ಕೋವಿಡ್‌ ಲಸಿಕೆ ಖರೀದಿ ಹಿಂದಿನ ವ್ಯವಹಾರಗಳ ಸುತ್ತ ‘ದಿ ಫೈಲ್‌’ನ 26 ವರದಿಗಳು

ಬೆಂಗಳೂರು; ಕೋವಿಡ್‌ ಲಸಿಕೆ ತೆಗೆದುಕೊಳ್ಳುವಂತೆ ನಾನು ಯಾವತ್ತೂ ಯಾವುತ್ತು ಯಾವುದೇ ಪ್ರಜೆಯನ್ನು ಒತ್ತಾಯಿಸಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸ್ಷಷ್ಟಪಡಿಸಿದೆ. ಕೊರೋನ ವೈರಸ್‌ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ಸಂಭವಿಸುವ ಸಾವುಗಳಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಹೇಳುವುದು ಕಾನೂನಾತ್ಮಕವಾಗಿ ಕಾರ್ಯಸಾಧುವಲ್ಲ. ಹಾಗೂ ಇಂತಹ ಸಾವುಗಳಿಗೆ ನಾವು ಹೊಣೆಯಲ್ಲ. ಕೊರೊನಾ ಲಸಿಕೆ ಕಡ್ಡಾಯವಲ್ಲ ಅದು ಐಚ್ಛಿಕವಾಗಿತ್ತು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.

 

ಕೋವಿಡ್‌ ಲಸಿಕೆ, ಅದರ ಹಿಂದಿನ ಆರ್ಥಿಕ ಲೆಕ್ಕಾಚಾರಗಳು, ಲಸಿಕೆ ಹಂಚಿಕೆಯಲ್ಲಿನ ತಾರತಮ್ಯ, ಲಸಿಕೆ ದಾಸ್ತಾನು, ಶೇಖರಣೆ, ಲಸಿಕೆ ದರ, ಲಸಿಕೆ ಪಡೆಯದಿದ್ದರೆ ಸಾರ್ವಜನಿಕ ಸೌಲಭ್ಯಗಳ ನಿರಾಕರಣೆ ಹೀಗೆ ಕೋವಿಡ್‌ ಲಸಿಕೆ ಸುತ್ತ ‘ದಿ ಫೈಲ್‌’ 2021ರಿಂದ 2022ರವರೆಗೆ ಒಟ್ಟು 26 ವರದಿಗಳನ್ನು ದಾಖಲೆ, ಅಂಕಿ ಅಂಶಗಳ ಸಹಿತ ಪ್ರಕಟಿಸಿದೆ.

 

ಲಸಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ನೀಡಿರುವ ಸ್ಪಷ್ಟನೆ ಮತ್ತು ಪ್ರಮಾಣಪತ್ರವು ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ‘ದಿ ಫೈಲ್‌’ ಈ ಸಂಬಂಧ ಪ್ರಕಟಿಸಿರುವ ಎಲ್ಲಾ ವರದಿಗಳನ್ನು ಕ್ರೋಢೀಕರಿಸಿ ಇಲ್ಲಿ ಕೊಡಲಾಗಿದೆ.

 

ಕೋವಿಡ್‌ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ಲಸಿಕೆಯನ್ನು ವ್ಯರ್ಥ ಮಾಡುತ್ತಿರುವ ಪ್ರಮಾಣವೂ ಸದ್ದಿಲ್ಲದೇ ಹೆಚ್ಚಳವಾಗುತ್ತಿತ್ತು. ಮಾರ್ಚ್‌ 17ರಂದು ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ ರಾಷ್ಟ್ರೀಯ ಲಸಿಕೆ ಪ್ರಮಾಣವು ಶೇ.6.5ರಷ್ಟಿತ್ತು. ಕರ್ನಾಟಕ, ತೆಲಂಗಾಣ, ಆಂಧ್ರ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಲಸಿಕೆ ವ್ಯರ್ಥ ಸರಾಸರಿ ಪ್ರಮಾಣವು ರಾಷ್ಟ್ರೀಯ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು.  ಈ ಸಂಬಂಧ ಕೋವಿಡ್‌ ಲಸಿಕೆ; ‘ವ್ಯರ್ಥ’ದ ಪ್ರಮಾಣ ಹೆಚ್ಚಳವಾದರೂ ಕೈಕಟ್ಟಿ ಕುಳಿತಿದೆಯೇ ಸರ್ಕಾರ? ಎಂಬ ಶೀರ್ಷಿಕೆಯಡಿಯಲ್ಲಿ ಏಪ್ರಿಲ್‌ 14, 2021ರಂದು ವರದಿ ಪ್ರಕಟಿಸಿತ್ತು.

ಕೋವಿಡ್‌ ಲಸಿಕೆ; ‘ವ್ಯರ್ಥ’ದ ಪ್ರಮಾಣ ಹೆಚ್ಚಳವಾದರೂ ಕೈಕಟ್ಟಿ ಕುಳಿತಿದೆಯೇ ಸರ್ಕಾರ?

ಟಿಕಾ ಉತ್ಸವ ಮತ್ತು ಲಸಿಕೆ ಸ್ನೇಹ ಅಥವಾ ಲಸಿಕೆ ಮೈತ್ರಿಯಂತಹ ಅಭಿಯಾನ ನಡೆಸಿದ್ದರೂ ಲಸಿಕೆ ನೀಡುವ ವೇಗವು ಇನ್ನೂ ಸುಧಾರಣೆಯಾಗಿಲ್ಲ. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತು 3 ತಿಂಗಳಾಗಿದ್ದರೂ ದೇಶದಲ್ಲಿ ದಿನಕ್ಕೆ ಸರಾಸರಿ 3.58 ಮಿಲಿಯನ್‌ ಪ್ರಮಾಣ ತಲುಪಲು ಸಾಧ್ಯವಾಗಿತ್ತು. ಈ ಕುರಿತು ಕೋವಿಡ್‌; ಸ್ಪುಟ್ನಿಕ್‌ ಲಸಿಕೆ ಬಂದರೂ ಜುಲೈಗೆ 500 ಮಿಲಿಯನ್‌ ಡೋಸ್‌ ಗುರಿ ಮುಟ್ಟುವುದೇ? ಎಂದು ಏಪ್ರಿಲ್‌ 17, 2021ರಂದು ವರದಿ ಪ್ರಕಟಿಸಿತ್ತು.

 

ಕೋವಿಡ್‌; ಸ್ಪುಟ್ನಿಕ್‌ ಲಸಿಕೆ ಬಂದರೂ ಜುಲೈಗೆ 500 ಮಿಲಿಯನ್‌ ಡೋಸ್‌ ಗುರಿ ಮುಟ್ಟುವುದೇ?

ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳು ಏದುಸಿರು ಬಿಡುತ್ತಿವೆ. ಲಸಿಕೆ ವ್ಯರ್ಥವಾಗುತ್ತಿರುವುದು ಮತ್ತು ಹಲವೆಡೆ ಕೊರತೆ ಕಾಣಿಸಿಕೊಳ್ಳಲಾರಂಭಿಸಿದ್ದ ಮಧ್ಯೆಯೇ ಸರ್ಕಾರ ನಿಗದಿಪಡಿಸಿರುವ ಲಸಿಕೆಗಳ ಬೆಲೆಯೂ ಚರ್ಚೆಗೊಳಗಾಗಿತ್ತು.  ಈ ಕುರಿತು ಲಸಿಕೆಗಳ ಬೆಲೆಗಿಲ್ಲ ಮಿತಿ; ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರಿಸಲಿದೆಯೇ ಕೇಂದ್ರ ಸರ್ಕಾರ? ಎಂದು ಏಪ್ರಿಲ್‌ 21, 2021ರಂದು ವರದಿ ಪ್ರಕಟಿಸಿತ್ತು.

ಲಸಿಕೆಗಳ ಬೆಲೆಗಿಲ್ಲ ಮಿತಿ; ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರಿಸಲಿದೆಯೇ ಕೇಂದ್ರ?

 

ಕೋವಿಡ್‌ ಸೋಂಕು ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದರೂ ಲಸಿಕೆ ಉತ್ಪಾದನೆಗೆ ಅಗತ್ಯವಾದ ಬಂಡವಾಳವನ್ನು ಹೂಡಿಕೆ ಮಾಡದೆಯೇ ಲಸಿಕೆ ತಯಾರಿಕೆ ಕಂಪನಿಗಳಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಅವರು ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಪ್ರತಿಸ್ಪಂದಿಸುತ್ತಿದೆ ಎಂಬ ಭಾವನೆ ಹುಟ್ಟಿಸಿದರು,’ ಎಂದು ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಪ್ರತಿಪಾದಿಸಿದ್ದರು. ಈ ಕುರಿತು ಲಸಿಕೆ ತಯಾರಿಕೆ ಕಂಪನಿಗಳಲ್ಲಿ ಹೂಡಿಕೆ, ವಿವೇಕ ಕಳೆದುಕೊಂಡಿತೇ ಕೇಂದ್ರ ಎಂದು ಏಪ್ರಿಲ್‌ 22, 2021 ವರದಿ ಪ್ರಕಟಿಸಿತ್ತು.

ಲಸಿಕೆ ತಯಾರಿಕೆ ಕಂಪನಿಗಳಲ್ಲಿ ಹೂಡಿಕೆ; ವಿವೇಕ ಕಳೆದುಕೊಂಡಿತೇ ಕೇಂದ್ರ?

 

ಲಸಿಕೆಗಳ ಹಂಚಿಕೆ ಬಗ್ಗೆ ಹಲವು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಏಪ್ರಿಲ್‌ 14ರವರೆಗೆ ದೇಶದ ರಾಜ್ಯಗಳಿಗೆ ಕೊವಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ಹಂಚಿಕೆ ಮಾಡಿರುವ ಅಂಕಿ ಅಂಶಗಳು ಬಹಿರಂಗಗೊಂಡಿದ್ದವು. ಆರ್‌ಟಿಐ ಮೂಲಕ ಬಹಿರಂಗಗೊಂಡಿರುವ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಲಸಿಕೆ ಹಂಚಿಕೆಗೆ ಯಾವುದೇ ಮಾನದಂಡಗಳು ಅನುಸರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ಕುರಿತು ಲಸಿಕೆ;ಕರ್ನಾಟಕಕ್ಕೆ 75 ಲಕ್ಷ, ಗುಜರಾತ್‌ ಸೇರಿ 4 ರಾಜ್ಯಕ್ಕೆ ತಲಾ1ಕೋಟಿ ಶೀರ್ಷಿಕೆಯಲ್ಲಿ ಏಪ್ರಿಲ್‌ 24, 2021ರಂದು ವರದಿ ಪ್ರಕಟವಾಗಿತ್ತು.

ಲಸಿಕೆ;ಕರ್ನಾಟಕಕ್ಕೆ 75 ಲಕ್ಷ, ಗುಜರಾತ್‌ ಸೇರಿ 4 ರಾಜ್ಯಕ್ಕೆ ತಲಾ1ಕೋಟಿ

 

18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆಯಾದರೂ ಕರ್ನಾಟಕ ಸರ್ಕಾರ ಅದನ್ನು ಇನ್ನಷ್ಟು ದಿನಗಳ ಕಾಲ ಮುಂದೂಡಲು ಯತ್ನಿಸಿತ್ತು. ಲಸಿಕೆ ಹಂಚಿಕೆಯಲ್ಲಿನ ವಿಳಂಬವನ್ನು ಮರೆಮಾಚಲು ಮುಂದಾದಂತಿರುವ ರಾಜ್ಯ ಬಿಜೆಪಿ ಸರ್ಕಾರವು ಮೇ 15ರ ನಂತರ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಯೋಜಿಸಿತ್ತು. ಈ ಸಂಬಂಧ 5 ದಿನ ಬಳಿಕ ಹಂಚಿಕೆಯಾಗಿದ್ದು 30,000 ವಯಲ್ಸ್‌?;18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮುಂದೂಡಿಕೆ? ಎಂದು ಏಪ್ರಿಲ್‌ 29, 2021ರಂದು ವರದಿ ಪ್ರಕಟಿಸಿತ್ತು.

5 ದಿನ ಬಳಿಕ ಹಂಚಿಕೆಯಾಗಿದ್ದು 30,000 ವಯಲ್ಸ್‌?;18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮುಂದೂಡಿಕೆ?

ಕೋವಿಡ್‌ 2ನೇ ಅಲೆ ಆರಂಭವಾದ ದಿನದಿಂದ ಈವರೆವಿಗೆ ರಾಜ್ಯ ಬಿಜೆಪಿ ಸರ್ಕಾರವು ಲಸಿಕೆ ಅಭಿಯಾನಕ್ಕೆ 1,200 ಕೋಟಿ ವೆಚ್ಚ ಮಾಡಿದೆ. ಎರಡನೇ ಹಂತಕ್ಕೆ 2 ಕೋಟಿ ಡೋಸ್‌ಗೆ ತಲಾ 400 ರೂ.ನಂತೆ 800 ಕೋಟಿ ವೆಚ್ಚವಾಗಲಿದೆ. (ಮೊದಲ ಹಂತ ಹೊರತುಪಡಿಸಿ) ಇದು ಕೂಡ ವಾರ್ಷಿಕ ಬಜೆಟ್‌ನ ಶೇ. 0.33 ರಷ್ಟು ಮಾತ್ರ. ಲಸಿಕೆ ಖರೀದಿಗಾಗಿ ಒಟ್ಟಾರೆಯಾಗಿ ವಾರ್ಷಿಕ ಬಜೆಟ್‌ನಲ್ಲಿ ಶೇ.0.5ರಷ್ಟು ಮಾತ್ರ ಖರ್ಚು ಮಾಡಿತ್ತು.  ಈ ಕುರಿತು ಲಸಿಕೆ ಖರೀದಿಗೆ 1,200 ಕೋಟಿ ಖರ್ಚು; ಇದು ಬಜೆಟ್‌ನ ಶೇ 0.5ರಷ್ಟು ವೆಚ್ಚವಾಗಿತ್ತು ಎಂದು ಮೇ 10, 2021ರಂದು ವರದಿ ಬಿತ್ತರಿಸಿತ್ತು.

ಲಸಿಕೆ ಖರೀದಿಗೆ 1,200 ಕೋಟಿ ಖರ್ಚು; ಇದು ಬಜೆಟ್‌ನ ಶೇ 0.5ರಷ್ಟು ವೆಚ್ಚ

ಲಸಿಕಾಕರಣ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರವು ತನ್ನ ಬದ್ಧತೆಯನ್ನು ಪೂರ್ಣಗೊಳಿಸಿರಲಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ಪಾಲನ್ನು ರಾಜ್ಯ ಸರ್ಕಾರವೇ ಭರಿಸಿತ್ತು. ರಾಜ್ಯದಲ್ಲಿ ಉದ್ಭವವಾಗಿರುವ ಲಸಿಕೆ ಹಾಹಾಕಾರಕ್ಕೆ ಇದೇ ಮೂಲ ಕಾರಣ ಎಂಬ ಹೊಸ ಅಂಶ ಬಹಿರಂಗಗೊಂಡಿತ್ತು.  ಈ ಕುರಿತು ಮೇ 25, 2021ರಂದು ಲಸಿಕೆ ಕೊರತೆಗೆ ಕಾರಣ ಬಹಿರಂಗ; ಕೇಂದ್ರದ ಪಾಲು ಭರಿಸಿ 28 ಕೋಟಿ ಹೊರೆ? ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.

ಲಸಿಕೆ ಕೊರತೆಗೆ ಕಾರಣ ಬಹಿರಂಗ; ಕೇಂದ್ರದ ಪಾಲು ಭರಿಸಿ 28 ಕೋಟಿ ಹೊರೆ?

 

ದೇಶಾದ್ಯಂತ ಕಳೆದ 130 ದಿನಗಳಿಂದಲೂ ನಡೆಯುತ್ತಿರುವ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 14.50ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಈ ಪೈಕಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 3ರಷ್ಟು ಮಂದಿಗೆ ಮಾತ್ರ ಎರಡನೇ ಡೋಸ್‌ ನೀಡಲಾಗಿದೆ. ಹಾಗೆಯೇ ದಕ್ಷಿಣದ ರಾಜ್ಯಗಳ ಒಟ್ಟು 24 ಕೋಟಿ ಜನಸಂಖ್ಯೆಯಲ್ಲಿ ಶೇ.16.50ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಈ ಕುರಿತು ಕೋವಿಡ್‌ ಲಸಿಕೆ; ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.14.50, ಕರ್ನಾಟಕದಲ್ಲಿ ಶೇ.18ರಷ್ಟೇ ಪ್ರಗತಿ ಶೀರ್ಷಿಕೆಯಡಿಯಲ್ಲಿ ಮೇ 27, 2021ರಂದು ವರದಿ ಪ್ರಕಟಿಸಿತ್ತು.

 

ಕೋವಿಡ್‌ ಲಸಿಕೆ; ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.14.50, ಕರ್ನಾಟಕದಲ್ಲಿ ಶೇ.18ರಷ್ಟೇ ಪ್ರಗತಿ

ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೋರೇಟ್‌ ಆಸ್ಪತ್ರೆಗಳು ಖರೀದಿಸಿರುವುದು ಬಹಿರಂಗವಾಗಿತ್ತು. ವಿಶೇಷವೆಂದರೆ ಕರ್ನಾಟಕದಲ್ಲಿ ಕೋವಿಡ್‌ 3ನೇ ಅಲೆಯನ್ನು ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು. ಈ ಕುರಿತು ಕೋವಿಡ್ ಲಸಿಕೆ ಕಾರ್ಪೋರೇಟ್‌ ಆಸ್ಪತ್ರೆಗಳ ಪಾಲು; ದೇವಿಶೆಟ್ಟಿ ಆಸ್ಪತ್ರೆಯಲ್ಲಿದೆ 2.20 ಲಕ್ಷ ಡೋಸ್‌ ಶೀರ್ಷಿಕೆಯಡಿಯಲ್ಲಿ ಜೂನ್‌ 5, 2021ರಂದು ವರದಿ ಪ್ರಕಟಿಸಿತ್ತು.

ಕೋವಿಡ್ ಲಸಿಕೆ ಕಾರ್ಪೋರೇಟ್‌ ಆಸ್ಪತ್ರೆಗಳ ಪಾಲು; ದೇವಿಶೆಟ್ಟಿ ಆಸ್ಪತ್ರೆಯಲ್ಲಿದೆ 2.20 ಲಕ್ಷ ಡೋಸ್‌

2.2 ಲಕ್ಷ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿರುವ ನಾರಾಯಣ ಆಸ್ಪತ್ರೆಯ ಮುಖ್ಯಸ್ಥರೂ ಮತ್ತು ಕೋವಿಡ್‌ 3ನೇ ಅಲೆ ತಡೆಗಟ್ಟಲು ಕರ್ನಾಟಕ ಸರ್ಕಾರವು ರಚಿಸಿರುವ ಉನ್ನತ ತಜ್ಞರ ಸಮಿತಿಯ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರೀಗ ಸ್ವ-ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಗುರಿಯಾಗಿದ್ದರು. ಈ ಕುರಿತು ಜೂನ್‌ 7, 2021ರಂದು ಕೋವಿಡ್‌ ಲಸಿಕೆ ವಾಣಿಜ್ಯೀಕರಣ; ದೇವಿಶೆಟ್ಟಿ ವಿರುದ್ಧ ಸ್ವ- ಹಿತಾಸಕ್ತಿ ಸಂಘರ್ಷ ಆರೋಪ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಬಿತ್ತರಿಸಿತ್ತು.

ಕೋವಿಡ್‌ ಲಸಿಕೆ ವಾಣಿಜ್ಯೀಕರಣ; ದೇವಿಶೆಟ್ಟಿ ವಿರುದ್ಧ ಸ್ವ- ಹಿತಾಸಕ್ತಿ ಸಂಘರ್ಷ ಆರೋಪ

ಕೋವಿಡ್‌ ಲಸಿಕೆಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರವು ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಈವರೆವಿಗೆ ಅಂದಾಜು 55.78 ಕೋಟಿ ರು. ಹೊರೆಬಿದ್ದಿತ್ತು. ಆದಾಯ ಕೊರತೆಯಿಂದಾಗಿ ಬಳಲುತ್ತಿರುವ ಹೊತ್ತಿನಲ್ಲಿಯೇ ಕೇಂದ್ರದ ನೀತಿಯಿಂದಾಗಿಯೇ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಆರ್ಥಿಕ ಹೊರೆ ಬಿದ್ದಂತಾಗಿದೆ. ಈ ಕುರಿತು ಜೂನ್‌ 10, 2021ರಂದು ಕೋವಿಡ್‌ ಲಸಿಕೆ; ಕೇಂದ್ರದ ನೀತಿಯಿಂದಾಗಿ ಬೊಕ್ಕಸಕ್ಕೆ 55.78 ಕೋಟಿ ಆರ್ಥಿಕ ಹೊರೆ? ಎಂದು ವರದಿ ಪ್ರಕಟಿಸಿತ್ತು.

 

ಕೋವಿಡ್‌ ಲಸಿಕೆ; ಕೇಂದ್ರದ ನೀತಿಯಿಂದಾಗಿ ಬೊಕ್ಕಸಕ್ಕೆ 55.78 ಕೋಟಿ ಆರ್ಥಿಕ ಹೊರೆ?

ಆಮ್ಲಜನಕ, ರೆಮ್‌ಡಿಸಿವಿರ್‌, ಆಂಪೋಟೆರಿಸಿಯನ್‌ ಬಿ, ಸೇರಿದಂತೆ ಇನ್ನಿತರೆ ಔಷಧಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ ಆ ಪಟ್ಟಿಯನ್ನು ಬಹಿರಂಗಗೊಳಿಸುವ ಕೇಂದ್ರ ಸರ್ಕಾರವು ಕೋವಿಡ್‌ ಲಸಿಕೆಗಳನ್ನು ಯಾವ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಿದೆ ಎಂಬುದನ್ನು ಈವರೆವಿಗೂ ಸಾರ್ವಜನಿಕವಾಗಿ ಪಟ್ಟಿಯನ್ನು ಬಹಿರಂಗಗೊಳಿಸದೆ ಮುಚ್ಚಿಟ್ಟಿತ್ತು. ಈ ಕುರಿತು ಜೂನ್‌ 21, 2021ರಂದು ಕೋವಿಡ್‌ ಲಸಿಕೆ ಹಂಚಿಕೆ ಪಟ್ಟಿ ಮುಚ್ಚಿಟ್ಟಿತೇ ಒಕ್ಕೂಟ ಸರ್ಕಾರ;ತಾರತಮ್ಯ ಬಹಿರಂಗವಾಗುವ ಭೀತಿಯೇ? ಎಂದು ವರದಿಯಲ್ಲಿ ಪ್ರಶ್ನಿಸಲಾಗಿತ್ತು.

ಕೋವಿಡ್‌ ಲಸಿಕೆ ಹಂಚಿಕೆ ಪಟ್ಟಿ ಮುಚ್ಚಿಟ್ಟಿತೇ ಒಕ್ಕೂಟ ಸರ್ಕಾರ;ತಾರತಮ್ಯ ಬಹಿರಂಗವಾಗುವ ಭೀತಿಯೇ?

 

ಒಕ್ಕೂಟ ಸರ್ಕಾರವೇ ನೇರವಾಗಿ ಕೋವಿಡ್‌ ಲಸಿಕೆ ಖರೀದಿಸಬೇಕು. ಮತ್ತು ಸರ್ಕಾರವು ಖರೀದಿಸುವ ಬೆಲೆಯಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಬೇಕು ಮತ್ತು ಕನಿಷ್ಠ 150 ರು. ಸೇವಾ ದರವನ್ನು ನಾಗರಿಕರಿಂದ ಪಡೆಯಲು ಅನುವು ಮಾಡಿಕೊಡಬೇಕೆಂದು ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥರೂ ಆಗಿರುವ ಡಾ ದೇವಿಶೆಟ್ಟಿ ಅವರು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಕುರಿತು ಕೇಂದ್ರ ಖರೀದಿ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ವಿತರಣೆ;150 ರು.ಸೇವಾದರ ಶಿಫಾರಸ್ಸೇಕೆ? ಎಂದು ಜೂನ್‌ 24, 2021ರಂದು ವರದಿ ಬಿತ್ತರಿಸಿತ್ತು.

ಕೇಂದ್ರ ಖರೀದಿ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ವಿತರಣೆ;150 ರು.ಸೇವಾದರ ಶಿಫಾರಸ್ಸೇಕೆ?

ಕೋವಿಡ್‌ 2ನೇ ಅಲೆಗೆ ತತ್ತರಿಸಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಲಪಂಥೀಯ ಸರ್ಕಾರವು ಈ ಮಹಾವಿಪತ್ತನ್ನು ತಗ್ಗಿಸುವ ಬದಲು ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಲಾಭದ ಹೊಳೆಯನ್ನೇ ಹರಿಸಿರುವುದು ಮತ್ತು ಈ ಸಾಂಕ್ರಾಮಿಕವನ್ನು ಲಸಿಕೆ ತಯಾರಿಕೆ ಕಂಪನಿಗಳು ಹೇಗೆ ದುರುಪಯೋಗಪಡಿಸಿಕೊಂಡಿದ್ದವು. ಸಾಂಕ್ರಾಮಿಕ ಸಮಯದಲ್ಲಿ ಮಾನವೀಯತೆಯನ್ನೇ ಕಣ್ಮರೆಯಾಗಿಸಿದ ಮೋದಿ ಸರ್ಕಾರವು ಆಧಾರ್‌ ಪೂನಾವಾಲರಂತಹ ಲಸಿಕೆ ಉತ್ಪಾದಕ ದಿಗ್ಗಜನ ಉದ್ಯಮಶೀಲ ಬಳಕೆಗೆ ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ‘ದಿ ಫೈಲ್‌’ ಜೂನ್‌ 25, 2021ರಂದು ಒಂದು ಡೋಸ್‌ಗೆ ಪ್ರತಿಶತ 2000ರಷ್ಟು ಲಾಭ; ಸಾಂಕ್ರಾಮಿಕದಲ್ಲೂ ಲಾಭದ ರಾಜಕುಮಾರ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ಒಂದು ಡೋಸ್‌ಗೆ ಪ್ರತಿಶತ 2000ರಷ್ಟು ಲಾಭ; ಸಾಂಕ್ರಾಮಿಕದಲ್ಲೂ ಲಾಭದ ರಾಜಕುಮಾರ

 

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಗಳ ಕೊರತೆ ಉದ್ಭವಿಸಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ರಾಜ್ಯದ ಕಾರ್ಪೋರೇಟ್‌ ಮತ್ತು ಸಣ್ಣ, ಮಧ್ಯಮ ಪ್ರಮಾಣದ ಖಾಸಗಿ ಆಸ್ಪತ್ರೆಗಳು 22.19 ಲಕ್ಷ ಪ್ರಮಾಣ ಲಸಿಕೆ ದಾಸ್ತಾನು ಮಾಡಿಟ್ಟುಕೊಂಡಿವೆ! ದೇಶದ 37 ರಾಜ್ಯಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1.56 ಕೋಟಿ ಲಸಿಕೆ ದಾಸ್ತಾನಿತ್ತು. ಈ ಕುರಿತು ನಾಗರಿಕರ ಪರದಾಟ; ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ 22.19 ಲಕ್ಷ ಲಸಿಕೆ ದಾಸ್ತಾನು ಎಂಬ ಶೀರ್ಷಿಕೆಯಡಿಯಲ್ಲಿ ಜುಲೈ 1, 2021ರಂದು ವರದಿ ಪ್ರಕಟಿಸಿತ್ತು.

 

ನಾಗರಿಕರ ಪರದಾಟ; ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ 22.19 ಲಕ್ಷ ಲಸಿಕೆ ದಾಸ್ತಾನು

ಕೋವಿಡ್‌ ಲಸಿಕೆಗಳನ್ನು ನೇರವಾಗಿ ಖರೀದಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ 2021ರ ಮೇ ತಿಂಗಳಲ್ಲಿ ಒಟ್ಟು 2,13,50,490 (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಲಸಿಕೆಗಳನ್ನು ಖರೀದಿಸಿರುವ ಕರ್ನಾಟಕವೂ ಸೇರಿದಂತೆ ದೇಶದ 37 ರಾಜ್ಯಗಳು (ಕೇಂದ್ರಾಡಳಿತ ಸೇರಿ) 689 ಕೋಟಿ ರು. ವೆಚ್ಚ ಮಾಡಿತ್ತು. ಒಕ್ಕೂಟ ಸರ್ಕಾರವೇ 2,13,50,490 ಪ್ರಮಾಣದ ಲಸಿಕೆಗಳನ್ನು 150 ರು. ದರದಲ್ಲಿ ಖರೀದಿಸಿದ್ದರೆ 325.25 ಕೋಟಿ ರು.ಮಾತ್ರ ವೆಚ್ಚವಾಗುತ್ತಿತ್ತು. ಲಸಿಕೆ ಖರೀದಿಗೆ ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ರು. ನಷ್ಟ ಸಂಭವಿಸಿದಂತಾಗಿತ್ತು. ಈ ಕುರಿತು ಲಸಿಕೆ ಖರೀದಿ; ಕರ್ನಾಟಕ ಸೇರಿ 37 ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ನಷ್ಟ ಎಂದು ಜುಲೈ 2, 2021ರಂದು ವರದಿಯಲ್ಲಿ ಹೇಳಲಾಗಿತ್ತು.

ಲಸಿಕೆ ಖರೀದಿ; ಕರ್ನಾಟಕ ಸೇರಿ 37 ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ನಷ್ಟ

ನ್ಯಾಯಾಲಯದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆರಾಕ್ಸ್‌ ಸಿಬ್ಬಂದಿ, ಜಾಬ್‌ ಟೈಪಿಸ್ಟ್‌ ಮತ್ತು ಕ್ಯಾಂಟೀನ್‌ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಪ್ರಮಾಣಪತ್ರ ಹೊಂದಿದ್ದರಷ್ಟೇ ನ್ಯಾಯಾಲಯದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶವು ಮೂಲಭೂತ ಹಕ್ಕು ಮತ್ತು ಖಾಸಗಿತನದ ಹಕ್ಕಿಗೆ ಚ್ಯುತಿ ತಂದಂತಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಕಡ್ಡಾಯ ಲಸಿಕೆ ಖಾಸಗಿತನ ಹಕ್ಕಿಗೆ ಚ್ಯುತಿ?; ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮನವಿ ಮಾಡಿದ್ದರ ಕುರಿತು ಜುಲೈ 23, 2021ರಂದು ವರದಿ ಪ್ರಕಟಿಸಿತ್ತು.

ಕಡ್ಡಾಯ ಲಸಿಕೆ ಖಾಸಗಿತನ ಹಕ್ಕಿಗೆ ಚ್ಯುತಿ?; ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮನವಿ

 

ಕೋವಿಡ್‌ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಕಾನೂನು ತರದಿದ್ದರೂ ರಾಜ್ಯದ ಚಿಂತಾಮಣಿ ಸೇರಿದಂತೆ ಹಲವು ತಾಲೂಕುಗಳ ತಹಶೀಲ್ದಾರ್‌ಗಳು ಮತ್ತು ಜಿಲ್ಲಾಧಿಕಾರಿಗಳು ‘ಲಸಿಕೆ ಪಡೆಯದಿದ್ದವರಿಗೆ ಪಡಿತರವನ್ನು ನೀಡುವುದಿಲ್ಲ’ ಎಂದು ಸುತ್ತೋಲೆ ಹೊರಡಿಸುವ ಮೂಲಕ ಆಹಾರದ ಹಕ್ಕಿನ ಕಾಯ್ದೆಯನ್ನು ಉಲ್ಲಂಘಿಸಿದ್ದರು. ಈ ಸಂಬಂಧ ಲಸಿಕೆ ಹಾಕಿಸದಿದ್ದರೆ ಪಡಿತರ ರದ್ದು; ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಂದ ಆಹಾರ ಹಕ್ಕಿನ ಉಲ್ಲಂಘನೆ ಎಂಬ ವರದಿಯನ್ನು ಆಗಸ್ಟ್‌ 22, 2021ರಂದು ಪ್ರಕಟಿಸಿತ್ತು.

ಲಸಿಕೆ ಹಾಕಿಸದಿದ್ದರೆ ಪಡಿತರ ರದ್ದು; ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಂದ ಆಹಾರ ಹಕ್ಕಿನ ಉಲ್ಲಂಘನೆ

ಭಾರತ ಸರ್ಕಾರವು ಲಸಿಕೆಗಳನ್ನು ಯಾವ ದರದಲ್ಲಿ ಖರೀದಿಸಿದೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿತ್ತು. ಈ ಕುರಿತು 8 ತಿಂಗಳಲ್ಲಿ ರಾಜ್ಯಕ್ಕೆ 3.54 ಕೋಟಿ ಲಸಿಕೆ ಸರಬರಾಜು; ದರದ ಮಾಹಿತಿ ಲಭ್ಯವಿಲ್ಲವೇ? ಎಂದು ಅಗಸ್ಟ್‌ 31, 2021ರಂದು ವರದಿಯಲ್ಲಿ ಪ್ರಶ್ನಿಸಲಾಗಿತ್ತು.

8 ತಿಂಗಳಲ್ಲಿ ರಾಜ್ಯಕ್ಕೆ 3.54 ಕೋಟಿ ಲಸಿಕೆ ಸರಬರಾಜು; ದರದ ಮಾಹಿತಿ ಲಭ್ಯವಿಲ್ಲವೇ?

ಕೋವಿಡ್‌ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ನೀಡಬಾರದು ಎಂದು ಹೊರಡಿಸಿದ್ದ ಸುತ್ತೋಲೆ ವಿವಾದಕ್ಕೀಡಾಗುತ್ತಿದ್ದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿವಾದವನ್ನು ತಣ್ಣಗಾಗಿಸಲು ಮುಂದಾಗಿದ್ದಾರೆ. ಕೋವಿಡ್‌ ಲಸಿಕೆ ನೀಡಿಕೆಗೂ ಪಡಿತರ ಸೇರಿದಂತೆ ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೂ ಜೋಡಿಸಬಾರದು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೂ ನಿರ್ದೇಶಿಸಿದ್ದರು. ಈ ಕುರಿತು ಲಸಿಕೆ ಪಡೆಯದಿದ್ದರೂ ಪಡಿತರ, ಪಿಂಚಣಿ ರದ್ದಾಗದು; ವಿವಾದ ತೀವ್ರಗೊಳ್ಳುತ್ತಿದ್ದಂತೆ ನಿರ್ಬಂಧ ಹಿಂತೆಗೆತ ಎಂದು ಸೆಪ್ಟಂಬರ್‌ 2, 2021ರಂದು ವರದಿ ಬಿತ್ತರಿಸಿತ್ತು.

ಲಸಿಕೆ ಪಡೆಯದಿದ್ದರೂ ಪಡಿತರ, ಪಿಂಚಣಿ ರದ್ದಾಗದು; ವಿವಾದ ತೀವ್ರಗೊಳ್ಳುತ್ತಿದ್ದಂತೆ ನಿರ್ಬಂಧ ಹಿಂತೆಗೆತ

ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 9 ತಿಂಗಳು ಕಳೆದಿದೆ. ಈ ಮಧ್ಯೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಸ್ವಯಂ ಪ್ರೇರಿತ ಲಸಿಕೆ, ಲಸಿಕಾಕರಣ, ಲಸಿಕೆ ಕಾರ್ಯ ಸ್ಥಗಿತ ಹೆಸರಿನಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿಗೆ 1.42 ಕೋಟಿ ರು. ಮತ್ತು 18 ರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಣೆ ಕುರಿತು ಮುಖ್ಯಮಂತ್ರಿಗಳು 2021ರ ಜೂನ್‌ ತಿಂಗಳಲ್ಲಿ ಟಿ ವಿ ಚಾನಲ್‌ಗಳಲ್ಲಿ ಮನವಿ ಮಾಡಿದ್ದ 45 ಸೆಕೆಂಡ್‌ ಅವಧಿಯ ಜಾಹೀರಾತಿಗೆ 1.35 ಕೋಟಿ ಸೇರಿ ದಿನಪತ್ರಿಕೆ ಮತ್ತು ಟಿ ವಿ ಚಾನಲ್‌ಗಳಿಗೆ ನೀಡಿದ್ದ ಜಾಹೀರಾತಿಗೆ ಒಟ್ಟು 2.77 ಕೋಟಿ ರು. ವೆಚ್ಚ ಮಾಡಿದ್ದರೂ ಲಸಿಕಾಕರಣ ಇನ್ನೂ ತನ್ನ ಗುರಿಯನ್ನು ತಲುಪಿರಲಿಲ್ಲ.

ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 9 ತಿಂಗಳು ಕಳೆದಿದೆ. ಈ ಮಧ್ಯೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಸ್ವಯಂ ಪ್ರೇರಿತ ಲಸಿಕೆ, ಲಸಿಕಾಕರಣ, ಲಸಿಕೆ ಕಾರ್ಯ ಸ್ಥಗಿತ ಹೆಸರಿನಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿಗೆ 1.42 ಕೋಟಿ ರು. ಮತ್ತು 18 ರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಣೆ ಕುರಿತು ಮುಖ್ಯಮಂತ್ರಿಗಳು 2021ರ ಜೂನ್‌ ತಿಂಗಳಲ್ಲಿ ಟಿ ವಿ ಚಾನಲ್‌ಗಳಲ್ಲಿ ಮನವಿ ಮಾಡಿದ್ದ 45 ಸೆಕೆಂಡ್‌ ಅವಧಿಯ ಜಾಹೀರಾತಿಗೆ 1.35 ಕೋಟಿ ಸೇರಿ ದಿನಪತ್ರಿಕೆ ಮತ್ತು ಟಿ ವಿ ಚಾನಲ್‌ಗಳಿಗೆ ನೀಡಿದ್ದ ಜಾಹೀರಾತಿಗೆ ಒಟ್ಟು 2.77 ಕೋಟಿ ರು. ವೆಚ್ಚ ಮಾಡಿದ್ದರೂ ಲಸಿಕಾಕರಣ ಇನ್ನೂ ತನ್ನ ಗುರಿಯನ್ನು ತಲುಪಿರಲಿಲ್ಲ. ಈ ಕುರಿತು ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ ಎಂದು ಅಕ್ಟೋಬರ್‌ 18, 2021ರಂದು ವರದಿಯಲ್ಲಿ ದಾಖಲೆ ಸಮೇತ ವಿವರಿಸಲಾಗಿತ್ತು.

ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

ಕರ್ನಾಟಕ ಲೋಕಾಯುಕ್ತ ಕಚೇರಿಗೆ ದೂರು ನೀಡಲು ಮತ್ತು ವಿಚಾರಣೆಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಕೂಡ 2ನೇ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಎರಡನೇ ಡೋಸ್‌ ಪಡೆದಿರುವ ಪ್ರಮಾಣಪತ್ರವನ್ನು ಪರಿಶೀಲಿಸದೆಯೇ ಲೋಕಾಯುಕ್ತ ಕಚೇರಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಸುತ್ತೋಲೆ ಹೊರಡಿಸಿತ್ತು. ಲಸಿಕೆ ಪ್ರಮಾಣಪತ್ರವಿಲ್ಲದವರಿಗೆ ಪ್ರವೇಶಕ್ಕೆ ನಿರ್ಬಂಧ;ನ್ಯಾಯಾಲಯಗಳ ಆದೇಶ ಉಲ್ಲಂಘನೆ? ಎಂದು ಜನವರಿ 13, 2022ರಂದು ವರದಿ ಪ್ರಕಟಿಸಿತ್ತು.

ಲಸಿಕೆ ಪ್ರಮಾಣಪತ್ರವಿಲ್ಲದವರಿಗೆ ಪ್ರವೇಶಕ್ಕೆ ನಿರ್ಬಂಧ;ನ್ಯಾಯಾಲಯಗಳ ಆದೇಶ ಉಲ್ಲಂಘನೆ?

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮಧುಚಂದ್ರ ಎಂಬ ಯುವಕ ಕೈಕಾಲು ಸ್ವಾಧೀನ ಕಳೆದುಕೊಂಡಿರುವುದಕ್ಕೆ ಕೋವ್ಯಾಕ್ಸಿನ್‌ ಲಸಿಕೆ ಪಡೆದಿರುವುದು ಕಾರಣವೇ ಅಥವಾ ಇಲ್ಲವೇ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಧರಿಸಿತ್ತು. ಈ ಕುರಿತು ಜೂನ್‌ 8, 2022 ರಂದು ಕೈಕಾಲು ಸ್ವಾಧೀನ ಕಳೆದುಕೊಂಡ ಯುವಕನ ಪ್ರಕರಣ; ಕೋವ್ಯಾಕ್ಸಿನ್‌ ಲಸಿಕೆಯ ವ್ಯತಿರಿಕ್ತ ಪರಿಣಾಮವೇ?ಎಂದು ವರದಿ ಪ್ರಕಟಿಸಿತ್ತು.

ಕೈಕಾಲು ಸ್ವಾಧೀನ ಕಳೆದುಕೊಂಡ ಯುವಕನ ಪ್ರಕರಣ; ಕೋವ್ಯಾಕ್ಸಿನ್‌ ಲಸಿಕೆಯ ವ್ಯತಿರಿಕ್ತ ಪರಿಣಾಮವೇ?

ಕೋವ್ಯಾಕ್ಸಿನ್‌ ಲಸಿಕೆ ಪಡೆದು 6 ದಿನಗಳವರೆಗೆ ಆರೋಗ್ಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮನುಚಂದ್ರ ಎಂಬ ಯುವಕನಿಗೆ ಏಳನೇ ದಿನಕ್ಕೆ ಕಾಲು ಬಾವು ಕಾಣಿಸಿಕೊಂಡಿತ್ತು. ಇದಾಗಿ 4 ದಿನಗಳ ನಂತರ ಮೂತ್ರ ವಿಸರ್ಜನೆಯೂ ನಿಂತಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕ (ಲಸಿಕೆ) ವರದಿ ನೀಡಿದ್ದರು. ಕೋವಾಕ್ಸಿನ್‌ ಲಸಿಕೆ ಪಡೆದ 7ನೇ ದಿನಕ್ಕೆ ಕಾಲುಬಾವು, ನಂತರ ಮೂತ್ರ ವಿಸರ್ಜನೆ ಸ್ಥಗಿತವಾಗಿದೆ ಎಂದು ವರದಿ ಸಹಿತ ಜುಲೈ 16, 2022ರಂದು ಬಹಿರಂಗ ಪ್ರಕಟಿಸಿತ್ತು.

ಕೋವಾಕ್ಸಿನ್‌ ಲಸಿಕೆ ಪಡೆದ 7ನೇ ದಿನಕ್ಕೆ ಕಾಲುಬಾವು, ನಂತರ ಮೂತ್ರ ವಿಸರ್ಜನೆ ಸ್ಥಗಿತ; ವರದಿ ಬಹಿರಂಗ

ಕೋವಿಡ್‌ ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ರುಪಾಯಿ ಭ್ರಷ್ಟಾಚಾರ ನಡೆಸಿತ್ತು. ಆದರೆ ಅಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಲಸಿಕೆ ಸೇರಿದಂತೆ ಯಾವುದರಲ್ಲೂ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

 

ಈ ಸಂಬಂಧ ರಾಜ್ಯದ ಯಾವ ಮುಖ್ಯವಾಹಿನಿಯಲ್ಲಿರುವ ದಿನಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಗಮನಹರಿಸಿರಲಿಲ್ಲ. ಆದರೆ ‘ದಿ ಫೈಲ್‌’ ಈ ಎಲ್ಲಾ ಅಕ್ರಮಗಳನ್ನು ಬೆನ್ನೆತ್ತಿ 50 ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts