Wednesday | April 15, 2026 |

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ ಪ್ರಚಾರಕ್ಕೆ ಒಟ್ಟಾರೆ 348.25  ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಈ ಯೋಜನೆ ಜಾರಿಯಾದ ಮೊದಲ ವರ್ಷದಲ್ಲೇ ಜಾಹೀರಾತುಗಳಿಗಾಗಿ 139.65 ಕೋಟಿ ರು ವೆಚ್ಚ ಮಾಡಿತ್ತು.

ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ ಬುಕ್‌ಗಳನ್ನು ವಿತರಿಸಲು ಅನುದಾನವಿಲ್ಲ ಎಂದು ಕೈ ಚೆಲ್ಲಿರುವ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ 348.25 ಕೋಟಿ ರುಪಾಯಿಗಳನ್ನು ಖರ್ಚು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಪತ್ರಿಕೆಗಳಿಗೆ, ಟಿ ವಿ ಚಾನಲ್‌ಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ 101.01 ಕೋಟಿ, ಹೊರರಾಜ್ಯದ ಪತ್ರಿಕೆ, ಟಿ ವಿ ವಾಹಿನಿಗಳಿಗೆ 7.29 ಕೋಟಿ ರು ಮೊತ್ತದಲ್ಲಿ ಜಾಹೀರಾತು ನೀಡಿದೆ.

ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಒಟ್ಟಾರೆ 348.25 ಕೋಟಿ ಮೊತ್ತದಷ್ಟು ಜಾಹೀರಾತುಗಳಿಗಾಗಿ ವೆಚ್ಚ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರದಲ್ಲಿ ವೆಚ್ಚದ ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

2023-24ರಲ್ಲಿ 139.65 ಕೋಟಿ, 2024-25ರಲ್ಲಿ 70.15 ಕೋಟಿ, 2025-26ರ ಜನವರಿ ಅಂತ್ಯಕ್ಕೆ 30.15 ಕೋಟಿ ರು ಸೇರಿ ಒಟ್ಟಾರೆ 239.95 ಕೋಟಿ ರುಪಾಯಿ ಖರ್ಚು ಮಾಡಿದೆ.

ವಿಜಯಕರ್ನಾಟಕ, ದಿ ಹಿಂದು, ಇಂಡಿಯನ್ ಎಕ್ಸ್‌ಪ್ರೆಸ್, ವಿಶ್ವವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಹೊಸದಿಗಂತ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಟೈಮ್ಸ್‌ ಆಫ್ ಇಂಡಿಯಾ, ಉದಯಕಾಲ, ಉದಯವಾಣಿ, ಸಿಟಿ ಹೈಲೈಟ್ಸ್, ಪ್ರಜಾ ಪ್ರಗತಿ, ಪ್ರಾದೇಶಿಕ ಪತ್ರಿಕೆಗಳು ಜಿಲ್ಲಾ ಪತ್ರಿಕೆಗಳು ಈ ಪಟ್ಟಿಯಲ್ಲಿವೆ.

 

ಕಲರ್ಸ್‌ ಕನ್ನಡ, ಸ್ಟಾರ್ ಸುವರ್ಣ ಕನ್ನಡ, ನ್ಯೂಸ್ 18, ಪವರ್ ಟಿ ವಿ, ಝೀ ಕನ್ನಡ, ದೂರದರ್ಶನ, ಸುವರ್ಣ ನ್ಯೂಸ್, ಬಿಟಿವಿ, ನ್ಯೂಸ್ ಫಸ್ಟ್‌, ದಿಗ್ವಿಜಯ, ರಾಜ್ ನ್ಯೂಸ್, ಉದಯ ಟಿವಿ, ಟಿವಿ 9, ವಿಸ್ತಾರ ನ್ಯೂಸ್, ಕಸ್ತೂರಿ ನ್ಯೂಸ್, ಪಬ್ಲಿಕ್ ನ್ಯೂಸ್, ನ್ಯೂಸ್ ಫಸ್ಟ್‌ ಕನ್ನಡ, ರಿಪಬ್ಲಿಕ್, ಕಲರ್ಸ್‌ ಸೂಪರ್, ಉದಯ ಟಿವಿ, ಟಿವಿ 5, ನ್ಯೂಸ್ 1 ಕೇಬಲ್, ಫ್ರೀಡಂ ಟಿವಿ, ಚಲನಚಿತ್ರ ಮಂದಿರಳಲ್ಲೂ ಗ್ಯಾರಂಟಿ ಯೋಜನೆಗಳ ಕುರಿತು ಜಾಹೀರಾತು ನೀಡಿದೆ.

ಸೃಷ್ಟಿ ಸಿನರ್ಜಿ, ಅಡೋಮನ್, ರೇಡಿಯೋ ಜಿಂಗಲ್ಸ್‌, ವೃತ್ತಿ ಸಲ್ಯೂಷನ್, ಪರ್ಲ್ ಸೊಲ್ಯೂಷನ್ಸ್, ಸೃಷ್ಟಿ, ಡಿಜಿಟಲ್ ಮಾಧ್ಯಮಗಳಿಗೆ 2023-24ರಲ್ಲಿ 37,28,82,579, 2024-25ರಲ್ಲಿ 36,45,58,137, 2025-26ರಲ್ಲಿ 27,26,81,796 ರು ಸೇರಿ ಒಟ್ಟಾರೆ 101 ಕೋಟಿ ರು ಗಳನ್ನು ಜಾಹೀರಾತಿಗಾಗಿ ಖರ್ಚು ಮಾಡಿದೆ.

ಹಾಗೆಯೇ ಹೊರ ರಾಜ್ಯದ ಪತ್ರಿಕೆ, ಟಿ ವಿ ವಾಹಿನಿಗಳಿಗೂ ಸಹ 2023-24ರಲ್ಲಿ 6,77,33,534 ರು., 2024-25ರಲ್ಲಿ 1,60, 030 ರು., 2025-26ರಲ್ಲಿ 50,28,149 ರು ಗಳನ್ನು ವೆಚ್ಚ ಮಾಡಿದೆ.ಈ ಪಟ್ಟಿಯಲ್ಲಿ ನ್ಯಾ‍ಷನಲ್ ಹೆರಾಲ್ಡ್‌ ಕೂಡ ಇದೆ. ಈ ಪತ್ರಿಕೆಗೆ 2023-24ರಲ್ಲಿ 1050000 ರು ಮೊತ್ತದ ಜಾಹೀರಾತು ನೀಡಿದೆ.

ಸರ್ಕಾರದ ಸಾಧನೆ ಯೋಜನೆಗಳ ಕುರಿತಾದ ಮಾಹಿತಿಯನ್ನು ಪ್ರಚಾರ ಮಾಡಲು ಕಾಂಗ್ರೆಸ್‌ ಸರ್ಕಾರವು 2024ರ ಫೆಬ್ರುವರಿ ಅಂತ್ಯಕ್ಕೆ ಜಾಹೀರಾತುಗಳಿಗೆ ಬರೋಬ್ಬರಿ 100 ಕೋಟಿ ರು. ವೆಚ್ಚ ಮಾಡಿತ್ತು.

ಗ್ಯಾರಂಟಿ ಯೋಜನೆಗಳಿಗೆ 3,28,21,162 ರು., 100 ದಿನಗಳ ಪ್ರಗತಿಗೆ 6,05,02,650 ರು., ಕರ್ನಾಟಕ ಸಂಭ್ರಮ-50ಕ್ಕೆ 3,47,94,791 ರು., ಸಂವಿಧಾನ ಪೀಠಿಕೆ 83,93,143 ರು., ಮೈಸೂರು ದಸರಾಕ್ಕೆ 1,10,69,349 ರು., ಬಸ್‌ ಶೆಲ್ಟರ್‍‌ಗಳಲ್ಲಿ ಜಾಹೀರಾತಿಗೆ 3,05,56,117 ರು., ಖಾಸಗಿ ಒಡೆತನದ ಪ್ರಚಾರ ಫಲಕಗಳ ಮೂಲಕ ಪ್ರಚಾರಕ್ಕೆ 51,19,540 ರು., ವಸ್ತು ಪ್ರದರ್ಶನಕ್ಕೆ 1,11,26,383 ರು., ರು ಪಾವತಿಸಿತ್ತು.

ಪತ್ರಿಕೆಗಳಿಗೆ 21.70 ಕೋಟಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ; ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಆರೇ ಆರು ತಿಂಗಳಲ್ಲಿ 18 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದ್ದರು.

ಬರಗಾಲದಲ್ಲೂ ಆರೇ ಆರು ತಿಂಗಳಲ್ಲಿ ಜಾಹೀರಾತುಗಳಿಗೆ 18.50 ಕೋಟಿ ವೆಚ್ಚ

ನ್ಯಾಷನಲ್ ಹೆರಾಲ್ಡ್‌  ಪತ್ರಿಕೆಗೆ 2.89 ಕೋಟಿ ರುಪಾಯಿ ಸೇರಿ ರಾಷ್ಟ್ರೀಯ ಪತ್ರಿಕೆಗಳಿಗೆ 10.99 ಕೋಟಿ ರುಪಾಯಿ ಮೊತ್ತದ ಜಾಹೀರಾತು ನೀಡಿತ್ತು.

ಜಾಹೀರಾತು, ಪ್ರಚಾರ; ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ 2.89 ಕೋಟಿ, ರಾಷ್ಟ್ರಮಟ್ಟದ ಪತ್ರಿಕೆಗಳಿಗೆ 10.99 ಕೋಟಿ ವೆಚ್ಚ

 

ಹಾಗೆಯೇ ನ್ಯಾಷನಲ್ ಹೆರಾಲ್ಡ್‌ ಸೇರಿ ಪತ್ರಿಕೆ, ಟಿ ವಿ ಚಾನಲ್‌ಗಳಿಗೆ 2025ರ ಅಕ್ಟೋಬರ್ ಅಂತ್ಯಕ್ಕೆ ಒಟ್ಟಾರೆ 1,076.27 ಕೋಟಿ ರುಪಾಯಿಗಳನ್ನು ಜಾಹೀರಾತಿಗಾಗಿ ಖರ್ಚು ಮಾಡಿತ್ತು.

ನ್ಯಾಷನಲ್‌ ಹೆರಾಲ್ಡ್‌, ಇತರೆ ಪತ್ರಿಕೆ, ಟಿವಿಗಳಿಗೆ ಜಾಹೀರಾತು, ಪ್ರಚಾರ; 3 ವರ್ಷದಲ್ಲಿ 1,076.27 ಕೋಟಿ ವೆಚ್ಚ!

 

2019ರಿಂದ 2023ರವರೆಗೆ ಹಿಂದಿನ ಬಿಜೆಪಿ ಸರ್ಕಾರವೂ ಸಹ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಒಟ್ಟಾರೆ 173.33 ಕೋಟಿ ರು.ಗಳನ್ನು ಜಾಹೀರಾತಿಗೆ ವೆಚ್ಚ ಮಾಡಿತ್ತು. 2019-20ರಲ್ಲಿ ಟಿ ವಿ ವಾಹಿನಿಗಳೀಗೆ 15.25 ಕೋಟಿ ರು., 2020-21ರಲ್ಲಿ 17.45 ಕೋಟಿ , 2021-22ರಲ್ಲಿ 36.58 ಕೋಟಿ ರು., 2022-23 (2023 ಜನವರಿ 31ವರೆಗೆ) 42.23 ಕೋಟಿ ರು. ಸೇರಿ 111.51 ಕೋಟಿ ರು. ವೆಚ್ಚ ಮಾಡಿತ್ತು.

ಅದೇ ರೀತಿ ಮುದ್ರಣ ಮಾಧ್ಯಮಗಳಿಗೆ 2019-20ರಲ್ಲಿ 6.79 ಕೋಟಿ ರು., 2020-21ರಲ್ಲಿ 9.75 ಕೋಟಿ ರು., 2021-22ರಲ್ಲಿ 13.26 ಕೋಟಿ ರು., 2022-23ರಲ್ಲಿ 26.28 ಕೋಟಿ ರು ಸೇರಿ 56.08 ಕೋಟಿ ರು.,ವೆಚ್ಚ ಮಾಡಿತ್ತು. ಹಾಗೆಯೇ ಸಾಮಾಜಿಕ ಜಾಲತಾಣಗಳಿಗೆ 2019-20ರಲ್ಲಿ 0.48 ಲಕ್ಷ, 2020-21ರಲ್ಲಿ 0.48 ಲಕ್ಷ ರು., 2021-22ರಲ್ಲಿ 1.18 ಲಕ್ಷ ರು., 2022-23ರಲ್ಲಿ 3.60 ಲಕ್ಷ ರು. ಸಶೇರಿ ಒಟ್ಟಾರೆ 5.70 ಲಕ್ಷ ರು. ವೆಚ್ಚ ಮಾಡಿತ್ತು.

ಇನ್ನು 2020-21ರಲ್ಲಿ    ವರ್ಣ ಜಾಹೀರಾತುಗಳಿಗೆ 175,66,6,429 ರು., 2021-22ರಲ್ಲಿ 341,073,768 ರು., 2022-23ರಲ್ಲಿ 567,216,692 ರು.ಗಳನ್ನು ವೆಚ್ಚ ಮಾಡಿತ್ತು.  ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋವಿಡ್‌ ಜಾಗೃತಿ ಹೆಸರಿನಲ್ಲಿ 11 ಕೋಟಿ ರು. ವೆಚ್ಚ ಮಾಡಿದ್ದರು.

ಕೋವಿಡ್‌-19 ಜಾಹೀರಾತಿನ ಜಾಲ; 3 ತಿಂಗಳಲ್ಲಿ 11 ಕೋಟಿ ವೆಚ್ಚ

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋದಿ ಹುಟ್ಟುಹಬ್ಬಕ್ಕೂ ಜಾಹೀರಾತು ನೀಡಿದ್ದರು. ಇದಕ್ಕಾಗಿ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚವಾಗಿತ್ತು.

 

 

ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?

 

ಮೋದಿ ಹುಟ್ಟುಹಬ್ಬಕ್ಕೆ ಪ್ರಾಯೋಜಿತ ಪುರವಣಿಗೆಗೆ ಜಾಹೀರಾತು ನೀಡಿದ್ದ 44.85 ಲಕ್ಷ ರು. ಮಾಹಿತಿಗಳನ್ನೂ ಹಿಂದಿನ ಸರ್ಕಾರವು ಮುಚ್ಚಿಟಿತ್ತು.

 

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಯಡಿಯೂರಪ್ಪ ಅವರು  ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ರು.ಗಳನ್ನು ರಾಜ್ಯ ಸರ್ಕಾರದಿಂದ ಭರಿಸಿದ್ದರು.

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ, ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚಾಗಿತ್ತು. ಅಲ್ಲದೇ ಜಾಹೀರಾತಿಗೆ 6.62 ಕೋಟಿ ವೆಚ್ಚವಾಗಿತ್ತು.

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ

 

ಕೋವಿಡ್ ಲಸಿಕೆ ಅಭಿಯಾನಕ್ಕಾಗಿ   3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಅಭಿಯಾನದ  ಗುರಿ ಮುಟ್ಟಿರಲಿಲ್ಲ.

 

ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

 

ಸರ್ಕಾರದ ಸಾಧನೆ ಬಿಂಬಿಸಲು ಬಸವರಾಜ ಬೊಮ್ಮಾಯಿ ಅವರು ತಮ್ಮ  ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿದ್ದರು.

 

ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ವೆಚ್ಚವಾಗಿತ್ತು.

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರದ ಜಾಹೀರಾತಿಗೆ 1.02 ಕೋಟಿ ವೆಚ್ಚ

 

ಅನುಭವ ಮಂಟಪದಲ್ಲಿ   ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು.

 

ಅನುಭವಮಂಟಪ ; ಸಿಎಂ ಭಾಷಣದ ನೇರಪ್ರಸಾರಕ್ಕೆ 42.26 ಲಕ್ಷ ರು. ವೆಚ್ಚ

 

ಕೋವಿಡ್‌ ಜಾಹೀರಾತು ಪೈಕಿ ನೀಡಿದ್ದ  1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ದೊರೆತಿತ್ತು.

 

ಕೋವಿಡ್‌ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು

ಸಿವಿಲ್‌ ಗುತ್ತಿಗೆದಾರರಿಗೂ ಬಾಕಿ ವೇತನ ನೀಡಿಲ್ಲ. ಹೀಗಿದ್ದರೂ ಸಹ ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

Hot this week

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Topics

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Related Articles

Popular Categories

error: Content is protected !!