Monday | May 11, 2026 |

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ ವೇತನ ಪಾವತಿಸಿ ಸರ್ಕಾರಕ್ಕೆ ಮಾಡಿದ್ದ ವಂಚನೆ ಪ್ರಕರಣದಲ್ಲಿ  ಕೆಲವು ಅಧಿಕಾರಿಗಳ ವಿರುದ್ಧ ಸರ್ಕಾರದ ಹಂತದಲ್ಲಿಯೇ ಇಲಾಖೆ ವಿಚಾರಣೆಯನ್ನು ಕೈ ಬಿಟ್ಟು ಆರೋಪ ಮುಕ್ತಗೊಳಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂ.ಪಿ. ಮಾದೇಗೌಡ ಮತ್ತಿತರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಮತ್ತು ಮರು ವಿಚಾರಣೆ ನಡೆಸಬೇಕು ಎಂದು ಕಾನೂನು ಇಲಾಖೆಯು ಸಹ 2 ವರ್ಷಗಳ ಹಿಂದೆಯೇ  ಅಭಿಪ್ರಾಯ ನೀಡಿತ್ತು. ಆದರೆ ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಏನು ಕ್ರಮಕೈಗೊಂಡಿದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಇಲಾಖೆಯು ಬಹಿರಂಗಪಡಿಸಿಲ್ಲ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಆರ್‍‌ಟಿಐ ಅಡಿಯಲ್ಲಿ ಕಾನೂನು ಇಲಾಖೆಯ ಅಭಿಪ್ರಾಯದ ಕಡತವನ್ನು ಪಡೆದುಕೊಂಡಿದೆ.

ಎಂ ಪಿ ಮಾದೇಗೌಡ ಮತ್ತಿತರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಕುರಿತು ಕಡತವನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ  ಮರು ವಿಚಾರಣೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಿಸಿತ್ತು.

2011ರಿಂದ 2014ರವರೆಗೆ ರಾಮನಗರ ಜಿಲ್ಲೆ ಹೆಚ್‌ಆರ್‍ಎಂಎಸ್ ಮೂಲಕ ನಕಲಿ ಶಿಕ್ಷಕರಿಗೆ ವೇತನ ಪಾವತಿಸಿ ಸರ್ಕಾರಕ್ಕೆ ವಂಚನೆಯಾಗಿತ್ತು. ಈ ಪ್ರಕರಣದಲ್ಲಿ 10 ಆರೋಪಿತರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಿತ್ತು. 02 ಆರೋಪಿತರ ವಿರುದ್ಧ ಇಲಾಖೆ ಆಯುಕ್ತರ ಹಂತದಲ್ಲಿ ಹಾಗೂ ಉಳಿದ ಗ್ರೂಪ್ ಎ ಅಧಿಕಾರಿಗಳ ವಿರುದ್ಧ ಸರ್ಕಾರದ ಹಂತದಲ್ಲಿ ಇಲಾಖೆ ವಿಚಾರಣೆ ನಡೆಸಿತ್ತು.

ಅಲ್ಲದೇ ಸರ್ಕಾರದ ಹಂತದಲ್ಲಿ ನಡೆಸಿದ್ದ ವಿಚಾರಣೆಯಲ್ಲಿ 04 ಅಧಿಕಾರಿಗಳು ನಿವೃತ್ತರಾಗಿದ್ದರು. ಹೀಗಾಗಿ ಅವರುಗಳ ವಿರುದ್ಧ ಇಲಾಖೆ ವಿಚಾರಣೆ ನಡೆದಿರಲಿಲ್ಲ. ಮತ್ತು ಉಳಿದ 04 ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆದು ದೋಷಮುಕ್ತಗೊಳಿಸಿ ಅಂತಿಮ ಆದೇಶ ಮಾಡಲಾಗಿತ್ತು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಅಲ್ಲದೇ ಆಯುಕ್ತರ ಹಂತದಲ್ಲಿ ನಡೆದಿದ್ದ ವಿಚಾರಣೆಯ ಒಂದು ಪ್ರಕರಣದಲ್ಲಿ ಪ್ರಥಮದರ್ಜೆ ಸಹಾಯಕ ಮಂಜುನಾಥ್‌ ಡಿ ವಿ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಈ ಕುರಿತು ಆರೋಪಿತ ಅಧಿಕಾರಿ ಕೆಎಟಿಯಲ್ಲಿ ಅರ್ಜಿ (ಸಂಖ್ಯೆ; 2680/2021) ದಾಖಲಿಸಿದ್ದರು. ಈ ಪ್ರಕರಣದಲ್ಲಿ  ಇಲಾಖೆ ಪರ  2022ರ ಜನವರಿ 12ರಂದು ತೀರ್ಪು ಬಂದಿತ್ತು. ಈ ತೀರ್ಪಿನ ವಿರುದ್ಧ ಆರೋಪಿತ ಅಧಿಕಾರಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಮೂಲಕ ಮೇಲ್ಮನವಿ  (ಸಂಖ್ಯೆ 16654/2022) ಸಲ್ಲಿಸಿದ್ದರು. ಹೈಕೋರ್ಟ್ ಕೂಡ 2023ರ ಆಗಸ್ಟ್ 18ರಂದು  ಕೆಎಟಿ ಆದೇಶವನ್ನೇ ಎತ್ತಿ ಹಿಡಿದಿತ್ತು.  ಹೈಕೋರ್ಟ್‌ ನೀಡಿದ್ದ  ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಈ ಪ್ರಕರಣವು ಅರ್ಹವಾಗಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅಭಿಪ್ರಾಯಿಸಿತ್ತು.

ಆರೋಪಿತ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿರುವುದನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಸ್ಥಿರೀಕರಿಸಿತ್ತು. ಅಲ್ಲದೇ ಎಲ್ಲಾ ಆರೋಪಿತ ಅಧಿಕಾರಿಗಳ ವಿರುದ್ಧ  ಜಂಟಿ ವಿಚಾರಣೆ ಕೈಗೊಳ್ಳಲು ನ್ಯಾಯ ಮಂಡಳಿಯು ಆದೇಶಿಸಿತ್ತು. ಹೀಗಾಗಿ ಇಲಾಖೆಯು ಜಂಟಿ ಇಲಾಖೆ ವಿಚಾರಣೆ ನಡೆಸಲು ಮುಂದಾಗಿತ್ತು. ಆದರೆ ಆರೋಪಿತರ ಪೈಕಿ 4 ಮಂದಿ ಅಧಿಕಾರಿಗಳು ನಿವೃತ್ತರಾಗಿದ್ದರು. ಹೀಗಾಗಿ ಕೆಸಿಎಸ್‌ಆರ್ ನಿಯಮಾವಳಿಗಳ ಪ್ರಕಾರ ಕಾಲಮಿತಿ ಮೀರಿತ್ತು. ಈ ಮಧ್ಯೆ ಇನ್ನುಳಿದ 4 ಆರೋಪಿತ ಅಧಿಕಾರಿಗಳ ವಿರುದ್ಧ ಈಗಾಗಲೇ ನಿಯಮಗಳ ಅನ್ವಯ ಶಿಸ್ತು ಕ್ರಮ ಜರುಗಿಸುತ್ತಾದರೂ ಕಡೆಯಲ್ಲಿ ಅವರನ್ನು ದೋಷಮುಕ್ತಗೊಳಿಸಿತ್ತು.

ಈ ಪ್ರಕರಣದದಲ್ಲಿ ಅರ್ಜಿದಾರರನ್ನು ಹೊರತುಪಡಿಸಿ ಬಾಕಿ ಉಳಿದ ಮತ್ತೋರ್ವ ಆರೋಪಿತರ ವಿರುದ್ಧ ದಂಡನೆ ವಿಧಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪರಿಶೀಲನೆ ನಡೆಸಿತ್ತು.

ಕಾನೂನು ಇಲಾಖೆ ಅಭಿಪ್ರಾಯದಲ್ಲೇನಿದೆ?

ಈ ಕುರಿತು ಕಾನೂನು ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ. ಕೆಎಟಿ ಅರ್ಜಿ ಸಂಖ್ಯೆ 2680/2021 ಮತ್ತು 2024ರ ಮಾರ್ಚ್‌ 6ರಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಹಾಗೂ ಒಂದು ವೇಳೆ ತೀರ್ಪಿನ ಅನುಸಾರ ಕ್ರಮವಹಿಸಲು ಆಡಳಿತ ಇಲಾಖೆಯು ಕ್ರಮವಹಿಸಿದ್ದಲ್ಲಿ ಮೊದಲನೆಯದಾಗಿ ಜಂಟಿ ಇಲಾಖೆ ವಿಚಾರಣೆ ನಡೆಸಬಹುದು. ಆದರೂ ಇದು ಸರ್ಕಾರ ಅಥವಾ ಶಿಸ್ತು ಪ್ರಾಧಿಕಾರದ ವಿವೇಚನೆಗೆ ಒಳಪಟ್ಟಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

ಎರಡನೆಯದಾಗಿ ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳ ವಿರುದ್ಧ ಸರ್ಕಾರದ ಹಂತದಲ್ಲೇ ಇಲಾಖೆ ವಿಚಾರಣೆಯನ್ನು ಕೈಬಿಟ್ಟು ಆರೋಪಮುಕ್ತಗೊಳಿಸಿದೆ. ಹೀಗಾಗಿ ಅದೇ ಆರೋಪಗಳ ಬಗ್ಗೆ ಮರು ವಿಚಾರಣೆ ಮಾಡುವ ಕುರಿತು ಸ್ಪಷ್ಟ ಅಭಿಪ್ರಾಯ ನೀಡಿದೆ. ಇದರ ಪ್ರಕಾರ ಉಚ್ಛ ನ್ಯಾಯಾಲಯವು ನೀಡಿದ್ದ ಆದೇಶವನ್ನು ಮೇಲ್ಮನವಿ ಮೂಲಕ ಪ್ರಶ್ನಿಸಲು ಅರ್ಹ ಪ್ರಕರಣವಲ್ಲ ಎಂದು ಕಾನೂನು ಕೋಶದ ಮುಖ್ಯಸ್ಥರು ಅಭಿಪ್ರಾಯಿಸಿದ್ದಾರೆ. ನಂತರ ನ್ಯಾಯ ಮಂಡಳಿಯ 2024 ಮಾರ್ಚ್‌ 6ರಂದು ನೀಡಿದ್ದ ತೀರ್ಪನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತು ಆಡಳಿತ ಇಲಾಖೆಯು ಯಾವುದೇ ಅಭಿಪ್ರಾಯ ಪಡೆಯದಿರುವುದು ಕಂಡುಬರುತ್ತಿಲ್ಲ ಎಂದು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಒಂದು ವೇಳೆ ಆಡಳಿತ ಇಲಾಖೆಯು ನ್ಯಾಯಮಂಡಳಿಯ ಆದೇಶವನ್ನು ಪಾಲಿಸಲು ಕ್ರಮವಹಿಸುವುದಾದರೇ ಜಂಟಿ ವಿಚಾರಣೆ ನಡೆಸಲು ಸಂಬಂಧಪಟ್ಟ ನಿಯಮಗಳಲ್ಲಿ ಉಲ್ಲೇಖಿಸಿರುವ ಕ್ರಮಗಳನ್ನು ಅನುಸರಿಸಬೇಕು. ಎರಡನೆಯದಾಗಿ ಈ ಪ್ರಕರಣದಲ್ಲಿ ಈಗಾಗಲೇ 04 ಆರೋಪಿತರ ವಿರುದ್ಧ ಸರ್ಕಾರದ ಹಂತದಲ್ಲಿ ಇಲಾಖೆ ವಿಚಾರಣೆ ಕೈಬಿಟ್ಟು ಆರೋಪಮುಕ್ತಗೊಳಿಸಿದ ಆದೇಶಿಸಿದ ನಂತರ ನ್ಯಾಯಮಂಡಳಿಯು ಅಂತಿಮ ಆದೇಶ ಹೊರಡಿಸಿದೆ.

 

 

ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಆದೇಶದ ಅನ್ವಯ ಅದೇ ಆರೋಪಗಳ ಕುರಿತು ಮರು ವಿಚಾರಣೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ. ಈ ಅಭಿಪ್ರಾಯದ ಕುರಿತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

 

ಇದೇ ಪ್ರಕರಣದಲ್ಲಿ ಎಂ ಪಿ ಮಾದೇಗೌಡ ಅವರು ಬಂಧನಕ್ಕೊಳಗಾಗಿ ಅ ನಂತರ  ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೇ ಇದೇ ಆರೋಪಿತ ಅಧಿಕಾರಿಯನ್ನು ಹಿಂದಿನ ಹುದ್ದೆಯ  ಸೇವೆಯಲ್ಲಿ ಪುನರ್‌ ಸ್ಥಾಪಿಸುವ ಸಂಬಂಧದ ಕಡತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್‌ ಅವರ ನಿರ್ದೇಶನದಂತೆ ಸರ್ಕಾರಕ್ಕೆ ಮಂಡಿಸಿತ್ತು. ಈ ಸಂಬಂಧ 2022ರ ಅಕ್ಟೋಬರ್‌ 20ರಂದು ಅಂದು ಸಚಿವರಾಗಿದ್ದ  ಬಿ ಸಿ ನಾಗೇಶ್‌ ಅವರ ಕಚೇರಿಯಲ್ಲಿ ಚರ್ಚೆಯೂ ನಡೆದಿತ್ತು.

ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ಬಿ ಕೆ ಎಸ್‌ ವರ್ಧನ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದ ಇಲಾಖೆಯು ಆರೋಪಿ ಅಧಿಕಾರಿಗಳು ಅತ್ಯಲ್ಪ ಅವಧಿಯಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ತೆರೆದಿರುವ ಕಡತಕ್ಕೆ ಬಿರುಸಿನ ಚಾಲನೆ ನೀಡಿತ್ತು.

ಈ ಪ್ರಕರಣದ ಕುರಿತು ಸಿಐಡಿಯು ತನ್ನ ತನಿಖೆಯನ್ನು ಮುಂದುವರೆಸಿದ್ದರೂ ಆರೋಪಿತ ಅಧಿಕಾರಿಗಳನ್ನು ಹಿಂದಿನ ಹುದ್ದೆಯಲ್ಲಿಯೇ ಮರುಸ್ಥಾಪಿಸಲು ಶಿಕ್ಷಣ ಇಲಾಖೆಯು ಮುಂದಾಗುವ ಮೂಲಕ ಸಾಕ್ಷ್ಯಗಳ ನಾಶಕ್ಕೆ ಪರೋಕ್ಷವಾಗಿ ಕಾರಣವಾಗಲಿದ್ದರೂ ಪ್ರಸ್ತಾವನೆ ಸಲ್ಲಿಸಿದ್ದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.

ಇವರನ್ನು ಸೇವೆಗೆ ಪುನರ್‌ ಸ್ಥಾಪಿಸಿದರೆ ‘ಇದು ವಿಚಾರಣೆಯ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಮತ್ತು ಇದು ಆಡಳಿತದ ಹಿತದೃಷ್ಟಿಯಿಂದ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸಕಾಲಿಕ ಆಡಳಿತದ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬಹುದು. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಮೇಲೆ ತಿಳಿಸಿದ ಸಿಬ್ಬಂದಿ ಯಾವುದೇ ಹಸ್ತಕ್ಷೇಪದ ಸಾಧ್ಯತೆಯಿಲ್ಲ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳು ಟಿಪ್ಪಣಿಯಲ್ಲಿ ಅಭಿಪ್ರಾಯಿಸಿದ್ದರು.

ಮಾದೇಗೌಡ ಅವರನ್ನು 2022ರ ಸೆ.26, ಬಿಕೆಎಸ್‌ ವರ್ಧನ್‌ ಅವರನ್ನು 2022ರ ಸೆ.19, ಗೀತಾ ಅವರನ್ನು 2022ರ ಅಕ್ಟೋಬರ್‌ 1ರಂದು ಅಮಾನತುಗೊಳಿಸಿ ಸರ್ಕಾರವು ಆದೇಶ ಹೊರಡಿಸಿತ್ತು. ಈ ಪೈಕಿ ಮಾದೇಗೌಡ ಅವರು 2022ರ ಅಕ್ಟೋಬರ್‌ 11ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಮಾದೇಗೌಡ ಅವರು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ‘ಈ ಮೊಕದ್ದಮೆಯಲ್ಲಿ ನ್ಯಾಯಾಲಯದ ಮುಂದಿನ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣೀಕರಿಸುತ್ತೇನೆ,’ ಎಂದು ಮನವಿಯಲ್ಲಿ ತಿಳಿಸಿದ್ದರು.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್‌ ಅವರು ಮೌಖಿಕ ಸೂಚನೆ ಮೇರೆಗೆ ಅಧಿಕಾರಿಗಳು ಕಡತವನ್ನು ಮಂಡಿಸಿದ್ದಾರೆ. ಇದರಲ್ಲಿ ‘ ಸಾರ್ವಜನಿಕ ಹಿತದೃಷ್ಟಿಯಿಂದ ಮಾದೇಗೌಡ, ಬಿ ಕೆ ಎಸ್‌ ವರ್ಧನ್‌, ಗೀತಾ ಅವರು ಎ ವೃಂದದ ಹಿರಿಯ ಅಧಿಕಾರಿಗಳಾಗಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಇವರನ್ನು ಸೇವೆಗೆ ಪುನರ್‌ ಸ್ಥಾಪಿಸುವುದು ಅವಶ್ಯಕವಾಗಿದೆ,’ ಎಂದು ಆಯುಕ್ತರ ಕಚೇರಿ ಅಧಿಕಾರಿಗಳು ಟಿಪ್ಪಣಿ ಹಾಕಿದ್ದರು.

 

ಇಲಾಖಾಧಿಕಾರಿಗಳ ಮಧ್ಯೆ ನಡೆದಿರುವ ಆಂತರಿಕ ಟಿಪ್ಪಣಿ ಪ್ರತಿ

 

‘ಎಂ ಪಿ ಮಾದೇಗೌಡ ಅವರನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ, ಗೀತಾ ಇವರನ್ನು ಆರ್‌ಐಇ ನಿರ್ದೇಶಕರ ಹುದ್ದೆ, ಸಿಸ್ಲಿಪ್‌ ಧಾರವಾಡದ ನಿರ್ದೇಶಕರನ್ನಾಗಿ ಬಿ ಕೆ ಎಸ್‌ ವರ್ಧನ್‌ ಅವರನ್ನು ಸೇವೆಯಲ್ಲಿ ಪುನರ್‌ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ,’ ಎಂದೂ ಟಿಪ್ಪಣಿಯಲ್ಲಿ ಹೇಳಲಾಗಿತ್ತು.

ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ ನರಸಿಂಹರಾವ್ ಅವರನ್ನು ಸಿಐಡಿಯು ಬಂಧಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಕೋಲಾರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜಿಲ್ಲಾವಾರು ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿದ್ದ ಬಹುತೇಕ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲರಿಗೂ ನಿರ್ದೇಶಕರು ಹಾಗೂ ಇತರರು ನೇಮಕಾತಿ ಆದೇಶ ನೀಡಿದ್ದರು.

Hot this week

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ...

30 ವರ್ಷಗಳ ನಂತರ ಎಲ್‌ಎಸಿ ಪ್ರಕರಣ ದಾಖಲು; ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ಆರ್ಥಿಕ ಹೊರೆ

ಬೆಂಗಳೂರು; ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ...
Please Scan to make Your Contribution

Topics

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ...

30 ವರ್ಷಗಳ ನಂತರ ಎಲ್‌ಎಸಿ ಪ್ರಕರಣ ದಾಖಲು; ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ಆರ್ಥಿಕ ಹೊರೆ

ಬೆಂಗಳೂರು; ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ...

ಶೌಚಾಲಯ, ಸ್ನಾನದ ಗೃಹ, ಮೂತ್ರಾಲಯ ಶುಲ್ಕ ವಸೂಲಿ; ಸುಲಭ್‌ ಇಂಟರ್ ನ್ಯಾಷನಲ್‌, ಬಿಬಿಎಂಪಿ ಖಾತೆಗೆ ಹಣ ಜಮೆ ಮಾಡಿದೆಯೇ, ನುಂಗಿದೆಯೇ?

ಬೆಂಗಳೂರು;  ಸುಲಭ್ ಶೌಚಾಲಯ ಮತ್ತು ಸಾರ್ವಜನಿಕ ಮೂತ್ರಾಲಯ  ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು...

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

Related Articles

Popular Categories

error: Content is protected !!