ಪತ್ರಿಕೆಗಳಿಗೆ 21.70 ಕೋಟಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ; ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು

ಬೆಂಗಳೂರು; ಸರ್ಕಾರದ ಸಾಧನೆ ಯೋಜನೆಗಳ ಕುರಿತಾದ ಮಾಹಿತಿಯನ್ನು ಪ್ರಚಾರ ಮಾಡಲು ಕಾಂಗ್ರೆಸ್‌ ಸರ್ಕಾರವು ಕಳೆದ 9 ತಿಂಗಳಲ್ಲಿ ಜಾಹೀರಾತುಗಳಿಗೆ ಬರೋಬ್ಬರಿ 100 ಕೋಟಿ ರು. ವೆಚ್ಚ ಮಾಡಿದೆ.

 

ವಿಧಾನಪರಿಷತ್‌ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಖಿತ ಉತ್ತರ ಒದಗಿಸಿದ್ದಾರೆ.

 

ಶಾಲಾ ಮಕ್ಕಳ ಉತ್ತರ ಪತ್ರಿಕೆಗಳಿಗೂ ಹಣವನ್ನು ಭರಿಸದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವ ಹೊತ್ತಿನಲ್ಲಿಯೇ ಜಾಹೀರಾತುಗಳಿಗೆ 100 ಕೋಟಿ ರು. ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ಜಾಹೀರಾತಿನ ವೆಚ್ಚದ ವಿವರ

 

ಗ್ಯಾರಂಟಿ ಯೋಜನೆಗಳಿಗೆ 3,28,21,162 ರು., 100 ದಿನಗಳ ಪ್ರಗತಿಗೆ 6,05,02,650 ರು., ಕರ್ನಾಟಕ ಸಂಭ್ರಮ-50ಕ್ಕೆ 3,47,94,791 ರು., ಸಂವಿಧಾನ ಪೀಠಿಕೆ 83,93,143 ರು., ಮೈಸೂರು ದಸರಾಕ್ಕೆ 1,10,69,349 ರು., ಬಸ್‌ ಶೆಲ್ಟರ್‍‌ಗಳಲ್ಲಿ ಜಾಹೀರಾತಿಗೆ 3,05,56,117 ರು., ಖಾಸಗಿ ಒಡೆತನದ ಪ್ರಚಾರ ಫಲಕಗಳ ಮೂಲಕ ಪ್ರಚಾರಕ್ಕೆ 51,19,540 ರು., ವಸ್ತು ಪ್ರದರ್ಶನಕ್ಕೆ 1,11,26,383 ರು., ರು ಪಾವತಿಸಲಾಗಿದೆ.

 

ಹಿಂದುಳಿದ ವರ್ಗ ಹಾಗೂ ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಪ್ರೋತ್ಸಾಹ ಧನ ರೂಪದ ಜಾಹೀರಾತಿಗೆ 21,70, 00,000 ರು., ವೆಚ್ಚ ಮಾಡಲಾಗಿದೆ. ಆದರೆ ಹಿಂದುಳಿದ ವರ್ಗ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ವಿವರ ಮತ್ತು ಜಾಹೀರಾತು ಮೊತ್ತ ಪಾವತಿಸಿರುವ ಮೊತ್ತದ ವಿವರಗಳನ್ನು ಒದಗಿಸಿಲ್ಲ.

 

ಪತ್ರಿಕಾ ಮಾಧ್ಯಮಗಳಿಗೆ 33,81,00,000 ರು.,ವಿದ್ಯುನ್ಮಾನ ಮಾಧ್ಯಮಗಳಿಗೆ 13,92,00,000 ರು., ಇತರೆ ಸಮೂಹ ಮಾಧ್ಯಮಗಳಿಗೆ 11,92,00,000 ರು.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರದಲ್ಲಿ ವಿವರಿಸಿದ್ದಾರೆ.

 

2019-20ರಿಂದ 2023ರ ಜನವರಿವರೆಗೆ ಹಿಂದಿನ ಬಿಜೆಪಿ ಸರ್ಕಾರವು ಒಟ್ಟಾರೆ 4 ವರ್ಷಗಳಲ್ಲಿ ಟಿವಿ, ಮುದ್ರಣ ಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ 173.33 ಕೋಟಿ ರು. ವೆಚ್ಚ ಮಾಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರವು ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಕೇವಲ 9 ತಿಂಗಳಲ್ಲಿ 47.73 ಕೋಟಿ ರು. ವೆಚ್ಚ ಮಾಡಿದೆ.

 

2023-24ನೇ ಸಾಲಿನಲ್ಲಿ ಬಸ್‌ ಬ್ಯ್ರಾಂಡಿಂಗ್‌ ಮೂಲಕ ಯೋಜನೆಗಳನ್ನು ಪ್ರಚಾರ ಮಾಡಲು ಪ್ರತ್ಯೇಕ ಅನುದಾನ ಒದಗಿಸಿಲ್ಲ.

 

ಇಲಾಖೆಗೆ ಒದಗಿಸಿದ್ದ ಒಟ್ಟು ಅನುದಾನದಲ್ಲಿಯೇ ಇದಕ್ಕಾಗಿ 9,01,50,676 ರು., ವೆಚ್ಚ ಮಾಡಲಾಗಿದೆ.

 

 

ವಿಶೇಷವೆಂದರೇ ಕಾಂಗ್ರೆಸ್‌ ಶಾಸಕ ನರೇಂದ್ರಸ್ವಾಮಿ ಅವರ ಪತ್ನಿ ನಿರ್ದೇಶಕರಾಗಿರುವ ಬೆನಕ ಆಟೋ ಮೇಷನ್‌ ಕಂಪನಿಗೆ 41,00,194 ರು. ಪಾವತಿಸಲಾಗಿದೆ. ಉಳಿದಂತೆ ಸಾಯಿ ಅಡ್ವೈಟೈಸರ್ಸ್‌ 6,35,76,489 ರು., ಕೆಎಂಸಿ ಅಂಡ್‌ ಎ ಗೆ 1,43,43,742 ರು., ಶಿವ ಆಡ್ಸ್‌ಗೆ 71,80,455 ರು., ರಿಪ್ಪಲ್‌ ಮೀಡಿಯಾಕ್ಕೆ 9,49,796 ರು. ಪಾವತಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿರುವ ಉತ್ತರದಿಂದ ತಿಳಿದು ಬಂದಿದೆ.

 

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಆರೇ ಆರು ತಿಂಗಳಲ್ಲಿ 18 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದ್ದರು.

 

ಬರಗಾಲದಲ್ಲೂ ಆರೇ ಆರು ತಿಂಗಳಲ್ಲಿ ಜಾಹೀರಾತುಗಳಿಗೆ 18.50 ಕೋಟಿ ವೆಚ್ಚ

 

2019ರಿಂದ 2023ರವರೆಗೆ ಹಿಂದಿನ ಬಿಜೆಪಿ ಸರ್ಕಾರವೂ ಸಹ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಒಟ್ಟಾರೆ 173.33 ಕೋಟಿ ರು.ಗಳನ್ನು ಜಾಹೀರಾತಿಗೆ ವೆಚ್ಚ ಮಾಡಿತ್ತು.

 

2019-20ರಲ್ಲಿ ಟಿ ವಿ ವಾಹಿನಿಗಳೀಗೆ 15.25 ಕೋಟಿ ರು., 2020-21ರಲ್ಲಿ 17.45 ಕೋಟಿ , 2021-22ರಲ್ಲಿ 36.58 ಕೋಟಿ ರು., 2022-23 (2023 ಜನವರಿ 31ವರೆಗೆ) 42.23 ಕೋಟಿ ರು. ಸೇರಿ 111.51 ಕೋಟಿ ರು. ವೆಚ್ಚ ಮಾಡಿತ್ತು.

 

ಅದೇ ರೀತಿ ಮುದ್ರಣ ಮಾಧ್ಯಮಗಳಿಗೆ 2019-20ರಲ್ಲಿ 6.79 ಕೋಟಿ ರು., 2020-21ರಲ್ಲಿ 9.75 ಕೋಟಿ ರು., 2021-22ರಲ್ಲಿ 13.26 ಕೋಟಿ ರು., 2022-23ರಲ್ಲಿ 26.28 ಕೋಟಿ ರು ಸೇರಿ 56.08 ಕೋಟಿ ರು.,ವೆಚ್ಚ ಮಾಡಿತ್ತು.

 

 

ಹಾಗೆಯೇ ಸಾಮಾಜಿಕ ಜಾಲತಾಣಗಳಿಗೆ 2019-20ರಲ್ಲಿ 0.48 ಲಕ್ಷ, 2020-21ರಲ್ಲಿ 0.48 ಲಕ್ಷ ರು., 2021-22ರಲ್ಲಿ 1.18 ಲಕ್ಷ ರು., 2022-23ರಲ್ಲಿ 3.60 ಲಕ್ಷ ರು. ಸಶೇರಿ ಒಟ್ಟಾರೆ 5.70 ಲಕ್ಷ ರು. ವೆಚ್ಚ ಮಾಡಿತ್ತು.

 

ಇನ್ನು 2020-21ರಲ್ಲಿ    ವರ್ಣ ಜಾಹೀರಾತುಗಳಿಗೆ 175,66,6,429 ರು., 2021-22ರಲ್ಲಿ 341,073,768 ರು., 2022-23ರಲ್ಲಿ 567,216,692 ರು.ಗಳನ್ನು ವೆಚ್ಚ ಮಾಡಲಾಗಿದೆ.

 

ರಾಜ್ಯದ ಶೇ.99ರಷ್ಟು ತಾಲೂಕುಗಳು ಬರಪೀಡಿತವಾಗಿವೆ. ಬಹುತೇಕ ತಾಲೂಕು ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿರುವ ಖಾಸಗಿ ಟ್ಯಾಂಕರ್‍‌ಗಳ ಮಾಲೀಕರಿಗೆ ಹಣ ಪಾವತಿಯಾಗಿಲ್ಲ.

 

ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋವಿಡ್‌ ಜಾಗೃತಿ ಹೆಸರಿನಲ್ಲಿ 11 ಕೋಟಿ ರು. ವೆಚ್ಚ ಮಾಡಿದ್ದರು.

ಕೋವಿಡ್‌-19 ಜಾಹೀರಾತಿನ ಜಾಲ; 3 ತಿಂಗಳಲ್ಲಿ 11 ಕೋಟಿ ವೆಚ್ಚ

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋದಿ ಹುಟ್ಟುಹಬ್ಬಕ್ಕೂ ಜಾಹೀರಾತು ನೀಡಿದ್ದರು. ಇದಕ್ಕಾಗಿ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚವಾಗಿತ್ತು.

 

 

ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?

 

ಮೋದಿ ಹುಟ್ಟುಹಬ್ಬಕ್ಕೆ ಪ್ರಾಯೋಜಿತ ಪುರವಣಿಗೆಗೆ ಜಾಹೀರಾತು ನೀಡಿದ್ದ 44.85 ಲಕ್ಷ ರು. ಮಾಹಿತಿಗಳನ್ನೂ ಹಿಂದಿನ ಸರ್ಕಾರವು ಮುಚ್ಚಿಟಿತ್ತು.

 

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಯಡಿಯೂರಪ್ಪ ಅವರು  ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ರು.ಗಳನ್ನು ರಾಜ್ಯ ಸರ್ಕಾರದಿಂದ ಭರಿಸಿದ್ದರು.

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ, ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚಾಗಿತ್ತು. ಅಲ್ಲದೇ ಜಾಹೀರಾತಿಗೆ 6.62 ಕೋಟಿ ವೆಚ್ಚವಾಗಿತ್ತು.

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ

 

ಕೋವಿಡ್ ಲಸಿಕೆ ಅಭಿಯಾನಕ್ಕಾಗಿ   3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಅಭಿಯಾನದ  ಗುರಿ ಮುಟ್ಟಿರಲಿಲ್ಲ.

 

ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

 

ಸರ್ಕಾರದ ಸಾಧನೆ ಬಿಂಬಿಸಲು ಬಸವರಾಜ ಬೊಮ್ಮಾಯಿ ಅವರು ತಮ್ಮ  ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿದ್ದರು.

 

ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ವೆಚ್ಚವಾಗಿತ್ತು.

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರದ ಜಾಹೀರಾತಿಗೆ 1.02 ಕೋಟಿ ವೆಚ್ಚ

 

ಅನುಭವ ಮಂಟಪದಲ್ಲಿ   ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು.

 

ಅನುಭವಮಂಟಪ ; ಸಿಎಂ ಭಾಷಣದ ನೇರಪ್ರಸಾರಕ್ಕೆ 42.26 ಲಕ್ಷ ರು. ವೆಚ್ಚ

 

ಕೋವಿಡ್‌ ಜಾಹೀರಾತು ಪೈಕಿ ನೀಡಿದ್ದ  1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ದೊರೆತಿತ್ತು.

 

ಕೋವಿಡ್‌ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು

ಸಿವಿಲ್‌ ಗುತ್ತಿಗೆದಾರರಿಗೂ ಬಾಕಿ ವೇತನ ನೀಡಿಲ್ಲ. ಹೀಗಿದ್ದರೂ ಸಹ ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

the fil favicon

SUPPORT THE FILE

Latest News

Related Posts