Wednesday | May 13, 2026 |

ಮೂರು ವರ್ಷಗಳಲ್ಲಿ ಮಕ್ಕಳೂ ಸೇರಿ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆ; ಪತ್ತೆ ಹಚ್ಚುವಲ್ಲಿ ವಿಫಲ

ಬೆಂಗಳೂರು; ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳೂ ಸೇರಿದಂತೆ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ಮೂರೂ ವರ್ಷಗಳಾದರೂ ಇವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸ್‌ ಇಲಾಖೆಯೂ ವಿಫಲವಾಗಿದೆ.

 

ಮಕ್ಕಳು, ಗಂಡಸರು ಮತ್ತು ಮಹಿಳೆಯರ ನಾಪತ್ತೆಯಾಗಿರುವ ಕುರಿತು ವಿಧಾನಪರಿಷತ್‌ ಸದಸ್ಯ ಯು ಬಿ ವೆಂಕಟೇಶ್‌ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ಸೂಚನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರಿಸಿರುವ ಪ್ರತಿಯಲ್ಲಿ ಈ ಮಾಹಿತಿ ಇದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಪ್ರತಿ ವರ್ಷ ಸರಾಸರಿ ಎರಡೂವರೆ ಸಾವಿರದಷ್ಟು ಮಕ್ಕಳು ಕಾಣೆಯಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿ ಯಾವ ಕಾರಣಗಳಿಗಾಗಿ ಮಕ್ಕಳು ಕಾಣೆಯಾಗುತ್ತಿದ್ದಾರೆ, ಅದರ ಹಿಂದಿರುವವರು ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಸಬೇಕು,’ ಎಂದು ಯು ಬಿ ವೆಂಕಟೇಶ್‌ ಅವರು ಪ್ರಸ್ತಾಪಿಸಿದ್ದಾರೆ.

 

ಇದಕ್ಕೆ ಉತ್ತರಿಸಿರುವ ಗೃಹ ಇಲಾಖೆಯು 2020ರಿಂದ 2023ರ ಜನವರಿವರೆಗಿನ ಅಂಕಿ ಅಂಶಗಳ ಮಾಹಿತಿ ಒದಗಿಸಿದೆ. ಇದರ ಪ್ರಕಾರ 2020ರಿಂದ 2023ರವರೆಗೆ ಒಟ್ಟು 16,296 ಗಂಡಸರು, ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದರು. ಈ ಪೈಕಿ 12,680 ಪತ್ತೆಯಾಗಿದ್ದಾರೆ. ಇನ್ನೂ 3,616 ಮಂದಿಯನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದೆ.

 

ಅದೇ ರೀತಿ ಹೆಣ್ಣು ಮಕ್ಕಳು 31,194 ನಾಪತ್ತೆಯಾಗಿದ್ದರು. ಈ ಪೈಕಿ 29,026 ಪತ್ತೆಯಾಗಿದ್ದಾರೆ. 2,168 ಮಂದಿ ಪತ್ತೆಯಾಗಿಲ್ಲ. ಗಂಡು ಮಕ್ಕಳು (18 ವರ್ಷದೊಳಗಿನವರು)1,745 ನಾಪತ್ತೆಯಾಗಿದ್ದರು. 1,493 ಪತ್ತೆಯಾಗಿದ್ದಾರೆ. 252 ಪತ್ತೆಯಾಗಬೇಕಿದೆ. ಹೆಣ್ಣು ಮಕ್ಕಳು 4,885 ನಾಪತ್ತೆಯಾಗಿದ್ದರು. 4,117 ಪತ್ತೆಯಾಗಿದ್ದಾರೆ. 768 ಪತ್ತೆಯಾಗಬೇಕಿದೆ. ಒಟ್ಟಾರೆ 6, 804 ಮಂದಿ ಎಲ್ಲಿದ್ದಾರೆ ಎಂಬುದನ್ನು ಇನ್ನೂ ಪತ್ತೆ ಹಚ್ಚಿಲ್ಲ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

 

2020ರಲ್ಲಿ ಕಾಣೆಯಾಗಿರುವ ಒಟ್ಟು 4,273ರ ಪೈಕಿ 3,503 ಮಂದಿಯನ್ನು ಪತ್ತೆ ಹಚ್ಚಿದ್ದು, ಇನ್ನೂ 770 ಮಂದಿಯನ್ನು ಪತ್ತೆ ಹಚ್ಚಬೇಕಿದೆ. 2021ರಲ್ಲಿ 5,056 ಪೈಕಿ 4,172 ಪತ್ತೆ ಹಚ್ಚಿದ್ದರೆ 884 ಮಂದಿ ಪತ್ತೆ ಹಚ್ಚಬೇಕಿದೆ. 2022ರಲ್ಲಿ 6,468 ಮಂದಿ ನಾಪತ್ತೆಯಾಗಿದ್ದು ಈ ಪೈಕಿ 1,635 ಮಂದಿಯನ್ನಷ್ಟೇ ಪತ್ತೆ ಹಚ್ಚಲಾಗಿದೆ. ಇfನೂ 1,635 ಮಂದಿಯನ್ನು ಪತ್ತೆ ಹಚ್ಚಬೇಕಿದೆ. 2023ರಲ್ಲಿ 499 ಮಂದಿ ಕಾಣೆಯಾಗಿದ್ದು ಈ ಪೈಕಿ 172 ಮಂದಿಯನ್ನು ಪತ್ತೆ ಹಚ್ಚಿದ್ದು ಇನ್ನೂ 327 ಮಂದಿ ಪತ್ತೆಯಾಗಿಲ್ಲ.

 

ಅದೇ ರೀತಿ 2020ರಲ್ಲಿ ಕಾಣೆಯಾಗಿದ್ದ 8,848 ಮಹಿಳೆಯರ ಪೈಕಿ 8,684 ಮಹಿಳೆಯರು ಪತ್ತೆಯಾಗಿದ್ದು ಇನ್ನೂ 264 ಮಹಿಳೆಯರನ್ನು ಪತ್ತೆ ಹಚ್ಚಲಾಗಿಲ್ಲ. 2021ರಲ್ಲಿ 10,081 ನಾಪತ್ತೆಯಾಗಿದ್ದು ಈ ಪೈಕಿ 9,735 ಮಂದಿಯನ್ನು ಪತ್ತೆ ಹಚ್ಚಿದ್ದು ಇನ್ನೂ 346 ಪತ್ತೆಯಾಗಿಲ್ಲ. 2022ರಲ್ಲಿ 11,215 ನಾಪತ್ತೆಯಾಗಿದ್ದು ಈ ಪೈಕಿ 10,186 ಪತ್ತೆಯಾಗಿದ್ದು ಇನ್ನೂ 1,029 ಮತ್ತು 2023ರಲ್ಲಿ 950 ಕಾಣೆಯಾಗಿರುವ ಮಹಿಳೆಯರ ಪೈಕಿ 529 ಮಹಿಳೆಯರು ಪತ್ತೆಯಾಗಿಲ್ಲ ಎಂದು ಗೃಹ ಇಲಾಖೆ ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

 

18 ವರ್ಷದೊಳಗಿನ ಗಂಡು ಮಕ್ಕಳು 2020ರಿಂದ 2023ರವರೆಗೆ 1,745 ನಾಪತ್ತೆಯಾಗಿದ್ದು ಈ ಪೈಕಿ 1,493 ಪತ್ತೆ ಹಚ್ಚಲಾಗಿದೆ. ಇನ್ನೂ 252 ಮಕ್ಕಳನ್ನು ಪತ್ತೆ ಹಚ್ಚಬೇಕಿದೆ. ಇದೇ ಅವಧಿಯಲ್ಲಿ 4,885 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಈ ಪೈಕಿ 4,117 ಪತ್ತೆ ಹಚ್ಚಲಾಗಿದೆ. ಇನ್ನೂ 768 ಹೆಣ್ಣು ಮಕ್ಕಳು ಪತ್ತೆಯಾಗಿಲ್ಲ.

 

ರಾಜ್ಯದಲ್ಲಿ 2020ರಲ್ಲಿ 13,246 ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 13,042 ಪ್ರಕರಣ ನಿಜ ಎಂದು ದೃಢಪಟ್ಟಿದೆ. ಆದರೆ ಕಾಣೆಯಾಗಿದ್ದ 686 ಜನರನ್ನು ಪತ್ತೆ ಮಾಡಲು ಆಗಿಲ್ಲ. 331 ಜನರ ಪತ್ತೆ ಪ್ರಗತಿಯಲ್ಲಿದೆ. 2-21ರಲ್ಲಿ ನಿಜ ಎಂದು ದೃಢಪಟ್ಟ 14,961 ಪ್ರಕರಣಗಳ ಪೈಕಿ 311 ಜನ ಪತ್ತೆಯಾಗಿಲ್ಲ. 928 ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. 2022ರಲ್ಲಿ 17,701 ಜನ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 17,545 ಪ್ರಕರಣಗಳು ದೃಢಪಟ್ಟಿದ್ದು 3741 ಇನ್ನೂ ತನಿಖೆ ಹಂತದಲ್ಲಿದೆ ಎಂದು ಯು ಬಿ ವೆಂಕಟೇಶ್‌ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಂದ ತಿಳಿದು ಬಂದಿದೆ.

 

ರಾಜ್ಯದ ಸರಕಾರಿ ಮಕ್ಕಳ ಆರೈಕೆ ಕೇಂದ್ರ(ಬಾಲ ಮಂದಿರ)ಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ. ಆ ಪೈಕಿ ಇನ್ನೂ 119 ಮಕ್ಕಳು ಪತ್ತೆಯಾಗಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸರಕಾರವೇ ತಿಳಿಸಿತ್ತು.

 

2022ರ ಫೆಬ್ರವರಿವರೆಗೆ ಪತ್ತೆ ಮಾಡಲಾದ 13 ಮಕ್ಕಳಲ್ಲಿ 11 ಮಕ್ಕಳು ಪೋಷಕರೊಂದಿಗೆ ವಾಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ಬಾಲ ಮಂದಿರಗಳಲ್ಲಿದ್ದಾರೆ. ನಾಪತ್ತೆಯಾಗಿರುವ 119 ಮಕ್ಕಳ ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಮಾನವ ಕಳ್ಳಸಾಗಾಣಿಕೆ ತಡೆ ಘಟಕ (ಎಎಚ್‌ಟಿಯು)ಗಳಿಗೆ ಮತ್ತು 53 ಪ್ರಕರಣ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ಸರಕಾರ ಅನುಪಾಲನಾ ವರದಿಯಲ್ಲಿ ತಿಳಿಸಿತ್ತು.

Hot this week

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...
Please Scan to make Your Contribution

Topics

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ...

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

Related Articles

Popular Categories

error: Content is protected !!