಷ್ಠಿತರ ಒತ್ತಡಕ್ಕೆ ಮಣಿದು ಹೆಬ್ಬಾಗಿಲು ನಿರ್ಮಾಣ?

ಬೆಂಗಳೂರು; ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ಒದಗಿಸಿದ್ದ ಅನುದಾನವನ್ನು ಅಧಿಕಾರಿವರ್ಗವು ಪ್ರಭಾವಿಗಳ ಒತ್ತಡಕ್ಕೆ...

Related Articles

Popular Categories

error: Content is protected !!