ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ. ಹೀಗಾಗಿ ಇಷ್ಟೂ ಪಂಚಾಯ್ತಿಗಳಲ್ಲಿ ಆರ್ಥಿಕ ದುಷ್ಪರಿಣಾಮಗಳು ಬೀರಲಿವೆ.
2,916 ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಎಂದು ಪತ್ತೆಯಾಗಿದ್ದರ ಬೆನ್ನಲ್ಲೇ ಇದೀಗ 1,363 ಪಂಚಾಯ್ತಿಗಳಲ್ಲಿ ನಗದು ಪುಸ್ತಕವನ್ನೂ ನಿರ್ವಹಿಸಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಮಾರ್ಚ್ 31ರ ಅಂತ್ಯಕ್ಕೆ ಲೆಕ್ಕ ಪರಿಶೋಧನೆ ನಡೆಸಿದ್ದ ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಪಂಚಾಯ್ತಿಗಳ ಹಣಕಾಸಿನ ದುರಾಡಳಿತದ ವಿವಿಧ ಮಗ್ಗುಲುಗಳನ್ನು ಅನಾವರಣಗೊಳಿಸಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಗದು ಪುಸ್ತಕವು ಆಯಾ ಕಚೇರಿಯ ಹಣಕಾಸಿನ ವ್ಯವಹಾರಗಳ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಪರವಾಗಿ ಮೊತ್ತಗಳನ್ನು ಸ್ವೀಕರಿಸುವ ಮತ್ತು ವೆಚ್ಚವನ್ನು ಭರಿಸುವ ಪ್ರತಿಯೊಬ್ಬ ಅಧಿಕಾರಿಯು ಕಡ್ಡಾಯವಾಗಿ ನಗದು ಪುಸ್ತಕವನ್ನು ನಿರ್ವಹಿಸಬೇಕು. ಪಂಚಾಯ್ತಿಗಳ (ಆಯವ್ಯಯ-ಲೆಕ್ಕಪತ್ರ) ನಿಯಮಗಳು 2006ರ ನಿಯಮ 104ರ ಅನ್ವಯ ನಮೂನೆ 49ರಲ್ಲಿ ನಗದು ಪುಸ್ತಕವನ್ನು ನಿರ್ವಹಿಸಿವೆ. ಆದರೆ ಏಕ ನಮೂದು ಪದ್ಧತಿಯಲ್ಲಿ ನಗದು ಪುಸ್ತಕ ನಿರ್ವಹಿಸಿದೆ.
ನಿಯಮಾನುಸಾರ ಆರ್ಥಿಕ ವ್ಯವಹಾರಗಳ ಆಧಾರದ ಮೇಲೆ 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕ ನಿರ್ವಹಿಸುತ್ತಿಲ್ಲ. ಇದು ಸಂಭವನೀಯ ಆರ್ಥಿಕ ದುಷ್ಪರಿಣಾಮಗಳಿಗೆ ದಾರಿ ಮಾಡಬಹುದಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಆರ್ಥಿಕ ವ್ಯವಹಾರಗಳ ಮೇಲೆ ಆಧಾರದ ಮೇಲೆ ನಗದು ಪುಸ್ತಕ ನಿರ್ವಹಣೆ ಮಾಡದೇ ಬ್ಯಾಂಕ್ ತಃಖ್ತೆ ಆಧಾರದ ಮೇಲೆ ನಿರ್ವಹಿಸುವುದರಿಂದ ಗ್ರಾಮ ಪಂಚಾಯ್ತಿಯ ಆರ್ಥಿಕ ವ್ಯವಹಾರಗಳ ವಾಸ್ತವಿಕ ಚಿತ್ರಣವೂ ಲಭ್ಯವಾಗುವುದಿಲ್ಲ. ಅಲ್ಲದೇ ಗ್ರಾಮ ಪಂಚಾಯ್ತಿಯಿಂದ ಪಾವತಿಸಲು ಬಾಕಿ ಇರುವ ವೆಚ್ಚಗಳ ವಿವರಗಳನ್ನು ಮತ್ತು ದ್ವಿಪಾವತಿಗಳಾಗಿರುವ ಬಗ್ಗೆ ಕಂಡುಹಿಡಿಯಲು ಕಷ್ಟಸಾಧ್ಯವಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಆದಾಯ ಮತ್ತು ವೆಚ್ಚಗಳ ಸ್ವೀಕೃತಿ ಮತ್ತು ಪಾವತಿ ಲೆಕ್ಕಗಳು, ನಗದು ಹರಿವು ಇವುಗಳ ಲೆಕ್ಕಗಳನ್ನು ಬ್ಯಾಂಕ್ ಲೆಕ್ಕಗಳೊಂದಿಗೆ ಸಮನ್ವಯ ಮಾಡಿಲ್ಲ. ಹೀಗಾಗಿ ಹಣಕಾಸಿನ ವ್ಯವಹಾರಗಳ ಮೇಲೆ ಆಂತರಿಕ ನಿಯಂತ್ರಣ ಸಮರ್ಪಕವಾಗಿರುವುದಿಲ್ಲ. ವಾರ್ಷಿಕ ಲೆಕ್ಕಗಳು ಸಹ ನೈಜ ಅಂಕಿ ಅಂಶಗಳನ್ನು ಒಳಗೊಂಡಿರುವುದಿಲ್ಲ ಎಂದೂ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
2023-23ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿನ 17 ಪಂಚಾಯ್ತಿಗಳಲ್ಲಿ ಆರ್ಥಿಕ ವ್ಯವಹಾರಗಳ ಆಧಾರದ ಮೇಲೆ ನಗದು ಪುಸ್ತಕ ಮತ್ತು ಬ್ಯಾಂಕ್ ತಃಖ್ಯೆಗಳನ್ನು ಲೆಕ್ಕವನ್ನು ಮರು ಸಮನ್ವಯಗೊಳಿಸಿತ್ತು.
ಅದೇ ರೀತಿಯ ಬೆಂಗಳುರು ನಗರ ಜಿಲ್ಲೆಯಲ್ಲಿ 187, ಬೆಳಗಾವಿಯಲ್ಲಿ 500, ಬಳ್ಳಾರಿಯಲ್ಲಿ 100, ಚಾಮರಾಜನಗರದಲ್ಲಿ 26, ಚಿಕ್ಕಮಗಳೂರಿನಲ್ಲಿ 95, ಚಿತ್ರದುರ್ಗದಲ್ಲಿ 40, ದಕ್ಷಿಣ ಕನ್ನಡದಲ್ಲಿ 2223, ದಾವಣಗೆರೆಯಲ್ಲಿ 61, ಧಾರವಾಡದಲ್ಲಿ 145, ಗದಗ್‌ನಲ್ಲಿ 118, ಹಾಸನದಲ್ಲಿ 264, ಹಾವೇರಿಯಲ್ಲಿ 223, ಕಲ್ಬುರ್ಗಿಯಲ್ಲಿ 261, ಕೊಡಗಿನಲ್ಲಿ 103, ಕೋಲಾರದಲ್ಲಿ 154, ಕೊಪ್ಪಳದಲ್ಲಿ 154, ಮಂಡ್ಯದಲ್ಲಿ 233, ಮೈಸೂರಿನಲ್ಲಿ 256, ಶಿವಮೊಗ್ಗದಲ್ಲಿ 263, ತುಮಕೂರಿನಲ್ಲಿ 330, ಉಡುಪಿಯಲ್ಲಿ 155, ಉತ್ತರ ಕನ್ನಡದಲ್ಲಿ 229, ವಿಜಯಪುರದಲ್ಲಿ 137, ವಿಜಯನಗರದಲ್ಲಿ 190 ಪಂಚಾಯ್ತಿಗಳಲ್ಲಿ ಆರ್ಥಿಕ ವ್ಯವಹಾರಗಳ ಆಧಾರದ ಮೇಲೆ ನಗದು ಪುಸ್ತಕ ಮತ್ತು ಬ್ಯಾಂಕ್ ತಃಖ್ತೆಗಳನ್ನು ಲೆಕ್ಕ ಮರು ಸಮನ್ವಯಗೊಳಿಸಿತ್ತು.
ಅದೇ ರೀತಿ 2022-23ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಕೈಗೊಂಡಿದ್ದ ಪಂಚಾಯ್ತಿಗಳ ಪೈಕಿ 2,369 ಪಂಚಾಯ್ತಿಗಳು ಜೋಡುದಾಖಲೆ ಲೆಕ್ಕ ಪದ್ಧತಿಯನ್ನು ನಿರ್ವಹಿಸಿರಲಿಲ್ಲ. ಮತ್ತು ನಿಗದಿತ ನಮೂನೆಯಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸಿರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ಕಂಡು ಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಅಭಿವೃದ್ಧಿಪಡಿಸಿದ್ದ ಪಂಚತಂತ್ರ ತಂತ್ರಾಂಶದಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸಿದೆ. ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳನಿಯಮ 2006ರ ನಿಯಮ 108ರ ಪ್ರಕಾರ ಲೆಕ್ಕ ಪತ್ರಗಳನ್ನು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಚೇರಿಯ ಪರಿಶೀಲನೆಗಾಗಿ ಕಳಿಸಬೇಕು.
ಪಂಚತಂತ್ರ ತಂತ್ರಾಂಶವನ್ನು ದ್ವಿನಮೂದು ಲೆಕ್ಕ ಪದ್ಧತಿಯಲ್ಲಿ ನಿರ್ವಹಿಸಿದ್ದರೂ ಸಹ ಲೆಕ್ಕ ಪತ್ರಗಳನ್ನು ಪರಿಶೀಲನೆಗೆ ಕಳಿಸುತ್ತಿರಲಿಲ್ಲ ಎಂಬ ಸಂಗತಿಯನ್ನು ಲೆಕ್ಕ ಪರಿಶೋಧಕರು ತನಿಖೆ ವೇಳೆಯಲ್ಲಿ ಬಹಿರಂಗಪಡಿಸಿರುವುದು ತಿಳಿದು ಬಂದಿದೆ.
ಜಮಾಬಂದಿ ಅಧಿಕಾರಿ ಮತ್ತು ಅವರ ಸಹಾಯಕ ಅಧಿಕಾರಿಗಳ ತಂಡವು ನಿರಂತರವಾಗಿ ಜಮಾ ಬಂದಿ ನಡೆಸಬೇಕು. ಆದರೆ 3,687 ಪಂಚಾಯ್ತಿಗಳಲ್ಲಿ ಜಮಾಬಂದಿಯೂ ನಡೆಸಿರಲಿಲ್ಲ ಎಂದು ಲೆಕ್ಕಪರಿಶೋಧಕರು ಬಯಲು ಮಾಡಿದ್ದಾರೆ.
ಜಮಾಬಂದಿ ನಡೆಸಿ ವರದಿ ನೀಡಿದ್ದಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾದ ಹಣ ದುರುಪಯೋಗದ ಮೊತ್ತಗಳ ವಸೂಲಿ, ಮಾಸಿಕ, ವಾರ್ಷಿಕ ಲೆಕ್ಕಪತ್ರಗಳ ಸಮರ್ಪಕ ನಿರ್ವಹಣೆ ಹಾಗೂ ಲೆಕ್ಕ ಪರಿಶೋಧನೆ ವರದಿಗಳಿಗೆ ಅನುಸರಣಾ ವರದಿಗಳನ್ನು ಸಲ್ಲಿಸಬೇಕು. ಈ ಎಲ್ಲಾ ಕ್ರಮಗಳನ್ನು ಅನುಸರಿಸಿದ್ದಲ್ಲಿ ಮಾತ್ರ ಪಂಚಾಯ್ತಿಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆ ತರಲು ಸಾಧ್ಯ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದ ಗೊತ್ತಾಗಿದೆ.
2,916 ಪಂಚಾಯ್ತಿಗಳಲ್ಲಿ ವಾರ್ಷಿಕ ಆಯವ್ಯಯವೇ ಇಲ್ಲ; ಕೋಟ್ಯಂತರ ರುಪಾಯಿ ನಿಯಮಬಾಹಿರ ವೆಚ್ಚ
2021-22ರಲ್ಲಿಯೂ 147 ಪಂಚಾಯ್ತಿಗಳು ದಾಖಲೆ ನಿರ್ವಹಣೆಯಲ್ಲಿ ಮತ್ತು ಲೆಕ್ಕ ಪರಿಶೋಧನೆಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದವು. ಅದೇ ರೀತಿ ಲೆಕ್ಕಪರಿಶೋಧನೆಗೆ 251.99 ಕೋಟಿ ರು.ಗಳ ಜಮೆ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರಲಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿತ್ತು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್‍ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.