ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು 16.32 ಕೋಟಿಯಷ್ಟು ಮೊತ್ತವನ್ನು ರೈಲ್ವೆ/ವಿಮಾನ ಭತ್ಯೆ ಹೆಸರಿನಲ್ಲಿ ಪಡೆದಿದ್ದಾರೆ. ಮತ್ತೊಂದು ವಿಶೇಷವೆಂದರೇ ಬೃಹತ್ ಬೆಂಗಳೂರು ನಗರದಲ್ಲಿರುವ ಶಾಸಕರು ಸಹ 1.63 ಕೋಟಿಯಷ್ಟು ರೈಲ್ವೆ/ವಿಮಾನ ಭತ್ಯೆ ಪಡೆದಿರುವುದು ಇದೀಗ ಬಹಿರಂಗವಾಗಿದೆ.
ರಸ್ತೆ ಪ್ರಯಾಣಕ್ಕೆ ಪ್ರತಿ ಕಿ ಮೀ ಗೆ 40 ರು ನಂತೆ ಹಾಗೂ ರೈಲ್ವೆ ಟಿಕೆಟ್ ಮತ್ತು ವಿಮಾನಯಾನ ಬಿಲ್ ದರ ಜೊತೆಗೆ ಶೇ.25ರಷ್ಟು ಮೊತ್ತವನ್ನು ಕರ್ನಾಟಕ ವಿಧಾನಸಭೆಯು ಮರು ಪಾವತಿಸಲಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಸದಸ್ಯರು ಭಾರತದಲ್ಲಿ ವಿಮಾನ ಅಥವಾ ರೈಲ್ವೇ ಮೂಲಕ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಯಾಣಗಳಲ್ಲಿ ಒಬ್ಬರೇ ಅಥವಾ ಸಹಚರರೊಂದಿಗೆ ಪ್ರಯಾಣಿಸುವ ಉದ್ದೇಶಕ್ಕಾಗಿ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ 3,50,000 ರು ರ. ಗಳನ್ನು ಎರಡು ಸಮಾನ ಕಂತುಗಳಲ್ಲಿ ಪಡೆಯಲು ಹಕ್ಕು ಹೊಂದಿದ್ದಾರೆ.
ಅದರಂತೆ ರಾಜ್ಯದ 224 ಶಾಸಕರು ಕಳೆದ 15ನೇ ವಿಧಾನಸಭೆ ಅವಧಿಯಲ್ಲಿ ಒಟ್ಟಾರೆ 16,32,21,676 ರು ಮೊತ್ತವನ್ನು ರೈಲ್ವೆ/ವಿಮಾನ ಭತ್ಯೆಯನ್ನು ಪಡೆದಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ದಾಖಲೆಗಳು ಲಭ್ಯವಾಗಿವೆ.
ರಾಜ್ಯದ ಬಹುತೇಕ ಶಾಸಕರಿಗೆ ಪ್ರಯಾಣ ಭತ್ಯೆ ಎಂದು ಪ್ರತ್ಯೇಕವಾಗಿ ನೀಡುವ ಜೊತೆಯಲ್ಲಿಯೇ ರೈಲ್ವೇ/ವಿಮಾನ ಭತ್ಯೆಯನ್ನೂ ನೀಡಲಾಗುತ್ತದೆ.
ವಿಧಾನಸಭೆಯ ಲೆಕ್ಕಪತ್ರ ಶಾಖೆಯು ಶಾಸಕರಿಗೆ ಮರು ಪಾವತಿಸಿರುವ ಮೊತ್ತದ ಮಾಹಿತಿಯನ್ನಷ್ಟೇ ಹಂಚಿಕೊಂಡಿದೆ. ಆದರೆ ಇದರಲ್ಲಿ ರೈಲ್ವೇ ಪ್ರಯಾಣ, ವಿಮಾನ ಪ್ರಯಾಣ ಎಂದು ಪ್ರತ್ಯೇಕಿಸಿಲ್ಲ.
ವಿಶೇಷವೆಂದರೇ ಬೆಂಗಳೂರು ನಗರ ಶಾಸಕರೂ ಸಹ ರೈಲ್ವೇ/ವಿಮಾನ ಭತ್ಯೆ ಪಡೆದಿದ್ದಾರೆ.
ಬೆಂಗಳೂರಿನ ಶಾಸಕರ ಪಟ್ಟಿ
ಬೆಂಗಳೂರು ನಗರದ ಜಮೀರ್ ಅಹ್ಮದ್ ಖಾನ್ 5,90,000 ರು., ಮುನಿರತ್ನ 54,144 ರು., ಸೌಮ್ಯರೆಡ್ಡಿ 9,50,060 ರು., ಅಖಂಡ ಶ್ರೀನಿವಾಸ ಮೂರ್ತಿ 9,64,802 ರು., ಆರ್ ಅಶೋಕ್ 2,76, 986 ರು., ಬಿ ಎ ಬಸವರಾಜ 2,55,449 ರು., ದಿನೇಶ್ ಗುಂಡೂರಾವ್ 9,90,000 ರು., ಡಾ ಅಶ್ವಥ ನಾರಾಯಣ್ ಸಿ ಎನ್ 2,76, 986 ರು., ಗೋಪಾಲಯ್ಯ ಕೆ 2,64, 428 ರು., ಕೆ ಜೆ ಜಾರ್ಜ್ 7,27,674 ರು., ಹ್ಯಾರೀಸ್ ಎನ್ ಎ 8,78,755 ರು., ಕೃಷ್ಣಪ್ಪ ಎಂ (ವಿಜಯನಗರ ) 9,64,802 ರು., ಕೃಷ್ಣಪ್ಪ ಎಂ (ಬೆಂಗಳೂರು ದಕ್ಷಿಣ ) 9,20, 000 ರು., ಕೃಷ್ಣಬೈರೇಗೌಡ 7,27,674 ರು., ಮಂಜುನಾಥ್ ಆರ್ 9,64,802 ರು., ಶರತ್ ಬಚ್ಚೇಗೌಡ 6,52,244 ರು., ನಿಸರ್ಗ ನಾರಾಯಣಸ್ವಾಮಿ ಎಲ್ ಎನ್ 7,56,007 ರು., ರಘು ಎಸ್ 9,90,000 ರು., ರಾಮಲಿಂಗಾರೆಡ್ಡಿ 9,64,802 ರು., ರವಿ ಸುಬ್ರಮಣ್ಯ ಎಲ್ ಎ 9,90,000 ರು., ರೋಷನ್ ಬೇಗ್ 2,39,230 ರು., ಸತೀಶ್ ರೆಡ್ಡಿ ಎಂ 5,40,300 ರು., ಸುರೇಶ್ ಬಿ ಎಸ್ 8,53,557 ರು., ಸುರೇಶ್ ಕುಮಾರ್ ಎಸ್ 2,76,986 ರು., ಉದಯ್ ಬಿ ಗರುಡಾಚಾರ್ 9,64,802 ರು., ವಿಶ್ವನಾಥ್ ಎಸ್ ಆರ್ 2,82,446 ರೈಲ್ವೇ/ವಿಮಾನ ಭತ್ಯೆ ಪಡೆದಿರುವುದು ಗೊತ್ತಾಗಿದೆ.
ರಾಜ್ಯದ ಶಾಸಕರ ಪಟ್ಟಿ
ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ ಅಬ್ಬಯ್ಯ ಪ್ರಸಾದ್ 8,92,480 ರು., ರಾಯಭಾಗದ ಐಹೊಳೆ ದುರ್ಯೋಧನ್ ಮಹಾಲಿಂಗಪ್ಪ 9,20,000 ರು., ಬೆಳಗಾವಿ ದಕ್ಷಿಣದ ಅಭಯ್ ಪಾಟೀಲ್ , ಯಲಬುರ್ಗಾದ ಆಚಾರ್ ಹಾಲಪ್ಪ ಬಸಪ್ಪ 5,14,802 ರು., ಜೇವರ್ಗಿಯ ಅಜಯ್ ಧರಂಸಿಂಗ್ 2,79,401 ರು., ಕುಷ್ಟಗಿಯ ಅಮರೇಗೌಡ ಲಿಂಗನಗೌಡ ಬಯ್ಯಾಪುರ ಪಾಟೀಲ್ 9,64,802 ರು., ಮುದ್ದೆಬಿಹಾಳದ ಅಮೀನಪ್ಪ ಸಂಗನಗೌಡ ಪಾಟೀಲ್ 5,83,538 ರು., ಧಾರವಾಡದ ಅಮೃತ ಅಯ್ಯಪ್ಪ ದೇಸಾಯಿ 9,64,802 ರು,

ಸವದತ್ತಿಯ ಆನಂದ್ ಆಲಿಯಾಸ್ ವಿಶ್ವನಾಥ್ ಚಂದ್ರಶೇಖರ್ ಮಾಮನಿ 7,40,000 ರು., ವಿಜಯನಗರ (ಹೊಸಪೇಟೆ) ಆನಂದ್ ಸಿಂಗ್ 2,39, 830 ರು., ಸುಳ್ಯದ ಅಂಗಾರ್ ಎಸ್ 4,70,000 ರು., ಬೆಳಗಾವಿ ಉತ್ತರದ ಅನಿಲ್ ಎಸ್ ಬೆನಕೆ 9,64,802 ರು., ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.
ಹೆಗ್ಗಡದೇವನಕೋಟೆಯ ಅನಿಲ್ ಚಿಕ್ಕಮಾದು 9,64,802 ರು., ಅಪ್ಪಚ್ಚು ರಂಜನ್ ) ಎಂ ಪಿ 9,90, 000 ರು., ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ 3,74,802 ರು., ಯಲ್ಲಾಪುರದ ಅರಬೈಲ್ ಹೆಬ್ಬಾರ್ ಶಿವರಾಮ್ 1,55,449 ರು., ಹುಬ್ಬಳ್ಳಿ ಧಾರವಾಡ ಪಶ್ಚಿಮದ ಅರವಿಂದ್ ಬೆಲ್ಲದ್ 9,90,000 ರು., ಶಿವಮೊಗ್ಗ ಗ್ರಾಮಾಂತರದ ಅಶೋಕ್ ನಾಯಕ್ ಕೆ ಬಿ 9,64,802 ರು., ಟಿ ನರಸೀಪುರದ ಅಶ್ವಿನ್ ಕುಮಾರ್ ಎಂ 9, 64,802 ರು., ಅರಭಾವಿಯ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ 3,00,000 ರು., ರೈಲ್ವೆ /ವಿಮಾನ ಭತ್ಯೆ ಪಡೆದಿದ್ದಾರೆ.

ಶ್ರವಣಬೆಳಗೊಳದ ಬಾಲಕೃಷ್ಣ ಸಿ ಎನ್ 9,90,000 ರು., ಬ್ಯಾಡಗಿಯ ಬಳ್ಳಾರಿ ವಿರೂಪಾಕ್ಷಪ್ಪ ರುದ್ರಪ್ಪ 9,64,802 ರು., ಬೀದರ್ ದಕ್ಷಿಣದ ಬಂಡೆಪ್ಪ ಕಾಶೆಂಪೂರ್ 7,27,764 ರು., ರಾಯಚೂರು ಗ್ರಾಮಾಂತರದ ಬಸನಗೌಡ ದದ್ದಲ್ 8,69,478 ರು., ವಿಜಯಪುರದ ಬಸವನಗೌಡ ಪಾಟೀಲ್ ಯತ್ನಾಳ್ 9,64,802 ರು., ಶಿಗ್ಗಾವಿಯ ಬಸವರಾಜ ಬೊಮ್ಮಾಯಿ 2,76,986 ರು., ಗುಲ್ಬರ್ಗಾ ಗ್ರಾಮಾಂತರದ ಬಸವರಾಜ್ ಮತ್ತಿಮೂಡ್ 9,64,802 ರು., ಕನಕಗಿರಿಯ ಬಸವರಾಜ ದಡೇಸುಗೂರ 9,.64,802 ರು., ಕಡೂರಿನ ಬೆಳ್ಳಿ ಪ್ರಕಾಶ್ 7,14,802 ರು., ಹಗರಿಬೊಮ್ಮನಹಳ್ಳಿಯ ಭೀಮಾನಾಯಕ್ ಎಸ್ 8,81,007 ರು., ವಿರಾಜಪೇಟೆಯ ಬೋಪಯ್ಯ ಕೆ ಜಿ 4,00,000 ರು., ಹೊಳಲ್ಕೆರೆಯ ಚಂದ್ರಪ್ಪ ಎಂ 3,74,802 ರು., ಕುಂದಗೋಳದ ಸಿ ಎಸ್ ಶಿವಳ್ಳಿ 1,19,820 ರು., ಕುಂದಗೋಳದ ಕುಸುಮಾವತಿ ಶಿವಳ್ಳಿ 7,60,434 ರು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ಕಲ್ಬುರ್ಗಿ ದಕ್ಷಿಣ ದತ್ತಾತ್ರೇಯ ಸಿ ಪಾಟೀಲ್ ರೇವೂರ್ 4,00,000 ರು., ಹಳಿಯಾಳದ ಆರ್ ವಿ ದೇಶಪಾಂಡೆ 7,27,674 ರು., ನಾಗಠಾಣದ ದೇವಾನಂದ್ ಪೂಲಸಿಂಗ್ ಚವ್ಹಾಣ್ 8,81,007 ರು., ಮೈಸೂರಿನ ಜಿ ಟಿ ದೇವೇಗೌಡ 7,27,674 ರು., ಕುಮಟಾದ ದಿನಕರ ಕೇಶವ ಶೆಟ್ಟಿ 9,64,802 ರು., ಹುನಗುಂದದ ದೊಡ್ಡನಗೌಡ ಜಿ ಪಾಟೀಲ್ 9,64,802 ರು., ಮದನಬಾವಿಯ ದೊಡ್ಡನಗೌಡರ ಮಹಾಂತೇಶ ಬಸವಂತರಾಯ್ 9,64,802 ರು., ಖಾನಾಪುರದ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ 8,51,910 ರು., ಮಳವಳ್ಳಿಯ ಡಾ ಕೆ ಅನ್ನದಾನಿ 8,81, 102 ರು., ಮಂಗಳೂರು ನಗರ ಉತ್ತರದ ಡಾ ಭರತ್ ಶೆಟ್ಟಿ 9,64,802 ರು., ತುಮಕೂರಿನ ಡಾ ಜಿ ಪರಮೇಶ್ವರ್ 6,97,674 ರು, ನೆಲಮಂಗಲದ ಡಾ ಕೆ ಶ್ರೀನಿವಾಸಮೂರ್ತಿ 9,06,205 ರು, ಚಿಕ್ಕಬಳ್ಳಾಪುರ ಡಾ ಕೆ ಸುಧಾಕರ್ 2,00,000 ರು., ಮೊತ್ತವನ್ನು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ಡಾ ಹೆಚ್ ಡಿ ರಂಗನಾಥ್ 9,64,802 ರು., ರಾಯಚೂರಿನ ಡಾ ಶಿವರಾಜ್ ಪಾಟೀಲ್ ಎಸ್ 3,74,802 ರು., ಚಿಂಚೋಳಿಯ ಡಾ ಉಮೇಶ್ ಜಾಧವ್ 1,74,802 ರು., ಚಿಂಚೋಳಿಯ ಡಾ ಅವಿನಾಶ್ ಉಮೇಶ್ ಜಿ ಜಾಧವ್ 5,10,434 ರು., ವರುಣ ಕ್ಷೇತ್ರದ ಡಾ ಯತೀಂದ್ರ ಸಿದ್ದರಾಮಯ್ಯ 9,64,802 ರು., ಭಾಲ್ಕಿಯ ಈಶ್ವರ ಭೀಮಣ್ಣ ಖಂಡ್ರೆ 9,64,802 ರು., ಶಿವಮೊಗ್ಗದ ಕೆ ಎಸ್ ಈಶ್ವರಪ್ಪ 2,51,708 ರು., ಕಂಪ್ಲಿಯ ಜೆ ಎನ್ ಗಣೇಶ್ 9,64,802 ರು., ಚಿಕ್ಕೋಡಿಯ ಗಣೇಶ್ ಪ್ರಕಾಶ್ ಹುಕ್ಕೇರಿ 7,26,032 ರು., ಎನ್ ವೈ ಗೋಪಾಲಕೃಷ್ಣ 9,64,802 ರು., ಮುಧೋಳದ ಗೋವಿಂದ ಎಂ ಕಾರಜೋಳ 2,76,986 ರು., ತುಮಕೂರು ಗ್ರಾಮಾಂತರದ ಡಿ ಸಿ ಗೌರಿಶಂಕರ್ 8,81,007 ರು., ಹೊಸದುರ್ಗದ ಗೂಳಿಹಟ್ಟಿ ಶೇಖರ್ 9,64,802 ರು ಮೊತ್ತವನ್ನು ರೈಲ್ವೇ /ವಿಮಾನ ಭತ್ಯೆ ಪಡೆದಿರುವುದು ಗೊತ್ತಾಗಿದೆ.

ಕುಂದಾಪುರದ ಹಾಲಾಡೀ ಶ್ರೀನಿವಾಸ ಶೆಟ್ಟಿ 9,64,802, ಬೆಳ್ತಂಗಡಿ ಹರೀಶ್ ಪೂಂಜಾ 9,64,802 ರು., ನಂಜನಗೂಡು ಹರ್ಷವಧನ್ ಬಿ 9,64,802 ರು., ಸಾಗರದ ಹಾಲಪ್ಪ ಹರತಾಳು 3,74,802 ರು., ಲಿಂಗಸಗೂರು ಹೂಲಗೇರಿ ಡಿ ಎಸ್ 8,51,910 ರು., ಹುಬ್ಬಳ್ಳಿ ಧಾರವಾಡ (ಕೇಂದ್ರ) ಜಗದೀಶ್ ಶೆಟ್ಟರ್ 2,51,788 ರು., ತುಮಕೂರು ನಗರ ಜ್ಯೋತಿ ಗಣೇಶ್ ಜಿ ಬಿ 9,64,802 ರು., ಶಿರಸಿ-ಸಿದ್ದಾಪುರ ವಿಶ್ವೇಶ್ವರ ಹೆಗಡೆ ಕಾಗೇರಿ 9,90,000 ರು., ರೋಣದ ಕಳಕಪ್ಪ ಗುರುಶಾಂತಪ್ಪ ಬಂಡಿ 4,74,802 ರು., ಕಲ್ಬುರ್ಗಿ ಉತ್ತರದ ಕನೀಜ್ ಫಾತಿಮಾ 9,64,802 ರು.,

ಹರಪನಹಳ್ಳಿ 9,64,802 ರು., ಮಂಗಳೂರಿನ ಯು ಟಿ ಅಬ್ದುಲ್ ಖಾದರ್ 7,27,674 ರು., ಚಿಂತಾಮಣಿಯ ಕೃಷ್ಣಪ್ಪ ಎಂ 9,64,802 ರು., ಸೊರಬದ ಕುಮಾರ್ ಬಂಗಾರಪ್ಪ 9,64,802 ರು., ಚನ್ನಪಟ್ಟಣದ ಎಚ್ ಡಿ ಕುಮಾರಸ್ವಾಮಿ 7,26,582 ರು., ಸಕಲೇಶಪುರದ ಹೆಚ್ ಕೆ ಕುಮಾರಸ್ವಾಮಿ 9,90,000 ರು., ಮೂಡಿಗೆರೆಯ ಕುಮಾರಸ್ವಾಮಿ ಎಂ ಪಿ 8,24,802 ರು, ಬೆಳಗಾವಿ ಗ್ರಾಮಾಂತರದ ಲಕ್ಷ್ಮಿ ಹೆಬ್ಬಾಳಕರ್ 8,53,557 ರು., ಕಾಪು ಲಾಲಾಜಿ ಆರ್ ಮೆಂಡನ್ 9,64,802 ರು., ಮಾಯಕೊಂಡದ ಲಿಂಗಣ್ಣ ಎನ್ 8,94,802 ರು., ಬೇಲೂರಿನ ಲಿಂಗೇಶ್ ಕೆ ಎಸ್ 9,64,802 ರು., ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ 3,74,802 ರು., ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿ ಜೆ ಸಿ 2,51,788 ರು.,ಮೊತ್ತದಷ್ಟು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ಪಿರಿಯಾಪಟ್ಟಣದ ಮಹಾದೇವ ಕೆ 8,81,007 ರು., ರಾಮದುರ್ಗದ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ 9,64,802 ರು., ಬೈಲಹೊಂಗಲದ ಕೌಜಲಗಿ ಮಹಾಂತೇಶ್ ಶಿವಾನಂದ್ 8,51,910 ರು., ಕೊಳ್ಳೇಗಾಲದ ಎನ್ ಮಹೇಶ್ 8,81,683 ರು., ಕೆ ಆರ್ ನಗರದ ಮಹೇಶ್ ಸಾ ರಾ 7,27,674 ರು., ಅಥಣಿಯ ಮಹೇಶ ಈರನಗೌಡ ಕಮಠಳ್ಳಿ 4,99,836 ರು., ಸಿಂಧಗಿಯ ಎಂ ಸಿ ಮನಗೂಳಿ 2,44,270 ರು., ಮಾಗಡಿಯ ಮಂಜುನಾಥ ಎ 9,64,802 ರು., ತುರುವೇಕೆರೆಯ ಮಸಾಲಾ ಜಯರಾಮ್ 9,64,802 ರು., ಶಿಡ್ಲಘಟ್ಟದ ಮುನಿಯಪ್ಪ ವಿ 8,57, 400 ರು., ಬೀಳಗಿಯ ಮುರುಗೇಶ್ ರುದ್ರಪ್ಪ ನಿರಾಣಿ 4,44,802 ರು., ಗುರುಮಿಠಕಲ್ನ ನಾಗನಗೌಡ ಕಂದಾಕೂರ 15,05,741 ರು., ಬಳ್ಳಾರಿಯ ಬಿ ನಾಗೇಂದ್ರ 9,90,000 ರು., ನಾಗೇಂದ್ರ ಎಲ್ 9,64,802 ರು., ಮುಳುಬಾಗಿಲು ನಾಗೇಶ್ ಹೆಚ್ 4,65,206 ರು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ನಾಗೇಶ್ ಬಿ ಸಿ 3,74,802 ರು., ಕೆ ವೈ ನಂಜೇಗೌಡ 9,64,802 ರು., ನಾರಾಯಣಗೌಡ 2,64,428 ರು., ಬಿ ನಾರಾಯಣರಾವ್ (ದಿವಂಗತ) 3,33,557 , ಶರಣು ಸಲಗರ 4,20,.128, ನರಸಿಂಹನಾಯಕ್ (ರಾಜುಗೌಡ) 6,14,802 ರು., ನರೇಂದ್ರ ಆರ್ 8,78,755 ರು., ನೆಹರು ಓಲೆಕಾರ್ 3,74,802 ರು., ನಿಂಬಣ್ಣನವರ್ ಸಿ ಎಂ 9,64,802 ರು., ನಿರಂಜನ್ ಕುಮಾರ್ ಸಿ ಎಸ್ 3,74,802 ರು., ನಿಸರ್ಗ ನಾರಾಯಣಸ್ವಾಮಿ ಎಲ್ ಎನ್ 7,56,007 ರು., ಪಿ ಟಿ ಪರಮೇಶ್ವರ ನಾಯಕ್ 3,52,692 ರು., ಪರಣ್ಣ ಈಶ್ವರಪ್ಪ ಮುನವಳ್ಳಿ 9,64,802 ರು., ಬಿ ಸಿ ಪಾಟೀಲ್ 2,51,788 ರು., ಹೆಚ್ ಕೆ ಪಾಟೀಲ್ 9,64,802 ರು., ಎಂ ಬಿ ಪಾಟೀಲ್ 8,47,494 ರು.,

ಪಾಟೀಲ್ ಎಂ ವೈ 9,64,802 ರು., ಪೂರ್ಣಿಮ ಕೆ 9,64,802 ರು., ಪ್ರಭು ಬಿ ಚವ್ಹಾಣ್ 2,76,986 ರು. ಪ್ರತಾಪ ಗೌಡ ಪಾಟೀಲ್ 1,71,370 ರು., ಬಸನಗೌಡ ತುರುವಿಹಾಳ್ 4,20, 198 ರು., ಪ್ರೀತಮ್ ಜೆ ಗೌಡ 9,94,802 ರು., ಪ್ರಿಯಾಂಕ್ ಖರ್ಗೆ 7,27,674 ರು., ಪುಟ್ಟರಾಜು ಸಿ ಎಸ್ 7,27,674 ರು., ಪುಟ್ಟರಂಗಶೆಟ್ಟಿ ಸಿ 7,27,674 ರು., ರಾಘವೇಂದ್ರ ಬಸವರಾಜ ಹಿಟ್ನಾಳ್ 8,77,108 ರು., ರಘುಮೂರ್ತಿ ಟಿ 8,78,755 ರು., ರಘುಪತಿ ಭಟ್ ಕೆ 9,64,802 ರು., ರಹೀಮ್ ಖಾನ್ 8,47,494 ರು, ರಾಜಾ ವೆಂಕಟಪ್ಪ ನಾಯಕ್ 8,81,007 ರು., ರಾಜೀವ್ ಪಿ 3,08,190 ರು., ರಾಜೇಗೌಡ ಟಿ ಡಿ 8,53,557 ರು., ರಾಜೇಶ್ ನಾಯಕ್ ಯು 9,64,802 ರು., ರಾಜಕುಮಾರ್ ಪಾಟೀಲ್ 3,74,802 ರು., ರಾಜಶೇಖರ್ ಬಸವರಾಜ ಪಾಟೀಲ್ 7,27,674 ರು, ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ರಾಮಚಂದ್ರ ಎಸ್ ವಿ 3,74,802 ರು., ರಾಮಪ್ಪ ಎಸ್ 9,64,802 ರು., ರಾಮಪ್ಪ ಎಸ್ ಲಮಾಣಿ 9,64,802 ರು., ರಾಮಸ್ವಾಮಿ ಎ ಟಿ 9,64,802 ರು., ರಾಮದಾಸ್ ಎಸ್ ಎ 9,.94,802 ರು., ರಮೇಶ್ ಕುಮಾರ್ ಕೆ ಆರ್ 9,64,802 ರು., ರವಿ ಸಿ ಟಿ 2,76,986 ರು., ರವಿ ಸುಬ್ರಮಣ್ಯ ಎಲ್ ಎ 9,90,000 ರ., ರವೀಂದ್ರನಾಥ್ ಎಸ್ ಎ 9,64, 802 ರು., ರವೀಂದ್ರ ಶ್ರೀಕಂಠಯ್ಯ 9,64,802 ರು., ರೇಣುಕಾಚಾರ್ಯ ಎಂ ಪಿ 2,61, 070 ರು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.
ಹೆಚ್ ಡಿ ರೇವಣ್ಣ 7,27,674 ರು., ರೂಪಕಲಾ ಎಂ 8,51,910 ರು., ರೂಪಾಲಿ ಸಂತೋಷ್ ನಾಯ್ಕ 9,64,802 ರು., ರೋಷನ್ ಬೇಗ್ 2,39,230 ರು., ರಿಜ್ವಾನ್ ಅರ್ಷದ್ 6,52,244 ರು., ಸುಭಾಷ್ ಗುತ್ತೆದಾರ್ 9,64,802 ರು, ರೈಲ್ವೇ/ವಿಮಾನ ಭತ್ಯೆ ಪಡೆದಿದ್ದಾರೆ.

ಎಸ್ ಎನ್ ನಾರಾಯಣಸ್ವಾಮಿ ಕೆ ಎಂ 8,78,755 ರು., ಬಿ ಕೆ ಸಂಗಮೇಶ್ವರ 8,53,557 ರು, ಸಂಜೀವ ಮಟಂದೂರು 9,64,202 ರು., ಸತೀಶ್ ಜಾರಕಿಹೊಳಿ 3,52,692 ರು., ಸತ್ಯನಾರಾಯಣ ಬಿ 2,91,007 ರು., ಡಾ ಸಿ ಎಂ ರಾಜೇಶ್ ಗೌಡ 5,04,044 ರು., ಶಾಮನೂರು ಶಿವಶಂಕರಪ್ಪ 4,00,000 ರು., ಶಂಕರ್ ಆರ್ 9,50,004 ರು., ಅರುಣ್ ಕುಮಾರ್ ಗುತ್ತೂರು 62,244 , ಶಂಕರ್ ಪಾಟೀಲ ಮುನೇನಕೊಪ್ಪ 5,14,802 ರು., ಶರಣಬಸಪ್ಪ ಗೌಡ ದರ್ಶನಾಪುರ 9,51,544 ರು., ಕೆ ಎಂ ಶಿವಲಿಂಗೇಗೌಡ 9.06,205 ರು., ಶಿವಾನಂದ ಪಾಟೀಲ್ 7,27,674 ರು., ಶಿವಣ್ಣ ಬಿ 7,78,755 ರು. ರು ರೈಲ್ವೇ/ವಿಮಾನ ಭತ್ಯೆ ಪಡೆದಿದ್ದಾರೆ.
ಡಿ ಕೆ ಶಿವಕುಮಾರ್ 7,27,674 ರು., ಶಿವಶಂಕರರೆಡ್ಡಿ ಎನ್ ಹೆಚ್ 7,27,674 ರು., ಶ್ರೀಮಂತ ಬಾಳಸಾಹೇಬ್ 6,89,230 ರು.,

ಸಿದ್ದರಾಮಯ್ಯ 2,79,716 ರು., ಆನಂದ್ ಸಿದ್ದು ನ್ಯಾಮಗೌಡ 8,70,154, ಸಿದ್ದಪ್ಪ ಕಲ್ಲಪ್ಪ ಸವದಿ 8,39,802 ರು., ಸೋಮಲಿಂಗಪ್ಪ ಎಂ ಎಸ್ 9,64,802ರು., ಸೋಮನಗೌಡ ಬಿ ಪಾಟೀಲ್ 9,64,802 ರು., ಸೋಮಣ್ಣ ವಿ 2,51,788 ರು., ಸೋಮಶೇಖರ ರೆಡ್ಡಿ ಜಿ 9,64, 802 ರು., ಎಸ್ ಟಿ ಸೋಮಶೇಖರ್ 1,55,998 ರು., ಶ್ರೀನಿವಾಸ ಎಂ 8,81,007 ರು., ಶ್ರೀನಿವಾಸ ಗೌಡ ಕೆ 9,64,802 ರು., ಶ್ರೀರಾಮುಲು ಬಿ 2,51,788 ರು., ಸುಬ್ಬಾರೆಡ್ಡಿ ಎಸ್ ಎನ್ 9,45,998 ರು., ಸುಕುಮಾರ ಶೆಟ್ಟಿ 33,306 ರು., ಸುನಿಲ್ ಕುಮಾರ್ ವಿ 9,64,802 ರು., ಸುನೀಲ್ ಬಿ ನಾಯಕ್ 9,64,802 ರು., ಸುರೇಶ್ ಡಿ ಎಸ್ 9,64,802 ರು.,

ಸುರೇಶ್ ಗೌಡ 9,64,802 ರು., ತನ್ವೀರ್ ಸೇಠ್ 9,64,802ರು., ತಮ್ಮಣ್ನ ಡಿ ಸಿ 7,27,574ರು., ತಿಪ್ಪಾರೆಡ್ಡಿ ಜಿ ಎಚ್ 9,90,000 ರು., ತುಕಾರಾಂ ಇ 8,47,194 ರು., ಸಿ ಎಂ ಉದಾಸಿ 5,14,802 ರು ಮೊತ್ತವನ್ನು ರೈಲ್ವೆ/ವಿಮಾನ ಭತ್ಯೆ ಪಡೆದಿದ್ದಾರೆ.

ಮಾನೆ ಶ್ರೀನಿವಾಸ್ 3,32,417 ರು., ಉಮಾನಾಥ್ ಎ ಕೋಟ್ಯಾನ್ 9,64,802 ರು., ಉಮೇಶ್ ವಿಶ್ವನಾಥ್ ಕತ್ತಿ 5,09,936 ರು., ವೇದವ್ಯಾಸ ಕಾಮತ್ ಡಿ 9,64,802 ರು., ವೀರಭದ್ರಯ್ಯ ಎಂ ವಿ 9,64,802 ರು., ವೀರಣ್ಣ ಚರಂತಿಮಠ 9,64,802 ರು., ವೆಂಕಟರಮಣಯ್ಯ ಟಿ 9,69,716 ರು., ವೆಂಕಟರಾವ್ ನಾಡಗೌಡ 7,27,674 ರು., ವೆಂಕಟರೆಡ್ಡಿ ಮುದ್ನಾಳ್ 9,64,802 ರು.,

ಮಂಜುನಾಥ್ ಹೆಚ್ ಪಿ ಮಂಜುನಾಥ್ 6,52,244 ರು., ಯಶವಂತರಾಯಗೌಡ ಪಾಟೀಲ್ 7,78,755 ರು., ಅನಿತಾ ಕುಮಾರಸ್ವಾಮಿ 3,50,154 ರು., ವಿನಿಷ ನಿರೋ 8,99,113 ರು ರೈಲ್ವೇ/ ವಿಮಾನ ಭತ್ಯೆ ಪಡೆದಿರುವುದು ಗೊತ್ತಾಗಿದೆ.




