Monday | October 5, 2026 |

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿ ಕಾಯ್ದಿರಿಸಿರುವ 120-00 ಎಕರೆ ಜಮೀನಿನಲ್ಲಿ ಹೈಟೆಕ್ ಕೈಗಾರಿಕೆ ಪ್ರದೇಶವನ್ನಾಗಿ ಬದಲಾಯಿಸುವ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದರೂ ಸಹ ಈ ಸಭೆಯ ಮಾಹಿತಿಗಳು ಅರಣ್ಯ ಇಲಾಖೆಯ ಬಳಿ ಇಲ್ಲ.

ಕಾಡುಗೋಡಿ ಪ್ಲಾಂಟೇಷನ್‌ ಸರ್ವೇ ನಂಬರ್‍‌ 1ರಲ್ಲಿನ 711 ಎಕರೆ ಪೈಕಿ 120 ಎಕರೆಯಲ್ಲಿ ಹೈಟೆಕ್ ಕೈಗಾರಿಕೆ ಪ್ರದೇಶವನ್ನಾಗಿಸಲು 2026ರ ಫೆಬ್ರುವರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದರು. ಆದರೆ ಈ ಸಭೆಯ ಬಗ್ಗೆ ಅರಣ್ಯ ಇಲಾಖೆ ಬಳಿ ಯಾವುದೇ ಮಾಹಿತಿಯೂ ಇಲ್ಲ ಎಂದು ಅರಣ್ಯ ಇಲಾಖೆಯು ಉತ್ತರವನ್ನು ಸಿದ್ಧಪಡಿಸಿದೆ. ಇಲಾಖೆಯು ಸಿದ್ಧಪಡಿಸಿರುವ ಈ ಉತ್ತರವು  ಚರ್ಚೆಗೆ ಗ್ರಾಸವಾಗಿದೆ.

ವಿಶೇಷವೆಂದರೇ ಈ ಕುರಿತು ಬಿಜೆಪಿಯ ಶಾಸಕ ಡಾ ಸಿ ಎನ್ ಅಶ್ವಥ್‌ ನಾರಾಯಣ್‌ ಅವರು 2026ರ ಮಾರ್ಚ್‌ 26ರಂದೇ ವಿಧಾನಸಭೆಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಅಂದು ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಉತ್ತರ ನೀಡಿರಲಿಲ್ಲ. ಈಗ ಇದೇ ಪ್ರಶ್ನೆಗೆ ಅರಣ್ಯ ಇಲಾಖೆಯು 2026ರ ಸೆಪ್ಟಂಬರ್‍‌ನಲ್ಲಿ ಉತ್ತರ ಸಿದ್ಧಪಡಿಸಿದ್ದಾರೆ. ಈ ಉತ್ತರವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಇನ್ನಷ್ಟೇ ಅನುಮೋದಿಸಬೇಕಿದೆ ಎಂದು ತಿಳಿದು ಬಂದಿದೆ.

ಇಲಾಖೆಯು ಸಿದ್ಧಪಡಿಸಿರುವ ಉತ್ತರದ ಪ್ರತಿಯು (ಸಂಖ್ಯೆ; ಎಫ್‌ಇಇ/85/ಎಫ್‌ಜಿಎಲ್/2026)  ದಿ ಫೈಲ್‌ ಗೆ ಲಭ್ಯವಾಗಿದೆ.

ಅಶ್ವಥ್‌ ನಾರಾಯಣ ಅವರ ಪ್ರಶ್ನೆಯಲ್ಲೇನಿತ್ತು?

ಅರಣ್ಯ ಇಲಾಖೆಯಿಂದ ವಶಪಡಿಸಿಕೊಂಡಿದ್ದ ಕಾಡುಗೋಡಿ ಪ್ಲಾಂಟೇಷನ್‌ 120 ಎಕರೆ ಗುಂಟೆ ವಿಸ್ತೀರ್ಣದ ಪ್ರದೇಶವನ್ನು ಕಂದಾಯ ಇಲಾಖೆಯು ವಶಕ್ಕೆ ಪಡೆದು ಇಂಡಸ್ಟ್ರಿಯಲ್ ಪಾರ್ಕ್‌ ಆಗಿ ಬದಲಾಯಿಸಲು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು 2026ರ ಫೆ.17ರಂದು ಸಭೆ ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ,  ಬಂದಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದು ಪ್ರಸ್ತಾವನೆಯನ್ನು ಕೈ ಬಿಡಲು ಸರ್ಕಾರ ಯಾವ ಕ್ರಮಗಳನ್ನು  ಕೈಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕು ಎಂದು ಪ್ರಶ್ನೆ ಕೇಳಿದ್ದರು.

 

 

ಇದಕ್ಕೆ ಇಲಾಖೆಯ ಅಧಿಕಾರಿಗಳು ಉತ್ತರವನ್ನು ಸಿದ್ಧಪಡಿಸಿದ್ದಾರೆ. ‘ಸಭೆಯ ಕುರಿತಂತೆ ಯಾವುದೇ ಮಾಹಿತಿಯೂ ಇರುವುದಿಲ್ಲ. ಹಾಗೂ ಈ ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಭಾಗವಹಿಸಿರುವುದಿಲ್ಲ. ಹಾಗೂ ಈ ವಿಷಯದ ಕುರಿತು ಯಾವುದೇ ಪತ್ರ ವ್ಯವಹಾರವೂ ನಡೆದಿರುವುದಿಲ್ಲ. ಆದರೂ ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದ್ದಲ್ಲಿ ಕೇಂfರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿ ಪಡೆಯಬೇಕು. ಮುಂದುವರೆದು ಕಾಡುಗೋಡಿ ಪ್ಲಾಂಟೇಷನ್‌ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌ನ್ನು ನಿರ್ಮಿಸುವ ಕುರಿತು ಕಂದಾಯ ಇಲಾಖೆಯಿಂದ ಮಾಹಿತಿಯು ಲಭ್ಯವಿಲ್ಲ ಎಂದು ಇಲಾಖೆಯು ಸಿದ್ಧಪಡಿಸಿರುವ ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಕಾಡುಗೋಡಿ ಪ್ರದೇಶವು ಅರಣ್ಯ  ಪ್ರದೇಶವಾಗಿದ್ದರೂ ಹೈಟೆಕ್‌ ಕೈಗಾರಿಕೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಲ್ಲಿಕೆಯಾಗಿತ್ತು.  ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅಥವಾ ಮಂಜೂರು ಮಾಡುವುದು ಅರಣ್ಯ ಸಂರಕ್ಷಣಾ ಕಾಯ್ದೆ (1980ರ) ಅನ್ವಯ ಉಲ್ಲಂಘನೆಯಾಗಲಿದೆ ಎಂದು ಗೊತ್ತಿದ್ದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇಂತಹದೊಂದು ಪ್ರಸ್ತಾವವನ್ನು ಸಲ್ಲಿಸಿತ್ತು.

ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸರ್ವೇ ನಂಬರ್‌ನಲ್ಲಿರುವ ಅರಣ್ಯ ಪ್ರದೇಶದ ಕುರಿತಾಗಿ 2024ರ ಫೆ.9ರಂದು  ವಾಸ್ತವಾಂಶದ ವರದಿ ಸಲ್ಲಿಸಿದ್ದರು.

 

 

 

 

120 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡುವ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್‌ 28ರಂದು ಸಭೆ ನಡೆಸಿದ್ದರು.

ಮತ್ತೊಂದು ವಿಶೇಷವೆಂದರೇ ಇದೇ  ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಕೈಗಾರಿಕೆ ಪ್ರದೇಶದಲ್ಲಿ 28 ಎಕರೆ 2,219 ಚದುರ ಅಡಿ ವಿಸ್ತೀರ್ಣದ ಜಮೀನನ್ನು ಅಭಿವೃದ್ದಿಗೊಳಿಸುವ ಸಲುವಾಗಿ 2007ರ ಜೂನ್‌ 7ರಂದು ಕಾನ್‌ಕಾರ್ಡ್‌ ಕಂಪನಿ ಪರವಾಗಿ ಕೆಐಎಡಿಬಿಯು ಭೋಗ್ಯಕ್ಕೆ ನೀಡಿತ್ತು. ಅಲ್ಲದೇ  ಭೋಗ್ಯ ಮತ್ತು ಮಾರಾಟದ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸ್ವತ್ತನ್ನು ಒತ್ತೆಯಿಟ್ಟು ಪ್ರತಿಷ್ಠಿತ ಕಂಪನಿಯೊಂದು ಖಾಸಗಿ ಬ್ಯಾಂಕ್‌ನಿಂದ ಅಂದಾಜು 2,500 ಕೋಟಿ ರು. ಸಾಲವನ್ನು ಎತ್ತಿತ್ತು.

 

ಕೆಐಎಡಿಬಿ ಸ್ವತ್ತು ಅಡವಿರಿಸಿ 2,500 ಕೋಟಿ ರು. ಸಾಲ; ಭೋಗ್ಯ ಕರಾರಿನ ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಹೀಗಿದ್ದರೂ ಸಹ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಇದೇ ಜಾಗದಲ್ಲಿ ಹೈಟೆಕ್‌ ಕೈಗಾರಿಕೆ ಪ್ರದೇಶವನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

 

ಜಿಲ್ಲಾಧಿಕಾರಿ ವರದಿಯಲ್ಲೇನಿತ್ತು.

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ ಗ್ರಾಮದ ಸರ್ವೆ ನಂಬರ್‌ 1ರಲ್ಲಿ ಹಾಲಿ ಪಹಣಿಯಂತೆ ಒಟ್ಟು 711 ಎಕರೆ ಇದೆ. ಇದರ ಕಾಲಂ 9ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹೆಸರಿಗೆ 711 ಎಕರೆ ಮತ್ತು ಸರ್ಕಾರದ ಹೆಸರಿಗೆ 120 ಎಕರೆ ಖಾತೆ ನಮೂದಾಗಿದೆ. ಹಾಲಿ ಜಮೀನಿನ ಸ್ಥಿತಿಯಂತೆ ಅಂದಾಜು ಸುಮಾರು ಮನೆಗಳೂ (ದಿಣ್ಣೂರು ಮತ್ತು ಗೋಪಾಲಕೃಷ್ಣ ಬಡಾವಣೆ) 40 ಎಕರೆ, 12 ಎಕರೆ ಪೊಲೀಸ್‌ ಠಾಣೆ ಮತತು ವಸತಿ ಗೃಹಕ್ಕೆ 4 ಕೆರೆ, ಅರಣ್ಯ ಇಲಾಖೆಗೆ ಸುಮಾರು 62 ಎಕರೆ, ದೇವಸ್ಥಾನಕ್ಕೆ 2.32 ಎಕರೆ, ಕೆಇಬಿಗೆ 1.19 ಎಕರೆ, ಸ್ಮಸಾನಕ್ಕೆ 2.20 ಎಕರೆ, ಪಶು ಆಸ್ಪತ್ರೆಗೆ 0.09 ಗುಂಟೆ, ರೈಲ್ವೇ ಇಲಾಖೆಗೆ 225 ಎಕರೆ, ಮೆಟ್ರೋಗೆ 44.36 ಎಕರೆ ಮತ್ತು ಇತರೆ ಕಂಪನಿಗಳಿಗೆ 175 ಎಕರೆ ಇದೆ.

ಅಲ್ಲದೇ ಗ್ರಾಮಸ್ಥರಿಗೆ  ಈ ಹಿಂದೆಯೇ ತಲಾ 5 ಎಕರೆಯಂತೆ ಮಂಜೂರಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ (ಡಬ್ಲ್ಯೂಪಿ 7200/2008, 29765-66/2009) ಕಾನ್‌ಕಾರ್ಡ್‌ ಇಂಡಿಯಾಲಿ ಪ್ರೈ ಲಿ ಅವರು ಅರಣ್ಯ ಇಲಾಖೆ ಮತ್ತು ಇತರೆ 36 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಅರಣ್ಯ ಇಲಾಖೆಯು (ಡಬ್ಲ್ಯೂಪಿ 4283/2012, 8578/2012, 4205/2012) ಪ್ರಕರಣ ದಾಖಲಿಸಿದೆ. ಈ ಪ್ರಕರಣಗಳು ವಿಚಾರಣೆ ನಡೆದು ವಜಾಗೊಂಡಿದೆ. ಈ ಆದೇಶಗಳಲ್ಲಿ ಇದು ಕಾಯ್ದಿಟ್ಟ ಅರಣ್ಯ ಜಮೀನಾಗಿರುವುದಿಲ್ಲ ಎಂದು ಉಲ್ಲೇಖಿಸಿರುವುದನ್ನು ಜಿಲ್ಲಾಧಿಕಾರಿ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿತ್ತು.

ಅದೇ ರೀತಿ ಸರ್ಕಾರದ ಅರೆ ಸರ್ಕಾರಿ ಪತ್ರದಲ್ಲಿ ಕಾಡುಗೋಡಿ ಪ್ಲಾಂಟೇಷನ್‌ ಗ್ರಾಮದ ಸರ್ವೆ ನಂಬರ್‌ 01ರಲ್ಲಿನ ಜಮೀನು ಸರ್ಕಾರಿ ಜಮೀನು ಎಂದು ಉಲ್ಲೇಖಿಸಲಾಗಿದೆ. 204.26 ಎಕರೆ ಜಮೀನಿನ ಪೈಕಿ ಭಾಗಶಃ ಬಡಾವಣೆಗಳು, ಮನೆಗಳು, ಕಾಲೋನಿ, ಪೊಲೀಸ್‌ ಠಾಣೆ, ವಸತಿಗೃಹ, ಬಿಎಂಆರ್‌ಸಿಎಲ್‌ಗೆ 40 ಎಕರೆ ಜಮೀನು ಉಪಯೋಗವಾಗಿದೆ. ಪ್ರಸ್ತುತ ಸುಮಾರು 120 ಎಕರೆ ಸರ್ಕಾರಿ ಜಮೀನು ಉಳಿದಿದೆ ಎಂದು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ತಿಳಿಸಿದ್ದಾರೆ. ಮತ್ತು 120 ಎಕರೆ ಜಮೀನನ್ನು ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಲು ವರದಿ ಸಲ್ಲಿಸಲಾಗಿದೆ  ಎಂಬ ಅಂಶವನ್ನೂ ಜಿಲ್ಲಾಧಿಕಾರಿ ಅವರು ವರದಿಯಲ್ಲಿ ವಿವರಿಸಿತ್ತು.

ಆದರೆ ಕೆ ಆರ್‌ ಪುರ  ವಲಯ ಅರಣ್ಯಾಧಿಕಾರಿಗಳು ಸರ್ವೆ ನಂಬರ್‌ 1ರಲ್ಲಿನ ಜಮೀನು ಮೀಸಲು ಅರಣ್ಯ ಭೂಮಿ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಈ ಅರಣ್ಯ ಭೂಮಿಯಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ಮಾಡುವುದು ಅರಣ್ಯ ಕಾಯ್ದೆ ಮತ್ತು ಕಾನೂನು ಉಲ್ಲಂಘನೆಯಾಗಲಿದೆ. ಹೀಗಾಗಿ ಈ ಭೂಮಿಯ ಮೋಜಣಿ ಮಾಡುವುದು, ಸ್ವಾಧೀನಪಡಿಸಿಕೊಳ್ಳುವುದು, ಹಸ್ತಾಂತರಿಸುವ ಮುನ್ನ ಅರಣ್ಯ ಸಂರಕ್ಷಣ ಕಾಯ್ದೆ 1980ರ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಹೀಗಾಗಿ 120 ಎಕರೆ ಮೀಸಲು ಅರಣ್ಯ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಸಮಾಲೋಚಿಸಬೇಕು ಎಂದು ವರದಿಯಲ್ಲಿ ವಿವರಿಸಿತ್ತು.

ಹಾಗೆಯೇ ಕಾಡುಗೋಡಿ ಪ್ಲಾಂಟೇಷನ್‌ ಸರ್ವೆ ನಂಬರ್‌ 1ರಲ್ಲಿನ ಪ್ರದೇಶಕ್ಕೆ ಸಂಬಂಧಿಸಿದಂತೆ ಅರಣ್ಯವಲ್ಲ ಎಂದು ಮತ್ತೊಂದು ಅಧಿಸೂಚನೆಯಾಗಲೀ ಅಥವಾ ಆದೇಶವಾಗಲೀ ಹೊರಡಿಸಿಲ್ಲ. ಈ ಪ್ರದೇಶವೂ ಇಂದಿಗೂ ಕಾಡುಗೋಡಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಅಲ್ಲದೇ 1896ರ ಮತ್ತು 1901 ಅಧಿಸೂಚನೆ ಪ್ರಕಾರ ಈಗಲೂ ಇದು ಅರಣ್ಯವಾಗಿದೆ. ಹೀಗಾಗಿ ರಾಜ್ಯದ/ಕೇಂದ್ರದ ಈ ಹಿಂದೆ ಇದ್ದ ಹಾಗೂ ಪ್ರಸ್ತುತ ಇರುವ ಎಲ್ಲಾ ಅರಣ್ಯ ಕಾಯ್ದೆಗಳಡಿಯಲ್ಲಿ ಬರುತ್ತದೆ. ಈ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅರಣ್ಯ (ಸಂರಕ್ಷಣಾ ಕಾಯ್ದೆ) ಕಾಯ್ದೆ 1980ರಂತೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ.

ಈ ಆದೇಶಕ್ಕೆ ವ್ಯತರಿಕ್ತವಾಗಿ ಯಾವುದೇ ನ್ಯಾಯಮಂಡಳಿ ಅಥವಾ ಉಚ್ಛ ನ್ಯಾಯಾಲಯ ಸೇರಿದಂತೆ ಯಾವುದೇ ನ್ಯಾಯಾಲಯಗಳು ಆದೇಶ ಹೊರಡಿಸಬಾರದು ಎಂದು ಉಚ್ಛರಿಸಲಾಗಿದೆ ಎಂಬ ಅಂಶವನ್ನು  ವರದಿಯಲ್ಲಿ ಪ್ರತಿಪಾದಿಸಲಾಗಿದೆ. ಕಂದಾಯ ಅಧಿಕಾರಿಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಯಾವುದೇ ಅಧಿಕಾರವಿಲ್ಲ. ಒಂದೊಮ್ಮೆ ಮಾಡಿದ್ದರೂ ಅದು ಊರ್ಜಿತವಲ್ಲ ಹಾಗೂ ಅದು ಅಸಿಂಧು ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

 

 

ಕಾಡುಗೋಡಿ ಪ್ಲಾಂಟೇಷನ್‌ ಸರ್ವೆ ನಂ 1ರಲ್ಲಿ 711 ಎಕರೆ ಪ್ರದೇಶದಲ್ಲಿ 449 ಎಕರೆ 28 ಗುಂಟೆ ಪ್ರದೇಶವನ್ನು ಕೆಐಎಡಿಬಿಯು ಕೈಗಾರಿಕೆ ಸಂಸ್ಥೆ ಮತ್ತು ಕಂಪನಿಗಳಿಗೆ ನೀಡಿತ್ತು. ಜೂನ್‌ 2025ರಲ್ಲಿ 120 ಎಕರೆ ಖುಲ್ಲಾ ಪ್ರದೇಶವನ್ನು ಇಲಾಖೆ ವಶಕ್ಕೆ ಪಡೆದಿತ್ತು. ಉಳಿದ 141 ಎಕರೆ 12 ಗುಂಟೆ ಪ್ರದೇಶದಲ್ಲಿ ಈಗಾಗಲೇ 111 ಎಕರೆ 20 ಗುಂಟೆ ಪ್ರದೇಶವು ಅರಣ್ಯ ಇಲಾಖೆಯ ತರಬೇತಿ ಸಂಸ್ಥೆ, ವೃಕ್ಷೋದ್ಯಾನವಿದೆ. ಅಲ್ಲದೆ ಬಿಎಂಆರ್‍‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ ಸಂಸ್ಥೆಗೆ ನಿಯಮಾನುಸಾರ ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆಯು ಸಿದ್ಧಪಡಿಸಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

ಉಳಿದ ಪ್ರದೇಶದಲ್ಲಿ ಗೋಪಾಲಕೃಷ್ಣ ಬಡಾವಣೆ  ಮತ್ತು ದಿನ್ನೂರು ಬಡಾವಣೆ ಇದೆ. ವಸತಿಗೃಹ ಮತ್ತು ಇನ್ನಿತರೆ ಕಟ್ಟಡಗಳು ಸಹ ನಿರ್ಮಾಣವಾಗಿವೆ. ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಈ ಕಾಡುಗೋಡಿ ಪ್ಲಾಂಟೇಷನ್‌ ಸರ್ವೇ ನಂಬರ್ 1ರ ಪ್ರದೇಶಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ 36 ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯಗಳ ಆದೇಶಗಳ ಅನ್ವಯ ಈ ಪ್ರದೇಶವನ್ನು ಇಲಾಖೆ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಸರ್ವೋಚ್ಛ ನ್ಯಾಯಾಲಯವು 2025ರ ಮೇ 15ರಲ್ಲಿ ಹೊರಡಿಸಿದ್ದ ಆದೇಶದಂತೆ ಜಿಲ್ಲಾ ಮತ್ತು ರಾಜ್ಯಮಟ್ಟದ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಎಸ್‌ಐಟಿ ತನಿಖೆ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದೆ. ರಾಜ್ಯಮಟ್ಟದ ವಿಶೇಷ ತನಿಖಾ ತಂಡದಿಂದ ಸರ್ಕಾರಕ್ಕೆ ಯಾವುದೇ ಮಧ್ಯಂತರ ವರದಿ ಸ್ವೀಕೃತವಾಗಿಲ್ಲ. ಹಾಗೆಯೇ ಕಾಡುಗೋಡಿ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಮರು ಪರಿಶೀಲನಾ ಅರ್ಜಿ (ಸಂಖ್ಯೆ; 23326/2022 – 30-08-2022) ಗೆ ಸಂಬಂಧಿಸಿದಂತೆ ನೀಡಿದ್ದ ಆದೇಸದ ವಿರುದ್ಧ ಮಧ್ಯಂತರ ಅರ್ಜಿ ಅಥವಾ ಕ್ಯುರೇಟಿವ್ ಅರ್ಜಿ ದಾಖಲಿಸುವ ಕುರಿತು ಸರ್ಕಾರದಲ್ಲಿ ಇನ್ನು ಪರಿಶೀಲನಾ ಹಂತದಲ್ಲಿದೆ ಎಂದು ಇಲಾಖೆಯು ಉತ್ತರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

Hot this week

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...
Please Scan to make Your Contribution

Topics

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

Related Articles

Popular Categories

error: Content is protected !!