Wednesday | September 23, 2026 |

79 ಎ, ಬಿ, ಸಿ ನಿರ್ಬಂಧ ತೆರವಿನ ಪರಿಣಾಮ; 7 ಜಿಲ್ಲೆಗಳಲ್ಲಿ ಹೊರರಾಜ್ಯದವರಿಂದ 490 ಎಕರೆ, ಸಂಘ ಸಂಸ್ಥೆಗಳಿಂದ 15,059 ಎಕರೆ ಕೃಷಿ ಜಮೀನು ಖರೀದಿ

ಬೆಂಗಳೂರು;  ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ, 79 ಬಿ ಮತ್ತು 79 ಸಿ ರದ್ದುಪಡಿಸಿದ ನಂತರ ಕಳೆದ 6 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು ಮಾರಾಟವಾಗಿರುವ 24 ಲಕ್ಷ ಎಕರೆ ಕೃಷಿ ಜಮೀನಿನ ಪೈಕಿ 490 ಎಕರೆ ವಿಸ್ತಿರ್ಣದ ಕೃಷಿ ಜಮೀನು ಹೊರ ರಾಜ್ಯದವರು ಖರೀದಿಸಿದ್ದಾರೆ. ಅದೇ ರೀತಿ 7 ಜಿಲ್ಲೆಗಳಲ್ಲಿರುವ  ಖಾಸಗಿ ವ್ಯಕ್ತಿ, ಸಂಘ, ಸಂಸ್ಥೆಗಳು ಸಹ 15,059 ಎಕರೆ ವಿಸ್ತೀರ್ಣದಷ್ಟು ಕೃಷಿ ಜಮೀನನ್ನು ಖರೀದಿ ಮಾಡಿವೆ. ಒಟ್ಟಾರೆ 15, 549 ಎಕರೆ ವಿಸ್ತೀರ್ಣದ ಕೃಷಿ ಜಮೀನು ಈ ವರ್ಗಗಳ ಕೈಯಲ್ಲಿವೆ.

ಅಳಂದ ಶಾಸಕ ಬಿ ಆರ್‍‌ ಪಾಟೀಲ್‌ ಅವರು 2026ರ ಆಗಸ್ಟ್‌ ನಲ್ಲಿ  ವಿಧಾನಸಭೆಯಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಂದಾಯ ಇಲಾಖೆಯ ಸಚಿವರೂ ಆಗಿರುವ  ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

ಭೂ ಸುಧಾರಣಾ ಕಾಯ್ದೆಯ ಸೆಕ್ಷನ್‍ 79 ಎ ಮತ್ತು ಬಿ ನಿರ್ಬಂಧವನ್ನು ಹಿಂದಿನ ಬಿಜೆಪಿ ಸರ್ಕಾರವು ತೆಗೆದು ಹಾಕಿತ್ತು.  ಕೃಷಿ ಜಮೀನನ್ನು ಉಳ್ಳವರ ಪಾಲಾಗಿಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಅಬ್ಬರಿಸಿತ್ತು. ಆದರೀಗ ಈ ನಿರ್ಬಂಧವನ್ನು ಪುನರ್ ಸ್ಥಾಪಿಸುವ ಪ್ರಸ್ತಾಪವೇ ಇಲ್ಲ ಎಂದು ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಹೇಳಿಕೆ ನೀಡಿರುವ ಬೆನ್ನಲ್ಲೇ ಹೊರರಾಜ್ಯ ಮತ್ತು ಖಾಸಗಿ ಸಂಘ ಸಂಸ್ಥೆಗಳ ಕೈಯಲ್ಲಿ 15,059 ಎಕರೆ ಕೃಷಿ ಜಮೀನು ಇರುವುದು ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೇ ಕಂದಾಯ ಇಲಾಖೆಯು ಕೇವಲ 7 ಜಿಲ್ಲೆಗಳ ಮಾಹಿತಿಯನ್ನಷ್ಟೇ ನೀಡಿವೆ. ಆದರೂ ಈ ಮಾಹಿತಿಯನ್ನು ವಿಧಾನಸಭೆಗೆ ಒದಗಿಸಿರುವ ಪಟ್ಟಿಯಲ್ಲಿ  ನೀಡಿಲ್ಲ. ವಿಧಾನಸಭೆಗೆ ಮಂಡಿಸಿರುವ ಉತ್ತರವನ್ನು ದಿ ಫೈಲ್‌ ಪರಿಶೀಲಿಸಿದ ಸಂದರ್ಭದಲ್ಲಿ ಹೊರರಾಜ್ಯ ಮತ್ತು ಖಾಸಗಿ ಸಂಘ ಸಂಸ್ಥೆಗಳು ಎಷ್ಟು ಪ್ರಮಾಣದಲ್ಲಿ ಕೃಷಿ ಜಮೀನು ಖರೀದಿಸಲಾಗಿದೆ ಎಂಬ ವಿವರಗಳು ಸಚಿವರ ಉತ್ತರದಲ್ಲಿ  ಕಂಡು ಬಂದಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲಿ   ಸಹಕಾರ ಸಚಿವರಾಗಿದ್ದ  ಎಸ್‌ ಟಿ ಸೋಮಶೇಖರ್‌  ಅವರು ಅಧ್ಯಕ್ಷರಾಗಿದ್ದ ಕರ್ನಾಟಕ ರಾಜ್ಯ ವಸತಿ ಮಹಾಮಂಡಲ ಸೇರಿದಂತೆ ವಿವಿಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ 79 ಎ ಮತ್ತು 79 ಬಿ ಕಲಂನ್ನು ಉಲ್ಲಂಘಿಸಿ ಅಂದಾಜು 10 ಸಾವಿರ ಕೋಟಿ ರು. ಬೆಲೆ ಬಾಳುವ 5,027 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಖರೀದಿಸಿದ್ದವು.

ಆದರೆ 79 ಎ, ಬಿ ಮತ್ತು ಸಿ ಕಲಂಗಳ ನಿರ್ಬಂಧ ತೆರವುಗೊಳಿಸಿದ ನಂತರ ಖಾಸಗಿ ಸಂಘ ಸಂಸ್ಥೆಗಳು 15,049 ಎಕರೆ ವಿಸ್ತೀರ್ಣದಷ್ಟು ಕೃಷಿ ಜಮೀನನ್ನು ಖರೀದಿಸಿವೆ. ಈ ಪೈಕಿ ಕಲ್ಬುರ್ಗಿ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಎಂದರೇ 8,071 ಎಕರೆಯಷ್ಟು ಕೃಷಿ ಜಮೀನನ್ನು ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳು ಖರೀದಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

 

ವಿಜಯಪುರದಲ್ಲಿ 48 ಎಕರೆ, ಧಾರವಾಡ ಜಿಲ್ಲೆಯಲ್ಲಿ 1,103 ಎಕರೆ, ಗದಗ್‌ ಜಿಲ್ಲೆಯಲ್ಲಿ 60 ಎಕರೆ, ಬೀದರ್‍‌ ಜಿಲ್ಲೆಯಲ್ಲಿ 3,997 ಎಕರೆ, ಯಾದಗಿರಿ ಜಿಲ್ಲೆಯಲ್ಲಿ 1,720 ಎಕರೆ ವಿಸ್ತೀರ್ಣದ ಕೃಷಿ ಜಮೀನು ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳು ಖರೀದಿಸಿವೆ.

ಅದೇ ರೀತಿ ಹೊರ ರಾಜ್ಯಕ್ಕೆ ಸೇರಿರುವ ಈ 7 ಜಿಲ್ಲೆಗಳಲ್ಲಿ ಹೊರರಾಜ್ಯಕ್ಕೆ ಸೇರಿದ 241 ಮಂದಿ 490 ಎಕರೆ ವಿಸ್ತೀರ್ಣದ  ಕೃಷಿ ಜಮೀನನ್ನು ಖರೀದಿಸಿದ್ದಾರೆ. ಹೊರ ರಾಜ್ಯಕ್ಕೆ  ಸೇರಿದ 29 ಮಂದಿ ವಿಜಯಪುರ ಜಿಲ್ಲೆಯಲ್ಲಿ  83 ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 39 ಎಕರೆ 25 ಗುಂಟೆ, ರಾಯಚೂರು ಜಿಲ್ಲೆಯಲ್ಲಿ 368 ಎಕರೆ ಕೃಷಿ ಜಮೀನು ಖರೀದಿಸಿರುವುದು ತಿಳಿದು ಬಂದಿದೆ.

ಗೃಹ ನಿರ್ಮಾಣ ಸಹಕಾರ ಸಂಘಗಳು 79 ಎ ಮತ್ತು ಬಿ ಕಲಂನ್ನು ಉಲ್ಲಂಘಿಸಿ ಕೃಷಿ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಮುನ್ನೆಲೆಗೆ ಬಂದಿದೆ. ಕಾಯ್ದೆ ಉಲ್ಲಂಘಿಸಿ ಹಲವು ವರ್ಷಗಳ ಹಿಂದೆಯೇ ಕೃಷಿ ಜಮೀನು ಖರೀದಿಸಿದ್ದರೂ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.

ಪ್ರತಿಷ್ಠಿತ ಗೃಹ ನಿರ್ಮಾಣ ಸಹಕಾರ ಸಂಘಗಳು ಬೆಂಗಳೂರು ನಗರದ ಯಲಹಂಕ, ಹೆಜ್ಜಾಲ, ಸರ್ಜಾಪುರ ರಸ್ತೆ, ಆನೇಕಲ್‌, ಜಾಲಿಗೆ, ಅರದೇಶನಹಳ್ಳಿ, ಚಿಕ್ಕಜಾಲ, ಕೊಡಿಗೆಹಳ್ಳಿ, ಹೆಸರಘಟ್ಟ, ತಿಂಡ್ಲು ಸೇರಿದಂತೆ ವಿವಿಧೆಡೆ 79 ಎ ಮತ್ತು ಬಿ ಕಲಂ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವುದು ಸಂಘಗಳ ಲೆಕ್ಕ ಪರಿಶೋಧನೆ ವರದಿಗಳಲ್ಲಿ ಉಲ್ಲೇಖವಾಗಿವೆ.

ಮಧ್ಯವರ್ತಿ, ಅಭಿವೃದ್ಧಿದಾರರ ಜತೆಗೆ ಗೃಹ ನಿರ್ಮಾಣ ಸಹಕಾರ ಸಂಘಗಳ ಮಧ್ಯೆ ಆಗಿರುವ ಎಂಒಯು ಪ್ರಕಾರ ಎಕರೆಗೆ 1.50 ಕೋಟಿ ರು.ನಿಂದ 2 ಕೋಟಿ ರು.ವರೆಗೆ ಜಮೀನು ಖರೀದಿಸಲಾಗಿದೆ. ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಖರೀದಿಸಿರುವ ಈ ಜಮೀನುಗಳ ಅಂದಾಜು ಮೌಲ್ಯ   20 ಸಾವಿರ ಕೋಟಿ ರು ಗೂ ಅಧಿಕ ಎಂದು ಹೇಳಲಾಗಿದೆ.

ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 916.02 ಎಕರೆ, ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 318.02 ಎಕರೆ, ಕರ್ನಾಟಕ ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 1,603 ಎಕರೆ, ಕರ್ನಾಟಕ ವಸತಿ ಮಹಾಮಂಡಲ 285.08 ಎಕರೆ, ಬೆಮೆಲ್‌ ನೌಕರರ ಸಂಘ 465.47 ಎಕರೆ, ಬಿಎಚ್‌ಇಎಲ್‌ 460.76 ಎಕರೆ, ಮಿನಿಸ್ಟ್ರಿ ಆಫ್‌ ಕಮ್ಯುನಿಕೇಷನ್ಸ್‌ 667.44 ಎಕರೆ, ನ್ಯಾಯಾಂಗ ಇಲಾಖೆ ನೌಕರರ ಸಂಘ 315.26 ಎಕರೆ ಸೇರಿದಂತೆ ಒಟ್ಟು 5,027 ಎಕರೆ ಕೃಷಿ ಜಮೀನನ್ನು ಖರೀದಿಸಿರುವುದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ.

ಮಧ್ಯವರ್ತಿಗಳ ಮೂಲಕ ಜಮೀನು ಖರೀದಿಸಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿ ಮುದ್ರಾಂಕ ಶುಲ್ಕದಲ್ಲಿಯೂ ಸರ್ಕಾರಕ್ಕೆ ವಂಚನೆ ಮಾಡಿವೆ ಎಂದು ಹೇಳಲಾಗಿದೆ. ಕಲಂ 79-ಎ ಮತ್ತು 79-ಬಿ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವ ಆರೋಪದ ಮೇಲೆ ಈವರೆಗೆ ರಾಜ್ಯದಾದ್ಯಂತ 17,574 ಪ್ರಕರಣಗಳು ದಾಖಲಾಗಿದ್ದವು.

ಈ ಪೈಕಿ 12,490 ಪ್ರಕರಣಗಳು ವಿಲೇವಾರಿ ಆಗಿವೆ. 5,490 ಪ್ರಕರಣಗಳಲ್ಲಿ ಭೂ ಸುಧಾರಣಾ ಕಾಯ್ದೆಯ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 9.316 ಪ್ರಕರಣಗಳು ದಾಖಲಾಗಿದ್ದು, 6,769 ಪ್ರಕರಣಗಳ ವಿಲೇವಾರಿ ಆಗಿದೆ. 319 ಪ್ರಕರಣಗಳಲ್ಲಿ ಉಲ್ಲಂಘನೆ ಆಗಿರುವುದು ಖಚಿತಪಟ್ಟಿದೆ ಎಂದು ತಿಳಿದು ಬಂದಿದೆ. ಆದರೆ ಈ ಕಲಂನ್ನು ಉಲ್ಲಂಘಿಸಿರುವ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ಹಿಂದಿನ ಯಾವ ಸರ್ಕಾರಗಳೂ ಕ್ರಮ ಕೈಗೊಂಡಿರಲಿಲ್ಲ.

ಬಹುತೇಕ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ರಾಜಕೀಯದ ನಂಟು ಹೊಂದಿವೆ. ಎಸ್‌ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ಡಿ ಕೆ ಶಿವಕುಮಾರ್‌, ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಕ್ಷ್ಮಣ ಸವದಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್‌ ಎಸ್‌ ಮಹದೇವಪ್ರಸಾದ್‌ ಹಾಗೂ ಜೆಡಿಎಸ್‌,ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರದಲ್ಲಿ ಬಂಡೆಪ್ಪ ಕಾಶೆಂಪೂರ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲಿಯೂ ಒಂದೇ ಒಂದು ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ.

ಅದರಲ್ಲೂ ಡಿ ಕೆ ಶಿವಕುಮಾರ್‌ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲೇ ಬಹುತೇಕ ಗೃಹ ನಿರ್ಮಾಣ ಸಹಕಾರ ಸಂಘಗಳ ಹೆಸರಿನಲ್ಲಿದ್ದ ಜಮೀನುಗಳು ಬೃಹತ್‌ ಕಟ್ಟಡ ನಿರ್ಮಾಣ ಕಂಪನಿಗಳು, ರಿಯಲ್‌ ಎಸ್ಟೇಟ್‌ ಕುಳಗಳು, ಡೆವಲಪರ್ಸ್‌ಗಳ ಪಾಲಾಗಿವೆ ಎಂದು ಗೊತ್ತಾಗಿದೆ.

Hot this week

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...

ರಸ್ತೆ ಕಾಮಗಾರಿಗಳ ಅಂದಾಜು ತಯಾರಿಕೆಯಲ್ಲೇ ಲೋಪ; 483 ಕಾಮಗಾರಿಗಳಲ್ಲಿ 72.01 ಕೋಟಿಯಷ್ಟು ಹೆಚ್ಚುವರಿ ಹೊರೆ, ಪಿಡಬ್ಲ್ಯೂಡಿಯ ಕಾರ್ಯವೈಖರಿ ಬಯಲು ಮಾಡಿದ ಸಿಎಜಿ

ಬೆಂಗಳೂರು;  ರಸ್ತೆ ಕಾಮಗಾರಿಗಳಲ್ಲಿ  ಸಬ್‌ ಬೇಸ್‌ ದಪ್ಪವನ್ನು ಕಡಿಮೆ ಮಾಡದಿರುವುದು ಸೇರಿದಂತೆ...

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಖರ್ಗೆ ಕುಟುಂಬ ಸದಸ್ಯರ ಸಿದ್ದಾರ್ಥ ವಿಹಾರ ಟ್ರಸ್ಟ್‌; ಪ್ರಕರಣ ಮುಂದುವರಿಕೆ, ಲೋಕಾಯುಕ್ತ ಎಸ್‌ಪಿ ಗೆ ನೋಟೀಸ್‌ ನೀಡಿದ ನ್ಯಾಯಾಲಯ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ,...
Please Scan to make Your Contribution

Topics

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

ಪಿಎಸ್‌ಐ ನೇಮಕಾತಿ ಹಗರಣ; ಅಮೃತ್‌ ಪೌಲ್‌ ವಿರುದ್ಧ ಇಲಾಖೆ ವಿಚಾರಣೆ, ವಿಚಾರಣಾಧಿಕಾರಿಗೆ 15 ಲಕ್ಷ ರು ಸಂಭಾವನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್‌ಐಗಳ ನೇಮಕಾತಿಯಲ್ಲಿನ...

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

Related Articles

Popular Categories

error: Content is protected !!