Tuesday | August 18, 2026 |

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌ ತಂತ್ರಾಂಶವನ್ನು ಜಾರಿಗೊಳಿಸಿದ್ದರೂ ಕಡತಗಳ ವಿಲೇವಾರಿಯಲ್ಲಿ ಪ್ರಗತಿ ಕಂಡು ಬಂದಿಲ್ಲ. ಇಲಾಖೆಗಳಿಗಿಂತಲೂ ಸಚಿವಾಲಯದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ಸಾವಿರಾರು ದಿನಗಳಿಂದ ವಿಲೇವಾರಿಯಾಗದೇ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

ಅಧಿಕಾರಿ, ನೌಕರರ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಇ-ಆಫೀಸ್‌ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇ-ಆಫೀಸ್‌ ತಂತ್ರಾಂಶದಿಂದ ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಜುಲೈ 1ರಿಂದ ಜುಲೈ 31ರವರೆಗೆ ಲಭ್ಯವಿರುವ ಇ-ಆಫೀಸ್‌ ತಂತ್ರಾಂಶದ ಅಂಕಿ ಅಂಶಗಳ ಪ್ರಕಾರ ವಿಲೇವಾರಿಯಾಗದೇ ಇರುವ ಕಡತಗಳು ರಾಶಿರಾಶಿಯಷ್ಟು ಇವೆ.

ಸಚಿವಾಲಯದಲ್ಲಿ ಇ_ಆಫೀಸ್‌ ತಂತ್ರಾಂಶದಲ್ಲಿನ ಕಡತ ವಿಲೇವಾರಿಯು ಅತ್ಯಂತ ಕನಿಷ್ಟ ಪ್ರಮಾಣದಲ್ಲಿದೆ. ಕಂದಾಯ ಸಚಿವಾಲಯವೊಂದರಲ್ಲೇ 3,187 ದಿನ, ಡಿಪಿಎಆರ್‍‌ನಲ್ಲಿ 1,740 ದಿನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಚಿವಾಲಯವೊಂದರಲ್ಲೇ 1,036 ದಿನಗಳಿಂದ ಕಡತಗಳು ನೆನೆಗುದಿಗೆ ಬಿದ್ದಿವೆ.

2026ರ ಜುಲೈ 1ರಿಂದ 2026ರ ಜುಲೈ ಅಂತ್ಯದವರೆಗೆ ಇ ಆಫೀಸ್‌ನಲ್ಲಿನ ಕಡತಗಳ ವಿಲೇವಾರಿಯಲ್ಲಿ ಕುಂಠಿತವಾಗಿರುವ ಕುರಿತು ದಿ ಫೈಲ್‌ಗೆ ಅಂಕಿ ಅಂಶಗಳ ಟಿಪ್ಪಣಿ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಗೃಹ ಸಚಿವಾಲಯದಲ್ಲಿ 2026ರ ಜುಲೈ 1ರ ಹೊತ್ತಿಗೆ 1,930 ಕಡತಗಳನ್ನು ತೆರೆದಿದ್ದವು. ಜುಲೈ 1ರಿಂದ ಜುಲೈ ಅಂತ್ಯದವರೆಗೆ 3,034 ಕಡತಗಳನ್ನು ಸೃಜಿಸಿತ್ತು. ಈ ಪೈಕಿ 1,993 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 1,995 ಕಡತಗಳು ಚಲನೆಯಲ್ಲಿವೆ. ಈ ಇಲಾಖೆಯಲ್ಲಿ 612 ದಿನಗಳಿಂದಲೂ ವಿಲೇವಾರಿಯಾಗದೇ ಬಾಕಿ ಇದೆ.

ಮೂಲಭೂತ ಸೌಕರ್ಯ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 1,252 ಕಡತಗಳಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 1,475 ಕಡತಗಳು ಸೃಜಿಸಲಾಗಿದೆ. ಈ ಪೈಕಿ 1,374 ಕಡತಗಳನ್ನು ಮುಕ್ತಾಯಗೊಳಿಸಿದೆ. 1,383 ಕಡತಗಳು ಇನ್ನೂ ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ ಕಡತಗಳು 866 ದಿನಗಳಿಂದಲೂ ವಿಲೇವಾರಿಯಾಗದೇ ಬಾಕಿ ಇವೆ. ತೋಟಗಾರಿಕೆ ಇಲಾಖೆ ಸಚಿವಾಲಯದಲ್ಲಿ ಜುಲೈ 1ರ ಹೊತ್ತಿಗೆ 353 ಕಡತಗಳಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 161 ಕಡತಗಳನ್ನು ತೆರೆಯಲಾಗಿತ್ತು. ಈ ಪೈಕಿ 337 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನು 343 ಕಡತಗಳು ಇನ್ನೂ ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 900 ದಿನಗಳಿಂದಲೂ ಕಡತಗಳು ವಿಲೇವಾರಿಯಾಗದೇ ಬಾಕಿ ಇವೆ.

 

 

ಇಂಧನ ಸಚಿವಾಲಯದಲ್ಲಿ ಜುಲೈ 1ರ ಹೊತ್ತಿಗೆ 590 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 409 ಕಡತಗಳನ್ನು ಸೃಜಿಸಲಾಗಿದೆ. 401 ಕಡತಗಳನ್ನು ಮುಕ್ತಾಯಗೊಳಿಸಿದೆ. 602 ಕಡತಗಳು ಇನ್ನು ಚಲನೆಯಲ್ಲಿವೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 805 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 203 ಕಡತಗಳನ್ನು ತೆರೆಯಲಾಗಿದೆ. 376 ಕಡತಗಳನ್ನು ಮುಕ್ತಾಯಗೊಳಿಸಿರುವ ಈ ಸಚಿವಾಲಯವು ಇನ್ನೂ 572 ಕಡತಗಳನ್ನು ಚಲನೆಯಲ್ಲಿಟ್ಟಿದೆ. 32 ದಿನಗಳಿಂದಲೂ ಇಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಇದೆ.

ಯೋಜನೆ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 289 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 174 ಕಡತಗಳು ತೆರೆಯಲಾಗಿತ್ತು. 194 ಕಡತಗಳನ್ನು ಮುಕ್ತಾಯಗೊಳಿಸಿರುವ ಸಚಿವಾಲಯವು 303 ಕಡತಗಳನ್ನು ಚಲನೆಯಲ್ಲಿಟ್ಟಿದೆ. ಈ ಸಚಿವಾಲಯದಲ್ಲಿ 118 ದಿನಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇದೆ.

ಕಂದಾಯ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 3,847 ಕಡತಗಳು ಚಲನೆಯಲ್ಲಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 1,467 ಕಡತಗಳನ್ನು ತೆರೆಯಲಾಗಿತ್ತು. ಈ ಪೈಕಿ 2,259 ಕಡತಗಳನ್ನು ಮುಕ್ತಾಯೊಗಳಿಸಿದೆ. ಇನ್ನೂ 3,652 ಕಡತಗಳು ಚಲನೆಯಲ್ಲಿವೆ. 3,187 ದಿನಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇವೆ.

ಕೃಷಿ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 626 ಕಡತಗಳಿದ್ದವು. ಜುಲೈ 1ರಿಂದ ಜುಲೈ 31ವರೆಗೆ 230 ಕಡತಗಳನ್ನು ತೆರೆಯಲಾಗಿತ್ತು. 474 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 791 ಕಡತಗಳು ಚಲನೆಯಲ್ಲಿದೆ. 266 ದಿನಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇವೆ. ಯುವಜನ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 256 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 144 ಕಡತಗಳನ್ನು ತೆರೆಯಲಾಗಿತ್ತು. 147 ಕಡತಗಳು ಮುಕ್ತಾಯಗೊಳಿಸಿದೆ. 249 ಕಡತಗಳು ಇನ್ನೂ ಚಲನೆಯಲ್ಲಿವೆ.

ಡಿಪಿಎಆರ್‍‌ ಇ ಆಡಳಿತದಲ್ಲಿ ಜುಲೈ 1ರ ಹೊತ್ತಿಗೆ 568 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 107 ಕಡತಗಳನ್ನು ತೆರೆಯಲಾಗಿತ್ತು. 104 ಕಡತಗಳು ಇನ್ನೂ ಚಲನೆಯಲ್ಲಿವೆ. 448 ದಿನಗಳಿಂದಲೂ ಕಡತಗಳು ವಿಲೇವಾರಿಯಾಗದೇ ಬಾಕಿ ಇದೆ. ಮೂಲಸೌಕರ್ಯ ಇಲಾಖೆಯಲ್ಲಿ 263 ಕಡತಗಳು ಜುಲೈ 1ರ ಹೊತ್ತಿಗೆ ಇದ್ದವು. 112 ಕಡತಗಳನ್ನು ಜುಲೈ 1ರಿಂದ ಜುಲೈ 31ರ ಹೊತ್ತಿಗೆ ತೆರೆಯಲಾಗಿತ್ತು. 136 ಕಡತಗಳನ್ನು ಮುಕ್ತಾಯಗೊಳಿಸಿದೆ. 159 ದಿನಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇದ್ದವು.

ಡಿಪಿಎಆರ್‍‌ ಸಚಿವಾಲಯದಲ್ಲಿಯೇ ಜುಲೈ 1ರ ಹೊತ್ತಿಗೆ 3,284 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 1,512 ಕಡತಗಳನ್ನು ತೆರೆಯಲಾಗಿತ್ತು. 1,672 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನೂ 3,597 ಕಡತಗಳು ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 1,740 ದಿನಗಳಿಂದಲೂ ಕಡತಗಳು ವಿಲೇವಾರಿಗೆ ಬಾಕಿ ಇದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವಾಲಯದಲ್ಲಿ ಜುಲೈ 1ರ ಹೊತ್ತಿಗೆ 1,458 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 529 ಕಡತಗಳನ್ನು ತೆರೆಯಲಾಗಿತ್ತು. 680 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನು 1,468 ಕಡತಗಳು ಇನ್ನೂ ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 1,036 ದಿನಗಳಿಂದಲೂ ಕಡತಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ. ಉನ್ನತ ಶಿಕ್ಷಣದಲ್ಲಿಯೂ ಸಹ ಜುಲೈ 1ರ ಹೊತ್ತಿನಲ್ಲಿ 1,212 ಕಡತಗಳಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 424 ಕಡತಗಳನ್ನು ತೆರೆದಿತ್ತು. 623 ಕಡತಗಳನ್ನು ಮುಕ್ತಾಯಗೊಳಿಸಿದೆ. ಈ ಸಚಿವಾಲಯದಲ್ಲಿ ಇನ್ನೂ 1,368 ಕಡತಗಳು ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 346 ದಿನಗಳಿಂದಲೂ ಕಡತಗಳು ಬಾಕಿ ಇವೆ.

ಜಲ ಸಂಪನ್ಮೂಲ ಸಚಿವಾಲಯದಲ್ಲಿ ಜುಲೈ 1ರ ಹೊತ್ತಿಗೆ 1,533 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರ ಹೊತ್ತಿಗೆ 695 ಕಡತಗಳನ್ನು ತೆರೆದಿತ್ತು. 646 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನು 1,484 ಕಡತಗಳು ಇನ್ನೂ ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 248 ದಿನಗಳಿಂದಲೂ ಕಡತಗಳು ಬಾಕಿ ಇವೆ. ಹಣಕಾಸು ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 5,276 ಕಡತಗಳಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 1,497 ಕಡತಗಳನ್ನು ತೆರೆಯಲಾಗಿತ್ತು. 2,456 ಕಡತಗಳನ್ನು ಮುಕ್ತಾಯಗೊಳಿಸಿದೆ. ಈ ಸಚಿವಾಲಯದಲ್ಲಿ 5,689 ಕಡತಗಳು ಚಲನೆಯಲ್ಲಿವೆ. ಅಲ್ಲದೇ ಇದೇ ಸಚಿವಾಲಯದಲ್ಲಿ 1,183 ದಿನಗಳಿಂದಲೂ ಕಡತಗಳು ವಿಲೆವಾರಿಗೆ ಬಾಕಿ ಇವೆ.

ಕಾನೂನು ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 1,332 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 433 ಕಡತಗಳು ತೆರೆಯಲಾಗಿತ್ತು. 485 ಕಡತಗಳನ್ನು ಮುಕ್ತಾಯಗೊಳಿಸಿದೆ. 1,268 ಕಡತಗಳು ಇನ್ನೂ ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 601 ದಿನಗಳಿಂದಲೂ ಕಡತಗಳು ಬಾಕಿ ಇವೆ. ಲೋಕೋಪಯೋಗಿ ಇಲಾಖೆಯಲ್ಲಿ ಜುಲೈ 1ರ ಹೊತ್ತಿಗೆ 2,388 ಕಡತಗಳು ಇದ್ದವು. ಜುಲೈ 1ರಿಂದ ಜುಲೈ 31ರವರೆಗೆ 637 ಕಡತಗಳನ್ನು ತೆರೆದಿತ್ತು. 857 ಕಡತಗಳನ್ನು ಮುಕ್ತಾಯಗೊಳಿಸಿದೆ. ಇನ್ನು 2,357 ಕಡತಗಳು ಚಲನೆಯಲ್ಲಿವೆ. ಈ ಸಚಿವಾಲಯದಲ್ಲಿ 935 ದಿನಗಳಿಂದಲೂ ಕಡತಗಳು ಬಾಕಿ ಇವೆ.

 

 

ಒಟ್ಟಾರೆ ಜುಲೈ 1ರ ಹೊತ್ತಿಗೆ ಒಟ್ಟು 30 ಸಚಿವಾಲಯಗಳಲ್ಲಿ 32,273 ಕಡತಗಳು ಇ ಆಫೀಸ್‌ನಲ್ಲಿದ್ದವು. ಜುಲೈ 1ರಿಂದ ಜುಲೈ 31ರವರೆಗೆ 15,326 ಕಡತಗಳನ್ನು ತೆರೆಯಲಾಗಿತ್ತು. 17,369 ಕಡತಗಳನ್ನು ಮುಕ್ತಾಯಗೊಳಿಸಿದೆ. ಈ ಸಚಿವಾಲಯಗಳಲ್ಲಿ 32,001 ಕಡತಗಳು ಇನ್ನು ಚಲನೆಯಲ್ಲಿವೆ.

ರಾಜ್ಯ ಸರ್ಕಾರದ  41 ಇಲಾಖೆಗಳಲ್ಲಿ 2025ರ ಫೆ.28ರ ಅಂತ್ಯಕ್ಕೆ  69,894 ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಡತಗಳ ವಿಲೇವಾರಿಯಲ್ಲಿ 41 ಇಲಾಖೆಗಳಲ್ಲಿ ಶೇ. 41ರಷ್ಟು ಮಾತ್ರ ಪ್ರಗತಿ ಸಾಧಿಸಿತ್ತು.

 

69,894 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ, ಡಿಸಿಎಂ ಇಲಾಖೆ ಸೇರಿ 41 ಇಲಾಖೆಗಳಲ್ಲಿ ಶೇ.41ರಷ್ಟು ಮಾತ್ರ ಪ್ರಗತಿ

 

ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳೂ ಸಭೆ ನಡೆಯುತ್ತಿದ್ದರೂ ಸಹ ಕಡತಗಳ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಿಲ್ಲ.  ನಾಗರೀಕರಿಗೆ ಸಮಸ್ಯೆಯಾಗದಂತೆ ಕಡತಗಳವಿಲೇವಾರಿಯನ್ನು ಕಾಲಮಿತಿಯೊಳಗೇ ಪೂರ್ಣಗೊಳಿಸಬೇಕು ಮತ್ತು ಈ ನಿಟ್ಟಿನಲ್ಲಿ ಅಧಿಕಾರಿವರ್ಗವು ಪ್ರಯತ್ನಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರವು ಪದೇ ಪದೇ ನೀಡುತ್ತಿರುವ ಸೂಚನೆಯನ್ನೂ ಅಧಿಕಾರಿ ವರ್ಗವು ಪಾಲಿಸಿರಲಿಲ್ಲ.

ಮುಖ್ಯಮಂತ್ರಿ ಅವರ ಅನುಮೋದನೆಗೆ ಸ್ವೀಕೃತವಾಗಿರುವ, ಅನುಮೋದನೆ ನೀಡಿರುವ, ಅನುಮೋದನೆಗೆ ಬಾಕಿ ಇರುವುದಕ್ಕೆ ಸಂಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿರಲಿಲ್ಲ.

120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?

ಕಚೇರಿಗಳಲ್ಲಿ ಶೇ.47ರಷ್ಟು ಮಂದಿ ಸಿಬ್ಬಂದಿ ಕೆಲಸವನ್ನೇ ಮಾಡುತ್ತಿರಲಿಲ್ಲ. ಹೀಗಾಗಿ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ ಎಂದು ಹಿಂದಿನ ಕೆಡಿಪಿ ಸಭೆಯಲ್ಲಿಯೇ ಹೇಳಲಾಗಿತ್ತು.

 

ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ

 

ವಸತಿ ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದ ಕಡತವು, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರ ಬಳಿ 11 ತಿಂಗಳಿನಿಂದಲೂ ವಿಲೇವಾರಿ ಆಗದೇ ಬಾಕಿ ಇತ್ತು.

 

ಜಮೀರ್ ವಿರುದ್ಧ ಲೋಕಾಯುಕ್ತ ತನಿಖೆ; ಸಿಎಂ ಎಸಿಎಸ್‌ ಬಳಿ 11 ತಿಂಗಳಿನಿಂದಲೂ ಧೂಳಿಡಿದ ಕಡತ

8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿ ಆಗದೇ ತ್ರಿಶಂಕು ಸ್ಥಿತಿ ಬಂದೊದಗಿತ್ತು.

8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಡತಗಳ ವಿಲೇವಾರಿಯಲ್ಲಿ ಭಾರೀ ವಿಳಂಬ ಕಂಡುಬಂದಿತ್ತು.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

 

ದಿ ಫೈಲ್‌ ಈ ಕುರಿತಾಗಿ ವರದಿ ಪ್ರಕಟಿಸಿದ ನಂತರ ಕಡತಗಳ ವಿಲೇವಾರಿಗೆ ಅಂದಿನ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದರು.

 

 

‘ದಿ ಫೈಲ್‌’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ

 

 

ಕಡತಗಳ ವಿಲೇವಾರಿಯಲ್ಲಿ  ರಾಜಕೀಯ ಹಸ್ತಕ್ಷೇಪ ಮತ್ತು ಲಂಚದ ಆರೋಪವೂ ಕೇಳಿ ಬಂದಿತ್ತು.

 

ರಾಜಕೀಯ ಹಸ್ತಕ್ಷೇಪ, ಲಂಚ; ಸಚಿವಾಲಯ, ಇಲಾಖೆಗಳಲ್ಲಿ ವಿಲೇವಾರಿಯಾಗಿಲ್ಲ 1.48 ಲಕ್ಷ ಕಡತಗಳು

ಕಡತಗಳ ವಿಲೇವಾರಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿಯೇ ನಿರಂತರವಾಗಿ ಸಭೆ ನಡೆಯುತ್ತಿದ್ದರೂ ಸಹ ಇಷ್ಟೊಂದು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

Hot this week

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...
Please Scan to make Your Contribution

Topics

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...

Related Articles

Popular Categories

error: Content is protected !!