Tuesday | September 22, 2026 |

ಕುಲಪತಿ ನೇಮಕ ವಿವಾದ; ಸರ್ಚ್‌ ಕಮಿಟಿ ಶಿಫಾರಸ್ಸು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ದೆಹಲಿ ಪ್ರಾಧ್ಯಾಪಕ

ಬೆಂಗಳೂರು; ಬೆಂಗಳೂರು, ಧಾರವಾಡ ಕೃಷಿ ವಿವಿ ಕುಲಪತಿ ಹುದ್ದೆಗೆ ಏಕೆ ಆಯ್ಕೆ ಮಾಡಿಲ್ಲವೆಂದು ಶೋಧನಾ ಸಮಿತಿಯನ್ನೇ ಪ್ರಶ್ನಿಸಿ ದೆಹಲಿ ಮೂಲದ  ಆಕಾಂಕ್ಷಿ ಪ್ರಾಧ್ಯಾಪಕ  ಭಾಸ್ಕರ್‌ ಎಂಬುವರು ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿಸಿ ಹೈಕೋರ್ಟ್‌ ಮೆಟ್ಟಿಲೇರಿರುವುದು ಇದೀಗ ಬಹಿರಂಗವಾಗಿದೆ.

 

ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಆಕಾಂಕ್ಷಿ ಪ್ರಾಧ್ಯಾಪಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸದ ಶೋಧನಾ ಸಮಿತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿದ್ಯಾಲಯದ ಶೋಧನಾ ಸಮಿತಿಯು ಪರಿಗಣಿಸಿದ್ದನ್ನು ಆಧರಿಸಿ ಹೈಕೋರ್ಟ್‌ ಮೆಟ್ಟಿಲೇರಿರುವುದು ಶೋಧನಾ ಸಮಿತಿಗಳ ಕಾರ್ಯವೈಖರಿ ಮತ್ತು ಪಾರದರ್ಶಕತೆಯನ್ನು ಒರೆಗೆ ಹಚ್ಚಿದಂತಾಗಿದೆ.

 

ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಗಾಗಿ ರಚನೆಯಾಗುವ ಶೋಧನಾ ಸಮಿತಿ (ಸರ್ಚ್‌ ಕಮಿಟಿ) ಗಳ ಕಾರ್ಯವೈಖರಿ ಮತ್ತು ಶಿಫಾರಸ್ಸಿನ ಹಿಂದೆ ಹಣದ ವಹಿವಾಟು ನಡೆಯುತ್ತವೆ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಮುನ್ನೆಲೆಗೆ ಬಂದಿರುವ ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗೆ ಶೋಧನಾ ಸಮಿತಿಯು ನಡೆಸಿದ್ದ ಆಯ್ಕೆ ಪ್ರಕ್ರಿಯೆಗಳು ಹಲವು ಅನುಮಾನಕ್ಕೆ ದಾರಿಮಾಡಿಕೊಟ್ಟಿವೆ.

 

ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಹೊಸದಿಲ್ಲಿಯ ಡಾ ಎಸ್‌ ಭಾಸ್ಕರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಈ ಎರಡೂ ವಿಶ್ವವಿದ್ಯಾಲಯಗಳ ಶೋಧನಾ ಸಮಿತಿಗಳು ಪರಿಗಣಿಸಿರಲಿಲ್ಲ. ಆದರೆ ಇದೇ ಭಾಸ್ಕರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶೋಧನಾ ಸಮಿತಿಯು ಅರ್ಜಿಯನ್ನು ಪರಿಗಣಿಸಿತ್ತಲ್ಲದೇ ಶಿಫಾರಸ್ಸು ಮಾಡಿದ್ದ ಪಟ್ಟಿಯಲ್ಲಿಯೂ ಅವರ ಹೆಸರಿತ್ತು.

 

ಹೀಗಾಗಿ ಇದನ್ನೇ ಆಧರಿಸಿ ಭಾಸ್ಕರ್‌ ಎಂಬುವರು ಇದೀಗ ಹೈಕೋರ್ಟ್‌ ಮೆಟ್ಟಿಲೇರಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ‘ಬೆಂಗಳೂರು, ಧಾರವಾಡ ಕುಲಪತಿಗಳ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಏಕೆ ಆಯ್ಕೆ ಮಾಡಿಲ್ಲವೆಂದು ತಿಳಿಯದೇ ಬೇರೆ ದಾರಿಯಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಧಾರವಾಡ, ಬೆಂಗಳೂರು ಕೃಷಿ ವಿವಿ ಕುಲಪತಿ ಹುದ್ದೆ ಆಯ್ಕೆಯನ್ನು ತಡೆಹಿಡಿಯಬೇಕು ಎಂದು,’ ದಾವೆಯಲ್ಲಿ ಕೋರಿದ್ದಾರೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಆದರೆ ಈಗಾಗಲೇ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಪಿ ಎಲ್‌ ಪಾಟೀಲ್‌ ಅವರನ್ನು ಕುಲಪತಿಯನ್ನಾಗಿ ರಾಜ್ಯಪಾಲರು ಆಯ್ಕೆಗೊಳಿಸಿ ಆದೇಶ ಹೊರಡಿಸಿರುವುದರಿಂದ ಅವರ ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯಲು ಅವಕಾಶವಿರುವುದಿಲ್ಲ ಎಂದು ಕೃಷಿ ಇಲಾಖೆಯು ನಿಲುವು ತಳೆದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಲ್ಲದೇ ‘ಈ ಪ್ರಕರಣದಲ್ಲಿ ರಾಜ್ಯಪಾಲರು ಮತ್ತು ಕುಲಾಧಿಪತಿಯವರ ಕಾರ್ಯದರ್ಶಿಯವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣವು ಮಹತ್ವದ ಪ್ರಕರಣವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರನ್ನು ನೇಮಕಗೊಳಿಸಬೇಕು,’ ಎಂದು ಇಲಾಖೆಯು ಕಾನೂನು ಕೋಶವನ್ನು ಕೋರಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಬೆಂಗಳೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗಳ ಆಯ್ಕೆಗಾಗಿ ರಚಿಸಿದ್ದ ಶೋಧನಾ ಸಮಿತಿಗೆ ವಿಶ್ರಾಂತ ಕುಲಪತಿ ಡಾ ಪಿ ಜಿ ಚಂಗಪ್ಪ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ಮತ್ತೊಬ್ಬ ವಿಶ್ರಾಂತ ಕುಲಪತಿ ಡಾ ಎಂ ಎನ್‌ ಶೀಲವಂತರ ಅವರನ್ನು ಸರ್ಚ್‌ ಕಮಿಟಿ ಸದಸ್ಯರನ್ನಾಗಿಸಲಾಗಿತ್ತು. ಈ ಸಮಿತಿಯು ಭಾಸ್ಕರ್‌ ಎಂಬುವರ ಅರ್ಜಿಯನ್ನು ಪರಿಗಣಿಸಿರಲಿಲ್ಲ.

 

ಶಿಫಾರಸ್ಸು ಮಾಡುವಾಗ ಸಲ್ಲಿಸಲಾಗಿರುವ ಮಾಹಿತಿಯು ಅಪೂರ್ಣವಾಗಿದೆಯೆಂದು ಭಾಸ್ಕರ್‌ ಅವರ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಆದರೆ ಇದೇ ಅರ್ಜಿಯನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಸಲ್ಲಿಸಿದ್ದರು. ಈ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗೆ ರಚನೆಗೊಂಡಿದ್ದ ಶೋಧನಾ ಸಮಿತಿಯು ಭಾಸ್ಕರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು. ಮತ್ತು ಶಿಫಾರಸ್ಸು ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿ ಆಯ್ಕೆ ಮಾಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದುಬಂದಿದೆ.

 

‘ಬೆಂಗಳೂರು, ಧಾರವಾಡ ಕುಲಪತಿಗಳ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಏಕೆ ಆಯ್ಕೆ ಮಾಡಿಲ್ಲವೆಂದು ತಿಳಿಯದೇ ಬೇರೆ ದಾರಿಯಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಧಾರವಾಡ, ಬೆಂಗಳೂರು ಕೃಷಿ ವಿವಿ ಕುಲಪತಿ ಹುದ್ದೆ ಆಯ್ಕೆಯನ್ನು ತಡೆಹಿಡಿಯಬೇಕು,’ ಎಂದು ಕೋರಿರುವ ರಿಟ್‌ (WP 20144/2022) ಅರ್ಜಿಯಲ್ಲಿ ರಾಜ್ಯಪಾಲರು ಮತ್ತು ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಕಾರ್ಯದರ್ಶಿಯನ್ನೂ ಪ್ರತಿವಾದಿಯನ್ನಾಗಿಸಲಾಗಿದೆ.

Hot this week

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಖರ್ಗೆ ಕುಟುಂಬ ಸದಸ್ಯರ ಸಿದ್ದಾರ್ಥ ವಿಹಾರ ಟ್ರಸ್ಟ್‌; ಪ್ರಕರಣ ಮುಂದುವರಿಕೆ, ಲೋಕಾಯುಕ್ತ ಎಸ್‌ಪಿ ಗೆ ನೋಟೀಸ್‌ ನೀಡಿದ ನ್ಯಾಯಾಲಯ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ,...

ಪಿಎಸ್‌ಐ ನೇಮಕಾತಿ ಹಗರಣ; ಅಮೃತ್‌ ಪೌಲ್‌ ವಿರುದ್ಧ ಇಲಾಖೆ ವಿಚಾರಣೆ, ವಿಚಾರಣಾಧಿಕಾರಿಗೆ 15 ಲಕ್ಷ ರು ಸಂಭಾವನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐಗಳ ನೇಮಕಾತಿಯಲ್ಲಿನ...
Please Scan to make Your Contribution

Topics

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಪಿಎಸ್‌ಐ ನೇಮಕಾತಿ ಹಗರಣ; ಅಮೃತ್‌ ಪೌಲ್‌ ವಿರುದ್ಧ ಇಲಾಖೆ ವಿಚಾರಣೆ, ವಿಚಾರಣಾಧಿಕಾರಿಗೆ 15 ಲಕ್ಷ ರು ಸಂಭಾವನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐಗಳ ನೇಮಕಾತಿಯಲ್ಲಿನ...

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

Related Articles

Popular Categories

error: Content is protected !!