ದರೋಡೆ, ದಲಿತರ ಮೇಲೆ ದೌರ್ಜನ್ಯ, ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ; ಅಪರಾಧ ಸಮೀಕ್ಷೆಯಲ್ಲಿ ಬಹಿರಂಗ

ಬೆಂಗಳೂರು; ರಾಜ್ಯದಲ್ಲಿ ದರೋಡೆ, ಕಳ್ಳತನ, ಅತ್ಯಾಚಾರ, ಪೋಕ್ಸೋ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದರೆ ಎಲ್ಲಾ ರೀತಿಯ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

 

2023ರ ಜುಲೈ ಮತ್ತು ಜೂನ್‌ನಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಳ ಕುರಿತಾದ ಅಪರಾಧ ಸಮೀಕ್ಷೆ ಅಂಕಿ ಸಂಖ್ಯೆಗಳನ್ನು ಕರ್ನಾಟಕ ಪೊಲೀಸ್‌ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

 

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ. ಉಡುಪಿಯಲ್ಲಿ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳ ರಹಸ್ಯ ಚಿತ್ರೀಕರಣ, ರಾಮನಗರದಲ್ಲಿ ಹಾಡುಹಗಲೇ ಗೋವುಗಳ ಕಳ್ಳತನ ಹಾಗೂ ವಧೆ, ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್‌ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಗುಂಪು ಹಲ್ಲೆ, ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ, ಜಿಹಾದಿ ಸಂಘಟನೆಗಳಿಂದ ಮಾರಣಾಂತಿಕ ಹಲ್ಲೆ, ಹಾಸನದಲ್ಲಿ ಹಾಡುಹಗಲೇ ಗನ್‌ ಹಿಡಿದು, ಜಿಹಾದಿ ಯುವಕರಿಂದ ಪುಂಡಾಟ, ಚಿಕ್ಕಬಳ್ಳಾಪುರದಲ್ಲಿ ಹಿಂದೂ ಯುವಕನ ಮೇಲೆ ಜಿಹಾದಿಗಳ ನೈತಿಕ ಪೊಲೀಸ್‌ ಗಿರಿ, ಶಿವಮೊಗ್ಗದಲ್ಲಿ ಹಿಂದೂಗಳ ಮನೆ, ವಾಹನಗಳ ಮೇಲೆ ಕಲ್ಲೆಸೆತ – ತಲ್ವಾರ್‌ನಿಂದ ಕೊಲೆ ಯತ್ನಗಳು ನಡೆದಿವೆ,’ ಎಂದು ಬಿಜೆಪಿ ಪಕ್ಷವು ಟ್ವೀಟ್‌ ಮಾಡಿರುವ ಬೆನ್ನಲ್ಲೆ 2023ರ ಜುಲೈ, ಜೂನ್‌ ಮತ್ತು 2022ರ ಜುಲೈನಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

ಕರ್ನಾಟಕ ಪೊಲೀಸ್‌ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅಪರಾಧ ಸಮೀಕ್ಷೆ ಕುರಿತಾದ ಅಂಕಿ ಸಂಖ್ಯೆಗಳನ್ನಷ್ಟೇ ಇಲ್ಲಿ ಕೊಡಲಾಗಿದೆ.

 

ದರೋಡೆ ಪ್ರಕರಣಗಳು

 

2023ರ ಜೂನ್‌ ಅಂತ್ಯಕ್ಕೆ 92 ಪ್ರಕರಣಗಳು ವರದಿಯಾಗಿದ್ದರೇ ಜುಲೈ ಅಂತ್ಯಕ್ಕೆ 163 ಸೇರಿ ಒಟ್ಟಾರೆ 212 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಸರಗಳ್ಳತನ ಪ್ರಕರಣಗಳಿವೆ. ಸರಗಳ್ಳತನ ಪ್ರಕರಣಗಳು ಹೊರತುಪಡಿಸಿ 212 ದರೋಡೆ ಪ್ರಕರಣಗಳಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟಾರೆ 191 ಪ್ರಕರಣಗಳು ದಾಖಲಾಗಿದ್ದವು. ದರೋಡೆ ಪ್ರಕರಣಗಳು ರಾಜ್ಯದಲ್ಲಿ ಕಳೆದ 2 ತಿಂಗಳಿನಿಂದ ಹೆಚ್ಚಾಗಿವೆ.

 

ಆರ್ಥಿಕ ಅಪರಾಧ

 

ಜುಲೈ ಅಂತ್ಯಕ್ಕೆ 843 ಮತ್ತು ಜೂನ್‌ ಅಂತ್ಯಕ್ಕೆ 663 ಪ್ರಕರಣಗಳು ಅರ್ಥಿಕ ಅಪರಾಧಕ್ಕೆ ಸೇರಿವೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 629 ಪ್ರಕರಣಗಳು ವರದಿಯಾಘಿದ್ದವು.

 

ಮೋಟಾರು ವಾಹನ ಕಳ್ಳತನ

 

ಜುಲೈ ಅಂತ್ಯಕ್ಕೆ 1,464 ಮತ್ತು ಜೂನ್‌ ನಲ್ಲಿ 1,288 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,150 ಪ್ರಕರಣಗಳಿದ್ದವು.

 

ಎಸ್‌ ಸಿ ಎಸ್‌ ಟಿ ದೌರ್ಜನ್ಯ

 

ಜುಲೈ 2023ರಲ್ಲಿ 202 ಮತ್ತು ಜೂನ್‌ನಲ್ಲಿ 195 ಪ್ರಕರಣಗಳು ದಾಖಲಾಗಿವೆ. ಕಳೆದಾ ವರ್ಷ ಇದೇ ಅವಧಿಯಲ್ಲಿ 121 ಪ್ರಕರಣಗಳು ವರದಿಯಾಗಿದ್ದವು.

 

ಕಳ್ಳತನ

 

ಜುಲೈನಲ್ಲಿ 2,774 ಮತ್ತು ಜೂನ್‌ 2420 ಪ್ರಕರಣಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,955 ಪ್ರಕರಣಗಳು ವರದಿಯಾಗಿದ್ದವು.

 

ಕೊಲೆ

 

ಜುಲೈ 2023ರಲ್ಲಿ 114, ಜೂನ್‌ನಲ್ಲಿ 117 ಕೊಲೆ ಪ್ರಕರಣಗಳು ವರದಿಯಾಗಿವೆ. ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 126 ಪ ಕೊಲೆ ಪ್ರಕರಣಗಳು ವರದಿಯಾಗಿದ್ದವು.

 

ಕಳ್ಳತನ

 

ಜುಲೈನಲ್ಲಿ ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ 606, ಜೂನ್‌ ನಲ್ಲಿ 576 ಪ್ರಕರಣಗಳು ಇದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ 473 ಪ್ರಕರಣಗಳು ವರದಿಯಾಗಿದ್ದವು.

 

ಗಲಭೆ

 

ಜುಲೈನಲ್ಲಿ 312 ಪ್ರಕರಣಗಳು, ಜೂನ್‌ನಲ್ಲಿ 372 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 291 ಪ್ರಕರಣಗಳು ದಾಖಲಾಗಿದ್ದವು.

 

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ದಂಗೆ ಪ್ರಕರಣಗಳ ಸಂಖ್ಯೆ ತುಸು ಇಳಿಕೆಯಾಗಿರುವುದು  ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಮೂರು ವರ್ಷಗಳಲ್ಲಿ ಮಕ್ಕಳೂ ಸೇರಿ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆ; ಪತ್ತೆ ಹಚ್ಚುವಲ್ಲಿ ವಿಫಲ

 

ಅತ್ಯಾಚಾರ

 

ಜುಲೈನಲ್ಲಿ 48, ಜೂನ್‌ನಲ್ಲಿ 66 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 52 ಪ್ರಕರಣಗಳು ಇದ್ದವು.

 

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (ಪೋಕ್ಸೋ) ಜುಲೈನಲ್ಲಿ 308 ಮತ್ತು ಜೂನ್‌ನಲ್ಲಿ 314 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 251 ಪ್ರಕರಣಗಳು ವರದಿಯಾಗಿದ್ದವು.

 

3 ವರ್ಷದಲ್ಲಿ 15,769 ಲೈಂಗಿಕ ಹಿಂಸೆ, 8,333 ಪೋಕ್ಸೋ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ

 

ಸಿಆರ್‍‌ಪಿಸಿ 107 ಅಡಿಯಲ್ಲಿ ಜುಲೈನಲ್ಲಿ 1,462, ಸೆಕ್ಷನ್‌ 109 ಅಡಿಯಲ್ಲಿ 293, 110 ಅಡಿಯಲ್ಲಿ 548 ಸೇರಿ ಒಟ್ಟಾರೆ 2,303 ಪ್ರಕರಣಗಳು ವರದಿಯಾಗಿವೆ. ಜೂನ್‌ನಲ್ಲಿ ಸಿಆರ್‍‌ಪಿಸಿ 107 ಅಡಿಯಲ್ಲಿ 1,632, 109 ಅಡಿಯಲ್ಲಿ 332, 110 ಅಡಿಯಲ್ಲಿ 451 ಸೇರಿ ಒಟ್ಟಾರೆ 2,415 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 7,034 ಪ್ರಕರಣಗಳು ಇದ್ದವು.

 

ಸೈಬರ್‍‌ ಅಪರಾಧ

 

ಜುಲೈನಲ್ಲಿ 2,067, ಜೂನ್‌ನಲ್ಲಿ 1,760 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,156 ಪ್ರಕರಣಗಳಿದ್ದವು.

 

ಎಂಎಂಡಿಆರ್‍‌ ಕಾಯ್ದೆ

 

ಜುಲೈನಲ್ಲಿ 17, ಜೂನ್‌ನಲ್ಲಿ 12 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 4 ಪ್ರಕರಣಗಳಷ್ಟೇ ಇದ್ದವು.

 

ಎನ್‌ಡಿಪಿಎಸ್‌ ಅಡಿಯಲ್ಲಿ ಜುಲೈನಲ್ಲಿ 818, ಜೂನ್‌ನಲ್ಲಿ 1,291 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ 554 ಪ್ರಕರಣಗಳಿದ್ದವು ಎಂಬುದು ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts