Monday | September 28, 2026 |

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿದ್ದ 2,660.26 ಕೋಟಿ ರು ಬಿಡುಗಡೆ ಮಾಡಲು ಸಹಮತಿ ನೀಡಿದ್ದ ಆರ್ಥಿಕ ಇಲಾಖೆ ಬಳಿ ಇದರ ಕಡತವೇ ಲಭ್ಯವಿಲ್ಲ.

ಗೃಹಲಕ್ಷ್ಮಿ ಯೋಜನೆಯಡಿ 5,000 ಕೋಟಿ ರು ಅನುದಾನದಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ 2,660.25 ಕೋಟಿ ರು ಮೊತ್ತವನ್ನು ಬಿಡುಗಡೆ ಮಾಡಲು ಸಹಮತಿಸಿದ್ದ ಆರ್ಥಿಕ ಇಲಾಖೆ ಬಳಿ ಕಡತವೇ ಇಲ್ಲದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಅಲ್ಲದೇ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಒಂದಷ್ಟು ತೊಂದರೆಗಳು ಆಗಿರುವುದು ನಿಜ ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಒಪ್ಪಿಕೊಂಡಿದ್ದಾರೆ. ಗ್ಯಾರಂಟಿಗಳಿಂದ ಸರ್ಕಾರವು ಒದ್ದಾಡುತ್ತಿದೆ ಎಂದು ಸಚಿವ ಬಾಲಕೃಷ್ಣ ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಆರ್ಥಿಕ ಇಲಾಖೆಯು ನೀಡಿರುವ ಈ ಹಿಂಬರಹವು ಚರ್ಚೆಗೆ ಗ್ರಾಸವಾಗಿದೆ.

2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಹೊರಡಿಸಿದ್ದ ಅಧಿಕೃತ ಟಿಪ್ಪಣಿ ಕುರಿತು ದಿ ಫೈಲ್‌ ಆರ್‍‌ಟಿಐ ಅಡಿ ಸಮಗ್ರ ಕಡತ ಕೋರಿತ್ತು. ಈ ಸಂಬಂಧ ಅಧಿಕೃತ ಟಿಪ್ಪಣಿಯನ್ನು ಮಾತ್ರ ಒದಗಿಸಿರುವ ಆರ್ಥಿಕ ಇಲಾಖೆಯು ಇದಕ್ಕೆ ಸಂಬಂಧಿಸಿದ ಯಾವುದೇ ಕಡತವು ಲಭ್ಯವಿಲ್ಲ ಎಂದು ತಿಳಿಸಿದೆ.

 

 

 

 

ಅಧಿಕೃತ ಟಿಪ್ಪಣಿಯಲ್ಲೇನಿದೆ?

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆ ( 2235-02-103-0-73) ಅಡಿಯಲ್ಲಿ ಲಭ್ಯವಿರುವ ಅನುದಾನ 2,660.26 ಕೋಟಿ ರು.ಗಳನ್ನು ಹಾಗೂ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ ( 2235-00-101-0-64) ಯಲ್ಲಿ ಲಭ್ಯವಿರುವ ಬಾಕಿ ಅನುದಾನವನ್ನೂ ಸಹ ಒಳಗೊಂಡಂತೆ ಬಿಡುಡೆ ಮಾಡಲು ಅರ್ಥಿಕ ಇಲಾಖೆಯು ಸಹಮತಿ ನೀಡಿದೆ. ಈ ಅನುದಾನವನ್ನು ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ತಿಳಿಸಿದೆ. ಈ ಸಂಬಂಧ ಬಿಲ್‌ಗಳನ್ನು 2025ರ ಮಾರ್ಚ್‌ 31ರ ಮಧ್ಯಾಹ್ನ 2-30ರೊಳಗೆ ಖಜಾನೆಗೆ ಬಿಲ್‌ಗಳನ್ನು ಸಲ್ಲಿಸಬೇಕು ಎಂದು ಆಡಳಿತ ಇಲಾಖೆಗೆ 2025ರ ಮಾರ್ಚ್‌ 30ರಂಂದು  ತಿಳಿಸಿರುವುದು ಅಧಿಕೃತ ಟಿಪ್ಪಣಿಯಿಂದ ತಿಳಿದು ಬಂದಿದೆ.

 

 

ಈ ಹಣ ಬಿಡುಗಡೆ ಕೋರಿಕೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಿತ್ತು. ಈ ಕಡತದಲ್ಲಿನ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಹಿಡಿದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದವರೆಗೂ ಸಮಾಲೋಚಿಸಲಾಗುತ್ತದೆ. ಈ ರೀತಿ ಸಮಾಲೋಚಿಸಿಸುವ ಮುನ್ನ ಆರ್ಥಿಕ ಇಲಾಖೆಯು ತನ್ನ ಹಂತದಲ್ಲೇ ಹೊಸದಾಗಿ ಕಡತವನ್ನು ಸೃಜಿಸುತ್ತದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಹಿಡಿದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಚರ್ಚಿಸಲಾಗುತ್ತದೆ. ಈ ಚರ್ಚೆ, ಸಮಾಲೋಚನೆಯಿಂದ ಹೊರಬೀಳುವ ತೀರ್ಮಾನವನ್ನು ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಇದಕ್ಕೆ ಅನುಮೋದನೆ ನೀಡುತ್ತಾರೆ.

ಈ ಅನುಮೋದನೆ ನೀಡಿದ ನಂತರ ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ತನ್ನ ನಿಲುವು, ಅಭಿಪ್ರಾಯ, ಸ್ಪಷ್ಟೀಕರಣ ಬಯಸುತ್ತದೆ. ಇದಾದ ನಂತರ ಒಂದು ತೀರ್ಮಾನಕ್ಕೆ ಬಂದ ನಂತರ ಕಡೆಯಲ್ಲಿ ಅಧಿಕೃತ ಟಿಪ್ಪಣಿಯನ್ನು ಹೊರಡಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಕಡತದೊಳಗೆ ಅಡಕವಾಗಿರುತ್ತದೆ.

ಆದರೆ 2,660.26 ಕೋಟಿ ರು ಹಣ ಬಿಡುಗಡೆ ಬಿಡುಗಡೆ ಮಾಡಲು ಸಹಮತಿಸಿರುವ ಆರ್ಥಿಕ ಇಲಾಖೆಯು ತನ್ನ ಬಳಿಯೇ ಕಡತವು ಇಲ್ಲವೆಂದು ಅಧಿಕೃತವಾಗಿ ಹೇಳುತ್ತಿರುವುದು, ಹಣ ಬಿಡುಗಡೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂದು ಕೇಳಿ ಬರುತ್ತಿರುವ ಗುರುತರವಾದ  ಆರೋಪಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

ಈ ಅಧಿಕೃತ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು ಆಇ 186 ವೆಚ್ಚ-10/2025 ದಿನಾಂಕ 30-03-2025 ಎಂದು  ಕಡತದ ಸಂಖ್ಯೆಯನ್ನು ನಮೂದಿಸಿದೆ. ಇದೇ ಅಧಿಕೃತ ಟಿಪ್ಪಣಿಯನ್ನು ಮಹಿಳಾ ಮತ್ತು  ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು  ಅನಧಿಕೃತ ಟಿಪ್ಪಣಿ ಎಂದು ತನ್ನ ನಡವಳಿಯ 17ನೇ ಕ್ರಮಾಂಕದಲ್ಲಿ  ಉಲ್ಲೇಖಿಸಿದೆ. ಹೀಗಿದ್ದರೂ ಆರ್ಥಿಕ ಇಲಾಖೆಯು ತನ್ನ ಬಳಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಡತವು ಲಭ್ಯವಿಲ್ಲ ಎಂದು ಹೇಳಿದೆ.

ಮತ್ತೊಂದು ವಿಶೇಷವೆಂದರೇ ಆರ್ಥಿಕ ಇಲಾಖೆಯು 2025ರ ಮಾರ್ಚ್‌ 25ರಂದು ಇಲಾಖೆಗೆ ಪತ್ರ ಬರೆದಿತ್ತು. ಈ ಪತ್ರದಲ್ಲಿಯೂ ಆಇ 186 ವೆಚ್ಚ-10/2024 ಮತ್ತು WCD/SS/BUD/8/2024 ಎಂದು ನಮೂದಿಸಿದೆ.  2025ರ ಮಾರ್ಚ್‌ 25 ಪತ್ರ ಮತ್ತು  ಮತ್ತು ಮಾರ್ಚ್‌ 31ರಂದು ಅಧಿಕೃತ ಟಿಪ್ಪಣಿಯಲ್ಲಿ ಒಂದೇ ಕಡತ ಸಂಖ್ಯೆ ಅಂದರೇ ಆಇ 186 ವೆಚ್ಚ-10/ ಎಂದು ಹೇಳಿದೆ. ಒಂದೇ ತಿಂಗಳ 5 ದಿನದ ಅಂತರದಲ್ಲಿ ಇಸವಿಯನ್ನು ಬದಲಾಯಿಸಿರುವ ಇಲಾಖೆಯು ಕಡತ ಸಂಖ್ಯೆಯಲ್ಲಿ ಬದಲಿಸಿಲ್ಲ. ಆಇ 186 ವೆಚ್ಚ-10/ ಸಂಖ್ಯೆಯನ್ನೇ  ಮುಂದುವರೆಸಿದೆ.

2025 ಮಾರ್ಚ್‌ 25ರ ಪತ್ರದಲ್ಲೇನಿದೆ?

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತಾಲೂಕು ವಲಯದಡಿ ಅನುದಾನ ಬಿಡುಗಡೆಗೊಳಿಸಲು ಅನುವಾಗುವಂತೆ ರಾಜ್ಯ ವಲಯದ ಲೆಕ್ಕ ಶೀರ್ಷಿಕೆ 2235-02-103-0-73 ರಡಿ 2024-25ನೇ ಸಾಲಿನಲ್ಲಿ ಲಭ್ಯವಿರುವ ಅನುದಾನದಲ್ಲಿ ರು 253907.32 ಲಕ್ಷಗಳನ್ನು ತಾಲೂಕು ವಲಯದ ಲೆಕ್ಕ ಶೀರ್ಷಿಕೆ 2235-02-197-1-02-300 (2235-00-101-0-64) ಪುನರ್ವಿನಿಯೋಗದ ಮೂಲಕ ಒದಗಿಸಲಾಗಿದ್ದು ಸರ್ಕಾರಿ ಆದೇಶ (ಸಂಖ್ಯೆ ಆಇ 790 ಬಿಆರ್‍‌ಎಸ್‌ 2024, ದಿನಾಂಕ 25-03-2025) ನ್ನು ಲಗತ್ತಿಸಿ ಕಳಿಸಿದೆ ಎಂದು ಹೇಳಿದೆ.

 

 

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಒಟ್ಟು 253907.32 ಲಕ್ಷ ಗಳನ್ನು ಲೆಕ್ಕ ಶೀರ್ಷಿಕೆ 2235-02-197-1-02-300 (2235-00-101-0-64) ರಡಿ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಯು ಸಹಮತಿಸಿದ್ದು ಈ ಸಂಬಂಧ ಬಿಲ್‌ಗಳನ್ನು 2025ರ ಮಾರ್ಚ್‌ 30ರೊಳಗೆ ಖಜಾನೆಗೆ ಸಲ್ಲಿಸಬೇಕು ಎಂದು  ಆಡಳಿತ ಇಲಾಖೆಗೆ ತಿಳಿಸಿದೆ ಎಂದು ಸೂಚಿಸಿರುವುದು ಗೊತ್ತಾಗಿದೆ.

ಇದಾದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡವಳಿ ಹೊರಡಿಸಿದೆ.

ಮಹಿಳಾ, ಮಕ್ಕಳ ಅಭಿವೃದ್ದಿ ಇಲಾಖೆಯ ನಡವಳಿಯಲ್ಲೇನಿದೆ?

2024-25ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊರಡಿಸಿರುವ ನಡವಳಿಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಟಿಪ್ಪಣಿ ಸೇರಿದಂತೆ ಒಟ್ಟು 17 ಆದೇಶಗಳನ್ನು ಉಲ್ಲೇಖಿಸಿದೆ. ಕ್ರಮ ಸಂಖ್ಯೆ 1ರಿಂದ 10ವರೆಗಿನ ಆದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ವಲಯದ ಯೋಜನೆ ಕಾರ್ಯಕ್ರಮಗಳ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಏಪ್ರಿಲ್‌ 2024ರಿಂದ ಅಕ್ಟೋಬರ್‍‌ 2024ರವರೆಗಿನ ಧನ ಸಹಾಯ ಪಾವತಿಸಲು ಲೆಕ್ಕ ಶೀರ್ಷಿಕೆ (2235-02-103-0-73 (100), (422) ಹಾಗೂ (423) ರಡಿ ಒಟ್ಟು 2142693.80 ಲಕ್ಷ ಗಳನ್ನು ಬಿಡುಗಡೆಗೊಳಿಸಲು ಆದೇಶಿಸಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

 

ಗೃಹ ಲಕ್ಷ್ಮಿ ಯೋಜನೆಯನ್ನು ಇದುವರೆವಿಗೂ ರಾಜ್ಯವಲಯದಡಿ ಅನುಷ್ಠಾನಗೊಳಿಸುತ್ತಿದ್ದು ಜನವರಿ 2025ರಿಂದ ಈ ಯೋಜನೆಯನ್ನು ಜಿಲ್ಲಾ ಮತ್ತು ತಾಲೂಕು ವಲಯದಡಿ ಸೃಜಿಸಲಾಗಿರುವ ಹೊಸ ಲೆಕ್ಕ ಶೀರ್ಷಿಕೆಯಡಿ ಅನುಷ್ಠಾನಗೊಳಿಸುವಂತೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಅನುಸರಿಸಬೇಕಾದ ಅನುದಾನ ಬಿಡುಗಡೆ ವಿಧಾನದ ಬಗ್ಗೆ ತಿಳಿಸಿದೆ ಎಂದು ಹೇಳಿದೆ.

 

 

ಕ್ರಮ ಸಂಖ್ಯೆ 17ರಲ್ಲಿನ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಲೆಕ್ಕಶೀರ್ಷಿಕೆ ಅಡಿಯಲ್ಲಿ ಲಭ್ಯವಿರುವ ಅನುದಾನ 2,660.26 ಕೋಟಿ ರು.ಗಳನ್ನು ಹಾಗೂ ಜಿಲ್ಲಾ ವಲಯದ ಲೆಕ್ಕಶೀರ್ಷಿಕೆಯಲ್ಲಿ ಲಭ್ಯವಿರುವ ಬಾಕಿ ಅನುದಾನವನ್ನೂ ಸಹ ಒಳಗೊಂಡಂತೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

‘ಬೂಟ್‌ಲ್ಲಿ ಹೊಡೀಬೇಕು, ಆ…ಬೋ..ಮಗನಿಗೆ,….ಎ ಜಿ ಯವನಿಗೆ, ದಾವಣಗೆರೆ ಎಲೆಕ್ಷನ್‌ ಇರದಿದ್ರೆ 2 ತಿಂಗ್ಳ ಹಣವೂ ಸಿಗ್ತಿರಲಿಲ್ಲ,’; ಗೃಹಲಕ್ಷ್ಮಿ ಪ್ರಕರಣದಲ್ಲಿ ನಾಲಿಗೆ ಹರಿಬಿಟ್ಟ ನಿಗಮದ ಎಂ ಡಿ ಮಹೇಶ್‌ಬಾಬು

 

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಿದ್ದವರ ಪೈಕಿ ಮೃತರಿಗೂ ಹಣ ಪಾವತಿ ಕುರಿತಂತೆ ಅಕೌಂಟೆಂಟ್‌ ಜನರಲ್‌ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹೇಶ್‌ ಬಾಬು ಅವರು ನಾಲಗೆ ಹರಿಬಿಟ್ಟಿದ್ದರು.

 

ಮೃತರಿಗೂ ಗೃಹಲಕ್ಷ್ಮಿ ಹಣ ಪಾವತಿ; ಪತ್ರಿಕಾ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಸ್‌ಎಲ್‌ಬಿಸಿಯಲ್ಲಿನ ಅಂಕಿ ಅಂಶ, ಮೃತ ಫಲಾನುಭವಿಗಳ ಸಂಖ್ಯೆಯಲ್ಲಿ 52,207ರಷ್ಟು ವ್ಯತ್ಯಾಸ!

 

ಮೃತರಿಗೂ ಗೃಹಲಕ್ಷ್ಮಿ ಹಣ ಪಾವತಿ ಕುರಿತು ಸರ್ಕಾರವು ಬಿಡುಗಡೆಗೊಳಿಸಿದ್ದ ಅಂಕಿ ಅಂಶಗಳಿಗೂ ಎಸ್‌ಎಲ್‌ಬಿಸಿ ಬಿಡುಗಡೆ ಮಾಡಿದ್ದ ಅಂಕಿ ಸಂಖ್ಯೆಗಳ ಮಧ್ಯೆ ವ್ಯತ್ಯಾಸವಿತ್ತು.

 

ಗೃಹಲಕ್ಷ್ಮಿ; ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ, ಬ್ಯಾಂಕ್‌ನ ತಾಂತ್ರಿಕ ದೋಷವೇ ಕಾರಣ, ಸಿಎಜಿ ಆಕ್ಷೇಪಣೆ ತಳ್ಳಿ ಹಾಕಿದ ಸರ್ಕಾರ

 

ಅದೇ ರೀತಿ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ, ಇದಕ್ಕೆ ಬ್ಯಾಂಕ್‌ನ ತಾಂತ್ರಿಕ ದೋಷವೇ ಕಾರಣ ಎಂದು ಸರ್ಕಾರವು ಹೇಳಿಕೆ ನೀಡಿತ್ತು. ಈ ಕುರಿತು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

Hot this week

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...
Please Scan to make Your Contribution

Topics

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

Related Articles

Popular Categories

error: Content is protected !!