Friday | July 3, 2026 |

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ ದುರಸ್ತಿಗೆ ಅನುದಾನ ಒದಗಿಸಲು ಆರ್ಥಿಕ ಕ್ಲಿಷ್ಟತೆ ಇದೆ ಎಂದು ಪ್ರಸ್ತಾವಗಳನ್ನು ತಿರಸ್ಕರಿಸುತ್ತಿರುವ ಸರ್ಕಾರವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು 6 ಸಚಿವರ ವಸತಿ ಗೃಹಗಳಿಗೆ ಕಳೆದ 3 ವರ್ಷದಲ್ಲಿ ಒಟ್ಟಾರೆ 19.01 ಕೋಟಿ ರು ಖರ್ಚು ಮಾಡಿದೆ.

ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕೃಷ್ಣ ಮತ್ತು ಕಾವೇರಿ ಹಾಗೂ ಉಪ ಮುಖ್ಯಮಂತ್ರಿಗಳ ಕಚೇರಿ ಕುಮಾರಕೃಪಾ ಅತಿಥಿ ಗೃಹ ದುರಸ್ತಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ  9.38 ಕೋಟಿ ರು ವೆಚ್ಚ ಮಾಡಿದೆ.

2023-24 ರಿಂದ 2026ರ ಮೇ ತಿಂಳವರೆಗೆ  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ  ಅಧಿಕೃತ ಸರ್ಕಾರಿ ನಿವಾಸಗಳ ದುರಸ್ತಿ ಮತ್ತು ಗೃಹಪಯೋಗಿ ವಸ್ತುಗಳಿಗೆ ಮಾಡಿರುವ ವೆಚ್ಚದ ವಿವರಗಳನ್ನು ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

 

ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗ (2) ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಇನ್ನುಳಿದ 5 ಸಚಿವರ ವಸತಿಗೃಹಗಳಿಗೆ ಸಂಬಂಧಿಸಿದ ಖರ್ಚು ವೆಚ್ಚವನ್ನು ಮಾತ್ರ ನೀಡಿವೆ.

ಇನ್ನುಳಿದ ಸಚಿವರ ವಸತಿಗೃಹಗಳಿಗೆ ಮಾಡಿರುವ ಖರ್ಚು ವೆಚ್ಚದ ಮಾಹಿತಿಯನ್ನು ಶಾಸಕರ ಭವನದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗವು ಗಡುವು ಮೀರಿದರೂ  ಮಾಹಿತಿ ಒದಗಿಸಿಲ್ಲ. ಸದ್ಯ ನೀಡಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 5 ಸಚಿವರ ವಸತಿಗೃಹಗಳಿಗೆ ಕಳೆದ 3 ವರ್ಷದಲ್ಲಿ 19.01 ಕೋಟಿಯಷ್ಟು ಖರ್ಚು ಮಾಡಲಾಗಿದೆ.

ಕಾವೇರಿಯಲ್ಲಿ ಆಗಿರುವ ವೆಚ್ಚವೆಷ್ಟು?

ಕಾವೇರಿ ವಸತಿಗೃಹದಲ್ಲಿ ಹೊಸ ಸಭಾಂಗಣ, ಸ್ಟಕ್ಚರಲ್ ಗ್ಲೇಜಿಂಗ್‌, ಕಾನ್ಫ್‌ರೆನ್ಸ್‌ ಟೇಬಲ್,  ಕಾವೇರಿ ವಸತಿ ಗೃಹ ಆವರಣದಲ್ಲಿ ಇನ್ನಿತರೆ ಕಾಮಗಾರಿಗಳಿಗೆ 2.95 ಕೋಟಿ ರು ವೆಚ್ಚವಾಗಿದೆ. ಈ ಕಾಮಗಾರಿಗಳಿಗೆ 2024ರ ಮಾರ್ಚ್‌ 12 ಮತ್ತು ಮೇ 2ರಂದು ಕಾರ್ಯಾದೇಶ ನೀಡಲಾಗಿತ್ತು.

ಇದೇ ಕಾವೇರಿ ವಸತಿ ಗೃಹಕ್ಕೆ ಲೈಯಿಂಗ್‌ ವಾಲ್‌ ಟೈಲ್ಸ್‌, ಫ್ಲೋರಿಂಗ್‌ ಟೈಲ್ಸ್‌,  ಬಾತ್‌ ರೂಂ, ಡೈನಿಂಗ್‌, ಪ್ಯಾಸೇಜ್ ಏರಿಯಾ, ಟಫ್‌ಯೆಂಡ್ ಗ್ಲಾಸ್‌, ಫ್ಯಾಬ್ರಿಕೇಷನ್‌ ಕಾಮಗಾರಿ, ಮಾಡ್ಯುಲರ್ ಕಿಚನ್, ಶೌಚಾಲಯ, ಬಾತ್‌ ರೂಫ್‌ ಪಿಟ್ಟಿಂಗ್ಸ್‌, ಗ್ಲಾಸ್‌ ಪಾರ್ಟಿಯಷನ್ ಕಾಮಗಾರಿ ಸೇರಿದಂತೆ ಮುಖ್ಯಮಂತ್ರಿಗಳು ವಾಸ್ತವ್ಯ ಹೊಂದಿದ್ದ ಕಾವೇರಿಯಲ್ಲಿ ಇನ್ನಿತರೆ ದುರಸ್ತಿ ಮತ್ತು ನವೀಕರಣ ಮಾಡಲಾಗಿತ್ತು. ಇದಕ್ಕೆ 1.56 ಕೋಟಿ ರು ವೆಚ್ಚವಾಗಿದೆ.

ಹಾಗೆಯೇ ಕಾವೇರಿಯಲ್ಲಿ  ನ್ಯೂ ಸರ್ವೆಂಟ್‌ ರೂಂ ವಿತ್‌ ಟಾಯ್ಲೆಟ್,  ಸ್ಟೋರ್‍‌ ರೂಂ, ಸ್ಟೋರೇಜ್ ರಾಕ್ಸ್‌, ಅಡುಗೆ ಉಪಕರಣಗಳು, ಎಲೆಕ್ಟ್ರಿಕಲ್‌ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 1.76 ಕೋಟಿ ರು ವೆಚ್ಚವಾಗಿದೆ.

ಕಾವೇರಿಯಲ್ಲಿ ಸ್ಕ್ಯಾನಿಂಗ್‌ ರೂಂ ನಿರ್ಮಾಣ, ಹಸು ಶೆಡ್‌, ನಾಯಿ ಕೊಠಡಿ, ಗಾರ್ಡ್‌ ರೂಂ ನವೀಕರಣ, ಟ್ರಸ್ಸ್ ವರ್ಕ, ಪಫ್‌ ಶೀಟ್‌ ರೂಫ್‌, ಯುಪಿವಿಸಿ ವಿಂಡೋಸ್, ಫ್ಲೋರಿಂಗ್‌, ಸೆರಾಮಿಕ್ ಟೈಲ್ಸ್‌, ಪೊಲೀಸ್‌ ಸಿಬ್ಬಂದಿಗೆ ಬಂಕರ್ ರೂಂ, ಬೀದಿ ದೀಪ, ಭದ್ರತಾ ದೀಪ, ಲಾನ್‌ ದೀಪ್, ಕಂಟ್ರೋಲ್‌ ಪ್ಯಾನೆಲ್‌, ಎಲ್‌ಟಿಯುಜಿ ಕೇಬಲ್ ಮತ್ತಿತರೆ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ 1.82 ಕೋಟಿ ರು ಸೇರಿ ಒಟ್ಟಾರೆ 8.09 ಕೋಟಿ ರುಪಾಯಿನಷ್ಟು ವೆಚ್ಚವಾಗಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

ಕೃಷ್ಣ  ನವಿಕರಣಕ್ಕೆ ಆಗಿರುವ ಖರ್ಚೆಷ್ಟು?

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ನದಲ್ಲಿ ನಡೆದಿರುವ ವಿವಿಧ ರೀತಿಯ ಕಾಮಗಾರಿ, ನವೀಕರಣ, ಖರೀದಿ ಮತ್ತು ದುರಸ್ತಿ ಹೆಸರಿನಲ್ಲಿ ಕಳೆದ 3 ವರ್ಷದಲ್ಲಿ ಒಟ್ಟಾರೆ 1.29 ಕೋಟಿಯಷ್ಟು ಖರ್ಚಾಗಿದೆ. ಗೃಹ ಕಚೇರಿಯ ಕೃಷ್ಣದಲ್ಲಿ ಒಳಾಂಗಣದ ಪೈಂಟಿಂಗ್, ಅಡುಗೆ ಮನೆಯ ನವೀಕರಣ, ಕುರ್ಚಿಗಳು, ವಾಟರ್ ಫ್ಯೂರಿಫೈಯರ್ಸ್‌, ನೀರು ಸರಬರಾಜು ಮತ್ತು ಇನ್ನಿತರೆ ಕಾಮಗಾರಿಗಳಿಗೆ 17.20 ಲಕ್ಷ ರು ಖರ್ಚು ಮಾಡಲಾಗಿದೆ.

ಹಾಗೆಯೇ ಪಫ್‌ ಶೀಟ್‌, ಫ್ಯಾಬ್ರಿಕೇಷನ್‌ ವರ್ಕ್‌, ಯುಪಿವಿಸಿ ವಿಂಡೋ,  ಬಾಗಿಲುಗಳು, ಫ್ಲೋರಿಂಗ್‌ ಟೈಲ್ಸ್‌, ಬ್ಯಾಗ್‌ ಸ್ಕ್ಯಾನಿಂಗ್‌ ಕೊಠಡಿ, ಫಾಲ್ಸ್ ಸೀಲಿಂಗ್‌, ವುಡನ್ ಫ್ಲೋರಿಮಗ್‌, ಸೊಳ್ಳೆ ನಿಯಂತ್ರಣ ಮೆ‍ಷ್‌ ಬದಲಾವಣೆ, ಸ್ಯಾನಿಟರಿ ಫಿಟ್ಟಿಂಗ್ಸ್‌, ಸೋಫಾ ಸೆಟ್‌, ಟೇಬಲ್ಸ್‌ ಇನ್ನಿತರೆ ತುರ್ತು ಕಾಮಗಾರಿಗಳಿಗೆ 79.60 ಲಕ್ಷ ರು ಖರ್ಚಾಗಿದೆ.

ಹಾಗೆಯೇ ಕೃಷ್ಣದಲ್ಲಿನ ಸಾಮಾನ್ಯ ಶೌಚಾಲಯಗಳ ನವೀಕರಣ, ಫಾಲ್ಸ್‌ ಸೀಲಿಂಗ್, ಜನತಾ ದರ್ಶನದ ಕ್ಯಾಬಿನ್‌ಗಳು, ಪಫ್‌ ಶೀಟ್‌ ರೂಫಿಂಗ್‌, ಫ್ಯಾಬ್ರಿಕೇಷನ್‌ ಕಾಮಗಾರಿ, ಅಲ್ಯುಮಿನಿಯಂ ಪಾರ್ಟಿಷನ್, ಫ್ಲೋರಿಂಗ್‌ ಟೈಲ್ಸ್‌, ಸಿಸಿಟಿವಿ ಕೊಠಡಿಯ ಇನ್ನಿತರೆ  ಕಾಮಗಾರಿಗಳು, ಪೊಲೀಸ್‌ ಡ್ರೆಸ್ಸಿಂಗ್‌ ಕೊಠಡಿ, ಪಂಪ್‌ ರೂಂನ ದುರಸ್ತಿ, ಆಫೀಸ್‌ ಫರ್ನಿಚರ್ಸ್‌, ಕುರ್ಚಿಗಳು, ಕೃಷ್ಣದಲ್ಲಿರುವ ವರುಣ ಸ್ಟುಡಿಯೋದ ಕರ್ಟೈನ್ಸ್‌, , ಪೈಟಿಂಗ್‌, ವಾಟರ್‍‌ ಪ್ರೂಫಿಂಗ್‌, ಬೋರ್‍‌ವೆಲ್‌ ರಿಪೇರಿ ಮತ್ತು ಕೃಷ್ಣದಲ್ಲಿನ ಇತರೆ ತುರ್ತು ದುರಸ್ತಿ  ಕಾಮಗಾರಿಗಳಿಗೆಗೆ 33.16 ಲಕ್ಷ ರು ಖರ್ಚಾಗಿದೆ.

ರೇಸ್‌ ವ್ಯೂ ಕಟ್ಟಡದಲ್ಲಿರವ ಸಚಿವರ ನಿವಾಸಕ್ಕೆ ಕಾರ್‍‌ ಪಾರ್ಕಿಂಗ್‌ ಶೆಲ್ಟರ್ ಶೀಟ್‌, ಪಾದಚಾರಿ ಮಾರ್ಗ, ಎಫ್‌ಆರ್‍‌ಪಿ ಶೀಟ್‌, ಪೈಂಟಿಂಗ್‌ ಇನ್ನಿತರೆ ಕಾಮಗಾರಿಗಳಿಗೆ 9.70 ಲಕ್ಷ ರು ವೆಚ್ಚವಾಗಿದೆ. ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ಹಂಚಿಕೆ ಮಾಡಲಾಗಿದ್ದ  ಕುಮಾರಕೃಪ ಅತಿಥಿ ಗೃಹ (1 ಮತ್ತು 2)  ಕ್ಕೆ ಪೈಂಟಿಂಗ್, ಪಾಲಿಷಿಂಗ್‌ ಪ್ಯಾಚಸ್‌, ಬಾಗಿಲು, ಕಿಟಕಿ ದುರಸ್ತಿ, ಕಾಂಪೌಂಡ್‌ ಗ್ರಿಲ್‌, ಇನ್ನಿತರೆ ದುರಸ್ತಿ ಕಾಮಗಾರಿ, ಖರೀದಿಗೆ 24.97 ಲಕ್ಷ ರು ವೆಚ್ಚವಾಗಿದೆ. ಅದೇ ರೀತಿ ಇದೇ ಕುಮಾರ ಕೃಪ ಅತಿಥಿ ಗೃಹ 1ಕ್ಕೆ ಫರ್ನಿಚರ್‍ಸ್‌ ಫ್ಯಾಬ್ರಿಕೇಷನ್ಸ್‌ , ಗ್ರಿಲ್‌ ಕಾಮಗಾರಿ, ಕಾರ್ಬೋನೆಟ್‌ ಶೀಟ್‌ ಇನ್ನಿತರೆ ಕಾಮಗಾರಿಗಳಿಗೆ 43.99 ಲಕ್ಷ ರು ವೆಚ್ಚವಾಗಿದೆ.

 

 

ರೇಸ್‌ ವ್ಯೂ ಕಾಟೇಜ್‌ನಲ್ಲಿರುವ ಸಚಿವ ಎಂ ಬಿ ಪಾಟೀಲ್‌ ಅವರ ವಸತಿಗೃಹಕ್ಕೆ ವಾಟರ್‍‌ ಫ್ರೂಫಿಂಗ್‌,  ಸ್ಯಾನಿಟೇರ್‍‌ ಫಿಟ್ಟಿಂಗ್ಸ್‌,  ಪೆಸ್ಟ್‌ ಕಂಟ್ರೋಲ್‌ ಸೇವೆ, ಚೈನ್‌ ಲಿಂಕ್ ಫೆನ್ಸಿಂಗ್‌, ಕಾರ್ಪೇಟ್‌ ಕ್ಲೀನಿಂಗ್, ಇನ್ನಿತರೆ ಕೆಲಸಗಳಿಗೆ 8.62 ಲಕ್ಷ ರು. ಖರ್ಚಾಗಿದೆ.

ವಸತಿ ಸಚಿವರಾಗಿದ್ದ ಬಿ ಝಡ್‌ ಝಮೀರ್ ಅಹ್ಮದ್‌ ಖಾನ್‌ ಅವರಿಗೆ ಸ್ಯಾಂಕಿ ರಸ್ತೆಯಲ್ಲಿ ಹಂಚಿಕೆಯಾಗಿದ್ದ ವಸತಿ ಗೃಹಕ್ಕೆ ಕಳೆದ 3 ವರ್ಷಗಳಲ್ಲಿ ಒಟ್ಟಾರೆ 73.08 ಲಕ್ಷ ರು ಖರ್ಚು ಮಾಡಲಾಗಿದೆ.  ಪೈಟಿಂಗ್, ಪಾಲಿಶಿಂಗ್‌, ಶೌಚಾಯಗಳ ನವೀಕರಣ, ವಾಟರ್‍‌ ಫ್ರೂಫಿಂಗ್‌, ಸೊಳ್ಳೆ ನಿಯಂತ್ರಣ ಮೆಷ್‌, ಸರ್ವೆಂಟ್ ಕೊಠಡಿ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 48.23 ಲಕ್ಷ ರು ಖರ್ಚಾಗಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

ಇದೇ ವಸತಿ ಗೃಹಕ್ಕೆ ಸರ್ವೆಂಟ್‌ ರೂಂ, ಪಾರ್ಕಿಂಗ್‌ ಟೈಲ್ಸ್‌ಗಳ ಬದಲಾವಣೆ, ವುಡನ್‌ ಪಾರ್ಟಿಷನ್‌, ನೀರು ಸರಬರಾಜು ಮತ್ತು ಸ್ಯಾನಿಟರಿ ಪಿಟ್ಟಿಂಗ್ಸ್‌ ಸೇರಿ ಇನ್ನಿತರೆ ದುರಸ್ತಿ, ನವೀಕರಣ ಕಾಮಗಾರಿಗಳಿಗೆ 24.85 ಲಕ್ಷ ರು ಖರ್ಚಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಪ್ರಿಯಾಂಕ್  ಖರ್ಗೆ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಕ್ಕೆ ಒಟ್ಟಾರೆ 68.21 ಲಕ್ಷ   ಖರ್ಚಾಗಿದೆ. ಪೈಟಿಂಗ್, ಪಾಲಿಷಿಂಗ್‌, ವಾಟರ್ ಫ್ರೂಪಿಂಗ್‌, ವಾರ್ಡ್‌ರೋಬ್ಸ್‌, ಫ್ಲೋರಿಂಗ್‌, ಫಫ್‌ ಶೀಟ್‌ ಶೆಲ್ಟರ್‍‌, ಸ್ಯಾನಿಟರಿ , ನೀರು ಸರಬರಾಜು, ಪೆಸ್ಟ್‌ ಕಂಟ್ರೋಲ್, ಕ್ಲೀನಿಂಗ್ ಮತ್ತು ಇನ್ನಿತರೆ ದುರಸ್ತಿ, ನವೀಕರಣಕ್ಕೆ 39.89 ಲಕ್ಷ ರು ಖರ್ಚಾಗಿದೆ. ಸಾಮಾನ್ಯ ಶೌಚಾಲಯಗಳ ನವೀಕರಣ, ಪೈಂಟಿಂಗ್‌, ವಾಲ್‌ ಪೇಪರ್‍‌ ಇನ್ನಿತರೆ ಕೆಲಸಗಳಿಗೆ 28.32ಲಕ್ಷ ರು ವೆಚ್ಚವಾಗಿದೆ.

ರೇಸ್‌ ವ್ಯೂ ಕಟ್ಟಡದಲ್ಲಿರುವ ಸಚಿವ ಎಂ ಬಿ ಪಾಟೀಲ್‌ ಅವರು ಕಾರ್ಯನಿರ್ವಹಿಸಿದ್ದ ವಸತಿಗೃಹಕ್ಕೆ 61.94 ಲಕ್ಷ ರು ವೆಚ್ಚವಾಗಿದೆ. ಈ ವಸತಿಗೃಹಕ್ಕೆ ಪೈಟಿಂಗ್‌, ಪಾಲಿಶಿಂಗ್‌, ಶೌಚಾಲಯಗಳ ನವೀಕರಣ, ಅಡುಗೆ ಮನೆ ನವೀಕರಣ, ವಾರ್ಡ್‌ರೋಬ್‌, ಟೈಲ್ಸ್‌ಗಳ ಬದಲಾವಣೆ, ಬಾಗಿಲು ಮತ್ತು ಕಿಟಕಿಗಳ ದುರಸ್ತಿ ಗೆ ಈ ಮೊತ್ತವು ವೆಚ್ಚವಾಗಿರುವುದ ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

ಅದೇ ರೀತಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಕ್ಕೆ ಒಟ್ಟಾರೆ 68.55 ಲಕ್ಷ ರು ಖರ್ಚಾಗಿದೆ.  ಈ ವಸತಿ ಗೃಹಕ್ಕೆ ಪೈಂಟಿಂಗ್, ಪಾಲಿಶಿಮಗ್, ಶೌಚಾಲಯಗಳ ನವೀಕರಣ, ವಾಟರ್‍‌ ಫ್ರೂಪಿಂಗ್‌, ಸೊಳ್ಳೆ ನಿಯಂತ್ರಣ ಮೆಷ್‌ ಅಳವಡಿಕೆ, ಇನ್ನಿತರೆ ಕಾಮಗಾರಿ, ದುರಸ್ತಿ, ನವೀಕರಣಕ್ಕೆ 47.59 ಲಕ್ಷ ರು ಖರ್ಚಾಗಿದೆ.  ಅದೇ ರೀತಿ ಇದೇ ವಸತಿಗೃಹಕ್ಕೆ  ಪೈಂಟಿಂಗ್, ಪಫ್‌ ಶೀಟ್‌, ವೆಟ್ರಿಫೈಡ್‌ ಟೈಲ್ಸ್‌,  ಸ್ಯಾನಿಟರಿ ಮತ್ತು ನೀರು ಸರಬರಾಜು ಪೈಪ್ ಲೈನ್‌ ಕಾಮಗಾರಿ, ಬಾಗಿಲು ಮತ್ತು ಕಿಟಕಿಗಳ ದುರಸ್ತಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 20.95 ಲಕ್ಷ ರು ಖರ್ಚಾಗಿದೆ.

ಸ್ಪೀಕರ್‍‌ ಆಗಿದ್ದ ಯು ಟಿ ಖಾದರ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹಕ್ಕೆ ಒಟ್ಟಾರೆ 43.87 ಲಕ್ಷ ರು ವೆಚ್ಚವಾಗಿದೆ. ಸಮಾಜ ಕಲ್ಯಾಣ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಕ್ಕೆ  41.22 ಲಕ್ಷ ರು ವೆಚ್ಚವಾಗಿದೆ.

 

 

ಹಾಗೆಯೇ ಸಚಿವರಾಗಿದ್ದ ಚೆಲುವರಾಯಸ್ವಾಮಿ, ಎನ್‌ ಎಸ್‌ ಬೋಸರಾಜು, ಶಿವರಾಜ ತಂಗಡಗಿ, ಕೆ ವೆಂಕಟೇಶ್‌, ಸಂತೋಷ್‌ ಲಾಡ್‌, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಎಚ್‌ ಕೆ ಪಾಟೀಲ್‌, ಯು ಟಿ ಖಾದರ್‍‌, ಎಸ್‌ ಎಸ್‌ ಮಲ್ಲಿಕಾರ್ಜುನ್‌, ಈಶ್ವರ್ ಖಂಡ್ರೆ, ಡಾ ಜಿ ಪರಮೇಶ್ವರ್‍‌, ರಹೀಂ ಖಾನ್‌, ದಿನೇಶ್‌ ಗುಂಡುರಾವ್, ಮಂಕಾಳ್ ವೈದ್ಯ ಅವರ ವಸತಿಗೃಹಗಳಿಗೆ ತಲಾ 9,91,81,175 ರು ನಂತೆ ಗೃಹಪಯೋಗಿ ವಸ್ತುಗಳನ್ನು ಖರೀದಿಸಿದೆ.

 

ಕಾವೇರಿ ವಸತಿಗೃಹ ಆವರಣದಲ್ಲಿ ಕಾಮಗಾರಿ, ಡಿಸಿಎಂ ವಸತಿಗೃಹಕ್ಕೆ ಪೀಠೋಪಕರಣ; 3.10 ಕೋಟಿ ವೆಚ್ಚ

 

ಕಾವೇರಿ ವಸತಿ ಗೃಹ ಆವರಣದಲ್ಲಿ ಆರಂಭದಲ್ಲೇ ಕೈಗೆತ್ತಿಕೊಂಡಿದ್ದ  ದುರಸ್ತಿ, ನವೀಕರಣ ಕಾಮಗಾರಿಗಳ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

 

ಕೆ ಕೆ ಗೆಸ್ಟ್‌ಹೌಸ್‌ನಲ್ಲಿದ್ದ ಉಪ ಮುಖ್ಯಮಂತ್ರಿ ವಸತಿ ಗೃಹಕ್ಕೂ ಸಹ ನವೀಕರಣ ಕಾಮಗಾರಿ ಮಾಡಿದ್ದರಿಂದಾಗಿ 33 ಲಕ್ಷ ರು ವೆಚ್ಚವಾಗಿತ್ತು ಎಂದು ದಿ ಫೈಲ್ ಆರಂಭದಲ್ಲೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಡಿಸಿಎಂ ವಸತಿಗೃಹದ ಗಾರ್ಡ್‌ನ್‌ ಲೈಟ್ಸ್‌ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ

 

ಡಿಸಿಎಂ ವಸತಿಗೃಹದ ಗಾರ್ಡ್‌ನ್ ಲೈಟ್ಸ್‌  ಸೇರಿದಂತೆ ಇನ್ನಿತರೆ ದುರಸ್ತಿ ಕಾಮಗಾರಿಗಳಿಗೆ ಮಾಡಿದ್ದ ವೆಚ್ಚದ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ವಿಧಾನಸೌಧದಲ್ಲಿನ ಸಿಎಂ ಕೊಠಡಿ ನವೀಕರಣಕ್ಕೆ ಮೌಖಿಕ ಸೂಚನೆ; ಅಂದಾಜು 2.50 ಕೋಟಿ ವೆಚ್ಚ?

 

ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಅಧಿಕೃತ ಕಚೇರಿಯ ಕೊಠಡಿ ನವೀಕರಣಕ್ಕೆ  ಮಾಡಿದ್ದ ವೆಚ್ಚದ ಕುರಿತಾಗಿಯೂ ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...
Please Scan to make Your Contribution

Topics

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...

Related Articles

Popular Categories

error: Content is protected !!