Tuesday | September 22, 2026 |

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೌಲಭ್ಯಗಳ ಕೊರತೆಯಿಂದಾಗಿಯೇ ಸಂಭಾವ್ಯ ಹೂಡಿಕೆದಾರರನ್ನೇ ಹಿಮ್ಮೆಟ್ಟಿಸಿದಂತಾಗಿದೆ. ಹೀಗಾಗಿ ಮೂರು ಕೈಗಾರಿಕೆ ಪ್ರದೇಶಗಳಲ್ಲಿ 281.34 ಕೋಟಿ ಹೂಡಿಕೆಯನ್ನು ಸರಿಯಾಗಿ ಬಳಕೆ ಮಾಡಿರಲಿಲ್ಲ ಎಂಬ ಸಂಗತಿಯನ್ನು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಹಿರಂಗಪಡಿಸಿದ್ದಾರೆ.

ವಿಧಾನಮಂಡಲದಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆ ಸಂದರ್ಭದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ಕೈಗಾರಿಕೆ ಪ್ರದೇಶಗಳು ಮತ್ತು ಕೈಗಾರಿಕೆ ಬಡಾವಣೆಗಳ ಅಸಲಿ ಮುಖವನ್ನು ತೆರೆದಿಟ್ಟಿದೆ.

ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ರಚಿಸಿರುವ ಕೈಗಾರಿಕೆ ನಿವೇಶನಗಳಲ್ಲಿನ ಮೂಲ ಸೌಕರ್ಯ ಕೊರತೆ ಕುರಿತು ವಿಶ್ಲೇಷಣೆ ಮಾಡಿರುವ ಸಿಎಜಿ ವರದಿಯು ಮುನ್ನೆಲೆಗೆ ಬಂದಿದೆ.

ಈ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಅನುಮೋದಿತ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ ಮೂಲಸೌಕರ್ಯಗಳ ಸೃಷ್ಟಿಗೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ವಾರ್ಷಿಕ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಸಿದ್ದಪಡಿಸಲು ಮಂಡಳಿಗೆ ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಅಲ್ಲದೇ ಮಂಡಳಿಯು ಭೂ ಸ್ವಾಧೀನ, ಪೂರ್ವ ಪರಿಸರ ಅನುಮತಿಗಳು ಮತ್ತು ಪರಿಸರ ಅನುಮತಿಯ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲಿಲ್ಲ. ಹಾಗೆಯೇ ಕೈಗಾರಿಕೆ ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದೆ. ಇದು ಪರೀಕ್ಷಾ ಪರಿಶೀಲಿತ ಕೈಗಾರಿಕೆ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಗಣನೀಯ ವಿಳಂಬಕ್ಕೆ ಕಾರಣವಾಯಿತು ಎಂದು ಸಿಎಜಿ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

2024ರ ಮಾರ್ಚ್ ಅಂತ್ಯಕ್ಕೆ 12 ಅಭಿವೃದ್ಧಿ ಕಚೇರಿಗಳ ಪೈಕಿ ಬೆಂಗಳೂರು, ಬೆಳಗಾವಿ ಮತ್ತು ಹಾಸನ ಕಚೇರಿಗಳನ್ನು ಸಿಎಜಿಯು ಪರಿಶೀಲನೆ ನಡೆಸಿದೆ.  ಈ  ಒಟ್ಟು 12 ಅಭಿವೃದ್ಧಿ ಕಚೇರಿಗಳ ವ್ಯಾಪ್ತಿಯಲ್ಲಿನ 207 ಅನುಮೋದಿತ ಕೈಗಾರಿಕೆ ಪ್ರದೇಶಗಳಲ್ಲಿ 54,402.21 ಎಕರೆಗಳಷ್ಟು ಹಂಚಿಕೆ ಮಾಡಲು ಯೋಗ್ಯವಿರುವ ವಿಸ್ತೀರ್ಣದೊಂದಿಗೆ ಮತ್ತು ನಾಗರಿಕ ಅನುಕೂಲತೆಗಾಗಿ ಮೀಸಲಿರಿಸಲು 77,908.3 ಎಕರೆಯನ್ನು ಮಂಡಳಿಯು ಸ್ವಾಧೀನಪಡಿಸಿಕೊಂಡಿತ್ತು ಎಂದು ವರದಿಯು ತಿಳಿಸಿದೆ.

 

 

ಮೂರು ಪರೀಕ್ಷಿತ ಪರಿಶೀಲಿತ ವಲಯಗಳಲ್ಲಿ 2,119.87 ಎಕರೆಗಳಲ್ಲಿ 1,751 ಹಂಚಿಕೆಯಾದ ಘಟಕಗಳಲ್ಲಿ 945.03 ಎಕರೆಗಳಲ್ಲಿ 1,074 ಘಟಕಗಳು ಅಂದರೇ ಶೇ.61.34ರಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಕೈಗಾರಿಕೆ ಬಡಾವಣೆಗಳಲ್ಲಿ ನಿವೇಶನಗಳು ಹಂಚಿಕೆಯಾದ 43 ವರ್ಷಗಳಾದರೂ ಸಹ ಕೈಗಾರಿಕೆ ಘಟಕಗಳು ಆರಂಭವಾಗಿಲ್ಲ.

ಅದೇ ರೀತಿ ಮೂರು ಮಾದರಿ ಅಭಿವೃದ್ಧಿ ಕಚೇರಿಗಳಲ್ಲಿ 207 ಕಯಗಾರಿಕೆ ಪ್ರದೇಶಗಳಲ್ಲಿ  ಅಭಿವೃದ್ಧಿಪಡಿಸಿರುವ 41 ಕೈಗಾರಿಕೆ ಪ್ರದೇಶಗಳಲ್ಲಿ 15,991.08 ಎಕರೆಗಳಷ್ಟು ನಾಗರಿಕ ಸೌಲಭ್ಯಗಳಿಗಾಗಿ ಅನುವು ಮಾಡಿದ ನಂತರ ಹಂಚಿಕೆ ಮಾಡಬಹುದಾದ ಭೂಮಿಯ ವಿಸ್ತೀರ್ಣವು 10,.361.46 ಎಕರೆಯಷ್ಟು ಜಮೀನಿತ್ತು.  2006ರ ಪರಿಸರ ಪರಿಣಾಮ ಮವಲ್ಯಮಾಪನ ಅಧಿಸೂಚನೆ ನಂತರ ಮಂಡಳಿಯು 22 ಕೈಗಾರಿಕೆ ನಿವೇಶನಗಳನ್ನು ಅಭಿವೃದ್ಧಿಪಡಿಸಿದೆ. ಈ 22 ಕೈಗಾರಿಕೆ ನಿವೇಶನಗಳಲ್ಲಿ 12 ನಿವೇಶನಗಳಿಗೆ ಮಾತ್ರ ಪರಿಸರ ಅನುಮತಿ ಪಡೆದುಕೊಂಡಿದೆ.

ಮಂಡಳಿಯು 2019-20ರಿಂದ 2023-24ರವರೆಗೆ ಒಟ್ಟು 5,082.25 ಕೋಟಿ ರು ಮೊತ್ತವನ್ನು ಭರಿಸಿತ್ತು.  (ಅಭಿವೃದ್ಧಿ ಕಾಮಗಾರಿಗಳಿಗಾಗಿ 2019-20ರವರಗೆ) 96 ಗುತ್ತಿಗೆಗಳನ್ನು ಒಳಗೊಂಡಂತೆ 1,912.97 ಕೊಟಿ ರು ಮೊತ್ತವನ್ನು ಈ ಮೂರು ಕಚೇರಿಗಳಲ್ಲಿ ವೆಚ್ ಮಾಡಲಾಗಿತ್ತು. ಲೆಕ್ಕ ಪರಿಶೋಧನೆಯು 95 ಗುತ್ತಿಗೆಗಳನ್ನು ಪರಿಶೀಲಿಸಿತ್ತು.

 

 

50 ಹೆಕ್ಟೇರ್‍‌ಗಿಂತ ಕಡಿಮೆ ಭೂಮಿ ಹೊಂದಿರುವ ಮೂರು ಕೈಗಾರಿಕೆ ನಿವೇಶನಗಳು ಇ ಸಿ ಪಡೆಯುವ ಅಗತ್ಯವಿಲ್ಲ. ಇನ್ನೂ ಮೂರು ಕೈಗಾರಿಕೆ ನಿವೇಶನಗಳಿಗೆ ಪ್ರಸ್ತಾವನೆಗಳನ್ನು ಪರಿಸರ ಅನುಮತಿಗೆ ಕಳಿಸಿದೆ. ಉಳಿದ ನಾಲ್ಕು ನಿವೇಶನಗಳಿಗೆ ಪರಿಸರ ಅನುಮತಿಗೆ ಅನ್ವಯಿಸಲಿಲ್ಲ. ಇದಲ್ಲದೆ ನಾಲ್ಕು ಕೈಗಾರಿಕೆ ಬಡಾವಣೆಗೆಳಿಗೆ ಸಂಬಂಧಿಸಿದ 2,159.46 ಎಕರೆಗಳಲ್ಲಿ 1,046.72 ಎಕರೆ ಅಂದರೇ ಶೇ.48ರ್‍ಟು ಭೂಮಿಯನ್ನು ಪರಿಸರ ಅನುಮತಿ ಪಡೆಯದೇ 474 ಘಟಕಗಳಿಗೆ ಹಂಚಿಕೆ ಮಾಡಿರುವುದನ್ನು ಸಿಎಜಿ ಪತ್ತೆ ಹಚ್ಚಿದೆ.

ಅದೇ ರೀತಿ 939.41 ಕೋಟಿ ಮೌಲ್ಯದ ಪ್ರಗತಿಯಲ್ಲಿರುವ ಅಭಿವೃದ್ದಿ ಕಾಮಗಾರಿಗಳು ಕುಂಠಿಗೊಂಡಿದ್ದವು. ಇದು 17 ಕೈಗಾರಿಕೆ ಪ್ರದೇಶಗಳಲ್ಲಿನ 2,720.48 ಎಕರೆಗಳಷ್ಟು ಭೂಮಿಯನ್ನು ಹಂಚಿಕೆಯನ್ನು ಮಾಡದಿರಲು ದಾರಿಯಾಗಿತ್ತು.

ವ್ಯಾಜ್ಯ ಮುಕ್ತ ಭೂಮಿಯ ಲಭ್ಯತೆಯ ಹೊರತಾಗಿಯೂ ಮಂಡಳಿಯು ದೇವನಹಳ್ಳಿಯ ಏರೋಸ್ಪೇಸ್‌ ಪಾರ್ಕ್, ಕಿತ್ತೂರು, ಬಾಳೆಕುಂಡಿ  ಮೂರು ಕೈಗಾರಿಕೆ ಬಡಾವಣೆಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದೆ. ಮೂಲಭೂತ ಮೂಲಸೌಕರ್ಯ ಸೌಲಭ್ಯಗಳ ಕೊರತೆಯು ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದರಿಂದಾಗಿ ಈ ಮೂರು ಕೈಗಾರಿಕೆ ಬಡಾವಣೆಗಳಲ್ಲಿ 281.34 ಕೋಟಿ ಹೂಡಿಕೆಯನ್ನು ಸರಿಯಾಗಿ ಬಳಸಲಿಲ್ಲ ಎಂದು ಸಿಎಜಿ ವರದಿಯು ಬಹಿರಂಗಪಡಿಸಿದೆ.

 

 

41 ಅಭಿವೃದ್ದಿ ಕಚೇರಿಗಳಲ್ಲಿ 24 ಬೋರ್‍‌ವೆಲ್‌ಗಳಿಗೆ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಂಡಳಿಗೆ ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಪರೀಕ್ಷಾರ್ಥವಾಗಿ ಪರಿಶೀಲಿಸಿದ ಅಭಿವೃದ್ಧಿ ಕಚೇರಿಗಳಲ್ಲಿ 201 ಬೋರ್‍‌ವೆಲ್‌ಗಳನ್ನು ಕೊರೆಯಲಾಗಿದೆ. ಇದಲ್ಲದೇ 31.49 ಕೋಟಿ ವೆಚ್ಚ ಮಾಡಿದ ನಂತರವೂ ಮಂಡಳಿಯು ಒಳಚರಂಡಿ ಸಂಸ್ಕರಣಾ ಘಟಕ, ಸಾಮಾನ್ಯ ತ್ಯಾಜ್ಯ ಸಂಸ್ಕರಣೆ ಘಟಕವನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದು ಸಿಎಜಿ ವರದಿಯು ವಿವರಿಸಿದೆ.

ಮಂಡಳಿಯು ಐಟಂ ದರಗಳನ್ನು ತಪ್ಪಾಗಿ ಅಳವಡಿಸಿಕೊಂಡಿರುವ ಪ್ರಕರಣವನ್ನು ಪತ್ತೆ ಹಚ್ಚಿರುವ ಸಿಎಜಿಯು, ಇದರಿಂದಾಗಿಯೇ ಗುತ್ತಿಗೆದಾರರಿಗೆ 10.36 ಕೋಟಿಯಷ್ಟು  ಅನುಚಿತವಾಗಿ ಲಾಭ ತಂದುಕೊಟ್ಟಂತಾಗಿದೆ ಎಂದು ಹೇಳಿದೆ. ಹಾಗೆಯೇ ವಿದ್ಯುತ್‌ ಕಾಮಗಾರಿಗಳನ್ನು ಅತಿಯಾಗಿ ಅಂದಾಜು ಮಾಡುವ ಮೂಲಕ ಮಂಡಳಿಯು ಗುತ್ತಿಗೆದಾರರಿಗೆ 1.89 ಕೋಟಿಯಷ್ಟು ಅನುಚಿತ ಲಾಭ ತಂದುಕೊಟ್ಟಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಒಟ್ಟ ಕಾಮಗಾರಿಗಳನ್ನು 2.93 ಕೋಟಿಗೆ ವಿಂಗಡಿಸಿದ್ದ ಮಂಡಳಿಯು ತಲಾ 5 ಲಕ್ಷಕ್ಕಿಂತ ಕಡಿಮೆ ಮೌಲ್ಯದ 64 ಕಾಮಗಾರಿಗಳನ್ನಾಗಿ ವಿಭಜಿಸಿತ್ತು. ಈ ಮೂಲಕ ಟೆಂಡರ್‍‌ ಕರೆಯುವುದನ್ನು ತಪ್ಪಿಸಿದ್ದ ಮಂಡಳಿಯು ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಿತ್ತು. ಮೂರು ಅಭಿವೃದ್ಧಿ ಕಚೇರಿಗಳಿಗೆ ಒಟ್ಟು ನಿರ್ವಹಣಾ ನಿಧಿಯ ಅವಶ್ಯಕತೆ 621.68 ಕೋಟಿ ರುನಷ್ಟಿತ್ತು. ನಿಗದಿಪಡಿಸಿದ ಹಣವು 57.69 ಕೋಟಿ ಮಾತ್ರ ಅಂದರೇ 2019-20ರಿಂದ 2023-24ರವರೆಗೆ ವಾಸ್ತವಿಕ ಅಗತ್ಯದ ಶೇ. 9.27ರಷ್ಟು ಬಜೆಟ್‌ ನಿಬಂಧನೆಯಲ್ಲಿನ ಕೊರತೆಗೆ ಹೆಚ್ಚುವರಿಯಾಗಿ ವಾಸ್ತವಿಕ ವೆಚ್ಚ 8.54 ಕೋಟಿ ಮಾತ್ರ ಅಂದರೇ ವಾಸ್ತವಿಕ ಅಗತ್ಯದ ಶೆ. 1.37 ಮತ್ತು ಬಜೆಟ್‌ ನಿಬಂಧನೆಯ ಶೇ. 14.80ರಷ್ಟು ಮಾತ್ರ ಇತ್ತು ಎಂದು ಸಿಎಜಿ ವರದಿಯು ವಿವರಿಸಿರುವುದು ಗೊತ್ತಾಗಿದೆ.

ಬೆಂಗಳೂರಿನಲ್ಲಿರುವ ಏರೋಸ್ಪೇಸ್ ಸಬ್‌ ಲೇ ಔಟ್‌ (ಡಿಒ3) ಹಂಚಿಕೆಯಾಗದ ಪ್ಲಾಟ್‌ ಸಂಖ್ಯೆ 11ರಲ್ಲಿದ್ದ  ಎಕರೆ ಭೂಮಿಯೂ ಅತಿಕ್ರಮಣಕ್ಕೆ ಒಳಗಾಗಿದೆ. ಹಾಸನ ವಲಯದ ಅಂಬ್ಳೇ ಕೈಗಾರಿಕೆ ಲೇ ವಠ್‌ನಲ್ಲಿ ಚರಂಡಿಯ ಒಂದು ಭಾಗವನ್ನು ಅತಿಕ್ರಮಿಸಿದೆ. ಮತ್ತು ಹಂಚಿಕೆದಾರರು ಕಾಂಪೌಂಡ್‌ ಗೋಡೆಯನ್ನು ನಿರ್ಮಿಸಿದ್ದಾರೆ. ಸಂಸ್ಕರಿಸದ ನೀರನ್ನು ಸಹ ಚರಂಡಿ ಮೂಲಕ ಹೊರಹಾಕುತ್ತಿದ್ದಾರೆ. ಬಾಗಲಕೋಟೆಯ ನವನಗರದ ಆಗ್ರೋ ಟೆಕ್‌ ಪಾರ್ಕ್‌ನಲ್ಲಿ 7.9 ಎಕರೆ ಉದ್ಯಾನ ಪ್ರದೇಶವೂ ಅತಿಕ್ರಮಣಕ್ಕೆ ಒಳಗಾಗಿದೆ. ಬೇಲಿ ಹಾಕಿ ಮತ್ತು ತೋಟದ ಬೆಳೆಯನ್ನು ಬೆಳೆಸುತ್ತಿರುವುದನ್ನು ಸಿಎಜಿಯು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಮಂಡಳಿಯು ಅನುಮೋದಿತ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಸೃಷ್ಟಿಗಾಗಿ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ವಾರ್ಷಿಕ ಮತ್ತು ದೀರ್ಘಾವಧಿ ಪೂರ್ವಭಾವಿ ಯೋಜನೆಗಳನ್ನು ತಯಾರಿಸುವ ಯಾವುದೇ ವ್ಯವಸ್ಥೆ ಹೊಂದಿರಲಿಲ್ಲ ಎಂಬುದನ್ನೂ ಸಹ ಲೆಕ್ಕ ಪರಿಶೋಧನೆಯು ಗಮನಿಸಿದೆ. ಮಂಡಳಿಯು 2019ರಿಂದ 2024ರವರೆಗೆ ಯಾವುದೇ ದೃಷ್ಟಿಕೋನ ಯೋಜನೆ ಅಥವಾ ವಾರ್ಷಿಕ ಯೋಜನೆಗಳನ್ನೇ ರೂಪಿಸಿರಲಿಲ್ಲ ಎಂದು ಸಿಎಜಿಯು ಬೊಟ್ಟು ಮಾಡಿ ತೋರಿಸಿದೆ.

Hot this week

ರಸ್ತೆ ಕಾಮಗಾರಿಗಳ ಅಂದಾಜು ತಯಾರಿಕೆಯಲ್ಲೇ ಲೋಪ; 483 ಕಾಮಗಾರಿಗಳಲ್ಲಿ 72.01 ಕೋಟಿಯಷ್ಟು ಹೆಚ್ಚುವರಿ ಹೊರೆ, ಪಿಡಬ್ಲ್ಯೂಡಿಯ ಕಾರ್ಯವೈಖರಿ ಬಯಲು ಮಾಡಿದ ಸಿಎಜಿ

ಬೆಂಗಳೂರು;  ರಸ್ತೆ ಕಾಮಗಾರಿಗಳಲ್ಲಿ  ಸಬ್‌ ಬೇಸ್‌ ದಪ್ಪವನ್ನು ಕಡಿಮೆ ಮಾಡದಿರುವುದು ಸೇರಿದಂತೆ...

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಖರ್ಗೆ ಕುಟುಂಬ ಸದಸ್ಯರ ಸಿದ್ದಾರ್ಥ ವಿಹಾರ ಟ್ರಸ್ಟ್‌; ಪ್ರಕರಣ ಮುಂದುವರಿಕೆ, ಲೋಕಾಯುಕ್ತ ಎಸ್‌ಪಿ ಗೆ ನೋಟೀಸ್‌ ನೀಡಿದ ನ್ಯಾಯಾಲಯ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ,...

ಪಿಎಸ್‌ಐ ನೇಮಕಾತಿ ಹಗರಣ; ಅಮೃತ್‌ ಪೌಲ್‌ ವಿರುದ್ಧ ಇಲಾಖೆ ವಿಚಾರಣೆ, ವಿಚಾರಣಾಧಿಕಾರಿಗೆ 15 ಲಕ್ಷ ರು ಸಂಭಾವನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐಗಳ ನೇಮಕಾತಿಯಲ್ಲಿನ...
Please Scan to make Your Contribution

Topics

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಪಿಎಸ್‌ಐ ನೇಮಕಾತಿ ಹಗರಣ; ಅಮೃತ್‌ ಪೌಲ್‌ ವಿರುದ್ಧ ಇಲಾಖೆ ವಿಚಾರಣೆ, ವಿಚಾರಣಾಧಿಕಾರಿಗೆ 15 ಲಕ್ಷ ರು ಸಂಭಾವನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐಗಳ ನೇಮಕಾತಿಯಲ್ಲಿನ...

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

Related Articles

Popular Categories

error: Content is protected !!