ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ

ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ದಿನದಿಂದ 6 ತಿಂಗಳವರೆಗೆ ಮಾಧ್ಯಮಗಳ ಜಾಹೀರಾತುಗಳಿಗೆ ಒಟ್ಟು 26.84 ಕೋಟಿ ರು. ವೆಚ್ಚ ಮಾಡಿದೆ. ಸರ್ಕಾರದ 6 ತಿಂಗಳು ಸಾಧನೆ ಕುರಿತು 2022ರ ಜನವರಿ 28ರಿಂದ 2022ರ ಜನವರಿ 31ರವರೆಗೆ ನೀಡಿರುವ ಪತ್ರಿಕಾ ಜಾಹೀರಾತಿಗೆ 2,13,63,253.00 ರು. ವೆಚ್ಚ ಮಾಡಲಾಗಿದೆ.

 

ಮಾಧ್ಯಮಗಳ ಜಾಹೀರಾತುಗಳಿಗೆ ಭರಿಸಿರುವ ವೆಚ್ಚದ ಕುರಿತು ವಿಧಾನಸಭೆ ಸದಸ್ಯ ಕೆ ಹರೀಶ್‌ಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಒದಗಿಸಿದ್ದಾರೆ.

 

ಜಾಹೀರಾತು ವೆಚ್ಚದ ಪಟ್ಟಿ ಇಲ್ಲಿದೆ

 

ಪೊಲೀಸ್‌ ಇಲಾಖೆಯ 2 ವರ್ಷಗಳ ಸಾಧನೆ ಕುರಿತು ಜಾಹೀರಾತು (2021ರ ಜುಲೈ 26)- 52,54,750 ರು.

 

ರೈತರ, ಬಡವರ, ದೀನದಲಿತರ ಮಹಿಳೆಯರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳ ಕುರಿತು (2021 ಆಗಸ್ಟ್‌ 13) ಜಾಹೀರಾತು – 61,41, 344.00 ರು.

 

70ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕುರಿತು ಪತ್ರಿಕಾ ಜಾಹೀರಾತು – (15, ಆಗಸ್ಟ್‌ 2021) 1,40,93,289

 

ಅಮೃತ ಮಹೋತ್ಸವ ಯೋಜನೆಗಳ ಕುರಿತು ಪತ್ರಿಕಾ ಜಾಹೀರಾತು (16-08-2021)- 61,68,167 ರು.

 

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಚಾಲನೆ ಕುರಿತು ಪತ್ರಿಕಾ ಜಾಹೀರಾತು – (24-08-2021) – 1,07,25,565 ರು.

 

ದಾವಣಗೆರೆ ಜಿಲ್ಲೆಯಲ್ಲಿ ನಡೆದ ಗಾಂಧಿ ಭವನ ಉದ್ಘಾಟನೆ ಕಾರ್ಯಕ್ರಮದ ಜಾಹೀರಾತು (2021 ಸೆ.1)- 36,21, 215 ರು.

 

ಸೇವಾ ಸಮರ್ಪಣಾ ದಿನ -29 ಲಕ್ಷ ಕೋವಿಡ್‌ ಲಸಿಕೆ ನೀಡಿಕೆಯ ಅಮೋಘ ದಾಖಲೆ ಕುರಿತು ಪತ್ರಿಕಾ ಜಾಹೀರಾತು (2021 ಸೆ.19)- 59,87,778 ರು.

 

ಗಾಂಧಿ ಜಯಂತಿ ಆಚರಣೆ ಕುರಿತು ಪತ್ರಿಕಾ ಜಾಹೀರಾತು (2021 ಅಕ್ಟೋಬರ್‌ 2)- 1,41,36,610.00

 

ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಜಾಹೀರಾತು 2021ರ (ಅಕ್ಟೋಬರ್ 7) 42,30,312 ರು.

 

ಶ್ರೀರಂಗಪಟ್ಟಣ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಜಾಹೀರಾತು- (ಸೆ.9, 2021) 10,26,226 ರು.

 

ಮೈಸೂರು ದಸರಾ ಕುರಿತು 20 ಸೆಕೆಂಡ್‌ ಅವಧಿಯ ಟಿ ವಿ ಜಾಹೀರಾತು- (2021ರ ಅಕ್ಟೋಬರ್‌ 14ರಿಂದ 15ರವರೆಗೆ) 24, 02,480 ರು.

 

ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಮತ್ತು ವಿಜಯದಶಮಿ (ಜಾಹೀರಾತು- 2021ರ ಅಕ್ಟೋಬರ್‌ 14) – 21,12,518.00 ರು.

 

ಪೊಲೀಸ್‌ ಹುತಾತ್ಮರ ದಿನಾಚರಣೆ- (2021 ಅಕ್ಟೋಬರ್‌ 21)- 5,70,855 .00

 

ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ಕುರಿತು 20 ಸೆಕೆಂಡ್‌ ಅವಧಿಯ ಟಿ ವಿ ಜಾಹೀರಾತು- 20,42,108.00 ರು.

 

66ನೇ ಕನ್ನಡ ರಾಜ್ಯೋತ್ಸವ ಆಚರಣೆ ಪತ್ರಿಕಾ ಜಾಹೀರಾತು- (2021 ನವೆಂಬರ್‌ 1)- 1,42,01,447.00 ರು

 

ಸರ್ಕಾರದ ಪ್ರಮುಖ ಯೋಜನೆಗಳಾದ ಜನಸೇವಕ ಮತ್ತು ಜನಸ್ಪಂದನ ಯೋಜನೆಗಳ ಚಾಲನೆ ಕುರಿತು (2021 ನವೆಂಬರ್‌ 1) ನೀಡಿದ್ದ ಪತ್ರಿಕಾ ಜಾಹೀರಾತು- 26,66,284.00 ರು.

 

ಸರ್ಕಾರದ 100 ದಿವಸ ಗಳ ಸಾಧನೆ ಕುರಿತು ಪತ್ರಿಕಾ ಜಾಹೀರಾತು (2021ರ ನವೆಂಬರ್‌ 1) 2,88,76,761.00

 

ಗೃಹ ರಕ್ಷಕ ಮತ್ತು ಪೌರರಕ್ಷಣಾ ದಿನಾಚರಣೆ (2021ರ ಡಿಸೆಂಬರ್‌ 6) 1,37,550 ರು.

 

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ– (ಡಿಸೆಂಬರ್‌ 7)- 1,63,965 ರು.

 

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರವು ವಿವಿಧ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕುರಿತು ಪತ್ರಿಕಾ ಜಾಹೀರಾತು (2021ರ ಡಿಸೆಂಬರ್‌ 25)- 1,65,01,564 ರು.

 

ಕೋವಿಡ್‌ 19ರ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ವಿತರಣೆ ಜಾಹೀರಾತು (2021 ಡಿಸೆಂಬರ್‌ 27)- 48,03,040.00 ರು.

 

ಬೆಳೆಹಾನಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರದ ಜತೆಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು (2021ರ ಡಿಸೆಂಬರ್‌ 28) – 65,33,648.00 ರು.

 

15ರಿಂದ 18 ವರ್ಷದ ಕಮಕ್ಕಳಿಗೆ ಕೋವಿಡ್‌ 19 ಲಸಿಕೆ ವಿತರಣೆ ಕುರಿತು (2022ರ ಜನವರಿ 3)ನೀಡಿದ್ದ ಜಾಹೀರಾತು- 6,68,340.00 ರು.

 

ರಾಮನಗರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಕ್ಕೆ (2022ರ ಜನವರಿ 3) ನೀಡಿದ್ದ ಪತ್ರಿಕಾ ಜಾಹೀರಾತು- 14,07,117.00 ರು.

 

ಕಲ್ಬುರ್ಗಿ ಜಿಲ್ಲೆಯ ಅಳಂದದಲ್ಲಿ ನೂತನ ಆಡಳಿತ ಭವನ ಉದ್ಘಾಟನೆ ( 2022ರ ಜನವರಿ 4) 3,15,127 ರು.

 

ನಗರಾಭಿವೃದ್ದಿ ಮತ್ತು ಸ್ಥಳೀಯ ಸಂಸ್ಥೆ ಅಭಿವೃದ್ದಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು (2022ರ ಜನವರಿ 7)- 65,16,518.00 ರು.

 

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕಾ ವಿತರಣೆ ಕುರಿತು ( 2022ರ ಜನವರಿ 10)- 6,42,091.00 ರು.

 

ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ರಾಜ್ಯದ ಜನರಿಗೆ ಹಲವಾರು ಯೋಜನೆ ಘೋಷಿಸುವ ಕುರಿತು (2022ರ ಜನವರಿ 15ರಿಂದ 17) ನೀಡಿದ್ದ ಜಾಹೀರಾತು – 2,80,97,667 ರು.

 

ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿಇ ದಾಸೋಹ ದಿನ ಕುರಿತು ಪತ್ರಿಕಾ ಜಾಹೀರಾತು- (2022ರ ಜನವರಿ 21- 26) 61, 929.00 ರು.

 

ಸುಭಾಷ್‌ ಚಂದ್ರ ಬೋಸ್‌ 125 ಜನ್ಮ ದಿನಾಚರಣೆ ಅಂಗವಾಗಿ ದಿವಸ್‌ ಆಚರಣೆ ಕುರಿತು ಪತ್ರಿಕಾ ಜಾಹೀರಾತು (2022ರ ಜನವರಿ 23- ) –28, 24,450. 000 ರು.

 

ಸುಭಾಷ್‌ ಚಂದ್ರ ಬೋಸ್‌ ಇವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಯುವ ಸಬಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕುರಿತು- (22ರ ಜನವರಿ 24) 55,40,114.00 ರು.

 

ಕರೋನಾ ಮೂರನೇ ಅಲೆ ಹಾಗೂ ಸರ್ಕಾರದ ಗ್ರಾಮ್‌ ಒನ್‌ ಕಾರ್ಯಕ್ರಮ ಕುರಿತು ಮುಖ್ಯಮಂತ್ರಿಗಳ ಸಂದೇಶದ 45 ಮತತು 60 ಸೆಕೆಂಡ್‌ನ ಅವಧಿಯ ಟಿ ವಿ ಜಾಹೀರಾತು- (2022ರ ಜನವರಿ 25ರಿಂದ 28 – 1,54,95,996.00 ರು.

 

73ನೇ ಗಣರಾಜ್ಯೋತ್ಸವ ಆಚರಣೆ -(2022ರ ಜನವರಿ 26)- 2,85,56,070 ರು.

 

ಗ್ರಾಮ ಒನ್‌ ಯೋಜನೆ ಕುರಿತು ಪತ್ರಿಕಾ ಜಾಹೀರಾತು-( 2022ರ ಜನವರಿ 28ರಿಂದ 31) 19, 17,244.00 ರು.

 

ಸರ್ಕಾರದ 6 ತಿಂಗಳು ಸಾಧನೆ ಕುರಿತು ಪತ್ರಿಕಾ ಜಾಹೀರಾತು- (2022ರ ಜನವರಿ 28ರಿಂದ 2022ರ ಜನವರಿ 31) – 2,13,63,253.00 ರು.

 

ಸರ್ಕಾರದ 6 ತಿಂಗಳ ಸಾಧನೆ ಕುರಿತು ಜಾಹೀರಾತು ನೀಡಿದ ವೆಚ್ಚ

 

ಬಿ ಎಸ್‌ ಯಡಿಯೂರಪ್ಪ ಅವರು ಮೊದಲ ಮತ್ತು ಎರಡನೇ ವರ್ಷ ಪೂರೈಸಿದ್ದನ್ನು ವಿಧಾನಸೌಧದ ನೆಲಮಹಡಿಯಲ್ಲಿರುವ ಬ್ಯಾಂಕ್ವೆಂಟ್‌ ಹಾಲ್‌ನಲ್ಲಿ ನಡೆದಿದ್ದ ಸಂಭ್ರಮಾಚರಣೆಯ ಸಮಾರಂಭ, ಪುಸ್ತಕ ಮುದ್ರಣ, ಸಾಕ್ಷ್ಯ ಚಿತ್ರ ನಿರ್ಮಾಣ, ಪತ್ರಿಕೆ ಮತ್ತು ಟಿ ವಿ ಚಾನಲ್‌, ರೇಡಿಯೋಗಳಲ್ಲಿ ನೀಡಿದ್ದ ಜಾಹೀರಾತಿಗೆ ಒಟ್ಟು 7.96 ಕೋಟಿ ರು. ಖರ್ಚಾಗಿತ್ತು.

 

ಅದೇ ರೀತಿ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ್ದ (2020-21) ಸಂದರ್ಭದಲ್ಲಿ ಹೊರತಂದಿದ್ದ ಕನ್ನಡ ಪುಸ್ತಕದ ಮುದ್ರಣಕ್ಕೆ 89,000 ರು. ವೆಚ್ಚವಾಗಿದ್ದರೆ ಎರಡನೇ ವರ್ಷ ಪೂರೈಸಿದ್ದ ಸಂದರ್ಭದಲ್ಲಿ (2021-22) 24,76,800 ರು. ಖರ್ಚಾಗಿದೆ. ಇನ್ನು, ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆಂದು 7,87,500 ರು. ವೆಚ್ಚವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲು ಯಾವುದೇ ವೆಚ್ಚವನ್ನು ಮಾಡಿಲ್ಲ ಎಂದು ಉತ್ತರ ಒದಗಿಸಿದ್ದಾರೆ.

 

1 ವರ್ಷದ ಸಾಧನೆ ಬಿಂಬಿಸುವ ಜಾಹೀರಾತಿನ ವೆಚ್ಚ

 

ಸರ್ಕಾರದ ಒಂದು ವರ್ಷದ ಸಾಧನೆ (2020ರ ಜುಲೈ 27) ಕುರಿತು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ 1,85,80,451 ರು. ರಾಜ್ಯಮಟ್ಟದ ಕನ್ನಡ, ಆಂಗ್ಲ ದಿನಪತ್ರಿಕೆಗಳಿಗೆ ನೀಡಿದ್ದ ಜಾಹೀರಾತುಗಳಿಗೆ 61,93,484 ರು., ಖಾಸಗಿ ಎಫ್‌ಎಂ ರೇಡಿಯೋ ವಾಹಿನಿಗಳಲ್ಲಿ ಪ್ರಸಾರವಾದ ಜಾಹೀರಾತುಗಳಿಗೆ (60 ಸೆಕೆಂಡ್‌ ಅವಧಿಯ ಜಾಹೀರಾತು 2020ರ ಜುಲೈ 25ರಿಂದ 27ರವರೆಗೆ ಪ್ರಸಾರ) 8,07,332 ರು. , ಟಿ ವಿ ಚಾನಲ್‌ಗಳಲ್ಲಿ ಪ್ರಸಾರವಾಗಿದ್ದ ಜಾಹೀರಾತುಗಳಿಗೆ 62,97,660 ರು.ಗಳನ್ನು ಪಾವತಿಸಲಾಗಿತ್ತು.

 

ಸರ್ಕಾರದ ಎರಡು ವರ್ಷ ಸಾಧನೆ ಕುರಿತು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ 2,05,95,312 ರು., ರಾಜ್ಯಮಟ್ಟದ ಕನ್ನಡ, ಆಂಗ್ಲ ದಿನಪತ್ರಿಕೆಗಳಿಗೆ 68,65,104 ರು., ಎರಡು ವರ್ಷಗಳ ಅವಧಿಯಲ್ಲಿ ಇಲಾಖಾವಾರು, ಜಿಲ್ಲಾವಾರು ಸಾಧಿಸಿರುವ ಯೋಜನೆ, ಕಾರ್ಯಕ್ರಮಗಳ ಕುರಿತು ಟಿ ವಿ ಚಾನಲ್‌ಗಳಲ್ಲಿ ಪ್ರಸಾರವಾಗಿದ್ದ ಜಾಹೀರಾತುಗಳಿಗೆ 68,83,327 ರು., ರೇಡಿಯೋ ಸಿಟಿ, ಬಿಗ್‌ ಎಫ್‌ಎಂ, ರೆಡ್‌ ಎಫ್‌ಎಂಗಳಿಗೆ 91,920 ರು. ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts