Monday | August 24, 2026 |

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಂಡು ಕಾಮಗಾರಿ ನಡೆಸಿರುವ ಪ್ರಕರಣ ಸೇರಿದಂತೆ ಒಟ್ಟು 25 ಪ್ರಕರಣಗಳಲ್ಲಿ  ಹಲವು ನ್ಯೂನತೆ ಮತ್ತು ಲೋಪಗಳನ್ನು ಪತ್ತೆ ಹಚ್ಚಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಹಣಕಾಸಿನ ದುರಾಡಳಿತವನ್ನು ಬಹಿರಂಗಗೊಳಿಸಿದೆ.

2020-21ರಿಂದ 2023-24ನೇ ಸಾಲಿನವರೆಗೆ ವರದಿ  ಬಿಡುಗಡೆ ಮಾಡಿರುವ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿನ ಹಣಕಾಸು ಆಡಳಿತದಲ್ಲಿ ಹಲವು ಲೋಪಗಳನ್ನು ಬಯಲು ಮಾಡಿದೆ. ಇದರಿಂದ ವಿಶ್ವವಿದ್ಯಾಲಯ ಮತ್ತು ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವುದನ್ನೂ ಸಹ ಬಹಿರಂಗಗೊಳಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣದ ಬಗ್ಗೆ ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸಿರುವ ನಡುವೆಯೇ ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಆರ್ಥಿಕ ಅವ್ಯವಹಾರಗಳು, ಲೋಪಗಳು ಮತ್ತು ನ್ಯೂನತೆಗಳನ್ನೊಳಗೊಂಡ ಲೆಕ್ಕಪರಿಶೋಧನೆ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯನ್ನು  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇನ್ನಷ್ಟೇ ಪರಿಶೀಲಿಸಬೇಕಿದೆ.

2020-21ರಿಂದ 2023-24ನೇ ಸಾಲಿನವರೆಗೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಗಳ ಪ್ರತಿಗಳು ದಿ ಫೈಲ್‌ಗೆ ಲಭ್ಯವಾಗಿವೆ.

 

 

2022-23 ಮತ್ತು 2023-24ನೇ ಸಾಲಿನಲ್ಲಿ  ಮುದ್ದತ್ತು ಠೇವಣಿ ಸೇರಿದಂತೆ ಒಟ್ಟು 25 ಪ್ರಕರಣಗಳಲ್ಲಿ 38.98 ಕೋಟಿ ರುಪಾಯಿಗಳಿಗೆ ಲೆಕ್ಕ ಪರಿಶೋಧಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ಪ್ರಕರಣಗಳಲ್ಲಿ 29.32 ಕೋಟಿಯಷ್ಟು ಹಣವನ್ನು ವಸೂಲು ಮಾಡಲು ಸೂಚಿಸಿದ್ದಾರೆ.

 

 

ಮುಂಗಡ ಮೊತ್ತವನ್ನು ವಿಳಂಬವಾಗಿ ಹೊಂದಾಣಿಕೆ ಮಾಡಿಕೊಂಡಿರುವುದು, ಮುಂಗಡ ಮೊತ್ತದ ಬಿಲ್‌ಗಳಲ್ಲಿ ದರಪಟ್ಟಿ ಆಹ್ವಾನಿಸದೇ ಸರಕು ಸಾಮಾಗ್ರಿ ಸೇವೆಗಳನ್ನು ಖರೀದಿಸಿರುವುದು, ನಿವೃತ್ತಿ ಹೊಂದಿದ ನೌಕರರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ಅವಧಿ ವಿಸ್ತರಣೆ ಮಾಡಿರುವುದು, ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ ಜೊತೆ ಒಪ್ಪಂದದ ಮೂಲಕ ಕಾಮಗಾರಿ ನಡೆಸಿರುವುದು, ಪ್ರಯೋಗಾಲಯಕ್ಕೆ ಖರೀದಿಸಿದ ವೈಜ್ಞಾನಿಕ ಉಪಕರಣಗಳ ಟೆಂಡರ್‍‌ನಲ್ಲಿನ ನ್ಯೂನತೆಗಳು, ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳ ವಿವರಗಳೂ ಸಹ ಲೆಕ್ಕ ಪರಿಶೋಧನೆ ವರದಿಯಲ್ಲಿವೆ.

 

 

ದರಪಟ್ಟಿ ಕರೆಯದೇ ನೇರವಾಗಿ ಸೇವೆ ಪಡೆದು ಪಾವತಿಸಿರುವುದು, ಮಾರುಕಟ್ಟೆ ದರಕ್ಕಿಂತ ಅಧಿಕ ಬೆಲೆ ನೀಡಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿರುವುದು, ಪೀಠೋಪಕರಣಗಳ ಖರೀದಿಯ ಕಾಮಗಾರಿಯಲ್ಲಿನ ನ್ಯೂನತೆಗಳು, ವೆಚ್ಚದ ನಿಯಮಗಳನ್ನು ಉಲ್ಲಂಘಿಸಿ ವಾಹನ ಬಾಡಿಗೆ ಪಡೆದಿರುವುದು, ಅಲ್ಪಾವಧಿ ಟೆಂಡರ್ ಕೈಗೊಂಡಿರುವುದು, ಒಂದೇ ಏಜೆನ್ಸಿಗೆ ಹಲವು ಕಾಮಗಾರಿಗಳನ್ನು ನೀಡಿರುವುದು, ಗೋಡೌನ್‌ ಬಾಡಿಗೆ ಪಾವತಿ ಮೊತ್ತದಲ್ಲಿನ ನ್ಯೂನತೆಗಳು, ಟೆಂಡರ್‍‌ ಕರೆಯವುದನ್ನು ತಪ್ಪಿಸಿ ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡು ಸರಕು ಸಾಮಾಗ್ರಿಗಳನ್ನು ಖರೀದಿಸಿರುವುದು, ಬಾಕಿ ಇರುವ ಪ್ರವೇಶ ಶುಲ್ಕಗಳನ್ನು ವಸೂಲು ಮಾಡದೇ ಇರುವ ಪ್ರಕರಣಗಳಲ್ಲಿ ಆಗಿರುವ ನಷ್ಟವನ್ನೂ ಸಹ ಲೆಕ್ಕ ಪರಿಶೋಧಕರು ವರದಿಯಲ್ಲಿ ಬಯಲು ಮಾಡಿರುವುದು ಗೊತ್ತಾಗಿದೆ.

 

 

ವಾರ್ಷಿಕ ಲೆಕ್ಕಪತ್ರಗಳಲ್ಲಿನ ನ್ಯೂನತೆಗಳೇನು?

ರಾಯಚೂರು ವಿಶ್ವವಿದ್ಯಾಲಯವು 2022-23 ಮತ್ತು 2023-24ನೇ ಸಾಲಿಗೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಬೇಕು ಎಂದು ಲೆಕ್ಕಪತ್ರ  ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು 2024ರ ನವೆಂಬರ್‍‌ 27ರಂದು ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಆದರೆ ವಿಶ್ವವಿದ್ಯಾಲಯವು ಈ ಎರಡೂ ವರ್ಷದ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನೇ ನೀಡಿಲ್ಲ. ಅಲ್ಲದೇ ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ 38,98,63,115 ರು ಅಕ್ಷೇಪಣೆಯಲ್ಲಿರಿಸಿದೆ. ಅಲ್ಲದೇ 29,32,73,491 ರು.ಗಳನ್ನು ವಸೂಲು ಮಾಡಬೇಕಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ವಿಶ್ವವಿದ್ಯಾಲಯವು ವಾಸ್ತವಿಕ ಅಂಶಗಳಿಗೆ ಅನುಗುಣವಾಗಿ ಆಯವ್ಯಯವನ್ನು ಸಿದ್ಧಪಡಿಸಿಲ್ಲ. 2022-23ನೇ ಸಾಲಿನ ಆಯವ್ಯಯ ಅಂದಾಜಿನ ಪ್ರಕಾರ ಒಟ್ಟು 96.17 ಕೋಟಿ ರು ಸ್ವೀಕೃತವಾಗಿತ್ತು. ಈ ಪೈಕಿ 90.67 ಕೋಟಿ ರು ಪಾವತಿ ಎಂದು ತೋರಿಸಿದೆ. 5.49 ಕೋಟಿ ರು ಉಳಿತಾಯ ಎಂದು ತೋರಿಸಿದೆ. 2023-24ನೇ ಸಾಲಿನಲ್ಲಿಯೂ 159.69 ಕೋಟಿ ರು ಸ್ವೀಕೃತಿಯಾಗಿದೆ. 153.37 ಕೋಟಿ ಪಾವತಿಯಾಗಿದೆ. 6.32 ಕೋಟಿ ರು ಉಳಿತಾಯ ಎಂದು ಲೆಕ್ಕದಲ್ಲಿ ತೋರಿಸಿದೆ.

 

 

‘ಈ ಆಯವ್ಯಯ ಅಂದಾಜು ಪತ್ರಿಕೆಯನ್ನು ಪರಿಶೀಲಿಸಲಾಗಿದೆ. ಉಳಿತಾಯ ಆಯವ್ಯಯ ಇರುವುದು ಗೊತ್ತಾಗಿದೆ. ಇನ್ನು ಮುಂದೆ ಅಯವ್ಯಯವನ್ನು ತಯಾರಿಸುವಾಗ ವಾಸ್ತವಿಕ ಅಂಶಗಳಿಗೆ ಹತ್ತಿರವಾಗುವಂತೆ ಗಮನದಲ್ಲಿಟ್ಟುಕೊಂಡು ಆಯವ್ಯಯವನ್ನು ತಯಾರಿಸಬೇಕು,’ ಎಂದು ಲೆಕ್ಕಪರಿಶೋಧನೆಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ವಿಶ್ವವಿದ್ಯಾಲಯದ ಆಡಳಿತ, ಪರೀಕ್ಷೆ, ಹಣಕಾಸು, ಇಂಜಿನಿಯರಿಂಗ್‌, ಪ್ರಸಾರಾಂಗ, ಗ್ರಂಥಾಲಯ, ವಿದ್ಯಾಮಂಡಳಿ, ಎನ್‌ಎಸ್‌ಎಸ್‌ ಮತ್ತು ಇತರೆ ಘಟಕಗಳಲ್ಲಿ ಕಂಡುಬಂದಿರುವ ನ್ಯೂನತೆಗಳ ಕುರಿತು 73 ವಿಚಾರಣೆ ನೋಟೀಸ್‌ ನೀಡಿತ್ತು. ಆದರೆ ವಿಶ್ವವಿದ್ಯಾಲಯವು ಈ ಸಂಬಂಧ ಯಾವುದೇ ಅನುಪಾಲನೆ ವರದಿ ನೀಡಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

 

ವೆಚ್ಚವಾಗದ  114.61 ಕೋಟಿ ರು 

2022-23 ಮತ್ತು 2023-24ನೇ ಸಾಲಿನ ಆಯವ್ಯಯದಲ್ಲಿ ಅವಕಾಶ ಒದಗಿಸಿದ್ದರೂ ಸಹ 114.61 ಕೋಟಿ ಖರ್ಚಾಗಿರಲಿಲ್ಲ. ಈ ಬಗ್ಗೆ ಲೆಕ್ಕ ಪರಿಶೋಧಕರು ಸ್ಪಷ್ಟೀಕರಣ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ರಾಯಚೂರು ವಿಶ್ವವಿದ್ಯಾಲಯವು 2022-23 ಮತ್ತು 2023-24ನೇ ಸಾಲಿನ ಆಯವ್ಯಯದ ಅಂದಾಜಿನ ಕೆಲವು ಲೆಕ್ಕ ಶೀರ್ಷಿಕೆಗಳಲ್ಲಿ ಕಾಮಗಾರಿಗಳು, ಘಟಿಕೋತ್ಸವ, ಕ್ರೀಡಾಂಗಣ ಅಭಿವೃದ್ಧಿ ಇನ್ನೂ ಅನೇಕ ಕಾಮಗಾರಿಗಳಿಗೆ ಅನುದಾನ ಒದಗಿಸಿತ್ತು. ಆದರೆ ಕೆಲವು ಕಾರ್ಯಕ್ರಮಗಳಿಗೆ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಹೀಗಾಗಿ ಕೆಲವು ಲೆಕ್ಕ ಶೀರ್ಷಿಕೆಗಳಲ್ಲಿ ಯಾವುದೇ ಮೊತ್ತವು ವೆಚ್ಚವಾಗದೇ ಉಳಿದಿದೆ ಎಂದು ವಿಶ್ವವಿದ್ಯಾಲಯವು ಲೆಕ್ಕ ಪರಿಶೋಧಕರಿಗೆ ಸಮಜಾಯಿಷಿ ನೀಡಿತ್ತು.

 

 

ವಿಶ್ವವಿದ್ಯಾಲಯ ಆರ್ಥಿಕ ಪರಿಸ್ಥಿತಿ ಅರಿಯಲು ವಾರ್ಷಿಕ ಹಣಕಾಸು ತಃಖ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ವಾಲ್ಮೀಕಿ ವಿಶ್ವವಿದ್ಯಾಲಯವು 2022-23 ಮತ್ತು 2023-24ನೇ ಸಾಲಿನಲ್ಲಿ ವಾರ್ಷಿಕ ಲೆಕ್ಕ ಪತ್ರಗಳಲ್ಲಿ ಅವಶ್ಯಕ ತಃಖ್ತೆಗಳನ್ನು ಅಳವಡಿಸಿರಲಿಲ್ಲ. ಲೆಕ್ಕಪತ್ರಗಳ ನಿರ್ವಹಣೆಯನ್ನು ಡಬಲ್ ಎಂಟ್ರಿ ಸಿಸ್ಟಂ ಅಥವಾ ಅನುದಾನ ಆಧರಿತ ಲೆಕ್ಕಪತ್ರ ವ್ಯವಸ್ಥೆ ಪಾಲಿಸಬೇಕು. ಆದರೆ ವಿಶ್ವವಿದ್ಯಾಲಯವು ಎಫ್‌ಬಿಎಎಸ್ ಲೆಕ್ಕಪತ್ರ ಪದ್ಧತಿ ಅಳವಡಿಸಿಕೊಂಡಿತ್ತು.

 

 

ಹಾಗೆಯೇ ಈ ಪದ್ಧತಿಯಲ್ಲಿ ಅವಶ್ಯವಿರುವ ತಃಖ್ತೆಗಳನ್ನು ಆದಾಯ ಮತ್ತು ವೆಚ್ಚ, ಬ್ಯಾಲೆನ್ಸ್ ಶೀಟ್‌ಗಳನ್ನು ಕಡ್ಡಾಯವಾಗಿ ವಾರ್ಷಿಕ ಲೆಕ್ಕ ಪತ್ರದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ವಿಶ್ವವಿದ್ಯಾಲಯವು ವಾರ್ಷಿಕ ಲೆಕ್ಕಪತ್ರಗಳಲ್ಲಿ ಈ ಮಾದರಿಯನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ವಿಶ್ವವಿದ್ಯಾಲಯ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳೆಷ್ಟು?

ಹಾಗೆಯೇ ವಿಶ್ವವಿದ್ಯಾಲಯ ಹೆಸರಿನಲ್ಲಿ ಒಟ್ಟಾರೆಯಾಗಿ ಎಷ್ಟು ಬ್ಯಾಂಕ್‌ ಖಾತೆಗಳಿವೆ ಎಂಬ ನಿಖರವಾದ ಮಾಹಿತಿಯನ್ನೂ ಸಹ ವಾರ್ಷಿಕ ಲೆಕ್ಕಪತ್ರಗಳಲ್ಲಿ ಅಳವಡಿಸಿಲ್ಲ. ಈ ಸಂಬಂಧ ವಿವರಣೆ ಕೋರಿದ್ದ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನ ಇಲಾಖೆಯು ವಿಚಾರಣೆ ಪತ್ರವನ್ನು ಕಳಿಸಿತ್ತು.

 

 

ಇದಕ್ಕೆ ಉತ್ತರಿಸಿದ್ದ ವಿಶ್ವವಿದ್ಯಾಲಯವು 2022-23 ಮತ್ತು 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ವಿಶ್ವವಿದ್ಯಾಲಯದ ಲೆಕ್ಕಪತ್ರ ನಿರ್ವಹಣೆ ಸಿಂಗಲ್‌ ಎಂಟ್ರಿ ಸಿಸ್ಟಂ ಅಥವಾ ಡಬಲ್ ಎಂಟ್ರಿ ಸಿಸ್ಟಂ ಎಂಬ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ರಲ್ಲಿ ಕಡ್ಡಾಯವಾಗಿ ದಾಖಲಿಸಿಲ್ಲ. ಅಲ್ಲದೇ ಈ ವಿಶ್ವವಿದ್ಯಾಲಯವು ಪ್ರಾಥಮಿಕ ಹಂತದಲ್ಲಿದ್ದು ಪ್ರಸ್ತುತ ಸಿಂಗಲ್ ಎಂಟ್ರಿ ಸಿಸ್ಟಂ ಪದ್ಧತಿ ಪ್ರಕಾರ ನಗದು ಪುಸ್ತಕಗಳನ್ನು ನಿರ್ವಹಿಸಿದೆ. ಅದರ ಆಧಾರದ ಮೇಲೆ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಿದೆ ಎಂದು ಅನುಪಾಲನೆ ವರದಿ ಸಲ್ಲಿಸಿತ್ತು.

 

 

ಅಲ್ಲದೇ ವಾರ್ಷಿಕ ಲೆಕ್ಕಪತ್ರಗಳಲ್ಲಿ ಅದಾಯ, ವೆಚ್ಚ, ಬ್ಯಾಲೆನ್ಸ್‌ ಶೀಟ್‌ಗಳನ್ನು ಅಳವಡಿಸದೇ ಇರುವ ಕಾರಣ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನ ವರದಿಯಲ್ಲಿ ವಿವರಿಸಿದೆ.

Hot this week

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...
Please Scan to make Your Contribution

Topics

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

Related Articles

Popular Categories

error: Content is protected !!