Wednesday | August 19, 2026 |

ವೆಚ್ಚದ ಲೆಕ್ಕ; ಕೆಡಿಪಿ ಸಭೆ ಅಂಕಿ ಅಂಶಕ್ಕೂ ಸಿಎಂ ಕೊಟ್ಟಿರುವ ಅಂಕಿ ಅಂಶಕ್ಕೂ ತಾಳಮೇಳವೇ ಇಲ್ಲ, ಲೆಕ್ಕದಲ್ಲೇ 14,733.49 ಕೋಟಿ ವ್ಯತ್ಯಾಸ

ಬೆಂಗಳೂರು; 2026-27ನೇ ಸಾಲಿನ ಆರ್ಥಿಕ ವರ್ಷದ ಜುಲೈ 31ರ ಅಂತ್ಯಕ್ಕೆ  ಸರ್ಕಾರದ ಇಲಾಖೆಗಳು ಮಾಡಿರುವ ವೆಚ್ಚಕ್ಕೆ  ಸಂಬಂಧಿಸಿದಂತೆ ಕರ್ನಾಟಕ ಪ್ರಗತಿ ಪರಿಶೀಲನೆ ಸಭೆ ಮತ್ತು ಇಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ಅಂಕಿ ಅಂಶಗಳಿಗೆ ತಾಳಮೇಳವೇ ಇಲ್ಲ.

2026ರ ಜುಲೈ ಅಂತ್ಯಕ್ಕೆ ಕೆಡಿಪಿ ಸಭೆಯಲ್ಲಿ ಇಲಾಖೆಗಳು ಮಾಡಿದ್ದ ವೆಚ್ಚಕ್ಕೆ ಸಂಬಂಧಿಸಿದಂತೆ ಯೋಜನೆ, ಸಾಂಖ್ಯಿಕ ಇಲಾಖೆಯು ನೀಡಿರುವ ಅಂಕಿ ಅಂಶದ ಪ್ರಕಾರ ಈವರೆಗೆ 74,021.42 ಕೋಟಿ ರು ವೆಚ್ಚವಾಗಿದೆ. ಆದರೆ ವಿಧಾನಸಭೆ ಸದಸ್ಯ ಯು ಬಿ ಬಣಕಾರ್ ಅವರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ಅಂಕಿ ಅಂಶದ ಪ್ರಕಾರ 88, 804.49 ಕೋಟಿ ರು ವೆಚ್ಚವಾಗಿದೆ.

2026-27ನೇ ಸಾಲಿಗೆ ಸಂಬಂಧಿಸಿದಂತೆ ಜುಲೈ ಅಂತ್ಯಕ್ಕೆ ಕೆಡಿಪಿ ಸಭೆಯಲ್ಲಿ ಇಲಾಖೆಗಳು ನೀಡಿದ್ದ ಅಂಕಿ ಅಂಶಕ್ಕೂ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ವೆಚ್ಚದ ಅಂಕಿ ಅಂಶಗಳ ಮಧ್ಯೆ 14,733.49 ಕೋಟಿ ರು ವ್ಯತ್ಯಾಸ ಇರುವುದು ಅಂಕಿ ಅಂಶಗಳಿಂದ ಕಂಡು ಬಂದಿದೆ.

ಕೆಡಿಪಿ ಸಭೆ ಪ್ರಕಾರ  4 ತಿಂಗಳ ಅವಧಿಯಲ್ಲಿ 74,021.42 ಕೋಟಿ ರು ವೆಚ್ಚವಾಗಿದೆ. ಇದು ಕಳೆದ 2025-26ನೇ ಸಾಲಿನ ಜುಲೈ ಅಂತ್ಯಕ್ಕೆ ಹೋಲಿಸಿದರೇ ವೆಚ್ಚದಲ್ಲಿ ಶೇ.0.43ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನದಲ್ಲಿ ಶೇ.1.18ರಷ್ಟು ಕಡಿಮೆ ಬಿಡುಗಡೆಯಾಗಿರುವುದು ಗೊತ್ತಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 2026ರ ಜುಲೈ ಅಂತ್ಯಕ್ಕೆ ಇಲಾಖಾವಾರು ವೆಚ್ಚದ ಪ್ರಗತಿ ಕುರಿತು ಚರ್ಚಿಸಿದೆ. ಆಯವ್ಯಯದ ಮೂಲಕ ಹಂಚಿಕೆಯಾಗಿದ್ದ ಅನುದಾನದ ವೆಚ್ಚದ ಕುರಿತು ಇಲಾಖೆಗಳು ಅಂಕಿ ಅಂಶಗಳನ್ನು ಮಂಡಿಸಿವೆ.

ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿವೆ.

2026-27ನೇ ಶಾಲಿನಲ್ಲಿ ಒಟ್ಟು 3,60,415.48 ಕೋಟಿ ರು ಅನುದಾನವನ್ನು ಒದಗಿಸಿಕೊಂಡಿದೆ. ಈ ಪೈಕಿ 2026ರ ಜುಲೈ ಅಂತ್ಯಕ್ಕೆ ಒಟ್ಟು 1,29,152.16 ಕೋಟಿ ರು ಬಿಡುಗಡೆ ಮಾಡಿದೆ. ಇನ್ನೂ 1,33,875.79 ಕೋಟಿ ರು ಅನುದಾನ ಲಭ್ಯವಿದೆ. ಇದರಲ್ಲಿ ಕೇಂದ್ರ ಪುರಸ್ಕೃತ ಶೇ. 18.37ರಷ್ಟು ಬಿಡುಗಡೆಯಾಗಿದೆ. ಜುಲೈ ಅಂತ್ಯದವರೆಗೆ 74,071.42 ಕೋಟಿ ರು ವೆಚ್ಚವಾಗಿದೆ. ಇದು ಒಟ್ಟು ಅನುದಾನಕ್ಕೆ ಈವರೆಗೆ ಶೇ. 20.29ರಷ್ಟು ಮಾತ್ರ ವೆಚ್ಚವಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಲಭ್ಯ ಅನುದಾನಕ್ಕೆ ಒಟ್ಟಾರೆ ಶೇ. 55.33ರಷ್ಟು ವೆಚ್ಚವಾಗಿದೆ. ಕಳೆದ ವರ್ಷದ ಇದೇ ಜುಲೈ ಅಂತ್ಯಕ್ಕೆ ಲಭ್ಯ ಅನುದಾನಕ್ಕೆ ಒಟ್ಟಾರೆ ಶೇ. 63.59ರಷ್ಟು ವೆಚ್ಚವಾಗಿತ್ತು. ವೇತನ ಬಾಬ್ತಿನಲ್ಲಿ 34,635.23 ಕೋಟಿ ರು ವೆಚ್ಚವಾಗಿಲ್ಲ.

ಕೆಡಿಪಿ ಸಭೆ ಅಂಕಿ ಅಂಶದ ಪ್ರಕಾರ ಇಲಾಖಾವಾರು ಬಿಡುಗಡೆ-ವೆಚ್ಚ

ಕಂದಾಯ (ವಿಪತ್ತು ನಿರ್ವಹಣೆ) ಗೆ 13,739.43 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ ಜುಲೈ ಅಂತ್ಯದವರೆಗೆ 8,574.24 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 2,761.05 ಕೋಟಿ ರು ವೆಚ್ಚವಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 32.20ರಷ್ಟು ವೆಚ್ಚವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,483.32 ಕೋಟಿ ರು ಅನುದಾನವಿದೆ. ಇದರಲ್ಲಿ 7,351.19 ಕೋಟಿ ರು ಬಿಡುಗಡೆಯಾಗಿದೆ.

ಬಿಡುಗಡೆಯಾಗಿದ್ದ ಅನುದಾನದಲ್ಲಿ 2,693.30 ಕೋಟಿ ರು ವೆಚ್ಚವಾಗಿದೆ. ಇದು ಒಟ್ಟು ಅನುದಾನದಲ್ಲಿ ಶೇ. 27.76ರಷ್ಟು ಮಾತ್ರ ಬಿಡುಗಡೆ ಮಾಡಿದಂತಾಗಿದೆ. ಲಭ್ಯ ಅನುದಾನಕ್ಕೆ ಶೇ. 36.64ರಷ್ಟು ಖರ್ಚು ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 34,865.37 ಕೋಟಿ ರು ಅನುದಾನದ ಪೈಕಿ 3,675.95 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 1,727.82 ಕೋಟಿ ರು ವೆಚ್ಚವಾಗಿದೆ. ಒಟ್ಟು ಅನುದಾನದಲ್ಲಿ ಶೇ. 10.54ರಷ್ಟು ಮಾತ್ರ ಬಿಡುಗಡೆಯಾಗಿದೆ. ಲಭ್ಯ ಅನುದಾನಕ್ಕೆ ಶೇ. 47 ರಷ್ಟು ಖರ್ಚಾಗಿದೆ. ಕೆಕೆಆರ್‍‌ಡಿ ಇಲಾಖೆಗೆ 3,000 ಕೋಟಿ ರು ಅನುದಾನ ಒದಗಿಸಿತ್ತು. ಈ ಅನುದಾನದಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಆದರೆ ವೆಚ್ಚದ ಬಾಬ್ತಿನಲ್ಲಿ 561.68 ಕೋಟಿ ರು ವೆಚ್ಚವಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 25.57ರಷ್ಟು ಖರ್ಚಾಗಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

 

ವಸತಿ ಇಲಾಖೆಗೆ 3,421.16 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ 1,289.93 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾದ ಅನುದಾನದಲ್ಲಿ 395.90 ಕೋಟಿ ರು ಖರ್ಚಾಗಿದೆ. ಇದು ಒಟ್ಟು ಅನುದಾನದಲ್ಲಿ ಶೇ. 37.70ರಷ್ಟು ಬಿಡುಗಡೆಯಾಗಿದೆ. ಲಭ್ಯ ಅನುದಾನಕ್ಕೆ ಶೇ. 22.51ರಷ್ಟು ಖರ್ಚಾಗಿದೆ. ಯೋಜನೆ ಇಲಾಖೆಗೆ ಒದಗಿಸಿರುವ 872 ಕೋಟಿ ಅನುದಾನದ ಪೈಕಿ 293.53 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆ ಮಾಡಿದ್ದ ಅನುದಾನದಲ್ಲಿ 77.36 ಕೋಟಿ ರು ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ.33.62ರಷ್ಟು ಬಿಡುಗಡೆಯಾಗಿದೆ. ಲಭ್ಯ ಅನುದಾನಕ್ಕೆ ಶೇ. 5.52ಷ್ಟು ಮಾತ್ರ ವೆಚ್ಚವಾಗಿದೆ.

ಲೋಕೋಪಯೋಗಿ ಇಲಾಖೆಗೆ ಒಟ್ಟು 10,831.67 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ 3,685.55 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 2,421.26 ಕೋಟಿ ರು ಖರ್ಚಾಗಿದೆ. ಒಟ್ಟು ಅನುದಾನದಲ್ಲಿಲ ಶೇ. 34.03ರಷ್ಟು ಬಿಡುಗಡೆಯಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ. 65.70ರಷ್ಟು ವೆಚ್ಚವಾಗಿದೆ. ನಗರಾಭಿವೃದ್ಧಿ ಇಲಾಖೆಗೆ ಒದಗಿಸಿದ್ದ 9,237.73 ಕೋಟಿ ರುಪಾಯಿಯಲ್ಲಿ 2,924.94 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 1,750.04 ಕೋಟಿ ರು ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ. 31.66ರಷ್ಟು ಬಿಡುಗಡೆಯಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ. 59.83ರಷ್ಟು ವೆಚ್ಚವಾಗಿದೆ.

ಆರೋಗ್ಯ ಇಲಾಖೆಗೆ 11,717.67 ಕೋಟಿ ರು ಒಟ್ಟು ಅನುದಾನದಲ್ಲಿ 4,503.02 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 3,093.67 ಕೋಟಿ ರು ವೆಚ್ಚವಾಗಿದೆ. ಒಟ್ಟು ಅನುದಾನದಲ್ಲಿ ಶೇ. 38.43ರಷ್ಟು ಬಿಡುಗಡೆಯಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ.61.55ರಷ್ಟು ಖರ್ಚಾಗಿದೆ. ಪೌರಾಡಳಿತ ಇಲಾಖೆಗೆ 10,884.67 ಕೋಟಿ ರು ಅನುದಾನದ ಪೈಕಿ ಶೇ. 44.67ರಷ್ಟು ಅಂದರೇ 4,861.99 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 3,041.20 ಕೋಟಿ ರು ಖರ್ಚಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ. 62.55ರಷ್ಟು ವೆಚ್ಚವಾಗಿದೆ.

18,888.06 ಕೋಟಿಯಷ್ಟು ಅನುದಾನ ನಿಗದಿಪಡಿಸಿಕೊಂಡಿರುವ ಜಲಸಂಪನ್ಮೂಲ ಇಲಾಖೆಗೆ ಶೇ. 18.83ರಷ್ಟು ಅಂದರೇ 3,557.29 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 3,252.54 ಕೋಟಿಯಷ್ಟು ಖರ್ಚಾಗಿದೆ. ಇದು ಲಭ್ಯವಿರುವ ಅನುದಾನಕ್ಕೆ ಶೇ. 8212ರಷ್ಟು ವೆಚ್ಚವಾದಂತಾಗಿದೆ. ಹಿಂದುಳಿದ ವರ್ಗಗಳ ಇಲಾಖೆಗೆ 4,461.66 ಕೋಟಿ ರು ಅನುದಾನವಿತ್ತು. ಇದರಲ್ಲಿ 1,663.97 ಕೋಟಿ ರು ಬಿಡುಗಡೆಯಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.37.29ರಷ್ಟಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 807.41 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ.48.52ರಷ್ಟು ಖರ್ಚಾಗಿದೆ.

ಕೃಷಿ ಇಲಾಖೆಗೆ 5,418.87 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ ಶೇ. 52.28ರಷ್ಟು ಅಂದರೇ 2,833.06 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಈ ಅನುದಾನದಲ್ಲಿ 1,773.20 ಕೋಟಿ ರು ಖರ್ಚು ಮಾಡಿದೆ. ಲಭ್ಯ ಅನುದಾನಕ್ಕೆ ಶೇ.62.59ರಷ್ಟಿದೆ. ಸಮಾಜ ಕಲ್ಯಾಣಕ್ಕೆ 6,340.58 ಕೋಟಿ ರು ಅನುದಾನದಲ್ಲಿ 1,741.63 ಕೋಟಿ ರು ಬಿಡುಗಡೆಯಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ. 27.47ರಷ್ಟು ಬಿಡುಗಡೆಯಾಗಿದೆ. ಜುಲೈ ಅಂತ್ಯಕ್ಕೆ 1,021.43 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ.58.65ರಷ್ಟಿದೆ. ಕೌಶಲ್ಯಾಭಿವೃದ್ಧಿಗೆ ಒದಗಿಸಿದ್ದ 2,379.84 ಕೋಟಿ ರು ಅನುದಾನದಲ್ಲಿ 1,592.97 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 66.94ರಷ್ಟಿದೆ. ಜುಲೈ ಅಂತ್ಯಕ್ಕೆ 839.39 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ.52.69ರಷ್ಟಿದೆ.

ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಗೆ 36,759.56 ಕೋಟಿ ರು ಅನುದಾನವಿದೆ. ಈ ಪೈಕಿ ಶೇ. 56.10ರಷ್ಟು ಅಂದರೇ 20,622.98 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಜುಲೈ ಅಂತ್ಯಕ್ಕೆ 12,308.22 ಕೋಟಿ ರು ವೆಚ್ಚವಾಗಿದೆ. ಲಭ್ಯ ಅನುದಾನಕ್ಕೆ ಶೇ.59.68ರಷ್ಟಿದೆ.

ತೋಟಗಾರಿಕೆಗೆ ಒದಗಿಸಿದ್ದ 1,610.33 ಕೋಟಿ ರು ಅನುದಾನದಲ್ಲಿ ಶೇ. 49.59ರಷ್ಟು ಅಂದರೇ 798.52 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 348. 49 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ.43.64ರಷ್ಟು ವೆಚ್ಚವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ 2,449.77 ಕೋಟಿ ರು ಅನುದಾನ ಒದಗಿಸಿದೆ. ಶೇ. 24.05ರಷ್ಟು 589.06 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಜುಲೈ ಅಂತ್ಯಕ್ಕೆ 316.24 ಕೋಟಿ ಖರ್ಚಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ. 53.68ರಷ್ಟಿದೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒದಗಿಸಿದ್ದ 4,557.83 ಕೋಟಿ ರು ಅನುದಾನದ ಪೈಕಿ 908.75 ಕೋಟಿ ರು ಬಿಡುಗಡೆಯಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ. 19.94ರಷ್ಟಿದೆ. ಜುಲೈ ಅಂತ್ಯಕ್ಕೆ 475.57 ಕೋಟಿ ರು ಖರ್ಚಾಗಿದೆ. ಇದು ಶೇ. 52.33ರಷ್ಟಿದೆ. ಒಳಾಡಳಿತ ಇಲಾಖೆಗೆ 13,166.71 ಕೋಟಿ ರು ಅನುದಾನ ಒದಗಿಸಿದ್ದರ ಪೈಕಿ 6,100.73 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 46.33ರಷ್ಟಿದೆ. ಜುಲೈ ಅಂತ್ಯಕ್ಕೆ 4,279.00 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ. 70.14ರಷ್ಟಿದೆ. ಅರಣ್ಯ ಇಲಾಖೆಗೆ 2,559.37 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ 768.27 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 30.02ರಷ್ಟಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 475.84 ಕೋಟಿ ರು ಖರ್ಚಾಗಿದೆ. ಇದು ಲಭ್ಯವಿರುವ ಅನುದಾನಕ್ಕೆ ಶೇ. 61.94ರಷ್ಟಿದೆ.

ಕಂದಾಯ ಇಲಾಖೆಗೆ 3,198.05 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ 2,555.50 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 70.53ರಷ್ಟಿದೆ. ಒಟ್ಟು 725.69 ಕೋಟಿ ರು ಖರ್ಚಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ.32.17ರಷ್ಟಿದೆ. ಆಹಾರ ಇಲಾಖೆಗೆ ಒದಗಿಸಿರುವ 7,912.22 ಕೋಟಿ ರು ಪೈಕಿ 1,277.48 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 16.15ರಷ್ಟಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 1,181.60 ಕೋಟಿ ರು ಖರ್ಚಾಗಿದೆ. ಇದು ಲಭ್ಯವಿರುವ ಅನುದಾನದಲ್ಲಿ ಶೇ. 92.49ರಷ್ಟಿದೆ. ಯುವ ಸಬಲೀಕರಣಕ್ಕೆ 282.17 ಕೋಟಿ ರು ಒದಗಿಸಿದೆ. ಈ ಪೈಕಿ 121.25 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 42.97ರಷ್ಟಿದೆ. ಜುಲೈ ಅಂತ್ಯಕ್ಕೆ 40.27 ಕೋಟಿ ಖರ್ಚಾಗಿದೆ. ಲಭ್ಯವಿರುವ ಅನುದಾನಕ್ಕೆ ಶೇ. 33.21ರಷ್ಟು ವೆಚ್ಚವಾಗಿದೆ.

ಮಾಹಿತಿ ತಂತ್ರಜ್ಞಾನ ಇಲಾಖೆಗೆ 1,074.50 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ ಕೇವಲ 85.30 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದು ಶೇ. 7.94ಷ್ಟಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿಯೂ ಕೇವಲ 5.16 ಕೋಟಿ ಮಾತ್ರ ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 6.04ರಷ್ಟಿದೆ. ಪಶು ಸಂಗೋಪನೆಗೆ ಒದಗಿಸಿರುವ 3,501.53 ಕೋಟಿ ರು ಅನುದಾನದಲ್ಲಿ 1,265.05 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಇದು ಶೇ. 36.13ರಷ್ಟಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 928.41 ಕೋಟಿ ರು ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 73.39ರಷ್ಟಿದೆ. ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ 1,434.63 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ 870.76 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 60.70ರಷ್ಟಿದೆ. ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ 405.36 ಕೋಟಿ ರು ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ. 46.55ರಷ್ಟಿದೆ.

 

 

ವಾಣಿಜ್ಯ ಕೈಗಾರಿಕೆ (ಸಣ್ಣ) ಇಲಾಖೆಗೆ 1,888.68 ಕೋಟಿ ರು ಅನುದಾನ ಒದಗಿಸಿತ್ತಾದರೂ ಈ ಪೈಕಿ 316.14 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 16.,74ರಷ್ಟಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 217.20 ಕೋಟಿ ರು ವೆಚ್ಚವಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ.68.70ರಷ್ಟಿದೆ. ಅದೇ ರೀತಿ ವಾಣಿಜ್ಯ ಕೈಗಾರಿಕೆ (ಬೃಹತ್) 1,486.04 ಕೋಟಿ ರು ಅನುದಾನದ ಪೈಕಿ 350.56 ಕೋಟಿ ರು ಬಿಡುಗಡೆಯಾಗಿದೆ. ಇದು ಶೇ. 23.59ರಷ್ಟಿತ್ತು. ಜುಲೈ ಅಂತ್ಯಕ್ಕೆ 269.02 ಕೋಟಿ ರು ವೆಚ್ಚವಾಗಿದೆ. ಲಭ್ಯ ಅನುದಾನಕ್ಕೆ ಶೇ. 76.74ರಷ್ಟು ಖರ್ಚು ಮಾಡಿದಂತಾಗಿದೆ. ಹಾಗೆಯೇ ಮೂಲಭೂತ ಸೌಕರ್ಯ ಇಲಾಖೆಗೆ 1,017.51 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ 347.85 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 293.36 ಕೋಟಿ ರು ಖರ್ಚು ಮಾಡಿದೆ. ಇದು ಲಭ್ಯ ಅನುದಾನಕ್ಕೆ 76.74ರಷ್ಟಿತ್ತು.

ಆರ್ಥಿಕ ಇಲಾಖೆಗೆ ಒದಗಿಸಿದ್ದ 54,414.47 ಕೋಟಿ ರು ಅನುದಾನದಲ್ಲಿ 21.334.40 ಕೋಟಿ ರು ಅನುದಾನ ಬಿಡುಗಡೆಯಾಗಿದ್ದರೇ ಈ ಪೈಕಿ ಜುಲೈ ಅಂತ್ಯಕ್ಕೆ 6,280.25 ಕೋಟಿ ರು ಖರ್ಚಾಗಿದೆ. ಇದು ಶೇ. 29.44ರಷ್ಟಿತ್ತು. ಸಣ್ಣ ನೀರಾವರಿ ಇಲಾಖೆಗೆ 3,355.99 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ 927.90 ಕೋಟಿ ರು ಬಿಡುಗಡೆಯಾಗಿದೆ. ಜುಲೈ ಅಂತ್ಯಕ್ಕೆ 796. 71 ಕೋಟಿ ರು ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 85.86ರಷ್ಟಿದೆ. ಮೀನುಗಾರಿಕೆಗೆ ನಿಗದಿಪಡಿಸಿರುವ 396.99 ಕೋಟಿ ರು ಅನುದಾನದ ಪೈಕಿ 110.18 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 72.14 ಕೋಟಿ ರು ವೆಚ್ಚವಾಗಿದೆ.

ಕಾನೂನು ಇಲಾಖೆಗೆ 2,429.95 ಕೋಟಿ ರು ಅನುದಾನದ ಪೈಕಿ 2,148.80 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 812.27 ಕೋಟಿ ರು ಖರ್ಚಾಗಿದೆ. ವಾರ್ತಾ ಇಲಾಖೆಗೆ 216.00 ಕೋಟಿ ರು ಅನುದಾನದ ಪೈಕಿ 44.66 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 21.85 ಕೋಟಿ ರು ಖರ್ಚಾಗಿದೆ. ಪ್ರವಾಸೋದ್ಯಮಕ್ಕೆ 278.94 ಕೋಟಿ ರು ಅನುದಾನದಲ್ಲಿ 48.40 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ ಜುಲೈ ಅಂತ್ಯಕ್ಕೆ 19.71 ಕೋಟಿ ರು ವೆಚ್ಚವಾಗಿದೆ. ರೇಷ್ಮೆ ಇಲಾಖೆಗೆ 393.07 ಕೋಟಿ ರು ಅನುದಾನದಲ್ಲಿ 128.81 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 89.83 ಕೋಟಿ ರು ವೆಚ್ಚವಾಗಿದೆ. ಉನ್ನತ ಶಿಕ್ಷಣದಲ್ಲಿ 6,317.77 ಕೋಟಿ ರು ಪೈಕಿ 2,551.11 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,780.46 ಕೋಟಿ ರು ವೆಚ್ಚವಾಗಿದೆ.

ಕನ್ನಡ ಸಂಸ್ಕೃತಿ ಇಲಾಖೆಗೆ 286.66 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 63.69 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 51.34 ಕೋಟಿ ರು ಖರ್ಚಾಗಿದೆ. ಸಾರಿಗೆ ಇಲಾಖೆಗೆ 8,621.73 ಕೋಟಿ ರು ಅನುದಾನದಲ್ಲಿ 1,719.13 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,675.76 ಕೋಟಿ ಖರ್ಚಾಗಿದೆ. ಕಾರ್ಮಿಕ ಇಲಾಖೆಗೆ ಒದಗಿಸಿರುವ 352.25 ಕೋಟಿ ರು ಅನುದಾನದಲ್ಲಿ 193.45 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 106.19 ಕೋಟಿ ರು ವೆಚ್ಚವಾಗಿದೆ. ಸಹಕಾರ ಇಲಾಖೆಗೆ 2,224.58 ಕೋಟಿ ರು ಅನುದಾನದಲ್ಲಿ 675 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 560.35 ಕೋಟಿ ರು ಖರ್ಚಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ 5,104.14 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ 2,122.21 ಕೋಟಿ ರು ಬಿಡುಗಡೆಯಾಗಿದೆ. ಜುಲೈ ಅಂತ್ಯಕ್ಕೆ 1,680.77 ಕೋಟಿ ಖರ್ಚಾಗಿದೆ.

ಇಂಧನ ಇಲಾಖೆಗೆ 29,938.28 ಕೋಟಿ ರು ಅನುದಾನ ಒದಗಿಸಿದೆ. ಇದರಲ್ಲಿ 11,315.55 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಲಿ 11,308.06 ಕೋಟಿ ಖರ್ಚಾಗಿದೆ. ಒಟ್ಟಾರೆ 3,60,415.48 ಕೋಟಿ ರು ಅನುದಾನದಲ್ಲಿ 1,29,152.16 ಕೋಟಿ ರು ಬಿಡುಗಡೆಯಾಗಿದೆ. ಒಟ್ಟು ಅನುದಾನಕ್ಕೆ ಶೇ. 35.83ರಷ್ಟು ಬಿಡುಗಡೆಯಾಗಿದೆ. ಒಟ್ಟು ಲಭ್ಯವಿರುವ ಅನುದಾನಕ್ಕೆ ಶೇ. 55.33ರಷ್ಟು ಅಂದರೇ 74,071.42 ಕೋಟಿ ರು ವೆಚ್ಚವಾಗಿರುವುದು ಕೆಡಿಪಿ ಸಭೆಯಲ್ಲಿನ ಅಂಕಿ ಅಂಶದಿಂದ ತಿಳಿದು ಬಂದಿದೆ.

 

 

 

 

ಆದರೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಇದೇ ಜುಲೈ 31ರ ಅಂತ್ಯಕ್ಕೆ ಆಗಿರುವ ವೆಚ್ಚದ ಅಂಕಿ ಅಂಶಗಳ ಮಧ್ಯೆ ತಾಳಮೇಳವೇ ಇಲ್ಲದಂತಾಗಿದೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...

Related Articles

Popular Categories

error: Content is protected !!