Friday | October 9, 2026 |

1,494 ಕೋಟಿ ರು ಜಮೆ; ಸಿಎಂ ಸಹಿಯೊಂದಿಗೆ ಉತ್ತರಿಸಿದ್ದ ಕಡತ ತೆರೆದಿಲ್ಲವೆಂದು ಸುಳ್ಳು ಹೇಳಿದ ಸರ್ಕಾರ

ಬೆಂಗಳೂರು; ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ ಉಳಿದಿರುವ 1,494 ಕೋಟಿ ರು ಕುರಿತಂತೆ ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳಿದ್ದ  ಪ್ರಶ್ನೆಗೆ ಉತ್ತರಿಸಲು ಕಡತ ತೆರೆದಿದ್ದ ಆರ್ಥಿಕ ಇಲಾಖೆಯು ಇದೀಗ ಕಡತವನ್ನೇ ಸೃಜಿಸಿಲ್ಲ ಎಂದು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದೆ.

 

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಉಳಿಕೆಯಾಗಿರುವ ಅನುದಾನ ಮತ್ತು ಸಂಚಿತ ನಿಧಿಗೆ ಜಮೆ ಮಾಡುತ್ತಿರುವ ಕುರಿತು ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಉತ್ತರಿಸಿದ್ದರು. ಕಡತ ಸಂಖ್ಯೆಯೊಂದಿಗೆ ಉತ್ತರಕ್ಕೆ ಸಹಿ ಮಾಡಿ ವಿಧಾನ ಮಂಡಲದಲ್ಲಿ ಮಂಡಿಸಿದ್ದರು.

 

ಇದೇ ಕಡತ ಸಂಖ್ಯೆಯನ್ನು ನಮೂದಿಸಿ ‘ದಿ ಫೈಲ್‌’ ಆರ್‌ಟಿಐ ಅರ್ಜಿ  ಸಲ್ಲಿಸಿತ್ತು.  ಇದಕ್ಕೆ  ಆರ್ಥಿಕ ಇಲಾಖೆಯು ಕಡತವನ್ನೇ ಸೃಜಿಸಿಲ್ಲ ಎಂದು ಮಾಹಿತಿ ಒದಗಿಸಿದೆ.

 

ಆರ್ಥಿಕ ಇಲಾಖೆಯು ನೀಡಿರುವ ಉತ್ತರವು ವಾಸ್ತವಾಂಶವನ್ನು ಮರೆಮಾಚಿಸಲು ಯತ್ನಿಸುತ್ತಿದೆಯೇ ಅಥವಾ ಕಡತವನ್ನೇ  ನಾಪತ್ತೆಯಾಗಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

 

ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು 2023ರ ಡಿಸೆಂಬರ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ (ಪ್ರಶ್ನೆ ಸಂಖ್ಯೆ 454)  ಕೇಳಿದ್ದರು.

 

ಈ ಪ್ರಶ್ನೆಗೆ ಉತ್ತರಿಸುವ ಸಂಬಂಧ ಆರ್ಥಿಕ ಇಲಾಖೆಯು ಆಇ 917-ವೆಚ್ಚ-6/2023 ಸಂಖ್ಯೆಯಲ್ಲಿ ಕಡತ  ತೆರೆದಿತ್ತು. ಈ ಕಡತದಲ್ಲಿ ಅಧಿಕಾರಿಗಳು ನೀಡಿದ್ದ ಉತ್ತರವನ್ನೇ ವಿಧಾನಸಭೆ ಅಧಿವೇಶನದಲ್ಲಿ 2023ರ ಡಿಸೆಂಬರ್‌ 7ರಂದು  ಮಂಡಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹಿ ಮಾಡಿದ್ದಾರೆ. ಈ ಉತ್ತರವನ್ನು ಮಂಡಿಸಲು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರೂ ಸಹ ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

 

 

 

ಆದರೀಗ ಈ ಕಡತವನ್ನೇ ತೆರೆದಿಲ್ಲ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿದ್ಯಾ ಹೆಚ್‌ ಪೈ ಅವರು 2024ರ ಜೂನ್‌ 19ರಂದು ಉತ್ತರ ನೀಡಿದ್ದಾರೆ.

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಉತ್ತರ ನೀಡಿರುವ ಕಡತವನ್ನೇ ಸೃಜಿಸಿಲ್ಲ ಎಂದು ಆರ್ಥಿಕ ಇಲಾಖೆಯು ಮಾಹಿತಿ ಒದಗಿಸಿರುವುದು ಈಗಾಗಲೇ ಎದ್ದಿರುವ  ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

 

ರಾಜ್ಯದ ತಾಲೂಕು ಪಂಚಾಯ್ತಿಗಳಲ್ಲಿ 2022-23ನೇ ಸಾಲಿನಲ್ಲಿ ಖರ್ಚಾಗದೇ ಉಳಿಕೆಯಾಗಿದ್ದ 1,494 ಕೋಟಿ ರು ಮೊತ್ತವು ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ. ಸಂಚಿತ ನಿಧಿಗೆ ಸೇರಬೇಕಿದ್ದ ಈ ಮೊತ್ತವನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿತ್ತು.

 

ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿದೆಯೇ ಎಂಬ ಅನುಮಾನವೂ ಇದೆ.  ಸರ್ಕಾರವು ಈ ರೀತಿ  ಸಾವಿರಾರು ಕೋಟಿ ರುಪಾಯಿಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿರುವುದು ಸಂಚಿತ ನಿಧಿಯ ಕಳ್ಳತನ ಮಾಡಿದಷ್ಟೇ ಗಂಭೀರ ಅಪರಾಧಿಕ ಕೃತ್ಯ ಎಂಬ ಆರೋಪವೂ ಕೇಳಿ ಬಂದಿತ್ತು.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿದ್ದ ಕೋಟ್ಯಂತರ ರುಪಾಯಿ ಮೊತ್ತವು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಆಗಿರುವ ಪ್ರಕರಣದ ಕುರಿತು ಪ್ರತಿಪಕ್ಷಗಳು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿವೆ. ಇದರ ಬೆನ್ನಲ್ಲೇ ಇದೀಗ 1,494 ಕೋಟಿ ರುಪಾಯಿ ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ ಎಂಬ ಮಾಹಿತಿಯು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು.

 

ರಾಜ್ಯ ಖಜಾನೆಗೆ ಸ್ವೀಕೃತವಾಗದ 1,494 ಕೋಟಿ; ಸಂಚಿತ ನಿಧಿಯಿಂದ ಹೊರಗಿರಿಸಿ ವ್ಯವಹರಿಸಿದೆಯೇ ಸರ್ಕಾರ?

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ Fund II ನಲ್ಲಿ ಖರ್ಚಾಗದೇ ಉಳಿಕೆ ಇರುವ ಮೊತ್ತವು ಸಂಚಿತ ನಿಧಿಗೆ ಜಮೆಯಾಗಿದೆಯೇ ಇಲ್ಲವೇ ಎಂಬ ಕುರಿತು ಶಿವಮೊಗ್ಗ ಮೂಲದ ವಕೀಲ ಹಾಗೂ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಾಣೇಶ್‌ ಎ ಎನ್‌ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಾನೂನು ಸೂಚನಾ ಪತ್ರ ನೀಡಿದ್ದರು. ಇದರ ಬೆನ್ನಲ್ಲೇ  ರಾಜ್ಯ ಖಜಾನೆ ಇಲಾಖೆಯು ನೀಡಿರುವ  ಮಾಹಿತಿಗೆ ಮಹತ್ವ ಬಂದಿತ್ತು.

 

‘Redumption in Expenditure ಯಾವತ್ತೂ ಸಹ ರಾಜ್ಯದ ರೆವಿನ್ಯೂ ಆಗಿರುವುದಿಲ್ಲ. ಇದು ಸಂಚಿತ ನಿಧಿಗೆ ಸೇರಬೇಕಾದ ಹಣ ಆಗಿರುತ್ತದೆ. ಆದರೆ ಸರ್ಕಾರವು ಇದೇ ಮೊತ್ತಗಳನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿದೆ. ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸುತ್ತಿದೆ. ಇದುಸಂವಿಧಾನ ಬಾಹಿರ ಕೃತ್ಯವಾಗಿರುತ್ತದೆ. ಇದು ಒಂದು ರೀತಿಯಲ್ಲಿ ನಿಧಿಯನ್ನು ಮಾರ್ಗಪಲ್ಲಟ ಮಾಡಿದಂತಾಗುತ್ತದೆ. ವಿಧಾನಮಂಡಲದ ಗಮನಕ್ಕೆ ತಾರದೇ ಸರ್ಕಾರವು ತಾನೇ ಹಣಕಾಸನ್ನು ಬಳಸಿದಂತಾಗಿರುತ್ತದೆ,’ ಎಂದು ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ವಕೀಲ  ಪ್ರಾಣೇಶ್‌ ಅವರು ಅನುಮಾನಿಸಿದ್ದನ್ನು ಸ್ಮರಿಸಬಹುದು.

Hot this week

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...
Please Scan to make Your Contribution

Topics

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

Related Articles

Popular Categories

error: Content is protected !!