Wednesday | November 4, 2026 |

54,059.8 ಕೋಟಿ ರು ಮೊತ್ತದ 1,962 ಯೋಜನೆ; ಮುಖ್ಯಮಂತ್ರಿ ಸಚಿವಾಲಯಕ್ಕೇ ಮಾಹಿತಿ ಒದಗಿಸದ 23 ಇಲಾಖೆಗಳು

ಬೆಂಗಳೂರು; ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರು ಮೊತ್ತದ  2,867 ಯೋಜನೆಗಳ ಪೈಕಿ 54,059.8 ಕೋಟಿ ರು ಮೊತ್ತದ  1, 962 ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಮೂಲ ಮಾಹಿತಿಯನ್ನೇ  ಮುಖ್ಯಮಂತ್ರಿ ಸಚಿವಾಲಯಕ್ಕೇ  ಕೊಟ್ಟಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

10 ಕೋಟಿ ರು ಮೇಲ್ಪಟ್ಟು ಮತ್ತು 100 ಕೋಟಿ ರು ಮೊತ್ತದ ಒಳಗಿರುವ ಯೋಜನೆಗಳ ಮೂಲ ಮಾಹಿತಿ ಒದಗಿಸಬೇಕಿದ್ದ ಇಲಾಖೆಗಳು ನೀಡದ ಕಾರಣ ಯೋಜನೆಗಳ ವಾಸ್ತವ ಸ್ಥಿತಿಗತಿಯೂ ಸಹ ಸರ್ಕಾರಕ್ಕೆ ಯಾವುದೇ ಅರಿವಿಲ್ಲದಂತಾಗಿದೆ. ಈ ಬಗ್ಗೆ ಮಾಹಿತಿಯನ್ನು ನವೀಕರಿಸಿ ನೀಡಬೇಕು ಎಂದು ಖುದ್ದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (ಯೋಜನೆ-ಕಾರ್ಯಕ್ರಮ ಅನುಷ್ಠಾನ) ಮುನೀಶ್‌ ಮೌದ್ಗಿಲ್‌ ಅವರು ಮೂರು ಬಾರಿ ಸೂಚನೆ ನೀಡಿದ್ದರೂ ಸಹ 23 ಇಲಾಖೆಗಳು ಮೂಲ ಮಾಹಿತಿಯನ್ನೇ ಒದಗಿಸಿಲ್ಲ.

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದಲೂ ಸ್ಟಿಂಗ್‌ ಆಪರೇಷನ್ ಕುರಿತಾದ ಸಂಗತಿಯು ಚರ್ಚೆಯಲ್ಲಿದೆ. ಇದೇ ಚರ್ಚೆಯನ್ನು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಅವರ ಸಂಪುಟ ಸದಸ್ಯರು ಚರ್ಚೆಯನ್ನು ವಿಸ್ತರಿಸುತ್ತಲೇ ಬಂದಿದ್ದಾರೆ. ಈ ನಡುವೆ ಅಭಿವೃದ್ಧಿ ಶೂನ್ಯವಾಗಿದೆ ಎಂದು ಪ್ರತಿಪಕ್ಷಗಳೂ ಆರೋಪಿಸುತ್ತಲೇ ಬಂದಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಇಲಾಖೆಗಳು ಯೋಜನೆಗಳ ಮೂಲ ಮಾಹಿತಿಯನ್ನೇ ನೀಡುತ್ತಿಲ್ಲ  ಎಂದು  ಮುನೀಶ್‌ ಮೌದ್ಗಿಲ್‌ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

ಮುನೀಶ್‌ ಮೌದ್ಗಿಲ್ ಅವರು 2026ರ ಅಕ್ಟೋಬರ್‍‌ 6ರಂದು ಬರೆದಿರುವ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಮೌದ್ಗಿಲ್ ಪತ್ರದಲ್ಲೇನಿದೆ?

ಸಿಎಂ ಡ್ಯಾಷ್ ಬೋರ್ಡ್‌ ಮತ್ತುಕ ಪರಿವರ್ತನೆ ಪೋರ್ಟಲ್‌ನಲ್ಲಿ 10 ಕೋಟಿ ರು ಮೊತ್ತಕ್ಕೂ  ಮೇಲ್ಪಟ್ಟ ಕಾಮಗಾರಿಗಳ  ವಿವರಗಳನ್ನು ದಾಖಲಿಸಬೇಕಿತ್ತು. ಸಿಎಂ ಡ್ಯಾಷ್‌ ಬೋರ್ಡ್‌, ಪ್ರಗತಿ ಪೋರ್ಟಲ್‌ನಲ್ಲಿ ಇ-ಪ್ರೋಕ್ 2.0ನಿಂದ ಪಡೆಯಲಾಗಿರುವ ಕಾಮಗಾರಿಗಳ ವಿವರ ಪರಿವರ್ತನೆ ಪೋರ್ಟಲ್‌ಗೆ ಪಡೆಯಲಾಗಿದೆ. ಅದರಲ್ಲಿ 10.00 ಕೋಟಿ ರು ಮೇಲ್ಪಟ್ಟು ಇರುವ ಕಾಮಗಾರಿಗಳ ಹೆಚ್ಚುವರಿ ಮಾಹಿತಿ ವಿವರವನ್ನು ಸಂಬಂಧಪಟ್ಟವನ್ನು ಟಿಐಎ ಲಾಗಿನ್‌ನಿಂದ ಭರ್ತಿ ಮಾಡಬೇಕಿದೆ.

 

 

ಈ ಬಗ್ಗೆ 2026ರ ಸೆ. 16, 28 ಮತ್ತು ಅಕ್ಟೋಬರ್‍‌ 1ರಂದು ಮೂರು ಬಾರಿ ಸಭೆ  ನಡೆಸಲಾಗಿತ್ತು. ಆದರೂ ಸಹ ಸಮರ್ಪಕ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಈ ಪ್ರತಿಯೊಂದು ಯೋಜನೆ ಅಥವಾ ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಬೇಕಿದೆ. ಕೂಡಲೇ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮತ್ತು ಪ್ರತಿಯೊಂದು ಇಲಾಖೆ/ನಿಗಮದಿಂದ ಒಟ್ಟು ಹಿರಿಯ ಅಧಿಕಾರಿಯನ್ನು ನೋಡಲ್‌ ಅಧಿಕಾರಿ ನೇಮಿಸಬೇಕು ಎಂದು ಸರ್ಕಾರದ  ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಮೂಲ ಮಾಹಿತಿ ನವೀಕರಿಸದ ಇಲಾಖೆ- ಮೊತ್ತದ ಪಟ್ಟಿ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಒಟ್ಟು 20 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಒಟ್ಟಾರೆ ಮೊತ್ತ 677.9 ಕೋಟಿ ಇದೆ. ಈ ಪೈಕಿ 321.7 ಕೋಟಿ ರು ಮೊತ್ತದ  10 ಯೋಜನೆಗಳ ಮಾಹಿತಿಯನ್ನಷ್ಟೇ ಒದಗಿಸಿದೆ. ಇನ್ನುಳಿದ 356.2 ಕೋಟಿ ರು ಮೊತ್ತದ  10 ಯೋಜನೆಗಳ ಮೂಲ ಮಾಹಿತಿಯನ್ನೇ ಒದಗಿಸಿಲ್ಲ. ಸಹಕಾರ ಇಲಾಖೆಯಲ್ಲಿ 619.6 ಕೋಟಿ ರು ಮೊತ್ತದ 27 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 363.1 ಕೋಟಿ ರು ಮೊತ್ತದ 19 ಯೋಜನೆಗಳ ಮಾಹಿತಿಯನ್ನು ಮಾತ್ರ ಒದಗಿಸಿದೆ. ಇನ್ನುಳಿದ 256.5 ಕೋಟಿ ರು ಮೊತ್ತದ 8 ಯೋಜನೆಗಳ ಮಾಹಿತಿಯನ್ನು ಒದಗಿಸಿಲ್ಲ.

ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯು 466.3 ಕೋಟಿ ರು ಮೊತ್ತದ 14 ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಈ ಪೈಕಿ 421.7 ಕೋಟಿ ರು ಮೊತ್ತದ  13 ಯೋಜನೆಗಳ ಮಾಹಿತಿ ಒದಗಿಸಿದೆ. 44.5 ಕೋಟಿ ರು ಮೊತ್ತದ ಒಂದು ಯೋಜನೆಯ ಮಾಹಿತಿಯನ್ನು ನವೀಕರಿಸಿಲ್ಲ.  4,672.2 ಕೋಟಿ ರು ಮೊತ್ತದ 161 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಒಂದೇ ಒಂದು ಮಾಹಿತಿಯನ್ನೂ ನವೀಕರಿಸಿಲ್ಲ. ಇಂಧನ ಇಲಾಖೆಯು 14,625.8 ಕೋಟಿ ರು ಮೊತ್ತದ 558 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 3,890.0 ಕೋಟಿ ರು ಮೊತ್ತದ  147 ಯೋಜನೆಗಳ ಮಾಹಿತಿ ಒದಗಿಸಿದೆ. ಇನ್ನೂ 10,735.7 ಕೋಟಿ ರು ಮೊತ್ತದ 411 ಯೋಜನೆಗಳಿಗೆ ಸಂಬಂಧಿಸಿದ ಮೂಲ ಮಾಹಿತಿಯನ್ನೇ ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು 10.5 ಕೋಟಿ ರು ಮೊತ್ತದ ಒಂದೇ ಒಂದು ಯೋಜನೆ ಅನುಷ್ಠಾನಗೊಳಿಸುತ್ತಿದೆ. ಆದರೆ ಇದರ ಮಾಹಿತಿಯನ್ನೂ ಒದಗಿಸಿಲ್ಲ. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು  3,210.1 ಕೋಟಿ ರು ಮೊತ್ತದ 107 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 2,296 ಕೋಟಿ ರು ಮೊತ್ತದ 73 ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿದೆ.  913.6 ಕೋಟಿ ರು ಮೊತ್ತದ 34 ಯೋಜನೆಗಳ ಮಾಹಿತಿಯನ್ನು ನೀಡಿಲ್ಲ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 121.8 ಕೋಟಿ ರು ಮೊತ್ತದ 8 ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಪೈಕಿ 39.9 ಕೋಟಿ ರು ಮೊತ್ತದ ಒಂದು ಯೋಜನೆಯ ಮಾಹಿತಿಯನ್ನು ನೀಡಿದೆ. 81.8 ಕೋಟಿ ರು ಮೊತ್ತದ 7 ಯೋಜನೆಗಳ ಮೂಲ ಮಾಹಿತಿಯನ್ನೇ ಒದಗಿಸಿಲ್ಲ.

ವಸತಿ ಇಲಾಖೆಯು  4,243.6 ಕೋಟಿ ರು ಮೊತ್ತದಲ್ಲಿ 196 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 1,085.7 ಕೋಟಿ ರು ಮೊತ್ತದ 51 ಯೋಜನೆಗಳಿಗೆ ಸಂಬಂಧಿಸಿದ ಮೂಲ ಮಾಹಿತಿ ಒದಗಿಸಿದೆ.  3,157.9 ಕೋಟಿ ರು ಮೊತ್ತದ 145 ಯೋಜನೆಗಳ ಮಾಹಿತಿಯನ್ನೇ ನೀಡಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 19.1 ಕೋಟಿ ರು ಮೊತ್ತದ ಒಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆಯಾದರೂ ಇದರ ಮೂಲ ಮಾಹಿತಿಯನ್ನೂ ನೀಡಿಲ್ಲ.

 

 

ಪ್ರವಾಸೋದ್ಯಮ ಇಲಾಖೆಯು 335.8 ಕೋಟಿ ರು ಮೊತ್ತದ 14 ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ. ಈ ಪೈಕಿ 96.7 ಕೋಟಿ ರು ಮೊತ್ತದ 3 ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದೆಯಾದರೂ ಇನ್ನೂ 239.1 ಕೋಟಿ ರು ಮೊತ್ತದ 11 ಯೋಜನೆಗಳ ಮಾಹಿತಿಯನ್ನೇ ನೀಡಿಲ್ಲ.

ಉನ್ನತ ಶಿಕ್ಷಣ ಇಲಾಖೆಯು ಸಹ 17.4 ಕೋಟಿ ರು ಮೊತ್ತದ ಒಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಮಾಹಿತಿಯನ್ನೂ ಸಹ ಒದಗಿಸಿಲ್ಲ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು 59 ಕೋಟಿ ರು ಮೊತ್ತದ ಒಂದು ಯೋಜನೆಯನ್ನಷ್ಟೇ ಜಾರಿಗೊಳಿಸುತ್ತಿದೆ. ಇದರ ಮಾಹಿತಿಯನ್ನೂ ನೀಡಿಲ್ಲ. ಮೂಲಸೌಕರ್ಯ ಬಂದರು, ಒಳನಾಡು ಜಲಸಾರಿಗೆ ಇಲಾಖೆಯು  845.2 ಕೋಟಿ ರು ಮೊತ್ತದ 29 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ ಈ ಇಲಾಖೆಯೂ ಸಹ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಕಾನೂನು ಇಲಾಖೆಯು 36 ಕೋಟಿ ರು ಮೊತ್ತದ ಒಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆಯಾದರೂ ಇದರ ಮಾಹಿತಿಯನ್ನೂ ಸಹ ನೀಡಿಲ್ಲ.

1,757.2 ಕೋಟಿ ರು ಮೊತ್ತದ 54 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಣ್ಣ ನೀರಾವರಿ ಇಲಾಖೆಯು  979.1 ಕೋಟಿ ರು ಮೊತ್ತದ 30 ಯೋಜನೆಗಳ ಮಾಹಿತಿ ಒದಗಿಸಿದೆ. ಇನ್ನೂ 778.1 ಕೋಟಿ ರು ಮೊತ್ತದ 24 ಯೋಜನೆಗಳ ಮಾಹಿತಿ ನೀಡಿಲ್ಲ. ಲೋಕೋಪಯೋಗಿ ಇಲಾಖೆಯು  7,750.9 ಕೋಟಿ ರು ಮೊತ್ತದ 334 ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಈ ಪೈಕಿ 5,395.4 ಕೋಟಿ ರು ಮೊತ್ತದ 251 ಯೋಜನೆಗಳ ಮಾಹಿತಿ ಒದಗಿಸಿದೆಯಾದರೂ ಇನ್ನೂ 2,355.6 ಕೋಟಿ ರು ಮೊತ್ತದ 83 ಯೋಜನೆಗಳ ಮೂಲ ಮಾಹಿತಿಯನ್ನೇ ನೀಡಿಲ್ಲ.

 

 

ಗ್ರಾಮೀಣಾಭಿವೃದ್ಧಿ ಮ ತ್ತು ಪಂಚಾಯತ್‌ ರಾಜ್‌ ಇಲಾಖೆಯು 3,340.5 ಕೋಟಿ ರು ಮೊತ್ತದ 146 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 518.8 ಕೋಟಿ ರು ಮೊತ್ತದ 17 ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದೆ. ಇನ್ನೂ 2,821.7 ಕೋಟಿ ರು ಮೊತ್ತದ 129 ಯೋಜನೆಗಳ ಮಾಹಿತಿ ಒದಗಿಸಿಲ್ಲ.

2,613.5 ಕೋಟಿ ರು ಮೊತ್ತದ 128 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯು ಒಂದೇ ಒಂದು ಮಾಹಿತಿಯನ್ನೂ ಒದಗಿಸಿಲ್ಲ.  ಸಾರಿಗೆ ಇಲಾಖೆಯು 232.8 ಕೋಟಿ ರು ಮೊತ್ತದ 16 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 82.4 ಕೋಟಿ ರು ಮೊತ್ತದ 5 ಯೋಜನೆಗಳ ಮಾಹಿತಿ ಒದಗಿಸಿದೆ. 150.4 ಕೋಟಿ ರು ಮೊತ್ತದ 11 ಯೋಜನೆಗಳ ಮಾಹಿತಿ ನೀಡಿಲ್ಲ.  ನಗರಾಭಿವೃದ್ಧಿ ಇಲಾಖೆಯು  25,614.6 ಕೋಟಿ ರು ಮೊತ್ತದ 856 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ  5,927.8 ಕೋಟಿ ರು ಮೊತ್ತದ 186 ಯೋಜನೆಗಳ ಮಾಹಿತಿ ಒದಗಿಸಿದೆ. ಇನ್ನೂ 19,686.8 ಕೋಟಿ ರು ಮೊತ್ತದ 670 ಯೋಜನೆಗಳ ಮಾಹಿತಿಯನ್ನೇ ಒದಗಿಸಿಲ್ಲ.

 

 

ಅದೇ ರೀತಿ ಜಲಸಂಪನ್ಮೂಲ ಇಲಾಖೆಯು  6,083.6 ಕೋಟಿ ರು ಮೊತ್ತದ 142 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 1,874.6 ಕೋಟಿ ರು ಮೊತ್ತದ 47 ಯೋಜನೆಗಳ ಮಾಹಿತಿ ಒದಗಿಸಿದೆ. ಇನ್ನೂ 4,209 ಕೋಟಿ ರು ಮೊತ್ತದ 95 ಯೋಜನೆಗಳ ಮಾಹಿತಿಯನ್ನೇ ನೀಡಿಲ್ಲ.

ಒಟ್ಟಾರೆ 25 ಇಲಾಖೆಗಳು 78,490.4 ಕೋಟಿ ರು ಮೊತ್ತದ 2,867 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಪೈಕಿ 2026ರ ಅಕ್ಟೋಬರ್‍‌ 5ರ ಅಂತ್ಯಕ್ಕೆ  24,430.5 ಕೋಟಿ ರು ಮೊತ್ತದ 905 ಯೋಜನೆಗಳ ಮಾಹಿತಿ ಮಾತ್ರ ಒದಗಿಸಿದೆ. ಇನ್ನೂ 54,059.8 ಕೋಟಿ ರು ಮೊತ್ತದ 1,962 ಯೋಜನೆಗಳಿಗೆ ಸಂಬಂಧಿಸಿದ ಮೂಲ ಮಾಹಿತಿಯನ್ನೇ ಒದಗಿಸಿಲ್ಲ.

ನೂರಾರು ಕೋಟಿ ರು ಮೊತ್ತದ ಯೋಜನೆಗಳ ಮೂಲ ಮಾಹಿತಿಯನ್ನೇ ಒದಗಿಸದ ಇಲಾಖೆಗಳು 2026ರ ಅಕ್ಟೋಬರ್‍‌ 5ರ ಅಂತ್ಯಕ್ಕೆ ಒಟ್ಟು 10 ಇಲಾಖೆಗಳು 100 ಕೋಟಿ ರು ಮೊತ್ತದ ಯೋಜನೆಗಳನ್ನು ಸೇರ್ಪಡೆ ಮಾಡಿವೆ.   2,01,348 ಕೋಟಿ ರು ಮೊತ್ತದ 270 ಯೋಜನೆಗಳನ್ನು ಚಾಲ್ತಿ ಪಟ್ಟಿಗೆ  ಸೇರ್ಪಡೆ ಮಾಡಿವೆ. ಈ ಪೈಕಿ ಜಲಸಂಪನ್ಮೂಲ ಇಲಾಖೆಯು 78,121.8 ಕೋಟಿ ರು ಮೊತ್ತದ 192 ಯೋಜನೆ, 104145 ಕೋಟಿ ರು ಮೊತ್ತದ 35 ಯೋಜನೆಗಳನ್ನು ಸೇರ್ಪಡೆ ಮಾಡಿರುವುದು ತಿಳಿದು ಬಂದಿದೆ.

 

 

ಹಾಗೆಯೇ 10 ಕೋಟಿ ರು ಮೇಲ್ಪಟ್ಟ  ಯೋಜನೆಗಳನ್ನು 9 ಇಲಾಖೆಗಳು ಸೇರ್ಪಡೆ ಮಾಡಿವೆ. ಇದರಲ್ಲಿ ಜಲಸಂಪನ್ಮೂಲ ಇಲಾಖೆಯು 5,373.9 ಕೋಟಿ ರು ಮೊತ್ತದ 118 ಯೋಜನೆ, ನಗರಾಭಿವೃದ್ಧಿ ಇಲಾಖೆಯು 1,367.4 ಕೋಟಿ ರು ಮೊತ್ತದ 38 ಯೋಜನೆಗಳನ್ನು ಸೇರಿಸಿರುವುದು ಗೊತ್ತಾಗಿದೆ.

Hot this week

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು...

ಸಾರ್ವಜನಿಕರ ಕುಂದುಕೊರತೆ; ನಿಗದಿತ ಅವಧಿಯೊಳಗೆ ಇತ್ಯರ್ಥವಾಗದ 10,313 ದೂರರ್ಜಿ, ಪ್ರಜಾಸೇವೆ ಅಭಿಯಾನಕ್ಕೂ ಕಿಮ್ಮತ್ತಿಲ್ಲ, ಸಿಎಂ ಇಲಾಖೆಯಲ್ಲೇ ಗಂಭೀರ ನಿರ್ಲಕ್ಷ್ಯ

ಬೆಂಗಳೂರು; ಸರ್ಕಾರಿ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಿರುವ ವಿವಿಧ ಸೇವೆಗಳಲ್ಲಿನ ನ್ಯೂನತೆ  ಮತ್ತು...
Please Scan to make Your Contribution

Topics

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು...

2011ರ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ವಿಶೇಷ ಕಾಯ್ದೆ; ಮಠದಲ್ಲಿ ನಡೆದಿತ್ತು 6 ಗಂಟೆ ಚರ್ಚೆ, ಚರ್ಚೆಗೆ ಗ್ರಾಸವಾದ ತರಳಬಾಳು ಶ್ರೀ ಭಾಷಣ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ...

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

Related Articles

Popular Categories

error: Content is protected !!